ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚಕಚಾಂತ ಚೂಯಿಂಗ್ ಯಾಕೆ ಜಗೀತಾರೆ?

By * ಧವಳ
|
Google Oneindia Kannada News

About irrestible chewing gum habit
ಹಾಬಿಗೇನು ಪ್ರಪಂಚದಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯಲ್ಲಿ ಇರುತ್ತದೆ. ಆದರೆ ಕೆಲವರಿಗೆ ಚ್ಯೂಯಿಂಗ್ ಗಂ ಅಗೆಯುವ ಹಾಬಿ. ಕಚಕಚಾಂತ ಅಗೆದಗದು ಎಲ್ಲರ ಮೇಲೆ ತಮ್ಮ ಕೋಪ, ಪ್ರೀತಿ, ಅಸಹನೆ ಅಂತೂ ಯಾವುದೋ ಒಂದು ಅಂಶ ತೋರುತ್ತಾನೆ ಇರ್ತಾರೆ.

ಹೇಗಾದ್ರು ಅಗೆದು ಹಾಳು ಬಿದ್ದು ಹೋಗ್ಲಿ ಅಂತ ನಾವು ಸುಮ್ಮನೆ ಇರಬಹುದು ಆದರೆ ಅದನ್ನು ಜಗಿಯುವ ರಭಸದಲ್ಲಿ ಅನೇಕ ಮಹನೀಯರು ನುಂಗಿ ನೀರು ಕುಡಿದು ಬಿಡ್ತಾರೆ. ಅಯ್ಯೋ ಹೀಗಾಯ್ತಲ್ಲ ಅಂತ ಚಿಂತೆ ಪಟ್ಟು ಡಾಕ್ಟರ್ ಹತ್ರ ಓಡುವ ಮಂದಿಯೂ ಕಡಿಮೆ ಇಲ್ಲ. ಅಕಸ್ಮಾತ್ ಹಾಗೆ ಆದ್ರೆ ದೇಹಕ್ಕೆ ಏನಾದ್ರೂ ತೊಂದ್ರೆ ಇದ್ಯಾ ಅನ್ನುವ ನಿಮ್ಮ ಪ್ರಶ್ನೆಗೆ ಒಂದಷ್ಟು ಸರಳ ಪರಿಹಾರ ಇಲ್ಲಿದೆ.

ಚ್ಯೂಯಿಂಗ್ ಗಂ ಅಗೆದು ನುಂಗಿದರೆ ಅದು ಜೀರ್ಣ ಆಗದೆ ಹಾಗೆ ಕರುಳಿನಲ್ಲಿ ಉಳಿದು ಉಳಿಯುತ್ತೆ ಅನ್ನುವ ಹೆದರಿಕೆ ಬೇಡವೇ ಬೇಡ ಏಕೆಂದರೆ ದೇಹ ತನ್ನ ಬಳಿ ಅವಶ್ಯಕತೆ ಇರೋದನ್ನು ಬಿಟ್ಟು ಉಳಿದವುಗಳನ್ನು ಹೊರಗೆ ತಳ್ಳಿ ಬಿಡುತ್ತೆ.

* ನುಂಗಿದ ಪ್ರಮಾಣ ಭಾರಿಯಾಗಿದ್ದಾಗ ಸಮಸ್ಯೆ ಕಟ್ಟಿಟ್ಟ ಬುತ್ತಿ! ಅದು ಸುಲಭವಾಗಿ ಜೀರ್ಣವಾದ ಪದಾರ್ಥಗಳಿಗೆ ಈ ಗಂ ಅಡ್ಡವಾಗಿ ನಿಂತು ದೇಹವನ್ನು ಸತಾಯಿಸಿ ಬಿಡುತ್ತದೆ.

* ಚ್ಯೂಯಿಂಗ್ ಗಂ ನೈಜ ಪದಾರ್ಥಗಳ ಸಮ್ಮಿಲನದಿಂದ ಆದ ವಸ್ತು. ಆದರೆ ರೆಸಿನ್ ಅನ್ನುವ ಪದಾರ್ಥ ಬಳಕೆ ಮಾಡಿರುತ್ತಾರೆ, ಅದು ಜೀರ್ಣ ಆಗುವ ಗುಣ ಹೊಂದಿರುವುದಿಲ್ಲ. ಇದರಿಂದ ರೆಸಿನ್ ದೇಹದಲ್ಲಿ ಉಳಿಯದೆ ಓಡೋಡಿ ಹೊರಗೆ ಬಂದು ಬಿಡುತ್ತದೆ.

* ಚಿಕ್ಕಮಕ್ಕಳಿಗೆ ಕೊಡುವುದು ತಪ್ಪು, ಅದರಲ್ಲೂ ಐದು ವರ್ಷಗಳು ಆಗುವವರೆಗೂ ಗಂ ಕೊಡಲೇಬೇಡಿ, ಆ ಬಳಿಕ ಅವರಿಗೆ ಚಾಕ್ಲೆಟ್ ಮತ್ತು ಇದರ ವ್ಯತ್ಯಾಸ ತಿಳಿಯುತ್ತಲ್ಲ, ಆಗ ತೊಂದರೆ ಪ್ರಮಾಣ ಕಡಿಮೆ ಆಗುತ್ತದೆ ಆ ಸಮಯದಲ್ಲಿ ನೀಡಿ.

ಚ್ಯೂಯಿಂಗ್ ಗಂ ತಿಂದರೆ ವ್ಯಾಯಾಮ ಮಾಡಿದಂಗೆ ಅಂತ ಕೆಲವು ತಾಯ್ತಂದೆಯರು ಮಕ್ಕಳಿಗೆ ಕೊಡ್ತಾರೆ, ಆದ್ರೆ ಹೀಗೆ ಮಾಡುವುದರಿಂದ ಅವರ ಹಲ್ಲಿನಲ್ಲಿ ಹುಳುಕು ಆಗುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ದಯಮಾಡಿ ಕೊಡಬೇಡಿ. ಅಕಸ್ಮಾತ್ ಕೊಡಲೇಬೇಕು ಅಂತ ನಿಮಗೆ ಅನ್ನಿಸಿದರೆ ದಿನಕ್ಕೆ ಎರಡು ಸರ್ತಿ ಕೊಡಿ. ಜೊತೆಗೆ ಅವರ ಬಗ್ಗೆ ನಿಮ್ಮ ಗಮನ ಇದ್ದೆ ಇರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X