ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಹಾಸಿಗೆಯ ಬಗ್ಗೆ ಒಂದಷ್ಟು ಕಲಿಯೋಣ ಬನ್ನಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಹಾಸಿಗೆಯ ಬಗ್ಗೆ ಯಾರಿಗೆ ತಾನೇ ತಾನೇ ಗೊತ್ತಿಲ್ಲ? ಸಾಮಾನ್ಯವಾಗಿ ನಾನು ಕೇಳುವ 'ಎದ್ಬಿಟ್ರಾ'ಗೂ, 'ಮಲಗಿಬಿಟ್ರಾ'ಗೂ ಈ ಮಂಚ ಮತ್ತು ಹಾಸಿಗೆಗೂ ಬಹಳ ನಂಟಿದೆ.

ಮಲಗಿಬಿಟ್ರಾ ಎಂದಾಗ ಮಲಗೋದಕ್ಕೆ ಸಿದ್ಧವಾದ್ರಾ ಅನ್ನೋ ಅರ್ಥದಲ್ಲಿ ಕೇಳೋದು. ಎದ್ಬಿಟ್ರಾ ಎಂದಾಗ ಮಲಗಿ ಎದ್ರಾ ಅನ್ನೋದು. ಮಲಗಿಬಿಟ್ರಾ ಮತ್ತು ಎದ್ಬಿಟ್ರಾ ಎನ್ನುವುದರ ಮಧ್ಯೆ ಹೇಗಿತ್ತು ಅನ್ನೋದೇ ಎದ್ದ ಮೇಲೆ ಮತ್ತೆ ಮಲಗೋ ಮುಂಚೆ ಹೇಗಿತ್ತು ಎನ್ನುವುದರ ಮೇಲೆ ಅವಲಂಬಿತ. ಹೋಗ್ಲಿ ಬಿಡಿ, ಇಷ್ಟೆಲ್ಲಾ ಆಳವಾಗಿ ಹೋಗೋದು ಬೇಡ.

ಕೊರೊನಾ- ಹೇಗಿದೆ ಅಲ್ಲಿ?, ಈಗ, ಇಲ್ಲಿ ಹೇಗಿದೆ ಅಂದ್ರೆ...ಕೊರೊನಾ- ಹೇಗಿದೆ ಅಲ್ಲಿ?, ಈಗ, ಇಲ್ಲಿ ಹೇಗಿದೆ ಅಂದ್ರೆ...

ಮಂಚವಿಲ್ಲದೇ ಹಾಸಿಗೆ ಇರಬಹುದು, ಆದರೆ ಹಾಸಿಗೆ ಇಲ್ಲದೆ ಮಂಚ ಇರಬಹುದ ? Bed ಅಂದ್ರೆ ಮಂಚ, Mattress ಅಂದ್ರೆ ಹಾಸಿಗೆ. ದೊಡ್ಡ ಮನುಷ್ಯರು ಅಂದ್ರೆ ಬೆಡ್ ಕಾಫಿ ಸಾಮಾನ್ಯ. ಕೆಲವು ದೊಡ್ಡ ಮನುಷ್ಯರು ಅಂದ್ರೆ ಬೆಡ್ ಮೇಲೆ ಊಟ ತಿಂಡಿಯೂ ಆಗಬಹುದು ಅನ್ನಿಸುತ್ತೆ. bed coffee ಅಂದಾಗ ಅದು ಮ೦ಚದ ಮೇಲಿನ ಹಾಸಿಗೆ ಮೇಲೆ ಕೂತು ಕಾಫಿ ಕುಡಿಯೋದು ಅಂತ ಅರ್ಥೈಸಿಕೊಳ್ಳಬೇಕು.

Something To Learn About Mattress

"ಹಾಸಿಗೆ ಇದ್ದಷ್ಟು ಕಾಲು ಚಾಚು" ಎನ್ನುವ ಮಾತು ಎಲ್ಲರೂ ಕೇಳಿದ್ದೀರಿ. ಮಧ್ಯಮವರ್ಗಕ್ಕೆ ಹೇಳಿ ಮಾಡಿಸಿದ ಮಾತು. ಹೀಗೆಂದರೆ ಏನು ಅಂದ್ರೆ, ನಿಮ್ಮ ಮಿತಿಯಲ್ಲಿರಿ ಅಂತ. ಎಷ್ಟು ಸಂಪಾದನೆ ಇದೆಯೋ ಅದರೊಳಗೆ ಇರಲಿ ಖರ್ಚು ಅನ್ನೋದು ಒಂದು ಅರ್ಥವಾದರೆ, ಬರುವ ಸಂಪಾದನೆಯಲ್ಲಿ ಒಂದಷ್ಟು ಉಳಿತಾಯ ಇರಲಿ ಅಂತ. ನಾವು ಉದ್ದ ಬೆಳೆಯೋದೇ ಲಿಮಿಟ್ ಆಗಿರೋವಾಗ ನಮ್ದು ಯಾವಾಗ್ಲೂ ಹಾಸಿಗೆಯ ಒಳಗೆಯೇ ಕಾಲು ಅನ್ನೋದು ಹಾಸ್ಯ.

ಯಾವುದನ್ನೂ ನಿರ್ಲಕ್ಷಿಸದಿರಿ, ಹಾಗಂತ ತಲೆಯ ಮೇಲೂ ಕೂರಿಸಿಕೊಳ್ಳದಿರಿಯಾವುದನ್ನೂ ನಿರ್ಲಕ್ಷಿಸದಿರಿ, ಹಾಗಂತ ತಲೆಯ ಮೇಲೂ ಕೂರಿಸಿಕೊಳ್ಳದಿರಿ

ಮತ್ತೆ ಮಧ್ಯಮ ವರ್ಗದ ಮನೆಗಳಲ್ಲಿನ ಒಂದು ಸನ್ನಿವೇಶ ತೆಗೆದುಕೊಳ್ಳಿ. ಹೇಳಿ ಕೇಳಿ ಪುಟ್ಟ ಮನೆ. ರಾತ್ರಿ ಮಲಗುವಾಗ ಹಾಲ್ ಮತ್ತು ವರಾಂಡಾದಲ್ಲೂ ಹಾಸಿಗೆಯನ್ನು ನೆಲದ ಮೇಲೆ ಹಾಸಿಕೊಂಡೇ ಮಲಗಬೇಕು. ಹಾಲ್ ಅಂದ್ರೆ ಅದೇ ಟಿ.ವಿ ಇರುವ ಸ್ಥಳ, ಊಟ ಮಾಡುವ ಸ್ಥಳ, ಬಂಧುಬಾಂಧವರು ಬಂದಿದ್ದಾಗ ಕೂತು ಮಾತನಾಡುವ ಸ್ಥಳ ಹೀಗೆ 10 in 1 ಸ್ಥಳ. ರಾತ್ರಿ ಅಲ್ಲೇ ನೆಲದ ಮೇಲೆ ತಟ್ಟೆ ಹಾಕಿಕೊಂಡು ಕೂತು ಊಟವಾದ ಮೇಲೆ, ಅಲ್ಲಿ ನೆಲ ಸಾರಿಸಿ ಒಣಗಿದ ಮೇಲೆ ಹಾಸಿಗೆ ಹಾಕಿ ಮಲಗಬೇಕು. ಸಾಮಾನ್ಯವಾಗಿ ಮನೆಯ ಚಿಕ್ಕವರು ಮಲಗೋ ಜಾಗ ಅಂದುಕೊಳ್ಳಿ. ಬೆಳಿಗ್ಗೆ ಮನೆಯ ಹಿರಿಯರು ಎದ್ದು ಮನೆ ಕೆಲಸ ಆರಂಭವಾದಾಗ ಹಾಲ್ ನಲ್ಲಿ ಮಲಗಿರುವ ಚಿಕ್ಕವರನ್ನು 'ಒಳಕ್ಕೆ ಹೋಗಿ ಮಲಗಿಕೊಳ್ಳಿ' ಅಂತ ಕಳಿಸಿ, ಹಾಸಿಗೆ ಬಟ್ಟೆ ಎತ್ತಿಡುವುದು ಸಾಮಾನ್ಯ ಸನ್ನಿವೇಶ. ನಿಮ್ಮ ಮನೆಯಲ್ಲೂ ಹೀಗೆಯೇ ಆಗಿತ್ತೇ?

Something To Learn About Mattress

ಹೀಗೆ ಹಾಸಿ, ನಂತರ ಸುತ್ತಿ ಎತ್ತಿಡುವ ಹಾಸಿಗೆಗಳು ಹತ್ತಿಯನ್ನು ತುಂಬಿ ಮಾಡಲಾಗಿರುತ್ತದೆ. ಹೊಸದಾಗಿರುವ ಇಂಥ ಹಾಸಿಗೆಗಳು ಮೊದಲಿಗೆ ಪೂರಿಯಂತೆ ಇದ್ದು ಕಾಲ ಕ್ರಮೇಣ ಚಪಾತಿಯಂತೆ ಆಗುತ್ತದೆ. ಮೊದಲಲ್ಲಿ ಸುತ್ತಿಡಲು ಕಷ್ಟವಾಗುತ್ತೆ ಆಮೇಲೆ ಒಂದೆರಡು ಹಾಸಿಗ್ಯಾಗಲ್ಲನು ಒಂದರ ಮೇಲೊಂದು ಇಡುವಂತೆಯೂ ಆಗುತ್ತೆ. ಈ ಹಾಸಿಗೆಗಳಲ್ಲಿ ಒಂದು advantage ಇದೆ. ಬೇಸಿಗೆ ರಜೆ ಅಂತ ಮನೆಗೆ ಮಕ್ಕಳು ಬಂದರು ಅಂದುಕೊಳ್ಳಿ. ಸಾಲಾಗಿ ಮೂರೋ ನಾಲ್ಕೋ ಹಾಸಿಗೆ ಹಾಸಿದರೆ ಹತ್ತು ಮಕ್ಕಳು ಮಲಗಬಹುದು. ಈ ಅನುಭವ ನಿಮಗೂ ಆಗಿರಬಹುದು ಎಂದುಕೊಳ್ಳುತ್ತೇನೆ.

ಆ ನಂತರ ಬಂದಿದ್ದು kurl-on mattress ಗಳು. ಈ mattressಗಳು ಸ್ಪ್ರಿಂಗ್ ಅನ್ನು ಹೊಂದಿದ್ದು ಮಡಚಿ ಇಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಅದರ ಮೇಲೆ ಮಲಗಿಲ್ಲದಿದ್ದರೂ, ಈ ಹಾಸಿಗೆಗಳು ಸದಾ ಮಲಗಿರಬೇಕು. ಅಲ್ಲಿಂದ modernization ಆರಂಭವಾಯ್ತು ನೋಡಿ ಎಲ್ಲ ರೂಮಿನಲ್ಲೂ ಒಂದೊಂದು ಮಂಚ ಅದರ ಮೇಲೆ ಒಂದು ಹಾಸಿಗೆ. ಮಡಚುವ ಗೋಜೇ ಇಲ್ಲ. ಹಾಗಾಗಿ ಒಂದು ಮನೆ ಅಂದ್ರೆ ಎಷ್ಟು ಬೆಡ್ ರೂಮ್ ಇರಬೇಕು ಅಥವಾ ಇದೆ ಅಂತ ನೋಡುತ್ತಾರೆ.

ತಲೆಯಲ್ಲಿ ಹುಳ ಬಿಡುವುದು ಎಂದರೇನು ಗೊತ್ತಾ?ತಲೆಯಲ್ಲಿ ಹುಳ ಬಿಡುವುದು ಎಂದರೇನು ಗೊತ್ತಾ?

ಕನಿಷ್ಠ ಎಂದರೆ ಮಲಗೆದ್ದು ಮೇಲೆ ಹಾಸಿಗೆಯನ್ನು ಒಪ್ಪಓರಣ ಮಾಡಿಟ್ಟರೆ ಚೆನ್ನ. ಆದರೆ ಹಾಗೆಯೇ ಬಿಟ್ಟರೆ ಶನಿಕಾಟ ಎನ್ನುವುದನ್ನೂ ಕೇಳಿದ್ದೇನೆ. ಈ ಶನಿಕಾಟ ಅನ್ನೋದನ್ನ ನಂಬೋಲ್ಲ ಎಂದರೆ ಅದನ್ನು ಪಕ್ಕಕ್ಕೆ ಇಡಿ, ಎಷ್ಟೆಷ್ಟೋ ನಂಬೋಲ್ಲ ಅಂದಿದ್ದನ್ನೆಲ್ಲಾ ಈಗ ನಂಬುವ ಕಾಲ ಬಂದಾಗಿದೆ. ಇದನ್ನೂ ಆ ಸಾಲಿಗೆ ಸೇರಿಸಿಬೇಡಿ.

ಈಗ ಒಂದು ಪ್ರಶ್ನೆ ಹಾಕಿ ಮುಂದೆ ಸಾಗುತ್ತೇನೆ. ಈ ಹಾಸಿಗೆ ಮಂಚಕ್ಕೆ ಸೇರಿದಂತೆ ಒಂದು ಮಾತಿದೆ. ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರೂ ಮತ್ತೊಂದು ಅಂದ್ರಂತೆ... ಈ ಮಾತಿನ ಹಿಂದಿನ ಅರ್ಥವೇನು? 'ಮೂರು ಮತ್ತೊಂದು' ಅಂದ್ರೇನು?

ಮನುಷ್ಯನ ಜೀವನದಲ್ಲಿ ನಾನಾ ವಿಧಗಳ ಹಾಸಿಗೆಗಳ ಪಾತ್ರವಿದೆ. ಜನಿಸಿದ ವೇಳೆಯಲ್ಲಿ ಆಸ್ಪತ್ರೆಯ ಹಾಸಿಗೆ. premature ಕೂಸು ಅಂದಾಗ ಮೊದಲ ಹಾಸಿಗೆ incubator ಆಗಿರುತ್ತೆ. ಒಂದು ವರ್ಷಕ್ಕಿಂತ ಚಿಕ್ಕದಿರುವ ಕೂಸು ವಿಮಾನಗಳಲ್ಲಿ ಪಯಣಿಸುವಾಗ, bassinet ಎಂಬ crib ನೀಡುತ್ತಾರೆ. ಸದಾ ಕಾಲ ಸಿಗುತ್ತೆ ಅಂತ ಏನೂ ಗ್ಯಾರಂಟಿ ಇಲ್ಲ ಬಿಡಿ. ಆ ನಂತರದ ಜೀವನದಲ್ಲಿ twin ಹಾಸಿಗೆ ಪ್ರವೇಶ ಮಾಡುತ್ತದೆ. ಗಂಡ ಹೆಂಡತಿ ಜೀವನದಲ್ಲಿ queen ಸೈಜ್ ಹಾಸಿಗೆಯ ಪ್ರವೇಶ. ಒಂದು ಕೂಸು ಆದ ಮೇಲೆ ಕಿಂಗ್ ಸೈಜ್ ಹಾಸಿಗೆಯ ಪ್ರವೇಶವೂ ಆಗುತ್ತದೆ.

ಎಲ್ಲ ಹಾಸಿಗೆಗಳ ಭೋಗ ಜೀವನ ಆದ ಮೇಲೆ ಕಾಲಕ್ರಮೇಣ ಇಬ್ಬರಲ್ಲಿ ಒಬ್ಬರು ಗತರಾದರು ಎಂದಾಗ ಮತ್ತೆ ಹಾಸಿಗೆಯ ಅಗಲ ಚಿಕ್ಕದಾಗುತ್ತದೆ. ಅನಿವಾರ್ಯ ಅನ್ನಿಸುತ್ತೆ. ಎಲ್ಲರ ಜೀವನ ಹೂವಿನ ಹಾಸಿಗೆ ಅಲ್ಲ ತಾನೇ? ಹುಟ್ಟಿದ ಸ್ಥಳಕ್ಕೆ ವಾಪಸ್ ಆಗುವ ಕಾಲವೂ ಬರುತ್ತದೆ. ಅರ್ಥಾತ್ ಆಸ್ಪತ್ರೆಯ ಹಾಸಿಗೆಯ ಆಶ್ರಯ. ಆಟ ಮುಗಿದ ಮೇಲೆ ಕಟ್ಟಿಗೆಯ ಹಾಸಿಗೆಯ ಮೇಲೆ ಮಲಗುವಾಗ ಮಿಕ್ಯಾವ ಹಾಸಿಗೆಗಳ ವೈಭೋಗವೂ ನಮ್ಮೊಂದಿಗೆ ಬರೋದಿಲ್ಲ ಎಂಬುದೇ ಕ್ರೂರ ಸತ್ಯ.

ಇರಲಿ ಬಿಡಿ, ಕೊನೆಯ ಘಟ್ಟ ಅನಿವಾರ್ಯ ಎಂದ ಮಾತ್ರಕ್ಕೆ ಅರಿವು ಮೂಡಿದಾಗಿನಿಂದ ಬೊಂಬಿನ ಮೇಲೆ ಮಲಗಿರೋದಕ್ಕೆ ಆಗುತ್ತದೆಯೇ? ಹಾಗಾಗಿ ರಂಗಾದ ಜೀವನದ ಕಡೆ ಮತ್ತೆ ಹೋಗೋಣ ಬನ್ನಿ... ಹೂವಿನ ಹಾಸಿಗೆ... ಯಾರಿಗೆ ತಾನೇ ಗೊತ್ತಿಲ್ಲ ಈ ಹೂವಿನ ಹಾಸಿಗೆ ಬಗ್ಗೆ? ಅರ್ಥಾತ್ ಈ ಸುಂದರ ಸನ್ನಿವೇಶವನ್ನು ಸಿನಿಮಾದಲ್ಲಿ ರಂಗು ರಂಗಾಗಿ ತೋರಿಸುತ್ತಾರೆ. ಅದರಲ್ಲೂ ನಮ್ಮ ರವಿಮಾಮ ಇದ್ದರಂತೂ ಅದು ಇನ್ನೊಂದು ಲೆವೆಲ್ ಬಿಡಿ.

ಆದರೆ ಹಲವಾರು ಸಿನಿಮಾದಲ್ಲಿ ಈ ಹೂವಿನ ಹಾಸಿಗೆಯ ಚಿತ್ರಣ ವಿಭಿನ್ನವಾಗಿ ಇರುತ್ತದೆ. ಉದಾಹರಣೆಗೆ ಕವಿರತ್ನ ಕಾಳಿದಾಸ. ಮೊದಲ ರಾತ್ರಿ ನಾಚುತ್ತಾ ಒಳಗೆ ಬಂದಾಗ ರಾಜಕುಮಾರಿ ಮದುವೆಯಾದ ಗಂಡು 'ಕುರುಬರ ಪಿಳ್ಳೆ' ನೆಲದ ಮೇಲೆ ಗೊರಕೆ ಹೊಡೆಯುತ್ತಾ ಮಲಗಿರೋದೇ? ಆಮೇಲೆ ನಡೆಯುವ ಮಿಕ್ಕೆಲ್ಲಾ ಮಾತುಕತೆಗಳು, ಮುಂದಿನ ಹೆಜ್ಜೆ, ನಂತರದ ಬೇರಾಗುವಿಕೆ ಎಲ್ಲವೂ ಆ ರಾತ್ರಿಯೇ ನಡೆದು ಹೋಗುತ್ತದೆ.

ಕೆಲವು ಸಿನಿಮಾದಲ್ಲಿ ಆ ಮಧುರ ರಾತ್ರಿ ಕಥಾನಾಯಕಿ ಆತ್ಮಹತ್ಯೆಗೆ ಯತ್ನಿಸೋದು ಅಥವಾ ನಾಯಕ ನಾಯಕಿಯನ್ನು ದೂರವಿರುವಂತೆ ಹೇಳೋದು ಇತ್ಯಾದಿ ಇತ್ಯಾದಿ ಸನ್ನಿವೇಶಗಳೂ ಇರುತ್ತವೆ. ರಂಗು ಅಂದ ಮಾತ್ರಕ್ಕೆ ಶೃಂಗಾರದ ರಂಗೇ ಆಗಿರಬೇಕಿಲ್ಲ.

ಹೋಟೆಲ್ ಗಳ ಹಾಸಿಗೆ ಬಟ್ಟೆಗಳ ಬಗ್ಗೆ ಒಂದೆರಡು ಮಾತು. ಹೋಟೆಲ್ ಹಾಸಿಗೆಗಳು ಆಯಾ ಹೋಟೆಲ್ ನ ಉತ್ಕೃಷ್ಟತೆಯ ಮೇಲೆ ಅವಲಂಬಿತ. cheaper ಹೋಟೆಲ್ ಗಳಾದ್ರೆ ಬಹುಶಃ ತಿಗಣೆ ಗ್ಯಾರಂಟಿ ಎನ್ನಬಹುದು. ಕೆಲವು ಮಸ್ತ್ ಹೋಟೆಲುಗಳಲ್ಲಿನ ಹಾಸಿಗೆಗಳು ಸಿಕ್ಕಾಪಟ್ಟೆ ಚೆನ್ನಾಗಿರುತ್ತೆ. ಬೆಳಿಗ್ಗೆ ಏಳೋಕೆ ಮನಸ್ಸೇ ಬರೋಲ್ಲ.

ಕೆಲವರಿಗೆ ತಮ್ಮ ಮನೆಯ ಹೊರಗೆ ಇನ್ನೆಲ್ಲಿಯೇ ಆದರೂ ಇನ್ನೆಂಥ ದೇವಲೋಕದ ಹಾಸಿಗೆಯನ್ನೇ ತಂದಿಟ್ಟರೂ ನಿದ್ದೆ ಬರೋಲ್ಲ. ಇದು ಹಾಸಿಗೆಯ ಪ್ರಾಬ್ಲಮ್ ಅಲ್ಲ ಬಿಡಿ, ಆಯಾ ವ್ಯಕ್ತಿಗಳ ಪ್ರಾಬ್ಲಮ್.

ದಿನದಲ್ಲಿನ ಆಯಾಸ ಕಳೆಯಲು ರಾತ್ರಿಯ ನಿದ್ದೆ ಚೆನ್ನಾಗಿ ಆಗಬೇಕು. ಆ ನಿದ್ದೆ ಚೆನ್ನಾಗಿ ಆಗಬೇಕು ಎಂದರೆ ಹಾಸಿಗೆ ಚೆನ್ನಾಗಿರಬೇಕು. ಹಾಸಿಗೆ ಚೆನ್ನಾಗಿ ಇದ್ದರೂ ಮನಸ್ಸಿನಲ್ಲಿ ಶಾಂತಿ ಇರಬೇಕು. ಆ ಶಾಂತಿ ಇರಬೇಕು ಅಂದ್ರೆ ಚಿಂತೆ ಬಿಡಬೇಕು, ಚಿಂತನೆ ಮಾಡಬೇಕು.

ಏನಂತೀರಿ?

English summary
Mattress is one thing we use for our requirement. It varies as per our status. Here is something we have to learn about this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X