ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಚೆಂದ ಕೆಲ್ಸಗಾರ ರಾಮಕೃಷ್ಣಪ್ಪ

By Staff
|
Google Oneindia Kannada News

'ಬ್ಯಾಡ ಮಗ ಭೂಮಿ ತಾಯಿಯನ್ನು ಮಾರೋದು೦ಟೆ, ನಮ್ಮ ಕಷ್ಟಕ್ಕೆ ತಾಯಿಯನ್ನು ಮಾರಿದಂತೆ ಕಣಪ್ಪ, ನಿನ್ನ ಸಮಸ್ಯೆ ಪರಿಹಾರ ಮಾಡಿಕೊಳ್ಳ ಬೇಕಾದರೆ ನೀವು ಬೇರೆ ರೀತಿ ಕಷ್ಟ ಪಡ ಬೇಕೇ ವಿನಃ ಹೀಗಲ್ಲ ಪರಿಹಾರ ಮಾಡಿಕೊಳ್ಳು ವುದು..' ಅಮ್ಮನ ಕರುಳ ಮಾತು ಮಗನ ಹೃದಯ ಕಲುಕಿತು. ಅಷ್ಟೆ. ಆತ ಅಂದು ಕೈಗೊಂಡ ನಿರ್ಧಾರ ಮತ್ತು ಆಯ್ಕೆ ಮಾಡಿಕೊಂಡ ಹಾದಿ ಬೇರೆಯಾಯಿತು. ತಮ್ಮ ಸಾಧನೆಯ ಮೂಲಕ ಕೇವಲ ಹೆತ್ತಮ್ಮನ ಮನಕ್ಕೆ ತಂಪು ಮಾಡಲಿಲ್ಲ ಊರ ಹಾಗೂ ದೇಶಕ್ಕೂ ತಂಪು ತಂದ ಸಾಧಕ ಬಿ.ಜಿ.ರಾಮಕೃಷ್ಣಪ್ಪ.

* ಧವಳ

ಕರ್ನಾಟಕದ ಗಡಿ ಭಾಗದ ತಾಲೂಕು ಮುಳಬಾಗಿಲಿನಲ್ಲಿರುವ ದೊಡ್ಡ ಬೇವಹಳ್ಳಿ ಗ್ರಾಮದ ಮಡಿಲ ಕೂಸು. ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿದ ಗಂಗಪ್ಪ ಮುನಿಯಮ್ಮ ದಂಪತಿಗಳ ಮಗ ರಾಮಕೃಷ್ಣಪ್ಪ ಹೆಚ್ಚಿನ ಓದಿಗಾಗಿ ಆಯ್ಕೆ ಮಾಡಿಕೊಂಡಿದ್ದು ಮೆಕಾನಿಕಲ್ ಡಿಪ್ಲೋಮಾ. ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್ . ಓದಿದ ಬಳಿಕ ಬೆಮೆಲ್ (BEML)ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು.

* ವೈಯುಕ್ತಿಕ ಕಾರಣದಿಂದ ಹಣದ ಕೊರತೆ ಉಂಟಾದಾಗ ಇರುವ ಭೂಮಿಯನ್ನು ಮಾರುವ ನಿರ್ಧಾರ ಕೈ ಕೊಂಡಾಗ ಹೆತ್ತಮ್ಮ ಒಪ್ಪಲಿಲ್ಲ. ಓದಿ, ಕೆಲಸಕ್ಕೆ ಸೇರಿ ಋಣದಿಂದ ಮುಕ್ತರಾದರು. ರಾಮ ಕೃಷ್ಣಪ್ಪ ಅವರ ಮನದಲ್ಲಿ ಬದುಕಲ್ಲಿ ಗಟ್ಟಿ ನೆಲೆ ಕಾಣಬೇಕು ಎನ್ನುವ ತುಡಿತ ಜಾಗೃತವಾಗಿಯೇ ಇತ್ತು,ಅದರ ಒಟ್ಟು ಫಲಿತಾಂಶ ಡೆಕ್ಕನ್ ಹೈಡ್ರಾಲಿಕ್ ಸಂಸ್ಥೆಯ ಉಗಮ (1992).

ಸಹೋದರರಾದ ಶಶಿಕಾಂತ್ ಮತ್ತು ರಘು ಅವರ ಜೊತೆಗೂಡಿ ಸಂಸ್ಥೆಯನ್ನು ಆರಂಭಿಸಿದ್ದು 7.28 ಲಕ್ಷ ರೂ ಬಂಡವಾಳದೊಂದಿಗೆ. ಬಂಗಾರ ಪೇಟೆಯಲ್ಲಿ ಆರಂಭ ಗೊಂಡ ವಹಿವಾಟು ಈಗ ಕೋಟಿಗಳನ್ನು ದಾಟಿದೆ. ಕಠಿಣ ಪರಿಶ್ರಮ, ಶ್ರೇಷ್ಠ ಗುಣಮಟ್ಟದ ಮೂಲಕ ನಾಡಿನ ಖ್ಯಾತ ಆಟೋ ಮೊಬೈಲ್ ಕಂಪನಿಗಳಿಗೆ ಸರಬರಾಜು ಆರಂಭಿಸಿದ ಸಂಸ್ಥೆ ಈಗ ಅಮೆರಿಕ,ಸ್ವೀಡನ್,ಫ್ರಾನ್ಸ್,ಬ್ರೆಜಿಲ್,ಇಟಲಿಯ೦ತಹ ರಾಷ್ಟ್ರಗಳಿಗೆ ಯತ್ರೋಪಕರಣಗಳನ್ನು ರಫ್ತು ಮಾಡುತ್ತಿದೆ. 400 ಮಂದಿಗೆ ಉದ್ಯೋಗ ಕಲ್ಪಿಸಿ ಕೊಟ್ಟಿರುವ ಸಂಸ್ಥೆಯು 1996 ರಲ್ಲಿ ರಾಜ್ಯದ 6 ನೇ ಹಾಗೂ ರಾಷ್ಟ್ರದ 87ನೇ ISO ಪ್ರಮಾಣ ಪಡೆಯಿತು ಅಂದ್ರೆ ಅದರ ಕಾರ್ಯವೈಖರಿ ಹೇಗಿರಬಹುದು ಯೋಚಿಸಿ!

* ಬಿಜಿಆರ್ ತಮ್ಮ ಗಮನ ಕೇವಲ ಹಣ ಮಾಡುವತ್ತಲೇ ನೆಡಲಿಲ್ಲ. ತಮ್ಮ ಬೇರಾದ ದೊಡ್ಡ ಬೇವಹಳ್ಳಿಯ ಸರ್ವತೋಮುಖ ಬೆಳವಣಿಗೆಯತ್ತ ಗಮನ ನೆಟ್ಟರು. ಒಂದು ದಶಕದ ಹಿಂದೆ ಸಾಧಾರಣ ಗ್ರಾಮವಾಗಿದ್ದ ಬೇವಹಳ್ಳಿ ಯಲ್ಲಿ ಇಂದು ಅತ್ಯಾಧುನಿಕ ಬಸ್ ನಿಲ್ದಾಣ, ಉತ್ತಮ ಚರಂಡಿ ವ್ಯವಸ್ಥೆ ಹೊಂದಿರುವ ರಸ್ತೆ, ಸಾಲಾಗಿ ಬೆಳಗುವ ಸೋಲಾರ್ ದೀಪಗಳು, ಲಾಲ್ಬಾಗ್ ಕೆರೆಯ ಪುಟ್ಟ ಪ್ರತಿರೂಪದಂತೆ ಇರುವ ಕೆರೆ, ಅದರ ಸುತ್ತ ಮುತ್ತಲಿನ ಅಚ್ಚುಕಟ್ಟಾದ ಸುಂದರ ಪ್ರದೇಶ,ಸಂಪೂರ್ಣ ಸಾವಯವ ಗ್ರಾಮ, ಇದರ ಮತ್ತೊಂದು ವಿಶೇಷತೆ 7.2 ಕಿಮಿ ರಿಂಗ್ ರೋಡ್ . ಕರ್ನಾಟಕದ ಹೆಮ್ಮೆಯ ಈ ಹಳ್ಳಿಯ ಚಿತ್ರಗಳನ್ನು ನೋಡುತ್ತಾ ಬನ್ನಿ.

* ಅಷ್ಟೆ ಅಲ್ಲ ಹಳ್ಳಿಯಲ್ಲಿ 12 ವಾರ್ಡುಗಳು, ವಿವಿಧ ಅಭಿವೃದ್ಧಿ ಪ್ರೇರಕ ಸಮಿತಿಗಳು,ಪುಟ್ಟ ಸರಕಾರದಂತೆ ತಿಂಗಳ ಮೊದಲ ಭಾನುವಾರ ನಡೆಯುವ ಗ್ರಾಮ ಸಭೆಯಲ್ಲಿ ಎಲ್ಲ ಕುಂದು ಕೊರತೆಗಳ ಚರ್ಚೆ, ಪರಿಹಾರ, ಅಲ್ಲದೆ ವೃದ್ಧರಿಗಾಗಿ ಮಾಸಿಕ ಪಿಂಚಣಿ..! ಸರಳತೆಯ ಪ್ರತೀಕವಾದ ಬಿ.ಜಿ.ರಾಮಕೃಷ್ಣಪ್ಪ ನವರು ವಾರಕ್ಕೊಮ್ಮೆ ತಮ್ಮ ಹಳ್ಳಿಗೆ ಬಂದು ಅಲ್ಲಿನ ಅಗತ್ಯಗಳತ್ತ ಗಮನ ಹರಿಸ್ತಾ ಇರುತ್ತಾರೆ.

* ವಿದ್ಯಾರ್ಥಿಗಳಿಗೆ ಧನ ಸಹಾಯ,ಪುಸ್ತಕ ನೆರವು,ವಾರ್ಷಿಕ ಪ್ರಶಸ್ತಿಗಳ ಯೋಜನೆ,ವಾಣಿಜ್ಯ ಕೃಷಿ ...ಯಂತಹ ಅಂಶಗಳಿಗೆ ಮಾತ್ರವಲ್ಲದೆ ಶಿಸ್ತು ಸಂಯಮಕ್ಕಾಗಿ ಯೋಗ,ಪ್ರಾಣಯಾಮ ಕ್ಯಾಂಪುಗಳನ್ನು ತಮ್ಮ ಗ್ರಾಮದ ಜನತೆ ಪಾಲ್ಗೊಳ್ಳುವಂತೆ ಮಾಡಿದ್ದರೆ ಬಿಜಿಆರ್ ಕೇವಲ ತಮ್ಮ ಗ್ರಾಮವನ್ನು ಮಾತ್ರ ಮಾದರಿ ಗ್ರಾಮವನ್ನಾಗಿ ಮಾಡುವ ಸೀಮಿತ ಉದ್ದೇಶ ಹೊಂದದೆ 2003ರಲ್ಲಿ ಇತರ ಹಲವಾರು ಗ್ರಾಮಗಳನ್ನು ದತ್ತು ಪಡೆದಿದ್ದಾರೆ.

* ತಮ್ಮ ಸೇವೆಯನ್ನು ಕೆಲವು ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸದೆ ಚಿಂತಾಮಣಿ ಸುಸಜ್ಜಿತ ಅತ್ಯಾಧುನಿಕ ಸೇವಾ ಸೌಲಭ್ಯ ಹೊಂದಿರುವ ಡೆಕ್ಕನ್ ಆಸ್ಪತ್ರೆಯನ್ನು ಆರಂಭಿಸುವುದರ ಮೂಲಕ ಆರೋಗ್ಯ ಕ್ಷೇತ್ರದತ್ತ ತಮ್ಮ ಗಮನ ನೆಟ್ಟಿದ್ದಾರೆ. ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ, ಅಂಗವಿಕಲರಿಗೆ ಉಚಿತ ಗಾಲಿ ಕುರ್ಚಿ, ವೈದ್ಯಕೀಯ ಸೇವಾ ಸೌಲಭ್ಯ ಹೊಂದಿರದ ಹಳ್ಳಿಗಳಲ್ಲಿ 'ನಿಮ್ಮ ಊರಲ್ಲಿ ನಮ್ಮ ಸೇವೆ'...ಹೀಗೆ ಅನೇಕ ರೀತಿಯಲ್ಲಿ ಜನಸೇವೆ ಮಾಡುತ್ತಿದ್ದಾರೆ ರಾಮಕೃಷ್ಣಪ್ಪ.

* ಇಷ್ಟೆಲ್ಲಾ ಸಾಧನೆ ಮಾಡಿರುವ ಬಿಜಿಆರ್ ಅವರ ಮುಂದಿನ ಕನಸು,ಯೋಜನೆಗಳು.1) ತಾಲೂಕಿನೆಲ್ಲೆಡೆ ಮಳೆ ನೀರಿನ ಕೊಯ್ಲ ಪದ್ಧತಿ ಹಂತಹಂತವಾಗಿ ಅಳವಡಿಸಲು ಯೋಜನೆ 2) ಹಳ್ಳಿಗಳಲ್ಲಿ ಪ್ರತಿಯೊಂದು ಮನೆಗಳಿಗೂ,ನೀರು ಶೌಚಾಲಯದ ವ್ಯವಸ್ಥೆ 3) ತ್ಯಾಜ್ಯ ನೀರಿನ ಶುದ್ಧೀಕರಣ ಹಾಗೂ ನಿರ್ವಹಣ ಘಟಕ ಸ್ಥಾಪನೆ. ಸಮಾಜಕ್ಕೆ ಹನಿಯಷ್ಟು ಸೇವೆ ಸಲ್ಲಿಸಿದರೆ ಸಮುದ್ರದಷ್ಟು ಹೊಗಳಿಕೊಳ್ಳುವ ಜನರು ಈ ಸಮಾಜದಲ್ಲಿ ಇರುವುದೆಷ್ಟು ನಿಜವೋ ಬಿ.ಜಿ.ರಾಮಕೃಷ್ಣಪ್ಪನಂತಹ ಸರಳ ಸಜ್ಜನ ಮಹನೀಯರು ಇದ್ದಾರೆ ಎನ್ನುವುದು ಅಷ್ಟೆ ಸತ್ಯ!

ಇಂಥ ವ್ಯಕ್ತಿಗಳನ್ನು ಪ್ರಶಸ್ತಿಗಳೂ ಅರಸಿಕೊಂಡು ಬರುತ್ತವೆ. ಉತ್ತಮ ರಫ್ತುದಾರ, ತೋಟಗಾರಿಕೆ ಇಲಾಖೆಯಿಂದ ನಿರಂತರವಾಗಿ ನಾಲ್ಕು ವರ್ಷಗಳಿಂದ ಉತ್ತಮ ಕೈಗಾರಿಕಾ ಉದ್ಯಾನವನ ನಿರ್ವಹಣೆ ಪ್ರಶಸ್ತಿ ಇತ್ಯಾದಿ. ನಿಮ್ಮ ಹಳ್ಳಿಯೂ ಹೀಗಾಗಬೇಕೇ? ಹಾಗಾದರೆ, ಮಾರ್ಗಸೂಚಿಗಳಿಗೆ, ಪ್ರಯೋಗಗಳಿಗೆ, ಸಲಹೆ ಅಥವಾ ಬೇವಳ್ಳಿಯ ಬೆಳವಣೆಗೆಯ ಅಧ್ಯಯನ ಮಾಡುವುದಿದ್ದರೆ ಕರ್ಮಯೋಗಿ ರಾಮಕೃಷ್ಣಪ್ಪನವರನ್ನು ಸಂಪರ್ಕಿಸಿ :ಸೆಲ್ :98456 10296 ಇಮೇಲ್ :[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X