ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ವಿಷಯಗಳ ಬೆಟ್ಟ ಕೊರೆದು ನೋಡಲು ನಾವ್ 'ಇಲಿ'ಯಾಗಬೇಕು!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಹುಲಿಯಾಗದಿದ್ದರೂ ಇಲಿಯಾಗಲೇಬೇಕು... ಇದೆಂಥಾ ಮಾತು... ಎಲ್ಲರೂ ಹುಲಿಯಾಗಬೇಕು ಅಂತ ಬಯಸಿದರೆ ನೀನೇನಯ್ಯಾ 'ಇಲಿ'ಯಾಗಬೇಕು ಅಂತ ಹೇಳೋದು? ಅಂತ ಅನ್ನಿಸಬಹುದು. ಆದರೆ ಅರ್ಥೈಸಿಕೊಳ್ಳಬೇಕಾದ್ದು 'ವಿಷಯಗಳ ಬೆಟ್ಟ ಕೊರೆದು ನೋಡಲು ನಾವ್ ಇಲಿಯಾಗಬೇಕು' !

ಮೊದಲಿಗೆ ಇಲಿಗಳ ಬಗ್ಗೆ ಒಂದಷ್ಟು ಮಾತಾಡೋಣ... ಇಲಿಯ ಸ್ಥಾನಮಾನ ಏನು? ತುಂಬಾ ಸಿಂಪಲ್. ಸೀದಾ ವರ್ಣಮಾಲೆಯ ಕಲಿಕೆಗೆ ಹೋಗೋಣ ಬನ್ನಿ... ಅ- ಅಗಸ, ಆ - ಆನೆ, ಇ - ಇಲಿ... ಆಮೇಲೆ ಏನಾದರೂ ಇರಲಿ, ಆದರೆ ಆನೆಯ ಪಕ್ಕದ ಸ್ಥಾನ ಇಲಿಗೆ... ಎಲ್ಲರಿಗೂ ಆನೆಯನ್ನು ಸಾಕಲು ಆಗಲಾರದು. ಆದರೆ ಬೇಡ ಅಂದ್ರೂ ತಾನೇ ಮನೆಯನ್ನು ಆಕ್ರಮಿಸಿಕೊಳ್ಳಬಹುದಾದ ಒಂದು ಪ್ರಾಣಿ ಅಂದ್ರೆ ಅದು ಇಲಿ.

 ಶ್ರೀನಾಥ್ ಭಲ್ಲೆ ಅಂಕಣ; ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸಬೇಕಾದ ಸಮಯವಿದು ಶ್ರೀನಾಥ್ ಭಲ್ಲೆ ಅಂಕಣ; ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸಬೇಕಾದ ಸಮಯವಿದು

ಮಕ್ಕಳನ್ನು ಸಲೀಸಾಗಿ ತನ್ನತ್ತ ಸೆಳೆಯುವ ಹಲವಾರು ಪ್ರಾಣಿಗಳಲ್ಲಿ ಇಲಿಯೂ ಒಂದು. ಇಂದಿಗೂ ಟಿವಿಯಲ್ಲಿ tom and jerry ಬಂದರೆ ಆಸಕ್ತಿಯಿಂದ ನೋಡುವ ಹಾಗಾಗೋದು ಈ ಇಲಿಯಿಂದಲೇ. ಒಂದೊಂದು ಎಪಿಸೋಡ್ ನೋಡುವಾಗ ಕ್ರಮೇಣ ನಾವು jerryಯ fan ಆಗೋದು ಸಹಜ. MGMನ ಪಾಲು ಇದರಲ್ಲಿ ಅತ್ಯಧಿಕವಾಗಿರಬಹುದು. ಆದರೆ ಒಂದು ಬೆಕ್ಕು, ಇಲಿ ಇಟ್ಕೊಂಡು 1940ರಿಂದ ಹಿಡಿದು ಇಂದಿಗೂ ಆ ಧಾರಾವಾಹಿಯನ್ನು ನೋಡಬೇಕು ಅಂತ ಆಸಕ್ತಿ ಮೂಡಿಸಬೇಕು ಎಂದಾಗ ನಟರೂ ಅತೀ ಮುಖ್ಯವಲ್ಲವೇ?

We Have To Be Like Mouse In The Matter Of Curiosity

ಸಿರಿವಂತರ ಮನೆಯಲ್ಲಿ ಇಲಿ ಇರಲಾರದು. ಆದರೆ ಬಡವರ ಬಂಧು ಈ ಇಲಿ. ಇಲ್ಲಿ ಸಿರಿವಂತ - ಬಡವ ಅನ್ನೋದನ್ನ ಪಕ್ಕಕ್ಕೆ ಇಡಿ. ಆದರೆ ಯಾವ ಮನೆಯು ಚರಂಡಿ, ಹಳ್ಳಕೊಳ್ಳ ಇತ್ಯಾದಿಗಳ ಸುತ್ತಮುತ್ತಲಲ್ಲಿ ಇರುವ ಮನೆಯ ಅತಿಥಿ ನಮ್ಮ ಹೀರೋ ಈ ಇಲಿ.

ಇಲಿ ಅಂದ್ರೆ ಇದೆಂತಹ ಪ್ರಾಣಿ? ಆನೆಯಂಥ ಗಜಗಾತ್ರದ ನಡಿಗೆಯಿಲ್ಲ. ಹುಲಿಯಂಥ ಧೀಮಂತ ಹೆಜ್ಜೆ ಇಡಲಾರದು. ಸಿಂಹದಂಥ ನೋಟ ಇಲ್ಲ... ಹುಲಿ, ಸಿಂಹದಂತಹ ಪ್ರಾಣಿಗಳನ್ನು ಕಂಡ ಕೂಡಲೇ ಓಡಿಹೋಗಿಬಿಡಬೇಕು ಅಂತ ಅನ್ನಿಸೋದು. ಆದರೆ ಎಲ್ಲೋ ಮೂಲೆಯಲ್ಲಿ ಕಾಣುವ ಇಲಿಯನ್ನು ಕಂಡಾಗ ಮೊದಲು ಓಡೋದು ನಾವು. ನಾವು ಚೀತ್ಕಾರ ಮಾಡಿದಾಗ ಓಡೋದು ಈ ಇಲಿ... ಒಬ್ಬರಿಂದ ಮತ್ತೊಬ್ಬರು ಓಡೋದು ಇದೊಂದೇ scenario ಇರಬಹುದಾ?

ಶ್ರೀನಾಥ್ ಭಲ್ಲೆ ಅಂಕಣ: ಹೇಳಿದ ಮಾತು ಕೇಳೋ ಬುದ್ಧಿ ನಮಗೇಕಿಲ್ಲಶ್ರೀನಾಥ್ ಭಲ್ಲೆ ಅಂಕಣ: ಹೇಳಿದ ಮಾತು ಕೇಳೋ ಬುದ್ಧಿ ನಮಗೇಕಿಲ್ಲ

ಮೂಲೆಯಲ್ಲೇ ಇರಲು ಬಯಸುವ, ಕತ್ತಲಲ್ಲೇ ಇರಲು ಬಯಸುವ, ಪುಟ್ಟ ದೇಹದ ನಾಲ್ಕು ಕಾಲಿನ ಪ್ರಾಣಿ ಈ ಇಲಿ. ಕಾಣಿಸಿಕೊಳ್ಳುವಷ್ಟೇ ವೇಗದಲ್ಲಿ ಥಟ್ಟನೆ ವೇಗವಾಗಿ ಓಡಿ ಮಾಯವಾಗುವ ವಿಶಿಷ್ಟ ಪ್ರಾಣಿ ಈ ಇಲಿ. ಉದ್ದನೆಯ ತೆಳ್ಳಗಿನ ಬಾಲವೂ ಈ ಇಲಿಯ ವೈಶಿಷ್ಟ್ಯ. ಎಲ್ಲಕ್ಕಿಂತ ಹೆಚ್ಚಾಗಿ ಈ ಇಲಿಯಲ್ಲಿ ಕಂಡುಬರೋದು ಅಂದರೆ curious ಕಣ್ಣುಗಳು. ಏನ್ ನಡೀತಿದೆ? ಮುಂದೇನ್ ಮಾಡಬೇಕು? ಎಂಬ ತುದಿಗಾಲಲ್ಲಿ ನಿಂತ ಪ್ರಾಣಿ ಎಂದರೆ ಈ ಇಲಿ.

ಇಲಿಯಿಂದ ಸಾಕಷ್ಟು ಬಾಧಕಗಳಿವೆ, ಇಲ್ಲ ಅಂತೇನಿಲ್ಲ. ಆಹಾರ ಧಾನ್ಯಗಳನ್ನು ಹಾಳುಗೆಡವುತ್ತದೆ. ಮನೆಯಲ್ಲಿ ಸೇರಿಕೊಂಡರೆ ವೈರ್, ಪೇಪರ್ ಗಳನ್ನೂ ಕಡಿದು ಹಾಳುಗೆಡವುತ್ತವೆ. ಒಟ್ಟಾರೆ ಮನೆಯಲ್ಲಿ ಸೇರಿಕೊಂಡರೆ ಅದರಿಂದ ಪ್ರಯೋಜನ ಅಂತೇನೂ ಇಲ್ಲ. ಮೊದಲಿಗೆ ಅದನ್ನು ಕಂಡ ಕೂಡಲೇ ಪೊರಕೆ ಹಿಡಿದು ಓಡಿಸಿಬಿಡಬೇಕು ಅಂತಲೇ ಅನ್ನಿಸೋದು. ಅದೇನೂ ಸಲೀಸಲ್ಲ ಅಂತ ಅರ್ಥವಾಗಲು ಒಂದು ವಾರವೇ ಆಗಬಹುದು. ಆ ನಂತರ ಮನೆಗೆ ಅಡಿಯಿಡೋದೇ ಇಲಿ ಬೋನು. ಸಿಕ್ಕಿಕೊಂಡರೆ ಅದು ಸಿಕ್ಕಿಬಿಡುತ್ತದೆ. ಆದರೆ ಸಿಕ್ಕಿಕೊಳ್ಳುವ ಮುನ್ನ ತಪ್ಪಿಸಿಕೊಂಡರೆ ಆ ಇಲಿ ಮತ್ತೆ ಆ ಬೋನಿನ ಸಮೀಪಕ್ಕೂ ಕಾಲಿಡೋದಿಲ್ಲ. ಅಲ್ಲಿಗೆ ಬೋನಿನ ಕೆಲಸ ಮುಗೀತು. ಆಮೇಲೆ ಎಂಟ್ರಿ ಕೊಡೋದೇ 'ಇಲಿ ಪಾಷಾಣ'. ಇದೂ ಅಷ್ಟೇ. ಕೆಲವೊಮ್ಮೆ ಏನಾಗುತ್ತಪ್ಪಾ ಅಂದ್ರೆ, ಇಲಿಯನ್ನು ಬಿಟ್ಟು ಮಿಕ್ಕೆಲ್ಲಾ ಕ್ರಿಮಿ ಕೀಟ, ಇತರೆ ಚಿಕ್ಕಪ್ರಾಣಿಗಳು ಅದನ್ನು ತಿಂದಿರಬಹುದು. ಅಲ್ಲಿಗೆ ನಾವು ಬಿಳಿ ಬಾವುಟ ತೋರಿಸಿದರೆ, 'ಓಕೆ ಮಗಾ ನಾನ್ ಹೊರಟೆ' ಅಂತ ಬೇರೆಯೇ ಕಡೆ ಹೋಗಬಹುದು ಎನ್ನೋಣ. ಕೆಲವೊಮ್ಮೆ ಇಲಿಯು ಹೋಗಿ ಹೆಗ್ಗಣವಾಗಿರುತ್ತದೆ ಅಷ್ಟೇ!

We Have To Be Like Mouse In The Matter Of Curiosity

ಹೆಗ್ಗಣ ಎಂದರೆ ಭಾರೀ ಗಾತ್ರದ ಇಲಿ ಅಂತ ನಿಮಗೂ ಗೊತ್ತು. ಚರಂಡಿ, ಕೊಳಚೆ ಇತ್ಯಾದಿ ಜಾಗಗಳಲ್ಲಿ ಹೆಚ್ಚಾಗಿ ಕಾಣೋದು ಈ ಹೆಗ್ಗಣ. ಇಲಿಯು ನುಣುಚಿಕೊಂಡು ಓಡಿಹೋಗಬಹುದು. ಆದರೆ ಹೆಗ್ಗಣವನ್ನು ಕಂಡರೆ ಕೊಂಚ ಎದೆ ನಡುಗುವ ಹಾಗೆ ಆಗೋದು ಸಹಜ. ಹೆಗ್ಗಣ ತಿನ್ನೋದನ್ನು ತಡೆಯೋಕ್ಕೆ ಆಗಲ್ಲ. ಅರ್ಥಾತ್ ಅದರ ಹೊಟ್ಟೆ ತುಂಬಿತು ಅಂತ ಇಲ್ಲವೇ ಇಲ್ಲ. ಕೂತುಂಡು ಕೊನೆಯೇ ಇಲ್ಲದಂತೆ ಹೊಡೆದು ತಿನ್ನುವ ಮಂದಿಯನ್ನು ಹೆಗ್ಗಣಕ್ಕೆ ಹೋಲಿಸುವುದುಂಟು.

ಹೆಗ್ಗಣವು ಇಲಿಯ ಒಂದು ಪ್ರಭೇದ. ಇದರಂತೆಯೇ ಸುಂಡಿಲಿ, ಮೂಗಿಲಿ, ಬಿಳಿ ಇಲಿ ಇತ್ಯಾದಿಗಳೆಲ್ಲಾ ಇಲಿಯ ಹಲವು ಪ್ರಬೇಧಗಳು. ನೀವು ಎಷ್ಟು ವೆರೈಟಿ ಇಲಿಗಳನ್ನು ನೋಡಿದ್ದೀರಿ?

 ಶ್ರೀನಾಥ್ ಭಲ್ಲೆ ಅಂಕಣ; ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸಬೇಕಾದ ಸಮಯವಿದು ಶ್ರೀನಾಥ್ ಭಲ್ಲೆ ಅಂಕಣ; ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸಬೇಕಾದ ಸಮಯವಿದು

ಇಂಥ ಇಲಿಯ ಅತಿ ದೊಡ್ಡ ಸ್ಥಾನಮಾನ ಯಾವುದು? ಮತ್ತೊಂದು ಸಿಂಪಲ್ ಪ್ರಶ್ನೆ ಅಲ್ಲವೇ? ಪ್ರಥಮಪೂಜ್ಯ ಗಣಪನ ವಾಹನ ಈ ಇಲಿ. ವಿದ್ಯಾಗಣಪತಿ ನಮ್ಮ ಗಣೇಶ. ವೇದವ್ಯಾಸರು ಹೇಳುತ್ತಾ ಸಾಗಿದ ಶ್ಲೋಕಗಳನ್ನು ಅರ್ಥೈಸಿಕೊಂಡು ಬರೆಯುತ್ತಾ ಸಾಗಿದ ಮಹಾನ್ ಬುದ್ಧಿವಂತ ನಮ್ಮ ಗಣಪ. ಇಂಥ ಬುದ್ಧಿವಂತನ ವಾಹನ special ಆಗಿರಲೇಬೇಕು ಅಲ್ಲವೇ? ಏನಿದರ speciality?

ಮನುಷ್ಯನ ದೇಹಕ್ಕೆ ಅತೀ ಸಮೀಪವಾಗಿರೋದು ಈ ಇಲಿ. ಜೆನೆಟಿಕ್, ಬಯೋಲಾಜಿಕಲ್ ಮತ್ತು ನಡುವಳಿಕೆಯ ವಿಚಾರಗಳಲ್ಲಿ ಮನುಷ್ಯನನ್ನು ಅತೀವವಾಗಿ ಹೋಲುವ ಪ್ರಾಣಿ ಎಂದರೆ ಈ ಇಲಿ. ಮನುಷ್ಯನ ಹಲವಾರು ಕಾಯಿಲೆಗಳನ್ನು ಇಲಿಯಲ್ಲಿ ಉಂಟು ಮಾಡಿದಾಗ ಅದಕ್ಕೆ treatment ಅನ್ನು ಕಂಡುಹಿಡಿಯಲು ಅನುಕೂಲವಾಗುತ್ತದೆ. ನಮ್ಮ ಜೀವ ಉಳಿಸುವ ಔಷಧಿಗಳನ್ನು ಕಂಡುಹಿಡಿಯಲು, ತಮ್ಮ ಜೀವ ನೀಡುವ ಈ ಜೀವ, ಎಂಥ ತ್ಯಾಗ ಜೀವಿಯಲ್ಲವೇ? ಹಾಗಾಗಿ ಗಣಪನ ವಾಹನ ಅಂತ ಬಿಂಬಿಸಿರುವುದರಲ್ಲಿ ಅಚ್ಚರಿಯೇನಲ್ಲ ಅಲ್ಲವೇ? ವಿಜ್ಞಾನಿಗಳಿಗಿಂತ ಮುಂಚೆಯೇ ಇಲಿಯು ಗಣಪನ ವಾಹನವಾಗಿತ್ತು ಅಂತ ನೀವು ಹೇಳುತ್ತೀರಿ ಅಂತ ನನಗೆ ಗೊತ್ತು.

ಇಲಿಗಳ ಕುರಿತಾದ ಕಥೆಗಳು ಅನೇನಾನೇಕ. ನನ್ನ ದೃಷ್ಟಿಯಲ್ಲಿ, ಅದರಲ್ಲಿ ಉತ್ತಮವಾದುದು ಎಂದರೆ pied piper ಅಥವಾ ಕಿಂದರಿ ಜೋಗಿಯ ಕಥೆ ಎಂದರೆ ತಪ್ಪಾಗಲಾರದು. tom and jerry, ಕಿಂದರಿ ಜೋಗಿಯನ್ನು ಬಿಟ್ಟರೆ ratatouille ಎಂಬ ಆಂಗ್ಲ ಚಿತ್ರ. ನಿಮಗೆ ಗೊತ್ತಿರುವ ಕಥೆಯನ್ನು ಹಂಚಿಕೊಳ್ಳುವಿರಲ್ಲಾ?

ಇಂದಿನ ದಿನಗಳಲ್ಲಿ ಈ ಇಲಿ ಹೇಗೆ ಪ್ರಸ್ತುತ. ಚೀನಾದಿಂದ ಹುಟ್ಟಿದ ವೈರಾಣು 'corona' ಅಂತ ನಿಮಗೂ ಗೊತ್ತು. ಚೀನಾ ವರ್ಷದ calendar ಪ್ರಾಣಿ ಸಂಕೇತ ಈ ಇಲಿ. ಮನೆಯಿಂದ ಹೊರಗೆ ಅಡಿಯಿಡದೇ, ತಿನ್ನಲು ಮಾತ್ರ ಹೊರಕ್ಕೆ ಅಡಿಯಿಡುವ, ಜನರನ್ನು ಕಂಡರೆ ಓಡುವ, ಗೂಡಲ್ಲೇ ಉಳಿಯುವ, ಕತ್ತಲಲ್ಲೇ ಕೊಳೆವ ಪ್ರಾಣಿ ಇಲಿಗೂ ನಮ್ಮ ಇಂದಿನ ಸ್ಥಿತಿಗೂ ನಿಮಗೇನಾದ್ರೂ ವ್ಯತ್ಯಾಸ ಕಂಡಿದೆಯಾ?

ಪುಟ್ಟ ಮಕ್ಕಳ ಕಥೆಯೊಂದಿದೆ. ಸಾಯಲಿರುವ ಇಲಿಯನ್ನು ಒಬ್ಬ ಋಷಿಯು ರಕ್ಷಿಸಿ, ಮನುಷ್ಯ ರೂಪ ಕೊಟ್ಟು, ಆ ಹೆಣ್ಣು ಮಗುವನ್ನು ಮನೆಗೆ ಕರೆದೊಯ್ಯುತ್ತಾನೆ. ಮದುವೆಯ ವಯಸ್ಸಿಗೆ ಬಂದಾಗ ಶಕ್ತಿಶಾಲಿ ಗಂಡನ್ನು ಹುಡುಕುತ್ತಾನೆ. ಸೂರ್ಯ, ಚಂದ್ರ, ಗಾಳಿ ಅಂತೆಲ್ಲಾ ನೋಡಿದಾಗ ಕೊನೆಗೆ ಬೆಟ್ಟ ಉಳಿಯುತ್ತದೆ. ಬೆಟ್ಟವೇ ಶಕ್ತಿಶಾಲಿ ಎಂದು ಬೆಟ್ಟದರಾಜನ ಬಳಿ ಹೋದರೆ ಅವನು ಹೇಳುತ್ತಾನೆ ನಾನೇ ಶಕ್ತಿಶಾಲಿ ಎಂದುಕೊಂಡರೆ ನನ್ನನ್ನೇ ಕೊರೆವ ಇಲಿ ನನಗಿಂತಲೂ ಬಲಿಷ್ಠ ಎನ್ನುತ್ತಾನೆ.

ವಿಷಯ ಇಷ್ಟೇ, ಒಬ್ಬರಿಗಿಂತಲೂ ಮತ್ತೊಬ್ಬರು ಶಕ್ತಿಶಾಲಿ ಇರುತ್ತಾರೆ ಎಂಬುದನ್ನು ಮರೆಯಬಾರದು.

ನಮ್ಮ ಕಲಿಕೆ ಇಲ್ಲೇನು ಅಂತೀರಾ? ನಮ್ಮ ಸುತ್ತಲೂ ಎಲ್ಲೆಲ್ಲೂ ಪ್ರಶ್ನೆಗಳು ಎಂಬ ಬೆಟ್ಟಗಳಿವೆ. ಸಮಸ್ಯೆಗಳು ಗುಡ್ಡವಾಗಿ ನಿಂತಿವೆ. ಕೆಲವೊಂದು ತೊಂದರೆಗಳು ಸಣ್ಣ ಬೆಟ್ಟ-ಗುಡ್ಡಗಳಾಗಿರುತ್ತದೆ. ಹಲವೊಮ್ಮೆ ಪರ್ವತಶ್ರೇಣಿಯೇ ಆಗಿರುತ್ತದೆ. ಅಂಥ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಕೆಡವಲು ನಾವು ಇಲಿಗಳಾಗಬೇಕು. ವಿಷಯಗಳ ಬೆಟ್ಟವನ್ನು ಕೊರೆದು ಅರ್ಥೈಸಿಕೊಳ್ಳುವ ಯತ್ನಗಳು ದಿನನಿತ್ಯದಲ್ಲಿ ಆಗಬೇಕು. ಎಲ್ಲ ವಿಷಯವನ್ನು ಒಮ್ಮೆಲೇ ಆಪೋಶನ ತೆಗೆದುಕೊಂಡು ಕುಡಿದು ಬಿಡಲು ನಾವು ಜನ್ಹು ಮುನಿಯಲ್ಲ. ವಾತಾಪಿ ಜೀರ್ಣೋಭವ ಎಂದ ಅಗಸ್ತ್ಯರಲ್ಲ. ವಿಷಯಗಳ ಬೆಟ್ಟವನ್ನು ಕೊರೆದೂ ಕೊರೆದೂ ಅರ್ಥೈಸಿಕೊಳ್ಳಲು ನಾವ್ ಇಲಿಗಳಾಗಲೇಬೇಕು...

English summary
Small animal Mouse have a capacity of drilling large mountain. Like that we have to build our capacity to know and understand anything,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X