ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಷ್ಟ ಶಕ್ತಿಗಳನ್ನು ದೂರವಿಡುವ ಒಂದು ಗಂಟೆಯ ಸುತ್ತ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮೊನ್ನೆ world cup ಕ್ರಿಕೆಟ್ ಆಟ ನೋಡುವಾಗ ಕ್ಯಾಮೆರಾ LCCC ಗಂಟೆಯ ಮೇಲೆ focus ಮಾಡಿದರು. LCCC - Lancashire Cricket Club Bell ಬಗ್ಗೆ ಕೊಂಚ ಓದಿದ ಮೇಲೆ ಗಂಟೆಯ ಬಗ್ಗೆ ಬರೆಯಬೇಕು ಎನ್ನಿಸಿ "ಒಂದು ಗಂಟೆಯ ಸುತ್ತ" ಅಂತ ಬರೆದೆ.

ಗಂಟೆಯನ್ನು ಗಮನಿಸಿದಾಗ ಅರಿವಾಗೋದು, ಗಂಟೆಯ ಆಕಾರವು ಬೋರಲು ಹಾಕಿದ ಲೋಟದಂತೆ ಕಾಣುತ್ತೆ ಅಂತ. ಖಾಲೀ ಲೋಟದ ಒಳಗಿರುವಂತೆಯೇ ಗಂಟೆಯ ಒಳ ಭಾಗವೂ ಖಾಲಿಯೇ ಇರುತ್ತದೆ. ಆದರೆ ಒಳಗೆ ಅದಕ್ಕೊಂದು ನಾಲಿಗೆ ಇರುತ್ತದೆ. ಗಂಟೆಯ ಮಧ್ಯಭಾಗದಲ್ಲಿರುವ ಈ ನಾಲಿಗೆ ಗಂಟೆಯ ಒಳಪದರದಲ್ಲಿ ಯಾವುದೇ ಭಾಗಕ್ಕೆ ಬಡಿದರೂ ಸದ್ದು ಉಂಟಾಗುತ್ತದೆ. ಆ ಬಡಿತಗಳಿಂದ ಹುಟ್ಟಿದ ನಾದ ಪ್ರತಿಧ್ವನಿಸಿ ಮಧುರವಾದ ನಾದವಾಗಿ ಕೇಳಿಸುತ್ತದೆ.

ಬೂದಿ ನಗಣ್ಯವಲ್ಲ, ಬದುಕಿನಲ್ಲಿ ಬೂದಿಗೂ ವಿಶೇಷ ಸ್ಥಾನವಿದೆ! ಬೂದಿ ನಗಣ್ಯವಲ್ಲ, ಬದುಕಿನಲ್ಲಿ ಬೂದಿಗೂ ವಿಶೇಷ ಸ್ಥಾನವಿದೆ!

ಪ್ರತೀ ಬಾರಿಯೂ ಒಂದೇ ರೀತಿಯ ನಾದ ಹೊರಗೆ ಬರುತ್ತದೆಯೇ? ಬಹುಶ: ಇಲ್ಲ, ಏಕೆಂದರೆ ಗಂಟೆಯಿಂದ ಹೊರಬರುವ ನಾದವು ನಾಲಿಗೆಯ ಬಡಿತದ ರಭಸದ ಮೇಲೆ ಅವಲಂಬಿತ. ಗಂಟೆಯನ್ನು ತಯಾರಿಸಿರುವ ಲೋಹದ ಮೇಲೆ ಅವಲಂಬಿತ. ಇವೆಲ್ಲವೂ ಸರಿಯಾಗಿ ಇದ್ದರೂ ನಾದ ಸರಿಯಾಗಿ ಬಾರದೇ ಇರಬಹುದು. ಕಾರಣ ಒಂದು ಗಂಟೆಯ ನಾದ ಚೆನ್ನಾಗಿ ಹೊರಹೊಮ್ಮಬೇಕಾದರೆ ಎಲ್ಲಕ್ಕಿಂತಲೂ ಮುಖ್ಯ ಗಂಟೆಯ ಆಕಾರ!

Why do we ring bell, what is the significance?

ಬಾಲ್ಯದಲ್ಲಿ ಗುಡಿಗೆ ಹೋದಾಗ ಗಂಟೆ ಬಾರಿಸಬೇಕು ಎಂಬ ಆಸೆ. ಆದರೆ ಅದನ್ನು ಎತ್ತರಕ್ಕೆ ತೂಗಿ ಹಾಕುತ್ತಿದ್ದುದರಿಂದ ಎಟುಕುತ್ತಲೇ ಇರಲಿಲ್ಲ. ಕೆಲವೊಮ್ಮೆ ಎಗರಿ ಬಾರಿಸಿದ್ದಿದೆ. ಆದರೆ ಅದು ನೈವೇದ್ಯದ ಸಮಯವಾಗಿದ್ದು ಪೂಜಾರಿಗಳ ಕೈಯಲ್ಲಿ ಬೈಸಿಕೊಂಡಿದ್ದೂ ಇದೆ. ನನ್ನ ಪುಣ್ಯಕ್ಕೆ, ನಾನು ಗಂಟೆ ಬಾರಿಸಿದ್ದಕ್ಕೆ ಅವರು ನನಗೆ ಬಾರಿಸಲಿಲ್ಲ. ದೇವಸ್ಥಾನದಲ್ಲಿ ಪೂಜೆಯ ವೇಳೆಗೆ ಬಳಸುವ ಕೈಗಂಟೆಯ ಸದ್ದು ಕೊಂಚ ಕ್ಷೀಣ. ದೊಡ್ಡ ಮಂಗಳಾರತಿಯ ಸಮಯದಲ್ಲಿ ಪೂಜಾರಿಗಳು ದೊಡ್ಡ ಕೈಗಂಟೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಇನ್ನು ಮಹಾಮಂಗಳಾರತಿ ಅಂತಾದರೆ ಅದಕ್ಕೆಂದೇ ಮೀಸಲಾದ ಒಂದು ಮೂಲೆಯಲ್ಲಿ ತೂಗಿ ಹಾಕಿರುವ ದೊಡ್ಡ ಗಂಟೆ ಇರುತ್ತದೆ. ಇದು ಕೇವಲ ಮಹಾಮಂಗಳಾರತಿ ಮಾತ್ರ ಬಳಸುತ್ತಾರೆ.

ಈ ಮುಂಚೆ ದೊಡ್ಡ ಗಂಟೆ ಬಾರಿಸಲು ಒಬ್ಬರನ್ನು ನೇಮಿಸುತ್ತಿದ್ದರು. ಅವರು ಒಂದಷ್ಟು ಹೊತ್ತು ಗಂಟೆಯನ್ನು ಮತ್ತೊಂದಷ್ಟು ಸಮಯವನ್ನು ದೊಡ್ಡ ಡೋಲು / ಮದ್ದಳೆ ಬಾರಿಸುವ ಕೆಲಸ ಮಾಡುತ್ತಿದ್ದರು. ಈಗ ಎಲ್ಲವೂ automated. ಒಂದು ಸ್ವಿಚ್ ಒತ್ತಿದರೆ ಸಾಕು ಗಂಟೆಯೂ ತಂತಾನೇ ಬಾರಿಸಿಕೊಳ್ಳುತ್ತದೆ, ಡಮರುವಿನ ಕೋಲು ತಂತಾನೇ ಡೋಲನ್ನು ಬಡಿಯುತ್ತದೆ. Cost Reduction ಎನ್ನಬಹುದು ಅಥವಾ ಮಷೀನ್ ಬಳಕೆಯಿಂದಾಗ consistency... ಸದಾ ಕಾಲ ಒಂದೇ ರೀತಿಯ ನಾದ ಹೊರಬೀಳುತ್ತದೆ. ಮಂಗಳಾರತಿಯೂ ತಂತಾನೇ ಇನ್ನೂ ಆಗಿಲ್ಲ. ಕಾಲ ದೂರವಿಲ್ಲ ಬಿಡಿ.

ಕನ್ನಡ ಭಾಷೆಯಲ್ಲಿ ಸೀಳು ಕಥಾನಕ : ಸೀಳೋದ್ ಸೀಳ್ರಿ ಸೀಳಬಾರದ್ ಸೀಳಬ್ಯಾಡಿಕನ್ನಡ ಭಾಷೆಯಲ್ಲಿ ಸೀಳು ಕಥಾನಕ : ಸೀಳೋದ್ ಸೀಳ್ರಿ ಸೀಳಬಾರದ್ ಸೀಳಬ್ಯಾಡಿ

ಮನೆಗಳಲ್ಲಿ ಬಳಸುವ ಕೈಗಂಟೆಯನ್ನು ನೋಡಿದಾಗ ಒಬ್ಬರ ಮತ ತಿಳಿಯುತ್ತದೆ ಅಂತ ಇತ್ತೀಚೆಗೆ ಅರಿವಿಗೆ ಬಂತು. ಒಂದೆಡೆ ಹೀಗೆ ಪೂಜೆಯಲ್ಲಿ ಭಾಗವಹಿಸಲು ಹೋದಾಗ ಬಂದಿದ್ದ ಒಬ್ಬ ಪುರೋಹಿತರು ಗಂಟೆ ಕೇಳಿದರು. ಮನೆಯಾತ ತಂದು ಕೊಟ್ಟ ಗಂಟೆಯನ್ನು ನೋಡಿ "ಓಹೋ ಕೈ ಹಿಡಿಯಲ್ಲಿ ಆಂಜನೇಯ! ಮಧ್ವ ಮತ" ಅಂದರು. ನನ್ನ ಕಿವಿ ಚುರುಕಾಯ್ತು. ಒಂದು ಕೈಗಂಟೆಯ ಹಿಡಿಯನ್ನು ನೋಡಿ ಮತ ಹೇಳಿದರಲ್ಲಾ ಅನ್ನೋ ಕುತೂಹಲ. ಆಂಜನೇಯ ಇದ್ದರೆ ಮಧ್ವ ಮತ, ಯಾವ ದೈವವೂ ಇಲ್ಲದೇ ಇದ್ದರೆ ಸ್ಮಾರ್ತರು, ನಂದಿ ಇದ್ದರೆ ಶೈವರು, ತಿರುಪತಿಯ ಗಂಟೆಯಲ್ಲಿ ಶಂಖು-ಚಕ್ರ ಹೀಗೆಲ್ಲಾ ವಿಷಯ ಇದೆ ಅನ್ನೋ ಅರಿವು ಆಯ್ತು.

ಇವೆಲ್ಲಾ ಒಂದು ರೀತಿ ಆಯ್ತು. ಈಗ ವ್ಯಾವಹಾರಿಕ ಜಗತ್ತಿಗೆ ಬರೋಣ. ತಮ್ಮ ಹಸುಗಳನ್ನು ಅಲಂಕರಿಸುವ ಕೆಲವರು ಅದರ ಕುತ್ತಿಗೆಗೆ ಪುಟ್ಟ ಗಂಟೆಯನ್ನು ಕಟ್ಟಿರುತ್ತಾರೆ. ಆ ಹಸುವೋ ಒಮ್ಮೆ ತನ್ನ ಕುತ್ತಿಗೆಯನ್ನು ಜೋರಾಗಿ ಆಡಿಸಿದಾಗ ಅದರೊಂದಿದೆ ಹೊರಬರುವ ಟಿಣ್ ಟಿಣ್ ನಾದ ಕೇಳಲೇ ಸೊಗಸು. ತಮ್ಮ ಹಸುಗಳು ಕೊಟ್ಟಿಗೆ ಸೇರಿದವು ಎಂದು ಅರಿಯಲು ಹಸುಗಳಿಗೆ ಕಟ್ಟುತ್ತಾರೋ, ಅಲಂಕಾರಕ್ಕೋ ನನಗಂತೂ ಗೊತ್ತಿಲ್ಲ.

ಅಸಂಖ್ಯಾತ ಓದುಗರ ಆಗ್ರಹದ ಮೇರೆಗೆ, ಬೆಂಗಳೂರು ಭಾಗ 2ಅಸಂಖ್ಯಾತ ಓದುಗರ ಆಗ್ರಹದ ಮೇರೆಗೆ, ಬೆಂಗಳೂರು ಭಾಗ 2

Why do we ring bell, what is the significance?

ಒಂದು ಕಥೆಯ ಪ್ರಕಾರ, ಬೆಕ್ಕು ಬರುವುದನ್ನು ಕಂಡು ಹಿಡಿಯುವುದು ಹೇಗೆ ಎಂದಾಗ ಒಂದು ಇಲಿ "ಬೆಕ್ಕಿಗೆ ಗಂಟೆ ಕಟ್ಟಿದರೆ" ನಮಗೆ ಅದರ ಬರುವಿಕೆ ತಿಳಿಯುತ್ತೆ ಎಂದಾಗ ಎಲ್ಲ ಇಲಿಗಳಿಗೂ ಮಹಾ ಸಂತಸವಾಯ್ತು. ಆದರೆ ಆ ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಎದ್ದಾಗ ಮಾತ್ರ ಯಾರೊಬ್ಬರೂ ಮುಂದೆ ಮುಂದೆ ಬರಲಿಲ್ಲವಂತೆ! ಅಂದಿನಿಂದ ಪ್ರಚಲಿತವಾದದ್ದು "ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು"?

ಗಾಡಿಗಳಲ್ಲಿನ ಗಂಟೆಯ ಬಗ್ಗೆ ಗೊತ್ತಿರಬೇಕು ನಿಮಗೆ . . . fire engine ತಲೆಯ ಮೇಲೆ ಗಂಟೆ ಇರುತ್ತಿತ್ತು. ಕಸದ ಗಾಡಿ ಬಂದಿದೆ ಬಂದು ನಿಮ್ಮ ಕಸ ತಂದಿಡಿ ಎಂಬ ಎಚ್ಚರಿಕೆಯ ಗಂಟೆ ಹೊಡೆಯುವವರು, ಕುಲ್ಫಿ / ಐಸ್ ಕ್ರೀಮ್ ಗಾಡಿಯ ಗಂಟೆಗಳು ಇವೆಲ್ಲಾ ನಾವು ನೋಡಿಯೇ ಇರ್ತೀವಿ. ಜೈಲಿನಲ್ಲಿ ಇನ್ನೂ 'ಜಾಗ್ತೇ ರಹೋ' ಅಂತಾರೋ ಅಥವಾ ಅಲ್ಲಿಯೂ ಗಂಟೆ ಬಾರಿಸುತ್ತಾರೋ ಗೊತ್ತಿಲ್ಲ. ದಿನನಿತ್ಯದ ಜೀವನದಲ್ಲಿ ಮತ್ತಷ್ಟು ಸನ್ನಿವೇಶಗಳಲ್ಲಿ ಕಂಡು ಬರುವುದು ಎಲ್ಲಿ ಎಂದರೆ ಸೈಕಲ್ ಬೆಲ್, ಕಾಲಿಂಗ್ ಬೆಲ್ ಹೀಗೆ. ಕ್ರಿಸ್ಮಸ್ ಸಮಯದಲ್ಲಿ ಅಂಗಡಿಗಳ ಹೊರಗೆ 'salvation' ಕಡೆಯವರೊಬ್ಬರು ಸಾಂತಾ'ನ ವೇಷ ಧರಿಸಿಕೊಂಡು, ಗಂಟೆಯನ್ನು ಬಾರಿಸಿ ಜನರ ಗಮನ ಸೆಳೆದು, donation ಕೇಳುತ್ತಾರೆ.

ಇನ್ನೊಬ್ಬರ ಜೀವನದಲ್ಲಿ ಏನು ನಡೆಯುತ್ತಿದೆ ಊಹಿಸಿದ್ದೀರಾ?ಇನ್ನೊಬ್ಬರ ಜೀವನದಲ್ಲಿ ಏನು ನಡೆಯುತ್ತಿದೆ ಊಹಿಸಿದ್ದೀರಾ?

Taco bell ಎಂಬ ಅಮೆರಿಕದ fast food restaurant ಬಗ್ಗೆ ಗೊತ್ತೇ ಇದೆ. ಇದರ ಹೆಸರಿನಲ್ಲಿ bell ಏನು ಮಾಡುತ್ತಿದೆ? ಇದರ ಹಿಂದಿನ ರಹಸ್ಯ ಏನು ಅಂತೆಲ್ಲಾ ತಲೆ ಕೆಡಿಸಿಕೊಳ್ಳಬೇಡಿ. tacobell ಆರಂಭಿಸಿದಾತನ ಹೆಸರು ಗ್ಲೆನ್ ಬೆಲ್ ಅಂತ. ಆತನ lastname ಅಂಗಡಿಗೂ ಇಡಲಾಗಿದೆ. ಅಂದ ಹಾಗೆ "ಗ್ರಹಾಂ ಬೆಲ್' ಯಾರು ಎಂದು ಹೇಳಬೇಕಿಲ್ಲ ಎಂದುಕೊಳ್ಳುತ್ತೇನೆ.

ಒಂದು ಕಾಲಕ್ಕೆ ಬಸ್'ಗಳಲ್ಲಿ ಗಂಟೆ ಇರುತ್ತಿತ್ತು. ಅದನ್ನು ಬಾರಿಸುವ ಹಕ್ಕು conductorಗೆ ಮಾತ್ರ ಅಂತಿದ್ದರೂ ತಮ್ಮ ಸ್ಟಾಪ್ ಬಂತು ಅಂತ ಪ್ರಯಾಣಿಕರು ಬಾರಿಸುವುದು, ಕಂಡಕ್ಟರ್ ಅವರನ್ನು ಬೈಯ್ಯೋದು, ಅವರಿಬ್ಬರ ನಡುವೆ ಜಗಳ ಇತ್ಯಾದಿಗಳನ್ನು ನೋಡಿದ್ದೆ.

ಸಿನಿಮಾಗಳಲ್ಲಿ ಈ ಗಂಟೆಯನ್ನು ಹಲವಾರು ರೀತಿ ಬಳಸಿಕೊಂಡಿದ್ದಾರೆ. ನಾಯಕಿಯು ಭೀಕರವಾಗಿ ಅಳುತ್ತಾ / ರೋಷದಿಂದ ಹಾಡುತ್ತಾ ದೈವವನ್ನು ಒಲಿಸಿಕೊಂಡಾಗ ದೇವಸ್ಥಾನದ ಗಂಟೆಗಳು ತಂತಾನೇ ಬಾರಿಸಿಕೊಳ್ಳುವ ದೃಶ್ಯ ಹಲವಾರು ಸಿನಿಮಾದಲ್ಲಿ ನೋಡಿದ್ದೇವೆ. ದಿನದಲ್ಲಿ ಹಲವಾರು ಬಾರಿ ದೇವಸ್ಥಾನದ ಗಂಟೆ ಬಾರಿಸಿದರೂ ನಾಯಕ ಅಲ್ಲಿದ್ದಾಗ ನಾಯಕಿ ಬಂದು ಗಂಟೆ ಬಾರಿಸಿದಾಗ ವಿಶಿಷ್ಟ ನಾದ ಕೇಳಿಬರುತ್ತದೆ. ದೊಡ್ಡ ಗಂಟೆಯನ್ನು ಕಂಡಾಗಲೆಲ್ಲಾ ನನಗೆ 'ಸಾಹಸಸಿಂಹ' ಸಿನಿಮಾ ನೆನಪಾಗುತ್ತೆ. ವಿಲನ್'ಗಳು ತಮಗೆ ಆಗದವರನ್ನು ಒಂದೆಡೆ ಕಟ್ಟಿ ಹಾಕಿ ಅವರ ಮೇಲೆ ಒಂದು ಗಂಟೆಯನ್ನು ಮುಚ್ಚಿ ಹೊರಗಿನಿಂದ ಬಡಿಯುತ್ತಾರೆ. ಆಮೇಲೇನಾಗುತ್ತೆ ಅಂತ ಕೇಳದಿರಿ.

ಧರ್ಮವು ಯಾವುದೇ ಆದರೂ ಈ ಗಂಟೆಯ ಒಂದು ಸಾಮಾನ್ಯ ಮಹತ್ವ ಎಂದರೆ 'ದುಷ್ಟ ಶಕ್ತಿ'ಗಳನ್ನೂ ದೂರವಿರಿಸುವುದು ಅಂತ. ನಮ್ಮಲ್ಲಿ ಮಂಗಳಾರತಿಗೆ ಮುನ್ನ ಗಂಟೆ ಬಾರಿಸುವ ಒಂದು ಉದ್ದೇಶ ಏನಪ್ಪಾ ಎಂದರೆ, ವಾತಾವರಣದಲ್ಲಿರುವ ಕಾಣುವ/ಕಾಣದ ಕ್ರಿಮಿಗಳನ್ನು ದೂರ ಓಡಿಸಲು. ಮಂಗಳಾರತಿಯ ಬೆಂಕಿಯ ಬೆಳಕಿನಿಂದ ಅವು ಸುಟ್ಟು ಸಾಯಬಾರದು ಅಂತ.

ನಮ್ಮೆಲ್ಲರ ಜೀವನದಲ್ಲಿ ಕಂಡಿರುವ 'ಗಂಟೆ' ಎಂದರೆ ಶಾಲೆಯ ಬೆಲ್! ಸ್ಕೂಲ್ ಬೆಲ್'ನ ಚಮತ್ಕಾರವೇ ಹಾಗೆ ನೋಡಿ. ಆರಂಭದ ಬೆಲ್'ಗೂ ದಿನದ ಕೊನೆಯ ಬೆಲ್'ಗೂ ನಾದದಲ್ಲಿ ಏನೇನೂ ವ್ಯತ್ಯಾಸವಿಲ್ಲ. ಆದರೆ ನಮ್ಮ ಹೃದಯಕ್ಕೆ ತಟ್ಟುವ ಆ ನಾದದ ಅಲೆ ಮಾತ್ರ ಏಕ್ದಂ opposite!ದಿನದ ಆರಂಭದ ಬೆಲ್ ಒಂದು ರೀತಿ ರಣಕಹಳೆಯಂತೆ ಕೇಳಿಸುತ್ತದೆ. ಅದರಲ್ಲೂ ರಣಕಹಳೆ ಮೂಡಿದ ಮೇಲೂ ತರಗತಿಯಲ್ಲಿ ಇರದೇ ಲೇಟ್ ಆಗಿದ್ದರಂತೂ ಆ ಕಹಳೆಯ ಜೊತೆ ಎದೆಯಲ್ಲಿ ನಗಾರಿಯೂ ಸೇರಿಕೊಳ್ಳುತ್ತೆ. ಆದರೆ ಅದೇ ನಾದ ದಿನದ ಕೊನೆಯಲ್ಲಿ ಎಂಥಾ ಆನಂದ ಅಲೆಗಳನ್ನು ಹಬ್ಬುತ್ತೆ ಆಲ್ವಾ?

Why do we ring bell, what is the significance?

ಇಂಥದ್ದೇ "opening bell" ಸ್ಟಾಕ್ ಮಾರುಕಟ್ಟೆಯ ವಹಿವಾಟಿನಲ್ಲೂ ಕಾಣಬಹುದು. ವಹಿವಾಟಿನ ಆರಂಭದ ಮುನ್ನ ಮತ್ತು ದಿನದ ಕೊನೆಗೆ ಗಂಟೆ ಬಾರಿಸಲಾಗುತ್ತದೆ. ಗಂಟೆ ಬಾರಿಸುವ ಮುನ್ನ ಮತ್ತು ನಂತರ ಯಾವುದೇ ವಹಿವಾಟುಗಳೂ ನಡೆಯುವ ಹಾಗಿಲ್ಲ. ಇದೊಂದು ರೀತಿ ಯುದ್ಧದಾರಂಭದ ಮುನ್ನ ಮತ್ತು ದಿನದ ಕೊನೆಗೆ ಶಂಖ ನಾದ ಮೊಳಗಿದಂತೆ. ಎರಡೂ ಕಡೆಯೂ ಮತ್ತೊಂದು ಸಾಮಾನ್ಯ ಅಂಶ ಎಂದರೆ ಬಾರಿಸುವವರು / ಊದುವವರಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ.

ಎಲ್ಲಕ್ಕೂ / ಎಲ್ಲರಿಗೂ ನಾಲಿಗೆ ಇರುತ್ತೆ, ಆದರೆ ಬಾಯಿ ದೊಡ್ಡದಾಗಿದ್ದರೆ ಮಾತ್ರ ಜನರ ಕಿವಿಗೆ ತಲುಪೋದು! ವಿಷಯ ಅರಹುವಾಗ, ನಾಲ್ಕು ಮಂದಿಗೆ ತಿಳಿಸುವಂತಾಗುವಾಗ, ಬಾಯಿ ದೊಡ್ಡದಾಗಿರಲಿ... ದನಿ ಎತ್ತಿ! ನಿಮ್ಮ ದನಿ ಕೇಳಿಸುವಂತಾಗಲಿ ಗಂಟೆಯೇ ಆಗಿರಲಿ, ನೀವೇ ಆಗಿರಲಿ make sure the voice is heard... ಏನಂತೀರಿ?

English summary
Why do we ring bell, what is the significance? Bells are used for several occasion and for several purposes. But, ultimately the bell sympolizes alertness, writes Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X