• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; slang ಅಂದ್ರೆ ಆಡುಭಾಷೆ, ಅಶಿಷ್ಟಭಾಷೆ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಇಂದಿನ ವಿಷಯ slang. ನಾವೆಲ್ಲರೂ ದಿನನಿತ್ಯದಲ್ಲಿ slang ಅನ್ನು ಕೇಳಿಯೇ ಇರುತ್ತೇವೆ. ಆದರೆ ಬಳಸಿರಬೇಕು ಅಂತೇನಿಲ್ಲ. ಮೊದಲಿಗೆ ಈ slang ಅಂದರೇನು ಅಂತ ಗೂಗಲ್ ನಲ್ಲಿ ಅರ್ಥ ಹುಡುಕಿದೆ.

   ಧೂಮಪಾನ ಮಾಡೋದ್ರಿಂದ ಕೊರೊನಾ ಸೋಂಕು ಉಂಟಾಗೋ ಸಾಧ್ಯತೆ? | Smoking

   ಸಂಸ್ಕೃತ ಭಾಷೆ ಎಂದರೆ ದೇವನಾಗರಿ ಭಾಷೆ ಅಂತಾದರೆ ಹೌದು. ಗ್ರಾಮ್ಯ ಭಾಷೆ 'ಅಸಂಸ್ಕೃತ' ಭಾಷೆ. ಶಿಷ್ಟ ಅಂದ್ರೆ ಸೂಟುಬೂಟು ಟೈ ಹಾಕಿಕೊಂಡ ಭಾಷೆ ಅನ್ನೋದಾದ್ರೆ ಹೌದು ಗ್ರಾಮ್ಯಭಾಷೆ 'ಅಶಿಷ್ಟ' ಭಾಷೆ. ಆದರೆ ಸುಸಂಸ್ಕೃತರು ಆಡುವ ಭಾಷೆಯಲ್ಲದ್ದು "ಗ್ರಾಮ್ಯ ಅಥವಾ ಅಸಂಸ್ಕೃತ ಭಾಷೆ" ಅನ್ನೋದಾದ್ರೆ ಅದು ಶುದ್ಧತಪ್ಪು.

   ಶ್ರೀನಾಥ್ ಭಲ್ಲೆ ಅಂಕಣ; ಬುದ್ಧಿಗೆ ಕಸರತ್ತು ನೀಡಬೇಕಾದ್ದು ಯಾಕೆ?

   ಗ್ರಾಮ್ಯ ಭಾಷೆಯೂ ಒಂದು ಭಾಷೆ. ಆ ಕಾಲದ ಗ್ರಾಮ್ಯದವರು ಹೆಚ್ಚಿನವರು ಅವಿದ್ಯಾವಂತರು ಇರಬಹುದು, ಅವರ ಭಾಷೆಯು ನಾಡ ಭಾಷೆಯಾಗಿರದೆ ಆಡುಭಾಷೆ ಆಗಿರಬಹುದು. ಆದರೆ ಗ್ರಾಮ್ಯ ಭಾಷೆಯೂ ಒಂದು ಸೊಗಡು.

   ನಿಮ್ಮ ಮನೆಯಾಗೆ ಲಕ್ಷ್ಮಿ ಕಾಲ್ ಮುರ್ಕೊಂಡ್ ಬಿದ್ದವ್ಳಾ, ಅಂದ್ರೇನು? ನಿಮ್ಮ ಹೆಂಡತಿಯೋ, ಮಗಳೋ ನಿಜಕ್ಕೂ ಬಿದ್ದು ಕಾಲು ಮುರ್ಕೊಂಡಿದ್ದಾರಾ ಅಂತಲ್ಲ ಅಲ್ಲವೇ? ನಿಮ್ಮ ಮನೆಯಲ್ಲಿ ಆಸ್ತಿಪಾಸ್ತಿ, ಹಣಕಾಸು ಧಾರಾಳವಾಗಿ ಇದ್ದು, ನಿಮ್ಮ ಮನೆಯನ್ನು ತೊರೆದು ಹೋಗಲಾಗದಂತೇ ಆ ಹಣದ ಒಡತಿ ನಿಮ್ಮ ಮನೆಯಲ್ಲೇ ಝಾ೦ಡಾ ಊರಿದ್ದಾಳೆ ಅಂತ ಅರ್ಥ. ಇದೊಂಥರಾ slang ಅನ್ನಿ. ಆದರೆ ನಿಜವಾದ slang ಮಜಾ ಬರೋದೇ ಏನೇನೂ ಅರ್ಥವಿಲ್ಲದ ಪದಪುಂಜ ಇದ್ದಾಗ.

   ಶ್ರೀನಾಥ್ ಭಲ್ಲೆ ಅಂಕಣ; ಆಚಾರವಂತ ಈ ನಾಲಿಗೆ ಅಂತ ಅನ್ನೋಣವೇ?

   ಮೊನ್ನೆ ಯಾವುದೋ ಸಿನಿಮಾದ ಒಂದು ಹಾಸ್ಯ ಸನ್ನಿವೇಶ ನೋಡ್ತಿದ್ದೆ. ನಾಯಕಿ ಮತ್ತು ಸಾಧು ಅವರ ನಡುವಿನ ಒಂದು ಸಂಭಾಷಣೆಯಲ್ಲಿ ಸಾಧು ಹೇಳುತ್ತಾರೆ "ನನ್ನ ಕೆಲಸದವನು ಪೋಟ್" ಆಗಿಬಿಟ್ಟ ಅಂತ. ಅದೇನೂ ಅಂತ ನಾಯಕಿಗೆ ತಲೆಬುಡ ಅರ್ಥವಾಗೋಲ್ಲ. ಅದಕ್ಕೆ ಸಾಧು ಅವರ ಉತ್ತರ "ಪೋಟ್ ಆಗ್ಬಿಟ್ಟಾ ಅಂದ್ರೆ ಗೊತ್ತಿಲ್ವಾ? ಓಡೋಗ್ಬುಟ್ಟಾ, escape ಆಗಬುಟ್ಟಾ" ಅಂತ ಇಷ್ಟುದ್ದಾ ಹೇಳ್ತಾರೆ. ಇದು slang. ಅಂಬಿ ಒಂದು ಸಿನಿಮಾದಲ್ಲಿ ಮಾತು ಮಾತಿಗೂ "ಹಿಟ್ ಮೇಲ್ ಅವರೆಕಾಳ್" ಅಂತಾರೆ. ಇದು slang. ಅರ್ಥ ನೀವೇ ಹೇಳಿಬಿಡಿ...

   ಯಾರೋ ಒಬ್ಬರು ಸತ್ತರು ಅಂತ ಅಂದುಕೊಳ್ಳೋಣ. ತುಂಬಲಾರದ ನಷ್ಟ ಅನ್ನೋದು ಮಾಧ್ಯಮ ಭಾಷೆ. ಇದೊಂದೇ ವಿಷಯವನ್ನು ಹೇಗೆಲ್ಲಾ ಹೇಳಬಹುದು? ನಿಧನ ಹೊಂದಿದರು, ಅಸುನೀಗಿದರು, ಶಿವನಪಾದ ಸೇರಿದರು, ಹರಿಪಾದ ಸೇರಿದರು, ಕೈಲಾಸವಾಸಿಯಾದರು, ವೈಕುಂಠವಾಸಿಯಾದರು... ಇವೆಲ್ಲದರ ಅರ್ಥ ಒಂದೇ. ಆದರೆ ಯಾರ ಬಗ್ಗೆ ಹೇಳಲಾಗುತ್ತದೆ ಎನ್ನುವುದರ ಮೇಲೆ ಅವಲಂಬಿತ. slang ಶೈಲಿಯಲ್ಲಿ ಹೇಳೋದಾದರೆ ಓಗ್ಬಿಟ್ಟ, ಹೊಗೆ ಹಾಕಿಸ್ಕೊಂಡ, ರೈಟ್ ಹೇಳ್ಬಿಟ್ಟ, ಮಡಕೆ ಒಡೆದ ಅಂತಲೂ ಹೇಳಬಹುದು.

   ಸುಳ್ಳು ಹೇಳುವ ವಿಷಯ ತೆಗೆದುಕೊಳ್ಳೋಣ. ರೀಲ್ ಬಿಡೋದು, ಕಾಗೆ ಹಾರಿಸೋದು ಎಂತೆಲ್ಲಾ ಹೇಳ್ತಾರೆ. "ಕಟ್ಲಾಯ್ಚ್"ಕೊಳ್ಳೋದು ಅಂದ್ರೆ ಗೊತ್ತಾ? ಒಂದು ಸ್ಥಳದಿಂದ ಜಾಗ ಖಾಲಿ ಮಾಡುವ ಪರಿ ಅಂತ. 'ಕಿವಿ ಮೇಲ್ ಹೂವ ಇಡೋದು', ಟೋಪಿ ಹಾಕೋದು, ನಾಮ ಹಾಕೋದು ಅಂತೆಲ್ಲಾ ಅಂದ್ರೆ ಮೋಸ ಮಾಡೋದು ಅಂತ. ಆದರೆ 'ನಾವೇನ್ ಕಿವಿ ಮೇಲ್ ಹೂವ ಇಟ್ಕೊಂಡಿದ್ದೀವಾ?' ಅಂದ್ರೆ 'ನಾವೇನ್ ಅಷ್ಟು innocent/ಮೂರ್ಖರಾ?' ಅಂತ.

   ಶ್ರೀನಾಥ್ ಭಲ್ಲೆ ಅಂಕಣ; ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸಬೇಕಾದ ಸಮಯವಿದು

   ಈ slang ಅನ್ನೋದು ಒಂದು ಪ್ರಾಂತ್ಯ, ರಾಜ್ಯ ಅಥವಾ ದೇಶಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಜಗತ್ತಿನಾದ್ಯಂತ ಅರ್ಥಾತ್ ಎಲ್ಲಾ ಭಾಷೆಯಲ್ಲೂ ಈ slang ಅನ್ನೋದಿದೆ. ಆಂಗ್ಲದಲ್ಲಿ ಎನ್ನುವಾಗ ಅಲ್ಲೂ ಬಹಳ ವ್ಯತ್ಯಾಸವಿದೆ. ಅಮೇರಿಕನ್ ಆಂಗ್ಲದ slang ಬೇರೆ, ಬ್ರಿಟಿಷ್ ಆಂಗ್ಲದ slang ಬೇರೆ ಹೀಗೆ. ಒಂದು ಹುಲ್ಲು ಎಂದರೆ ಆಂಗ್ಲದಲ್ಲಿ grass ಅಂತ ನಿಮಗೂ ಗೊತ್ತು. grass cutting ಎಂದಾಗ ನಿಜವಾಗಿಯೂ ಹುಲ್ಲು ಕತ್ತರಿಸುವಿಕೆ ಅಂತಲೇ ಅರ್ಥ. ಆದರೆ grass root level ಎಂದಾಗ ಒಂದು ವಿಷಯದ ಆಳಕ್ಕೆ ಹೊಕ್ಕು ನೋಡೋದು ಅಂತಾಗುತ್ತದೆ. ದೊಡ್ಡ ಮನುಷ್ಯರ slang ಭಾಷೆಯಲ್ಲಿ grass ಎಂದರೆ ಮತ್ತು ಬರಿಸುವ ಅಫೀಮು ಪದಾರ್ಥ. ಇಂಥ ಹುಲ್ಲಿನಲ್ಲೂ ಹಲವಾರು ರೀತಿ ಇದೆ.

   ಇಂಥದ್ದೇ ಭಾಷೆ ನಾವು ಮನೆಕಟ್ಟುವಾಗ ಕೇಳಿದ್ದೆ ಕೂಡ - ದೂಳು. ನೀವೂ ಕೇಳಿರುತ್ತೀರಿ ಎಂದುಕೊಳ್ಳುತ್ತೇನೆ, ಈ ದೂಳು ಎಂದರೆ ಸಿಮೆಂಟ್ ಅಂತ. ನನ್ನನ್ನು ದೂಳು ಅಂತೀರಾ ಅಂತ ಸಿಮೆಂಟ್ ಗೆ ಸಿಟ್ಟು ಬಂದಾಗ ಉಪ್ಪಿಟ್ಟಿಗೆ 'ಸಿಮೆಂಟ್' ಎಂದು ಕರೆದು ಸಮಾಧಾನ ಮಾಡಿದರಂತೆ. ಕೆಲವೆಡೆ ಹಣದ ವ್ಯವಹಾರ ಒಂದು ದೊಡ್ಡ ಲೆವೆಲ್. ಕಾಲಕಾಲಕ್ಕೆ ಇದರ ಭಾಷೆ ಬದಲಾಗುತ್ತೆ. ಒಂದು ಕಾಲದಲ್ಲಿ "ಒಂದು" ಎಂದರೆ ಒಂದು ಲಕ್ಷ ಅಂತಿತ್ತು. ಇಂದು ಬಹುಶಃ "ಒಂದು" ಎಂದರೆ ಒಂದು ಕೋಟಿ ಇರಬಹುದು.

   ಇಂಥಾ slang ಪದ ಒಂದು ಹೆಣ್ಣಿನ ಬಗ್ಗೆ ಹೇಳುವಾಗ ಬಹಳ ಕೆಟ್ಟಾದಾಗಿ ಕೇಳುತ್ತೆ. ಐಟಂ, ಮಾಲು, ಪೀಸು, ಇತ್ಯಾದಿ... ಹೇಳ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಇವೆಲ್ಲ slangಗಳ ಹಿಂದಿರುವ ಅರ್ಥ ಒಂದೇ. ಹೆಣ್ಣು ಅಂತಲ್ಲಾ 'ಭೋಗದ ವಸ್ತು' ಅಂತಷ್ಟೇ. ಎಂಥಾ ಖೇದನೀಯ ಅಲ್ಲವೇ?

   ದಿನನಿತ್ಯದಲ್ಲಿ ಅದರಲ್ಲೂ ಇಂದಿನ ಈ ಪರಿಸ್ಥಿತಿಯಲ್ಲಿ ಹಗಲೂ, ಇರುಳೂ ನಮ್ಮ ಇರುವಿಗಾಗಿ ಶ್ರಮಿಸುತ್ತಿರುವ ಶ್ರಮಜೀವಿಗಳ ಬಗ್ಗೆ ಹೇಳಬಹುದಾದ ಮಾತು ಎಂದರೆ ಇವರು "24/7" ಕೆಲಸ ಮಾಡುತ್ತಾರೆ ಅಂತ. ಹಗಲೂ ಇರುಳು ಎನ್ನುವುದನ್ನು ಇಪ್ಪತ್ತನಾಲ್ಕು ಗಂಟೆ, ಏಳೂ ದಿನಗಳು ಅಂತ. ಕೆಲವೊಮ್ಮೆ "24/7/365" ಎಂದೂ ಹೇಳಲಾಗುತ್ತದೆ. ಒಂದೇ ಮಾತಲ್ಲಿ ಹೇಳೋದಾದ್ರೆ ಇವರುಗಳ ಸೇವೆ 'ನಿರಂತರ' ಅಂತ. ಮೊನ್ನೆ ತಾನೇ 'ದಾದಿಯರ ದಿನ' ಆಚರಣೆ ಕೂಡ ಮಾಡಿದೆವು.

   ನಮ್ಮ ತಪ್ಪಿರುವಾಗ ಅದನ್ನು ಒಪ್ಪಿಕೊಳ್ಳುವ ರೀತಿಗಳೂ ಹಲವಾರು. ಕೆಲವರು 'my mistake' ಎನ್ನಬಹುದು, ಕೆಲವರು 'my bad' ಎನ್ನಬಹುದು. ಕೆಲವೊಮ್ಮೆ ಅಂಥಾ ದೊಡ್ಡ ವಿದ್ಯೆಯಲ್ಲದ್ದನ್ನು 'ಇದೇನ್ ಬ್ರಹ್ಮ ವಿದ್ಯೆ ಅಲ್ಲ' ಅಂತ ಹೇಳೋದಿದೆ. ಆಂಗ್ಲದಲ್ಲಿ "not a rocket science" ಎನ್ನುತ್ತಾರೆ. ಇಂದಿನ ವಿಷಯದ ಆಳವಾದರೂ ಏನು ಅಂತ ಕೇಳಿದರೆ 'wait a second' ಎನ್ನಬಹುದು. 'hang on' ಎನ್ನಬಹುದು ಅಥವಾ ಕೊಂಚ ಹೈಟೆಕ್ ಭಾಷೆಯಲ್ಲಿ ಹೇಳೋದಾದ್ರೆ 'hold your horses' ಎನ್ನಬಹುದು. ಮನಸ್ಸು ಹುಚ್ಚು ಕುದುರೆಯಂತೆ ಓಡುತ್ತಾ ಇರುತ್ತೆ. ಅದಕ್ಕೆ ಲಂಗುಲಗಾಮು ಹಾಕಿದಾಗ ಸ್ಥಿಮಿತಕ್ಕೆ ಬರುತ್ತದೆ ಅನ್ನೋದೂ ಒಂದೇ 'hold your horses' ಅಂತ ಹೇಳೋದೂ ಒಂದೇ.

   ಈ ಮೇಲಿನ ವಿಷಯದಲ್ಲಿ ಅರ್ಥವಾಗೋದು ಎಂದರೆ ದೇಶಭಾಷೆ ವ್ಯತ್ಯಾಸವಿಲ್ಲದೇ ಕುದುರೆ ಅಂದ್ರೆ ಎಲ್ಲೆಡೆ ಕುದುರೆ ಅಂತಾನೇ! ಕುದುರೆ ನಾಗಾಲೋಟದಿಂದ ಸಾಗುತ್ತದೆ ಎಂದರೆ ಒಂದೊಂದು ಭೂಮಿಯಲ್ಲಿ ಒಂದೊಂದು ರೀತಿ ಓಡುತ್ತೆ ಅಂತೇನಲ್ಲ. ಅಂತೆಯೇ ಮನಸ್ಸೂ ಸಹ. ಜಾತಿಧರ್ಮದ ವ್ಯತ್ಯಾಸವಿಲ್ಲದ ಮನಸ್ಸು ಮರ್ಕಟವೇ.

   lock down ಸಡಿಲಗೊಂಡಿದೆ ಅಂದ್ರೆ ಕೊರೊನಾ ಹೋಯ್ತು ಅಂತ ಯಾವ ಭಾಷೆಯ slang ಕೂಡಾ ಅಲ್ಲ! ಸಡಿಲಗೊಂಡಿದೆ ಅಂತ ಮದ್ಯದ ಅಂಗಡಿ ತೆರೆದ ಕೂಡಲೇ ಶಿಷ್ಟಾಚಾರವೆಲ್ಲಾ ಗಾಳಿಗೆ ತೋರಿ ಸಡಿಲವಾಗಿದ್ದವರೆಲ್ಲಾ tight ಆಗಿದ್ದು ಮಹಾಸೋಜಿಗ. ಅಂದ ಹಾಗೆ tight ಅನ್ನೋದೂ ಒಂದು slang ಪದ. ಟೈಟ್ ಅಂದ್ರೆ ಲೂಸು ಅಂತ!

   "Stay Home" ಅಂದ್ರೆ 'ಮನೆಯಲ್ಲಿ ಇರಿ' ಅಂತ. 'ಮನೆಯೊಳಗೇ ಇರಿ' ಅಂತಲೂ ಆಗಬಹುದು. 'ಹೊರಗೆ ಬರಬೇಡಿ' ಅಂತ ಆಗಬಹುದು ಹೀಗೇ ಏನು ಬೇಕಾದರೂ ಆಗಬಹುದು. 'Stay Home' ಅನ್ನೋದು ತುಂಬಾ simple ಆದ ಎರಡು ಪದಗಳು. ಈ ಪದಗಳನ್ನು ಶಾಲಾ ಮಕ್ಕಳೂ ಅರ್ಥೈಸಿಕೊಳ್ಳಬಲ್ಲರು. ಆಂಗ್ಲ ನಮಗೆ ಅರ್ಥವಾಗೋದಿಲ್ಲ ಎಂದವರಿಗೆ ಕನ್ನಡದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲದೇ, ಎಲ್ಲ ಪ್ರಾಂತ್ಯಗಳ ಆಯಾ ಭಾಷೆಯಲ್ಲಿ ಹೇಳಲಾಗಿತ್ತು, ಹೇಳಲಾಗುತ್ತಿದೆ. 'Stay Home' slang ಅಲ್ಲ.

   ಇಂದಿನ ಬರಹದ ಸೂಕ್ಷ್ಮ ಅರ್ಥವಾಗಿರುತ್ತೆ ಅಂದುಕೊಳ್ಳುತ್ತೇನೆ. ಅದು ಬಿಡಿ, ಈಗ ನಿಮಗೆ ಗೊತ್ತಿರುವ ಅಥವಾ ನೀವು ಬಳಸುವ slang ಪದ ಹಂಚಿಕೊಳ್ಳುತ್ತೀರಾ ಅಲ್ವ?

   English summary
   There are so many slangs we use in our daily life. What is the meaning of slangs, where usually people use this?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X