ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಲೇಖನ ಓದಿದ ಮೇಲೆ ಕುಡೀಬೇಕಾ, ಕುಡಿಯೋದ್ ಬೇಡ್ವಾ? ನಿರ್ಧಾರ ಮಾಡಿ

|
Google Oneindia Kannada News

ಆಂಗ್ಲ ವರ್ಷಾರಂಭದ ಮೊದಲ ಲೇಖನಕ್ಕೆ ಸ್ವಾಗತ ನಿಮಗೆ. ಈ ಹೊಸ ವರ್ಷವು ನಿಮಗೆಲ್ಲಾ ಸುಖ ಸಂತೋಷ ತರಲಿ ಎಂದು ಹಾರೈಸುತ ನಿಮ್ಮನ್ನೆಲ್ಲಾ ಒಂದಷ್ಟು ತೇಲಾಡಿಸುತ್ತ ವಿಷಯಗಳನ್ನು ಹಂಚಿಕೊಳ್ಳೋಣ ಎನಿಸಿದೆ.

ಮೊದಲಲ್ಲೇ ಒಂದು ವಿಷಯ ಹೇಳಿಬಿಡುತ್ತೇನೆ. ನಾನು ಈ ದ್ರವಗಳನ್ನು ಇಂದಿಗೂ 'ನೇರವಾಗಿ' ಕುಡಿದಿಲ್ಲ. ರುಚಿ ಅರಿಯದವ ನಾನು. ಏರೋಪ್ಲೇನ್ ಹಾರಿಸಿದವನಿಗೇ ಏರೋಪ್ಲೇನ್ ಬಗ್ಗೆ ಅರಿವಿರಬೇಕು ಅಂತೇನೂ ಇಲ್ಲ ಅಲ್ಲವೇ?

ಹೊಸವರ್ಷದಲ್ಲಿ ದುರ್ವಾಸನೆ ದೂರವಾಗಿ ಸುವಾಸನೆ ಹೆಚ್ಚಾಗಲಿ!ಹೊಸವರ್ಷದಲ್ಲಿ ದುರ್ವಾಸನೆ ದೂರವಾಗಿ ಸುವಾಸನೆ ಹೆಚ್ಚಾಗಲಿ!

ನೇರವಾಗಿ ಅಂತ ಯಾಕೆ ಹೇಳಿದೆ ಎಂದರೆ, ಕೇವಲ ಕಳೆದ ಹತ್ತು ವರ್ಷಗಳಲ್ಲಿ woodwards gripe water ಎಂಬೋದು ಆಲ್ಕೋಹಾಲ್ ಮತ್ತು ಸಕ್ಕರೆ ಮುಕ್ತವಾಗಿ ಮಾರುಕಟ್ಟೆಗೆ ಬಂದಿರೋದು. ಅಲ್ಲಿಯವರೆಗೂ ಅದರಲ್ಲಿ 3.6% ಆಲ್ಕೋಹಾಲ್ ಇತ್ತು.

ಕ್ರಿಸ್ಮಸ್ ಹಬ್ಬದ ಬೆಳಕಲ್ಲಿ ದೀಪಾವಳಿಯ ಕಾಣ್ವರು ನಾವು ಕ್ರಿಸ್ಮಸ್ ಹಬ್ಬದ ಬೆಳಕಲ್ಲಿ ದೀಪಾವಳಿಯ ಕಾಣ್ವರು ನಾವು

ಈ ಲೇಖನ ರಾತ್ರೋರಾತ್ರಿ ಕೂತು ಬರೆದದ್ದಲ್ಲಾ. ಮೊದಲಿಗೆ ಕೆಲವರನ್ನು ಸಂದರ್ಶನ ಮಾಡಿ ವಿಷಯ ತಿಳಿದುಕೊಂಡೆ. ಮೊದಲ ಅರಿವು ಎಂದರೆ ಒಂದು full ಬಾಟ್ಲಿ ಅಂದ್ರೆ 750 ml ಅರ್ಥಾತ್ ಒಂದು ಲೀಟರ್ ಅಲ್ಲ. ಅಲ್ಲಿಂದ ಅರಿವಾಗಿದ್ದು ಒಂದು ಕ್ವಾರ್ಟರ್ ಅಂದ್ರೆ 180 ml . . . ಒಂದು quarter ಅಂದ್ರೆ 180, ನಾಲ್ಕು quarter ಅಂದ್ರೆ ಪೂರಾ ಬಾಟ್ಲಿ ಅಂದ್ರೆ 720 ml ಅಂದ್ರೆ ಮಿಕ್ಕ 30 ಎಲ್ ಹೋಯ್ತು? ಅದನ್ನ barmen's ಪೆಗ್ ಅಂತಾರೆ. ಒಂದು ಬಾಟ್ಲಿ ತೆಗೆದು ನಾಲ್ಕು ಕ್ವಾರ್ಟರ್ ಅಂತ ಹಾಕಿ ಉಳಿದ 30 ಅನ್ನು ಅಂಗಡಿಯವನೇ ಹಾಕ್ತಾನೆ ಅಥವಾ ಹಾಕೋವಾಗ ಚೆಲ್ಲಿದ್ದೂ ಆಗಬಹುದು ಅಂತ.

ಎಣ್ಣೆ ಹಾಕಿದವರು ಯಾಕೆ ಎಂಗೆಂಗೋ ಆಡ್ತಾರೆ?

ಎಣ್ಣೆ ಹಾಕಿದವರು ಯಾಕೆ ಎಂಗೆಂಗೋ ಆಡ್ತಾರೆ?

ಬಾಟ್ಲಿ ಹಾಕಿದವರು ಎಂಗೆಂಗೋ ಆಡ್ತಾರೆ ಯಾಕೆ ಅಂತ ಕೇಳ್ದೆ. ಜಡ್ಡುಗಟ್ಟಿರೋ ಮೈ ಕೊಂಚ free ಆಗೋದ್ರಿಂದ ಹಾಗಾಗುತ್ತೆ ಅಂದ್ರು ಒಬ್ಬರು. ನಿಜ ಅನ್ನಿಸುತ್ತೆ ಯಾಕೆ ಅಂದ್ರೆ, ಒಮ್ಮೆ ನಮ್ಮ ಮನೆಯ ಬಾಗಿಲೊಂದು ತೆಗೆದು ಹಾಕಿದಾಗಲೆಲ್ಲಾ 'ಕಿರ್ರ್' ಅಂತ ಸದ್ದು ಮಾಡ್ತಿತ್ತು. ಸರಿ ಅಂತ, ಒಂದಷ್ಟು ಹರಳೆಣ್ಣೆ ತೊಗೊಂಡು ಬಾಗಿಲ ಸಂದಿಗೆ ಹಚ್ಚಿದೆ. ಆಮೇಲೆ ಇನ್ನೊಂದಿಷ್ಟು, ಮತ್ತೊಂದಿಷ್ಟು. ಎಷ್ಟು ಎಣ್ಣೆ ಮೆತ್ತಿದ್ದೆ ಅಂತ ನನಗೆ ಗೊತ್ತಿಲ್ಲ. ಎಣ್ಣೆ ಹಾಕಿದ ಬಾಗಿಲು, ನಾಲ್ಕೈದು ವರ್ಷವಾದರೂ, ಈಗಲೂ ತೆರೆದಿಟ್ಟರೆ ಸಾಕು ತಂತಾನೇ ಅಲ್ಲಾಡಿಕೊಂಡು ಹಾಕಿಕೊಂಡು ಬಿಡುತ್ತೆ. ನನಗೇನು ಗೊತ್ತು ಎಷ್ಟು ಹಾಕಬೇಕು, ಯಾವಾಗ ನಿಲ್ಲಿಸಬೇಕು ಅಂತ.

ಪರಮಾತ್ಮ ಮೈಯೊಳಗೆ ಸೇರಿದರೆ

ಪರಮಾತ್ಮ ಮೈಯೊಳಗೆ ಸೇರಿದರೆ

ಹೀಗೇಕೆ? ಆಲ್ಕೋಹಾಲ್'ನಲ್ಲಿರುವ ಮುಖ್ಯ ಅಂಶ ಎಥನಾಲ್. ಇದನ್ನು ಸೇವಿಸಿದಾಗ ದೇಹದಲ್ಲಿ ವ್ಯತ್ಯಾಸವಾದಂತೆ ಮನಸ್ಸಿನ ಮೇಲೂ ಪರಿಣಾಮ ಇದ್ದೇ ಇರುತ್ತದೆ. ಮೂಡ್ ಬದಲಾಗುವ ಸಾಧ್ಯತೆ ಅತೀ ಹೆಚ್ಚು. ಹಾಗಾಗಿ ಕುಡಿದ ಮಂದಿ ಎಂಗೆಂಗೋ ಆಡೋದು ಸಹಜ. ಬಹಳಾ ವರ್ಷಗಳ ಹಿಂದೆ, ಆಫೀಸಿನ ಒಂದು ಪಾರ್ಟಿ ನಂತರ, ನನ್ನ ಸ್ನೇಹಿತ ಒಬ್ಬ, ನಿಂತರೆ ಬೀಳೋ ಹಂಗೆ ಕುಡಿದಿದ್ದವ, "ನನಗೇನೂ ಆಗಿಲ್ಲ ನಾನು ಬೈಕ್ ಓಡಿಸಿಕೊಂಡು ಮನೆಗೆ ಹೋಗ್ತೀನಿ" ಅಂತ ಗಲಾಟೆ ಮಾಡ್ತಿದ್ದ. ಪಾರ್ಟಿ ಇದ್ದಿದ್ದು ದೊಡ್ಡಬಳ್ಳಾಪುರದ ಸಮೀಪ, ಅವನ ಮನೆ ಇದ್ದಿದ್ದು ಇಲೆಕ್ಟ್ರಾನಿಕ್ ಸಿಟಿ'ಯ ಬಳಿ. ಇಂಥಾ ಅತಿರೇಕದ ಆಲೋಚನೆಗಳಿಂದಲೇ ಅಪಘಾತಗಳಿಗೆ ಕಾರಣ. ಪ್ರತೀ ವರ್ಷವೂ, ಮಹಾತ್ಮಗಾಂಧಿ ರಸ್ತೆಯ ಹೊಸವರ್ಷವನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ ಆಗುವ ಅವಘಡಗಳೂ ಈ ಸಾಲಿಗೆ ಸೇರುತ್ತವೆ.

ಅಪಘಾತಗಳು ಮೂಳೆಮುರಿತದಲ್ಲಿ ಕೊನೆಗೊಳ್ಳೋದೂ ಇದೆ, ಮನೆಗೆ ಹೋಗ್ತೀನಿ ಅಂದುಕೊಂಡವರು ಮರಳಿ ಗೂಡಿಗೆ ಹೋಗೋದೂ ಇದೆ. ಇವರ ಅದೃಷ್ಟಕ್ಕೆ, ಬಾಯಿಗೆ ಮೆಶೀನು ಬಡಿದು ಎಷ್ಟು ಕುಡಿದಿದ್ದಾರೆ ಎಂದು ತಪಾಸಣೆ ಮಾಡುವ ಪೊಲೀಸರು ಸಿಕ್ಕರೆ ಒಳ್ಳೇದು. ಇಲ್ಲದಿದ್ದರೆ ಏನೆಲ್ಲಾ ಆಗಬಹುದು.

ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ? ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ?

ಸಿನಿಮಾರಂಗಕ್ಕೂ ಕುಡಿತಕ್ಕೂ ಏನೋ ಸಂಬಂಧ

ಸಿನಿಮಾರಂಗಕ್ಕೂ ಕುಡಿತಕ್ಕೂ ಏನೋ ಸಂಬಂಧ

ಸಿನಿಮಾರಂಗಕ್ಕೂ ಕುಡಿತಕ್ಕೂ ಏನೋ ವಿಪರೀತ ಸಂಬಂಧ ಇದೆ. ಕೆಲವು ಕುಡಿತ ಸಂಬಂಧೀ ಹಾಡುಗಳನ್ನು ಖ್ಯಾತ ನಟರಿಗೆ ಕೇಳಿಸಿ ಅವರಿಂದ ಅಭಿಪ್ರಾಯ ಶೇಖರಿಸಿ ವಿಡಿಯೋ ಮಾಡಿ advertise ಮಾಡುವ ಪರಂಪರೆ ಜೋರಾಗಿದೆ. ಕೆಲವರಂತೂ 'ಅರೇ! ಹೌದಲ್ವಾ? ನಾವೆಲ್ಲಾ ಕುಡಿದು ಮನೆಗೆ ಹೋದಾಗ . . " ಅಂತೇನೋ ಕಾಮೆಂಟ್ ಮಾಡ್ತಾರೆ. ಇವರು ತೊಗೋತಾರೆ ಅಂತ ಎಲ್ಲರೂ ತೊಗೋತಾರೆ ಅಂದುಕೊಳ್ಳೋದ್ ಯಾಕೆ? . . ಅರ್ಥಾತ್ ಯಾವುದನ್ನೂ generalize ಮಾಡಲಾಗದು. ಕುಡಿಯುವವರೆಲ್ಲಾ ಬೇಗ ಹೊಗೆ ಹಾಕಿಸಿಕೊಳ್ತಾರೆ ಅಂದ್ರೆ ಕುಡಿಯದವರು ಅಮರತ್ವ ಪಡೆದಿರುತ್ತಾರೆಯೇ?

ಕುಡಿದವರ ಕಣ್ಣ ಮೇಲೆ ಕಪ್ಪು ಕನ್ನಡಕ

ಕುಡಿದವರ ಕಣ್ಣ ಮೇಲೆ ಕಪ್ಪು ಕನ್ನಡಕ

ಅತಿಹೆಚ್ಚು ಮದ್ಯ ಸೇವನೆಯಾದಾಗ ಕಂಗಳ ಮೇಲಿನ ರಕ್ತನಾಳಗಳು ಊದಿಕೊಂಡು ಕೆಂಪಾಗಿ ಕಾಣುತ್ತದೆ. ಸಿಕ್ಕಾಪಟ್ಟೆ ಕುಡಿದು ಬಾಟ್ಲಿ ಚೂರು ಚೂರು ಮಾಡುವ ಪಾತ್ರ ಮಾಡುವಾಗಿನ ರವಿಚಂದ್ರನ್ ಅವರ ಕಣ್ಣುಗಳನ್ನು ಕೆಂಪಗೆ ಏಕೆ ತೋರಿಸುತ್ತಾರೆ ಅಂತ ಗೊತ್ತಾಯ್ತೇ? ಹೊಸವರ್ಷದ ಸಂಭ್ರಮ ಕಳೆದ ನಂತರ, ಬಿಸಿಲಿಲ್ಲದಿದ್ದರೂ ಕಣ್ಣಿಗೆ ತಂಪುಕನ್ನಡ ಧರಿಸಿಕೊಂಡೇ ಓಡಾಡುವ ಮಂದಿಯ ಕಂಗಳು ಬಹುಶ: ಕೆಂಪಗೆ ಇರಬಹುದು. ಇದೂ ಕೂಡ generalize ಮಾಡಬಾರದು. ಅತ್ತುಅತ್ತು ಕೆಂಪಾದ ಕಣ್ಣ ಹೊತ್ತ ಹೆಣ್ಣು ಕಪ್ಪುಕನ್ನಡಕ ಧರಿಸಿರಬಹುದು.

ವೈನ್ ಕುಡಿದರೆ ಲಾಭ ಇದೆಯೆ?

ವೈನ್ ಕುಡಿದರೆ ಲಾಭ ಇದೆಯೆ?

ಹಲವಾರು ಜನರ ಬಾಯಲ್ಲಿ ಕೇಳಿರುವ ಮಾತು ಎಂದರೆ, ಕೆಂಪು ವೈನ್ ಕುಡಿಯೋದ್ರಿಂದ ಲಾಭ ಇದೆ ಅಂತ. ಅದನ್ನು ತಯಾರಿಸುವ ಕಂಪನಿಗೆ ಲಾಭ ಇದೆ ಅನ್ನೋದು ಮೊದಲ ಸತ್ಯವಾದರೂ ಆರೋಗ್ಯದ ವಿಷಯದಲ್ಲಿ ಲಾಭದಾಯಕ ಅಂತಾರೆ.

ನಿಯಮಿತ ಸೇವನೆಯಿಂದ ಆರೋಗ್ಯ ಉತ್ತಮವಾಗಬಹುದು ಮತ್ತು ಹೆಚ್ಚು ಕಾಲ ಬದುಕಬಹುದು ಎಂದೇ ಹೇಳುವ ಮಂದಿ, ಅತಿಯಾದ ಸೇವನೆಯಿಂದ ಏನೆಲ್ಲಾ ಅವಘಡಗಳು ಸಂಭವಿಸಬಹುದು ಎಂದೂ ಹೇಳಿದ್ದಾರೆ. ಅರ್ಥಾತ್ ನಿಯಮಿತ ಮತ್ತು ಅತೀ ಎಂಬುದರ ನಡುವೆ ಯಾವ ರೇಖೆ ಇದೆಯೋ ಅದನ್ನು ಗುರುತಿಸುವ ಅರಿವು ಮಂದಿಗೆ ಇರಬೇಕು. ಪ್ರತಿಯೊಬ್ಬ ಮನುಷ್ಯನೂ ಭಿನ್ನ ಎನ್ನೋದು ಈ ವಿಷಯಕ್ಕೂ ಒಪ್ಪುತ್ತದೆ. ಕೆಲವರು ಹತ್ತು ಪೆಗ್ ಹಾಕಿದಾಗಲೂ ಏನೂ ಆಗದಂತೆ ಇರಬಹುದು ಆದರೆ ಮತ್ತೆ ಹಲವರು ಆ ವಾಸನೆಗೇ ತಲೆತಿರುಗಿ ಬೀಳಬಹುದು.

ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ! ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!

ವಯಸ್ಸು ಹೆಚ್ಚಾದಷ್ಟೂ ಬೆಲೆ ಹೆಚ್ಚು

ವಯಸ್ಸು ಹೆಚ್ಚಾದಷ್ಟೂ ಬೆಲೆ ಹೆಚ್ಚು

ವಯಸ್ಸು ಹೆಚ್ಚಾದಷ್ಟೂ ಬೆಲೆ ಹೆಚ್ಚು ಅಂಬೋದು ಯಾವುದಕ್ಕಾದರೂ ಹೇಳಬಹುದು ಎಂದರೆ ಅದು ದ್ರಾಕ್ಷಾರಸವಾದ ವೈನ್'ಗೆ ಮಾತ್ರ ಎನಿಸುತ್ತದೆ. ದ್ರಾಕ್ಷಿಗಳಲ್ಲಿ ಹಲವಾರು ಬಣ್ಣಗಳು ಇರುತ್ತದೆ. ದ್ರಾಕ್ಷಿಯಲ್ಲೇ ಹತ್ತು ಹಲವು ವಿಧ ಕೂಡ ಇದೆ. ಟೇಬಲ್ ಗ್ರೇಪ್ಸ್'ಗೂ ವೈನ್ ಗ್ರೇಪ್ಸ್'ಗೂ ವ್ಯತ್ಯಾಸವಿದೆ. ಪುಟ್ಟ ಸಾಮ್ಯತೆ ಎಂದರೆ ಕಡಲೆಕಾಯಿಂದ ಎಣ್ಣೆ ತೆಗೆಯುತ್ತಾರೆ ಎಂದರೂ ಅಡುಗೆ ಕಡಲೇಕಾಯಿ ಬೇರೆ, ಎಣ್ಣೆ ತೆಗೆಯೋ ಕಡಲೇಕಾಯಿ ಬೇರೆ. ಇದಪ್ಪಾ ವಿಷಯ ಅಂದ್ರೆ ಎಣ್ಣೆ ಅಂದಾಗ ವೈನ್'ಗೂ ಕಡಲೇಕಾಯಿ ಬೀಜಕ್ಕೂ ನನ್ನ ತಲೆಯಲ್ಲಿ ಹೇಗೆ ಲಿಂಕ್ ಬಂತೋ ಗೊತ್ತಿಲ್ಲ!

ವೈನ್ ಎವೆರಿಬಡೀಸ್ ಡ್ರಿಂಕ್ಸ್, ಹೌದೆ?

ವೈನ್ ಎವೆರಿಬಡೀಸ್ ಡ್ರಿಂಕ್ಸ್, ಹೌದೆ?

ವೈನ್ ಮತ್ತು ಬಿಯರ್'ಗಳಲ್ಲಿ ಆಲ್ಕೋಹಾಲ್ ಅಂಶ ಕಡಿಮೆ ಇರುತ್ತದೆ. ಹಾಗಾಗಿ ಇವನ್ನು everybody's ಡ್ರಿಂಕ್ ಅಂತಾರೆ. ಸ್ಕಾಚ್'ನಲ್ಲಿ ಅತೀ ಹೆಚ್ಚು ಆಲ್ಕೋಹಾಲ್ ಅಂಶ ಇರುತ್ತದೆ. ವೈನ್'ನಲ್ಲಿ ಪಯಣ ಆರಂಭಿಸಿ ಸ್ಕಾಚ್'ಗೆ ಬರೋದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಅಂತ ನನ್ನ ಕೇಳದಿರಿ. ಇಷ್ಟೆಲ್ಲಾ ವಿಧವಿಧವಾದ ಪಾನೀಯಗಳಿದೆಯೆಲ್ಲಾ, ತೊಗೊಳ್ಳೋದು ಯಾವ್ದು ಅಂತ ನನ್ನ ಕೇಳಿದ್ರೆ ನಾನೇನೂ ಹೇಳೊಲ್ಲ. ಬಲ್ಲವರೊಡನೆ ಕೇಳಿದಾಗ cocktail ಅಂತ ಒಂದಿದೆ ಅದನ್ನು ತೆಗೆದುಕೊಂಡರೆ ಸರಿಯಾಗಿ ಒದೆಯುತ್ತೆ ಅಂದ್ರು.

ಅತಿಯಾದರೆ ಅಮೃತವೂ ವಿಷ

ಅತಿಯಾದರೆ ಅಮೃತವೂ ವಿಷ

ದ್ರಾಕ್ಷಾರಸವೇ ವೈನ್ . . ಕಬ್ಬಿನಜಲ್ಲೆಯಿಂದ ರಮ್ ತಯಾರಿಸುತ್ತಾರೆ . . ದವಸ-ಧಾನ್ಯಗಳಿಂದ ತಯಾರಿಸೋದು ವಿಸ್ಕಿ, ಬಿಯರ್, ವೋಡ್ಕಾ ಇತ್ಯಾದಿ. ಏನು ಹೇಳೋಕ್ಕೆ ಹೊರಟೆ ಎಂದರೆ ರೇಖೆಯ ವಿಷಯ. ಒಂದು ಪದಾರ್ಥ ನಮಗೆ ಜೀವ ನೀಡಬಹುದು ಅದರಂತೆಯೇ ಜೀವ ತೆಗೆಯಲೂ ಕಾರಣವಾಗಬಹುದು. ಯಾವುದರ ಸೇವನೆ ಎಷ್ಟರ ಮಟ್ಟಿಗೆ ಆಗಬೇಕು ಎಂಬುದನ್ನು ನಿರ್ಧರಿಸುವ ವಿವೇಕ ನಮಗಿರಬೇಕು. ಅತಿಯಾದರೆ ಅಮೃತವೂ ವಿಷ ಎಂಬುದು ಇದಕ್ಕೇನೇ.

ಯಾವುದೂ ಒಳ್ಳೆಯದಲ್ಲ ಯಾವುದೂ ಕೆಟ್ಟದಲ್ಲ

ಯಾವುದೂ ಒಳ್ಳೆಯದಲ್ಲ ಯಾವುದೂ ಕೆಟ್ಟದಲ್ಲ

ಒಟ್ಟಾರೆ ಹೇಳೋದಾದ್ರೆ ಯಾವುದೂ ಒಳ್ಳೆಯದಲ್ಲ ಯಾವುದೂ ಕೆಟ್ಟದಲ್ಲ. ಈ ಲೋಕದಲ್ಲಿ ಶ್ರೀರಾಮನನ್ನು ಪೂಜಿಸುವವರೂ ಇದ್ದಾರೆ, ಹೀಯಾಳಿಸುವವರೂ ಇದ್ದಾರೆ. ಭಗವದ್ಗೀತೆಯನ್ನು ಮುಟ್ಟಿ ಭಕ್ತಿಯಿಂದ ಪ್ರಮಾಣ ಮಾಡುವವರೂ ಇದ್ದಾರೆ, ಸುಡುವಂತೆ ಆಗ್ರಹಿಸುವವರೂ ಇದ್ದಾರೆ. ಕುಡಿಯದವರೂ ಇದ್ದಾರೆ, ಕುಡಿಯುವವರೂ ಇದ್ದಾರೆ, ಅವರವರ ಹಕ್ಕನ್ನು ಸರಿಯಾಗಿ ಬಳಸಿಕೊಂಡು ಸಾಧ್ಯವಾದರೆ ಒಳಿತು ಮಾಡಿ, ಏನೂ ಮಾಡದಿದ್ದರೂ ಅಡ್ಡಿಯಿಲ್ಲ ಕೆಡುಕಂತೂ ಮಾಡದಿರಿ.

ಇಷ್ಟೆಲ್ಲಾ ಓದಿದ ಮೇಲೆ, ಈಗ ಕುಡೀಬೇಕಾ / ಕುಡಿಯೋದ್ ಬ್ಯಾಡ್ವಾ ಅಂತ confuse ಆಗ್ತಾ ಇದೆ ಎನ್ನುವವರಿಗೆ ಒಂದು ಮಾತು ಹೇಳ್ತೀನಿ. ಈ ಬರಹ statutory warning ರೀತಿ. ಹೇಗೆ ಅರ್ಥೈಸಿಕೊಳ್ಳುಬೇಕೋ ನಿಮಗೆ ಬಿಟ್ಟಿದ್ದು. ಎಣ್ಣೆಯೂ ನಿಮ್ದೇ, ಊಟವೂ ನಿಮ್ದೇ.

ಈವರೆಗೆ ಹೇಳಿದ ವಿಷಯಗಳು ನಿಮಗೆ ಹೊಸತೇನಲ್ಲ. ಹೊಸ ಬಾಟ್ಲಿ ಹಳೇ ಮದ್ಯ ಅಷ್ಟೇ ! ನಿಮ್ಮೆಲ್ಲರಿಗೂ ಹೊಸ ವರುಷಕ್ಕೆ ಹೊಸ ಹರುಷದ ಶುಭಾಶಯಗಳು.

English summary
You only decide to drink or not to drink on new year parties. Srinath Bhalle has done some wonderful research on drinks with alcohol and impact they make when you consume it. Have a wonderful new year 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X