ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಮನಸ್ಸು, ಹೃದಯಕ್ಕೂ ಶೋಧಕ ಬೇಕು

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಇಂದಿನ ಬರಹದ ವಿಷಯ filter. ಫಿಲ್ಟರ್ ಅಂದರೇನು ಮತ್ತು ಯಾವ ಯಾವ ಕ್ಷೇತ್ರದಲ್ಲಿ ಇದರ ಬಳಕೆ ಇದೆ ಅಂತ ಕೊಂಚ ಅರ್ಥೈಸಿಕೊಳ್ಳೋಣ.

ಮೊದಲಿಗೆ filter ಅಂದರೆ ಕನ್ನಡದಲ್ಲಿ ಶೋಧಕ ಅಥವಾ ಸೋಸುಕ ಅಥವಾ ಜರಡಿ ಎನ್ನುತ್ತಾರೆ. ಶೋಧಕ ಎಂದರೆ ಘನ, ದ್ರವ ಅಥವಾ ಅನಿಲಗಳಲ್ಲಿನ ಬೇಡದ ಪದಾರ್ಥಗಳನ್ನು ಶೋಧಿಸಿ ಬೇರ್ಪಡಿಸಲು ಬಳಸುವ ಸಾಧನ.

ಶ್ರೀನಾಥ್ ಭಲ್ಲೆ ಅಂಕಣ; ಪರದೆ ಇಳಿದ ಮೇಲೂ ನೆನಪುಳಿಯುವ ಬದುಕು ನಮ್ಮದಾಗಲಿಶ್ರೀನಾಥ್ ಭಲ್ಲೆ ಅಂಕಣ; ಪರದೆ ಇಳಿದ ಮೇಲೂ ನೆನಪುಳಿಯುವ ಬದುಕು ನಮ್ಮದಾಗಲಿ

ಅಂದಿನ ದಿನಗಳಲ್ಲಿ ಅಂಗಡಿಯಿಂದ ತಂದ ರವೆ, ಗಿರಣಿಯಲ್ಲಿ ಹಾಕಿಸಿದ ಅಕ್ಕಿ/ಗೋಧಿ/ರಾಗಿ ಹಿಟ್ಟುಗಳನ್ನು ಜರಡಿ ಹಿಡಿದು ಶುದ್ಧೀಕರಿಸಿ ಬಳಸುತ್ತಿದ್ದುದು. ಹಲವಾರು ಬಾರಿ ಅಮ್ಮ ತಮ್ಮ ಕೆಲಸವನ್ನು ಮಾಡುತ್ತಿದ್ದರು, ಕೆಲವೊಮ್ಮೆ ನಾವೂ ಮಾಡುತ್ತಿದ್ದೆವು. ಆದರೆ ಮಜಾ ಎಂದರೆ ಆ ಜರಡಿ ಆಡಿಸುವಾಗ ನನ್ನ ದೇಹವೂ ಅಲ್ಲಾಡುತ್ತಿತ್ತು. ಇದು ಹೇಗೆ ಎಂದರೆ, ಹೊಸತಾಗಿ ಒಂದು ಕೈಯಲ್ಲಿ ಗಂಟೆಯನ್ನು ಬಾರಿಸುತ್ತ, ಮತ್ತೊಂದು ಕೈಯಲ್ಲಿ ಮಂಗಳಾರತಿ ಎತ್ತುವಾಗ ಒಂದೋ, ಎರಡೂ ಕೈಗಳೂ ಸುತ್ತುತ್ತದೆ ಅಥವಾ ಎರಡೂ ಕೈಗಳನ್ನೂ ಅಲ್ಲಾಡಿಸುವಂತೆ ಆಗುತ್ತದೆ. ಇರಲಿ, ಜರಡಿಯು ಹಿಟ್ಟನ್ನು ಶುದ್ಧೀಕರಿಸುವ ಶೋಧಕ.

We Need Filter To Our Mind And Words

ಹಿಟ್ಟನ್ನು ಶುದ್ಧೀಕರಿಸುವ ಜರಡಿಯ filter ಚಿಕ್ಕಚಿಕ್ಕದಾಗಿರುತ್ತದೆ. ಆದರೆ ತರಕಾರಿಯನ್ನು ತೊಳೆದು ನೀರನ್ನು ತೆಗೆಯಲು ಬಳಸುವ ಶೋಧಕದ ತೂತುಗಳು ಹಿರಿದಾಗಿರುತ್ತದೆ. ಇದರಂತೆಯೇ ಎಣ್ಣೆಯಲ್ಲಿ ಕರೆಯುವ ಪದಾರ್ಥಗಳ ಜಾಲರಿ ಸೌಟು ಕೂಡ. ಹಿಟ್ಟಿನ ಜರಡಿಯಂಥದ್ದೇ ಮೆಶ್ ಟೀ ಶೋಧಿಸುವ ಕೈಹಿಡಿಯಲ್ಲೂ ಇರುತ್ತದೆ. filter ಕಾಫಿ ಪಾತ್ರೆಯ ಜರಡಿಯಾ ತೂತುಗಳು ಕೊಂಚ ಹಿರಿದು.

ಶ್ರೀನಾಥ್ ಭಲ್ಲೆ ಅಂಕಣ; slang ಅಂದ್ರೆ ಆಡುಭಾಷೆ, ಅಶಿಷ್ಟಭಾಷೆಶ್ರೀನಾಥ್ ಭಲ್ಲೆ ಅಂಕಣ; slang ಅಂದ್ರೆ ಆಡುಭಾಷೆ, ಅಶಿಷ್ಟಭಾಷೆ

ಕೆಲವರು ಕಾಫಿ ಮಾಡಿಕೊಂಡ ಮೇಲೆ ಕೆನೆಯನ್ನು ಶೋಧಿಸಲು ತೆಗೆದು ಹಾಕಲು ಫಿಲ್ಟರ್ ಬಳಸುತ್ತಾರೆ. ಬೆಣ್ಣೆ ಕಾಯಿಸಿ ತುಪ್ಪವಾದ ಮೇಲೆ ಅದನ್ನು ಇನ್ನೊಂದು ಪಾತ್ರೆಗೆ ಹಾಕಿಡುವ ಮುನ್ನ filter ಬಳಸಿ ಆ ಗಸಿಯನ್ನು ಬೇರ್ಪಡಿಸಲಾಗುತ್ತದೆ. ಬಾಲ್ಯದಲ್ಲಿ ನನಗೆ ವಾರದ ಏಳು ದಿನಗಳೂ ಸಾರು ಮಾಡಿ ಹಾಕಿದರೆ ಸಾಕಿತ್ತು. ತರಕಾರಿ ಹಾಕಿ ಹುಳಿ ಮಾಡಿದರೆ ಅದೇನೋ ಸಂಕಟ. "ಹುಳಿ ಮಾಡ್ತೀನಿ, ನೀನೊಂದು ಫಿಲ್ಟರ್ ಇಟ್ಕೋ, ತರಕಾರೀನ ಇನ್ನೊಬ್ಬರಿಗೆ ಹಾಕು, ಚೆಲ್ಲಬೇಡ" ಅಂತ ಅಮ್ಮ ಬೈತಾ ಇದ್ದಿದ್ದು ಈಗಲೂ ನೆನಪಾಗುತ್ತೆ. ಈಗ ಬಿಡಿ, ಸಾರು ಮಾಡಿದರೆ ಸಂಕಟ, ದಿನವೂ ತರಕಾರಿ ಬೇಕು.

We Need Filter To Our Mind And Words

ನಮ್ಮಲ್ಲಿ ಪ್ರತೀ ಮನೆಯಲ್ಲೂ air filter ಗಳು ಇರುತ್ತವೆ. ಏಸಿ ಮತ್ತು heating unit ಇರುವಲ್ಲೆಲ್ಲಾ ಈ air filterಗಳು ಇರಲೇಬೇಕು. ನೀರಿನಲ್ಲಿನ ರಾಸಾಯನಿಕದ ಅಶುದ್ಧತೆ ತೆಗೆಯಲು water filter ಬಳಕೆ ಮಾಡದವರೇ ಇಲ್ಲ.

ಶ್ರೀನಾಥ್ ಭಲ್ಲೆ ಅಂಕಣ; ಬುದ್ಧಿಗೆ ಕಸರತ್ತು ನೀಡಬೇಕಾದ್ದು ಯಾಕೆ?ಶ್ರೀನಾಥ್ ಭಲ್ಲೆ ಅಂಕಣ; ಬುದ್ಧಿಗೆ ಕಸರತ್ತು ನೀಡಬೇಕಾದ್ದು ಯಾಕೆ?

ದೂಳು ಮತ್ತು ಅನಿಲ ತಡೆಗಟ್ಟುವ ಸಾಧಕದ ಬಗ್ಗೆ ಇಂದು ಎಲ್ಲರಿಗೂ ಜ್ಞಾನವಿದೆ. ನಾ ಕಂಡಂತೆ kidney transplantation ಆದ ಸ್ನೇಹಿತರೊಬ್ಬರು ಮಾಸ್ಕ್ ಬಳಸುತ್ತಿದ್ದುದು ಕಂಡಿದ್ದೆ. ಆಪರೇಷನ್ ಮಾಡುವ ವೈದ್ಯರು, dentistಗಳು ಮಾಸ್ಕ ಬಳಸೋದು ಸರ್ವೇಸಾಮಾನ್ಯ. ವಾಯುಮಾಲಿನ್ಯ ಸಮಸ್ಯೆ ಇದ್ದ ಕಡೆ ಮಾಸ್ಕ್ ಬಳಕೆ ಇರುತ್ತಿತ್ತು. ಇಂದಿನ ದಿನಗಳಲ್ಲಿ ಮಾಸ್ಕ್ ಬಳಸದೇ ಇರುವವರು ಮತ್ತು ಅದರ ಬಗ್ಗೆ ಅರಿವಿರದೇ ಇರುವವರು ಯಾರೂ ಇಲ್ಲವೇನೋ?

ಒಂದು ಸಿಗರೇಟ್ ನ ಒಂದು ತುದಿಯಲ್ಲಿ ಫಿಲ್ಟರ್ ಇರುತ್ತದೆ. ಸಿಗರೇಟ್ ಸೇದುವಾಗ ಫಿಲ್ಟರ್ ನಿಂದಾಗಿ ಶುದ್ಧ ಗಾಳಿಯೇನೂ ದೇಹದ ಒಳಗೆ ಹೋಗೋದಿಲ್ಲ. filter ಇದ್ದರೂ ಇಲ್ಲದಿದ್ದರೂ ಅಂಥ ವ್ಯತ್ಯಾಸವೇನೂ ಇಲ್ಲ ಎಂದೇ ಹೇಳುತ್ತಾರೆ. ಎರಡರಿಂದಲೂ ಆರೋಗ್ಯಕ್ಕೆ ಹಾನಿಕಾರವೇ.

We Need Filter To Our Mind And Words

photography ಜಗತ್ತಿನಲ್ಲಿ ಬೆಳಕಿನ ತೀಕ್ಷ್ಣತೆಯನ್ನು ತಗ್ಗಿಸಲು ಫಿಲ್ಟರ್ ಬಳಕೆ ಮಾಡಲಾಗುತ್ತದೆ. ಮೈಕಿನಲ್ಲಿ ಹಾಡುವಾಗ studioಗಳಲ್ಲಿ ಫಿಲ್ಟರ್ ಬಳಕೆ ಮಾಡುತ್ತಾರೆ. ಇದರಿಂದಾಗಿ ಬಾಯಿಂದ ಹೊರಕ್ಕೆ ಬರುವ ಗಾಳಿಯ ಸದ್ದು ಹಾಡಿನಲ್ಲಿ ಮೂಡಿಬರದಂತೆ ತಡೆಯುತ್ತದೆ.

ಐಟಿ ಕ್ಷೇತ್ರದಲ್ಲಿನ filter ಬಳಕೆ ಮತ್ತೊಂದು ವಿಧ. computer ನಲ್ಲಿ ಶೇಖರಣೆಯಾಗಿರುವ ಮಾಹಿತಿ ಅತೀ ಹೆಚ್ಚು. ಒಂದು ಉದಾಹರಣೆ ಎಂದರೆ ಅಮೆಜಾನ್ ಸೈಟ್. ಅಲ್ಲಿನ ಎಲ್ಲಾ ವಸ್ತುಗಳನ್ನು ನಮಗೆ ಸ್ಕ್ರೀನ್ ಮೇಲೆ ತೋರಿಸಿದರೆ, ಈ ಜನ್ಮದಲ್ಲಿ ನಮಗೇನು ಬೇಕೋ ಅದು ಕಾಣಸಿಗೋದಿಲ್ಲ. ಹಾಗಾಗಿ ಯಾವ category ಯ ವಸ್ತುಗಳು ಬೇಕು ಎಂಬುದನ್ನು ಪ್ರತೀ ಬಾರಿ filter ಮಾಡೀ ಮಾಡೀ ತೋರಿಸುತ್ತದೆ.

ಸಿರೆಂಜ್ ನಲ್ಲಿ filter needle ಅಂತ ಒಂದಿರುತ್ತದೆ. ಇದರಿಂದಾಗಿ ಇಂಜೆಕ್ಷನ್ ಚುಚ್ಚುವುದೋ ಅಥವಾ ರಕ್ತವನ್ನು ಸೆಳೆಯುವುದಕ್ಕೋ ಬಳಸಲಾಗುತ್ತದೆ. ಆದರೆ ಎರಡೂ ಸಾಧ್ಯವಾಗೋದಿಲ್ಲ.

ವೈದ್ಯಕೀಯ ಕ್ಷೇತ್ರದ ಮತ್ತೊಂದು ಉದಾಹರಣೆ ಡಯಾಲಿಸಿಸ್. ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೇ ಹೋದಾಗ ರಕ್ತದೊಳಗಿನ ಅಶುದ್ಧ ಪದಾರ್ಥಗಳನ್ನು (cholestrol) ಹೊರತೆಗೆಯಲು ಡಯಾಲಿಸಿಸ್ ಬಳಕೆ ಮಾಡುತ್ತಾರೆ ಎಂಬುದು ಬಹುಶಃ ಎಲ್ಲರಿಗೂ ಗೊತ್ತು.

ಹಲವಾರು ಟಿವಿ ಚಾನೆಲ್ ಗಳಲ್ಲಿ ನೃತ್ಯ, ಹಾಡುಗಾರಿಕೆ, ನಾಟಕ ಹೀಗೆ ಹತ್ತು ಹಲವಾರು ರೀತಿಯ ರಿಯಾಲಿಟಿ ಶೋಗಳು ನಡೆಯುತ್ತದೆ. ಒಂದಷ್ಟು ಹಂತಗಳಾದ ಮೇಲೆ voting ನಡೆಯುತ್ತದೆ. ಕಡಿಮೆ ಅಂಕಗಳನ್ನು ಪಡೆದವರು ಪಂದ್ಯದಿಂದ ಹೊರಕ್ಕೆ ಕಳಿಸಲಾಗುತ್ತದೆ. ಇದೂ filter ತಾನೇ. ಹಲವಾರು ಸ್ಪರ್ಧಿಗಳನ್ನು ಕರೆಸಿ, ಅಲ್ಲಿ ಒಂದಿಷ್ಟು ಮಂದಿಯನ್ನು ಆಯ್ಕೆ ಮಾಡಿ, ಆ ನಂತರ ಶೋಧಿಸೀ ಶೋಧಿಸಿ ಕೊನೆಗೆ ಒಬ್ಬ ಸ್ಪರ್ಧಿಯನ್ನು ಗೆಲ್ಲಿಸಲಾಗುತ್ತದೆ.

ಇನ್ನು ಸಾಮಾಜಿಕ ತಾಣದ ವಿಷಯಕ್ಕೆ ಬಂದರೆ ಅಲ್ಲೂ filter ಇರುತ್ತದೆ. ನಿಮಗೆ ಬೇಕಿರುವ ವಿಚಾರಗಳೇ ನಿಮ್ಮ ಕಣ್ಣಿಗೆ ಬೀಳೋದು. ನೀವು ಪದೇ ಪದೇ ಕಾಣಬಯಸುವ ವಿಷಯಗಳನ್ನು ತಾಣವು ಅರ್ಥೈಸಿಕೊಂಡು ನಿಮಗೆ ಅಂಥದ್ದೇ ವಿಷಯಗಳನ್ನು ಉಣಿಸುತ್ತದೆ. ಯೌಟ್ಯೂಬ್ ಗೆ ಹೋಗಿ ಯಾವುದೋ ಒಂದು categoryಯ ವಿಡಿಯೋಗಳನ್ನು ನೋಡಿದಾಗ ಮುಂದೆ ಅಂಥದ್ದೇ ಸಲಹೆ ನೀಡುತ್ತದೆ.

ಹಲವೊಂದು ವಾಟ್ಸಾಪ್ ಗುಂಪುಗಳಲ್ಲಿ ಯಾವುದೇ ಫಿಲ್ಟರ್ ಇರದೇ ನಿಮಗೆ ಅನ್ನಿಸಿದ್ದು ಹಾಕಿ ಅಂತ ಅಡ್ಮಿನ್ ಯಾವುದೇ ಫಿಲ್ಟರ್ ಬಳಸದೆ ಇರಬಹುದು. ಕೆಲವೊಂದು ಗುಂಪುಗಳು ಕೊಂಚ strict. 'ನಿಮ್ಮ ಪೋಸ್ಟ್ ನಮ್ಮ ಗುಂಪಿನ ಉದ್ದೇಶಕ್ಕೆ ವಿರುದ್ಧವಾಗಿದೆ. ಅದನ್ನು ಅಳಿಸಿ ಹಾಕಿ. ಮತ್ತೊಮ್ಮೆ ಇದೇ ರೀತಿ ಮಾಡಿದರೆ ಗುಂಪಿನಿಂದಲೇ ತೆಗೆಯಲಾಗುತ್ತದೆ' ಎಂಬ ಕಾಟು ಎಚ್ಚರಿಕೆ ನೀಡಬಹುದು. ಮತ್ತೂ ಕೆಲವೊಂದು ಗುಂಪುಗಳು 'ನೋಡ್ರಪ್ಪಾ, ನಿಮಗೇನು ಪೋಸ್ಟ್ ಮಾಡಬೇಕೋ ನನಗೆ ಕಳಿಸಿ, ನಾನೊಬ್ಬ ಮಾತ್ರ ಹಾಕ್ತೀನಿ' ಎಂಬ ನಿರ್ಧಾರವನ್ನೂ ತಳೆದಿರಬಹುದು. ಜನರ ಹಿತಾಸಕ್ತಿಗಾಗಿ ಮತ್ತು ಅಡ್ಮಿನ್ ಗಳ ಕ್ಷೇಮಕ್ಕಾಗಿ ಹೀಗೆ filter ಹಾಕೋದ್ರಲ್ಲಿ ತಪ್ಪೇನಿಲ್ಲ ಎಂದುಕೊಳ್ಳುತ್ತೇನೆ.

ಈಗ ಮಾನವ ಗುಣಗಳನ್ನು ಕೊಂಚ ನೋಡೋಣ. ಕೆಲವರ ನಾಲಿಗೆಗೆ ಶೋಧಕವೇ ಇರುವುದಿಲ್ಲ. ಚಿಕ್ಕವರು, ದೊಡ್ಡವರು, ಮಕ್ಕಳು, ಮರಿ ಅಂತ ನೋಡದೆ ಸದಾ ಕಾಲ ಒಂದೇ ರೀತಿ ಅಸಹನೀಯವಾದ ಅಶ್ಲೀಲ ಮಾತನಾಡುತ್ತಾರೆ. ಇಂಥವರ ಮಾತು ಕೇಳಲಾಗದೆ ನಮ್ಮ ಕಿವಿಗೆ filter ಹಾಕಿಕೊಳ್ಳಬೇಕಾಗುತ್ತದೆ. ನಮ್ಮ ಸುತ್ತಲೂ ನಡೆಯುವ ವಿದ್ಯಮಾನಗಳಲ್ಲಿ ಹಲವಾರು ವಿಚಾರಗಳು ನಮ್ಮ ಮೇಲೆ ತೀವ್ರ ಪ್ರಭಾವ ಬೀರುತ್ತದೆ. ಮನಕ್ಕೆ ಮತ್ತು ಹೃದಯಕ್ಕೆ ಶೋಧಕ ಬೇಕಾಗುತ್ತದೆ.

ಇಂಥಾ ಶೋಧಕಗಳಲ್ಲಿ ಕೆಲವನ್ನು ಗುರುಮುಖೇನ ಕಲಿತು ನಾವು ಸಾಧನೆ ಮಾಡಬೇಕು. ಕೆಲವನ್ನು ನಮ್ಮಲ್ಲಿ ನಾವೇ ಕಂಡುಕೊಂಡು ಶಾಂತಿ ಮೂಡಿಸಿಕೊಳ್ಳಬೇಕು.

ನೀವೇನಂತೀರಾ?

English summary
We use so many types of filters in our daily life. But we also need a filter to our mind, thoughts, and words we use
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X