ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಇಹದ ಓಕೆ, 'ಪರ'ದ ವಿಷಯ ಸುಮ್ನೆ ಯೋಚಿಸದಿರಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ವಿಷಯ ಇಷ್ಟೇ... ಇಹ ಪರ ಎಂಬ ಮಾತು ಬಂದಾಗ, 'ಇಹ'ದ ಬಗ್ಗೆ ಸದ್ಯಕ್ಕೆ ಆಲೋಚಿಸಿ ಸಾಕು, 'ಪರ' ಲೋಕದ ಬಗ್ಗೆ ಆಮೇಲೆ ನೋಡ್ಕೊಂಡರಾಯ್ತು ಅಂತಲ್ಲಾ ಹೇಳಿದ್ದು. 'ಇಹ' ಬೇಕಿದ್ರೆ ಆಲೋಚಿಸಿ, ಆದರೆ ನಾನೀಗ ರಪರಪ ಅಂತ 'ಪ'ಗಳ ಬಗ್ಗೆ ಹೇಳೋ ಮಾತುಗಳನ್ನು ಆಲೋಚಿಸಿ. ಸುಮ್ನೆ 'ಪರಪರ' ಅಂತ ತಲೆ ಕೆರೆದುಕೊಳ್ಳಬೇಡಿ ಅಂತ ಹೇಳಿದ್ದು.

ಇಂದು ಅಲ್ಲಲ್ಲೇ ಪ್ರಶ್ನೆ ಕೇಳ್ತಾ ಹೋಗ್ತೀನಿ. ಬಹುಶಃ ಸಿಂಪಲ್ ಪ್ರಶ್ನೆಗಳೇ ಅಂದುಕೊಳ್ಳೋಣ... ಮೊದಲಿಗೆ ಮೂಲದೈವಗಳ ಬಗೆಗೇ ಆಲೋಚಿಸೋಣ. 'ಪರ'ಬ್ರಹ್ಮ ಅಂತೀವಿ. 'ಪರ 'ಶಿವ ಅಂತೀವಿ. 'ಪರ'ವಿಷ್ಣು ಅಥವಾ 'ಪರ'ನಾರಾಯಣ ಅಂತೆಲ್ಲಾ ಏಕೆ ಕರೆಯೋಲ್ಲ? ನೀವು ಹೇಗೆ ಕರೆಯುವಿರೋ, ನೀವು ಹೇಗೆ ಕರೆಯುವುದಿಲ್ಲವೋ ಅದು ಮುಖ್ಯವಲ್ಲ. ಆದರೆ ಕರೆಯುವಾಗ ಭಕ್ತಿ ಇದ್ದರೆ ಆ 'ಪರ'ಮಾತ್ಮ ಕಂಬದಿಂದಲೂ ಬಂದಾನು.
.

 ಶ್ರೀನಾಥ್ ಭಲ್ಲೆ ಅಂಕಣ; ಹೆಸರಿನಲ್ಲೇನಿದೆ ಬಿಡಿ... ಶ್ರೀನಾಥ್ ಭಲ್ಲೆ ಅಂಕಣ; ಹೆಸರಿನಲ್ಲೇನಿದೆ ಬಿಡಿ...

ಈಗ ಈ 'ಪರ' ಅಂದ್ರೇನು? ನೀವು ನನ್ನ 'ಪರ'ವೋ ಅಥವಾ ಅವರ 'ಪರ'ವೋ? ಎಂದು ಕೇಳಿದಾಗ ಯಾರ ಸೈಡ್ ಗೆ ನಿಮ್ಮ ಅಭಿಮತ ಅಥವಾ ಸಪೋರ್ಟ್ ಅಂತ ಆಗುತ್ತದೆ. ಶಾಲೆಗಳಲ್ಲಿ 'debate'ಗೆ ಒಂದು ವಿಷಯ ಕೊಟ್ಟು ಅದಕ್ಕೆ 'ಪರ' ಅಥವಾ 'ವಿರೋಧ' ಯಾವುದಾದರೂ ಆಯ್ದುಕೊಂಡು ಮಾತನಾಡಿ/ಬರೆಯಿರಿ ಅಂತ ಸ್ಪರ್ಧೆ ಇಟ್ಟಿರುತ್ತಾರೆ. ಇಲ್ಲೂ 'ಪರ' ಎಂದರೆ for ಅಥವಾ ಕೊಟ್ಟ ವಿಷಯಕ್ಕೆ ನಿಮ್ಮ ಸಪೋರ್ಟ್ ಇದೆ ಎಂಬಂತೆ. ಹೀಗಿದ್ದ ಮೇಲೆ 'ಪರ'ದೈವ ಎಂದರೇನು? 'ಪರ'ದೈವ ಅಂತ ಇದ್ದ ಮೇಲೆ ವಿರೋಧ ದೈವವೂ ಇದೆ ಅಂತಾನಾ? "ಪತಿಯೇ ಪರದೈವ" ಎಂದಾಗ ಆ ಪತಿ ನಮ್ಮ ಕಡೆ ಇರುವ ದೈವ ಅಂತಲೇ? 'ಪರ'ನಾರಿಪ್ರಿಯ ಪತಿಯ ಬಗ್ಗೆ ಒಲವು ಇಲ್ಲ ಎಂದುಕೊಂಡರೆ "ಪತಿಯೇ ವಿರೋಧದೈವ" ಎನ್ನಬಹುದೇ? ಜಾಸ್ತಿ ಇಲ್ಲ ಆಯ್ತಾ? ಆಗಾಗ ಮಾತ್ರ ಪ್ರಶ್ನೆಗಳನ್ನು ಕೇಳ್ತೀನಿ.

Usage Of Same Word In Different Aspects
.
"ಪರ" ಎಂದರೆ ಹೊರಗಿನವನು ಎಂದೂ ಆಗುತ್ತದೆ. ಈಗ ನನ್ನ ವಿಷಯವನ್ನೇ ತೆಗೆದುಕೊಂಡರೆ, ನನ್ನನ್ನು ಹೇಗೆ ಗುರುತಿಸುತ್ತೀರಿ? "ಪರ"ದೇಶೀ ಅಂತ ತಾನೇ? ಅರ್ಥಾತ್ "ಪರ"ದೇಶದವನು ಅಂತ ಅಷ್ಟೇ ಬೇರೇನೂ ಅಲ್ಲ!! ಆದರೆ ಕಿರಿಕ್ ಇರೋದೇ ಇಲ್ಲಿ. ಹೊರಗಿನ ದೇಶದವರಿಗೆ ನಾವು "ಪರ", ನಮ್ಮ ದೇಶದವರಿಗೂ ಕೆಲವೊಮ್ಮ ನಾವು "ಪರ". ಯಾರ "ಪರ" ಅಂತ ಹಲವೊಮ್ಮೆ ಅರ್ಥವಾಗದ ನಾವು, ಎಷ್ಟೋ ಸಾರಿ ತ್ರಿಶಂಕು ಮಹಾರಾಜನ "ಪರ" ಅನ್ನೋದಂತೂ ಸತ್ಯ.

 ಶ್ರೀನಾಥ್ ಭಲ್ಲೆ ಅಂಕಣ; ಒಂದೊಂದೂ ಬೆವರ ಹನಿ ಮುತ್ತಾಯ್ತದೋ... ಶ್ರೀನಾಥ್ ಭಲ್ಲೆ ಅಂಕಣ; ಒಂದೊಂದೂ ಬೆವರ ಹನಿ ಮುತ್ತಾಯ್ತದೋ...

"ಪರ" ರಾಜ್ಯದಿಂದ ಬಂದವರು ಬೆಂಗಳೂರನ್ನು ಹಾಳುಗೆಡವಿದ್ದಾರೆ ಎಂಬ ಅಳಲು ಎಲ್ಲೆಡೆ ಕೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಎಷ್ಟರಮಟ್ಟಿಗೆ ಎಂದರೆ, ನಮ್ಮೂರಿನಲ್ಲೇ ನಾವು "ಪರ"ಕೀಯರೇನೋ ಎಂಬಂತೆ! ಈ ಪರಕೀಯ ಎಂಬ ಪದ ಓದಿದಾಗಲೆಲ್ಲಾ ನನ್ನ ಮನಸ್ಸು "ಪರ key yeah" ಅಂತಲೇ ಓದುತ್ತೆ ! ನಿಮಗೂ ಹೀಗೆಯೇ ಅನ್ನಿಸುತ್ತೋ ಅಥವಾ ಇದು "ಪರ"ದೇಶಿಯ ತಲೆಹರಟೆಯ "ಪರ"ಮಾವಧಿಯೋ !!! ನೀವೇ ಹೇಳಿ...

"ಪರಕೀಯ"ದ ಬಗ್ಗೆಯೇ ಒಂದೆರಡು ಮಾತು ಹೇಳಿದರೆ, ಮನೆಯೊಳಗೇ ಇದ್ದವರಿಗೆ ಮನೆಯ ಬಾಗಿಲಿನ ಬೀಗದ ಅವಶ್ಯಕತೆ ಇದೆಯೇ? ಆ ಬೀಗಕ್ಕೆ ಕೀ/ಕೀಲಿಯ ಅವಶ್ಯಕತೆ ಇರುತ್ತದಾ? ಅಂದ್ರೆ "ಪರ"ರಿಗೆ ತಾನೇ ಅದು ಅವಶ್ಯಕ ಎನಿಸೋದು? yeah ಅಂದ್ರಾ? ಅದನ್ನೇ ನಾನು ಹೇಳಿದ್ದು "ಪರ key yeah" ಅಂತ.

Usage Of Same Word In Different Aspects

ಇಲ್ಲಿಂದ ನೇರವಾಗಿ ಗಣಿತಕ್ಕೆ ಹಾರೋಣ ಬನ್ನಿ. ಮೈನಸ್... ಒಂದು ಮೈನಸ್ ಅನ್ನು ಮತ್ತೊಂದು ಮೈನಸ್ ನಿಂದ ಗುಣಿಸಿದರೆ ಪ್ಲಸ್ ಆಗುತ್ತದೆ. ಹೌದೋ ಅಲ್ಲವೋ... ಹಾಗೆಯೇ ಒಂದು "ಪರ"ವನ್ನು ಮತ್ತೊಂದು "ಪರ"ದ ಜೊತೆ ಗುಣಿಸಿದರೆ "ಪರಪರ" ಆಗುತ್ತದೆಯೇ? ಆಗುತ್ತೋ ಬಿಡುತ್ತೋ, ಆದರೆ ಈ ಎರಡು ವಿಚಾರಕ್ಕೆ ಏನು ಸಂಬಂಧ ಅಂತ ಅರಿವಾಗದೇ ತಲೆಯನ್ನು ಪರಪರ ಕೆರೆದುಕೊಳ್ಳುವಂತೆ ಆಗುತ್ತಿದೆ ಅಂತ ಮಾತ್ರ ಸುಳ್ಳಾಡದಿರಿ ಆಯ್ತಾ?

 ಶ್ರೀನಾಥ್ ಭಲ್ಲೆ ಅಂಕಣ; ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ... ಶ್ರೀನಾಥ್ ಭಲ್ಲೆ ಅಂಕಣ; ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ...

ಆಗಾಗ ಸುಮ್ನೆ ಪ್ರಶ್ನೆ ಕೇಳ್ತೀನಿ ಅಂತ ಹೇಳಿದ್ದೀನಿ. ಹಾಗೆಯೇ ಪಾಲಿಸುತ್ತೀನಿ ಕೂಡ. ಇಲ್ಲವಾದರೆ ಮೆಚ್ಚನಾ "ಪರ"ಮಾತ್ಮನು !
.
ನಿಮ್ಮ ಮನೆಯನ್ನು ಗುಡಿಸುವ "ಪರ"ಕೆಯನ್ನು ನೀವು "ಪೊರಕೆ" ಅಂತ ಎನ್ನುತ್ತೀರೋ? "ಪರಕೆ" ಎನ್ನುತ್ತೀರೋ? ಬಹುಶಃ ಆಡುಭಾಷೆಯಲ್ಲಿ "ಪರ"ಕೆ ಎನ್ನುತ್ತಾರೆ ಎಂದುಕೊಳ್ಳುತ್ತೇನೆ. ಉತ್ತರ ಗೊತ್ತಿದ್ದರೆ ಹೇಳಿ ಓಕೆ? "ಪರ" ಚಿಂತೆ ನಮಗ್ಯಾಕೆ ಅಂತ "ಪರ" ಲೋಕಕ್ಕೆ ಇನ್ನೆರಡೇ ಹೆಜ್ಜೆ ಬಾಕಿ ಎನ್ನುವ ಹಾಗೆ ವೈರಾಗ್ಯ ಬೇಡ. ಉತ್ತರ ಗೊತ್ತಿದ್ದೂ ಹೇಳದೇ ಹೋಗೋದು "ಪರ"ಮ ಅಪರಾಧ.
.
ಪದರಂಗದ ಒಂದು ಪ್ರಶ್ನೆ ಹೀಗಿದೆ ಎಂದುಕೊಳ್ಳಿ "ಉಗುರಿನಿಂದ ಕೆರೆಯುವುದು (3)" ಅಂತ. ಮೂರಕ್ಷರವನ್ನು ತುಂಬ ಬೇಕು ಅಂತ ಗೊತ್ತಲ್ಲವೇ? ಉತ್ತರ ಏನು? ಸಿಂಪಲ್ "ಪರ"ಚು. ಪರಚು ಅಂದ್ರೆ ಕೆರೆಯುವುದು ಅಂತಾನಾ? ಕೆರೆಯುವುದು ಅಂತ ನಿಘಂಟು ಹೇಳುತ್ತದೆ, ನನ್ನನಿಸಿಕೆಯ ಪ್ರಕಾರ ಗೀರುವುದು ಅಂತ. ಕ್ರೋಧದಿಂದ ಉಗುರಿನ ಬಳಕೆ ಮಾಡುವುದು ಅಂತ ವಿಚಾರ ಬಂದಾಗ ಗೀರುವುದು, ಬಗೆಯುವುದು, ಸೀಳುವುದು ಎಂಬೆಲ್ಲಾ ಪದಗಳ ಬಳಕೆ ಮಾಡಲಾಗುತ್ತದೆ. ಹಲವೊಮ್ಮೆ ಯಾವ ಪದಬಳಕೆ ಮಾಡಬೇಕು ಎಂಬುದೂ ಕೆಲವರ "ಪರ"ದಾಟ ಆಗಿರುತ್ತದೆ. 'ಸಣ್ಣಗೆ ಕೆರೆತವಾದಾಗ ಉಗುರಿನಿಂದ ತನ್ನ ಚರ್ಮವನ್ನು ಸೀಳಿಕೊಂಡನು' ಎಂಬ ಪ್ರಯೋಗ ಭೀಕರ. ಗುಬ್ಬಿ ಮೇಲೆ "ಪರ"ಮಾಣು ಎಂಬಂತೆ ಆಗುತ್ತದೆ ಅಷ್ಟೇ !

ಒಂದು ಉಚ್ಛಸ್ಥಾನಕ್ಕೆ "ಪರ"ಮಪದ ಎನ್ನುತ್ತಾರೆ. ಜೀವನದಲ್ಲಿನ ಅಂಥ ಪರಮಪದ ಎಂದರೆ ಮೋಕ್ಷ ಅಂತ. ದಾಸರಪದದಲ್ಲಿ "ಪರ"ಮಪದ ಅಂತ ಬಂದಾಗ ಅದು ಮೋಕ್ಷದ ಬಗ್ಗೆ ಹೇಳುತ್ತಿದ್ದಾರೆ ಅಂತ. ಯಾವುದೇ ಒಂದು ಕಂಪನಿಯ ಮಾಲೀಕನ ಪೋಸ್ಟ್ ಕೂಡ ಆಯಾ ಸಂಸ್ಥೆಯ ಪರಮಪದವೇ ಸರಿ. ಆದರೆ ಮೋಕ್ಷವು ಒಬ್ಬರ ಜನ್ಮದ 'ಪರ'ಮಾವಧಿ ಮಟ್ಟ ಎಂದು ಅರ್ಥೈಸಿಕೊಳ್ಳಬೇಕು.
.
ಪ್ರೀತಿ-ಪ್ರೇಮದ ಒಂದು ಜಗತ್ತಿನಲ್ಲಿ "ಪರ"ಸ್ಪರ "ಪರ"ವಾನಗಿ ಅರ್ಥಾತ್ ಒಪ್ಪಿಗೆ ಇದ್ದಲ್ಲಿ ಅವರೀರ್ವರೂ ಒಬ್ಬರಲ್ಲೊಬ್ಬರು "ಪರ"ವಶರಾಗಿದ್ದಾರೆ ಎನ್ನಬಹುದು. ಸ್ನೇಹದ ಜಗತ್ತಿನಲ್ಲಿ 'ಪರ'ವಶರಾದಂತೆ ವೈರಿಪಡೆಯಲ್ಲೂ "ಪರ"ವಶರಾಗಬಹುದು ಅಲ್ಲವೇ? ಅರ್ಥಾತ್ 'ಪರ'ವಾನಗಿ ಇಲ್ಲದೇ ಗಡಿ ದಾಟಿದಾಗ ಹೀಗಾಗುತ್ತದೆ ಅಲ್ಲವೇ?
.
"ಪರ"ನಿಂದೆ ಮಹಾಪಾಪ. "ಪರ" ಎಂದಾಗ ಒಮ್ಮತ ಸೂಚಕವೂ ಆಗಬಹುದು ಅಥವಾ "ಬೇರೆ"ಯವರ ಬಗ್ಗೆ ಅಂತ ಆಗಬಹುದು. "ಪರದೇಶಿ" ಎಂದರೆ ಬೇರೆ ದೇಶದವರು ಎನ್ನುವ ಬದಲು ಸ್ವಂತದೇಶದವ ಅಂತ ಎನ್ನಬಹುದು ಅಲ್ಲವೇ? ಇದೇ ದಿಶೆಯಲ್ಲಿ ಆಲೋಚಿಸಿದಾಗ "ಪರ"ನಿಂದೆ ಎಂದರೆ ಸ್ವ-ನಿಂದನೆ ಎಂದೂ ಆಗಬಹುದೇ? "ಪರ" ಚಿಂತೆ ನಮಗ್ಯಾಕೆ ಎಂದಾಗ ನಮ್ಮ ಬಗ್ಗೆ ನಾವೇ ಚಿಂತಿಸದೇ ಇದ್ದರೆ ಇನ್ಯಾರು ಆಲೋಚಿಸುತ್ತಾರೆ?

ಸಿಕ್ಕಾಪಟ್ಟೆ confuse ಆಗ್ತಾ ಇದೆ! ಈ "ಪರ" ಅಂದ್ರೆ ನಿಜವಾಗ್ಲೂ ಏನು? ನನ್ನ ಅನುಮಾನದ "ಪರ"ದೆ ಸರಿಸುವಿರಾ?

English summary
Some words have many meaning in it. The usage of words explore different aspects,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X