• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರೆ ಸಮಾಜಕ್ಕೂ ಹಿತವಲ್ಲವೇ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಕೆಲವೊಮ್ಮೆ ಕಚೇರಿಗಳಲ್ಲಿ ಯಾವುದೋ ಒಂದು ದೊಡ್ಡ ಸಮಸ್ಯೆ ಎದುರಾದಾಗ, discuss ಮಾಡಲು ಸಂಬಂಧಪಟ್ಟವರನ್ನು ಕಲೆಹಾಕಿ ಒಂದು ಮೀಟಿಂಗ್ ರೂಮಿನಲ್ಲಿ ಸೇರುತ್ತಾರೆ... ಸಮಸ್ಯೆ ಏನು ಎಂಬುದನ್ನು ಮೊದಲಿಗೆ ಕೂಲಂಕಷವಾಗಿ ಅರ್ಥಮಾಡಿಕೊಳ್ಳುವ ಹಂತದಲ್ಲಿ ಪ್ರತಿಯೊಬ್ಬರೂ ನಾ ಮುಂದು ತಾ ಮುಂದು ಅಂತ ತಮಗೆ ತಿಳಿದ ವಿಷಯವನ್ನು ಮುಗಿಬಿದ್ದು ವರ್ಣಿಸುವಾಗ ಆ ಸೂತ್ರಧಾರ ಹೇಳೋದು 'ಮೊದಲಿಂದ ಏನಾಯ್ತು ಅಂತ ಹಂತ ಹಂತವಾಗಿ ನೋಡೋಣ... ಆಗ ಸಮಸ್ಯೆಯ ಮೂಲ ಸಿಗುತ್ತದೆ" ಅಂತ!

ಸಮಸ್ಯೆಗಳನ್ನು ಒಟ್ಟಾಗಿ ನೋಡುವ ಬದಲು, ಬೇರೆ ಬೇರೆಯಾಗಿ ನೋಡುವಾಗ ಒಂದೊಂದನ್ನೂ ವಿಶ್ಲೇಷಿಸಿ ನೋಡುವ ಅವಕಾಶ ದೊರೆಯುತ್ತದೆ. ಒಂದೇ ಸಮಸ್ಯೆಯನ್ನು ಹಂತ ಹಂತವಾಗಿ ವಿಂಗಡಿಸಿ ನೋಡುವಾಗ ಸಮಸ್ಯೆಯ ಮೂಲವನ್ನು ಸುಲಭವಾಗಿ ಕಂಡು ಹಿಡಿಯಬಹುದು.

ಮನಸ್ಸಿಗೆ, ಹೃದಯಕ್ಕೆ ನಾವು ಏನೇನ್ ಕಷ್ಟ ಕೊಡ್ತೀವಿ ಗೊತ್ತಾ...

ಇಲ್ಲಿನ ಅಂಗಡಿಗಳಲ್ಲಿ ದೊರೆಯುವ ಮೇಜು, ಬೀರು, ಫ್ಯಾನ್ ಇತ್ಯಾದಿ ಯಾವುದೇ ಆಗಲಿ ಒಂದು ಡಬ್ಬದಲ್ಲಿ ಚೆನ್ನಾಗಿ pack ಆಗಿರುವ ಬಿಡಿಭಾಗಗಳ ಸಂತೆ. ಅದನ್ನು ಮನೆಗೆ ತಂದು ಬಿಡಿಸಿಟ್ಟು ನಂತರ user manual ಅನ್ನು ತೆರೆದಿಟ್ಟುಕೊಂಡು ಹಂತ ಹಂತವಾಗಿ ಅದನ್ನು ಜೋಡಿಸುವ ಕ್ರಿಯೆಯಲ್ಲಿ ತೊಡಗುತ್ತೇವೆ. ಈ step by step instructions ಅನ್ನು ಚಾಚೂ ತಪ್ಪದೆ ಪಾಲಿಸಿದರೆ ಚೊಕ್ಕವಾಗಿ ಕೆಲಸವಾಗುತ್ತದೆ. ಇಲ್ಲಿ ಒಂದು ಸೂಕ್ಷ್ಮ ಅಡಗಿದೆ. ಈ ಕೆಲಸವನ್ನು ಒಂದು ಹೆಣ್ಣು ಮಾಡುವಾಗ ಆಕೆ ಅಲ್ಲಿ ಹೇಳಿರುವಂತೆ ಪಾಲಿಸಿ ಕೆಲಸ ಮಾಡುತ್ತಾಳಂತೆ. ಆದರೆ ಒಬ್ಬ ಗಂಡು ತನಗೆಲ್ಲಾ ಗೊತ್ತು user manual ಅನ್ನು ಪಾಲಿಸೋದೇನು ಎಂಬ ಅಹಂನಲ್ಲಿ ಅರ್ಧಗಂಟೆಯ ಕೆಲಸಕ್ಕೆ ಎರಡು ಗಂಟೆಗಳ ಕಾಲ ತೆಗೆದುಕೊಂಡೂ ತಪ್ಪು ಮಾಡುವ ಸಾಧ್ಯತೆ ಇರುತ್ತದಂತೆ.

ಊರು ಕೇರಿಗೆ ಹೋಗುವ ಸಂದರ್ಭಗಳಲ್ಲಿ packing ಅನ್ನೋದು ದೊಡ್ಡ ಕೆಲಸ. ಇಲ್ಲಿ ಎರಡು ವಿಷಯಗಳು ಅಡಕವಾಗಿದೆ. ಒಂದು, ಎಲ್ಲಿಗೆ ಹೋಗಬೇಕು ಅನ್ನೋದನ್ನು ಕೆಲವರು ವರ್ಷಕ್ಕೆ ಮುನ್ನವೇ ಪ್ಲಾನ್ ಮಾಡಿಕೊಂಡು ಹಂತ ಹಂತವಾಗಿ ಸಿದ್ಧವಾಗುತ್ತ ಬಂದಿರುತ್ತಾರೆ. ನಾವು alaska ಟ್ರಿಪ್ ಮಾಡುವಾಗ ಹೀಗೆಯೇ ಮಾಡಿದ್ದು. ಹೊರಡುವ ದಿನ ಹತ್ತಿರವಾದಂತೆ tension ಇಲ್ಲದೆ ಇರುತ್ತದೆ. ಇದಕ್ಕೆ ತದ್ವಿರುದ್ಧ ಎಂದರೆ ಕೊನೆಯ ಗಳಿಗೆಯಲ್ಲಿ ಎಲ್ಲಿಗೆ ಹೋಗೋದು ಅಂತ ಆಲೋಚಿಸುವುದು, ಆ ನಂತರ ಗಡಿಬಿಡಿಯಲ್ಲಿ ಬಟ್ಟೆಬರೆ ತುರುಕಿಕೊಂಡು ಕೊನೆಗೆ ಬಸ್, ಟ್ರೈನ್ ಸ್ಟೇಷನ್ ಗೆ ಹೋದಾಗ ಟಿಕೆಟ್ ಮನೆಯಲ್ಲೇ ಇದೆ ಅಂತ ಅರಿವಾಗೋದು, ಇನ್ನೂ ಕೆಟ್ಟ ಸನ್ನಿವೇಶ ಎಂದರೆ ಮನೆಯಿಂದ ಎರಡು ಮೂರು ಗಂಟೆಗಳ ಕಾಲ ಕ್ಯಾಬ್ ನಲ್ಲಿ ಏರ್ಪೋರ್ಟ್ ಗೆ ಸಾಗಿ ಆಮೇಲೆ passport ಮನೆಯಲ್ಲಿ ಮರೆತೆ ಅಂತ ಅರಿವಾಗೋದು. ಹಂತ ಹಂತವಾಗಿ ಕೆಲಸಗಳನ್ನು ಮುಗಿಸಿದರೆ ಚೆನ್ನ, ಮುಗಿಬಿದ್ದು ಧಡಧಡ ಮಾಡಿದಲ್ಲಿ ಏನೋ ಎಡವಟ್ಟಾಗೋದು ಖಚಿತ.

ಪ್ರಕೃತಿಯಲ್ಲಿನ ಈ ಗಿಡಮರಗಳು ನಮಗೆ ಏನೆಲ್ಲಾ ಕಲಿಸುತ್ತಿವೆ?

ಅಲೆಕ್ಸಾಂಡರ್ ದಿ ಗ್ರೇಟ್ ಎನಿಸಿಕೊಂಡವ, ಹಂತ ಹಂತವಾಗಿಯೇ ತನ್ನ ಹಾದಿಯುದ್ದಕ್ಕೂ ರಾಜ್ಯಗಳನ್ನು ಆಕ್ರಮಿಸಿ ಗೆದ್ದುಗೊಂಡು ಹೆಚ್ಚು ಕಮ್ಮಿ ಇಪ್ಪತ್ತು ಲಕ್ಷ ಮೈಲಿಗಳ ಉದ್ದದಷ್ಟು ಜಾಗವನ್ನು ತನ್ನದಾಗಿಸಿಕೊಂಡಿದ್ದ. ಕೊನೆಗೆ ಮಲಗಿದ್ದು 18 ಚದರ ಅಡಿಗಳ ಜಾಗದಲ್ಲಿ ಅಂತಾದರೂ, ಅವನು ತನ್ನ ಸಾಧನೆಯನ್ನು (?) ಹಂತ ಹಂತವಾಗಿ ಸಾಧಿಸಿದ್ದ ಎಂಬುದನ್ನು ಮಾತ್ರ ಇಲ್ಲಿ ಅರಿವು ಮಾಡಿಕೊಳ್ಳಬೇಕು.

ಒಂದಾನೊಂದು ಕಾಲದಲ್ಲಿ ಮಂದಿ ದಿನವೊಂದರಲ್ಲಿ ಒಂದೆರಡು ಬಾರಿ ಮಾತ್ರ ಉಣ್ಣುತ್ತಿದ್ದರು ಎಂದು ಕೇಳಿದ್ದೇನೆ. ಇಂದಿನ ದಿನಗಳಲ್ಲಿ ವೈದ್ಯರು ಹೇಳೋ ಮಾತು ಊಟವನ್ನು ಒಮ್ಮೆಲೇ ಮಾಡಬಾರದು ಬದಲಿಗೆ ಹಂತ ಹಂತವಾಗಿ ಅಥವಾ ದಿನವೊಂದರಲ್ಲಿ ಪ್ರತೀ ಹಲವು ಗಂಟೆಗಳಿಗೆ ಒಮ್ಮೆ ತಿನ್ನುತ್ತಾ ದೇಹವನ್ನು ಸುಸ್ಥಿತಿಯಲ್ಲಿಡಬೇಕು ಅಂತ. ಬಹುಶಃ ಇಂದಿನ ದಿನಗಳಲ್ಲಿ, ಆಹಾರದಲ್ಲಿ ಸತ್ವವೇ ಕಡಿಮೆಯಾಗಿರುವ ಈ ದಿನಗಳಲ್ಲಿ, ಪ್ರತೀ ಹಲವು ಗಂಟೆಗಳಿಗೊಮ್ಮೆ ಅಷ್ಟಷ್ಟು ತಿನ್ನುವುದು ಒಳ್ಳೆಯದು ಅಂತ ಹೇಳಿರಬಹುದೇನೋ? ಆದರೆ ಪ್ರತೀ ಹಲವು ಗಂಟೆಗಳಿಗೊಮ್ಮೆ ಹೊಟ್ಟೆಬಿರಿಯಾ ತಿನ್ನೋದು ಅಥವಾ ದಿನಕ್ಕೆರಡು ಬಾರಿ ಅತೀ ಕಡಿಮೆ ತಿನ್ನೋದು, ಎರಡೂ ಅಪಾಯಕಾರಿ.

ದಿನವೊಂದರಲ್ಲಿ ನಾವೆಲ್ಲಾ ಬರೀತೀವಿ, ಹಾಗಂತ ನಾವು ಬರಹಗಾರರೇ?

ನೆಟ್ಟ ಸಸಿ ಒಮ್ಮೆಲೇ ಮರವಾಗಿ ನಿಲ್ಲದೆ ಪ್ರತೀ ಗಳಿಗೆಯಲ್ಲೂ ಹಂತ ಹಂತವಾಗಿ ಬೆಳೆದು ನಿಲ್ಲುತ್ತೆ. ಹುಟ್ಟಿದ ಕೂಸು ಒಮ್ಮೆಲೇ ಬೆಳೆದು ನಿಂತು ಮರು ಹುಟ್ಟಿಗೆ ಯೋಗ್ಯವಾಗಿ ನಿಲ್ಲೋದಿಲ್ಲ. ಹಂತ ಹಂತವಾಗಿಯೇ, ಅರಿತು ಅರಿವು ಮೂಡಿಸಿಕೊಂಡು ಬೆಳೆದು ನಿಲ್ಲೋದು. ಹಂತ ಹಂತವಾಗಿಯೇ ಕಲಿತು ಮೇಲೇರುತ್ತಾ ಸಾಗೋದು. ಕೆಲಸದ ಜಗತ್ತನ್ನೇ ತೆಗೆದುಕೊಂಡರೆ ಕಲಿಕೆ ಮತ್ತು ಅನುಭವ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗುತ್ತದೆ. ಹಂತ ಹಂತವಾಗಿ ಬೆಳೆಯುತ್ತಾ ಸಾಗಿದಂತೆ ಅನುಭವ ಮೂಡಿಸಿಕೊಂಡು ಬೆಳೆಯುವುದೇ ಅಲ್ಲದೆ ಅನುಭವಗಳನ್ನು ಹಂಚುತ್ತಾ ಸಾಗಬೇಕು. ವರ್ಷಾನು ವರ್ಷ ಬೆಳೆವ ಮರ ತನ್ನ ಸುತ್ತಳತೆ ಮೂಡಿಸಿಕೊಳ್ಳುತ್ತಾ ಸಾಗಿದಂತೆ ಹಣ್ಣು ಹೂವು ನೀಡುತ್ತಾ ಸಾಗುವಂತೆ ನಮ್ಮ ಜೀವನವೂ ಸಾಗಬೇಕು.

ಐಟಿ ಜಗತ್ತಿನಲ್ಲಿ ಒಂದು ಪ್ರಾಜೆಕ್ಟ್ ಎಂದು ಕೈಗೆತ್ತಿಕೊಂಡು ಮುಗಿಸುವ ಹಂತ ತಲುಪುವುದನ್ನು ಹಂತ ಹಂತವಾಗಿ ನಾವು ಮಾಡೋದು. ತೆಂಗಿನ ಮರವನ್ನು ಹಂತ ಹಂತವಾಗಿ ಏರುವ ಕ್ರಿಯೆಯಂತೆ.

ಜೀವನದಲ್ಲಿ ಕೆಲಸಗಳನ್ನು ಹಂತ ಹಂತವಾಗಿ ಮಾಡುತ್ತಾ ಸಾಗಿದಾಗ, ಅರಿವೂ ಮೂಡುತ್ತಾ ಸಾಗಿದಂತೆ, ಮುಂಜಾಗರೂಕತಾ ಕ್ರಮವನ್ನೂ ಆಲೋಚಿಸುತ್ತಾ ಸಾಗಬೇಕು. ಜೊತೆಗೆ ಅಂದಂದಿನ ಸನ್ನಿವೇಶಕ್ಕೆ ತಕ್ಕಂತೆ ಬದಲಿಸುತ್ತಾ ಸಾಗಬೇಕು. ನೂರಾರು ವರ್ಷ ಬದುಕಿರುತ್ತೇವೆ ಅಂತಲೇ ನಾವು ಅಂದುಕೊಂಡರೂ ಅದಕ್ಕೆ ತಕ್ಕ ಪ್ಲಾನಿಂಗ್ ಅನ್ನೂ ಪ್ರತೀ ಹಂತದಲ್ಲಿ ಸುಧಾರಿಸಿಕೊಳ್ಳುತ್ತಾ ಸಾಗಬೇಕು.

ಬೆಳವಣಿಗೆಗೆ ಒಂದು ಉದಾಹರಣೆ ಎಂದರೆ ಘನ ಬೆಂಗಳೂರಿನ ಜೆಪಿ ನಗರ ಅಂತ ತೆಗೆದುಕೊಳ್ಳೋಣ... ಅಹೋರಾತ್ರಿ ಬೆಳವಣಿಗೆ ಆಯ್ತೇ? ಅಥವಾ ಹಂತ ಹಂತವಾಗಿ ಬೆಳೆದು ಇಂದು ಎಂಟೋ ಒಂಬತ್ತಕ್ಕೋ ಬಂದು ನಿಂತಿದೆಯೋ?

ಕೆಲಸವನ್ನು ಹುಡುಕುವ ಕ್ರಿಯೆಯೇ ಆಗಲಿ, ಒಂದು ಮನೆಯನ್ನು ಕಟ್ಟಿಸುವ ಕೆಲಸವೇ ಆಗಲಿ, ಒಂದು ಮದುವೆಯನ್ನೇ ಮಾಡುವ ದೊಡ್ಡ ಜವಾಬ್ದಾರಿಯ ಕೆಲಸವೇ ಆಗಲಿ, ಹಂತ ಹಂತವಾಗಿ ಸಾಧಿಸುತ್ತಾ ಕೆಲಸವನ್ನು ಮುಗಿಸಬೇಕು.

ಕೆಲವು ಬಾರಿ ಯಾವುದೋ ಕೆಲಸವನ್ನು ಹಂತ ಹಂತವಾಗಿಯೇ ಮಾಡಲಾಗದೆ ಕೊನೆಯ ಗಳಿಗೆಯಲ್ಲಿ ಮಾಡಬೇಕಾದ ಪ್ರಸಂಗ ಹುಟ್ಟಬಹುದು ಅಥವಾ ಯಾವುದೋ ಯಶಸ್ಸು ಧಿಡೀರನೆ ಬರಬಹುದು ಅಥವಾ ಲಾಟರಿಯಲ್ಲಿ ದೊಡ್ಡ ಮೊತ್ತವೇ ಕೈಗೂಡಬಹುದು. ಅಹೋರಾತ್ರಿ ಇಂಥ ಸನ್ನಿವೇಶ ತಮ್ಮದಾದ ಮೇಲೆ ತಾನು ಗಮ್ಯ ತಲುಪಿದ್ದಾಯ್ತು ಎಂದುಕೊಳ್ಳಬಾರದು. ಆ ಸನ್ನಿವೇಶದಲ್ಲಿ ಹಂತಗಳನ್ನು ಹೊಸದಾಗಿ ರೂಪಿಸಿಕೊಳ್ಳಬೇಕು. ಗಮ್ಯ ತಲುಪಿದ್ದಾಯ್ತು ಎಂದುಕೊಂಡರೆ ಅದು ಗಮ್ಯವಾಗದೆ ಕೊನೆಯೇ ಆಗುತ್ತದೆ.

ಏಣಿ ಏರುವಾಗ ಅಥವಾ ಮೆಟ್ಟಿಲನೇರಿ ಸಾಗುವಾಗ ಲಕ್ಷ್ಯ ಎತ್ತರದ ಶ್ರೇಣಿಯನ್ನು ತಲುಪುವುದು ಮಾತ್ರವೇ ಆಗಿರುತ್ತದೆ. ನಮ್ಮ ಲಕ್ಷ್ಯ ಇಷ್ಟೇ ಇದ್ದಾಗ ಕಲಿಕೆ ಮತ್ತು ಅನುಭವ ಕುಂಠಿತವಾಗುತ್ತದೆ. ಉನ್ನತ ಶ್ರೇಣಿ ತಲುಪಿದಾಗ ಅಲ್ಲಿ ಹೆಚ್ಚು ಹೊತ್ತು ಇರಲಾಗದಂತಾಗುತ್ತದೆ. ಒಂದು ಬಸ್ಸಿನಲ್ಲೋ, ಟ್ರೈನಿನಲ್ಲೋ ರಾತ್ರಿ ಪಯಣ ಮಾಡಿ ಗಮ್ಯ ಸೇರಿದಂತೆ.

ಮಹಡಿಯನ್ನು ಹತ್ತುವ ಮುನ್ನ ಬಳಸುವ ಮೆಟ್ಟಿಲುಗಳು, ಏಣಿಯ ತುದಿಯನ್ನು ಸೇರುವ ಮುನ್ನ ಬಳಸುವ ಮೆಟ್ಟಿಲುಗಳನ್ನು ಹಂತ ಹಂತವಾಗಿಯೇ ಏರಬೇಕು. ಒಂದು ದೊಡ್ಡ ಪದವಿಯನ್ನು ಅಲಂಕರಿಸುವ ಮುನ್ನ ಏರಬಹುದಾದ ಶ್ರೇಣಿಗಳನ್ನೂ ಹಂತ ಹಂತವಾಗಿ ಮುಂದುವರೆಯುತ್ತಾ ಸಾಗಿದರೆ ಆಯಾ ಕೆಲಸಕ್ಕೆ ಬೇಕಾದ ಅನುಭವಗಳೂ ಪಕ್ವವಾಗುತ್ತಾ ಸಾಗುತ್ತದೆ.

ಕಲೆಗಾರ ಆಗಬೇಕು ಎಂಬ ಆಶಯ ಹೊತ್ತವರು ಹಂತ ಹಂತವಾಗಿಯೇ ಬೆಳೆಯಬೇಕು, ಒಂದೇ ಸಾರಿ ರವಿವರ್ಮರಂತೆ ಆಗಲೇ ಸಾಧ್ಯವೇ? ಅಂತೆಯೇ ಒಬ್ಬ ಶಿಲ್ಪಿಯೇ ಆಗಲಿ, ಆಡಳಿತಗಾರನೇ ಆಗಲಿ, ಒಬ್ಬ ಬರಹಗಾರನೇ ಆಗಲಿ ಅಥವಾ ಮತ್ಯಾವುದೇ ಕ್ಷೇತ್ರದವರೇ ಆಗಲಿ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರೆ ಸಮಾಜಕ್ಕೂ ಹಿತ ಎನಿಸುತ್ತದೆ ಅಲ್ಲವೇ? ಅರ್ಧರಾತ್ರಿಯಲ್ಲಿ ಐಶ್ವರ್ಯ ಬಂದರೆ ಅದು ವೈಯಕ್ತಿಕವಾಗಿಯೂ ಮತ್ತು ಇತರರಿಗೂ ಅದು ಋಣಾತ್ಮಕವಾದ ಪರಿಣಾಮವೇ ಬೀರೋದು.

ಆದರೆ ಇಂದಿನ ದಿನಗಳಿಗೆ ಈ ವಿಷಯವನ್ನು ಹೊಂದಿಸಿ ನೋಡಿದಾಗ ಏಳುವ ಪ್ರಶ್ನೆ ಹಂತ ಹಂತವಾಗಿ ಬೆಳೆದು ಬೇರೂರಿ ನಿಲ್ಲಬೇಕು ಎಂಬುದಕ್ಕೆ ವ್ಯವಧಾನವಾದರೂ ಎಲ್ಲಿದೆ? ಫಾಸ್ಟ್ ಫುಡ್ ನಂತೆ ಇಂದಿನ ಜಗತ್ತಿನಲ್ಲಿ ಎಲ್ಲವೂ ತ್ವರಿತ.

ನಿಮ್ಮ ಅನಿಸಿಕೆಯ ಪ್ರಕಾರ ಮುಂದಿನ ಪೀಳಿಗೆಯ ಬೆಳವಣಿಗೆ ಹೇಗಿರಬೇಕು ಅಂತ ಅನ್ನಿಸುತ್ತದೆ?

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Instead of looking at problems together, we have to see it step by step and analyze it. The root of the problem can be easily identified by looking at the same problem step by step
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X