ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಕನ್ನಡಕದೊಳಗಿಂದ ಕಾಣ್ತಿದೆ ಈ ಅಂದ

|
Google Oneindia Kannada News

ಪ್ರೇಮಲೋಕ ಚಿತ್ರದ, ಹಂಸಲೇಖರ ಸಾಹಿತ್ಯದ ಹಾಡಿನ ಭಾಗವಾದ 'ಕನ್ನಡಕದೊಳಗಿಂದ ಕಾಣ್ತಿದೆ ಈ ಅಂದ' ಬಹುಶಃ ಎಲ್ಲರಿಗೂ ಗೊತ್ತಿರಬಹುದು ಎಂದುಕೊಳ್ಳುತ್ತೇನೆ. ಈ ಹಾಡಿನ ದೃಶ್ಯ ಭಾಗದ ಸಾಹಿತ್ಯಕ್ಕೂ ಸನ್ನಿವೇಶಕ್ಕೂ ಕೊಂಚ ಗೊಂದಲ ಇದೆ ಅಂತ. ಒಮ್ಮೆ ಸರಿಯಾಗಿದೆ ಅನ್ನಿಸಿದರೆ ಮತ್ತೊಮ್ಮೆ ಇಲ್ಲಾ ಅನ್ನಿಸಿತು. ಈ ನನ್ನ ಗೊಂದಲವನ್ನು ಯಾರ ಮುಂದಾದರೂ ಹೇಳಿಕೊಳ್ಳಲೇಬೇಕು, ಮತ್ತೊಬ್ಬರಿಗೆ ವರ್ಗಾಯಿಸಬೇಕು ಅಂತ ಈ ಲೇಖನ ಬರೆದದ್ದು.

ಕನ್ನಡಕ ಎಂದರೆ ಅದೊಂದು ಸಾಧನ. ಅದನ್ನು Goggles ಎಂದೂ ಕರೆಯುತ್ತಾರೆ. ಕನ್ನಡಕವು ಮೂಲತಃ ಮೂಗಿನ ಮೇಲೆ ಕೂತು ಬದಿಯ ಕನ್ನಡಕ ಕಡ್ಡಿಗಳು ಕಿವಿಗಳ ಮೇಲೆ ಕೂತಿರುತ್ತದೆ. ಅರ್ಥಾತ್ ಆ ಕನ್ನಡಕ ಗಾಜು ಕಣ್ಣುಗಳಿಗೆ ಮಾತ್ರ ಹಾಗಾಗಿ ಗಾಳಿ ಆಡಲು ಜಾಗವೂ ಇರುತ್ತದೆ. ಹೀಗೇಕೆ ಹೇಳಿದೆ ಎಂದರೆ Goggles ಎಂಬುದು ವಿಭಿನ್ನ ಸನ್ನಿವೇಶದಲ್ಲಿ ಬಳಸುವ ಸಾಮಾನ್ಯ ಪದ. ಓದುವುದಕ್ಕೆ ಮಾತ್ರ ಬಳಸುವ ಕನ್ನಡಕ, ದೃಷ್ಟಿ ತೊಂದರೆ ನಿವಾರಿಸಲು ಬಳಸುವ ಕನ್ನಡಕ ಅಥವಾ ಈಜುವವರು ಬಳಸುವುದೂ ಕನ್ನಡಕವೇ. Goggles ಎಂದರೆ Spectacles ಕೂಡ, ಆದರೆ Sunglasses ಅಲ್ಲ.

 ಶ್ರೀನಾಥ್ ಭಲ್ಲೆ ಅಂಕಣ: ಮನಸ್ಸಿನಿಂದ ಮರೆಯಾಗದ ಸಂಖ್ಯೆಗಳು ಶ್ರೀನಾಥ್ ಭಲ್ಲೆ ಅಂಕಣ: ಮನಸ್ಸಿನಿಂದ ಮರೆಯಾಗದ ಸಂಖ್ಯೆಗಳು

ತಂಪುಕನ್ನಡಕ ಬಳಸಿದಾಗ ದೃಷ್ಟಿ ದೋಷ ಸರಿಯಾಗುವುದಿಲ್ಲ
Sunglasses ಎಂಬುದನ್ನು ತಂಪುಕನ್ನಡಕ ಎಂದೂ ಕರೆಯುತ್ತೇವೆ. ಇಂಥಾ ಸಾಧನದ ಗಾಜು, ಸೂರ್ಯನ ಪ್ರಖರತೆಯನ್ನು ತಡೆಯುವಂತೆ ಮಾಡಲಾಗಿರುತ್ತದೆ. ತಂಪುಕನ್ನಡಕ ಬಳಸಿದಾಗ ದೃಷ್ಟಿ ದೋಷ ಸರಿಯಾಗುವುದಿಲ್ಲ. ಅತಿಯಾದ ಬೆಳಕಿನಿಂದ ಕಣ್ಣನ್ನು ತಂಪಾಗಿರಿಸಲು, ಯುವಿ ಕಿರಣಗಳನ್ನು ಹತ್ತಿಕ್ಕಲು ಬಳಸುವ ಸಾಧನ ಈ ತಂಪುಕನ್ನಡಕ.

Srinath Bhalle Column: Beauty Appeared From Goggles


'ಕನ್ನಡಕದೊಳಗಿಂದ ಕಾಣ್ತಿದೆ ಈ ಅಂದ' ಎಂದಾಗ ಹಲವಾರು ಅರ್ಥ ಬರುತ್ತದೆ. ನಿನ್ನ ಸೌಂದರ್ಯ ಕಣ್ಣು ಕುಕ್ಕುತ್ತಿದೆ. ಅದನ್ನು ತಡೆಯಲು ತಂಪು ಕನ್ನಡಕ ಹಾಕಿಕೊಂಡು ನಿನ್ನ ಅಂದ ನೋಡ್ತಾ ಇದ್ದೀನಿ ಎನ್ನಬಹುದು. ಭಗಭಗ ಎನ್ನುತ್ತಿರುವ ನಿನ್ನ ಯೌವ್ವನವು ತಂಪು ಕನ್ನಡಕದಲ್ಲಿ ಕೂಲ್ ಆಗಿ ನೋಡುತ್ತಿದ್ದೇನೆ ಎನ್ನಬಹುದು. ಸೌಂದರ್ಯೋಪಾಸನೆಯ ದೃಷ್ಟಿಯಲ್ಲಿ ಹೇಳಿದರೆ ಸಾಹಿತ್ಯಕ್ಕೂ ಸನ್ನಿವೇಶಕ್ಕೂ ಅರ್ಥವಿದೆ. ಕನ್ನಡಕ ಹಾಕಿಕೊಂಡ ಮೇಲೆ ನಿನ್ನ ಸೌಂದರ್ಯ ಸ್ಪಷ್ಟವಾಗಿ ಕಾಣ್ತಿದೆ ಎಂದು ಹಾಡುತ್ತಾ ತಂಪುಕನ್ನಡಕ ಏರಿಸಿದಾಗ ಸಾಹಿತ್ಯಕ್ಕೂ ಸನ್ನಿವೇಶಕ್ಕೂ ಅರ್ಥವಿಲ್ಲ ಎನಿಸುತ್ತದೆ. ನೀವು ಆ ಜೂಲಿಯನ್ನು ಪವರ್ ಕನ್ನಡಕ ಹಾಕಿಕೊಂಡು ನೋಡಿದಿರಾ? ತಂಪು ಕನ್ನಡಕ ಹಾಕಿಕೊಂಡು ನೋಡಿದಿರಾ?

ಶ್ರೀನಾಥ್ ಭಲ್ಲೆ ಅಂಕಣ: ಬುದ್ದಿ ಮರುಬಳಕೆ ಮಾಡಿ ಒಂದಷ್ಟು ಚಿಂತನೆ ಮಾಡುವಶ್ರೀನಾಥ್ ಭಲ್ಲೆ ಅಂಕಣ: ಬುದ್ದಿ ಮರುಬಳಕೆ ಮಾಡಿ ಒಂದಷ್ಟು ಚಿಂತನೆ ಮಾಡುವ

ಕಣ್ಣಿನೊಳಗೆ ನೀರು ಹೋದಾಗ ಮುಂದೆ ದಾರಿ ಕಾಣುವುದಿಲ್ಲ
Goggles ಎಂಬುದರ ಮತ್ತೊಂದು ಕಾರ್ಯ ಎಂದರೆ ರಕ್ಷಣೆ. ಈಜುವವರು Goggles ಧರಿಸಿ ನೀರಿಗೆ ಇಳಿಯುತ್ತಾರೆ. ಬಹುಶಃ ಟಿವಿಯಲ್ಲಿ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಸ್ವಿಮ್ಮಿಂಗ್ ಸ್ಪರ್ಧೆ ನೋಡಿರುತ್ತೀರಿ. ಕಣ್ಣಿನೊಳಗೆ ನೀರು ಹೋಗದಂತೆ ತಡೆಯಲು, ಆ ಕನ್ನಡಕದ ಸುತ್ತಲಿನ ರಬ್ಬರ್ ಮುಖಕ್ಕೆ ಕಚ್ಚಿಕೊಂಡಂತೆ ಕೂತು ಒಳಗೆ ನೀರು ಹೋಗದಂತೆ ಕಾಯ್ದುಕೊಳ್ಳುತ್ತದೆ. ಕಣ್ಣಿನೊಳಗೆ ನೀರು ಹೋದಾಗ ಮುಂದೆ ದಾರಿ ಕಾಣುವುದಿಲ್ಲ ಎಂಬುದು ಒಂದು. ಎರಡನೆಯದು ಎಂದರೆ ನೀರಿಗೆ ಕೆಮಿಕಲ್ಸ್ ಹಾಕಿ ಸಂಸ್ಕರಣ ಮಾಡುತ್ತಾರೆ. ಅಂಥಾ ನೀರು ಕಣ್ಣಿನೊಳಗೆ ಹೋದರೆ ಕಣ್ಣು ಉರಿಯುತ್ತದೆ ಮತ್ತು ಕೆಂಪಾಗುತ್ತದೆ. ಕೆಲವೊಮ್ಮೆ ಇನ್ನೂ ಹೆಚ್ಚಿನ ತೊಂದರೆಯೂ ಆಗಬಹುದು. ಈ Goggles ಎಂಬುದಕ್ಕೆ power ಇರುವುದಿಲ್ಲ. ಇದರ ಕೆಲಸ ಬರೀ ರಕ್ಷಣೆ ಅಷ್ಟೇ.

ತಂಪುಕನ್ನಡಕವನ್ನು ಬಳಸುವುದು ಹೆಚ್ಚಿನ ಬೆಳಕನ್ನು ತಡೆಯಲು ಅಂತ ಹೇಳಿದೆ. ಟಿವಿ ಕಾರ್ಯಕ್ರಮಗಳಲ್ಲಿ ಅಥವಾ ಸ್ಟೇಜಿನ ಮೇಲೆ ಬಂದಾಗ ಅಥವಾ ದೊಡ್ಡ ಪ್ರಶಸ್ತಿ ಸಮಾರಂಭಕ್ಕೆ ಅಂತೆಲ್ಲಾ ಈ ಸೆಲೆಬ್ರಿಟಿ ಮಂದಿ ಬಂದಾಗ ಅವರು ತಂಪು ಕನ್ನಡಕ ಧರಿಸಿರುತ್ತಾರೆ. ಒಂದು, ಬೆಳಕನ್ನು ತಡೆಯಲು ಮತ್ತೊಂದು ಶೋಕಿ ಎನ್ನಬಹುದು. ಪವರ್ ಇರುವ ಕನ್ನಡಕ ಧರಿಸುವವರು ತಂಪು ಕನ್ನಡಕ ಹೇಗೆ ಧರಿಸುತ್ತಾರೆ?

Recommended Video

ಡಕ್ ಔಟ್ ಗಳ ಸರದಾರ ಯಾರು ಗೊತ್ತಾ | Oneindia Kannada

ಶ್ರೀನಾಥ್ ಭಲ್ಲೆ ಅಂಕಣ: ಕೋಟಿನ ಬಗ್ಗೆ ಕೋಟ್ಸ್ ಹಾಕಿ ಒಂದೆರಡು ವಿಷಯ ಕೋಟ್ ಮಾಡೋಣಶ್ರೀನಾಥ್ ಭಲ್ಲೆ ಅಂಕಣ: ಕೋಟಿನ ಬಗ್ಗೆ ಕೋಟ್ಸ್ ಹಾಕಿ ಒಂದೆರಡು ವಿಷಯ ಕೋಟ್ ಮಾಡೋಣ

ಬೆಳಕಿಗೆ ಹೋದ ಕೂಡಲೇ ತಂಪು ಕನ್ನಡಕದಂತೆ ಕಪ್ಪಾಗುತ್ತದೆ
ಪವರ್ ಇರುವ ಕನ್ನಡಕ ತೆಗೆದರೆ ಎದುರಿಗೆ ಇರುವವರೇ ಕಾಣಿಸದೆ ಹೋದಾಗ ತಂಪುಕನ್ನಡಕ ಧರಿಸಿ ಏನು ಮಾಡಿಯಾರು ಪಾಪ? ಹಾಗೇನಿಲ್ಲ ಬಿಡಿ, ಟೂ-ಇನ್-ಒನ್ ಗಾಜು ಇರುವುದೇ ಅದಕ್ಕೆ ಅಲ್ಲವೇ? ಎಲ್ಲಿ ಸೂರ್ಯನ ಬೆಳಕು ಇರುವುದಿಲ್ಲವೋ ಅಲ್ಲಿ ಪಾರದರ್ಶಕವಾಗಿ ಕಾಣುವ ಈ ಗಾಜು, ಸೂರ್ಯನ ಬೆಳಕಿಗೆ ಹೋದ ಕೂಡಲೇ ತಂಪು ಕನ್ನಡಕದಂತೆ ಕಪ್ಪಾಗುತ್ತದೆ. ಇದು ಹೇಗೇ ಬದಲಾದರೂ ಅದರಲ್ಲಿ power ಮಾತ್ರ ಬದಲಾಗುವುದಿಲ್ಲ. ಹೀಗಾಗಿ ದೃಷ್ಟಿ ದೋಷದ ಪರಿಹಾರವೂ ಆಯ್ತು, ಕಣ್ಣೂ ತಂಪಾಯ್ತು. ಸ್ವಾಮಿಕಾರ್ಯ ಸ್ವಕಾರ್ಯ.

ಕಣ್ಣಿನ ತೊಂದರೆ ಎಂದರೆ ಹತ್ತಿರದ್ದು ಕಾಣದೇ ಇರುವುದು ಅಥವಾ ದೂರದ್ದು ಕಾಣದೇ ಇರುವುದು ಯಾವುದೂ ಆಗಬಹುದು. ಸಮೀಪದೃಷ್ಟಿದೋಷ ಅಥವಾ ದೂರದೃಷ್ಟಿದೋಷ ಎನ್ನುತ್ತಾರೆ. ಎರಡು ಕಣ್ಣುಗಳು ನಮ್ಮವೇ ಆಗಿದ್ದರೂ ದೋಷದ ವಿಷಯದಲ್ಲಿ ಅವು ಬೇರೆ ಬೇರೆ ಅಂಗಗಳು. ಕೊನೆಯ ಬೆಂಚಿನಲ್ಲಿ ಕುಳಿತಿರುವವರಿಗೆ ಬೋರ್ಡಿನ ಮೇಲೆ ಬರೆದಿರುವುದು ಮಸುಕು ಮಸುಕಾಗಿ ಕಂಡರೆ ಅಲ್ಲಿ ದೋಷವಿದೆ ಅಂತಾಯ್ತು. ನಾಲ್ಕಾರು ಬೆಂಚು ಮುಂದೆ ಕೂತರೆ ಕಂಡರೂ ಕಾಣಬಹುದು ಆದರೆ ಸ್ಪಷ್ಟತೆ ಇರದೇ ಹೋಗಬಹುದು.

ಗಂಡುಪಾಳ್ಯದ ಸುಲೋಚನಾ ಅಥವಾ ಸೋಡಾಬುಡ್ಡಿ
ಮೊದಲ ಬೆಂಚಿನಲ್ಲಿ ಕೂತರೆ ಕಂಡರೂ, ದೇವರು ಕೊಟ್ಟ ದೇಹ, ಅವರನ್ನು ಬೆಂಚಿನಲ್ಲಿ ಕೂರದಂತೆ ಮಾಡಿದಾಗ ಕನ್ನಡಕದ ಮೊರೆ ಹೋಗಲೇಬೇಕಾಗುತ್ತದೆ. ಹಾಗೆ ಬಂದ ಕನ್ನಡಕವನ್ನು ಮೊದಲ ಬಾರಿಗೆ ಧರಿಸಿದಾಗ ಎಲ್ಲಿ ಬಿದ್ದುಬಿಡುತ್ತೇವೆಯೋ ಎನ್ನಿಸುವುದು ಸಹಜ. ಕೆಲವೊಮ್ಮೆ ಸಂಕೋಚವೂ ಅಡ್ಡಬರಬಹುದು. ಅದರಲ್ಲೂ ಹೆಂಗಳಿಗೆ ಈ ಸಂಕೋಚ ಕೊಂಚ ಹೆಚ್ಚು ಎನ್ನಬಹುದು. ಎಲ್ಲಿ ಕಾಲೇಜು ಗಂಡುಪಾಳ್ಯದ ಸುಲೋಚನಾ ಅಥವಾ ಸೋಡಾಬುಡ್ಡಿ ಎಂದೆಲ್ಲಾ ಹೆಸರು ಇಡುವರೋ ಎಂಬ ಭೀತಿ. ಇಂದು ಈ ಸಂಕೋಚವೂ ಇಲ್ಲ, ಜೊತೆಗೆ ಲೆನ್ಸ್ ಕೂಡ ಸರ್ವೇಸಾಮಾನ್ಯವಿರುವಾಗ ಏನೂ ಅಡ್ಡಿಯಿಲ್ಲ. ಎಲ್ಲಕ್ಕಿಂತಾ ಮಿಗಿಲಾಗಿ ದೃಷ್ಟಿ ದೋಷದವರೇ ಹೆಚ್ಚಿನ ಮಂದಿ ಇರುವಾಗ ಕನ್ನಡಕ ಹಾಕದವರೇ ಗುಂಪಿನಿಂದ ಹೊರಗಿನವರು ಎನ್ನಬಹುದು.

ನೀರು ಕೂತಾಗ ಕನ್ನಡಕಕ್ಕೊಂದು Wiper ಇದ್ದಿದ್ರೆ ಚೆನ್ನಿತ್ತು
ಲೆನ್ಸ್ ಬಳಸುವ ಅಭ್ಯಾಸದಲ್ಲಿ ಒಳಿತೂ ಕೆಡುಕೂ ಎರಡೂ ಇದೆ. ಮೊದಲಿಗೆ ಒಳಿತು ಏನು ಅಂತ ನೋಡುವ. ಕನ್ನಡಕ ಹಾಕುವ ಗೋಜು ಇಲ್ಲ. ಹೊರಗಿನ ವಾತಾವರಣಕ್ಕೆ ಕನ್ನಡಕ ಮೇಲೆ ಆವಿ ಕೂತಾಗ ಅಥವಾ ಮಳೆಯಲ್ಲಿ ನೀರು ಕೂತಾಗ ಕನ್ನಡಕಕ್ಕೊಂದು Wiper ಇದ್ದಿದ್ರೆ ಚೆನ್ನಿತ್ತು ಅನ್ನಿಸದೇ ಇರುವುದಿಲ್ಲ. ಮೂಗಿನ ಮೇಲೆ ಭಾರ ಕೂತು ಅಲ್ಲೇ ಕಪ್ಪಾಗುವುದು ತಪ್ಪುತ್ತದೆ. ಈ ದಿನಗಳಲ್ಲಿ ಮಾಸ್ಕ್ ಧರಿಸಿದಾಗ ಗಾಜಿನ ಮೇಲೆ ನಮ್ಮ ಉಸುರಿನ ಆವಿ ಉಂಟಾಗುವುದರಿಂದ ಕೊಂಚ ಭಿನ್ನವಾಗಿ ಮಾಸ್ಕ್ ಧರಿಸಬೇಕಾಗುತ್ತದೆ, ಈ ತೊಂದರೆ ಲೆನ್ಸ್ ಬಳಸಿದಾಗ ಇರುವುದಿಲ್ಲ. ಕೊಂಚ ಭಿನ್ನವಾದ ಬಣ್ಣದ ಲೆನ್ಸ್ ಬಳಸಿ ಕಣ್ಣಿನ ಸೌಂದರ್ಯ ಪ್ರದರ್ಶನವನ್ನೂ ಮಾಡಬಹುದು. ಹೀಗೆಯೇ ನಾನಾ ವಿಧವಾದ ಅನುಕೂಲಗಳು ಇವೆ.

ಕಣ್ಣು ನೆವೆಯಾಯಿತು ಎಂದು ಉಜ್ಜಿಕೊಂಡರೆ ತೊಂದರೆಯ ಪ್ರಮಾಣ ಹೆಚ್ಚು
ಲೆನ್ಸ್ ಬಳಕೆಯಿಂದ ತೊಂದರೆಯೂ ಮತ್ತು ಹಿಂಸೆಯೂ ಇದೆ ಬಿಡಿ. ಮೊದಲಿಗೆ ಆ ಲೆನ್ಸ್ ಧರಿಸುವುದಕ್ಕೇ ಕೆಲವರಿಗೆ ಭೀತಿ. ನನ್ನ ಕಣ್ಣನ್ನು ನಾನೇ ತಿವಿದುಕೊಳ್ಳುವುದೇ? ನನಗಾಗದು ಅಂತ ಲೆನ್ಸ್ ಧರಿಸಲೇ ಹಿಂಜರಿಯುತ್ತಾರೆ. ಲೆನ್ಸ್ ಧರಿಸಲು ಇಷ್ಟವಿದ್ದು, ಹಿಂಜರಿಯುವ ಮಹಾಜನತೆ ಒಮ್ಮೆ ಬೇಡರ ಕಣ್ಣಪ್ಪನನ್ನು ನೆನೆಯಿರಿ. ಲೆನ್ಸ್ ಧರಿಸುವವರು ಕಂಡ ಕಡೆ ಸಣ್ಣಗೆ ನಿದ್ದೆ ತೆಗೆಯಲು ಕಷ್ಟವಾಗುತ್ತದೆ. ಲೆನ್ಸ್ ಮಸುಕಾದರೆ ಹಿಂಸೆ. ನಿದ್ದೆಗಣ್ಣಿನಲ್ಲಿ ಅಥವಾ ಸಾಮಾನ್ಯವಾಗಿಯೇ ಕಣ್ಣು ನೆವೆಯಾಯಿತು ಎಂದು ಉಜ್ಜಿಕೊಂಡರೆ ತೊಂದರೆಯ ಪ್ರಮಾಣ ಹೆಚ್ಚು. ಲೆನ್ಸ್ ಧರಿಸುವವರು ಧಗಧಗ ಉರಿಯುವ ಬೆಂಕಿಯ ಸಮೀಪ ಇರಬಾರದು. ಬಿಸಿಗೆ ಲೆನ್ಸ್ ಕರಗಿದರೆ ಕಣ್ಣೇ ಕಳೆದುಕೊಳ್ಳಬೇಕಾದೀತು. ದುಬೈ ಅಥವಾ ರಾಜಸ್ಥಾನ್ ಕಡೆ ಹೋದರೆ ಮರಳ ಮೇಲೆ ಗಾಳಿ ಬೀಸುವಾಗಲೂ ಎಚ್ಚರಿಕೆ ಇರಲಿ. ತಂಪುಕನ್ನಡಕ ಧರಿಸಲು ಮರೆಯದಿರಿ.

ಕನ್ನಡಕ ತೆಗೆಯುವಾಗ ಒಂದೇ ಹಸ್ತದಲ್ಲಿ ತೆಗೆಯದಿರಿ
ಈಗ ಮೊದಲಿನ ಮಾತಿಗೇ ಬರುವ. 'ಕನ್ನಡಕದೊಳಗಿಂದ ಕಾಣ್ತಿದೆ ಈ ಅಂದ' ಅಂತ ಆ ಮನ್ಮಥ, ಪವರ್ ಇರುವ ತಂಪುಕನ್ನಡಕ ಧರಿಸಿದ ಅಂತಾನೇ ಅಂದುಕೊಳ್ಳಿ, ಅಲ್ಲಿಯವರೆಗೆ ಅವಳು ಸರಿಯಾಗಿ ಕಂಡಿಲ್ಲ ಅಂದರೆ ಅವನಿಗೆ ಸಮೀಪ ದೃಷ್ಟಿದೋಷ ಅಂತಾಯ್ತು ಅಲ್ಲವೇ? ಈ ವಿಷಯ ಅವಳಿಗೆ ಅರ್ಥವಾಗಿ 'ಮನ್ಮಥ' ಎಂಬುದನ್ನು ವ್ಯಂಗ್ಯವಾಗಿ ಹೇಳಿದ್ದರೆ ಅದು ಸರಿ ಇಲ್ಲ. ಕನ್ನಡಕ ಧರಿಸುವವರು ಮನ್ಮಥರಲ್ಲವೇ? ಅದು ಸೌಂದರ್ಯ ಹೆಚ್ಚಿಸುವ ಸಾಧನ. ತಲೆಯಲ್ಲಿ ಏನಿದೆಯೋ ಇಲ್ಲವೋ ಗೊತ್ತಿಲ್ಲ ನಾನಂತೂ extra ಬುದ್ದಿವಂತನಂತೆ ಕಾಣುತ್ತಿದ್ದುದೇ ಕನ್ನಡಕ ಹಾಕಿದ ಮೇಲೆ.

ಕನ್ನಡಕ ಧರಿಸುವವರು, ಕನ್ನಡಕ ತೆಗೆಯುವಾಗ ಒಂದೇ ಹಸ್ತದಲ್ಲಿ ತೆಗೆಯದಿರಿ, ಎರಡೂ ಹಸ್ತಗಳನ್ನು ಬಳಸಿ ತೆಗೆಯಬೇಕು. ಒಂದು ಬದಿಯ ಕಡ್ಡಿ ಸೊಟ್ಟವಾಗಬಹುದು. ಈ ತಿಳಿಜ್ಞಾನ ನೀಡಿ ಹೊರಡುವ ಮುನ್ನ ಒಂದಷ್ಟು ಪ್ರಶ್ನೆಗಳನ್ನು ಕೇಳಲೇ? ಗಾಂಧೀಜಿ ಅವರು ಬಳಸುತ್ತಿದ್ದ ವೃತ್ತಾಕಾರದ ಕನ್ನಡಕದ ಫ್ರೇಮಿನ ವ್ಯಾಸ ಅರ್ಥಾತ್ Diameter ಎಷ್ಟು? ಹೋಗಲಿ ಬಿಡಿ, ಸುಮ್ಮನೆ ಕೇಳಿದ್ದು. 20/80 vision ಎಂದರೇನು? ದೃಷ್ಟಿದೋಷ ಇಲ್ಲದ ಗಿಡುಗದ ದೃಷ್ಟಿಯ ತಾಕತ್ ಎಷ್ಟು ಗೊತ್ತೇ? ಸದ್ಯಕ್ಕೆ ಇಷ್ಟು ಆಲೋಚಿಸಿ ಆಯ್ತಾ? ನಾನಿನ್ನು ಬರಲೇ?

English summary
Goggles basically sit on the nose and the side Goggles sticks sit on the ears.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X