ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: Additional Sheet ಎಂದರೆ ಹೆಚ್ಚುವರಿ ಹಾಳೆಗಳು

By ಶ್ರೀನಾಥ್ ಭಲ್ಲೆ
|
Google Oneindia Kannada News

Additional Sheet ಅಥವಾ ಹೆಚ್ಚುವರಿ ಹಾಳೆಗಳು ಎಂದ ಕೂಡಲೇ ಶಾಲೆಯ ದಿನಕ್ಕೆ ಮನಸ್ಸು ಹಾರುತ್ತದೆ. ಅದರಲ್ಲೂ ದಿನನಿತ್ಯದ ಶಾಲೆ ಅಲ್ಲ, ಬದಲಿಗೆ ಎರಡು ಅಥವಾ ಮೂರು ಮಹಾ ಪರೀಕ್ಷೆಗಳ ಸಮಯಕ್ಕೆ ಹಾರುತ್ತದೆ.

ಅರ್ಧ ವಾರ್ಷಿಕ ಪರೀಕ್ಷೆ, ಪ್ರಿಪರೇಟರಿ ಪರೀಕ್ಷೆ ಮತ್ತು ಫೈನಲ್ ಪರೀಕ್ಷೆಗಳ ಯಜ್ಞಗಳೇ ಈ ಎರಡು ಅಥವಾ ಮೂರು ಪರೀಕ್ಷೆಗಳು. ಇಲ್ಲಿ ಎರಡು ಅಥವಾ ಮೂರು ಎಂದಿರುವುದು ಏಕೆ ಅಂದರೆ, ಎಲ್ಲೆಡೆ ಪ್ರಿಪರೇಟರಿ ಪರೀಕ್ಷೆಗಳು ಇರುವುದಿಲ್ಲ. ಒಂದರ್ಥದಲ್ಲಿ ಈ ಪ್ರಿಪರೇಟರಿ ಪರೀಕ್ಷೆ ನಡೆಸಲೇಬೇಕು ಅಂತೇನಿಲ್ಲ ಕೂಡ.

ಶ್ರೀನಾಥ್ ಭಲ್ಲೆ ಅಂಕಣ: ಜೀವನದಲ್ಲಿ ದೃಷ್ಟಿ ಇದ್ದರೆ ಸಾಲದು ದೂರದೃಷ್ಟಿ ಇರಬೇಕುಶ್ರೀನಾಥ್ ಭಲ್ಲೆ ಅಂಕಣ: ಜೀವನದಲ್ಲಿ ದೃಷ್ಟಿ ಇದ್ದರೆ ಸಾಲದು ದೂರದೃಷ್ಟಿ ಇರಬೇಕು

ಈ ಯಜ್ಞಕ್ಕೆ ಸುರಿಯುವ ಹವಿಸ್ಸು ನಾವು ಓದಿ ಮನನ ಮಾಡಿಕೊಂಡಿರುವ ವಿಷಯ ಅಥವಾ ಅರ್ಥೈಸಿಕೊಂಡ ವಿಚಾರ. ಆದರೆ ಎಷ್ಟೋ ಸಾರಿ ಹೀಗಾಗುವುದೇ ಇಲ್ಲ. ಉರು ಹೊಡೆದು ಹದಿನಾರು ಹಾಳೆಗಳ ಬುಕ್ ಲೆಟ್ ಮೇಲೆ ವಾಕರಿಸಿಕೊಂಡಿದ್ದೇ ಹೆಚ್ಚು. ಅರ್ಥಾತ್ ಪರೀಕ್ಷೆ ಮುಗಿದ ಮರುದಿನವೇ ಓದಿದ್ದೇನು ಅಂತ ಕೇಳಿದರೆ ನೆನಪೇ ಇರುತ್ತಿರಲಿಲ್ಲ.

Srinath Bhalle Column: Additional Sheet means More Answer Papers

ಮೊದಲಿಗೆ ಪರೀಕ್ಷೆಯ ಹಾಲ್'ನ ಒಂದು ಚಿತ್ರಣವನ್ನು ಮನಸ್ಸಿಗೆ ತಂದುಕೊಳ್ಳೋಣ. ತರಗತಿಯ ಸಮಯದಲ್ಲಿ ಒಂದು ಬೆಂಚಿನಲ್ಲಿ ನಾಲ್ಕು ಮಂದಿ ಹುಡುಗ ಅಥವಾ ಹುಡುಗಿಯರು ಕೂತರೂ ಪರೀಕ್ಷೆಯ ಸಮಯದಲ್ಲಿ ಮಾತ್ರ ಬೆಂಚಿಗೆ ಇಬ್ಬರು ಮಾತ್ರ. ಸೋಶಿಯಲ್ distancing ಎನ್ನುವ ಹಾಗೆ ಆ ತುದಿಗೊಬ್ಬರು ಈ ತುದಿಗೊಬ್ಬರು. ನಮ್ಮ ಬೆಂಚಿನ ಆ ತುದಿಯಲ್ಲಿ ಹುಡುಗಿ ಕೂತರೆ ಅದೃಷ್ಟ ಅಂತ ಅಂದುಕೊಳ್ಳುವ ವಯಸ್ಸಲ್ಲ ಅದು. ಆದರೆ ನಮ್ಮ ರಿಜಿಸ್ಟರ್ ನಂಬರ್ ಹೊತ್ತಿರುವ ಡೆಸ್ಕ್ ನಾವು ದಿನಾ ಕೂರುವ ಕ್ಲಾಸ್ ರೂಮು ಮತ್ತು ಬೆಂಚ್ ಆಗಿದ್ದರೆ ಅದೊಂದು ಅದೃಷ್ಟ ಅಂದುಕೊಂಡವರೂ ಇದ್ದಾರೆ. ನಿಮಗೆ ಹೇಗೆ?

ಮುಂದೆ ಹೋಗೋಣ ಬನ್ನಿ. ಪರೀಕ್ಷೆಯ ಆರಂಭದಲ್ಲಿ ಅರ್ಥಾತ್ ಇನ್ನೂ ಬೆಲ್ ಹೊಡೆಯುವ ಮುನ್ನ ಎಲ್ಲರಿಗೂ ಉತ್ತರ ಬರೆಯಲು ಹಾಳೆಯ ಬುಕ್ ಲೆಟ್ ಅನ್ನು ಹಂಚಲಾಗುತ್ತದೆ. ಮೊದಲ ಹಾಳೆಯ ಮೇಲೆ ನಮ್ಮ ರಿಜಿಸ್ಟರ್ ನಂಬರ್ ಮತ್ತಿತರ ಮಾಹಿತಿ ಬರೆಯಬೇಕು. ಇಲ್ಲೊಂದು ಪುಟ್ಟ ಸನ್ನಿವೇಶ ಹೇಳಲೇಬೇಕು. ಕಾಪಿ ಹೊಡೆದು ಅಭ್ಯಾಸವಿಲ್ಲದ ನಾನು, ಹೈಸ್ಕೂಲ್'ನಲ್ಲಿದ್ದಾಗ ಒಮ್ಮೆ, ನನ್ನ ಉತ್ತರ ಪತ್ರಿಕೆಯ ಮೇಲೆ ಪಕ್ಕದಲ್ಲಿ ಇದ್ದ ಶ್ರೀಕಾಂತನ ನಂಬರ್ ಬರೆದಿದ್ದೆ !

ಇರಲಿ, ಆ ನಂತರ ಪ್ರಶ್ನೆಪತ್ರಿಕೆ ನೀಡಿದ ಮೇಲೆ ಎಲ್ಲೆಡೆ ಮೌನವೋ ಮೌನ. ಹಾಳೆಯ ಮೇಲೆ ಬರೆಯುವ ಸದ್ದು ಏನಾದರೂ ಕೇಳುವಂತೆ ಇದ್ದರೆ ಎಲ್ಲೆಡೆ ಕರಕರ ಸದ್ದು ಕೇಳುತ್ತಿತ್ತು. ಈ ಕರಕರ ಬಹುಶಃ ಹಲವಾರು ಕಡೆಯಿಂದ ಕೇಳಿ ಬಂದರೂ ಅಲ್ಲೆಲ್ಲೋ ಒಂದು ಕಡೆಯಿಂದ ಪರಪರ ಸದ್ದೂ ಬರಬಹುದು. ಪರೀಕ್ಷೆಯ ಉತ್ತರದ ಹಾಳೆಯಂತೆಯೇ ಮೆದುಳೂ ಕ್ಲೀನಾಗಿದ್ದರೆ ಬರೆಯುವುದಾದರೂ ಏನು? ಹಾಗಾಗಿ ಅಲ್ಲಲ್ಲೇ ತಲೆ ಕೆರೆದುಕೊಳ್ಳುವ ಪರಪರ ಸದ್ದು ಕೇಳುವುದು ಅಪರೂಪವೇನಲ್ಲ.

ಮೊದಲ ಅರ್ಧ ಗಂಟೆ ಕಳೆದು ಒಂದು ಬೆಲ್ ಹೊಡೆದಂತೆ, ಏನೊಂದೂ ಉತ್ತರ ಅರಿಯದ ಮುಗ್ದ ವಿದ್ಯಾರ್ಥಿಗಳು, ವಿಪರೀತ ತಲೆಕೆರೆದುಕೊಂಡರೆ ಗಾಯ ಆದೀತು ಎಂದು ಹೆದರಿ ತಿಳಿದಿದ್ದಷ್ಟೇ ಬರೆದ ಹಾಳೆಯನ್ನು ಹಿಂದಿರುಗಿಸಿ ಜಾಗ ಖಾಲೀ ಮಾಡುವುದು ಇದೆ. ಅರ್ಧಗಂಟೆಗೆ ಎದ್ದುಹೋಗುವವರು ನೇರವಾಗಿ ಇನ್ವಿಜಿಲೇಟರ್ ಮುಖವನ್ನೇ ನೋಡುವುದಿಲ್ಲ.

ಈಗ ಮಿಕ್ಕವರ ಕಥೆಗೆ ಬರೋಣ. ಎಲ್ಲರೂ ಉತ್ತರ ಬರೆಯುತ್ತಾ ಸಾಗಿರುವಾಗ ಅಲ್ಲೊಂದು ಮೂಲೆಯಿಂದ - ಸರ್ ಅಥವಾ ಮ್ಯಾಮ್..! additional sheet ಎಂಬ ಹೆಣ್ಣಿನ ದನಿ ಬಂತು ಅಂದುಕೊಳ್ಳಿ, ಅಲ್ಲಿಗೆ ಮಿಕ್ಕವರ ಎದೆಯಲ್ಲಿ ಅವಲಕ್ಕಿ ಕುಟ್ಟಲು ಆರಂಭ.

ಹುಡುಗಿ ಅಂದಿದ್ದು ನಿಜ, ಆದರೆ ಬುದ್ದಿವಂತ ಹುಡುಗರೂ ಕೇಳಬಹುದು ಬಿಡಿ. ಇಡೀ ಪ್ರಶ್ನೆ ಪತ್ರಿಕೆಯ ಉತ್ತರವೆಲ್ಲಾ ಬರೆದಾಯ್ತು, ಇನ್ನೂ ಒಂದೆರಡು ಖಾಲೀ ಹಾಳೆ ಬಾಕಿ ಇರುವ ಹಾಗಿದೆ, ಇದ್ಯಾರಪ್ಪಾ ಇನ್ನೂ ಹಾಳೆ ಬೇಕೂ ಅಂತಿರೋದು, ಎಂಬ ಟೆನ್ಶನ್ ಶುರುವಾಗೋದು ಸಹಜ. ಮತ್ತೆ ಮತ್ತೆ ಇಡೀ ಪತ್ರಿಕೆ ನೋಡಿಕೊಳ್ಳುವ ಹಾಗೆ ಆಗುತ್ತದೆ.

ಕೆಲವೊಮ್ಮೆ ಈ ಅತೀ ಬುದ್ದಿವಂತರು ಪದೇ ಪದೇ additional sheet ಅಂತ ಕೇಳುತ್ತಾ ಇದ್ದಾಗ ಆ ಇನ್ವಿಜಿಲೇಟರ್ ಪ್ರತೀ ಸಾರಿ ಎದ್ದು ಹೋಗಿ ಕೊಡೋದೇನು ಅಂತ ಐದಾರು ಹಾಳೆ ಕೊಟ್ಟು ಎಷ್ಟು ಬೇಕಾದರೂ ಬರಿ ಅಂತ ಹಾರೈಸಿರುವುದೂ ಇದೆ.

ಸಾಮಾನ್ಯವಾಗಿ additional sheet ಬೇಕು ಅಂತ ಕೇಳುವುದು ಎರಡು ವಿಷಯಗಳಲ್ಲಿ. ಒಂದು ಗಣಿತ ಮತ್ತೊಂದು ಸಮಾಜ. ಗಣಿತದ ಸಮಸ್ಯೆಗಳನ್ನು ಬಿಡಿಸುವಾಗ ಉತ್ತರ ತಪ್ಪಾದರೂ, ಸ್ಟೆಪ್ಸ್'ಗೆ ಅಂಕಗಳು ದೊರೆಯುವುದರಿಂದ, ಕೊಂಚ ದೂರ ದೂರ ಸ್ಪಷ್ಟವಾಗಿ ಕಾಣುವಂತೆ ಬರೆಯುವುದು ಸಹಜ. ಹೀಗಾಗಿ ಹೆಚ್ಚುವರಿ ಹಾಳೆಗಳು ಬೇಕಾಗುತ್ತದೆ. ಹಲವೊಮ್ಮೆ ಅರ್ಧ ಸಮಸ್ಯೆ ಬಿಡಿಸಿದಾಗ ಎಲ್ಲೋ ಎಡವಿದ್ದೇನೆ ಎಂಬುದು ಅರಿವಾಗಿ ಅಷ್ಟನ್ನೂ ಹೊಡೆದು ಹಾಕಿ ಮತ್ತೆ ಆರಂಭಿಸುವುದೂ ಇದೆ. ಹೀಗಾದಾಗಲೂ ಹೆಚ್ಚುವರಿ ಹಾಳೆಗಳು ಬೇಕಾಗುತ್ತದೆ.

ಸಮಾಜದ ವಿಚಾರವೇ ಬೇರೆ. ಅದೇನೋ ಗೊತ್ತಿಲ್ಲ, ಜಾಸ್ತಿ ಬರೆದಷ್ಟೂ ಅಂಕ ಬರುತ್ತದೆ ಅಂತ ಒಂದು ಪ್ರತೀತಿ ಇದೆ. ಈಗ ಶಿಕ್ಷಕರಾಗಿರುವವರು ಇದು ನಿಜವೇ ಅಲ್ಲವೇ ಎಂದು ಹೇಳಿ ಆಯ್ತಾ? ಬರೆದಷ್ಟೂ ಒಳ್ಳೆಯದು ಎಂಬ ಭ್ರಮೆಯಿಂದ ಉದ್ದೂಟಾಗಿ ಬರೆಯುತ್ತಾ ಸಾಗುವುದರಿಂದಲೇ ಹೆಚ್ಚುವರಿ ಹಾಳೆಗಳ ಅವಶ್ಯಕತೆ ಬರೋದು.

ಇದೆಲ್ಲದರ ಆಚೆ ಇನ್ನೊಂದು ವರ್ಗ ಇದೆ. ಅವರುಗಳು ಹೆಚ್ಚುವರಿ ಹಾಳೆಗಳನ್ನು ಕೇಳುವುದಿಲ್ಲ ಬದಲಿಗೆ ಕೊಟ್ಟಿರುವ ಹಾಳೆಗಳನ್ನೇ ತುಂಬಿಸುವ ಶಕ್ತಿವಂತರು. ಇದೇನು ದೊಡ್ಡ ವಿಷಯ ಎನ್ನಬೇಡಿ, ನಾನು ಹೇಳುತ್ತಿರುವ ವರ್ಗದವರಿಗೆ ಪ್ರಶ್ನೆಪತ್ರಿಕೆಯಲ್ಲಿ ಕೇಳಿರುವ ಪ್ರಶ್ನೆಗೇ ಉತ್ತರ ಬರೆಯಬೇಕು ಅಂತೇನಿಲ್ಲ. ತಮಗಿಷ್ಟ ಬಂದಿದ್ದನ್ನು ಬರೆಯುತ್ತಾರೆ, ಸಿನಿಮಾ ಹಾಡನ್ನು ಬರೆಯುತ್ತಾರೆ.

ಒಮ್ಮೆಯಂತೂ ಒಬ್ಬ ವಿದ್ಯಾರ್ಥಿ ತಾನು ಇತ್ತೀಚಿಗೆ ನೋಡಿದ ಸಿನಿಮಾದ ಕಥೆಯನ್ನೇ ಬರೆದಿದ್ದ. ಈ ವರ್ಗದಲ್ಲೇ ಮತ್ತೊಂದು ವರ್ಗವೂ ಇದೆ. ಅದೇನಪ್ಪಾ ಎಂದರೆ ಅಹವಾಲು. ನಮಸ್ತೆ ಸರ್, ನನ್ನ ಮದುವೆ ಫಿಕ್ಸ್ ಆಗಿದೆ. ಅತ್ತೆಯ ಮನೆಯವರು, ಹುಡುಗಿ sslc ಪರೀಕ್ಷೆ ಪಾಸು ಮಾಡಿದರೆ ಮಾತ್ರ ಮದುವೆ ಅಂದಿದ್ದಾರೆ, ನಾನು ನಿಮ್ಮ ಮಗಳಂತೆ, ದಯವಿಟ್ಟು ನನ್ನನ್ನು ಪಾಸ್ ಮಾಡಿ ಎಂದೂ ಬರೆದಿರುತ್ತಾರೆ. ಅಲ್ಲಲ್ಲೇ ಕೆಲವರು ಉತ್ತರ ಬರೆವ ಪತ್ರಿಕೆಯಲ್ಲಿ ದಯವಿಟ್ಟು ಪಾಸ್ ಮಾಡಿ ಅಂತ ನೂರೋ ಅಥವಾ ಇನ್ನೂರೋ ದಕ್ಷಿಣೆಯನ್ನೂ ಇಡುತ್ತಾರೆ.

ಜೀವನ ಕಾಲದಲ್ಲಿ ಹಲವು ಬಾರಿ ಅವಘಡಗಳು ಎದುರಾಗುತ್ತದೆ. ಕೂದಲೆಳೆಯ ಪ್ರಾಣ ಹೋಗೋದು ತಪ್ಪಿತು ಎಂಬ ನುಡಿಗಳನ್ನು ಕೇಳಿಯೇ ಇರುತ್ತೀರಾ. ದೇವರು ದೊಡ್ಡವನು ಪ್ರಾಣ ಹೋಗೋದನ್ನು ತಪ್ಪಿಸಿದ ಎಂಬೆಲ್ಲಾ ನುಡಿಗಳನ್ನು ಆಗಾಗ ಹೇಳಿರುತ್ತೇವೆ ಅಥವಾ ಕೇಳಿರುತ್ತೇವೆ. ಇದ್ದಕ್ಕಿದ್ದಂತೆ ಈ ಮಾತು ಯಾಕೆ ಬಂತು ಅಂತೀರಾ, ಕೂದಲೆಳೆಯ ಅನಾಹುತ ತಪ್ಪಿ ಮತ್ತೆ ಜೀವದಿಂದ ಜೀವನ ಸಾಗಿಸುವುದೂ additional sheet ಗಳನ್ನು ನಮ್ಮ ಬಾಳಿನ ಪುಟಗಳಿಗೆ ಸೇರಿಸಿದಂತೆ. ಇಂಥದ್ದೇ ಸನ್ನಿವೇಶ ಆಸ್ಪತ್ರೆ ವಾಸದಲ್ಲೂ ಆಗಬಹುದು. ದೂರದ ಊರಿನಲ್ಲಿ ಯಾರಾದರೂ ಇದ್ದರೆ, ಕರೆಸಿಬಿಡಿ ಎಂಬ ಪರಿಸ್ಥಿತಿ ಉಂಟಾಗಿದ್ದು, ಆ ನಂತರ ಚೇತರಿಸಿಕೊಂಡು ಮುಂದೆ ಮತ್ತೆ ಹತ್ತು ವರುಷಗಳು ಬದುಕಿರುವ ಉದಾಹರಣೆಗಳನ್ನು ಕಂಡಿದ್ದೇವೆ. ಇದೂ ಒಂದು ರೀತಿ additional sheet ನಂತೆಯೇ.

ನಿತ್ಯ ವ್ಯಾಯಾಮದಿಂದ ದೇಹವನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಾಗುತ್ತದೆ. ಇದರಿಂದಾಗಿ ಆರೋಗ್ಯ ಸುಧಾರಿಸುತ್ತದೆ. ಆರೋಗ್ಯಭರಿತವಾದ additional sheet ಅನ್ನು ಸೇರಿಸಿಕೊಂಡು ಚೆನ್ನಾಗಿರಬಹುದು. ಇಡೀ ದೇಹದ ಆರೋಗ್ಯದ controller ಆದ ಈ ನಮ್ಮ ಮೆದುಳನ್ನು ಚಿಂತೆಗಳ ಗೂಡನ್ನಾಗಿಸದೆ, ಚಿಂತನೆಗಳ ಬೀಡಾಗಿಸಿ ಸುಸ್ಥಿತಿಯ sheets ಆಗಿಸಿಕೊಳ್ಳೋಣ. ಏನಂತೀರಾ?

English summary
The extra sheet means the mind go to the school days flies. Especially not the day-to-day school, but instead two or three grand exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X