ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಕ್ತಿಯೋ ವ್ಯವಹಾರವೋ ಜಗತ್ತಿನ ಎಲ್ಲ ಮೂರುತಿಗಳ ಬಗ್ಗೆ ಒಂದಷ್ಟು ವಾರ್ತೆ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

"ಮೂರುತಿಯನು ನಿಲ್ಲಿಸೋ ಮಾಧವ ನಿನ್ನ ಮೂರುತಿಯನು ನಿಲ್ಲಿಸೋ . . . " ಅಂತ ದಾಸರ ಪದ ಕೇಳಿಯೇ ಇರುತ್ತೀರಾ. ಅರ್ಥಾತ್ ನಿಮ್ಮ ಮೂರುತಿಯನ್ನು ಎನ್ನ ಮನದಲ್ಲಿ, ಹೃದಯದಲ್ಲಿ ನಿಲ್ಲಿಸಯ್ಯಾ ಅಂತ ಮಹಾವಿಷ್ಣುವನ್ನು ಬೇಡಿಕೊಳ್ಳುವ ಪರಿಯ ಪದವಿದು. ಮೂರುತಿಯನ್ನು ನಿಲ್ಲಿಸುವುದಾದರೂ ಏಕೆ? ಎಲ್ಲರಿಗೂ ದಾಸರಷ್ಟು ದೈವ ಭಕ್ತಿಯಾಗಲಿ ಅಥವಾ ವ್ಯಾವಹಾರಿಕ ಜೀವನದತ್ತ ನಿರ್ಲಕ್ಷ್ಯ ಇರಬೇಕಲ್ಲ.

ಕಣ್ಮುಚ್ಚಿ ಧ್ಯಾನಕ್ಕೆ ಕೂತ ಕೂಡಲೇ ಮನಸ್ಸಲ್ಲಿ ಏನೇನೋ ಯೋಚನೆಗಳು ರಪರಪ ಅಂತ ಬಂದು ಮನಸ್ಸನ್ನು ಚಿಂದಿ ಮಾಡುತ್ತೆ. ಹಾಗಾಗಿ ಒಂದು ಮೂರುತಿಯನ್ನು ನಿಲ್ಲಿಸಿ ಅವನನ್ನೇ ನೆನೆಯುವ ಪರಿಪಾಠವಿದು. ಹೀಗೇ ಒಂದು ದಿನ ನನಗೆ ಒಂದು ಭಯಂಕರ ಆಲೋಚನೆ ಬಂತು. ಏನದು ಅಂದಿರಾ? ಈ ಜಗತ್ತಿನಲ್ಲಿ ಪ್ರತಿಮೆಗಳು ಎಷ್ಟಿವೆ ? ನೆಟ್ಟಗೆ ನಮ್ಮ ಕರ್ನಾಟಕದಲ್ಲಿರೋ ಪ್ರತಿಮೆಗಳೇ ಎಷ್ಟಿವೆ ಅಂತ ಗೊತ್ತಿಲ್ಲ. ಅಂಥಾದ್ರಲ್ಲಿ ಜಗತ್ತಿನಲ್ಲಿ ಎಷ್ಟಿವೆ ಅಂತ ಆಲೋಚನೆ ಬಂದಿದ್ದು ಸ್ವಲ್ಪ ಅತೀ ಆಯ್ತು, ಆಲ್ವಾ?

ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ...ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ...

ಯಾರನ್ನಾದರೂ ಕೇಳಬೇಕು ಅಂತ ಒಂದು ಆಲೋಚನೆ ಸುಳಿಯುತ್ತಿದ್ದಂತೆಯೇ, ಏನು ಕೇಳಬೇಕು, ಹೇಗೆ ಕೇಳಬೇಕು ಅಂತ ನನ್ನ analyst ಬುದ್ಧಿಗೆ ಕೆಲಸ ಕೊಟ್ಟೆ. ಬರೀ ನಾನೇ ಯೋಚನೆ ಮಾಡಿದರೆ ಹೇಗೆ? ನೀವೂ ಬನ್ನಿ ಒಟ್ಟಿಗೆ brain storm ಮಾಡೋಣ. ದೇವರ ವಿಗ್ರಹಗಳನ್ನು ಪಕ್ಕಕ್ಕೆ ಇರಿಸಿ, ಮಿಕ್ಕ ದೊಡ್ಡವರ ಪ್ರತಿಮೆಗಳ ಬಗ್ಗೆ ಸ್ವಲ್ಪ ಮಾತನಾಡೋಣ.

Interesting facts and details about statues around the world

ವಿಗ್ರಹಗಳ ಬಗ್ಗೆ ಮಾತನಾಡಿದರೆ ನಾನೊಬ್ಬ ವಿಗ್ರಹ ಚೋರ ಅಂದುಕೊಂಡಾರು. ನಮ್ಮ ದೇಶದಲ್ಲಿ ಅತೀ ಹೆಚ್ಚು ಇರುವ ಪ್ರತಿಮೆಗಳು ಯಾರದ್ದು? ಗಾಂಧೀಜಿ ಮತ್ತು ಅಂಬೇಡ್ಕರ್ ಅವರುಗಳದ್ದು. ಹಾಗಾಗಿ ಎಷ್ಟು ಪ್ರತಿಮೆಗಳಿವೆ ಅಂತ ಒಟ್ಟು ಸಂಖ್ಯೆಯ ಬದಲು ಒಬ್ಬೊಬ್ಬರದ್ದೂ ಪ್ರತಿಮೆಗಳು ಎಷ್ಟಿವೆ ಅಂತ ತಿಳಿದುಕೊಂಡರೆ ಚೆನ್ನ. ಸರಿ, ಮುಂದೆ?

ವಿಶ್ವದ ಅತೀ ಎತ್ತರದ ಪ್ರತಿಮೆಗಳು: ಭಾರತದ ಏಕತಾ ಪ್ರತಿಮೆಗೆ ಅಗ್ರಸ್ಥಾನವಿಶ್ವದ ಅತೀ ಎತ್ತರದ ಪ್ರತಿಮೆಗಳು: ಭಾರತದ ಏಕತಾ ಪ್ರತಿಮೆಗೆ ಅಗ್ರಸ್ಥಾನ

ಎಲ್ಲ ಪ್ರತಿಮೆಗಳೂ ಒಂದೇ ರೀತಿ ಇರುವುದಿಲ್ಲ ಅಲ್ಲವೇ? ಅರ್ಥಾತ್ full size ಪ್ರತಿಮೆಗಳೇ ಅಲ್ಲದೆ bust size ಪ್ರತಿಮೆಗಳೂ ಇರುತ್ತೆ. ಹಾಗಿದ್ದರೆ ಒಬ್ಬೊಬ್ಬರದ್ದೂ ಸಂಖ್ಯೆ ನೋಡುವಾಗ full size ಪ್ರತಿಮೆಗಳೆಷ್ಟು, bust ಸೈಜ್ ಪ್ರತಿಮೆಗಳು ಎಷ್ಟಿವೆ ಅಂತ ತಿಳಿದುಕೊಳ್ಳೋದು ಉತ್ತಮ. ಅಂದ ಹಾಗೆ fullsize ನಲ್ಲಿ ಇನ್ನೊಂದು ವಿಚಾರ ಅಡಗಿದೆ. ಏನದು? ಫುಲ್ ಸೈಜ್ ಎಂಬೋದು ನಿಂತಿರುವ ಅಥವಾ ಕುಳಿತಿರುವ ಭಂಗಿಗಳೂ ಆಗಬಹುದಲ್ಲವೇ?

ಹೌದು full size - ನಿಂತಿರುವ, full size - ಕುಳಿತಿರುವ, bust size ಮೂರೂ categoryಯಲ್ಲಿ ಎಷ್ಟೆಷ್ಟಿವೆ ತಿಳಿದುಕೊಳ್ಳೋದು ಉತ್ತಮ. ಇನ್ನೂ ಏನೋ ಮಿಸ್ ಆಗ್ತಿದೆ. ಹಾ! ಎಲ್ಲವೂ ಒಂದೇ material ಇಂದ ಮಾಡಿರುತ್ತಾರೆಯೇ? ಇಲ್ಲ ತಾನೇ? ಅಮೃತ ಶಿಲೆಯದ್ದು ಎಷ್ಟಿವೆ, ಕಪ್ಪು ಕಲ್ಲಿನದ್ದು ಎಷ್ಟು, ಕಂಚಿನ ಪ್ರತಿಮೆಗಳೆಷ್ಟು, Plaster of paris ಎಷ್ಟಿವೆ ಎಂಬೆಲ್ಲ material ಲೆವೆಲ್ ಕೂಡಾ ಇದ್ದರೆ ಚೆನ್ನ. ಏನಂತೀರಾ?

Interesting facts and details about statues around the world

ಗಾಂಧೀಜಿ, ಅಂಬೇಡ್ಕರ್ ಅಂತ ಹೇಳಿದ್ದು ಉದಾಹರಣೆಗೆ ಮಾತ್ರ ಅಲ್ಲವೇ? ಹಾಗಾಗಿ ಈ ಪ್ರತಿಮೆಗಳ ವಿವರ ಹುಡುಕುವಾಗ ಅವರು ನಟರೋ, ರಾಜಕಾರಣಿಗಳೋ, ಸಾಹಿತಿಗಳೋ ಎಂಬ ವಿವರ ಸಿಕ್ಕರೂ ಸಕತ್ತಾಗಿರುತ್ತೆ. ಎಷ್ಟು ಹೆಚ್ಚು ಮಾಹಿತಿ ಸಿಗುತ್ತೋ ಅಷ್ಟೂ ಒಳ್ಳೆಯದು. ಇದು information ಯುಗ. ಅಂದ ಹಾಗೆ ಕುಳಿತಿರುವ ಎಂದಾಗ ಸ್ವಲ್ಪ ಆಲೋಚಿಸಬೇಕು. ಸುಮ್ಮನೆ ಬುದ್ಧನ ಹಾಗೆ ಕುಳಿತಿರುವವರಾ? ಅಥವಾ ಶಿವಾಜಿ ಮಹಾರಾಜನ ಹಾಗೆ ಕುದುರೆ ಮೇಲೆ ಕುಳಿರುವವರಾ? ಹೌದು, ಎರಡೂ ವಿಚಾರಗಳು ಇದ್ದರೆ ಚೆನ್ನ.

ನಿಗೂಢ, ಭಯಂಕರ ಗರ ಬಡಿಸುವ ಸೌಂದರ್ಯವೇ ಸಾಗರ!ನಿಗೂಢ, ಭಯಂಕರ ಗರ ಬಡಿಸುವ ಸೌಂದರ್ಯವೇ ಸಾಗರ!

ಕುದುರೆ ಮೇಲೆ ಕುಳಿತಿರುವ ಎಂದಾಗ ಮತ್ತೊಂದು ವಿಚಾರ ಎದ್ದು ಬಂತು ನೋಡಿ. ಕುದುರೆಯ ಕಾಲುಗಳು ಹೇಗಿವೆ ಅನ್ನೋದು ಮುಖ್ಯ. ಇದೇನಪ್ಪಾ ವಿಷಯ ಅಂದಿರಾ? ನಾ ಕೇಳಿದ್ದು ಸಮತಟ್ಟಾದ ಅಂದರೆ ನಾಲ್ಕೂ ಕಾಲುಗಳು ಊರಿರುವ ಕುದುರೆ, ಒಂದು ಕಾಲು ಎತ್ತಿರುವ ಕುದುರೆ ಅಂತ ಬೇರೆ ಬೇರೆ ವಿಭಾಗದಲ್ಲಿ ಮಾಹಿತಿ ಇದ್ದರೆ ಚೆನ್ನ ಅಂತ.

ಇದರ ಹಿನ್ನೆಲೆ ಏನು? ಒಂದು ಕಾಲೆತ್ತಿರುವ ಕುದುರೆಯ ಮೇಲೆ ಕುಳಿತ ವೀರ / ವೀರ ವನಿತೆ ಎಂದರೆ ಅವರು ಯುದ್ಧಭೂಮಿಯಲ್ಲಿ ಗಾಯಾಳುವಾಗಿ ವೀರಮರಣ ಹೊಂದಿದರು ಅಂತ. ನಾಲ್ಕೂ ಕಾಲುಗಳು ಸಮತಟ್ಟಾದ ಕುದುರೆಯ ಮೇಲೆ ಕುಳಿತಿದ್ದಾರೆ ಎಂದರೆ ಅವರದ್ದು ಸ್ವಾಭಾವಿಕ ಮರಣ ಅಂತ. ಇದೆಲ್ಲಾ ಸರಿ, ಇನ್ನೊಂದು ವಿಷಯ ತಿಳಿದುಕೊಳ್ಳಲೇಬೇಕು. ಈ ಯಾವುದೇ ರೀತಿಯದ್ದಾದರೂ ಆ ವ್ಯಕ್ತಿ ಈಗ ಬದುಕಿದ್ದಾರಾ? ಅಥವಾ ಸ್ವರ್ಗಸ್ಥರಾಗಿದ್ದಾರೋ?

ಸರಿ ಸರಿ, ಇವೆಲ್ಲಾ ಚಿಕ್ಕ ಚಿಕ್ಕ ವಿಷಯಗಳು. ಇವೆಲ್ಲಾ sum up ಆಗೋದು ಯಾವ ರೀತಿ? ಈ ಪ್ರತಿಮೆಗಳಲ್ಲಿ ಗಂಡು ಪ್ರತಿಮೆ ಎಷ್ಟು? ಹೆಣ್ಣು ಪ್ರತಿಮೆ ಎಷ್ಟು? ಯಾವ ದೇಶದವರು? ಯಾವ ರಾಜ್ಯದವರು? ಯಾವ ಜಿಲ್ಲೆಯವರು? ಏನಾದರೂ ಬಿಟ್ಟಿದ್ದೀನಾ? ಇದ್ದರೆ ತಿಳಿಸಿ, ಅವನ್ನೂ ಸೇರಿಸಿ ಒಂದು ದೊಡ್ಡ spread sheet ಮಾಡಿ ಯಾರನ್ನು ಕೇಳೋದು ಅಂತ ನಂತರ ಆಲೋಚಿಸೋಣ.

ಈಗ ಒಂದಿಷ್ಟು ಪ್ರತಿಮೆಗಳ ಬಗ್ಗೆಯೇ ಮಾತನಾಡೋಣ. ಇರಾಕ್ ನಲ್ಲಿರುವ Firdos Square ನಲ್ಲಿ ಸ್ಥಾಪನೆಯಾಗಿದ್ದ ಸದ್ದಾಮನ ಪ್ರತಿಮೆ ಮೂವತ್ತೊಂಬತ್ತು ಅಡಿ ಎತ್ತರವಿತ್ತು. ಅವನ ಅರವತ್ತೈದನೆಯ ಹುಟ್ಟುಹಬ್ಬದಂದು ಅದು ಸ್ಥಾಪನೆಯಾಗಿತ್ತು. ಅಲ್ಲಿಂದ ಒಂದು ವರ್ಷದ ನಂತರ ಅರ್ಥಾತ್ ಏಪ್ರಿಲ್ 2003ರಲ್ಲಿ ಅವನ ಸಾಮ್ರಾಜ್ಯ ಕೊನೆಗೊಳ್ಳುತ್ತಿದ್ದಂತೆಯೇ ಆ ಪ್ರತಿಮೆಯನ್ನು ನೆಲಕ್ಕುರುಳಿಸಿ ತಮ್ಮ ಆಕ್ರೋಶವನ್ನು ತಮಣಿ ಮಾಡಿಕೊಂಡರು ಜನತೆ.

ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ 1970ರಲ್ಲಿ ಸ್ಥಾಪನೆಯಾದ ವಿವೇಕಾನಂದರ ಪ್ರತಿಮೆ ಇಂದಿಗೂ ಒಂದು ಅದ್ಭುತವಾದ ಪ್ರೇಕ್ಷಣೀಯ ಸ್ಥಳ. 2010ರಲ್ಲಿ ಉದ್ಘಾಟನೆಯಾದ ವಿವೇಕಾನಂದರ ಹತ್ತು ಅಡಿ ಎತ್ತರದ ಕಂಚಿನ ಪ್ರತಿಮೆ ಚಿಕಾಗೋ ನಗರದ ಹಿಂದೂ ದೇವಾಲಯದಲ್ಲಿ ರಾರಾಜಿಸುತ್ತಿದೆ. ವಿಶ್ವವಿಖ್ಯಾತ statue of liberty ಅಮೆರಿಕದ ಅಗ್ರಗಣ್ಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಫ್ರಾನ್ಸ್ ನಲ್ಲಿ ತಯಾರಾದ ಈ ತಾಮ್ರದ ಪ್ರತಿಮೆಗೆ ಬಹಳಷ್ಟು ಇತಿಹಾಸ ಇದೆ.

ಈ ಪ್ರತಿಮೆಯ ಪಾದದಿಂದ ಟಾರ್ಚ್ ವರೆಗಿನ ಎತ್ತರ 151 ಅಡಿ, ಆದರೆ ಅದನ್ನು ನಿಲ್ಲಿಸಿರುವ ಅಡಿಪಾಯ ಮತ್ತೊಂದು 154 ಅಡಿ. ಒಟ್ಟಾರೆ ಭೂಮಿಯಿಂದ ಟಾರ್ಚ್ ವರೆಗಿನ ಒಟ್ಟು ಎತ್ತರ 305 ಅಡಿ. ಅಮೆರಿಕಕ್ಕೂ ಒಂದು ಹೆಜ್ಜೆ ಮುಂದು ಅಂತ ಲಿಬರ್ಟಿ ಪ್ರತಿಮೆಗಿಂತಲೂ ಎತ್ತರವಾದ ಪ್ರತಿಮೆಯನ್ನು ಚೈನಾ ದೇಶ ಹೊಂದಿದೆ. ಬುದ್ಧನ ಈ ಕಂಚಿನ ಪ್ರತಿಮೆ 420 ಅಡಿ ಎತ್ತರವಿದೆ. ಅಡಿಪಾಯವನ್ನು ಸೇರಿದರೆ ಭೂಮಿಯಿಂದ 682 ಅಡಿ ಎತ್ತರವಿದೆ.

ಆದರೆ, ಈ ಎರಡೂ ಪ್ರತಿಮೆಗಳು ಎರಡು ಮತ್ತು ಮೂರನೆಯ ಸ್ಥಾನದಲ್ಲಿವೆ ಎಂಬುದೇ ವಿಶೇಷ. Statue of Liberty ಬಗ್ಗೆ ಹೇಳಿದ ಮೇಲೆ ನಮ್ಮದೇ ಆದ Statue of Unity ಬಗ್ಗೆ ಹೇಳದೇ ಹೋದರೆ ಹೇಗೆ? ಆರುನೂರು ಅಡಿ ಎತ್ತರಕ್ಕೆ ಮೂರೇ ಅಡಿ ಕಡಿಮೆ ಇರುವ ಈ ಪ್ರತಿಮೆ ವಿಶ್ವದಲ್ಲೇ ಅತೀ ಎತ್ತರದ ಪ್ರತಿಮೆ ಎಂಬ ಅಗ್ಗಳಿಕೆಯನ್ನು ಹೊಂದಿದ್ದು, ಈ ಲೇಖನ ಓದುವ ಹೊತ್ತಿಗೆ ಉದ್ಘಾಟನೆಯೂ ಆಗಿದೆ.

ಉಕ್ಕಿನ ಮನುಷ್ಯ ಎಂದೇ ಹೆಸರುವಾಸಿಯಾಗಿದ್ದ ಸರ್ದಾರ ವಲ್ಲಭಭಾಯ್ ಪಟೇಲರ ಈ ಎತ್ತರದ ಪ್ರತಿಮೆಯು ಗುಜರಾತ್ ನಲ್ಲಿ ಸ್ಥಾಪಿತವಾಗಿದ್ದು ವಿಶ್ವದ ಜನತೆಯ ಗಮನವನ್ನು ಸೆಳೆಯುತ್ತದೆ ಎಂಬ ನಂಬಿಕೆ ಇದೆ. ಸದ್ಯಕ್ಕೆ ವಿಶ್ವದ ಕೆಲವು ಮೂರ್ತಿಗಳ ಬಗ್ಗೆ ಕೇಳಿದ್ದಾಯ್ತು. ಆ ತಾಯಿ ಭುವನೇಶ್ವರಿಯ ಮೂರುತಿ ನಿಮ್ಮ ಮನದಲ್ಲಿ, ಹೃದಯದಲ್ಲಿ ಸ್ಥಾಪಿಸಿಕೊಂಡು, ಕನ್ನಡ ಭಾಷೆಯನ್ನು ಬೆಳೆಸುವ ಯತ್ನ ಮಾಡೋಣವೇ?

English summary
Here is an unusual and interesting article by statues around the world. Significance, importance and common perception about statues discussed by Oneindia columnist Srinath Bhalle. On October 31st world's tallest , former central home minister Sardhar Vallabhabhai Patel statue inaugurated in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X