• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಕೃತಿಯೇ ಮೂರ್ತಿವೆತ್ತಂಥಾ ನಾಡು, ನಾ ಕಂಡ ಮೆಕ್ಸಿಕೋ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ನಾನು ಮೆಕ್ಸಿಕೋ ನೋಡಿ ಬಂದೆ ಎಂದರೆ ಸಿಕ್ಕಾಪಟ್ಟೆ ಉತ್ಪ್ರೇಕ್ಷೆ ಎನ್ನಬಹುದು. ಮೆಕ್ಸಿಕೋ ಎಂಬ ದೇಶದ ಒಂದು ಸಣ್ಣ ಭಾಗ ನೋಡಿ ಬಂದೆ ಎನ್ನುವುದು ಸರಿಯಾದ ಮಾತು. Cancun ಎಂಬ peninsula (ಪರ್ಯಾಯ ದ್ವೀಪ) ನೋಡಿ ಬಂದೆ ಎನ್ನುವುದು ಸರಿಯಾದ ಮಾತು.

ವರ್ಷಾ೦ತ್ಯದ ರಜೆಯನ್ನು ಸವಿಯಲು, ವರ್ಷದುದ್ದಕ್ಕೂ ಸೆಣಸಾಡುವ ದಿನಗಳಿಂದ ಕೊಂಚ ವಿರಾಮ ಪಡೆಯಲು, ನಾವು ಆಯ್ದುಕೊಂಡಿದ್ದು Cancun. ಕೊನೆಯ ನಿಮಿಷದಲ್ಲಿ ನಿರ್ಧಾರ ಮಾಡಿ ಜೈ ಅಂತ ಹೊರಟರೂ ಪ್ರವಾಸ ಪ್ರಯಾಸವಾಗದೆ ಸೊಗಸಾಗೇ ಆಯಿತು. ಸರಿ, ಏನಿದೆ ಈ Cancun ಮತ್ತು ಸುತ್ತಮುತ್ತಲಿನ ಜಾಗಗಳಲ್ಲಿ? ಸ್ವಲ್ಪ ಮಟ್ಟಿಗೆ ಎಲ್ಲವನ್ನೂ ಅನುಭವಿಸಿ ಬರೋಣ ಬನ್ನಿ.

ಮಾಯಾನಗರಿ 'ನ್ಯೂಯಾರ್ಕ್'ನಲ್ಲೊಂದು ವಾರಾಂತ್ಯ

ಮೊದಲ ಅನುಭವ ಎಂದರೆ ಇಲ್ಲಿನ ಜನ 'ಮೆಕ್ಸಿಕೋ' ಎಂಬುದನ್ನು 'ಮೆಹಿಕೋ' ಎನ್ನುತ್ತಾರೆ. Jalapeno ಎಂಬುದನ್ನು ಹಲಪಿನೋ ಎನ್ನುವುದು ಅನುಭವಕ್ಕೆ ಬಂದು ಹಲವು ಕಾಲವೇ ಕಳೆದಿದ್ದರೂ ಈ 'ಮೆಹಿಕೋ' ಹೊಸತು.

Cancun'ನಲ್ಲಿ ನಾವಿದ್ದ ಹೋಟೆಲ್'ನಿಂದ ಅನತಿ ದೂರ ಸಾಗಿದರೆ 'ಹೋಟಲ್ ಜೋನ್' (hotel zone) ಎಂಬ ರಾಜ ಬೀದಿ... ಅತ್ಯಂತ ವೈಭವಯುಕ್ತ ರೆಸಾರ್ಟ್'ಗಳ ಸರಣಿ. ಈ ಬೀದಿಯಲ್ಲಿ ಬರೋಬ್ಬರಿ ನೂರು ಹೋಟಲ್/ರೆಸಾರ್ಟ್'ಗಳಿವೆ. ಎಷ್ಟೇ ಆಗಲಿ Cancun ಒಂದು ಪ್ರೇಕ್ಷಣೀಯ ತಾಣ ತಾನೇ? ಇರಲೇಬೇಕು ಅಂತೀರಾ?

Cancun'ನಲ್ಲಿ ನಾ ಕಂಡಂತೆ ಎತ್ತೆತ್ತ ನೋಡಿದರತ್ತ ಹಸಿರೋ ಹಸಿರು. ಪ್ರಕೃತಿಯೇ ಮೂರ್ತಿವೆತ್ತಂತಾ ನಾಡು. ರಾಜ ಬೀದಿಯ ಮೀಡಿಯನ್ ಮೇಲೆ ಸಾಲಾಗಿ ತೆಂಗಿನ ಮರಗಳು ಮತ್ತಿತರ ಮರಗಳು. ಸಾಲುಮರದ ತಿಮ್ಮಕ್ಕನ ನೆನಪಾಯ್ತು. ಆ ರೆಸಾರ್ಟ್'ನ ಮುಂದೆ ನಿಂತು ಎದುರು ನೋಡಿದರೆ ನಯನ ಮನೋಹರ ಸಮುದ್ರ. ನೀಲಾಕಾಶವನ್ನು ತನ್ನೊಡಲಲ್ಲೇ ತುಂಬಿಕೊಂಡಿದೆಯೇನೋ ಎನಿಸುವ ಸಮುದ್ರದ ನೀರನ್ನು ಕಾಣಲು ಎರಡು ಕಣ್ಣು ಸಾಲದು. Turquoise ಬಣ್ಣ ಯಾವ ರೀತಿ ಇರುತ್ತದೆ ಎಂಬುದನ್ನು ಇಲ್ಲಿ ಕಾಣಬಹುದು.

ಸವಿಯುವ ಗುರಿಯೊಂದಿಗೆ ಸಾಗಲಿ ಬದುಕಿನ ಓಟ!

ಮಧ್ಯಾಹ್ನ Cancun ತಲುಪಿ ಹೋಟೆಲ್ ರೂಮು ಸೇರಿ, ಕಡಿಮೆ ನಿದ್ದೆಯಲ್ಲಿ ಭೂತರಾಗಿ ಕಾಣುತ್ತಿದ್ದ ನಾವು ಶುಚಿರ್ಭೂತರಾಗಿ, ಸ್ಥಳೀಯ ಮಾಲ್ ಮತ್ತು ಬೀಚ್'ಗೆ ಭೇಟಿ ನೀಡಿದೆವು. ಶುಚಿತ್ವ, ವಿನ್ಯಾಸಗಳ ವೈಭವ, ಅಗಾಧವಾದ ಸಮುದ್ರ ಎಲ್ಲದರ ಅನುಭವ ಆಯಿತು.

ಮರುದಿನದ ಪಯಣ ಚಿಚೆನ್ ಇಟ್ಜ್ (chichen itza) ಕಡೆ. ಕಳೆದ ಹತ್ತು ವರ್ಷಗಳಿಂದ ಯುನೆಸ್ಕೊ'ರಿಂದ ಮಾನ್ಯತೆ ಪಡೆದು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿ ಎರಡನೆಯ ಸ್ಥಾನದಲ್ಲಿ ರಾರಾಜಿಸುತ್ತಿದೆ Chichen Itza. ಮಾಯನ್ ಜನಾಂಗದ ಕುರುಹಾಗಿ ಉಳಿದಿರುವ ಪುರಾತನ ರಚನೆಗಳು ವರ್ಷದಿಂದ ವರ್ಷಕ್ಕೆ ತನ್ನತ್ತ ಹೆಚ್ಚು ಹೆಚ್ಚು ಟೂರಿಸ್ಟ್'ಗಳನ್ನು ಆಕರ್ಷಿಸುತ್ತಿದೆ. ಐದು ಸಾವಿರ ವರ್ಷದ ಚರಿತ್ರೆ ಉಳ್ಳ ಈ ರಚನೆಗಳು ಇಂದು ಎಷ್ಟೋ ಮಂದಿ ಸ್ಥಳೀಯರಿಗೆ ಊಟ ವಸತಿ ಒದಗಿಸಿದೆ.

ಅದ್ಬುತ ರಚನೆಗಳು ಅಂದಿನ ಉತ್ಕೃಷ್ಟ ಮಂದಿಯ ದೇವಸ್ಥಾನ ಅಥವಾ ವಾಸಸ್ಥಾನ. ಸುತ್ತುಮುತ್ತಲಿನ ಒಂದಷ್ಟು ಜಾಗ ಸಮಾಜದ ಹಿರಿಯರು ಎನಿಸಿಕೊಂಡವರಿಗೆ ಮಾತ್ರ. ಊರಾಚೆಗಿನ ವಸತಿ ಸಾಮಾನ್ಯ ಜನರಿಗೆ ಎಂದಾಗಿತ್ತು. ಅಂದಿನಿಂದಲೂ ಇಂದಿನವರೆಗೆ ಬದಲಾಗದೆ ಉಳಿದಿರುವುದು ಎಂದರೆ ಈ ತಾರತಮ್ಯ.

ಸುಣ್ಣದಕಲ್ಲಿನ ರಚನೆಗಳಿಗೆ ನಾಲ್ಕು ದಿಕ್ಕಿನಲ್ಲೂ ಮೆಟ್ಟಿಲುಗಳಿವೆ. ಎಲ್ಲವೂ ಸೇರುವುದು ಮೇಲಿನ ಒಂದು ಕೋಣೆಗೆ. ಅದು ಧರ್ಮಗುರುವಿನ ಸ್ಥಾನ. ಆ ಮೆಟ್ಟಿಲಿನ ವಿನ್ಯಾಸ ಎಂಥದ್ದು ಎಂದರೆ ನೆಟ್ಟಗೆ ಏರುತ್ತಾ ಹೋದರೆ ಹಿಂದಕ್ಕೆ ವಾಲಿ ಬೀಳಬಹುದಾದ ಅಪಾಯ ಇರುವಂಥದ್ದು. ಎರಡು ಮೆಟ್ಟಿಲುಗಳ ನಡುವಿನ ಅಂತರ ಒಮ್ಮೆ ಎತ್ತರವಿದ್ದರೆ ಮತ್ತೊಮ್ಮೆ ತಗ್ಗು. ಇಂದಿಗೂ ಸಮವಾಗಿರುವುದಿಲ್ಲ. ಮೇಲಿನ ಕೊನೆಗೆ ಮುಖ ತೋರದೆ ಭುಜವನ್ನು ತೋರಿ ಮೆಟ್ಟಿಲೇರಬೇಕು (sideways). ಇನ್ನೊಂದರ್ಥದಲ್ಲಿ ಆ ಧರ್ಮಗುರುವನ್ನು ನೋಡಲು ಬಂದವರು ನೇರವಾಗಿ ಆತನ ಮುಖ ನೋಡುವಂತಿಲ್ಲ.

ಇನ್ನೂ 'ಘಂಟೆ'ಯನ್ನು ಕಂಡುಹಿಡಿದಿರಲಿಲ್ಲವೋ ಏನೋ, ಧರ್ಮಗುರುವಿನ ದರ್ಶನ ಪಡೆಯಲು ಮಂದಿ ಬರುವಾಗ, ದೇವಸ್ಥಾನದ ಕೆಳಭಾಗದ ಮೆಟ್ಟಿಲಿನ ಬಳಿ ಒಂದಷ್ಟು ಜನ ನಿಂತು ಒಂದು ಲಯದಲ್ಲಿ ಚಪ್ಪಾಳೆ ತಟ್ಟಿದಾಗ ಆ ರಚನೆಯಿಂದ kestrel ಪಕ್ಷಿಯ ಕೂಗಿನಂಥಾ ದನಿ ಹೊರಡುತ್ತದೆ. ಇಂದಿಗೂ ಇದೆ ಎಂದರೆ ಅದೇ ಸೋಜಿಗ. ದನಿ ಕೇಳಿದ ಗುರು ಆಗ ಅಲ್ಲಿ ಕಾಣಿಸಿಕೊಳ್ಳುತ್ತಾರೆ.

ದೈವದತ್ತವಾದ ಮುಖವನ್ನು ಎಲ್ಲರಿಗೂ ತೋರಿ ಅಪವಿತ್ರ ಮಾಡಬಾರದು ಎಂದೇ ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸುತ್ತಿದ್ದರು ಎಂದು ಗೈಡ್ ಹೇಳಿದ. ಈ ದಿನಗಳಲ್ಲಿ ನಾವು ಮೇಕಪ್ ಮಾಡಿಕೊಳ್ಳುವುದೂ ಇದೆ ಕಾರಣಕ್ಕಾಗಿ, ಅಲ್ಲವೇ?

ಅಲ್ಲೊಂದು ದೊಡ್ಡ ಮೈದಾನ. ಆ ದಿನಗಳಲ್ಲಿ ಒಂದು ಆಟ ಇತ್ತಂತೆ. ಆಟದಲ್ಲಿ ಗೆದ್ದವ ದೈವಕ್ಕೆ ಪ್ರಿಯನಾದ ಎಂದು ಘೋಷಿಸಿದ ಮೇಲೆ ಆಟದಲ್ಲಿ ಸೋತವನು ತನ್ನ ಖಡ್ಗದಿಂದ ಗೆದ್ದವನ ಶಿರ ಕತ್ತರಿಸಬೇಕು! ಆಟದಲ್ಲಿ ಗೆಲ್ಲುತ್ತೀರಾ?

ಮಾಯನ್ ಜನಾಂಗದಲ್ಲಿ ಮದುವೆ ಎಂಬುದು ಇರಲಿಲ್ಲವಂತೆ. ಹೆಣ್ಣು ಭೋಗದ ವಸ್ತುವಾಗಿದ್ದು ಹೆರುವುದು, ಅಡುಗೆ ಮಾಡುವುದು ಬಿಟ್ಟರೆ ಆಕೆಗೆ ಬೇರೆ ಕೆಲಸವಿಲ್ಲವಾಗಿತ್ತಂತೆ. ಇಂದಿಗೂ ಜಗತ್ತಿನ ಎಷ್ಟೋ ಕಡೆ ಮಾಯನ್ ಜನಾಂಗದ ರೀತಿ ಬದುಕುತ್ತಿದ್ದಾರೆ ಎನಿಸದೇ?

ಬೀದಿಬದಿಯ ವ್ಯಾಪಾರಸ್ಥರು ಥರಾವರಿ ವಸ್ತುಗಳನ್ನು ಮಾರುತ್ತಿದ್ದರು. ಒಂದೇ ರೀತಿಯ ಅಂಗಡಿಗಳು ಸಾಲುಸಾಲಾಗಿ ಇದ್ದವು. ಎಲ್ಲರಿಗೂ ಹೇಗೆ ವ್ಯಾಪಾರವಾಗುತ್ತದೆ ಎಂಬುದೇ ನನ್ನ ಪ್ರಶ್ನೆಯಾಗಿತ್ತು. ಬಿಡಿ, ಆದರೆ ನಾವು ಅಂಗಡಿಯ ಮುಂದೆ ಹಾದು ಹೋಗುವಾಗ ಆದ ಅನುಭವ ಮಾತ್ರ ವಿಶಿಷ್ಟ. ನಾವು ಭಾರತೀಯರು ಎಂದು ನಮ್ಮನ್ನು ನೋಡಿ ಅರಿತ ಕೂಡಲೇ 'ಮೋದಿ price... Dollar - 65 rupees', 'ನಮಸ್ತೇ' ಎಂದೆಲ್ಲಾ ಕೂಗಿ ತಮ್ಮತ್ತ ನಮ್ಮ ಗಮನ ಸೆಳೆಯುತ್ತಿದ್ದರು.

December 21, 2012'ರಂದು ಪ್ರಳಯವಾಗುತ್ತದೆ ಎಂದು ನಂಬಿ ಜಗತ್ತಿನಾದ್ಯಂತ ಹಲವಾರು ಜನರು ಪ್ರಳಯ ವೀಕ್ಷಿಸಲು ಇಲ್ಲಿ ನೆರೆದಿದ್ದರಂತೆ.

ಹೊರನೋಟಕ್ಕೆ ಎಲ್ಲವೂ ಸತ್ಯ ಸುಂದರವೇ. ಇಲ್ಲೊಂದು ಗಂಭೀರ ಸಮಸ್ಯೆ ಇದೆ. Chichen Itza'ದ ಸುತ್ತಲಿನ ಪ್ರಾಂಗಣದಲ್ಲಿ ಎಲ್ಲಿಯೂ ವ್ಯಾಪಾರಸ್ಥರು ಇರುವ ಹಾಗಿಲ್ಲ ಎಂಬ ನಿಯಮ ಇದ್ದರೂ, ಭ್ರಷ್ಟಾಚಾರದ ರೂಪದಲ್ಲಿ ನಿಯಮವನ್ನು ಗಾಳಿಗೆ ತೂರಲಾಗಿದೆ. ಹೀಗೆಯೇ ಮುಂದುವರೆದರೆ, ಗೈಡ್ ಹೇಳುವ ಪ್ರಕಾರ UNESCO'ದವರ ಮರುಪರಿಶೀಲನೆಯಲ್ಲಿ chichen itza ಏಳರ ಪಟ್ಟಿಯಿಂದ ಹೊರಗೆ ಬೀಳುವ ಅಪಾಯ ಇದೆ. ಆಗ ಟೂರಿಸ್ಟ್'ಗಳ ಸಂಖ್ಯೆ ಕಡಿಮೆಯೂ ಆಗಬಹುದು. ಅರ್ಥಾತ್ ಟೂರಿಸ್ಟ್'ಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರು?

ಉತ್ತುಂಗದಲ್ಲಿದ್ದಾಗ ತಾನೇ ಶ್ರೇಷ್ಠ ಎಂದು ಬೀಗಿ ಶ್ರೇಷ್ಠತೆ ಕಾಪಾಡಿಕೊಳ್ಳದಿದ್ದರೆ ಉದುರೋದು ಎಷ್ಟರಲ್ಲಿದೆ, ಅಲ್ಲವೇ?

ದಿನ 3 - ಸ್ಥಳೀಯ sightseeing. El Meco - archaeological site'ಗೆ ಭೇಟಿ. ಎಂತೆಂಥಾ 'ಉಡ'ಗಳು? ಮೊದಲೇ ನಾನು ನಾಡಿನ ಬ್ರ್ಯಾಂಡು. ಬೆಚ್ಚಿಬೀಳುವ ಹಾಗಾಯ್ತು! ಆದರೂ ಹೊರಗೆ ಇರುವಾಗಲೆಲ್ಲ ಪಕ್ಷಿಗಳ ಕಲರವ ಮಾತ್ರ ಸಖತ್ತಾಗಿತ್ತು. ಮೆಕ್ಸಿಕನ್ ಎಳನೀರು ಕುಡಿಯುವ ಸೌಭಾಗ್ಯ ಸಿಕ್ಕಿತು. ಟಕೀಲಾ (Tequila) ಹೇಗೆ ಮಾಡುತ್ತಾರೆ ಎಂಬ ಜ್ಞಾನ ಸಿಕ್ಕಿತು. La palapa beach, Playa El Niño beach, Puerto Morelos ನಾವು ಕಂಡ ಕೆಲವು ಸ್ಥಳಗಳು.

ನಾಲ್ಕನೆಯ ದಿನ ನಮ್ಮ ಪಯಣ ತುಲುಮ್ (Andrea's Tulum) ಕಡೆ. ಎಲ್ಲ ಕಡೆ ಈ ರಚನೆಗಳನ್ನು archaelogical ruins ಎಂದೇ ಕರೆದರೂ ಈ ಸಾರಿಯ ನಮ್ಮ ಗೈಡ್ ದಯವಿಟ್ಟು ruins ಎನ್ನಬೇಡಿ 'archaelogical remains' ಅನ್ನಿ ಎಂದರು! ನಮ್ಮ ನಾಡಿನ ಶಿಲ್ಪಕಲೆಗಳು ಮನಸ್ಸಿಗೆ ಬಾರದೇ ಇರಲಿಲ್ಲ.

Cenote (ಸೆನೋಟೇ) ಎಂಬ ಅದ್ಭುತವನ್ನು ಕಂಡೆವು. ಸುಣ್ಣದಕಲ್ಲಿನ ನೆಲ, ಹಲವು ಕಡೆ ನೆಲ ಕುಸಿದು ದೊಡ್ಡ ಗುಂಡಿಯಾಗಿ ನೆಲದ ಕೆಳಗಿನ ನೀರನ್ನು ತೋರುತ್ತದೆ. ಅತೀ ಅಗಲವಾದ ಮತ್ತು ಆಳವಾದ ಈ Cenote'ಗಳು ರುದ್ರರಮಣೀಯ. ಇಂಥಾ Cenote'ಗಳಲ್ಲಿ ಒಂದರಲ್ಲಿ ವಾರ್ಷಿಕ 'ರೆಡ್ ಬುಲ್' ಕಾಂಪಿಟಿಷನ್ ಕೂಡ ನೆಡೆಯುತ್ತದೆ. ಜಗತ್ತಿನಾದ್ಯಂತ ಈಜುಗಾರರು ಇದರಲ್ಲಿ ಭಾಗವಹಿಸುತ್ತಾರೆ. ನಾವು ಕಂಡ ಒಂದು ಸೆನೋಟೆ, ನಿಂತ ನೆಲದಿಂದ 85 ಅಡಿ ಕೆಳಗೆ ಇದ್ದು, ಆ ನೀರಿನ ಆಳ 130 ಅಡಿ ಇದೆ. ಆ 85 ಅಡಿ ನೀರಿಗೆ ಹಾರುವಾಗ ಎಷ್ಟರ ಮಟ್ಟಿಗೆ flips ಮಾಡುತ್ತಾರೆ ಎಂಬುದೇ ಈ ಸ್ಪರ್ಧೆಯ ಮಹತ್ವ. ಒಲಂಪಿಕ್ಸ್'ನಲ್ಲಿ ಕಂಡಿರುವ ನಿಮಗೆ ಹೆಚ್ಚೇನೂ ಹೇಳಲಾರೆ.

ಐದನೆಯ ದಿನ ಮರಳಿ ಗೂಡಿಗೆ.

ಈ ನಾಲ್ಕೈದು ದಿನಗಳಲ್ಲಿ ಸಾಮಾನ್ಯವಾಗಿ ಕಂಡಿದ್ದು, ಕೇಳಿದ್ದು ಎಂದರೆ ಸುಣ್ಣದಕಲ್ಲು, ಪಾತಾಳ ಗುಂಡಿ, ಮೆಕ್ಸಿಕನ್ ಊಟ, ಥಳುಕು, ಹರುಕು ಆಂಗ್ಲ, ಗಾಢವಾದ ಸ್ಪಾನಿಷ್ ಭಾಷೆ ಇತ್ಯಾದಿ. ಅಲ್ಲಿ ಹಾದುಹೋಗುವಾಗ ಸಾಮಾನ್ಯವರ್ಗದವರ ಮನೆ ಮತ್ತು ಜೀವನ ಕಣ್ಣಿಗೆ ಬಿದ್ದಿದ್ದು ನಿಜ. ಕೆಲವು ಜಾಗ ಕಂಡಾಗ ಊರು ಎಂದ ಮೇಲೆ ಕೊಳಗೇರಿ ಇರಲೇಬೇಕಲ್ಲವೇ ಅನ್ನಿಸಿತು.

ಇದು ಯಾವ ದೇಶಕ್ಕೂ ಹೊರತಲ್ಲ. ದೊಡ್ಡ ಮನೆಯಲ್ಲಿರುವವರು ದೊಡ್ಡ ಜನರಲ್ಲ. ಕೊಳಗೇರಿಯಲ್ಲಿ ಜೀವನ ಮಾಡುವವರು ಕೆಡುಕರಲ್ಲ ಎಂಬ ಟ್ಯಾಗ್ ಲೈನ್'ನೊಂದಿಗೆ ಹೊಸವರ್ಷ ಬರಮಾಡಿಕೊಳ್ಳೋಣವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cancún is a city in southeastern Mexico on the northeast coast of the Yucatán Peninsula in the Mexican state of Quintana Roo. It is an important tourist destination in Mexico. Travelogue by Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more