ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಹಿಂದಿರುಗಿ ನೋಡಬೇಕೆ, ಬೇಡವೇ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಹಿಂದಿರುಗಿ ಅಂದ್ರೆ ಹಿಂದೆ ತಿರುಗಿ... ಆಂಗ್ಲದಲ್ಲಿ 'ಹಿಂದೆ' ಅಂದ್ರೆ 'ಬ್ಯಾಕ್' ಅಂತ. ಬ್ಯಾಕ್ ಅಂದ್ರೆ ಹಿಂದೆ/ ಹಿಂದಿನದ್ದು ಅಂದುಕೊಳ್ಳೋಣ. ಈ ಪದಕ್ಕೆ ಹಲವಾರು ಅರ್ಥಗಳಿವೆ... ಕಚೇರಿಗಳಲ್ಲಿ ನಡೆಯುವ ಒಂದು ಸನ್ನಿವೇಶ ತೆಗೆದುಕೊಂಡರೆ, ಯಾರೋ ಒಬ್ಬರು ವಾರ/ಹತ್ತು ದಿನಗಳ ಕಾಲ ರಜೆಯ ಮೇಲೆ ಹೋಗಿದ್ದವರು ವಾಪಸ್ ಬಂದರು ಅಂದುಕೊಳ್ಳಿ. ಅವರನ್ನು ಕಂಡಾಗ ಸಾಮಾನ್ಯವಾಗಿ ಹೇಳೋದು "welcome back" ಅಂತಲೇ. maternity ರಜೆಯಿಂದ ಹಿಂದಿರುಗಿದ ಹೆಣ್ಣಿಗೆ ವಿಶೇಷ ಸ್ವಾಗತ ಕೋರಿ ಹೇಳುವುದೂ 'welcome back" ಎಂದೇ...

ಅದೇಕೋ ಸಿನಿಮಾ ರಂಗದಲ್ಲಿನ ಈ ಬ್ಯಾಕ್ ಬಳಕೆ ಇತ್ತೀಚೆಗೆ ಕೊಂಚ ವಕ್ರವಾಗಿಯೇ ಇದೆ ಅನ್ನಿಸುತ್ತೆ. ಬೆಳ್ಳಿಯತೆರೆಯ ಮೇಲೆ ಒಮ್ಮೆ ರಾರಾಜಿಸಿ ಏನೋ ಒಂದು ಕಾರಣಕ್ಕೆ back off ಆಗಿದ್ದವರು ಮತ್ತೆ ಬಂದರು ಅಂದಾಗ "come back" ಮಾಡಿದರು ಅಂತಾರೆ. ಕನ್ನಡವನ್ನು ಸೀದಾ ಸಾದಾ ಅರ್ಥಾತ್ ಗೂಗಲ್ translation ಮಾಡಿದಂತೆ ಮಾತನಾಡುವವರು "ನಾನು ಹೋಗಿ ಬರ್ತೀನಿ" ಎಂಬ ಮಾತನ್ನು "i will go and come back" ಅನ್ನೋ ಹಾಗೆ ಭಾಸವಾಗುತ್ತದೆ.

ಸದ್ದು ಇರಬೇಕಾದೆಡೆ ಸದ್ದಿರಲಿ, ಮೌನ ಇರಬೇಕಾದೆಡೆ ಮೌನ ಇರಲಿಸದ್ದು ಇರಬೇಕಾದೆಡೆ ಸದ್ದಿರಲಿ, ಮೌನ ಇರಬೇಕಾದೆಡೆ ಮೌನ ಇರಲಿ

ಇರಲಿ, ಇದೇ ರಂಗದಲ್ಲಿ ಒಮ್ಮೆ ಪರದೆಯ ಹಿಂದೆ ಸರಿದಿದ್ದವರು ಮತ್ತೆ ಬರೋದನ್ನು ಒಂದು ಕಾಲಕ್ಕೆ ಸೆಕೆಂಡ್ ಇನ್ನಿಂಗ್ಸ್ ಅಂತಲೂ ಕರೆಯುತ್ತಿದ್ದರು... ಈ ಪರಂಪರೆ ಕೇವಲ ಒಬ್ಬರ ಹಿಂದಿರುಗುವಿಕೆ ಅಂತಾಗದೆ ಒಂದು ಕಾಲದ ಯಶಸ್ವೀ ಜೋಡಿ ಮತ್ತೊಮ್ಮೆ ಜೋಡಿಯಾಗಿ ನಟಿಸಿದ್ದು ಇದೆ. ನಾ ಕಂಡಂತೆ ಈ ಪ್ರಯೋಗ ಅತೀ ಯಶಸ್ಸು ಕಂಡಿಲ್ಲ.

How We Use Word Back In Many Ways

ಈ come back ಅನ್ನೋದನ್ನು ಕೇಳಿದಾಗಲೆಲ್ಲಾ ನನಗೆ ಬಿಲ್ ವಿದ್ಯೆ ನೆನಪಾಗುತ್ತದೆ. ಹೆದೆಯೇರಿಸಿರುವ ಬಿಲ್ಲಿಗೆ ಬಾಣ ಹೂಡಿ ಬಿಡುವಾಗ ಸುಮ್ಮನೆ ಬಿಡುತ್ತೇವೆಯೋ ಅಥವಾ ಬಾಣವನ್ನು ಸೆಳೆದು ಬಿಡುತ್ತೇವೆಯೋ? ಕೆಲವೊಮ್ಮೆ ಮುಂದೆ ಚಿಮ್ಮಲು ಕೊಂಚ ಹಿಂದೆ ಸರಿಯಲೇಬೇಕು. ನಿಲ್ದಾಣದಲ್ಲಿ ಬಂದು ನಿಂತ ಬಸ್ ಮುಂದೆ ಹೊರಡುವ ಮುನ್ನ ಕೊಂಚ ಹಿಂದೆ ಸಾಗೋದು ನಿಮ್ಮ ಅನುಭವಕ್ಕೂ ಬಂದಿರಬಹುದು. ಹಿಂದೆ ಸರಿದಾಗಲೆಲ್ಲ ಸೋತೆವು ಅಂದುಕೊಳ್ಳದೆ ಮರುಹುಟ್ಟಿಗೆ ತಯಾರಾದೆವು ಅಂದುಕೊಂಡಾಗ ಜೀವನಕ್ಕೆ ಹೊಸ ಹುರುಪು ಬರುತ್ತದೆ.

ಈ 'ಬ್ಯಾಕ್' ನಮ್ಮ ಜೀವನದಲ್ಲಿ ಎಲ್ಲೆಲ್ಲೂ ಇದೆ. ಪುಟ್ಟ ಉದಾಹರಣೆ ಎಂದರೆ ಈ ಬರಹ ನಾನು ಬರೆಯುವಾಗ ಸೋಫಾಕ್ಕೆ ಬೆನ್ನು ಒರಗಿಸಿಕೊಂಡು ಕೆಲಸ ಮಾಡುತ್ತಿದ್ದೆ. ಕೂತೂ ಕೂತೂ ಬರುವ ಬೆನ್ನು ನೋವನ್ನು 'back pain' ಅಂತಾರೆ. ಬೆಳಗಿನಿಂದ ಸಂಜೆಯವರೆಗೆ ಹೆಚ್ಚುಕಾಲ ಕುರ್ಚಿಗೆ ಬೆನ್ನು ಒರಗಿ ಕೂತವರಿಗೆ ಬರುವ ಸಾಮಾನ್ಯ ತೊಂದರೆ ಈ back pain... ಚೇರಿನ ಮೇಲೆ ಕೂತವರು ಕೆಟ್ಟ ಭಂಗಿಗಳಲ್ಲಿ ಕೂತಾಗ ಬರುವ ವರದಾನ ಎಂದರೆ lower back pain... slip disc ಆಗೋದು ಇಂಥದ್ದೇ ಒಂದು ಮುಂದುವರಿದ ಕಾರಣದಿಂದ...

ಇಷ್ಟೆಲ್ಲಾ ಯಾಕೆ ಹೇಳಿದೆ ಎಂದರೆ ಈ 'ಹಿಂದೆ/ಬ್ಯಾಕ್' ಅನ್ನೋದು ನಮ್ಮ ಹಿಂದೆ ಅಂತ ಉಲ್ಲಂಘನೆ ಮಾಡದಿರಿ... ಅದರಂತೆಯೇ ನಮ್ಮ ಹಿಂದಿನ ಜೀವನವನ್ನೂ ಉಲ್ಲಂಘನೆ ಮಾಡದೆ ಆಗಾಗ ನಾವು ನಡೆದು ಬಂದ ಹಾದಿಯನ್ನು ಹಿಂದಿರುಗಿ ನೋಡಿಕೊಳ್ಳಬೇಕು... ಇದು ಹೇಗೆ ಎಂದರೆ ಏಣಿಯನ್ನು ಪೂರ್ಣವಾಗಿ ಹತ್ತಿ ಆ ನಂತರ ಕೆಳಕ್ಕೆ ನೋಡಿದಾಗ ತಲೆಸುತ್ತಿ ಬಂದು ಬೀಳಬಹುದು ಬದಲಿಗೆ ಪ್ರತೀ ಮೆಟ್ಟಿಲನ್ನು ಏರುವಾಗ ಒಮ್ಮೆ ಹಿಂದಿರುಗಿ ನೋಡಿದಾಗ ಅದೇ ಅಭ್ಯಾಸವಾಗಿ ಪೂರ್ಣ ಮೇಲೆ ಹೋದಾಗ ತಲೆ ತಿರುಗೋಲ್ಲ ಬದಲಿಗೆ ಮೇಲಿರೋದು/ಮೇಲಿರೋದು ಅಭ್ಯಾಸವಾಗಿ ತಪ್ಪಾಗೋದು ಕಡಿಮೆಯಾಗುತ್ತದೆ.

ಪ್ರಶ್ನೆಗಳನ್ನು ಯಾವಾಗ ಕೇಳಬೇಕು ಯಾವಾಗ ಕೇಳಬಾರದು?ಪ್ರಶ್ನೆಗಳನ್ನು ಯಾವಾಗ ಕೇಳಬೇಕು ಯಾವಾಗ ಕೇಳಬಾರದು?

ವಿದ್ಯಾರ್ಥಿ ಜೀವನದಲ್ಲಿ ಈ back ಅನ್ನೋದು ವರ್ಷಾನುವರ್ಷದ ಯಾನ... "ಕಳೆಯಿತೋ ಆ ಬೇಸಿಗೆ, ಹೋಗೋಣಾ ಶಾಲೆಗೇ/ಕಾಲೇಜಿಗೆ" ಅನ್ನೋದನ್ನ ಇಲ್ಲಿ "Back To School" ಎನ್ನುತ್ತಾರೆ. ರಜೆಯ ಮಜದಿಂದ ಶಾಲೆಗೇ ವಾಪಸ್ ಆಗೋದೂ ಒಂದು ಹುರುಪು... ಅಲ್ಲಿ ಎಲ್ಲವೂ ಹೊಸತಾಗಿರುತ್ತದೆ. ಹೊಸ ಬ್ಯಾಗು, ಶೂಸ್, ಪುಸ್ತಕಗಳು ಹೀಗೆ... ಆದರೆ ಕೆಲಸಕ್ಕೆ ಅಂತ ಹೋಗುವ ದಿನಗಳಲ್ಲಿ ರಜೆಯಿಂದ ವಾಪಸ್ ಕೆಲಸಕ್ಕೆ ಹೋಗಬೇಕು ಎಂದಾಗ ದು:ಖ... ಯಾಕೆ ಅಂದ್ರೆ ಮತ್ತದೇ ಕೆಲಸ ಎನ್ನುವ ಬೇಸರ...

How We Use Word Back In Many Ways

ವಯಸ್ಸೇರುತ್ತಾ ನಾವು ಹಳತಾಗುವಂತೆ ನಮ್ಮ ದಿನನಿತ್ಯದಲ್ಲಿ ಕೆಲಸಗಳೂ ಹಳತಾಗಿ ಕಾಣಿಸುತ್ತಾ ಸೊರಗುವಂತೆ ಕಾಣುತ್ತಿದೆ ಎಂಬುದೇ ಎಚ್ಚರಿಕೆಯ ಘಂಟೆ. Mechanical ಆಗಿ ಅದದೇ ಕೆಲಸ ಮಾಡುತ್ತಿದ್ದೇವೆ ಅನ್ನಿಸಿದಾಗ ಎಚ್ಚೆತ್ತುಕೊಂಡು ಮನಸ್ಸು ಪ್ರಫುಲ್ಲವಾಗುವ ಕೆಲಸದಲ್ಲಿ ಮನಸ್ಸನ್ನು ತೊಡಗಿಸಿಕೊಂಡು ಜೀವನದಲ್ಲಿ ಮತ್ತೆ ಹುರುಪನ್ನು ತಂದುಕೊಳ್ಳೋದು ನಮ್ಮ ಕೈಲಿದೆ.

ರಜೆ ಮುಗಿಸಿ ವಾಪಸ್ಸಾಗುವ ದಿನ ಬಹಳ ಹಿಂಸೆಯಾಗುತ್ತೆ ಅಂತ ಹೇಳಿದೆ. ಆದರೆ ಅದೇ ಸಂಜೆ/ರಾತ್ರಿಯಂತೂ ಮನೆಗೇ ಬರುತ್ತೇವೆ ಎಂಬುದನ್ನು ಮರೆತಿರುತ್ತೇವೆ. ಒಂದೆರಡು ವಾರಕ್ಕಾಗಿ ಮನೆಮಂದಿಯವರೊಂದಿಗೆ ಕಾಲ ಕಳೆಯಲು ಬರುವ ಒಬ್ಬ ಸೈನಿಕ, ವಾಪಸ್ಸಾಗುವಾಗಿನ ಮನಸ್ಥಿತಿ ಬಗ್ಗೆ ಬರೆಯಲು ಪದಗಳು ಇದೆಯೇ? ಆಗ ಹೊರಟವ ಮತ್ತೆ ಎಂದಿಗೆ ಬರುತ್ತಾನೆ ಅನ್ನೋದು ಆಲೋಚನೆಯಲ್ಲ ಬದಲಿಗೆ ವಾಪಸ್ ಬರುವನೇ ಎಂಬುದೇ ಪ್ರಶ್ನೆಯಾಗಿರುತ್ತದೆ. ಇಂಥ ಪರಿಸ್ಥಿತಿಗಳಿಗೆ ಹೊಂದಿಕೊಂಡವನೇ ಎಲ್ಲೆಲ್ಲೂ 'ಸೈ' ಎನಿಸಿಕೊಳ್ಳುತ್ತಾನೆ. ಹೀಗಾಗಿ ಸೈನಿಕ ಪದ ಆರಂಭವಾಗೋದೇ 'ಸೈ' ಎಂದರೆ ಇದರಲ್ಲಿ ಅತಿಶಯೋಕ್ತಿ ಏನಿದೆ?

ಬೃಹತ್ ದೇಹಿ ಏರೋಪ್ಲೇನ್ ತಂತಾನೇ ಹಿಂದಕ್ಕೆ ಸಾಗಲಾಗದು. flight ಹಾರುವ ಮುನ್ನ ಎಲ್ಲಿ ನಿಲ್ಲಿಸಲಾಗಿರುತ್ತದೆಯೋ ಅಲ್ಲಿಂದ ಹಿಂದಕ್ಕೆ ನೂಕಿ, ತಿರುಗಿಸಿಟ್ಟು ಮುಂದೆ ಸಾಗಲು ಅನುಕೂಲ ಮಾಡುವಂತೆ ಆಗಲು ಅನುವುಗೊಳಿಸುವ ವಾಹನಗಳನ್ನು Tugs ಅಥವಾ Tractor ಎನ್ನುತ್ತಾರೆ. ಈ ದೊಡ್ಡ ದೇಹಿಗಳೇ ಹೀಗೆ ಎನ್ನದಿರಿ, ಸೈಕಲ್, two ವೀಲರ್ ಗಾಡಿಗಳು, ಆಟೋರಿಕ್ಷಾಗಳನ್ನೂ reverse ಮಾಡಲು ಆಗುವುದಿಲ್ಲ. ಆದರೆ ಕಾರು, ಬಸ್ಸು ಎಂಬೆಲ್ಲಾ ನಾಲ್ಕು ಅಥವಾ ನಾಲ್ಕಾರು ಚಕ್ರಗಳ ವಾಹನಗಳನ್ನು reverse ಹಾಕಿ ಹಿಂದಕ್ಕೆ ಸಾಗಬಹುದು.

ಗಾಡಿಯಲ್ಲಿ ಮುಂದೆ ಸಾಗುವಾಗ ಎಷ್ಟು ಎಚ್ಚರಿಕೆ ವಹಿಸಬೇಕೋ ಅದರ ಎರಡರಷ್ಟು ಎಚ್ಚರ ಗಾಡಿಯನ್ನು reverse ಮಾಡುವಾಗ ಇರಬೇಕು. ಎಷ್ಟೋ ಸಾರಿ ಭಾರೀ ಅನಾಹುತಗಳಾಗಿರೋದನ್ನು ಕೇಳಿದ್ದೇವೆ, ನೋಡಿದ್ದೇವೆ. ಇಂಥ ಅವಘಡಗಳು ಕಡಿಮೆಯಾಗಲೆಂದೇ ಈಗಿನ ಕಾರುಗಳಿಗೆ ಮೈಯೆಲ್ಲಾ ಕಣ್ಣು (ಕ್ಯಾಮೆರಾ).

ಬಹಳ ಹಿಂದೆ ಕಾರುಗಳು reverse ಮಾಡುವಾಗ ಬರುವ ಶಬ್ದವನ್ನು ನಮಗೆ ಬೇಕಿರುವ ಸದ್ದಿಗೆ ಹೊಂದಿಸಬಹುದಾಗಿತ್ತು. ಒಮ್ಮೆ ಯಾರೋ ವಿಕೃತ ಮನಸ್ಸಿನವರೇ ಇರಬೇಕು, ಗಾಡಿ reverse ಮಾಡುವಾಗ ಮಗುವಿನ ಅಳುವಿನ ಸದ್ದು ಬರುವ ರೀತಿ ಕಂಡುಹಿಡಿದ್ದರು. ಅದನ್ನು ತಮ್ಮ ಗಾಡಿಗೆ ಅಳವಡಿಸಿಕೊಂಡವರೂ ಇದ್ದರು. ನಮ್ಮದು ಎಷ್ಟು ಸೂಕ್ಷ್ಮ ಮನಸ್ಸು ಎಂದರೆ ಈ ರೀತಿ ಸದ್ದು ಕೇಳಿದ ಕೂಡಲೇ ಜನ ಮಾಡುವ ಕೆಲಸ ಬಿಟ್ಟು ಅಳು ಎಲ್ಲಿಂದ ಬರುತ್ತಿದೆ ಎಂದು ನೋಡುವಂತೆ ಆಗುತ್ತಿತ್ತು. ಹಾದಿಯಲ್ಲಿ ಗಾಡಿಯಲ್ಲಿ ಸಾಗುವವರಿಗೂ ಇಂಥ ಸಂದಿಗ್ಧ ಉಂಟಾಗಿ ಆ ಕಡೆ ಈ ಕಡೆ ನೋಡುವಾಗ ಅಪಘಾತಗಳೂ ಆಗಿವೆ. ಆಮೇಲೆ ಅದು ಬ್ಯಾನ್ ಆಯಿತು ಬಿಡಿ.

ಜೀವನದಲ್ಲಿ ಹಿಂದಕ್ಕೆ ಸಾಗದಂತೆ ಇರಬೇಕೇ? ಹಿಂದಕ್ಕೆ ಸಾಗಿಯೂ ಮುಂದಕ್ಕೆ ಚಿಮ್ಮಿ ಸಾಗುವ ತಾಕತ್ ಇರಬೇಕೇ?

ಹೀಗೇಕೆ ಹೇಳಿದ್ದು? ಜೀವನದಲ್ಲಿ ಕೆಲವೊಂದು ಘಟನೆಗಳನ್ನು ಮರೆತು ಮುಂದೆ ಸಾಗಬೇಕು. ಮತ್ತೆ ಹಿಂದೆ ಹೋಗಿ ಆ ಘಟನೆಗಳನ್ನು ನೆನಪಿಸಿಕೊಂಡಾಗ ಜೀವನದಲ್ಲಿ ಮತ್ತೊಮ್ಮೆ setback/ಹಿನ್ನೆಡೆ ಆಗುವ ಸಂಭವನೀಯತೆ ಹೆಚ್ಚು. ಇದು ಒಂದು ರೀತಿಯ ಆಲೋಚನೆಯಾದರೆ, ನಾವು ನಡೆದು ಬಂದ ಹಾದಿಯನ್ನು ಒಮ್ಮೆ ಹಿಂದಿರುಗಿ ನೋಡಿದಾಗ ಯಾವ ತಪ್ಪು ಮಾಡಬಾರದು ಎಂಬ ಮನವರಿಕೆ ಮತ್ತೊಮ್ಮೆ ಮಾಡಿಕೊಂಡಂತೆ ಆಗುತ್ತದೆ.

ಅಷ್ಟೇ ಅಲ್ಲದೆ, ನಾನು ಹೀಗಿದ್ದೇ ಹೀಗಾದೆ ಎಂಬುದನ್ನು ನೋಡಿಕೊಂಡಾಗ ಎರಡೂ ರೀತಿಯಾಗಬಹುದು. ಕೆಳಗಿದ್ದವರು ಉನ್ನತಿಯನ್ನು ತಲುಪಿದವರೇ ಆಗಿದ್ದರೆ ಆ ದಿನಗಳನ್ನು ಮರೆಯದೇ ಕೆಳಗಿರುವವರನ್ನು ಮೇಲಕ್ಕೆ ತರುವ ಯತ್ನ ಮಾಡಬೇಕು. ಮೇಲಿದ್ದವರು ಪತನವಾದರು ಅಂದಾಗ ತಾವು ಯಾವ ತಪ್ಪು ಮಾಡಿ ಹೀಗಾದೆವು ಎಂಬುದನ್ನು ಅರಿತು ಮಿಕ್ಕ ಜೀವನದಲ್ಲಾದರೂ ಉತ್ತಮರಾಗಿ ಬಾಳಬೇಕು.

ನೀವೇನಂತೀರಿ?

English summary
We use word "Back" in many ways. We use words like come back, welcome back...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X