ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಿಶ್ವ ತಲೆ ದಿನ' ಅಂತ ಯಾವುದೂ ಇಲ್ಲ, ದಿನವೂ ತಲೆ ದಿನವೇ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

'ದೇಹವೇ ದೇಗುಲ, ಶಿರ ಹೊನ್ನ ಕಳಶವಯ್ಯ' ಎಂದಿರುವ ಬಸವಣ್ಣನವರು ಶಿರ ಅಥವಾ ತಲೆಗೆ ಅಂಥಾ ಪ್ರಾಮುಖ್ಯತೆ ನೀಡಿದ್ದಾರೆ. ಫೇಸ್ಬುಕ್'ನಲ್ಲಿ ಇಂಥಾ ತಲೆಗಳ ಹಲವು ಚಿತ್ರಗಳು ಮತ್ತು 'ತಲೆ'ಯ ಬಗೆಗಿನ ಒಂದೆರಡು ಮಾತುಗಳು ಇಂದಿನ ಬರಹಕ್ಕೆ ನನ್ನ ತಲೆಗೆ ಕೆಲಸ ಕೊಟ್ಟಿತು ಎನ್ನಬಹುದು.

ದೈವಗಳಲ್ಲಿ ಪ್ರಥಮ ಪೂಜನೀಯನಾದ ಗಣಪನ ಕಥೆ 'ತಲೆ'ಗೆ ಉತ್ತಮ ಉದಾಹರಣೆ ಎನ್ನಬಹುದು. ಮಾನವರಿಗೂ ದೈವಕ್ಕೂ ಇರುವ ವ್ಯತ್ಯಾಸವೂ ಇಲ್ಲೇ ಅಗಾಧವಾಗಿ ಕಾಣೋದು. ಆನೆಯ ದೇಹಕ್ಕೆ ತಕ್ಕಂತೆ ತಲೆಯೂ ಇದ್ದೇ ಇರುತ್ತದೆ, ಅಲ್ಲವೇ? ಅದನ್ನು ಬಾಲಕನ ತಲೆಯ ಹೊರಿಸಿ ನಂತರ ಅವನು ಜೀವನದುದ್ದಕ್ಕೂ ಅದನ್ನು ಹೊತ್ತು ತಿರುಗಬೇಕು ಎಂದರೆ ಸಾಮಾನ್ಯವೇ? ದೈವಶಕ್ತಿಯ ಬಲ ಇತ್ತು ಎನ್ನೋಣ. ಹಾಗೆಯೇ ನಮ್ಮೆಲ್ಲರ ಸೃಷ್ಟಿಕರ್ತನಾದ ಬ್ರಹ್ಮದೇವನಿಗೆ ನಾಲ್ಕು ತಲೆಗಳು.

ಕನ್ನಡ ಭಾಷೆಯಲ್ಲಿ ಸೀಳು ಕಥಾನಕ : ಸೀಳೋದ್ ಸೀಳ್ರಿ ಸೀಳಬಾರದ್ ಸೀಳಬ್ಯಾಡಿಕನ್ನಡ ಭಾಷೆಯಲ್ಲಿ ಸೀಳು ಕಥಾನಕ : ಸೀಳೋದ್ ಸೀಳ್ರಿ ಸೀಳಬಾರದ್ ಸೀಳಬ್ಯಾಡಿ

ಈಗ ಮನುಷ್ಯರ ವಿಷಯ ತೆಗೆದುಕೊಳ್ಳಿ. ಸಣ್ಣ ತಲೆಭಾರ ಅಥವಾ ಭೀಕರ migrane ಬಂತು ಎಂದರೆ ತಲೆ ಹೊತ್ಕೊಂಡ್ ತಿರುಗಾಡಲಾಗದೇ balmಗಳನ್ನೂ ತಿಕ್ಕಿಕೊಂಡೋ ಅಥವಾ ಮಾತ್ರೆ ತೆಗೆದುಕೊಂಡೋ ಮಲಗುತ್ತೇವೆ. ಇದು ಸಾಧಾರಣ, ಆದರೆ ಯಶಸ್ಸು ತಲೆಗೇರಿದಾಗ ಕುತ್ತಿಗೆಯ ಮೇಲೆ ತಲೆ ನಿಲ್ಲೋಲ್ಲ. ಪ್ರತೀ ಸಾರಿ ಯಶಸ್ಸಿನ ಗರಿ ಮುಡಿಗೇರಿದಾಗ ತಲೆಯ ಬೆಲೆ ಹೆಚ್ಚುತ್ತಾ ಸಾಗಿ ಕುತ್ತಿಗೆಗೂ ಭಾರವಾಗಿ ಆ ಭಾರ ಹೊತ್ತವರು ತಮ್ಮ ಸುತ್ತಲಿನ ವಾತಾವರಣವನ್ನೇ ಕಹಿ ಮಾಡಿಬಿಡುತ್ತಾರೆ. ಇಂಥವಕ್ಕೆ head weight ಅಂತಾರೆ. ಅಂಥಾ ತಲೆಯಿಂದ ಬರುವ ಆಲೋಚನೆಗಳು / ನಿರ್ಧಾರಗಳು ಹಲವೊಮ್ಮೆ ಅವರ ಅಧೋಗತಿಗೂ ಮೂಲವಾಗಿ ಎತ್ತಿದ್ದ ತಲೆಯು ಬಾಗುವಂತೆ ಆಗಬಹುದು.

Is there any day like World Head Day?

ದೈವದ ತಲೆಯ ಬಗ್ಗೆಯೇ ಹೇಳುವುದಾದರೆ ನರಸಿಂಹನ ತಲೆ ಸಾಮಾನ್ಯವಲ್ಲ. ಅನ್ಯ ತಲೆಗಳ ವಿಷಯದಲ್ಲಿ ಶುಕಮುನಿಗಳ ತಲೆ the best. ಇತರ ದೈವಗಳ 'ಇತರೇ' ತಲೆಗಳ ಬಗ್ಗೆ ನೀವೂ ಕೊಂಚ ಹೇಳಿ.

ದೈವ ಆಯಿತು, ಮಾನವರಾಯ್ತು, ದೆವ್ವ ಬೇಡಾ ಬಿಡಿ, ದಾನವರ ವಿಷಯ ತೆಗೆದುಕೊಂಡರೆ, ಶಿವನನ್ನು ಒಲಿಸಿಕೊಳ್ಳಲು ಶಿರವನ್ನೇ ಕೊಯ್ದು ಕೊಟ್ಟ ರಾವಣನೇ ಮೊದಲಿಗೆ ತಲೆಗೆ ಬರೋದು. ಒಂದಲ್ಲಾ ಹತ್ತು ತಲೆಗಳು ಅವನಿಗೆ. ದಾನವ ಶಕ್ತಿಯೇ ಬೇರೆ ಬಿಡಿ, ಅದು ಅನೂಹ್ಯ. ನಾವು ಕೇಳಿರುವಂತೆ ರಾವಣನಿಗೆ ಹತ್ತು ತಲೆಗಳು ಅಂತ ಇದ್ರೂ ಒಂದೆಡೆ ಓದಿರುವಂತೆ ಅದು ಹತ್ತು ವಿವಿಧ ಅವಗುಣಗಳು, ನಿಜವಾಗಿ ತಲೆಗಳೇ ಅಲ್ಲ ಎಂಬ ಉಲ್ಲೇಖವಿದೆ. ಹತ್ತು ತಲೆಗಳಷ್ಟು ಅವಗುಣಗಳು ಇದ್ದವು ಎಂದರೆ ಒಂದೊಂದರ ತೂಕ ಎಷ್ಟಿತ್ತೋ? ಈ ಅರ್ಥದಲ್ಲಿ ನೋಡಿದಾಗ ನಿತ್ಯದಲ್ಲಿ ನಮ್ಮ ಸುತ್ತಲೇ ಕಾಣುವ ಎಷ್ಟೋ ತಲೆಗಳು ರಾವಣನ ಹತ್ತೂ ತಲೆಗಳನ್ನು ಮೀರಿಸಿದ್ದಾರೆ ಎನಿಸುವುದಿಲ್ಲವೇ? ದಾನವ ಎಂದಾಗ ವಾಮನನ ಪಾದವನ್ನು ತನ್ನ ತಲೆಯ ಮೇಲೆ ಇರಿಸಿಕೊಂಡು ಪಾತಾಳ ಸೇರಿದ ಬಲಿಯ ಕಥೆಯೂ ನೆನಪಾಗುತ್ತದೆ.

ಬೇಕಿದ್ದಾಗ ಜಾಗ ಬಿಡಿ, ಬೇಡದಿದ್ದಾಗ ಜಾಗ ಬಿಡಲೇಬೇಡಿ! ಬೇಕಿದ್ದಾಗ ಜಾಗ ಬಿಡಿ, ಬೇಡದಿದ್ದಾಗ ಜಾಗ ಬಿಡಲೇಬೇಡಿ!

ಅಂದಿನ ದೊಡ್ಡ ಸಂಸಾರದ ಚಿತ್ರಣ ಮನಸ್ಸಿಗೆ ತೆಗೆದುಕೊಳ್ಳಿ. ಅಲ್ಲೊಬ್ಬ ಹಿರಿಯ, ವಯಸ್ಸಿನಲ್ಲೇ ಹಿರಿಯ ಆಗಬೇಕು ಅಂತೇನಿಲ್ಲ. ಬದಲಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥನಾಗಿರುವವ ಅಂತ ತೆಗೆದುಕೊಳ್ಳಿ. ಅಂಥವನನ್ನು head of the family ಅನ್ನುತ್ತಾರೆ. ಅಂತೆಯೇ ಒಂದು ಶಾಲೆಯಲ್ಲಿ ಎಲ್ಲಾ ಮಾಸ್ತರರಿಗೂ ಮತ್ತು ಮಾಸ್ತರಿಣಿಗಳಿಗೂ ಒಬ್ಬ head ಅಂತ ಇದ್ದು ಅವರು headmaster ಎನಿಸಿಕೊಳ್ಳುತ್ತಾರೆ. ಆ ಸ್ಥಾನದಲ್ಲಿ ಇರುವವರು ಹೆಣ್ಣಾಗಿದ್ದರೆ "headmistress" ಆಗಿರುತ್ತಾರೆ. ಕಾಲೇಜುಗಳಲ್ಲಿ HOD - Head Of the Department ಅಂತ ಇರ್ತಾರೆ. ಏನೇ ಆದರೂ 'head"ಗೆ ಮಾತ್ರ ಲಿಂಗಭೇದವಿಲ್ಲ ನೋಡಿ.

Is there any day like World Head Day?

ಇಂಥಾ head ಇಲ್ಲದವರನ್ನು ಹೆಡ್ಡ ಅಥವಾ ಹೆಡ್ಡಿ ಅಂತಾರೆ. ಇದಕ್ಕೆ ವಿರುದ್ಧ ಎಂದರೆ ಅತೀ ಬುದ್ದಿವಂತರು. ಇಂಥವರ ಬುದ್ಧಿಯನ್ನು museumನಲ್ಲಿ ಇಡಬೇಕು ಎನ್ನುವಷ್ಟು ಅವರ ಬುದ್ಧಿಗೆ ಪ್ರಾಧಾನ್ಯತೆ ಇರುತ್ತದೆ. "ಏನ್ ತಲೆ ಕಣಯ್ಯಾ" ಎನ್ನುವ ಹೊಗಳಿಕೆಗೆ ಅವರು ಪಾತ್ರ. "ತಲೆ ಅಂದ್ರೆ ವಿಶ್ವೇಶ್ವರಯ್ಯನವರ ತಲೆ" ಎಂಬೋ ಮಾತುಗಳು. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ್ದು ಎಂದರೆ ಇಂಥಾ ವಿಷಯದಲ್ಲಿ ತಲೆ ಮತ್ತು ಬುದ್ಧಿಯನ್ನು ಒಂದೇ ಅರ್ಥದಲ್ಲಿ ಬಳಸುತ್ತಾರೆ. ಆದರೆ ತಲೆಯೇ ಬೇರೆ, ಬುದ್ಧಿಯೇ ಬೇರೆ.

ಒಂದು ದೇಹದ, ಪ್ರಾಣಿ/ಪಕ್ಷಿ/ಮಾನವ ಏನೇ ಆಗಿರಲಿ, ಅದರ ಮೇಲ್ಭಾಗದಲ್ಲಿರುವ ಅಂಗವೇ ತಲೆ. ರುಂಡವನ್ನು ಮತ್ತು ಮುಂಡವನ್ನು ಬೇರ್ಪಡಿಸುವ ಅಂಗವಾದ ಕುತ್ತಿಗೆಯ ಮೇಲ್ಭಾಗವೇ ತಲೆ. ಮೇಲ್ಭಾಗ ಎಂಬುವುದಕ್ಕೆ ಇದನ್ನು ನಾಯಕ, ಹಿರಿಯ ಎಂಬೆಲ್ಲಾ ಕಿರೀಟಗಳನ್ನು ತಲೆಯ ತಲೆಯ ಮೇಲೆ ಹೊರಿಸಿಲ್ಲ. ಆದರೆ ಆ ತಲೆಯ ಭಾಗಗಳಿಗೆ ನಿರ್ವಹಿಸುವ ಕಾರ್ಯದ ಪ್ರಾಮುಖ್ಯತೆಯಿಂದ ಅದು ನಾಯಕ, ಕಳಶ ಇತ್ಯಾದಿ.

ಏನೂ ಚಿಂತೆ ಮಾಡಬೇಡಿ, ಏನೂ ಆಗೋಲ್ಲ, ಎಲ್ಲ ಸರಿಹೋಗತ್ತೆ!ಏನೂ ಚಿಂತೆ ಮಾಡಬೇಡಿ, ಏನೂ ಆಗೋಲ್ಲ, ಎಲ್ಲ ಸರಿಹೋಗತ್ತೆ!

ಈ ತಲೆಯ ಭಾಗಗಳು ಕಣ್ಣು, ಕಿವಿ, ಮೂಗು, ಇತ್ಯಾದಿಗಳ ಜೊತೆ ಅದರಲ್ಲಿನ ಬುರುಡೆಯ ಒಳಗಿರುವ ಬುದ್ಧಿ. ದೇಹವು ಸಿಕ್ಸ್ ಪ್ಯಾಕ್ ಇದ್ದು ತಲೆಯ ಒಳಗಿರುವ ಬುದ್ಧಿಯೇ ಕೆಲಸ ಮಾಡದಿರೆ, ಆ ದೇಹಕ್ಕೆ ಬೆಲೆಯೇ ಇರೋದಿಲ್ಲ. ಇದು ಕಟುವಾಸ್ತವ, ಉತ್ಪ್ರೇಕ್ಷೆಯೇನಲ್ಲ. ಚರ್ಮ ಬೆಳ್ಳಗೆ ಇರಲಿ, ಆರಡಿ ದೇಹವೇ ಇರಲಿ, ಸದೃಢ ದೇಹವೇ ಆಗಿರಲಿ, ಏನೆಲ್ಲಾ ಇದ್ದರೂ ಆ ತಲೆಯೊಳಗಿನ ಬುದ್ಧಿ ಮಿಕ್ಕೆಲ್ಲ ಗುಣಗಳನ್ನು ಶೂನ್ಯ ಮಾಡಿಬಿಡಬಹುದು. ಅಂಥಾ ಬುದ್ಧಿಯನ್ನು ಹೊಂದಿರುವ ತಲೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳಿ ಅಂತಲೇ helmet ಹಾಕಿಕೊಳ್ಳಿ, hell mate ಆಗದಿರಿ ಅಂತ ಕಾನೂನು ಹೇಳೋದು. ತಲೆಯಿಲ್ಲದೇ ಮಾನವ ಬದುಕಿರಲಾರ, ಆದರೆ ಬುದ್ಧಿ ಇರದೇ ಬದುಕಿರಬಲ್ಲ.

Is there any day like World Head Day?

ಬಹಳ ಹಿಂದೆ ಒಮ್ಮೆ helmet ಖರೀದಿಸಲು ಅಂಗಡಿಗೆ ಹೋಗಿದ್ದೆ. ನನಗೆ ಇಷ್ಟವಿದ್ದ helmet ಅನ್ನು ಕೊಳ್ಳಲು ನೋಡಿದರೆ ಅವು ಬಹಳ ದೊಡ್ಡದು. ಅಂಗಡಿಯವನು 'ನಿಂಬ ತಲೆ ಸರಿ ಇಲ್ಲೆ' ಅಂದ! "ನನ್ನ ತಲೆ ಸರಿ ಇದೆ ಆದರೆ ಈ ಹೆಲ್ಮೆಟ್'ಗೆ ನನ್ನ ತಲೆ ಸರಿ ಹೋಗೋಲ್ಲ ಅಷ್ಟೇ" ಅಂದಿದ್ದೆ. "ಹಾ, ಅದ್ ತಾ ನಾ ಸೊಲ್ಲಿದ್ದು" ಅಂದ.

ತಲೆಯ position ಮೇಲೆ ಅದು ಗೆಲುವಿನ ಸಂಕೇತವೋ ಸೋಲಿನ ಸಂಕೇತವೋ ಎಂದು ಹೇಳಬಹುದು. ಕ್ರಿಕೆಟ್ ಆಟದಲ್ಲಿಯೇ ನೋಡಿ, ಒಬ್ಬ ಬ್ಯಾಟ್ಸಮನ್ ಕಡಿಮೆ ರನ್ ಗಿಟ್ಟಿಸಿ ಔಟಾಗಿ ವಾಪಸ್ಸಾಗುವಾಗ ತಲೆ ಬಗ್ಗಿಸಿಕೊಂಡು ಸಾಗುತ್ತಾನೆ. ನೂರಾರು ರನ್ ಗಳಿಸಿ ನಂತರ ಔಟಾಗಿ ಸಾಗುವ ತಲೆ ಎತ್ತಿಕೊಂಡು ಸಾಗುತ್ತಾನೆ. ಸಾಧನೆ ಮಾಡಿದಾಗಲೂ, ಮಾಡದೇ ಹೋದಾಗಲೂ body language ತೋರುವ ಕ್ರಿಯೆಯಲ್ಲೂ ಈ ತಲೆಯ ಪಾತ್ರ ಹಿರಿದು. ಅಂದಿನ ದಿನಗಳಲ್ಲಿ ಕುಖ್ಯಾತರು ಸಿಕ್ಕಿಬಿದ್ದು ಜೈಲಾಗುವಾಗ ತಲೆ ಬಗ್ಗಿಸಿಕೊಂಡು ಸಾಗುತ್ತಿದ್ದರು. ಆದರೆ ಇಂದು ಅದೊಂದು ಹಿರಿಮೆಯ ಸಂಕೇತ. ತಲೆ ಎತ್ತಿ, ನಸು ನಗುತ್ತಾ ಸಾಗುತ್ತಾರೆ.

ಉತ್ತರಗಳೇ ಇಲ್ಲದ ಪ್ರಶ್ನೆಗಳು, ಪ್ರಶ್ನೆಗಳಿಗೆ ನಿಲುಕದ ಉತ್ತರಗಳು!ಉತ್ತರಗಳೇ ಇಲ್ಲದ ಪ್ರಶ್ನೆಗಳು, ಪ್ರಶ್ನೆಗಳಿಗೆ ನಿಲುಕದ ಉತ್ತರಗಳು!

ನಮ್ಮ ವ್ಯವಸ್ಥೆಯಲ್ಲಿ head start ಎಂಬುದು ಹಾಸುಹೊಕ್ಕಾಗಿದೆ. ದಿನನಿತ್ಯದಲ್ಲಿ ಈ head start ಅನ್ನು ಗಮನಿಸುತ್ತಲೇ ಬಂದಿದ್ದೇವೆ. ಮೊದಲಿಂದಲೂ ಕನ್ನಡ ಮಾಧ್ಯಮ ಓದಿ ನಂತರ ಆಂಗ್ಲ ಮಾಧ್ಯಮಕ್ಕೆ ಬಂದಾಗ, ಈ ಮೊದಲೇ ಆಂಗ್ಲ ಮಾಧ್ಯಮದಲ್ಲಿ ಇರುವವರು ಮುಂಚೂಣಿಯಲ್ಲಿ ಇರುತ್ತಾರೆ. ಅರ್ಥಾತ್ ಅವರಿಗೆ head start ಸಿಕ್ಕಿದೆ. ಓದು ಮುಗಿಸಿದ ಮೇಲೆ ಕೆಲಸಕ್ಕೆ ಅಂತ ಅರ್ಜಿಗಳನ್ನು ಹಾಕುವಾಗ ಓದಿನಲ್ಲಿ / ಚಟುವಟಿಕೆಗಳಲ್ಲಿ ಮುಂದೆ ಇರುವವರಿಗೆ head start ಸಿಕ್ಕಿದ್ದು ಮಿಕ್ಕವರಿಗಿಂತ ಬೇಗನೆ ಕೆಲಸ ಗಿಟ್ಟಿಸಬಲ್ಲವರಾಗಿರುತ್ತಾರೆ. ಸರಕಾರೀ ಕೆಲಸಕ್ಕೆ ಅಂತಲೇ ಸೇರಿದ ಮೇಲಂತೂ ಜಾತಿ ಆಧಾರದ ಮೇಲೆ head start ಪಡೆಯುವವರು ಇರುತ್ತಾರೆ.

ಜೀವನದಲ್ಲಿ ಏನೆಲ್ಲಾ ಸಂಕಷ್ಟಗಳು ಎದುರಾಗಿ ನಡೆವ ಹಾದಿಯು ದುಸ್ತರವಾಗಬಹುದು. ಆದರೆ headway ಆಗಬೇಕಾದ್ದು ಮುಖ್ಯ. ಸಾಗುವ ಹಾದಿಯಲ್ಲಿನ ಗತಿ ನಿಧಾನವಾದರೂ ಸರಿ, ನಿಲ್ಲದೇ ಸಾಗಬೇಕು. ಜೀವನದ ಹೋರಾಟ ನಡೆಯುತ್ತಲೇ ಸಾಯಬೇಕು. ಶಸ್ತ್ರಾಸ್ತ್ರ ತ್ಯಜಿಸಿ ಕೂತರೆ ತಲೆಯನ್ನೇ ತೆಗೆಯುತ್ತಾರೆ, ದ್ರೋಣರ ಕಥೆ ಗೊತ್ತಲ್ಲ? ಸುಮ್ಮನೆ ಕೂತಿದ್ದ ವೃಧಾಕ್ಷತ್ರನ ತೊಡೆಯ ಮೇಲೆ ಮಗನಾದ ಜಯದ್ರಥನ ತಲೆ ಬಂದು ಬಿದ್ದು ಅವನು ಒದರಿದಾಗ, ಆ ತಂದೆಯ ತಲೆಯೇ ನೂರು ಚೂರಾಯ್ತು. ಒಟ್ಟಿನಲ್ಲಿ ತಲೆಯನ್ನು ಸರಿಯಾಗಿ ಕಾಪಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಹಾಗೆ ಮಾಡದೇ ಹೋಗಿದ್ದಕ್ಕೇ ಕುರುವಂಶದ ತಲೆಗಳೆಲ್ಲಾ ಉದುರಿ ಹೋಯ್ತು.

ಬೇತಾಳನೂ ಸಾಮಾನ್ಯನಲ್ಲ, ಉತ್ತರ ಗೊತ್ತಿದ್ದೂ ಹೇಳದೆ ಹೋದರೆ ನಿನ್ನ ತಲೆ ನೂರು ಹೋಳಾಗುತ್ತದೆ ಎಂದೇ ವಿಕ್ರಮನಿಗೆ ಹೇಳುತ್ತಿದ್ದ.

ನಮ್ಮ ಜೀವನದ ಪ್ರತೀ ಹಂತದಲ್ಲೂ ಇಂಥಾ ಸವಾಲು ಇದ್ದದ್ದೇ. ಕೆಲವಕ್ಕೆ ತಲೆ ಕೆಡಿಸಿಕೊಳ್ಳಲೇಬೇಕಾಗುತ್ತದೆ, ಆದರೆ ಹಲವಕ್ಕೆ ಸುಖಾಸುಮ್ಮನೆ ತಲೆ ಕೊಡುವುದು ಬೇಕಿಲ್ಲ. ನಿಮ್ಮ ನಿಮ್ಮ ತಲೆಗಳನ್ನು ಕಾಪಾಡಿಕೊಳ್ಳಿ. ಹಿಂದಿನ ತಲೆಮಾರಿನವರನ್ನು ನಾವು ಇಂದಿಗೂ ಗೌರವಿಸುವಂತೆ, ನಿಮ್ಮ ಮುಂದಿನ ತಲೆಮಾರಿನವರು ನಿಮ್ಮ ತಲೆಯನ್ನು ಗೌರವಿಸಲಿ.

ವಿಶ್ವ ತಲೆ ದಿನ ಅಂತ ಯಾವುದೂ ಇಲ್ಲ. ದಿನವೂ ತಲೆ ದಿನವೇ!

English summary
We observe so many days like world health day, world hand hygiene day etc. But, is there any day like World Head Day? Head is such an important part of the body and our life, but why there is no day for the head? Asks Srinath Bhalle, Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X