ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳುವ ಭೂಮಿಯನ್ನು ಕಾಪಾಡುವ ದೈವಕ್ಕೆ ವಂದನೆ, ಧನ್ಯವಾದಗಳು

|
Google Oneindia Kannada News

2018ರ ಸಾಲಿನ thanksgiving ಹಬ್ಬ ಇಂದು. ಅಮೇರಿಕಾದಲ್ಲಿ ಮತ್ತು ಕೆನಡಾದಲ್ಲಿ ಎಲ್ಲೆಡೆ ರಜೆ. Thanksgiving ಎಂದರೆ ಒಬ್ಬರು ಮತ್ತೊಬ್ಬರಿಗೆ ಧನ್ಯವಾದ ಹೇಳುವುದು ಅಂತ. Giving Thanks is Thanksgiving.

ಕೆನಡಾದಲ್ಲಿ ಅಕ್ಟೋಬರ್ ತಿಂಗಳ ಎರಡನೆಯ ಸೋಮವಾರದಂದು Thanksgiving ಆಚರಿಸಿದರೆ, ಅಮೇರಿಕಾದಲ್ಲಿ ನವೆಂಬರ್ ತಿಂಗಳ ನಾಲ್ಕನೆಯ ಗುರುವಾರ thanksgiving. ಅರ್ಥಾತ್ ಇಂದು! ಮೊದಲಿಗೆ ಈ ಹಬ್ಬದ ಉದ್ದೇಶ, ಪ್ರಾಮುಖ್ಯತೆ, ಸಂಭ್ರಮ, ಊಟ ಇತ್ಯಾದಿ ವಿಶೇಷಗಳ ಬಗ್ಗೆ ಕೊಂಚ ತಿಳಿಯೋಣ.

1619ರಲ್ಲಿ ವರ್ಜೀನಿಯಾ ರಾಜ್ಯಕ್ಕೆ ಬಂದಿಳಿದ ಮೂವತ್ತೆಂಟು ಮಂದಿ ಆಂಗ್ಲರು, ತಾವು ಬಂದಿಳಿದ ಶುಭದಿನವನ್ನು ಮತ್ತು ಬೆಳೆದ ಬೆಳೆಯ ನೀಡಿದ ದೈವಕ್ಕೆ ವಂದಿಸುವ ಧಾರ್ಮಿಕ ವಂದನೆಯ ಸಲುವಾಗಿ ಆರಂಭಿಸಿದ ಹಬ್ಬವನ್ನು Thanksgiving ಎಂದು ಕರೆದರು ಎಂದು ಹೇಳಲಾಗಿದೆ. ಮತ್ತೊಂದು ಕಡೆ 1621ರಲ್ಲಿ ನ್ಯೂ ಇಂಗ್ಲೆಂಡ್ನಲ್ಲಿ ನಡೆದ plymouth ಹಬ್ಬ ಮತ್ತು ಉತ್ತಮ ಬೆಳೆ ನೀಡಿದ ದೈವಕ್ಕೆ ವಂದಿಸುವ ಹಬ್ಬ ಈ Thanksgiving ಹಬ್ಬದ ಮೂಲ ಎಂದಿದ್ದಾರೆ. ಸ್ವಲ್ಪ ಮಟ್ಟಿಗೆ ಅಲ್ಲಲ್ಲೇ ಜಿಜ್ಞಾಸೆ ಇಂದಿಗೂ ಇದೆ.

ಜಿಜ್ಞಾಸೆಯನ್ನು ಪಕ್ಕಕ್ಕೆ ಇಟ್ಟು, ಸಂಭ್ರಮದ ಹಿಂದಿನ ಉದ್ದೇಶ ಮಾತ್ರ ತೆಗೆದುಕೊಂಡಲ್ಲಿ ಅದು "ದಿನನಿತ್ಯದ ಜಂಜಾಟದಲ್ಲಿ ತಮ್ಮ ಮತ್ತು ಮಕ್ಕಳ ಸುಭದ್ರತೆಯನ್ನು, ಉಳುವ ಭೂಮಿಯನ್ನು, ಬಾಂಧವ್ಯಗಳನ್ನು, ನಂಬಿಕೆಗಳನ್ನು ಕಾಯ್ವ, ಕಾಪಾಡುತ್ತಿರುವ ದೈವಕ್ಕೆ ವಂದನೆ ಸಲ್ಲಿಸುವ ದಿನ" ಎಂದು ಹೇಳಬಹುದು. ಇಲ್ಲಿ ದೈವ ಎಂದು ಹೇಳಿರುವುದರಿಂದ ಜಾತಿ, ಮತಗಳಿಂದ ಬಂಧಿತವಾಗದೇ ಯಾರು ಬೇಕಾದರೂ ಆಚರಣೆ ಮಾಡಬಹುದು ಎಂಬುದಾಗಿಯೂ ಅರ್ಥೈಸಿಕೊಳ್ಳಬಹುದು. ನಮ್ಮಲ್ಲೂ ಇಂಥಾ ಹಬ್ಬಗಳಿಗೆ, ಉದ್ದೇಶಗಳಿಗೆ ಬರವಿಲ್ಲ.

thanksgiving ಹಬ್ಬದ ಚರಿತ್ರೆ

thanksgiving ಹಬ್ಬದ ಚರಿತ್ರೆ

ಅಮೇರಿಕಾದ ಪೂರ್ವ ಭಾಗದಲ್ಲಿ Mayflower ಎಂಬ ಹಡಗಿನಲ್ಲಿ ಯಾತ್ರಿಕರು ಬಂದಿಳಿದಾಗ ಅದು ಭಯಂಕರ ಚಳಿಯ ದಿನಗಳು. ಆ ಚಳಿಯನ್ನು ತಾಳಲಾರದೆ ಎಷ್ಟೋ ಮಂದಿ Pneumonia ಕಾಯಿಲೆಗೆ ತುತ್ತಾಗಿದ್ದರು. ಬಂದಿಳಿದವರನ್ನು ಉಪಚರಿಸಿ, ಊಟ ವಸತಿ ನೀಡಿ, ಮುಂದೆ ಉಳುಮೆ ಮಾಡಿ ಬೆಳೆಯನ್ನು ಬೆಳೆಯುವುದನ್ನೂ ಕಲಿಸಿದವರು, ಅಮೇರಿಕಾದ ಮೂಲ ನಿವಾಸಿಗಳಾದ ಇಂಡಿಯನ್ಸ್. ಈ ಕೃತಜ್ಞತೆಯ ಸೂಚಕವೇ thanksgiving ಹಬ್ಬ ಎಂಬುದು ಚರಿತ್ರೆ ಹೇಳುತ್ತದೆ.

ಅಬ್ರಹಾಂ ಲಿಂಕನ್ thanksgiving ಹಬ್ಬವನ್ನು ರಜಾದಿನವೆಂದು ಘೋಷಿಸಿದರು

ಅಬ್ರಹಾಂ ಲಿಂಕನ್ thanksgiving ಹಬ್ಬವನ್ನು ರಜಾದಿನವೆಂದು ಘೋಷಿಸಿದರು

ಅಲ್ಲಿಂದ ಮುಂದಾನೊಂದು ಕಾಲದಲ್ಲಿ ಅಂದಿನ ಅಧ್ಯಕ್ಷ ಅಬ್ರಹಾಂ ಲಿಂಕನ್ ಈ thanksgiving ಹಬ್ಬವನ್ನು ರಜಾದಿನವೆಂದು ಘೋಷಿಸಿದರು. ಒಂದು ಹಬ್ಬ ಎಂದ ಮೇಲೆ ಅದಕ್ಕೊಂದು ಸಂಭ್ರಮ ಇರಲೇಬೇಕು ಅಲ್ಲವೇ? ಅಮೇರಿಕಾದಲ್ಲಿನ macy's ಎಂಬ ಬೃಹತ್ ಮಳಿಗೆಯ ವತಿಯಿಂದ ಒಂದು ಪೆರೇಡ್ 1921ರಲ್ಲಿ ಆರಂಭವಾಯಿತು. ವರ್ಷಾನು ವರ್ಷ ಪೆರೇಡ್'ನ ವೀಕ್ಷಿಸಲು ಬರುವ ಜನರ ಸಂಖ್ಯೆ ಹೆಚ್ಚುತ್ತಲೇ ಇದ್ದು ಇಂದಿಗೂ ನಡೆದುಕೊಂಡು ಬಂದಿದೆ. ಇನ್ನೆರಡೇ ವರ್ಷದಲ್ಲಿ ನೂರು ವರ್ಷಗಳ ಸಂಭ್ರಮವನ್ನೂ ಕಾಣಲಿದೆ. ಕೇವಲ ನ್ಯೂಯಾರ್ಕ್'ನ 34th streetಗೆ ಮಾತ್ರ ಸೀಮಿತವಾಗದೆ, ಇಂಥವೇ ಸಂಭ್ರಮದ ಪೆರೇಡ್'ಗಳು ಬೇರೆಡೆಯೂ ಇದೆ.

thanksgiving ಡಿನ್ನರ್ ಬಗ್ಗೆ

thanksgiving ಡಿನ್ನರ್ ಬಗ್ಗೆ

ಇನ್ನು thanksgiving ಡಿನ್ನರ್ ಬಗ್ಗೆ ಒಂದೆರಡು ಮಾತು. ಈ ಹಬ್ಬದಂದು ಅಪ್ಪ ಅಮ್ಮ ವಾಸವಾಗಿರುವ ಮನೆಗೆ ಮಕ್ಕಳು ಬಂದು ಸೇರಿ, ಒಟ್ಟಾಗಿ ಆಚರಿಸುವುದು ಸಾಮಾನ್ಯ. ಒಂದು ಮನೆಯ ಸದಸ್ಯರು ಯಾವ ಯಾವ ಊರಿನಲ್ಲಿರುವವರೋ ಎಲ್ಲರೂ ಬಂದು ಸೇರುವುದು ಎಂದಾಗಿರುವುದರಿಂದಲೇ ಇರಬೇಕು ಇದು ರಾತ್ರಿ ಊಟದ ಸಂಭ್ರಮ.

Thanksgiving ಹಬ್ಬಕ್ಕೆ ಟರ್ಕಿ ಹಕ್ಕಿಯೇ ಊಟದ ವಿಶೇಷ

Thanksgiving ಹಬ್ಬಕ್ಕೆ ಟರ್ಕಿ ಹಕ್ಕಿಯೇ ಊಟದ ವಿಶೇಷ

Thanksgiving ಮುಖ್ಯವಾದ ಅಡುಗೆ ಎಂದರೆ ಬೇಯಿಸಿದ Turkey ಹಕ್ಕಿ. ಈ ಹಬ್ಬಕ್ಕೆ ಟರ್ಕಿ ಹಕ್ಕಿಯೇ ಊಟದ ವಿಶೇಷ ಏಕೆ ಎಂಬ ವಿಚಾರವೂ ಸೊಗಸಾಗಿದೆ. ಮೊದಲಿಗೆ ಟರ್ಕಿ ಎಂದರೆ ಯಾವುದಕ್ಕೂ ಪ್ರಯೋಜನ ಇಲ್ಲದ್ದು ಎಂದೂ ಅರ್ಥವಿದೆ. ಇತ್ಲಾಗೆ ಮೊಟ್ಟೆ ಇಡುವ ಪಕ್ಷಿಯೂ ಅಲ್ಲ ಅಥವಾ ಅತ್ಲಾಗೆ ಹಾಲು ಕೊಡುವ ಪ್ರಾಣಿಯೂ ಅಲ್ಲ. ಮಜಬೂತಾದ ಪಕ್ಷಿ ಎಂದೂ ಅರಿವಿರುವವರಿಗೆ ಗೊತ್ತು. ಅಷ್ಟೆಲ್ಲಾ ಮಂದಿ ಊಟಕ್ಕೆ ಸೇರುವುದರಿಂದ ಮಾಡೋ ಅಡುಗೆ ಒದಗಬೇಕಲ್ಲವೇ? ಏನಕ್ಕೂ ಪ್ರಯೋಜನ ಇರದ ಈ ಪಕ್ಷಿ ಹೀಗಾದರೂ ಬಳಕೆಯಾಗಲಿ ಎಂಬ ಉದ್ದೇಶವೇ ಹಬ್ಬಕ್ಕೆ ಟರ್ಕಿ ಹಕ್ಕಿ ಬೇಯಿಸುವ ಹಿನ್ನೆಲೆ ಎನ್ನುತ್ತಾರೆ ಬಲ್ಲವರು. ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳುತ್ತಿದ್ದಾರೆ "ನೀನಾರಿಗಾದೆಯೋ ಎಲೆ ಮಾನವ.."

ಹಬ್ಬಗಳು ಮತ್ತು ಸಂಪ್ರದಾಯಗಳು ಸಾಯುತ್ತಿವೆ

ಹಬ್ಬಗಳು ಮತ್ತು ಸಂಪ್ರದಾಯಗಳು ಸಾಯುತ್ತಿವೆ

ಇನ್ನು ಇತ್ತೀಚಿನ ಬೆಳವಣಿಗೆ ಎಂದರೆ ಹಬ್ಬಕ್ಕೆ ಪೆಟ್ಟು ನೀಡಿರುವ ಬೆಳವಣಿಗೆ. ಪೈಪೋಟಿಯ ಜಗತ್ತಿನಲ್ಲಿ ಮರುದಿನ ಬೆಳಿಗ್ಗೆ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸುವುದನ್ನು ನಿಧಾನವಾಗಿ ಸಮಯ ಬದಲಿಸೀ ಬದಲಿಸೀ ಇಂದು ಹೇಗಾಗಿದೇ ಎಂದರೆ ಗುರುವಾರ ಸಂಜೆಯಿಂದಲೇ ಹಲವಾರು ಮಳಿಗೆಗಳಲ್ಲಿ sale ಆರಂಭವಾಗುತ್ತದೆ. ಗುರುವಾರ ಸಂಜೆ ಗ್ರಾಹಕರು ಅಂಗಡಿಯ ಒಳಗೆ ಬರುತ್ತಾರೆ ಎಂದ ಮೇಲೆ ಅಂಗಡಿಯನ್ನು ಸಿದ್ದಗೊಳಿಸಲು ಅಲ್ಲಿನ ಕೆಲಸಗಾರರು ಬೆಳಿಗ್ಗೆಯಿಂದಲೇ ದುಡಿಯಬೇಕು. ವಿಶೇಷವಾಗಿ ಈ ದಿನ ಕೆಲಸ ಮಾಡಿದಲ್ಲಿ ಪ್ರತೀ ಘಂಟೆಗೆ ಹೆಚ್ಚು ಹಣ ದೊರೆಯುತ್ತದೆ, ಅದನ್ನು ಕ್ರಿಸ್ಮಸ್ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ ಎಂಬ ಆಶಯದಿಂದ ಈ ದಿನ ದುಡಿಯುವ ಮಂದಿ ಹಬ್ಬವನ್ನು ತ್ಯಾಗ ಮಾಡಲೇಬೇಕಾಗುತ್ತದೆ. ಅರ್ಥಾತ್ ಮನೆಮಂದಿಯೊಡನೆಯ ಹಬ್ಬ ಕಿತ್ಕೊಂಡ್ ಹೋಯ್ತು ಅಂತ ತಾನೇ? ನಮ್ಮಲ್ಲಿ ಹಬ್ಬಗಳು ಮತ್ತು ಸಂಪ್ರದಾಯಗಳು ಸಾಯುತ್ತಿವೆ ಎಂಬ ಕೂಗು ಹೇಗಿದೆಯೋ ಹಾಗೆಯೇ ಇಲ್ಲೂ.

 black friday ಹೆಸರಲ್ಲಿ 'ಕಪ್ಪು' ಬಳಕೆ ಯಾಕೆ?

black friday ಹೆಸರಲ್ಲಿ 'ಕಪ್ಪು' ಬಳಕೆ ಯಾಕೆ?

ಈ black friday ಹೆಸರಲ್ಲಿ 'ಕಪ್ಪು' ಬಳಕೆ ಯಾಕೆ? ಯಾರಿಟ್ಟರೀ ಚುಕ್ಕಿ? ವ್ಯವಹಾರದ ಜಗತ್ತಿನಲ್ಲಿ ಲೆಕ್ಕ ಇಡುವವರ ಭಾಷೆಯಲ್ಲಿ ಕಪ್ಪು (ಶಾಯಿ) ಲಾಭ ಸೂಚಕ, ಕೆಂಪು ನಷ್ಟ ಸೂಚಕ. ಉತ್ತರ ಭಾರತೀಯರಲ್ಲಿ 'ಲಾಭ್ ಪಂಚಮಿ' ಇರುವಂತೆ, ನಮ್ಮಲ್ಲಿ ಲಕ್ಷ್ಮಿ ಪೂಜೆ ಇರುವಂತೆ ಇದು. ಈ ದಿನ ಆಗುವ ಲಾಭ ಮುಂದಿನ ವರ್ಷ ಕಾಯುವುದಂತೆ. ಈ ದಿನ ನಷ್ಟವಾದರೆ ಕಂಪನಿ ಅವನತಿಯತ್ತ ಸಾಗುತ್ತಿದೆ ಎಂದರ್ಥ.

ಹಬ್ಬದಲ್ಲಿ ಅವಘಡಗಳಿಗೂ ಕಡಿಮೆಯೇನಿಲ್ಲ

ಹಬ್ಬದಲ್ಲಿ ಅವಘಡಗಳಿಗೂ ಕಡಿಮೆಯೇನಿಲ್ಲ

ಸೌಜನ್ಯತೆ ಗಾಳಿಗೆ ತೂರೋ ಈ ದಿನಗಳಲ್ಲಿ ಆಗೋ ಅವಘಡಗಳಿಗೂ ಕಡಿಮೆಯೇನಿಲ್ಲ. ಬೇರೆ ಮಳಿಗೆಗಳಲ್ಲೂ ಆಗಿರಬಹುದು. ಆದರೆ ಈ ವಿಷಯದಲ್ಲಿ ವಾಲ್ಮಾರ್ಟ್'ಗೆ ಆಗಾಗ ವಕ್ಕರಿಸುಕೊಳ್ಳುತ್ತೆ ಕೆಟ್ಟ ಹೆಸರು. 2008ರಲ್ಲಿ ಬೆಳಗಿನ ನಾಲ್ಕು ಘಂಟೆ ಸಮಯಕ್ಕೆ ಜನರನ್ನು ಒಳಗೆ ಬಿಡಲು ಅಂಗಡಿಯ ಕೆಲಸಗಾರ ಬಾಗಿಲು ತೆರೆದ. ಆರೂವರೆ ಅಡಿ ಇರುವ ಈ ವ್ಯಕ್ತಿಯನ್ನು ಮೆಟ್ಟಿಕೊಂಡು ಜನ ಒಳಗೆ ನುಗ್ಗಿದರು ಎಂದರೆ ಅರ್ಥೈಸಿಕೊಳ್ಳಿ ಇನ್ನೆಷ್ಟು ಮಂದಿ ಬಾಗಿಲ ಬಳಿ ಕಾದಿದ್ದಿರಬಹುದು ಎಂದು. ಕಡಿಮೆ ಬೆಲೆಗೆ ಸಿಕ್ಕಿದ್ದೆಲ್ಲಾ ತೆಗೆದುಕೊಂಡು ಬಿಡುತ್ತೇವೆ ಎಂದು ನುಗ್ಗಿದ ಜನರಿಗೆ ಆ ಕೆಲಸಗಾರನ ಜೀವಕ್ಕೆ ಬೆಲೆ ಇದೆ ಎಂದು ಅರಿವಿಗೇ ಬರಲಿಲ್ಲವಲ್ಲಾ? ಜನಕ್ಕೇನೋ ಅವರಿಗೆ ಬೇಕಾದ ವಸ್ತು ಸಿಕ್ಕಿರಬಹುದು ಆದರೆ ತುಳಿತಕ್ಕೆ ಒಳಗಾಗಿ ಹೋದ ಜೀವವನ್ನು ಅವರುಗಳು ತಂದುಕೊಡಬಲ್ಲರೇ?

small business saturday

small business saturday

ಆ ಶುಕ್ರವಾರದ ನಂತರ ಬರುವುದೇ small business saturday. ಭಾನುವಾರದ ಮರುದಿನ ದಿನಕರ ಮೂಡಿ ಬಂದಾಗ Cyber Monday ಆಗಿರುತ್ತೆ. ಅಂತರ್ಜಾಲದಲ್ಲಿ ಖರೀದಿ ಮಾಡುವ ಈ ಸೊಬಗಿನ ಕಥೆಗಳೇ ಭಿನ್ನ. ಒಂದು ಕಂಪನಿ'ಯ websiteಗೆ ಎಷ್ಟರ ಮಟ್ಟಿಗೆ ತಾಕತ್ ಇದೆ ಅನ್ನೋದು ಈ ದಿನ ತಿಳಿಯುತ್ತೆ. ಅಂಕಿಅಂಶ ನೋಡಿದಾಗ 2006ರಲ್ಲಿ ಈ ದಿನದ ವಹಿವಾಟು 600 ಮಿಲಿಯನ್ ಡಾಲರ್ಸ್. ಅಬ್ಬಬ್ಬಾ ಎನ್ನಬೇಡಿ. 2017ರ ಆ ಒಂದು ದಿನದ ವಹಿವಾಟು 3 ಬಿಲಿಯನ್ ಡಾಲರ್ಸ್ ಗೂ ಅಧಿಕ.

cyber monday ದಿನ

cyber monday ದಿನ

ಸೋಮವಾರ ಆಫೀಸಿನಲ್ಲಿ ಕೆಲಸ ಮಾಡುವಾಗ (?) ಕೆಲಸದ ಕಂಪ್ಯೂಟರ್ ಬಳಸಿ ವೆಬ್ಸೈಟ್'ನಲ್ಲಿ ಖರೀದಿ ಮಾಡುವ ತುಂಬಾ ಮಂದಿ ಇದ್ದಾರೆ. ಇಂಥಾ ಕೆಲಸಗಾರರಿಂದ cyber monday ದಿನ ಆಯಾ ಕಂಪನಿ'ಯವರಿಗೆ ಎಷ್ಟರ ಮಟ್ಟಿಗಿನ ತಲೆನೋವು ಎಂದರೆ, ಕಂಪನಿ'ಯ resourcesನ ಅತೀವ ಸ್ವಂತ ಬಳಕೆ ಮಾಡಿ ಕೆಲಸವನ್ನೂ ಕಳ್ಕೊಂಡ್ ಮನೆಗೆ ಹೋದವರಿದ್ದಾರೆ ಎಂದು careerbuilder ರಿಪೋರ್ಟ್ ಮಾಡಿದೆ.

ಖರೀದಿಸಿದಷ್ಟೂ ಒಂದು ದೇಶದ ಎಕಾನಮಿ ಚೆನ್ನಾಗಿರುತ್ತೆ ಅಂತ ಬಲ್ಲವರು ಹೇಳುತ್ತಾರೆ. ಕಾರ್ಡ್ ಕೈಯಲ್ಲಿರುವಂತೆಯೇ ತಲೆಯಲ್ಲಿ ಬುದ್ಧಿಯೂ ಹಿಡಿತದಲ್ಲಿ ಇರಲಿ. ಜವಾಬ್ದಾರಿಯುತವಾಗಿ ಖರ್ಚು ಮಾಡಿ.

ಈ Thanksgiving ದಿನ, ಈವರೆಗೆ ನನ್ನೆಲ್ಲಾ ಬರಹಗಳನ್ನು ಓದಿ, ಮೆಚ್ಚಿ ಪ್ರೋತ್ಸಾಹಿಸಿ, ಬೆಳೆಸಿರುವ ಎಲ್ಲ ಓದುಗರಿಗೂ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

English summary
Thanksgiving is celebrated on a different date every year in America. Because it is always the 4th Thursday of November. On this thanksgiving day Oneindia Kannada columnist Srinath Bhalle thanks the readers for reading, appreciating and encouraging.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X