ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿ ಮತ್ತು ಖಾರಾ ಹುಗ್ಗಿ ರೆಸಿಪಿ

By Staff
|
Google Oneindia Kannada News

Sweet Pongal
ಧನುರ್ ಮಾಸದಲ್ಲಿ ಪೂಜೆ ಹಾಗೂ ಮುಂಜಾನೆ ಏಳುವುದು ಎಷ್ಟು ಮುಖ್ಯವೂ ಆ ಸಮಯದಲ್ಲಿ ಮಾಡುವ ಸಿಹಿ, ಖಾರದ ಹುಗ್ಗಿ ಸಹ ಅಷ್ಟೆ ಪ್ರಾ ಮುಖ್ಯತೆಯನ್ನು ಪಡೆದು ಕೊಳ್ಳುತ್ತದೆ. ಸಂಪದ್ರಾವಾದಿಗಳು ಇಡೀ ತಿಂಗಳು ಸ್ವಲ್ಪ ಪ್ರಮಾಣದಲ್ಲಿ ಆದರು ಹುಗ್ಗಿ ಮಾಡಿ ದೇವರ ನೈವೇದ್ಯ ಮಾಡುತ್ತಾರೆ. ಇದು ತಮಿಳು ಸಂಸ್ಕೃತಿಯ ಭಾಗವಲ್ಲ, ನಮ್ಮ ಕನ್ನಡ ಗ್ರಾಮೀಣ ಭಾಗದ ಆರೋಗ್ಯಕರ ರುಚಿಕರ ಖಾದ್ಯ.

* ಧವಳ

ಸಿಹಿ ಹುಗ್ಗಿಗೆ ಬೇಕಾಗುವ ಸಾಮಗ್ರಿಗಳು :

ಒಂದು ಪಾವು ಅಕ್ಕಿ,ಮುಕ್ಕಾಲು ಪಾವು ಹೆಸರು ಬೇಳೆ,ಒಂದು ಪಾವು ಕುಟ್ಟಿ ಪುಡಿ ಮಾಡಿದ ಬೆಲ್ಲ,ತುರಿದ ಒಣ ಕೊಬ್ಬರಿ ಒಂದು ಬಟ್ಟಲು,ನೂರು ಗ್ರಾಂ ತುಪ್ಪ, ಇಪ್ಪತ್ತೈದು ಗ್ರಾಂ ಗೋಡಂಬಿ ( ಬೇಕಾದರೆ ಹೆಚ್ಚು ಬಳಸಬಹುದು),ಕಾಯಿಸಿದ ಒಂದು ಲೀಟರ್ ಹಾಲು, ಒಂದು ಟೇಬಲ್ ಚಮಚೆ ಪುಡಿ ಮಾಡಿದ ಏಲಕ್ಕಿ ಪುಡಿ . ಚಿಟುಕೆ ಪಚ್ಚ ಕರ್ಪೂರ.

ಮಾಡುವ ವಿಧಾನ :

ಕುಕ್ಕರ್ ನಲ್ಲಿ ಅಕ್ಕಿ ಮತ್ತು ಬೇಳೆಯನ್ನು ತೊಳೆದು ಅಗತ್ಯ ಇರುವಷ್ಟು ನೀರನ್ನು ಅದರಲ್ಲಿ ಸೇರಿಸಿ ಬೇಯಿಸಿಕೊಳ್ಳಿ. (ಕುಕ್ಕರ್ ಎರಡು ವಿಷಲ್ ಹಾಕ ಬೇಕು). ದಪ್ಪದ ತಳದ ಪಾತ್ರೆ ಒಂದನ್ನು ತೆಗೆದು ಕೊಳ್ಳಿ .ಅದರಲ್ಲಿ ಈಗಾಗಲೇ ಪುಡಿ ಮಾಡಿರುವ ಬೆಲ್ಲವನ್ನು ಹಾಕಿ ಅದರಲ್ಲಿ ಪುಟ್ಟ ಬಟ್ಟಲು ನೀರನ್ನು ಸೇರಿಸಿ.ಬೆಲ್ಲ ಕರಗುವವರೆಗೂ ಚನ್ನಾಗಿ ಕುದಿಸಿ. ಕುದಿಯುವ ಬೆಲ್ಲದ ಪಾಕಕ್ಕೆ ಒಣ ಕೊಬ್ಬರಿ ತುರಿ ಹಾಗೂ ಏಲಕ್ಕಿಯನ್ನು ಬೆರಸಿರಿ. ಆ ಬಳಿಕ ಇದಕ್ಕೆ ಈಗಾಗಲೇ ಬೆಂದಿರುವ ಅಕ್ಕಿ ಬೇಳೆ ಮಿಶ್ರಣವನ್ನು ಬೆರೆಸಿರಿ.

ಒಲೆಯಲ್ಲಿ ಸಣ್ಣ ಉರಿ ಇರಲಿ.ತಳ ಹತ್ತದಂತೆ ಎಲ್ಲವನ್ನು ಕಲಕಿರಿ.ಆ ಬಳಿಕ ಮೊದಲೇ ಕಾಯಿಸಿಟ್ಟ ಹಾಲನ್ನು ಸೇರಿಸಿ.( ಈಗ ಬೇಕಾದರೆ ಪಚ್ಚ ಕರ್ಪೂರ ಸೇರಿಸ ಬಹುದು). ಹೀಗೆ ತಯಾರಾದ ಹುಗ್ಗಿಯನ್ನು ಕೆಳಗಿಳಿಸಿ. ತುಪ್ಪ ಕಾಯಿಸಿ ಅದರಲ್ಲಿ ಗೋಡಂಬಿ ತುಂಡುಗಳನ್ನು ಕೆಂಪಗೆ ಹುರಿದು,ಸಿದ್ಧವಾಗಿರುವ ಹುಗ್ಗಿಗೆ ಗೆ ಸೇರಿಸಿ. ಘಮ ಘಮ ಸಿಹಿ ಹುಗ್ಗಿ ಸಿದ್ಧ!

ಖಾರ ಹುಗ್ಗಿಗೆ ಬೇಕಾಗುವ ಸಾಮಗ್ರಿಗಳು:

ಒಂದು ಪಾವು ಅಕ್ಕಿ,ಮುಕ್ಕಾಲು ಪಾವು ಹೆಸರು ಬೇಳೆ,ತರಿಯಾಗಿ ಪುಡಿ ಮಾಡಿದ ಎರಡು ಚಮಚೆ ಜೀರಿಗೆ,ಒಂದು ಚಮಚೆ ಕರಿ ಕಾಳು ಮೆಣಸು,ಚೂರು ಮಾಡಿದ ಐದಾರು ಒಣ ಮೆಣಸಿನ ಕಾಯಿ,ಎರಡು ಎಸಳು ಕರಿ ಬೇವು,ಒಂದು ಬಟ್ಟಲು ಕಾಯಿ ತುರಿ,ಚಿಟುಕೆ ಅರಿಸಿನ,ಗೋಡಂಬಿ ಇಪ್ಪತ್ತೈದು ಗ್ರಾಂ ಚೂರುಗಳು ,ರುಚಿಗೆ ತಕ್ಕಷ್ಟು ಉಪ್ಪು,ಒಗ್ಗರಣೆಗೆ ಐವತ್ತು ಗ್ರಾಂ ತುಪ್ಪ.

ಮಾಡುವ ವಿಧಾನ :

ಅಕ್ಕಿ ಮತ್ತು ಬೇಳೆಯನ್ನು ತೊಳೆದು ಕುಕ್ಕರಿನಲ್ಲಿ ಹಾಕಿ.ಎರಡು ಶಿಳ್ಳೆ ಹಾಕಿ ಕೂಗಿಸಿಟ್ಟುಕೊಳ್ಳಿ .ನಂತರ ಒಗ್ಗರಣೆ ಬಾಂಡಲೆಗೆ ತುಪ್ಪ ಹಾಕಿ ಅದು ಕರಗಿದ ಬಳಿಕ ಅದರಲ್ಲಿ ತರಿಯಾಗಿ ಪುಡಿಮಾಡಿರುವ ಜೀರಿಗೆ ಮೆಣಸಿನ ಪುಡಿ ,ಕರಿಬೇವು,ಗೋಡಂಬಿ,ಚೂರು ಮಾಡಿದ ಒಣ ಮೆಣಸಿನಕಾಯಿ ಗಳನ್ನು ಹಾಕಿ ಬಾಡಿಸಿ. ಈಗಾಗಲೇ ಬೆಂದಿರುವ ಅಕ್ಕಿಬೇಳೆಯ ಮಿಶ್ರಣವನ್ನು ಇದಕ್ಕೆ ಸೇರಿಸಿ.ಜೊತೆಗೆ ಕಾಯಿ ತುರಿ ಮತ್ತೂ ರುಚಿಗೆ ತಕ್ಕಷ್ಟು ಉಪ್ಪು ಹಾಕುವುದನ್ನು ಮರೆಯ ಬೇಡಿ.ಸಣ್ಣ ಉರಿಯಲ್ಲಿ ತಳ ಹತ್ತದಂತೆ ಖಾರಾ ಹುಗ್ಗಿಯನ್ನು ಮಿಶ್ರ ಮಾಡಿ. ಬಿಸಿ ಬಿಸಿ ಖಾರ ಹುಗ್ಗಿ ರೆಡಿ ಟು ಸರ್ವ್!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X