ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಳಿ ರಂಗಿನ ಬಣ್ಣ, ಯುಗಾದಿ ಚಿಗುರಿನ ಬಣ್ಣ... ಅಬ್ಬಬ್ಬಾ ಎಷ್ಟೆಲ್ಲಾ ಬಣ್ಣ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮಾರ್ಚ್ ತಿಂಗಳು ಬಂತೂ ಅಂದ್ರೆ ಬಣ್ಣ ಬಣ್ಣ ಎಲ್ಲೆಲ್ಲೂ ಬಣ್ಣ... ಹೋಳಿ ಹುಣ್ಣಿಮೆಯ ರಂಗು ರಂಗಾದ ಬಣ್ಣ... ಎಲ್ಲೆಡೆ ಪರೀಕ್ಷೆಗಳು ಮುಗಿದು ಶಾಲೆಗಳಿಗೆ ರಜೆ ಅಂತಾಗಿ ಪುಸ್ತಕಕ್ಕೆ ಅಂಟಿಕೊಳ್ಳದೇ ಓಡಾಡಿಕೊಂಡಿರುವ ವಿದ್ಯಾರ್ಥಿಗಳ ಆನಂದದ ಬಣ್ಣ... ಮಕ್ಕಳನ್ನು ಎಲ್ಲಿಗಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಒಯ್ಯಬೇಕು ಎಂದಾಗ ರಜೆ ಸಿಗದೇ ಹೋದಾಗ ಆಗುವ ಹೆಂಡತಿಯ ಸಿಟ್ಟಿನ ಬಣ್ಣ... auditors ಬರೋ ಸಮಯಕ್ಕೆ ರಜೆ ಕೇಳ್ತಿದ್ದೀರಾ ಅಂತ ನಿಮ್ಮ ಬಾಸ್ ಮುಖದಲ್ಲಿ ಮೂಡುವ ಬಣ್ಣ... ಯುಗಾದಿ ಹಬ್ಬದ ಸಮಯದಲ್ಲಿನ ಚಿಗುರುಗಳ ಬಣ್ಣ... ಮಾಗುವ ಹಣ್ಣಿನ ಮೋಹಕ ಬಣ್ಣ... ಅಬ್ಬಬ್ಬಾ! ಎಷ್ಟೆಲ್ಲಾ ಬಣ್ಣಗಳು ಅಲ್ಲವೇ? ಒಂದಷ್ಟು ನೋಡೋಣ ಬನ್ನಿ.

ಮಾರ್ಚ್ ಮಧ್ಯದಲ್ಲಿ ಹೋಳಿ ಹುಣ್ಣಿಮೆ. ಪ್ರಹ್ಲಾದಕುಮಾರನನ್ನೇ ಸುಡುವ ಇರಾದೆಯಿದ್ದ ಹೋಳಿಕಳ ದಹನ ಎಂಬುದು ದುಷ್ಟಶಿಕ್ಷಣ ಶಿಷ್ಟರಕ್ಷಣ ಸಾಲಿಗೆ ಸೇರುವಂಥದ್ದು. ದುಷ್ಟತನದ ಪ್ರತೀಕವಾದ ಬಣ್ಣದ ಪೊರೆಯನ್ನು ಕಳಚಿ ನವವಸ್ತ್ರದ ಶುಭದ ಬಣ್ಣವನ್ನು ತೊಟ್ಟು ಸಂಭ್ರಮಿಸುವ ಹಬ್ಬ. ರಾಧಾ-ಕೃಷ್ಣರ ಪ್ರೇಮ ಪ್ರತೀಕವಾಗಿ ರಂಗ ಪಂಚಮಿಯ ಆಚರಣೆ, ಈಶ್ವರ-ಪಾರ್ವತಿಯರ ಸಂಗಮಕ್ಕೆ ಕಾರಣವಾದ ವಸಂತ ಪಂಚಮಿ ಎಂದೆಲ್ಲಾ ಹಲವು ರೀತಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಒಟ್ಟಾರೆ ಹೇಳೋದಾದ್ರೆ ಹೊಸತರ ಸಂಭ್ರಮದ ಪ್ರತೀಕ ಈ ಬಣ್ಣ ಎನ್ನೋಣ.

ನೆಚ್ಚಿನ ಬಣ್ಣ ನಿಮ್ಮ ಗುಣ ಹೇಗೆ ಅಂತಲೂ ಹೇಳುತ್ತೆ ಕೇಳಿ..!ನೆಚ್ಚಿನ ಬಣ್ಣ ನಿಮ್ಮ ಗುಣ ಹೇಗೆ ಅಂತಲೂ ಹೇಳುತ್ತೆ ಕೇಳಿ..!

ಇನ್ನು ಶಾಲೆಯ ಬಗ್ಗೆ ಹೇಳೋದಾದ್ರೆ ವಾರದ ಐದು / ಆರು ದಿನಗಳು ಸಮವಸ್ತ್ರವನ್ನೇ ತೊಡುವ ವಿದ್ಯಾರ್ಥಿಗಳಿಗೆ ರಜೆಯ ಸಮಯ. ಎಲ್ಲೆಡೆ ಬಣ್ಣ ಬಣ್ಣದ ಬಟ್ಟೆ ತೊಟ್ಟ ಮಕ್ಕಳ ಸಂಭ್ರಮ. ಬಹುಶ: ಇದೇ ಸಮಯಕ್ಕೆ ಹೊಸ ಹೊಸ ಡಿಸೈನ್ ಬಟ್ಟೆಗಳೂ ಹೊರಬರುತ್ತೋ ಏನೋ? ಸಮವಸ್ತ್ರದಲ್ಲೂ ಬಣ್ಣ ಇದ್ದರೂ, ಆ ಬಣ್ಣದಲ್ಲಿ ಶಾಲೆಯ ಭೀತಿ ಅಡಗಿದೆ. ಶಾಲೆ, homework, project ಎಂಬೆಲ್ಲಾ ಟೆನ್ಶನ್ ಇರುವ ಬಣ್ಣ ಕಳಚಿ ಆನಂದ ಎಂಬ ಬಣ್ಣವನ್ನು ಹೊದೆದು ನಲಿಯುವ ಮಕ್ಕಳ ಬಣ್ಣವೇ ಚೆನ್ನ. "ರಜೆ ಬಂದಿದ್ದೇ ಬಂದಿದ್ದು, ಮುಂಚೆ ಒಂದಷ್ಟು ಬೆಳ್ಳಗಿದ್ದು ನನ್ನ ಮಗ ಬಿಸಿಲಲ್ಲಿ ಆಡೀ ಆಡೀ ಕಾಗೆ ಬಣ್ಣಕ್ಕೆ ತಿರುಗಿದ್ದಾನೆ" ಅಂತ ಅಮ್ಮಂದಿರು ದೂರಿತ್ತರೆ, ಅಲ್ಲೂ ಬಣ್ಣದ್ದೇ ಮಹತ್ವ ಇದೆ, ಅಲ್ಲವೇ?

ವ್ಯಕ್ತಿಯ ಗುಣ ಹೇಳುವ ಬಣ್ಣ

ವ್ಯಕ್ತಿಯ ಗುಣ ಹೇಳುವ ಬಣ್ಣ

ಈ ಬಣ್ಣಕ್ಕೂ ನಮ್ಮ ಜೀವನದ ಶೈಲಿಗೂ ಏನಾದರೂ ಲಿಂಕ್ ಇದೆಯೇ? ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಬಣ್ಣಗಳಲ್ಲಿ ಸಾರಬಹುದು. ಇಂಥಾ ವ್ಯಕ್ತಿ ಇಂಥಾ ಸಂದರ್ಭಗಳಲ್ಲಿ ಇಂಥಾ ಬಣ್ಣವನ್ನು / ಬಣ್ಣಗಳನ್ನು ಹೋಲುತ್ತಾನೆ ಎಂದು ಹೇಳಬಹುದು. ಅದರಂತೆಯೇ ಒಬ್ಬ ವ್ಯಕ್ತಿಯ ದೇಹದ ಸ್ಥಿತಿಯನ್ನೂ ಬಣ್ಣದಲ್ಲಿ ತೋರಿಸಬಹುದು. ಅದರಂತೆಯೇ ಒಬ್ಬ ವ್ಯಕ್ತಿ ದಿನನಿತ್ಯದಲ್ಲಿ ಬಳಸುವ ಬಣ್ಣವೂ ಆ ವ್ಯಕ್ತಿಯ ಗುಣವನ್ನು ತಕ್ಕಮಟ್ಟಿಗೆ ಹೇಳುತ್ತದೆ. ತಾರೆಯರನ್ನು ಸಂದರ್ಶನ ಮಾಡುವಾಗ ನಿಮಗೆ ಯಾವ ಬಣ್ಣ ಇಷ್ಟ ಅಂತಾರಲ್ಲ, ಅದಕ್ಕೆ ಕಾರಣ ಇದು. ಆದರೆ ಸಂದರ್ಶನ ಮಾಡುವವರು ಈ ಮಾಹಿತಿ ಬಳಸಿಕೊಳ್ಳುವುದಿಲ್ಲ ಅಷ್ಟೇ.

ಸ್ವಭಾವ ತಿಳಿಸುವ ತುಟಿಗೆ ಹಚ್ಚುವ ಬಣ್ಣ

ಸ್ವಭಾವ ತಿಳಿಸುವ ತುಟಿಗೆ ಹಚ್ಚುವ ಬಣ್ಣ

ನಮ್ಮ ದೇಹದ ಚರ್ಮ ನಾವಂದುಕೊಂಡದ್ದಕ್ಕಿಂತಾ ಸೂಕ್ಷ್ಮ. ಭಾವನೆಗಳನ್ನು ಮುಖದಲ್ಲಿ ತೋರಿಸದೆ ಹತ್ತಿಕ್ಕಬಹುದು ಆದರೆ ಭಾವನೆಗೆ ತಕ್ಕಂತೆ ಬದಲಾಗುವ ಮುಖದ ಚರ್ಮದ ಬಣ್ಣವನ್ನು ಹತ್ತಿಕ್ಕಲಾಗದು. ನಿಮ್ಮ ಮೂಡ್ ಹೇಗಿದೆ ಅನ್ನೋದನ್ನ ಚರ್ಮದ ಬಣ್ಣ ಹೇಳುತ್ತದೆ.

ಮೊದಲಿಗೆ ತುಟಿಯಿಂದಲೇ ಆರಂಭಿಸೋಣ. Lipstick ವಿಚಾರ ಅಂತ ನಾನು ಹೇಳಿದ್ದು. ಲಿಪ್'ಗಳಿಗೆ stick ಆಗುವ stick ರೂಪದ lipstickಗಳ ಬಣ್ಣ ಮತ್ತು ಬಳಕೆಯ ಬಗ್ಗೆ ಒಂದು ಕಾದಂಬರಿಯನ್ನೇ ಬರೆಯಬಹುದು. ತೆಳುವಾದ ಪಿಂಕ್ ಬಣ್ಣವನ್ನು ಹದವಾಗಿ ಲೇಪಿಸಿಕೊಳ್ವ ಮಂದಿ ತಾವು 'ಹಿತ ಮಿತ ಸಹಿತ ಕರುಣಾಮೂರ್ತಿ' ಎಂದು ಹೇಳುತ್ತಾರೆ. ಢಾಳಾದ ಕೆಂಪುಬಣ್ಣದ ಲಿಪ್ಸ್ಟಿಕ್ ಹಚ್ಚಿಕೊಂಡವರು ತಾವು ಆತ್ಮವಿಶ್ವಾಸಿ ಎಂದು ಹೇಳುತ್ತಾರೆ. ಝಗಝಗ ಹೊಳೆವ ಪಿಂಕ್ ಲಿಪ್ಸ್ಟಿಕ್ ಹಚ್ಚುವವರು ತಾವು ಬೋಲ್ಡ್ ಅಥವಾ ಸಾಹಸಿಗಳು ಎಂದು ಸಾರುತ್ತಾರೆ. ಇವೆಲ್ಲವೂ ಮತ್ತೊಬ್ಬರಿಗೆ ನಿರಂತರವಾಗಿ ಕಳಿಸುವ ಮೆಸೇಜುಗಳು, ಯಾರೂ ಬಾಯಿಬಿಟ್ಟು ಹೇಳೋದಿಲ್ಲ. ಕಡುನೀಲಿ, ಕಪ್ಪು, ಮಿರಿಮಿರಿ ಅಂತ ಮಿಂಚುವ glossy ಲಿಪ್ಸ್ಟಿಕ್ ಬಗ್ಗೆ ನಾನು ಹೆಚ್ಚು ಹೇಳಲಾರೆ.

ವ್ಯಗ್ರಗೊಂಡ ಮನಸ್ಸನ್ನು ತಹಬದಿಗೆ ತರಲು ಧ್ಯಾನದ 10 ವಿಧಾನವ್ಯಗ್ರಗೊಂಡ ಮನಸ್ಸನ್ನು ತಹಬದಿಗೆ ತರಲು ಧ್ಯಾನದ 10 ವಿಧಾನ

ಕೆಂದುಟಿ ಜೇನನು ಹೀರುವ ಮುನ್ನ...

ಕೆಂದುಟಿ ಜೇನನು ಹೀರುವ ಮುನ್ನ...

"ಕೆಂದುಟಿ ಮೇಲಿನ ಹೂ ನಗೆ", "ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆಂಪೇಕಾಯಿತು, ಕೆಂದುಟಿ ಜೇನನು ಹೀರುವ ಮುನ್ನ ಭಯವೇಕಾಯಿತು" ಎಂಬ ಕವಿಯ ಕಲ್ಪನೆಯ ಹಾಡು ಇದೆ. ಸ್ವಾಭಾವಿಕವಾಗಿ ಕೆಂಪು ಇಲ್ಲದಿದ್ದರೂ ಗಂಡಿನ ಗಮನ ಸೆಳೆಯಲು ಕೆಂಪು ಬಣ್ಣದ ಲಿಪ್ಸ್ಟಿಕ್ ಹಚ್ಚುತ್ತಾರೆ ಹೆಣ್ಣುಗಳು ಎನ್ನುವುದಕ್ಕಿಂತಾ ಗಂಡು ಕೆಂಪು ಬಣ್ಣ ಹಚ್ಚಿದ ತುಟಿಗಳ ಕಡೆ ಬೇಗ ವಾಲುತ್ತಾನೆ ಎಂದು ಹೇಳಬಹುದು. ಇಂಥಾ ಲಿಪ್ಸ್ಟಿಕ್ ಇಲ್ಲದೆಯೇ ಶಕುಂತಲೆಯೆ ತುಟಿಗಳಿಗೆ ಮುತ್ತಿಕ್ಕಲು ಬಂದಿತ್ತು ಆ ದುಂಬಿ.

ಬಿಳಿಯ ಬಣ್ಣವು ಶಾಂತಿ ಸಂಕೇತ

ಬಿಳಿಯ ಬಣ್ಣವು ಶಾಂತಿ ಸಂಕೇತ

ಬಣ್ಣಗಳು ನಮ್ಮ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀಳಬಹುದು ಅಂತ ಒಮ್ಮೆ ನಿಮ್ಮ ಸುತ್ತಲೂ ಗಮನಿಸಿ. ಬಿಳಿಯ ಬಣ್ಣವು ಶಾಂತಿ ಸಂಕೇತ. ಬಿಳಿಯ ಬಣ್ಣ ಕಂಡಕೂಡಲೇ ಮನಸ್ಸಿಗೆ ಏನೋ ಹಿತ ಸಿಗುತ್ತದೆ. ಮಲ್ಲಿಗೆ ಹೂವು, ನಂದಿಬಟ್ಟಲು ಇತ್ಯಾದಿ. ಕೆಂಪು ಬಣ್ಣವು ಪ್ರೀತಿಯ ಸಂಕೇತವೂ ಹೌದು, ರೋಷದ ಸಂಕೇತವೂ ಹೌದು. ಸನ್ನಿವೇಶದ ಮೇಲೆ ಅವಲಂಬಿತ. ಹಸಿರು ಬಣ್ಣ ಹೊಟ್ಟೆಕಿಚ್ಚಿನ ಸಂಕೇತ. ಕಪ್ಪು ಎಂಬೋದು ಕೆಡುಕಿನ ಸಂಕೇತ. ಶಕುನಿ ಮಾಮ, ಶನಿ ಇವರುಗಳನ್ನು ಟಿವಿಯಲ್ಲಿ ನೋಡಿದಾಗ ಕಪ್ಪು ಬಣ್ಣದ ವಸ್ತ್ರವನ್ನೇ ತೊಡಿಸಿರುತ್ತಾರೆ.

ಮೌನ ಬಂಗಾರವೂ ಆಗಬಹುದು, ಬಣ್ಣವನ್ನೂ ಕಳೆದುಕೊಳ್ಳಬಹುದು!ಮೌನ ಬಂಗಾರವೂ ಆಗಬಹುದು, ಬಣ್ಣವನ್ನೂ ಕಳೆದುಕೊಳ್ಳಬಹುದು!

ಮಕ್ಕಳಿಗೆ ಆತಂಕ ತರುವ ಕೆಂಬಣ್ಣ

ಮಕ್ಕಳಿಗೆ ಆತಂಕ ತರುವ ಕೆಂಬಣ್ಣ

Chromotherapy ಎಂಬ ಒಂದು ಥೆರಪಿಯಲ್ಲಿ ಬಣ್ಣಗಳನ್ನು ಬಳಸಿಕೊಳ್ಳುತ್ತಾರೆ. ಕೆಂಪು ಬಣ್ಣ ಮನುಷ್ಯನಲ್ಲಿ ರಕ್ತ ಸಂಚಾರವನ್ನು ಏರಿಸುತ್ತದೆ. ಒಂದು ಉದಾಹರಣೆ ಎಂದರೆ ಮಕ್ಕಳ ರಿಪೋರ್ಟ್ ಕಾರ್ಡಿನಲ್ಲಿ ಕೆಂಪು ಶಾಯಿ ಬಳಸಿರುವ ಸಂಖ್ಯೆ ನೋಡಿದ ಕೂಡಲೇ ನಿಮ್ಮ ಮನಸ್ಸಿನ ಮೇಲೆ ಆಗುವ ಪರಿಣಾಮ ಎಂದರೆ ಉದ್ವಿಗ್ನ. ಒಂದು studyಯ ಪ್ರಕಾರ ಪರೀಕ್ಷೆಗೆ ಮುನ್ನ ಕೆಂಪು ಬಣ್ಣ ಕಂಡ ಮಕ್ಕಳ ಮನಸ್ಸಿನಲ್ಲಿ ಅದೇನೋ ಆತಂಕ ಶುರುವಾಗುತ್ತದೆ. ಪರೀಕ್ಷೆಯನ್ನು ಚೆನ್ನಾಗಿ ಬರೆಯದೆ ಹೋಗಬಹುದು. ನಾನು ಪ್ರೈಮರಿ ಶಾಲೆಯಲ್ಲಿದ್ದಾಗ ಅತೀ strict ಎನಿಸಿಕೊಂಡಿದ್ದ ರೋಸಿ ಮಿಸ್ ಕೆಂಪು ಬಣ್ಣದ ಸೀರೆ ಉಟ್ಟು ಬಂದಿದ್ದರೆ ಅದು ನನ್ನ ಪಾಲಿಗೆ ಒಂದು ದುರ್ದಿನ ಎಂದೇ ನನ್ನ ಭಾವನೆ ಆಗಿತ್ತು. ನೀಲಿ ಬಣ್ಣ ಮನಸ್ಸನ್ನು ಶಾಂತವಾಗಿಸುತ್ತದೆ. ಇದು ಪರೀಕ್ಷೆಯ ಸಮಯ, ಹಾಗಾಗಿ ಈ ವಿಷಯ ನೆನಪಿನಲ್ಲಿ ಇಟ್ಟುಕೊಂಡಿರಿ.

ವ್ಯಕ್ತಿಯ ಗುಣ ತೋರುವ ಬಣ್ಣ

ವ್ಯಕ್ತಿಯ ಗುಣ ತೋರುವ ಬಣ್ಣ

Personalysis (ಪೆರ್ಸನಾಲಿಸಿಸ್) ಎಂಬುದು person ಮತ್ತು analysisನ ಹ್ರಸ್ವರೂಪ. ಇದು ನಾಲ್ಕು ಬಣ್ಣಗಳನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ಗುಣವನ್ನು ಹೀಗಿರಬಹುದು ಎಂದು ತೋರಿಸುತ್ತದೆ. ಕಂಪೆನಿಗಳಲ್ಲಿ Personalysis ಎಂಬ online ಕೋರ್ಸ್ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಹಲವಾರು ರೀತಿಯ ಸಾಂದರ್ಭಿಕ ಪ್ರಶ್ನೆಗಳಿದ್ದು (situation based) ಯಾವ ರೀತಿ ಅಂಥಾ ಪ್ರಶ್ನೆಗಳಿಗೆ ಉತ್ತರವೀಯುತ್ತಾರೆ ಎಂಬ ಆಧಾರದ ಮೇಲೆ ಈ ನಾಲ್ಕು ಬಣ್ಣಗಳ points ನಿರ್ಧಾರವಾಗುತ್ತದೆ. ಸಿಂಪಲ್ ಆಗಿ ಹೇಳಬೇಕು ಎಂದರೆ ನಾನು ನಾನಾಗಿ ನನಗೆ ಹೇಗಿರಬೇಕು ಎಂಬುದು, ಮತ್ತೊಬ್ಬರೊಂದಿಗೆ ವ್ಯವಹರಿಸುವುದಕ್ಕೆ ನನಗೆ ಹೇಗಿರಬೇಕು, ಕೊನೆಯದಾಗಿ ನನ್ನ preferred style ಅರ್ಥಾತ್ ಸೋಗಿಲ್ಲದೇ ನಾನು ನಾನಾಗಿದ್ದಾಗ ಹೇಗಿರುತ್ತೇನೆ ಅಂತ.

ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ?ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ?

ವ್ಯಕ್ತಿಯ ವ್ಯಕ್ತಿತ್ವ ಅಳೆಯ ಚಾರ್ಟ್

ವ್ಯಕ್ತಿಯ ವ್ಯಕ್ತಿತ್ವ ಅಳೆಯ ಚಾರ್ಟ್

ಪುಟ್ಟ ಉದಾಹರಣೆ ಎಂದರೆ ನಾನು ಕೆಲಸ ಮಾಡುವಾಗ ನನ್ನ ಟೇಬಲ್ organized ಆಗಿರಬೇಕು. ಯಾವ ಯಾವ ವಸ್ತು ಯಾವ ಜಾಗದಲ್ಲಿರಬೇಕೋ ಅದೇ ಜಾಗದಲ್ಲಿರಬೇಕು. ಕೆಲವರು ನನ್ನ ಈ ಅಭ್ಯಾಸಕ್ಕೆ ನಕ್ಕಿರಬಹುದು ಅವರಿಗೆ ನಾನು ಕೇಳೋದು, ಮಲಗಿ ಎದ್ದಾಗ ನಿಮ್ಮ ಕಣ್ಣುಗಳು ಹೊಟ್ಟೆಯ ಮೇಲೆ shift ಆಗಿದ್ದರೆ ನಿಮಗೆ ಏನನ್ನಿಸುತ್ತದೆ? ಅಂತ.

ಈ ಸಾಧನವು ನಮ್ಮ ಬಗ್ಗೆ ಕಥೆ ಹೇಳೋ chartನಲ್ಲಿ ಕೆಂಪು ಬಣ್ಣ (authoritative) 'ಇದು ಹೀಗೆ ಆಗಬೇಕು ಇಲ್ಲದಿದ್ದರೆ ನನಗೆ ಸರಿಹೋಗೊಲ್ಲ' ಎಂಬುದನ್ನು ಸೂಚಿಸುತ್ತದೆ. ಹಸಿರು ಬಣ್ಣವು 'controlling' ಅನ್ನು ಸೂಚಿಸುತ್ತದೆ. ಅರ್ಥಾತ್ 'ನಾನು ಹೇಳಿದಂತೆಯೇ ಆಗಬೇಕು' ಅನ್ನೋದು. ಹಳದಿ ಬಣ್ಣವು 'ನಾನು ಹೇಳಿದ್ದು ಮಾಡಿದರೂ ಓಕೆ ಮತ್ತೊಬ್ಬರು ಹೇಳಿದಂತೆ ಮಾಡಿದರೂ ಓಕೆ ಒಟ್ಟಾರೆ ಕೆಲಸ ಚೆನ್ನಾಗಿ ಆಗಬೇಕು ಅಷ್ಟೇ' ಅನ್ನೋದು. ನೀಲಿ ಬಣ್ಣ ಎಂದರೆ understanding. ಆಲಿಸಿ, ಅರ್ಥೈಸಿಕೊಂಡು, ಒಳಿತು ಕೆಡುಕುಗಳನ್ನು ಪರಿಶೀಲಿಸಿ ನಂತರ ಒಂದು ನಿರ್ಧಾರ ತೆಗೆದುಕೊಳ್ಳುವ ಪರಿ.

ಈ ಚಾರ್ಟ್ ಅನ್ನು ನೋಡಿದ ಕೂಡಲೇ ಒಬ್ಬ ವ್ಯಕ್ತಿಯ ಬಗ್ಗೆ ಒಂದು ಅಂದಾಜು ಬರುತ್ತದೆ. ಒಬ್ಬ ಮ್ಯಾನೇಜರ್'ಗೆ ತನ್ನ ಕೈಕೆಳಗೆ ಇರುವ ವ್ಯಕ್ತಿಯನ್ನು ಯಾವ ರೀತಿ ಸಂಭಾಳಿಸಬೇಕು ಎಂಬುದಕ್ಕೆ ಇದು ಸಹಾಯಕ. ಆಗಲೇ ಹೇಳಿದಂತೆ ಒಂದು ಅಂದಾಜು ಬಂದೀತೆ ಹೊರತು ಇಂಥವರ ಗುಣ ಹೀಗೆಯೇ ಅಂತ ಅವರ ಬಗ್ಗೆ ಅಭಿಪ್ರಾಯವನ್ನು ಕಲ್ಲಿನಲ್ಲಿ ಕೆತ್ತಲಾಗದು.

ಬಣ್ಣದ ಬದುಕಿನಲ್ಲಿ ಸೊಗಡೂ ಇದೆ

ಬಣ್ಣದ ಬದುಕಿನಲ್ಲಿ ಸೊಗಡೂ ಇದೆ

ನಮ್ಮಲ್ಲಿ ಉಂಟಾಗುವ ಭಾವನೆಗಳಿಂದ ಇತರರಿಗೆ ನಾವು ಬಣ್ಣದ ಮೂಲಕ ಹೇಳಬಹುದು ಅಥವಾ ಬಣ್ಣಗಳಿಂದ ನಾವು ಇತರರನ್ನು ಅರಿಯಬಹುದು. ಆದರೆ ಈ ಸೌಭಾಗ್ಯವು ಕಣ್ಣಿಲ್ಲದೆ ಇರುವವರಿಗೆ ಹೇಗೆ? ಒಮ್ಮೆ ಆಲೋಚಿಸಿ. ಇದಕ್ಕಿಂತಾ ಮೇಲು ಎಂದರೆ ಕಣ್ಣಿದ್ದೂ ಕುರುಡರಾಗಿರುವ ಮಂದಿಗೆ ಯಾವ ಬಣ್ಣವೂ ವಿಭಿನ್ನವಾಗಿ ಕಾಣುವುದಿಲ್ಲ ಅಲ್ಲವೇ? ಕೆಂಪು ದೀಪವು 'ನಿಲ್ಲಿ' ಎನ್ನುತ್ತದೆ, ಹಳದಿಯು 'ಸಿದ್ದರಾಗಿ' ಎನ್ನುತ್ತದೆ, ಹಸಿರು ಬಣ್ಣವು 'ಸಾಗಿ' ಎನ್ನುತ್ತದೆ. ಕೆಂಪು ಕಂಡಾಗಲೂ ನಾವು ಸಾಗಿದರೆ ನಮಗೂ ತೊಂದರೆ ಇತರರಿಗೂ ತೊಂದರೆ. ನಮ್ಮ ಬದುಕಿನಲ್ಲಿ ಬಣ್ಣವು ಹಾಸುಹೊಕ್ಕಾಗಿದೆ. ಬಣ್ಣದ ಬದುಕಿನಲ್ಲಿ ಸೋಗೂ ಇದೆ ಸೊಗಡೂ ಇದೆ. ಅರ್ಥೈಸಿಕೊಂಡು ಬಾಳುವ ಬುದ್ದಿ ನಮ್ಮ ಕೈಯಲ್ಲಿದ್ದರೆ ಸಾಕು. ಏನಂತೀರೀ?

English summary
Have you ever fallen in love with the color? Which color fascinates you? What colors show your personality? Colors display different sentiments, emotions. Let's get into the world of colors. Beautiful write up on colors by Srinath Bhalle, Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X