ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಇದ್ದರೂ ಇರದಂತೆ ಇರುವುದೇ blind spot

By ಶ್ರೀನಾಥ್ ಭಲ್ಲೆ
|
Google Oneindia Kannada News

ಇಂದಿನ ವಿಷಯ blind spot.. ಇದ್ದರೂ ಇರದಂತೆ ಇರುವುದೇ blind spot. ಇಲ್ಲಿ blind ಎಂದರೆ ಕುರುಡುತನ ಎನ್ನುತ್ತಾರೆ. ಆದರೆ ಸದಾ ಇದೇ ಅರ್ಥವಾಗಬೇಕಿಲ್ಲ. spot ಎಂದರೆ ಜಾಗ. ಯಾವ ಒಂದು ಜಾಗವು ನಮ್ಮ ದೃಷ್ಟಿಯನ್ನು ತಪ್ಪಿಸಿಕೊಳ್ಳಬಹುದೋ ಅದು ಬ್ಲೈಂಡ್ ಸ್ಪಾಟ್ ಎನ್ನಬಹುದು. ಈ ವಿಷಯವನ್ನು ಹಲವಾರು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ನೋಡೋಣ ಬನ್ನಿ.

ಕಣ್ಣಿನ ಲೆನ್ಸ್ ಎಂಬುದೇನಿದೆಯೋ ಅದರ ಹಿಂಭಾಗದ ಒಂದು ಚಿಕ್ಕ ಜಾಗವು ಬ್ಲೈಂಡ್ ಸ್ಪಾಟ್ ಎನಿಸಿಕೊಳ್ಳುತ್ತದೆ. ಅರ್ಥಾತ್ ಆ ಒಂದು ಜಾಗದಲ್ಲಿ ಒಂದಿನಿತೂ ಬೆಳಕಿಲ್ಲದೆ ನಮ್ಮ ದೃಷ್ಟಿಯಿಂದ ದೂರವಾಗಿರುತ್ತದೆ. ವೈದ್ಯಕೀಯವಾಗಿ ಹೇಳುವುದರ ಪ್ರಕಾರ ನಮ್ಮ ಬುದ್ದಿಯು ಆ ಹೀನತೆಯನ್ನು ಮರೆಮಾಚುತ್ತದೆ. ಕತ್ತಲಲ್ಲಿ ಟಾರ್ಚ್ ಬೆಳಕನ್ನೂ ಆರಿಸಿದರೆ ಹೇಗೋ ಹಾಗೆ.

ಶ್ರೀನಾಥ್ ಭಲ್ಲೆ ಅಂಕಣ: ಈ ಜಗತ್ತು ಭಯಂಕರ ಜಟಿಲ ಆಗುತ್ತಿದೆ ಅಂತ ಅನ್ನಿಸ್ತಾ ಇದೆಯೇ?ಶ್ರೀನಾಥ್ ಭಲ್ಲೆ ಅಂಕಣ: ಈ ಜಗತ್ತು ಭಯಂಕರ ಜಟಿಲ ಆಗುತ್ತಿದೆ ಅಂತ ಅನ್ನಿಸ್ತಾ ಇದೆಯೇ?

ಈ ಬ್ಲೈಂಡ್ ಸ್ಪಾಟ್ ಎಂಬ ವಿಷಯದ ಬಳಕೆ ಬಹಳ ಹೆಚ್ಚಾಗಿ ಕಂಡು ಬರುವುದೇ ವಾಹನಗಳಲ್ಲಿ. ನಾಲ್ಕು ಚಕ್ರದ ವಾಹನದಲ್ಲಿ rear view ಕನ್ನಡಿ ಇರುತ್ತದೆ. ಇಲ್ಲಿ ನಿಮ್ಮ ಹಿಂದೆ ಯಾವ ಗಾಡಿ ಬರುತ್ತಿದೆ ಎಂಬುದು ತಿಳಿಯುತ್ತದೆ. side view ಕನ್ನಡಿಯಲ್ಲಿ ಬದಿಯಲ್ಲಿ ಬರುವ ವಾಹನಗಳು ಸ್ಪಷ್ಟವಾಗಿ ಕಾಣುತ್ತದೆ ನಿಜ, ಆದರೆ ಅದಕ್ಕೊಂದು ಕೋನದ ಪರಿಮಿತಿ ಅಡ್ಡಬರುತ್ತದೆ. ಈ ಎರಡು ನೋಟಗಳ ನಡುವೆ ಒಂದಷ್ಟು ಜಾಗವೇನಿದೆಯೋ ಅದುವೇ ಬ್ಲೈಂಡ್ ಸ್ಪಾಟ್. ಅರ್ಥಾತ್ ಅಲ್ಲೊಂದು ವಾಹನ ಬರುವುದೇ ಅರಿವಿಗೆ ಬರುವುದಿಲ್ಲ.

Srinath Bhalle Column: Blind Spot Word Is Commonly Used In Vehicles

ವಾಹನಗಳ ಚಾಲನೆ ಕಲಿಯುವ ಹಂತದಲ್ಲಿ ಈ ಬ್ಲೈಂಡ್ ಸ್ಪಾಟ್ ಅನ್ನು ಯಾವ ರೀತಿ ಗೆಲ್ಲಬೇಕು ಎಂಬುದನ್ನೂ ಕಲಿಸುತ್ತಾರೆ. ಒಂದು ಲೇನ್'ನಲ್ಲಿ ಸಾಗುವಾಗ ಎಡ ಅಥವಾ ಬಲದ ಲೇನ್'ಗೆ ಸಾಗುವ ಮುನ್ನ ಕುತ್ತಿಗೆಯನ್ನು ತಿರುಗಿಸಿ ನೋಡಿಯೇ ನಂತರ ಪಕ್ಕದ ಲೇನ್'ಗೆ ಸಾಗಬೇಕು. ಅಂದ ಹಾಗೆ, ಕುತ್ತಿಗೆ ತಿರುಗಿಸಬೇಕು ಎಂದಾಗ ಥಟ್ಟನೆ ನೋಡಬೇಕು ಮತ್ತೆ ಮುಂದೆ ನೋಡಬೇಕು. ಇಲ್ಲಿ ಕೊಂಚ ಚಾಕಚಕ್ಯತೆ ಬೇಕು ಅನ್ನಿ. ಸಾಗುವ ವೇಗ ಕೊಂಚ ತಗ್ಗಿಸಿ ಮತ್ತೊಂದು ಬದಿಗೆ ನೋಡಿ, ಎಲ್ಲವೂ ಸರಿಯಾಗಿದೆ ಎನಿಸಿದ ಮೇಲೆ ಪಕ್ಕದ ಲೇನ್'ಗೆ ಸಾಗಬೇಕು ಅನ್ನಿ.

ಇದೆಲ್ಲಾ ಸರಿ, ಆದರೆ ನಾನಿಲ್ಲ ಡ್ರೈವಿಂಗ್ ತರಗತಿ ನಡೆಸಲು ಹೇಳುತ್ತಿದ್ದೀನಾ ಅಂತ ಅನ್ನಿಸಿರಬೇಕು ಅಲ್ಲವೇ? ಅಂದ ಮೇಲೆ, ಈ ಬ್ಲೈಂಡ್ ಸ್ಪಾಟ್ ಎನ್ನುವುದು ನಮ್ಮ ನಿತ್ಯ ಜೀವನದಲ್ಲೂ ಇದ್ದೇ ಇದೆ ಅಂತಾಯ್ತು. ಹಾಗಿದ್ರೆ, ನಮ್ಮ ಜೀವನದಲ್ಲಿ ಈ ಬ್ಲೈಂಡ್ ಸ್ಪಾಟ್ ಹೇಗೆ ಮತ್ತು ಎಲ್ಲಿ ಅಡಕವಾಗಿದೆ ನೋಡೋಣ ಜೊತೆಗೆ ಸಾಧ್ಯವಾದರೆ ಇದನ್ನು ಹತ್ತಿಕ್ಕಲು ಏನಾದರೂ ಸಾಧನವಿದೆಯೇ ಎಂದೂ ನೋಡೋಣ.

ಮೊದಲಿಗೆ ಈ ಬ್ಲೈಂಡ್ ಸ್ಪಾಟ್ ಎಂದರೆ ಕಣ್ಣಿಗೆ ಬೀಳದೆ ಸಾಗುವ ಅಥವಾ ನಮ್ಮ ಅರಿವು ಅಲ್ಲಿ ತಲುಪಲು ಸೋಲುವ ಒಂದು ಪ್ರದೇಶ. ಈ ಪ್ರದೇಶದ ವಿಸ್ತೀರ್ಣ ಎನ್ನುವುದನ್ನು ಸ್ಪಾಟ್ ಎಂದು ಹೇಳಿರುವುದರಿಂದ ಅತೀ ಚಿಕ್ಕ ಪ್ರದೇಶವೇ ಆಗಿರುತ್ತದೆ ನಿಜ, ಆದರೆ ಅಪಘಾತವಾಗಲು ಇನ್ನೆಷ್ಟು ಜಾಗ ಬೇಕು ಅಥವಾ ಸಮಯ ಬೇಕು ಹೇಳಿ? ಗಾಡಿಯನ್ನು ಚಲಿಸುವಾಗ ಒಂದು ಘಳಿಗೆ ಕಣ್ಣು ಮುಚ್ಚಿದರೂ ಶಾಶ್ವತವಾಗಿ ಕಣ್ಣು ಮುಚ್ಚುವ ಪರಿಸ್ಥಿತಿ ಎದುರಾಗಬಹುದು. ಹೀಗೆಯೇ ಜೀವನ ಕೂಡ.

ಒಂದು ಸಣ್ಣ ಸ್ಪಾಟ್ ನಮ್ಮ ಕಣ್ಣು ತಪ್ಪಿದರೂ ಸಂಬಂಧಗಳ ಅವಘಡ ತಪ್ಪದು, ಹಾಗಂತ ಪ್ರತೀ ಕ್ಷಣವೂ 360 ಡಿಗ್ರಿ ನೋಡಿ ಹೆಜ್ಜೆ ಇಡಬೇಕೆ? ಹಾಗಿದ್ರೆ ಒಂದೊಂದೂ ಕೆಲಸವನ್ನು ಮುಗಿಸಲು ಒಂದು ಯುಗವೇ ಆದೀತು. ಇದಕ್ಕೇನು ಪರಿಹಾರ? ಜೀವನದಲ್ಲಿ ಎಚ್ಚರವಿರಬೇಕಾದುದು ಎಲ್ಲರ ಕರ್ತವ್ಯ ನಿಜ. ಎಚ್ಚರವಿದ್ದಷ್ಟೂ ಅವಘಡಗಳು ಕಡಿಮೆ. ಆದರೆ ಬ್ಲೈಂಡ್ ಸ್ಪಾಟ್ ಎಂಬುದನ್ನು ಹತ್ತಿಕ್ಕಲು ವಿಶಾಲವಾದ ಮನಸ್ಸು ಅತ್ಯಗತ್ಯ. ಹೀಗೆಂದರೆ ಏನು?

ನಾವು ಯಾರಿಗೋ ಕರೆ ಮಾಡುತ್ತೇವೆ. ಸನ್ನಿವೇಶ ಹೇಗಿದೆ ಎಂದರೆ ನಮಗೇನೋ ಕೆಲಸವಾಗಿರಬೇಕಿರುತ್ತೆ ಅಥವಾ ಬೇರೇನೂ ಕೆಲಸವಿಲ್ಲದೆ ಟೈಮ್ ಪಾಸ್ ಆಗಲೆಂದು ಕರೆ ಮಾಡಿರಲೂಬಹುದು. ಆಗ ಕರೆ ಸ್ವೀಕರಿಸಿದವರು ಒಂದೆರಡು ಮಾತು ಮುಗಿಸಿ ಮತ್ತೆ ಮಾಡುತ್ತೇನೆ ಎಂದು ಫೋನ್ ಇಡಬಹುದು ಅಥವಾ ಕರೆಯನ್ನೇ ಸ್ವೀಕರಿಸದೇ ಇರಬಹುದು ಕೂಡ.

ಆ ಸಂದರ್ಭಕ್ಕೆ ಅತೀ ಹೆಚ್ಚು ಮಹತ್ವ ಕೊಡದೆ ಅಥವಾ ವಿಪರೀತ ಅರ್ಥ ಕೊಟ್ಟು ಅನರ್ಥ ಮಾಡಿಕೊಳ್ಳದೆ ಇದ್ದರೆ ಅಡ್ಡಿಯಿಲ್ಲ, ಬದಲಿಗೆ ಅವರಿಗೆ ತಾನು ಕರೆ ಮಾಡಿದ್ದು ಆಸ್ತಿ ಹೋಗಲಿಲ್ಲ. ಅವರಿಗೆ ತಮ್ಮನ್ನು ಕಂಡರೆ ಆಗುವದಿಲ್ಲ. ಅವರಿಗೆ ನಮಗೆ ಸಹಾಯ ಮಾಡಲು ಇಷ್ಟವಿಲ್ಲ ಎಂದೆಲ್ಲಾ ಅನುಮಾನದ ಹುತ್ತ ಬೆಳೆಸಿಕೊಳ್ಳಲು ಆರಂಭಿಸಿದರೆ ಅಲ್ಲಿಗೆ ಸಂಬಂಧಗಳು ಮುರಿದಂತೆ.

ಆಮೇಲೆ ಕರೆ ಮಾಡುತ್ತೇನೆ ಎಂದರವರು ಮರು ಕರೆ ಮಾಡಿ ಮಾತನಾಡಿ ಅವರಿಗೇನು ಬೇಕು ಎಂದು ಕೇಳುವುದೂ ಧರ್ಮವೇ. ಈ ಕಡೆಯವರಿಗೆ ಆ ಕಡೆಯವರ ಪರಿಸ್ಥಿತಿ ಬ್ಲೈಂಡ್ ಸ್ಪಾಟ್. ಅದರಂತೆಯೇ ಈ ಕಡೆಯವರು ಏನೇನೋ ಊಹಿಸಿಕೊಂಡಿರುವುದು ಆ ಕಡೆಯವರಿಗೆ ಬ್ಲೈಂಡ್ ಸ್ಪಾಟ್. ವಿಶಾಲ ಹೃದಯ ಎಂಬುದು ಏನಪ್ಪಾ ಎಂದರೆ ಒಬ್ಬರು ವಿಪರೀತ ಅರ್ಥ ಕೊಟ್ಟು ತಲೆ ಕೆಡಿಸಿಕೊಳ್ಳದೆ ಇರುವುದು. ಅದರಂತೆಯೇ ಮತ್ತೊಬ್ಬರು ಮರು ಕರೆ ಮಾಡಿ, ಸಾಧ್ಯವಾದರೆ ಅವರ ಪರಿಸ್ಥಿತಿ ವಿವರಿಸಿ ಅಂದು ಸರಿಯಾಗಿ ಮಾತನಾಡದೇ ಇದ್ದುದಕೆ ಕ್ಷಮೆ ಯಾಚಿಸುವುದು. ನಮ್ಮಿಂದ ಇದು ಎಷ್ಟು ಬಾರಿ ಆಗಿರಬಹುದು?

ಮನೆಯ ಪರಿಸ್ಥಿತಿಯನ್ನು ಅರಿಯದೇ ಮಕ್ಕಳು ಅದು ಬೇಕು, ಇದು ಬೇಕು ಅಂತ ತಮ್ಮ ಬೇಡಿಕೆ ಸಲ್ಲಿಸೋದು ಬಹಳ ಸಾಮಾನ್ಯ ನೋಟ. ಮಕ್ಕಳಿಗೇಕೆ ನಮ್ಮ ಕಷ್ಟಗಳನ್ನು ಹೇಳಿಕೊಳ್ಳೋದು ಎಂಬುದು ಆ ಮಕ್ಕಳಿಗೆ ಮನೆಯ ಪರಿಸ್ಥಿತಿ ಎಂಬುದು ಬ್ಲೈಂಡ್ ಸ್ಪಾಟ್. ಅವರು ಗಾಡಿ ಬೇಕು ಎಂದಾಗ, ಮೊಬೈಲ್ ಬೇಕೋ ಎಂದಾಗ ಸಾಲ ಮಾಡಿ ಬೇಡಿಕೆ ಪೂರೈಸಿದರೆ ಅವರಿಗೆ ಕಷ್ಟವೇ ಅರ್ಥವಾಗುವುದಿಲ್ಲ. ಅದು ಅವರ ತಪ್ಪಲ್ಲ ಏಕೆಂದರೆ ಅವರಿಗೆ ಕಷ್ಟವೇ ಬ್ಲೈಂಡ್ ಸ್ಪಾಟ್. ಬೆಳಕು ಚೆಲ್ಲಿದರೆ ಅವರಿಗೆ ಅರ್ಥವಾಗುತ್ತದೆ. ಪ್ರಯತ್ನ ನಮ್ಮದಾಗಬೇಕು.

ನೆಲದ ಮೇಲೆ ಜೀವಿಸುವ ಸಸ್ತನಿಗಳಲ್ಲಿ ಕುದುರೆಗಳಿಗೆ ಅತೀ ದೊಡ್ಡ ಕಂಗಳು ಇರುತ್ತದೆ. ಜೊತೆಗೆ ಗಾಡಿಯ sideನಲ್ಲಿರುವ ಕನ್ನಡಿಯಂತೆ ಇದ್ದು 350 ಡಿಗ್ರಿ ವಿಷನ್ ಹೊಂದಿರುತ್ತದೆ. ಹೇಳಿದ್ದೇಕೆ ಎಂದರೆ ಇಷ್ಟಿದ್ದೂ ಇವಕ್ಕೆ 10 ಡಿಗ್ರಿಯಷ್ಟು ಬ್ಲೈಂಡ್ ಸ್ಪಾಟ್ ಇದೆ. ಒಂದರ್ಥದಲ್ಲಿ ಮನುಷ್ಯರಾದ ನಮಗೆ ಕಾಣುವುದಕ್ಕಿಂತಾ ಬ್ಲೈಂಡ್ ಸ್ಪಾಟ್ ಗಳೇ ಹೆಚ್ಚು.

ದೃಷ್ಟಿಗೆ ಗೋಚರವಾಗುವ ವಿಷಯದ ಬಗ್ಗೆ ನಮಗಿನ್ನೇನೂ ಮಾಡಲಾಗದು. ಕುತ್ತಿಗೆಯ ಹಿಂದೆ ಒಂದು ಕಣ್ಣನ್ನು ಹೊಂದಿ rear view ಕನ್ನಡಿಯನ್ನು ಮಾಡಿಕೊಳ್ಳಲಾಗದು. ಆದರೆ, ವಿಷಯಗಳ ಅರಿವು ಮೂಡಿಸಿಕೊಳ್ಳುವ ದಿಶೆಯಲ್ಲಿ ವೈಚಾರಿಕೆ ದೃಷ್ಟಿಕೋನ ಬೆಳೆಸಿಕೊಂಡು ಪ್ರಬುದ್ಧರಾಗಿ ಬ್ಲೈಂಡ್ ಸ್ಪಾಟ್ ಗಳನ್ನೂ ತಗ್ಗಿಸಬಹುದು. ನೀವೇನಂತೀರಾ?

English summary
In the Mammals that live on the ground have the largest eyes for horses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X