• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಯಲುಸೀಮೆಯ ಬಂಟ ಡಾ ಮಧು ಸೀತಪ್ಪ

By * ಧವಳ
|

ನಮ್ಮ ದೇಶದ ಪ್ರತಿಭಾವಂತ ಪ್ರಜೆಗಳು ವಿದೇಶಗಳಿಗೆ ವಲಸೆ ಹೋಗುವುದು ತೀರಾ ಸಾಮಾನ್ಯ ಎನಿಸುವ ಸಂಗತಿಯಾಗಿದೆ. ಅದು ಹೇಗಿದೆಯಪ್ಪಾ ಅಂದರೆ, ಕುಡಿಯುವ ನೀರೇ ದೊರಕದ ಸ್ಥಳಗಳಲ್ಲಿ ಹರಿಯುವ ಕರ್ನಾಟಕದ ನದಿ ನೀರು ಸಮುದ್ರದ ಪಾಲಾಗುವ ರೀತಿಯಂತೆ. ಸೂಕ್ತ ಅವಕಾಶಗಳ ಕೊರತೆ, ತಮ್ಮ ಪ್ರತಿಭೆಗೆ ಅಗತ್ಯ ಇರುವಷ್ಟು ಪ್ರೋತ್ಸಾಹ ದೊರೆಯದಿರುವಿಕೆ, ಮೀಸಲಾತಿ, ಹೀಗೆ ಹತ್ತು ಹಲವಾರು ಕಾರಣಗಳು ಪ್ರತಿಭಾ ಪಲಾಯನಕ್ಕೆ ಕಾರಣವಾಗಿರಬಹುದು. ಆದರೆ ವಿದೇಶದಲ್ಲಿ ನೆಲೆಸಿದ ಪ್ರತಿಯೊಬ್ಬ ಭಾರತೀಯನ ಮನವು ತಾಯ್ನಾಡಿನ ಸೇವೆಗಾಗಿ ತುಡಿಯುತ್ತಿರುತ್ತದೆ. ಕೆಲವರು ತಮ್ಮ ಕೈಲಾದ ಸಹಾಯ ಮಾಡಲು ತವಕಿಸುತ್ತಲೇ ಇರುತ್ತಾರೆ.

ಅದೇ ರೀತಿಯಲ್ಲಿ ವಿದೇಶದಿಂದ ಆಗಾಗ ಬಂದು ತಮ್ಮವರೊಂದಿಗೆ ಬೆರೆತು, ಬೆಸೆದು, ಹರಟಿ, ಸಂತೋಷ ಕೂಟಗಳಲ್ಲಿ ಭಾಗವಹಿಸಿ, ಸಾಹಿತ್ಯದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೆ ಒಂದೆರಡು ಬುಕ್ ರಿಲೀಸ್ ಮಾಡಿ ಸಾಧಕರ ಜೊತೆ ಸಂತೋಷದಿಂದ ಸಮಯ ಕಳೆದು ಹೋಗುವವರು ಇದ್ದಾರೆ. ಅದು ಅವರ ಜೀವನ ಶೈಲಿ. ಆದರೆ ವಿದೇಶದಲ್ಲಿ ಪ್ರಸಿದ್ದ ವೈದ್ಯರಾಗಿ ಸೇವೆ ಸಲ್ಲಿಸುತ್ತಾ ತಾಯಿನಾಡಿನ ಅಭಿವೃದ್ಧಿ ಬಗ್ಗೆ ಭಿನ್ನ ರೀತಿಯಲ್ಲಿ ಆಲೋಚಿಸುತ್ತ ಪೂರಕ yochane, ಯೋಜನೆಗಳನ್ನು ಕೈಕೊಂಡ ಓರ್ವ ವಿಶೇಷ ವ್ಯಕ್ತಿತ್ವ ಇದ್ದಾರೆ, ಅವರೇ ಡಾ.ಮಧು ಸೀತಪ್ಪ.

ಕೋಲಾರ ಜಿಲ್ಲೆಯ ಚಿಲಕನೆಪುರ ಗ್ರಾಮದಲ್ಲಿ ಜನಿಸಿದ ಡಾ.ಮಧು ಅವರ ತಂದೆ ಸೀತಪ್ಪ ಸ್ವಾತಂತ್ರ ಹೋರಾಟಗಾರರು. ತಾಯಿ ಶಾರದ ಸೀತಪ್ಪ ವಿದ್ಯಾ ಸಂಸ್ಥೆಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಾ ಇದ್ದಾರೆ. ಮಧು ತಮ್ಮ ಆರಂಭಿಕ ಶಿಕ್ಷಣವನ್ನು ಕೋಲಾರದ ಹೈಸ್ಕೂಲ್ನಲ್ಲಿ ಪೂರೈಸಿದರು. ಆ ಬಳಿಕ ಬೆಂಗಳೂರಿನ ನ್ಯಾಷನಲ್ ಕಾಲೇಜ್ ನಲ್ಲಿ ಪಿಯುಸಿ ಮತ್ತು ಬೆಂಗಳೂರು ಮೆಡಿಕಲ್ ಕಾಲೇಜ್ ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರೈಸಿದರು.

ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ, ಸೇರಿದಂತೆ ನಮ್ಮ ರಾಜ್ಯದ ಕೆಲವು ಜಿಲ್ಲೆಗಳು ಕೆಲವು ವರ್ಷಗಳನಂತರ ನೀರಿಲ್ಲದೆ ಬರಡಾಗುತ್ತದೆ. ಕುಡಿಯುವ ನೀರಿನ ಹಾಹಾಕಾರ ಉಂಟಾಗುತ್ತದೆ. ಇಂತಹ ದಾರುಣ ಪರಿಸ್ಥಿತಿ ತಪ್ಪಿಸಲು ಪೂರಕ ಯೋಜನೆಗಳ ಅನುಷ್ಠಾನದ ಅಗತ್ಯವಿದೆ. ಅದರ ಬಗ್ಗೆ ಸಾಕಷ್ಟು ಕೆಲಸ ಮಾಡಿದವರು ಸಮಾಜಮುಖಿ ಪರಮಶಿವಯ್ಯನವರು. ಬಾಲ್ಯದಿಂದಲೂ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯ ಕಡೆ ತುಡಿತ ಹೊಂದಿದ್ದರು. ಪರಮಶಿವಯ್ಯನವರ ದೃಷ್ಟಿಕೋನ ಹಾಗೂ ಚಿಂತನೆಗಳ ಬಗ್ಗೆ ಆಕರ್ಷಿತರಾದ ಡಾ. ಮಧು ಪರಮಶಿವಯ್ಯನವರನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸಿ ಅಗತ್ಯ ಕೆಲಸಗಳತ್ತ ಗಮನ ಹರಿಸಿದ್ದಾರೆ.

ಲಂಡನ್ ಆಸ್ಪತ್ರೆಯಲ್ಲಿ ಪ್ರಸಿದ್ಧ ನೇತ್ರ ತಜ್ಞರಾಗಿರುವ ಡಾ. ಮಧುಸೀತಪ್ಪ ಕನ್ನಡದ ಅನೇಕ ಪ್ರಖ್ಯಾತ ಪತ್ರಿಕೆಗಳಿಗೆ ತಮ್ಮ ಚಿಂತನ- ಮಂಥನವನ್ನು ಲೇಖನಗಳ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ. ಕೇವಲ ಬರಹಗಳ ಮೂಲಕ ಮಾತ್ರವಲ್ಲದೆ ತಾವು ಭಾರತಕ್ಕೆ ಬಂದಾಗ ಈ ಯೋಜನೆಗಳಿಗೆ ಬೇಕಾದ ಸಲಹೆ ಸೂಚನೆ, ರೈತರ ಜೊತೆ ಮಾತುಕತೆ, ಸಂಬಂಧಿತ ಅಧಿಕಾರಿಗಳು ಹಾಗೂ ಮಂತ್ರಿಗಳೊಂದಿಗೆ ಚರ್ಚೆ ನಡೆಸಿ ರಜೆಯನ್ನು ಸದುಪಯೋಗ ಮಾಡಿಕೊಳ್ತಾ ಇದ್ದಾರೆ. ಈ ಕೆಲಸಗಳಿಗಾಗಿ ತಮ್ಮ ದುಡಿಮೆಯ ಒಂದಷ್ಟು ಭಾಗವನ್ನು ಡಾ.ಮಧುಸೀತಪ್ಪ ಮೀಸಲಿಟ್ಟಿದ್ದಾರೆ ಎನ್ನುವ ಮಾತು ಸಹ ಉತ್ಪ್ರೇಕ್ಷೆಯಲ್ಲ.

ರೈತ, ಸ್ವಾತಂತ್ರ ಹೋರಾಟಗಾರರ ಮಗ ಡಾ.ಮಧುಸೀತಪ್ಪ ವೈದ್ಯರಾಗಿ, ವಿಜ್ಞಾನಿ ಹಾಗೂ ಸಂಶೋಧಕರಾಗಿ ತಮ್ಮ ಸೇವೆ ಸಲ್ಲಿಸುತ್ತಿರುವ ಮಹನೀಯರು. ದೇಶವು ನಮಗೇನು ಮಾಡಿತು ಎನ್ನುತ್ತಾ ಕೂರದೆ ನಮ್ಮಿಂದ ಭೂಮಿತಾಯಿಗೆ ಯಾವರೀತಿಯ ಸಾಂತ್ವನ ಸಿಗುತ್ತದೆ, ಹೇಗೆ ತಾಯ್ನೆಲದ ಋಣ ತೀರಿಸಬಹುದು ಎನ್ನುವವರ ಸಂಖ್ಯೆ ತುಂಬಾ ಚಿಕ್ಕದು. ಆದರೆ ಡಾ.ಮಧು ಸೀತಪ್ಪ ಆ ಸಾಲಿಗೆ ಸೇರಿರುವ ಎಲೆಮರೆಯ ಕಾಯಿ, ಅವರ ಈ ಪ್ರಯತ್ನಕ್ಕೆ ಸಮಾನಮನಸ್ಕರು ಕೈ ಜೋಡಿಸಿದರೆ ಬಯಲು ಸೀಮೆಯು ಬರಡು ನಾಡಾಗುವ ದುಸ್ಥಿತಿ ದೂರವಾಗುತ್ತದೆ. ಅವರ ಆಲೋಚನೆಗಳನ್ನು ಒಪ್ಪುವವರು ಮತ್ತು ಅವರ ಜತೆ ಸಮಾಲೋಚನೆ ಮತ್ತು ಸೇವಾಕಾರ್ಯಗಳಲ್ಲಿ ಭಾಗಿಯಾಗ ಬಯಸುವವರು ಡಾ.ಮಧುಸೀತಪ್ಪ ಅವರೊಂದಿಗೆ ಕನೆಕ್ಟ್ ಆಗಬಹುದು:- madhuseethappa@yahoo.com, divsgm@hotmail.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more