ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಿಯಿಲ್ಲದ ಪರಾವಲಂಬಿ ಜೀವನ ನಿಮ್ಮದಾಗದಿರಲಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಅವಲಂಬನೆ ಎಂದರೆ ಆಂಗ್ಲದಲ್ಲಿ dependency. ಅವಲಂಬನೆ ಎಂದ ಮಾತ್ರಕ್ಕೆ ನಮ್ಮ ಕೆಲಸಕ್ಕೆ ಮತೊಬ್ಬರ ಕೈಕಾಯುವುದು ಅಂತಲೇ ಆಗಬೇಕು ಅಂತೇನಿಲ್ಲ. ಸ್ವಾವಲಂಬನೆ ಎನ್ನೋದು ಮತ್ತೊಬ್ಬರಿಂದ ಯಾವ ರೀತಿಯ ಸಹಾಯವನ್ನೂ ಅಪೇಕ್ಷಿಸದೇ ನಮ್ಮಲ್ಲಿರೋ ಸಂಪನ್ಮೂಲ ಬಳಸಿಕೊಂಡು ಜೀವನ ಸಾಗಿಸೋದು. ಕೇಳೋದಕ್ಕೆ ಕೊಂಚ complicated ಆಗಿದೆ ಎನಿಸಿದರೂ ಕೊಂಚ ಆಳಕ್ಕೆ ಇಳಿದು ನಮ್ಮದೇ ಅನುಭವಗಳನ್ನು ತಾಳೆ ಹಾಕಿ ನೋಡಿದಾಗ ತೀರಾ ಕ್ಲಿಷ್ಟವಲ್ಲ ಎನ್ನೋದು ಅರಿವಾಗುತ್ತೆ.

ಆಟ ಆಡುವಾಗ ಕೈಗೆ ಪೆಟ್ಟಾಗಿ ಮೂಳೆ ಮುರಿದು plaster ಏರಿಸಿಕೊಂಡ ಆ ಹೊತ್ತು ನಿತ್ಯಕರ್ಮಗಳಿಗೂ ಮತ್ತೊಬ್ಬರನ್ನು ಆಶ್ರಯಿಸಬೇಕಾದಾಗ ಮನಸ್ಸಿಗೆ ಅರಿವಾಗೋದೇ ನಾವು ಮತ್ತೊಬ್ಬರ ಕೈಕೂಸು ಅಂತ. ಓಡುವಾಗ ಬಿದ್ದೋ ಅಥವಾ ಆಕ್ಸಿಡೆಂಟ್ ಆಗಿ ಕಾಲು ಮುರಿದು ಶಯನೋತ್ಸವೇ ನಿತ್ಯೋತ್ಸವ ಆದಾಗ ಈ ಅವಲಂಬನೆ ಅರ್ಥವಾಗುತ್ತದೆ.

ಈ ಅವಲಂಬನೆಯ ವಿಷಯವನ್ನು ಹಿರಿಯರ ದೃಷ್ಟಿಯಲ್ಲಿ ನೋಡಿದಾಗ ಮತ್ತೊಂದು ಜಗತ್ತೇ ತೆರೆದುಕೊಳ್ಳುತ್ತದೆ. ಮಕ್ಕಳ ಮೇಲೆ ಅವಲಂಬಿತರಾದ ಹಿರಿಯರು ಒಂದಷ್ಟು ದಿನ ಈ ಮಗನ ಮನೆಯಲ್ಲಿ, ಇನ್ನೊಂದಷ್ಟು ದಿನ ಆ ಮಗನ ಮನೆಯಲ್ಲಿ ಇರಬೇಕು ಎಂಬ ವಿಷಯವೇ ಇರಬಹುದು, ಸುಖವೋ ದು:ಖವೋ ಮತ್ತೊಬ್ಬರ ಬಾಯಿಗೆ ಬೀಳಬಾರದು ಎಂಬ ಸಮಾಜಭೀತಿಯಿಂದ ವಿಧಿಯಿಲ್ಲದ ಅವಲಂಬನೆ ಅನುಭವಿಸಿದವರಿಗೆ ಗೊತ್ತು.

ರಜದ ಮಜದ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳುರಜದ ಮಜದ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳು

ಕಷ್ಟವೋ ನಷ್ಟವೋ ತಮಗೆ ಬರುವ pension ಹಣದಿಂದಲೇ ದೈನಂದಿನ ಜೀವನಕ್ಕೆ ಯಾರ ಕೈಗೂ ಬೀಳದೇ ತಮ್ಮ ಜೀವನ ಮಾಡಿಕೊಳ್ಳುವ ಸ್ವಾಭಿಮಾನಿ ಸ್ವಾವಲಂಬಿಗಳು ಅನೇಕರನ್ನು ನಾವೆಲ್ಲಾ ನೋಡಿಯೇ ಇದ್ದೇವೆ.

What is dependency? How dependent are we on others?

ನಮ್ಮ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್'ನಲ್ಲೇ ಒಬ್ಬರು ಮಹಿಳೆಯನ್ನು ನಾನು ದಿನನಿತ್ಯದಲ್ಲಿ ಕಂಡಿದ್ದೇನೆ. ಲಿಂಡಾ ಎಂಬ ಈಕೆಯ ವಯಸ್ಸು ಕನಿಷ್ಠ ಎಂದರೂ ಎಪ್ಪತ್ತು. ವೀಲ್-ಚೇರ್ ಇಲ್ಲದೇ ಒಂದಡಿ ಇಡಲಾರರು. ಇವರ ಬಳಿ ಬಂದು ದೊಡ್ಡ ವ್ಯಾನ್ ಒಂದಿತ್ತು. Automated ವೀಲ್ ಚೇರ್ ಅನ್ನು ಓಡಿಸಿಕೊಂಡೇ ಗಾಡಿಯ ಒಳಕ್ಕೂ ಸಾಗಿ ಡ್ರೈವರ್ ಸೀಟ್'ನಲ್ಲಿ ಕೂರುತ್ತಿದ್ದರು. ಕಾಲಿಗೆ ತ್ರಾಸವಾಗದಂಥಾ driving system ಹೊಂದಿದ್ದ ವ್ಯಾನ್'ನಲ್ಲಿ ಬೇಕೆಂದಲ್ಲಿ ಹೋಗಿಬರುತ್ತಿದ್ದರು. ಮನೆಯಲ್ಲಿ ಅವರನ್ನು ಬಿಟ್ಟರೆ ಮತ್ತೊಬ್ಬರು ಇರುತ್ತಿರಲಿಲ್ಲ. ಆ ವಯಸ್ಸಿನಲ್ಲೂ ಸ್ವಾವಲಂಬಿತನ ತೋರುತ್ತಿದ್ದ ಆಕೆ ನಿಜಕ್ಕೂ ಅಭಿನಂದನಾರ್ಹರು. ಇದು ಒಂದು ಉದಾಹರಣೆ ಅಷ್ಟೇ. ನಮ್ಮಲ್ಲೂ ಇಂಥಾ ಉದಾಹರಣೆಗಳು ಹೇರಳವಾಗಿ ಕಾಣುತ್ತೇವೆ.

ಪರಾವಲಂಬಿತನದಲ್ಲೂ ಎರಡು ವಿಧ ಇದೆ ಎನ್ನಬಹುದು. ಅನಿವಾರ್ಯತೆಯಿಂದಾಗಿ ಮತ್ತೊಬ್ಬರನ್ನು ಹಲವು ಕೆಲಸಗಳಿಗೆ ಆಶ್ರಯಿಸುವವರು ಒಂದು ವಿಧವಾದರೆ ಮತ್ತೊಂದು ವಿಧವನ್ನು parasites ಎನ್ನಬಹುದು. Parasite ಕೀಟಾಣುಗಳು ಯಾರಲ್ಲಿ ವಾಸವಾಗಿರುತ್ತೋ ಅವರನ್ನು ಹಿಂಸೆ ಮಾಡುತ್ತದೆಯೇ ವಿನಃ ಕೊಲ್ಲೋದಿಲ್ಲ. ಹೊಟ್ಟೆಗೆ ಹಾಕೋ ಧಣಿಯನ್ನು ಅವು ಕೊಲ್ಲೋದಿಲ್ಲ. ಇದಕ್ಕಿಂತಲೂ ಹೀನ ಅಲ್ಲವೇ ಮಾನವ!

ಬೂದಿ ನಗಣ್ಯವಲ್ಲ, ಬದುಕಿನಲ್ಲಿ ಬೂದಿಗೂ ವಿಶೇಷ ಸ್ಥಾನವಿದೆ!ಬೂದಿ ನಗಣ್ಯವಲ್ಲ, ಬದುಕಿನಲ್ಲಿ ಬೂದಿಗೂ ವಿಶೇಷ ಸ್ಥಾನವಿದೆ!

ಅವಲಂಬನೆ ಎಂದರೆ ಆಂಗ್ಲದಲ್ಲಿ dependency ಅಂತ ಆಗಲೇ ಹೇಳಿದೆ. ಯಾವುದೇ ಒಂದು ದೇಶಕ್ಕೆ ಬೇರೆ ದೇಶದಿಂದ ಬರುವವರು ವೀಸಾ ಹೊತ್ತು ಬರಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮತ್ತೊಂದು ದೇಶಕ್ಕೆ ಬರುವವರು ಕೆಲಸಕ್ಕೆ ಎಂದು ಬಂದವರೂ ಆಗಿರಬಹುದು ಅಥವಾ ಅವರನ್ನು ಅವಲಂಬಿಸಿದವರೂ ಆಗಿರಬಹುದು. ಈ ಅವಲಂಬನೆ ಅನ್ನೋದರ ಬಗ್ಗೆ ಒಂದು ಮಾತು. ಗಂಡನಾದವನು ಕೆಲಸಕ್ಕೆ ಬರುವಾಗ ಹೆಂಡತಿಯು ಡೆಪೆಂಡೆಂಟ್ ವೀಸಾ ಮೇಲೆ ಬರುವಂತೆ, ಹೆಂಡತಿಯು ಕೆಲಸಕ್ಕೆ ಬಂದಾಗ ಗಂಡನೂ ಡೆಪೆಂಡೆಂಟ್ ವೀಸಾ ಮೇಲೆ ಬರಬಹುದು. ಅಮೇರಿಕಾದ ವಿಷಯವನ್ನೇ ತೆಗೆದುಕೊಂಡರೆ 2015'ರವರೆಗೆ ಡೆಪೆಂಡಂಟ್ ವೀಸಾ ಮೇಲೆ ಇರುವವರು ಕೆಲಸ ಮಾಡುವುದಕ್ಕೆ ಅರ್ಹರಾಗುತ್ತಿರಲಿಲ್ಲ. ಇರಲಿ, ಸದ್ಯಕ್ಕೆ ಈ ವಿಷಯ ಪಕ್ಕಕ್ಕೆ ಇಡೋಣ.

What is dependency? How dependent are we on others?

ಒಂದು ಸಾಮಾನ್ಯ ನೋಟದ ರೀತಿಯಾಗಿ ನೋಡಿದಾಗ ವ್ಯಕ್ತಿ ಹದಿನಾಲ್ಕು ವಯಸ್ಸಿನವರೆಗೆ ಕೆಲಸ ಮಾಡಲು ಅರ್ಹನಾಗುವುದಿಲ್ಲ. ಅದರಂತೆಯೇ 65'ರ ನಂತರ ನಿವೃತ್ತಿ ಹೊಂದುತ್ತಾರೆ ಎಂಬುದು. ಎಲ್ಲಕ್ಕೂ exceptions ಇರುತ್ತೆ ಅನ್ನೋದು ಬೇರೆ ವಿಷಯ. ಹದಿನಾಲ್ಕರ ನಂತರ ಮತ್ತು 65'ರ ಒಳಗಿನ ವಯಸ್ಸಿನ ಮಂದಿ ಕೆಲಸ ಮಾಡಲು ಅರ್ಹರಾಗಿರುತ್ತಾರೆ ಅಂತಾಯ್ತು, ಅಲ್ಲವೇ? ಈಗ ಇಲ್ಲಿನ ಎರಡು ಗುಂಪು ಆಯ್ತು. ಒಂದು ಕೆಲಸ ಮಾಡಲು ಅರ್ಹರಿರುವವರು ಇನ್ನೊಂದು ಗುಂಪು ಅರ್ಹರಲ್ಲದವರು. ಒಂದು ದೇಶದಲ್ಲಿ ಇರುವ ಜನಸಂಖ್ಯೆಯನ್ನು ಈ ಎರಡು ಗುಂಪುಗಳಾಗಿ ವಿಂಗಡಿಸಿ ಅನುಪಾತ (ratio) ಕಂಡುಹಿಡಿದು, ಒಂದು ದೇಶದ ಸುಸ್ಥಿತಿಯನ್ನು ಅಳೆಯಲು ಬಳಸುತ್ತಾರೆ.

ಇದನ್ನು dependency ratio ಎನ್ನುತ್ತಾರೆ. ಚಿಕ್ಕ ಉದಾಹರಣೆ ತೆಗೆದುಕೊಳ್ಳಿ. ನಿಯತ್ತಾಗಿ ದುಡಿಯುವ ಕೈ ಒಂದು, ತಿನ್ನುವ ಕೈಗಳು ಹತ್ತು ಎಂದಿದ್ದಾಗ ಆ ಒಂದು ಮನೆಯ ಸ್ಥಿತಿ ಹೇಗಿರುತ್ತದೆ ಅಂತ. ಇದೇ ಈ ratio. ಅನುಪಾತವು ಕಡಿಮೆ ಇದ್ದರೆ, ಅವಲಂಬಿತರನ್ನು ಸಾಕುವ ಯೋಗ್ಯತೆ ಆ ದೇಶಕ್ಕೆ ಇದೆ ಅಂತಾಯ್ತು. ಒಂದು ಪೆನ್ಷನ್ ಆಗಲಿ, ಅಥವಾ ವೈದ್ಯಕೀಯ ಸೌಲಭ್ಯವೇ ಆಗಲಿ ಒದಗಿಸಲು ಶಕ್ಯವಾಗಿದೆ ಆ ದೇಶ ಅಂತ ಅರ್ಥ. ಅನುಪಾತವು ಹೆಚ್ಚಿದ್ದರೆ ಆ ದೇಶವು ದುಸ್ಥಿತಿಯಲ್ಲಿದೆ ಅಂತರ್ಥ. ಸೌಲಭ್ಯ ಒದಗಿಸಲು ಅಶಕ್ಯವಾಗಿರುತ್ತದೆ ಅಂತಾಗುತ್ತದೆ. ಯುದ್ಧಾನಂತರದ ಅನುಪಾತವನ್ನು ನೋಡಿದಾಗ ಈ ಭೀಕರತೆಯ ಅರಿವಾಗುತ್ತೆ.

ಉತ್ತರಗಳೇ ಇಲ್ಲದ ಪ್ರಶ್ನೆಗಳು, ಪ್ರಶ್ನೆಗಳಿಗೆ ನಿಲುಕದ ಉತ್ತರಗಳು! ಉತ್ತರಗಳೇ ಇಲ್ಲದ ಪ್ರಶ್ನೆಗಳು, ಪ್ರಶ್ನೆಗಳಿಗೆ ನಿಲುಕದ ಉತ್ತರಗಳು!

ಯಾರದ್ದೇ ಅಥವಾ ಯಾವುದೇ ರೀತಿಯ dependancy ಇರದ ಅಥವಾ ಜವಾಬ್ದಾರಿ ಹೊರದೇ ಉಂಡಾಡಿಗುಂಡನಂತೆ, ಹೋರಿಯಂತೆ ಅಡ್ಡಾಡಿಕೊಂಡಿರುವವನನ್ನು ಗುಂಡ್ರುಗೋವಿ ಅಂತಲೂ ಅಂತಾರೆ. ಈ ವಿಷಯ ಈ ಮುಂಚೆಯೇ ನೋಡಿದ್ದೆವು. ಆದರೆ ಇಂತಹ ಸನ್ನಿವೇಶ ಮನೆಯಲ್ಲಿ ಇದ್ದಾಗ ದೊಡ್ಡವರು ಆ ಸಮಸ್ಯೆಯನ್ನು ಬಗೆಹರಿಸುವ ವಿಷಯವೇ ನನಗೆ ಇಂದೂ ಸೋಜಿಗ "ಒಂದು ಮದುವೆ ಮಾಡಿಬಿಟ್ಟರೆ ತಾನಾಗೇ ಸರಿಹೋಗ್ತಾನೇ"!ಇದಕ್ಕೇನಾದರೂ ಅರ್ಥವಿದ್ದರೆ ಅದರ ಅರ್ಥವೇನು? ಜವಾಬ್ದಾರಿ ಇಲ್ಲದವನಿಗೆ ಜವಾಬ್ದಾರಿ ಹೊರೆಸಿದರೆ ದಾರಿಗೆ ಬರುತ್ತಾನೆ ಅಂತಲೇ? ಅರ್ಥಾತ್ independent ಆಗಿ ಅಡ್ಡಾಡಿಕೊಂಡಿರುವವನಿಗೆ dependany ಹೇರುವುದೋ? ತಮ್ಮ ಮೇಲೆ ಒಬ್ಬರು ಅವಲಂಬಿತರಾಗಿದ್ದಾರೆ ಎಂದಾಗ ಸರಿದಾರಿಗೆ ಬಂದಿರೋ ಉದಾಹರಣೆ ನಿಮ್ಮಲ್ಲಿದೆಯೇ? ಅಥವಾ ನನ್ನ ಪಾಡಿಗೆ ಇದ್ದ ಜೀವನಕ್ಕೆ ಇವಳ್ಯಾರು ಬಂದು ಸೇರಿದ್ದು ಎಂಬ ಅಸಡ್ಡೆ ಮೂಡಿ ಮುಂಚಿಗಿಂತ ಅಧ್ವಾನ ಆದ ಉದಾಹರಣೆ ನಿಮ್ಮಲ್ಲಿದೆಯೇ?

What is dependency? How dependent are we on others?

ರಾಜಕೀಯ ರಂಗದಲ್ಲೂ ಇಂಥದ್ದೊಂದು ಗುಂಪು ಇದೆ. ಯಾವುದೇ ಪಕ್ಷವನ್ನೂ ಓಲೈಸದ, ಯಾವುದೇ ಅಭ್ಯರ್ಥಿಗೂ ಜೈ ಅನ್ನದೆ, ತಮ್ಮದೇ ಪಕ್ಷವನ್ನೂ ಹೊಂದಿರದೇ ತಾವೇ ತಾವಾಗಿ ಇರುವ ಅಭ್ಯರ್ಥಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿರುತ್ತದೆ. ಇಂಥವರೇ independent candidateಗಳು. ಸಾಮಾನ್ಯವಾಗಿ ಇವುರುಗಳಿಗೆ ಗೆಲ್ಲುವ ಅವಕಾಶ ಕಡಿಮೆ ಇರುತ್ತದೆ. ಇಂಥಾ ಒಬ್ಬ independent ಅಭ್ಯರ್ಥಿ ಎರಡು ಬಾರಿ ಅಮೇರಿಕಾದ ಅಧ್ಯಕ್ಷ ಸ್ಥಾನದಲ್ಲಿದ್ದರು ಎಂದರೆ ನಿಮಗೆ ಅಚ್ಚರಿಯಾಗಬಹುದು. ಅಮೇರಿಕಾದ ಮೊದಲ ಅಧ್ಯಕ್ಷರಾದ ಜಾರ್ಜ್ ವಾಷಿಂಗ್ಟನ್ ಎರಡೂ ಘನ ಪಕ್ಷಗಳಿಗೆ ಸೇರಿದವರಲ್ಲ. ಆಗಿನ್ನೂ ಆ ಪಾರ್ಟಿಗಳು ಆರಂಭವಾಗಿರಲಿಲ್ಲ.

ಅನಾದಿಕಾಲದಿಂದಲೂ ನಮ್ಮಲ್ಲಿ ಕೆಲವು ಮೂಲಭೂತ ಸಮಸ್ಯೆಗಳಿವೆ. ಮೊದಲಿಗೆ dignity. ನನ್ ಹೆಂಡ್ತಿ ದುಡಿದು ತಂದಿದ್ದು ನಾನೇನ್ ತಿನ್ನೋದು ಅನ್ನೋ ಅಹಂ ಬಹಳ ಕಾಲ ಇತ್ತು. ಮನೆಯ ಪರಿಸ್ಥಿತಿಗಳು ಮತ್ತು ಅನಾನುಕೂಲಗಳು ಕಣ್ಣಿಗೆ ಅಂಟಿದ್ದ ಪೊರೆಯನ್ನು ಕಳಚುತ್ತಾ ಸಾಗಿದಂತೆ ಈಗ ಅರಿವು ಮೂಡಿದೆ ಎನ್ನಬಹುದು. ನಂತರದ್ದೇ dignity of labor. 'ನನ್ನ ಓದಿಗೆ, ನನ್ನ ಅಂತಸ್ತಿಗೆ ಈ ಕೆಲಸವೇ' ಎಂಬ ಹುಂಬತನ ಎಷ್ಟೋ ಮನಗಳನ್ನು ಸುಟ್ಟಿವೆ. ಮತ್ತೊಂದು ಎಂದರೆ retirement. ಕೆಲವರು retire ಆಯ್ತು ಎಂದ ಕೂಡಲೇ ಶಸ್ತ್ರಾಸ್ತ್ರ ಕೆಳಗಿಟ್ಟು ಮಕ್ಕಳನ್ನು ಅವಲಂಬಿಸುವುದು ಎಂದೇ ಅರ್ಥೈಸಿಕೊಂಡಿದ್ದಾರೆ. ಇದನ್ನೇ ಪರಾವಲಂಬನೆ ಅನ್ನೋದು. ಕೆಲವೊಮ್ಮೆ ಪರಾವಲಂಬನೆ ಅಷ್ಟೇ ಆಗಿರದೆ ತಾವು ಹಿರಿಯರು ಎಂಬ ಮನೋಭಾವವೂ ಕೂಡಿ, ನಾವೆಂದಂತೆಯೇ ಆಗಬೇಕು ಎಂಬ ಅಧಿಕಾರ ತೋರಿ ಕೊನೆಗೆ ವೃದ್ದಾಶ್ರಮದಲ್ಲಿ ಕೊನೆಗೊಳ್ಳೋದು. ರಟ್ಟೆಯಲ್ಲಿ ಕಸುವಿದ್ದರೆ ಕೆಲಸ ಮಾಡಿಕೊಂಡು ಇನ್ನೊಬ್ಬರಿಗೆ ಹೊರೆಯಾದಂತೆ ಇರಬಹುದು. ಬೇರೆ ದಾರಿಯಿಲ್ಲದೆ ಅವಲಂಬಿಸಲೇಬೇಕು ಅಂತಾದರೆ ಹೊಂದಾಣಿಕೆ ಇರಲಿ.

ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಕಾಳಜಿ ನಮ್ಮದಾಗಲಿ ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಕಾಳಜಿ ನಮ್ಮದಾಗಲಿ

ಈ ಜಗತ್ತಿನಲ್ಲಿ ಯಾರೊಬ್ಬರೂ ಸ್ವತಂತ್ರರಲ್ಲ, ಒಬ್ಬರಿಗೊಬ್ಬರು ಆಸರೆಯಾಗಿದ್ದರೇನು ಚೆನ್ನ ಎಂಬುವವರು inter dependencyಗೆ ಒತ್ತುಕೊಡುವವರು. ನೀನನಗಿದ್ದರೆ ನಾ ನಿನಗೆ. ಕೆಲವೆಡೆ ನಾ ನೋಡಿರುವಂತೆ ನನ್ನ ಮಗನದ್ದು ದೊಡ್ಡ ಸಂಬಳದ ಕೆಲಸವಲ್ಲ, ನಿಮ್ಮ ಮಗಳೂ ದುಡಿಯೋದ್ರಿಂದ ಇಬ್ಬರೂ ಒಟ್ಟು ಖರ್ಚು ನಡೆದು ಹೋಗುತ್ತೆ ಅನ್ನೋದು ಒಂದು. ಇಂದು ಈ ಧೋರಣೆ ಕೊಂಚ ಭಿನ್ನ. ಇಂದಿನ ದಿನದಲ್ಲಿ ಕೋ-ಡೆಪೆಂಡೆನ್ಸಿ ಕಡಿಮೆಯಾಗುತ್ತಿದೆ. ನಾನು ನನ್ನ ಸುಖ ಪಕ್ಕಕ್ಕೆ ಇಟ್ಟಾದರೂ ನನ್ನನ್ನು ನಂಬಿದವರನ್ನು ನೋಡಿಕೊಳ್ಳುತ್ತೇನೆ ಎಂಬುದು co-dependency.

Co-dependency ಯಲ್ಲಿರುವಂತಹ ತ್ಯಾಗದ ಜೀವನ ಅಲ್ಲದಿದ್ದರೂ, independent ಆಗಿ ಇರಲು ಸಾಧ್ಯವಾಗದೆ ಇರದಿದ್ದಲ್ಲಿ ಸಮಬಾಳ್ವೆಯ ಜೀವನವಾದ inter dependencyಯಲ್ಲಿ ಸುಖವಿದೆ ಎನಿಸಿದರೆ ಹಾಗೆಯೇ ಬಾಳಿ ಆದರೆ ವಿಧಿಯಿಲ್ಲದ ಪರಾವಲಂಬಿ ಜೀವನ ನಿಮ್ಮದಾಗದಿರಲಿ.

English summary
We see that we are dependent on many things, inspite of leading independent life. Is this dependency inevitable? Srinath Bhalle narrates dependency relationship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X