ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಜೀವನದಲ್ಲಿ ಯಾವ ರೀತಿ ಧಾರಕರಾಗಿ ಕೆಲಸ ನಿರ್ವಹಿಸಿದ್ದೀರಿ?

|
Google Oneindia Kannada News

ಆಂಗ್ಲದಲ್ಲಿ Bearer ಎಂಬುವುದನ್ನು ಅಥವಾ ಎಂಬುವವನನ್ನು ಧಾರಕ, ಆಳು, ದೂತ ಎಂದೆಲ್ಲಾ ಅರ್ಥವಿದೆ. ಯಾವ ಸಂದರ್ಭದಲ್ಲಿ ಹೇಗೆಲ್ಲಾ ಬಳಸುತ್ತೇವೆ ಮತ್ತು ನೀವು ಯಾವ ರೀತಿ Bearer ಆಗ ಬಯಸುವಿರಿ ಅಂತ ತಿಳಿದುಕೊಳ್ಳೋಣ. ಇದರ ಜೊತೆಗೆ ಯಾವ Bearer ಕೆಲಸ ಸುಲಭ ಅಥವಾ ಕಷ್ಟ ಅಂತ ನೋಡೋಣ. ಇದಿಷ್ಟೇ ಅಲ್ಲದೇ, ಬೇಡಾ ಬಿಡಿ ಬನ್ನಿ ನೋಡೋಣ. ಎಲ್ಲವನ್ನೂ ತೆರೆ ಏರುವ ಮುನ್ನವೇ ಹೇಳಿಬಿಟ್ಟರೆ ಏನಿದ್ದೀತು ಸೊಗಸು. ತಾಂಬೂಲದೊಳಗೆ ಇರುವುದೆಲ್ಲಾ ಕಾಣಬೇಕಿಲ್ಲ, ರುಚಿ ಸಿಕ್ಕರೆ ಸಾಕು, ಅಲ್ಲವೇ?

ಈಗ ಒಂದು ಹೋಟೆಲ್'ಗೆ ಹೋಗಿರುತ್ತೀರಾ ಅಂದುಕೊಳ್ಳಿ. ಸಂಸಾರದೊಂದಿಗೆ ಹೋಗಿದ್ದರೆ ಯಾರಾದರೂ ಅಲ್ಲಿನವರು ಬಂದು ಏನು ಬೇಕು ಅಂತೆಲ್ಲಾ ಕೇಳುವವರೆಗೂ ಸುಮ್ಮನಿರುತ್ತೀರಿ. ಪ್ರೇಯಸಿಯೊಂದಿಗೆ ಹೋಗಿದ್ದೀರಾ ಎಂದುಕೊಂಡರೆ, scope ತೆಗೆದುಕೊಳ್ಳಲು ' Bearer, can you come over?' ಅಂತಾನೋ ಇನ್ನೇನೋ ಕರೆಯುತ್ತೀರಾ? ಆದರೆ ಈ ಪದ ಪ್ರಯೋಗ ತರವಲ್ಲ. Waiter ಬೇರೆ, Bearer ಬೇರೆ. ಹೋಟೆಲಿನಲ್ಲಿ ನಿಮ್ಮಿಂದ ಆರ್ಡರ್ ತೆಗೆದುಕೊಂಡು, ಒಳಗೆ ಹೋಗಿ ಅಲ್ಲಿ ತಿಳಿಸಿ, ಅಡುಗೆ ಸಿದ್ದವಾದ ಮೇಲೆ ನಿಮಗೆ ತಂದು ಕೊಡುವವರು Waiter ಆದರೆ Bearer ಅಲ್ಲ.

ಶ್ರೀನಾಥ್ ಭಲ್ಲೆ ಅಂಕಣ: ಶಂಖದ ಬಗ್ಗೆ ನಿಮಗೊಂದಿಷ್ಟು ವಿಷಯ ಗೊತ್ತೇ?ಶ್ರೀನಾಥ್ ಭಲ್ಲೆ ಅಂಕಣ: ಶಂಖದ ಬಗ್ಗೆ ನಿಮಗೊಂದಿಷ್ಟು ವಿಷಯ ಗೊತ್ತೇ?

ಹಾಗಿದ್ದರೆ ಈ bearer ಎಂದರೆ ಯಾರು? ಯಾವುದನ್ನಾದರೂ ಹೊತ್ತವನು ಧಾರಕ. ವಿಷಯ ಹೊತ್ತವನು ದೂತ. ಇಲ್ಲಿ ಎರಡೆರಡು ವಿಚಾರಗಳು ಅಡಗಿವೆಯೆಲ್ಲಾ ಏನು ಮಾಡೋದು. ಏನೂ ಮಾಡಬೇಡಿ ಹನುಮನನ್ನು ನೆನೆಯಿರಿ ಸಾಕು, ಎಲ್ಲವೂ ಸಲೀಸು. ಹನುಮನನ್ನೇ ಏಕೆ ನೆನೆಯಬೇಕು? ಕೆಲಸಕ್ಕೆ ಮುನ್ನ ನೆನೆಯಬೇಕಾದುದು ಗಣೇಶನನ್ನು ನೆನೆಯಬೇಕು ಅಲ್ಲವೇ? ಗಣಪನನ್ನು ಹೊತ್ತಿದ್ದು ಮೂಷಿಕ ಹಾಗಾಗಿ ಗಣಪನನ್ನು ಈ ವಿಷಯದಲ್ಲಿ ನೆನೆಯುವುದು ಬೇಡ. ಜೊತೆಗೆ ಈ ಗಣಪ ಹೊತ್ತಿರುವುದು ತನ್ನದೇ ಕರಿ ವದನ. ಇದು ಅಸಾಮಾನ್ಯ. ಹಾಗಾಗಿ ಅವನನ್ನು ಸದ್ಯಕ್ಕೆ ಬಿಡೋಣ. ಹನುಮನನ್ನು ನೆನೆಯೋಣ.

Srinath Bhalle Column: What Kind Of Work Have You Done In Life?

ಸೀತಾನ್ವೇಷಣೆಯ ಸಮಯದಲ್ಲಿ ರಾಮನಿಗಾಗಿ ಸುಗ್ರೀವನ ಆಜ್ಞೆಯ ಪ್ರಕಾರ ಸಮುದ್ರೋಲ್ಲಂಘನ ಮಾಡಿ, ಸೀತಾಮಾತೆಯನ್ನು ಭೇಟಿ ಮಾಡಿ, ತಾಯಿ ನೀಡಿದ ಚೂಡಾಮಣಿಯನ್ನು ಹೊತ್ತು ತಂದವ ಹನುಮ. ಈ ನಮ್ಮ ಹನುಮನೇ ಚೂಡಾಮಣಿಧಾರಕ. ಯುದ್ಧದ ಸಮಯದಲ್ಲಿ ರಾಮ ಮತ್ತು ಲಕ್ಷ್ಮಣರನ್ನು ತನ್ನ ಭುಜದ ಮೇಲೆ ಹೊತ್ತವ ಹನುಮ. ರಾಮಲಕ್ಷ್ಮಣ ಧಾರಕ ಈ ಹನುಮ.

ಇಂದ್ರಜಿತ್ ಲಕ್ಷ್ಮಣದೇವರನ್ನು ಮೂರ್ಛೆ ಬೀಳಿಸಿದಾಗ, ಸಂಜೀವಿನಿ ತರಲೆಂದು ಹೋಗಿ ಪರ್ವತವನ್ನೇ ಹೊತ್ತು ತಂದವ ಈ ಹನುಮ. ಪರ್ವತಧಾರಕ ಈ ಹನುಮ. ಇಂಥಾ ಹಲವಾರು ಧಾರಕ ಅಥವಾ bearer ಆದ ಹನುಮನನ್ನು ನೆನೆಯಿರಿ ಅಂತ ನಾನು ಹೇಳಿದ್ದು.

ನಮ್ಮ ದೇಶದ ಒಂದು ಹಣದ ನೋಟ್ ಅನ್ನು ಕೈಗೆತ್ತುಕೊಳ್ಳಿ. ಉದಾಹರಣೆಗೆ ನೂರು ರೂಪಾಯಿ ನೋಟ್ ತೆಗೆದುಕೊಳ್ಳಿ. ಅಲ್ಲಿ ಏನನ್ನು ಗಮನಿಸಿದ್ದೀರಿ ? I Promise to pay the bearer sum of 100 Rupees ಅಂತ ತಾನೇ? ಅರ್ಥ ಇಷ್ಟೇ, ನಮ್ಮ RBI ನವರು ಹೇಳುತ್ತಿರೋದು, ಈ ನೋಟು ಯಾರ ಬಳಿ ಇದೆಯೋ ಅವರಿಗೆ ನಾವು ನೂರು ರೂಪಾಯಿ ಬೆಲೆಯ ವಸ್ತು ಅಥವಾ ಚಿನ್ನವನ್ನು ನೀಡುತ್ತೇವೆ ಅಂತ.

ಇದು ಒಂದಾನೊಂದು ಕಾಲದಲ್ಲಿ ಮಾಡಿದ ನಿಯಮವಾದರೂ ಈ ಅರ್ಥಕ್ಕೇನೂ ಭಂಗ ಬಂದಿಲ್ಲ. ನೀವು ನೂರು ರೂಪಾಯಿ ಕೊಟ್ಟಾಗ, ಇಲ್ಲಪ್ಪಾ ಈ ದಿನ ರೂಪಾಯಿ ಬೆಲೆ ಬಿದ್ದು ಹೋಗಿದೆ, ಈ ನೂರು ರೂಪಾಯಿಯ ಮೌಲ್ಯ ನಿಜವಾಗ್ಲೂ ಐವತ್ತು ರೂಪಾಯಿ ಮಾತ್ರ ಅಂತ ಹೇಳುವ ಹಾಗಿಲ್ಲ ಅಂತ.

ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ torch bearer ಎಂಬುದು ಒಂದು ಸನ್ಮಾನ. ಅದೊಂದು ಗೌರವ. ಒಬ್ಬ ಕ್ರೀಡಾಪಟುವಿನ ಸಾಧನೆಯ ಗುರುತಿಸಿ ಒಲಿಂಪಿಕ್ ಜ್ಯೋತಿಯನ್ನು ಬೆಳಗಿಸುವ ಒಂದು ಸುವರ್ಣಾವಕಾಶವನ್ನು ನೀಡುವ ಮಾನ್ಯತೆ ಖಂಡಿತಾ ಹಿರಿದೇ ತಾನೇ?

Cheque Bearer ಎಂದರೆ ಯಾರು ಚೆಕ್ ಅಥವಾ ಬಾಂಡ್ ಅನ್ನು ಹೊತ್ತು ತಂದಿರುತ್ತಾರೋ ಅವರು. ಒಂದು ಚೆಕ್ ಅನ್ನು ಕ್ಯಾಶ್ ಮಾಡಿಸಿಕೊಳ್ಳಲು ಚೆಕ್ ಹಿಡಿದು ಹೋದ ನೀವು ಚೆಕ್ ಧಾರಕರು. ಈ ಚೆಕ್ ಧಾರಕರು ನಿಜಕ್ಕೂ ನೀವೇನಾ ಎಂಬುದನ್ನು ಪರಿಶೀಲನೆ ಮಾಡುವುದು ಇಲ್ಲಿನ ವಿಚಾರವಲ್ಲ ಬಿಡಿ. ಯಾರಾದರೂ ಒಂದು ಲಕ್ಷದ ಚೆಕ್ ಬರೆದು ಕೊಟ್ಟು, ತೊಗೊಳ್ಳಪ್ಪ ಇಟ್ಕೋ ಅಂತ ಹೇಳಿದರೆ ನೀವು ಆ ಚೆಕ್ ಧಾರಕನಾಗಲು ಸಿದ್ದವೇ? ಸುಮ್ನೆ ಕೊಟ್ಟರೆ ಆಲೋಚಿಸಿ ತೆಗೆದುಕೊಳ್ಳಿ, ಆಯ್ತಾ?

ಹಾಗಂತ ಎಲ್ಲ ಧಾರಕರದ್ದೂ ಜೀವನದಲ್ಲಿನ ಅತ್ಯುತ್ತಮ ಕೆಲಸ ಅಥವಾ ಮಾನ್ಯತೆ ಅಂದುಕೊಳ್ಳದಿರಿ. ಈ ಧಾರಕರದ್ದು ಎಷ್ಟೋ ಬಾರಿ ಸಂಕಷ್ಟದ ಕೆಲಸವೂ ಹೌದು.

ಹಲವಾರು ದಿನಗಳಿಂದ ಒಂದು ದೊಡ್ಡ ಪ್ರಾಜೆಕ್ಟ್ ಕೆಲಸಕ್ಕೆ ತಯಾರಿ ನಡೆದಿದೆ. ನೀವೂ ಒಂದು ಕೊಂಡಿಯಾಗಿ ನಿಮ್ಮ ಕಂಪನಿಯ ಪರವಾಗಿ ಆ ಟೀಮಿನ ಜೊತೆ ಕೆಲಸ ಮಾಡುತ್ತಿದ್ದೀರಾ ಅಂದುಕೊಳ್ಳಿ. ಆದರೆ ಇದ್ದಕ್ಕಿದ್ದಂತೆ ಬೇರೇನೋ ಅತೀ ದೊಡ್ಡ ಕುತ್ತು ಬಂದಿದ್ದು, ಆ ಪ್ರಾಜೆಕ್ಟ್ ಟೀಮಿಗೆ ಹೋಗಿ, ಸಾರೀ ನಿಮ್ಮ ಪ್ರಾಜೆಕ್ಟ್ ಅನ್ನು ಒಪ್ಪಿಗೆ ನೀಡಲು ನಮ್ಮಲ್ಲಿ ಹಣವಿಲ್ಲ ಅಂತ ಹೇಳಬೇಕು.

ಇಂಥಾ ಸನ್ನಿವೇಶ ಬಹಳ ಹಿಂಸಾತ್ಮಕ. ನಿಮ್ಮ ಒಪ್ಪಿಗೆ ಇದ್ದೇ ಇದೆ ಎಂದುಕೊಂಡೇ ಆ ಹೊರಗಿನ ಟೀಮಿನವರು ಏನೇನೋ ಸಿದ್ಧ ಮಾಡಿಕೊಂಡಿರುತ್ತಾರೆ. ಆದರೆ ಈ ನಿಮ್ಮ ಮಾತಿನಿಂದ ಎಷ್ಟೋ ಹೃದಯಗಳು ನಿಂತು ಹೋಗುವ ಸಂಭವವಿದೆ. ಆ ಕ್ಷಣದವರೆಗೂ ದೇವರಾಗಿದ್ದ ನೀವು, ನೀವು ಸುದ್ದಿ ಹೇಳಿದ ಆ ಮರುಕ್ಷಣದಲ್ಲಿ ನಿಮ್ಮನ್ನು ದ್ವೇಷಿಸುವ ಹಲವಾರು ಮಂದಿ ಹುಟ್ಟುಕೊಳ್ಳಲಿದ್ದಾರೆ. ಇಂಥಾ ಕೆಡುಕು ಸುದ್ದಿ ಧಾರಕರಾಗುವ ಕೆಲಸಕ್ಕೆ ಯಾರೂ ಮುಂದೆ ಬರಲಾರರು.

ಇದರಂತೆಯೇ ನೀವೊಬ್ಬ ಮ್ಯಾನೇಜರ್ ಆಗಿದ್ದು, ನಿಮ್ಮ ಟೀಮಿನಲ್ಲಿರುವ ಒಬ್ಬಾತನಿಗೆ ನಿನ್ನ ಕೆಲಸ ಹೋಗಿದೆ, ಇಂದು ಸಂಜೆಯೇ ಕೊನೆಯ ದಿನ ಅಂತ ಹೇಳಬೇಕು. ಇಂಥವರು sad news bearer. ರಾಜಮಹಾರಾಜರ ಕಾಲದಲ್ಲಿ ಮಹಾರಾಜರನಿಗೆ ಒಂದು ಸುದ್ದಿ ಮುಟ್ಟಿಸಬೇಕು ಎಂದರೆ ಕತ್ತಿಯ ಅಲುಗಿನ ಮೇಲೆ ನಡೆದಂತೆ. ಸಾಮಾನ್ಯವಾಗಿ ಎಲ್ಲವೂ ಆ ಮಹಾರಾಜನ ಮೂಡ್ ಮೇಲೆ ಅವಲಂಬಿತ. ಮಹಾಪ್ರಭೂ, ಮಹಾರಾಣಿಯವರು ಹೆಣ್ಣು ಮಗುವನ್ನು ಹೆತ್ತಿದ್ದಾರೆ ಎಂದಾಗ ಗಂಡೇಕೆ ಆಗಲಿಲ್ಲ ಎಂದು ತಲೆಕೆಟ್ಟು ಸಂದೇಶ ಧಾರಕನ ತಲೆಯನ್ನೇ ತೆಗೆಯಬಹುದು.

ಇನ್ನು ದು:ಖದ ಸಮಾಚಾರ ತಿಳಿಸಬೇಕಾದರಂತೂ ಆ ಧಾರಕರು ಬದುಕುವ ಸಂಭವನೀಯತೆಯೇ ಕಡಿಮೆ. ಇದೆಲ್ಲಕ್ಕಿಂತಾ ಇನ್ನೊಂದು ಮಜಲು ಮೇಲೆ ಎಂಬ sad news bearer ಕೆಲಸ ಎಂದರೆ ಸಾವಿನ ಸುದ್ದಿಯನ್ನು ತಿಳಿಸುವುದು. ಯುದ್ಧದಲ್ಲಿ ವೀರಾವೇಶದಿಂದ ಒಬ್ಬ ಸೈನಿಕ ಮಡಿದಿದ್ದಾನೆ ಎಂದುಕೊಳ್ಳಿ. ಈ ವಿಷಯವನ್ನು ಆತನ ಮನೆಯವರಿಗೆ ತಿಳಿಸಬೇಕು ಎಂದು ನಿಮ್ಮನ್ನು ನೇಮಿಸಿದ್ದಾರೆ ಅಂದುಕೊಳ್ಳಿ.

ನಾನು ಈ ಕೆಲಸ ಮಾಡಬಲ್ಲೆ ಎಂದು ಅಂದುಕೊಂಡು ಆ ಮನೆಗೆ ಹೋಗುತ್ತೀರಾ ಅಂದುಕೊಳ್ಳಿ. ಆ ಮನೆಯಲ್ಲಿ ಆ ಯೋಧನ ಒಂದು ವರ್ಷದ ಕೂಸು ಕಣ್ಣಿಗೆ ಬಿತ್ತು ಎಂದಾಗ, ಆ ಸೈನಿಕನ ತುಂಬು ಗರ್ಭಿಣಿ ಮಡದಿ ಬಾಗಿಲು ತೆರೆದಳು ಅಂದುಕೊಳ್ಳಿ, ಸೈನಿಕನ ವಯಸ್ಸಾದ ಅಪ್ಪ-ಅಮ್ಮ ಎದುರಿಗೆ ಬಂದರು ಎಂದುಕೊಳ್ಳಿ ಅಥವಾ ಸೈನಿಕ ಬರುತ್ತಿದ್ದಾನೆ ಎಂಬ ಸಂತಸದಲ್ಲಿ ಬಂಧುಬಳಗ ಎಲ್ಲರೂ ಸೇರಿದ್ದಾರೆ ಎಂಬ ಯಾವುದೇ ಸನ್ನಿವೇಶ ನಿಮಗೆ ಎದುರಾಯಿತು ಎಂದುಕೊಳ್ಳಿ. ಆಗ ನಿಮ್ಮ ಪರಿಸ್ಥಿತಿ ಹೇಗಿರಬಹುದು ಅಂತ ಒಮ್ಮೆ ಆಲೋಚಿಸಿ. ಇಂಥಾ bad news bearer ಅರ್ಥಾತ್ ಕೆಟ್ಟ ಸುದ್ದಿ ಧಾರಕರ ಕೆಲಸ ಎಂಥಾ ಕ್ಲಿಷ್ಟ ಅಲ್ಲವೇ?

Bearer ಅಥವಾ ಧಾರಕನಾಗಲು ಒಂದು ಅರ್ಹತೆ ಅಂತ ಇರುತ್ತದೆ. ಈ ಅರ್ಹತೆ ಒಂದು ಡಿಗ್ರಿಯಿಂದ ಬರುವಂಥದ್ದಲ್ಲ. ನಿಜ ಹೇಳಬೇಕು ಎಂದರೆ ಇಲ್ಲಿ ಯಾವ ಡಿಗ್ರಿಯೂ ಕೆಲಸಕ್ಕೆ ಬರೋದಿಲ್ಲ. ಮೂರ್ನಾಲ್ಕು ಟೇಬಲ್'ನವರಿಂದ ಊಟತಿಂಡಿ ಆರ್ಡರ್ ತೆಗೆದುಕೊಂಡು ಅವರವರ ಟೇಬಲ್'ಗೆ ಅವರದ್ದೇ ಊಟತಿಂಡಿ ಸಪ್ಲೈ ಮಾಡುವುದಕ್ಕೂ ಒಂದು ಅರ್ಹತೆ ಬೇಕು.

ಒಂದು ಒಳ್ಳೆಯ ಸುದ್ದಿಯನ್ನು ಹೇಳಲೂ ಅರ್ಹತೆ ಬೇಕು. ಒಂದು ಹೃದಯ ವಿದ್ರಾವಕ ಸುದ್ದಿ ಹೇಳಲು ಅರ್ಹತೆ ಬೇಕೇ ಬೇಕು. ಭಾವನೆಗಳನ್ನು ಹತ್ತಿಕ್ಕಿ ಸುದ್ದಿ ತಿಳಿಸುವ ಅರ್ಹತೆ ಬೇಕೇ ಬೇಕು.

ಸಂತಸದ bearer ಆಗಿ ನಿಮ್ಮ ಅನುಭವ ಏನು? ದು:ಖದ ಸನ್ನಿವೇಶದ ಧಾರಕರಾಗಿ ನೀವು ಸಮರ್ಪಕವಾಗಿ ಕೆಲಸ ನಿರ್ವಹಿಸಿದ್ದೀರಾ? ಅಥವಾ ಎಡವಟ್ಟಾಗಿತ್ತಾ? ಏನಾದರೂ ಹೇಳಿ ಆಯ್ತಾ?

English summary
Let know how and when you want to be Servant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X