ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗೋಲಿ, ಚಳಿ ಮತ್ತು ಯೋಗ್ಯ ವರ

By ಧವಳ
|
Google Oneindia Kannada News

The magic of Karnataka winter
ಧನುರ್ ಮಾಸ ಆರಂಭ ಆಯ್ತು! ಚಳಿಚಳಿ! ಚರ್ಮ ಒಡೆಯುವ ಕಿರಿ ಕಿರಿ! ಅವೆಲ್ಲ ಪಕ್ಕಕ್ಕೆ ಇಡೋಣ ಕಣ್ರೀ, ಇದ್ದದ್ದೇ. ಧನುರ್ಮಾಸದ ಪ್ರಯುಕ್ತ ಪ್ರತಿಯೊಂದು ದೇವಸ್ಥಾನಗಳಲ್ಲೂ ಮುಂಜಾನೆ ಪೂಜೆಯ ಸಂಭ್ರಮ, ಆಸ್ತಿಕ ಮಹಾಶಯರಿಗೆ ಪ್ರಸಾದದ ಸಂತೋಷ! ಈ ತಿಂಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುವುದು ರಂಗೋಲಿ. ಅಷ್ಟು ಮಾತ್ರವಲ್ಲದೆ ಅವಿವಾಹಿತ ಹೆಣ್ಣುಮಕ್ಕಳಿಗೆ ಅತ್ಯಂತ ಪ್ರೀತಿಯ ತಿಂಗಳು.

* ಪಾರ್ವತಿದೇವಿ ಶಿವನನ್ನು ಆರಾಧಿಸಿ ಒಲಿಸಿಕೊಂಡಿದ್ದು ಈ ತಿಂಗಳಿನಲ್ಲೇ ಅಂತೆ. ಆಕೆಯ ಪ್ರೀತಿಗೆ ಮೆಚ್ಚಿ ಪರಶಿವ ಮದುವೆ ಆದ ಅಂತ ಪುರಾಣಗಳು ಹೇಳುತ್ತವೆ. ಅದೇ ರೀತಿ ಗೋದಾದೇವಿ ರಂಗನಾಥನಿಗಾಗಿ ವ್ರತ ಕೈಗೊಂಡು ಆತನನ್ನು ಪಡೆದದ್ದು ಇದೆ ತಿಂಗಳು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ತಾವು ಬಯಸುವ ಪತಿ ದೊರಕಲೆಂದು ಹೆಣ್ಣುಮಕ್ಕಳು ಭಯಭಕ್ತಿಯಿಂದ ಕಾತ್ಯಾಯಿನಿ ದೇವಿಯ ವ್ರತ ಮಾಡುತ್ತಾರೆ.

* ಧನುರ್ ಮಾಸದಲ್ಲಿ ಇಡೀ ತಿಂಗಳು ಹೆಣ್ಣುಮಕ್ಕಳು ಕೋಳಿ ಕೂಗುವುದಕ್ಕೆ ಮುನ್ನವೇ ಎದ್ದು ಮನೆಮುಂದೆ ಗುಡಿಸಿ ಸಾರಿಸಿ ರಂಗೋಲಿ ಇಡ್ತಾರೆ. ಇದು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಕಾಣ ಸಿಗುವ ದೃಶ್ಯವಲ್ಲ, ನೆರೆಯ ರಾಜ್ಯಗಳಲ್ಲೂ ಇದು ಕಾಣಸಿಗುತ್ತದೆ. ರಂಗೋಲಿ ಎಂದೊಡನೆ ನೆನಪಿಗೆ ಬರುವುದು ಸೇರಿದ ಎರಡು ತ್ರಿಭುಜಗಳು, ಸಾಮಾನ್ಯ ಪದ್ಮ...! ಹೀಗೆ ಹಲವಾರು ರೀತಿಯದ್ದು. ಇವೆಲ್ಲವೂ ರಂಗೋಲಿಯನ್ನು ಕಲಿಯುವ ಆಸೆ ಹೊಂದಿರುವ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಅಜ್ಜಿ, ಅಮ್ಮ ಸೇರಿದಂತೆ ಮನೆಯ ಹಿರಿಯ ಹೆಣ್ಣುಮಕ್ಕಳು ಕಲಿಸಿ ಕೊಡುವ ಸರಳ ಹಾಗೂ ಸುಲಭದ ಡಿಜೈನುಗಳು.

ರಂಗೋಲಿ ಹಾಕುವ ಖುಷಿ ಕೇವಲ ಧನುರ್ಮಾಸಕ್ಕೆ ಸೀಮಿತ ಅಲ್ಲ. ಆ ತಿಂಗಳು ಸ್ವಲ್ಪ ಹೆಚ್ಚೇ ವಿಶೇಷತೆ ಪಡೆದುಕೊಳ್ಳುತ್ತದೆ. ಕಣ್ಮನ ಸೆಳೆಯುವ ರಂಗೋಲಿಗೆ ಬಣ್ಣ, ಕೆಮ್ಮಣ್ಣು, ಹೂವುಗಳನ್ನು ತುಂಬಿಸಿ ಅಲಂಕರಿಸಿ ಖುಷಿ ಪಡುತ್ತಾರೆ ಹೆಣ್ಣುಮಕ್ಕಳು. ಗ್ರಾಮೀಣ ಪ್ರದೇಶಗಳಲ್ಲಿ ಸೆಗಣಿಯಿಂದ ನೆಲ ಸಾರಿಸಿ ಸುಣ್ಣದಿಂದ ರಂಗೋಲಿ ಹಾಕುತ್ತಾರೆ. ಇವೆರಡು ಕ್ರಿಮಿ ಕೀಟಗಳು ಹಾಗೂ ದುಷ್ಟ ಶಕ್ತಿ ಮನೆಯೊಳಗೇ ಬರದಂತೆ ತಡೆಯುತ್ತವೆ.

ಒಟ್ಟಾರೆ, ರಂಗೋಲಿ ನಮ್ಮತನದ ಸಂಕೇತ. ಅತ್ಯಂತ ಖುಷಿ ಕೊಡುವ ಈ ಕೆಲಸವೂ ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಭಾರತೀಯ ಗಂಡು ಮಕ್ಕಳಿಗೂ ಅಪ್ಯಾಯ!

English summary
ರಂಗೋಲಿ, ಚಳಿ ಮತ್ತು ಯೋಗ್ಯ ವರ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X