• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಟರ್ವ್ಯೂ ಎಂಬ ಯುದ್ಧದಲ್ಲಿ ಗೆಲುವು ಸಾಧಿಸುವುದು ಹೇಗೆ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ರಾಮಾಯಣದಲ್ಲಿ ವಿಶ್ವಾಮಿತ್ರರು ರಾಮಲಕ್ಷ್ಮಣರ ಸಹಾಯ ಬಯಸಿದ್ದು ಸಂದರ್ಶನದ ಒಂದು ಭಾಗ. ದೃಪದ ಮಹಾರಾಜನ ಮೇಲೆ ಸೇಡು ತೀರಿಸಿಕೊಳ್ಳುವ ಇರಾದೆಯೂ ಕೌರವ ಪಾಂಡವರಿಗೆ ಸಂದರ್ಶನದ ಒಂದು ಭಾಗವೇ!

ಸದ್ಯಕ್ಕೆ ಕಲಿಯುಗದ ಹೊಟ್ಟೆಪಾಡಿನ ಸಂದರ್ಶನದ ಬಗ್ಗೆ ಮಾತನಾಡೋಣ. ಯಾವುದೇ ಸಂದರ್ಶನ ಅಂದರೆ ಅಲ್ಲಿ ಎರಡು ವಿಷಯ ಒಟ್ಟೊಟ್ಟಿಗೆ ಸಾಗುತ್ತದೆ. ಒಬ್ಬರು ಸಂದರ್ಶನ ಮಾಡುವವರು ಮತ್ತೊಬ್ಬರು ಸಂದರ್ಶನ ತೆಗೆದುಕೊಳ್ಳುವವರು.

ಮಾತು ಆಡಿ ಆದರೆ ಆಡುವ ಮುನ್ನ ಒಮ್ಮೆ ಯೋಚಿಸಿ

ಸಂದರ್ಶನ ಮಾಡುವವರು ಹಲವು ಸಾರಿ ಒಬ್ಬರಿಗಿಂತ ಜಾಸ್ತಿ ಇದ್ದರೆ panel interview ಅಂತ ಕರೀತಾರೆ. ಸಂದರ್ಶನ ತೆಗೆದುಕೊಳ್ಳುವವರಲ್ಲೂ ಒಬ್ಬರಿಗಿಂತ ಹೆಚ್ಚು ಮಂದಿ ಇರಬಹುದು. ಅದಕ್ಕೆ panel discussion ಅನ್ನುತ್ತಾರೆ. ಎರಡರಲ್ಲೂ ಒಬ್ಬ ವ್ಯಕ್ತಿ ಹೇಗೆ ಪ್ರತಿಕ್ರಿಯಿಸುತ್ತಾನೆ / ಹೊಂದಿಕೊಳ್ಳುತ್ತಾನೆ ಎಂಬುದನ್ನು ಗಮನಿಸಲಾಗುತ್ತದೆ. ಒಬ್ಬ ವ್ಯಕ್ತಿ ಒಬ್ಬಂಟಿಗನಾಗಿ ಹಲವರನ್ನು ಹೇಗೆ ಎದುರಿಸುತ್ತಾನೆ ಎಂಬುದು ಒಂದು ಕಡೆ, ಅದೇ ರೀತಿ ಹಲವರೊಡನೆ ಹೇಗೆ ಹೊಂದಿಕೊಂಡು ಒಂದು ವಿಷಯದಲ್ಲಿ ಒಮ್ಮತಕ್ಕೆ ಬರುತ್ತಾನೆ ಎಂಬುದು ಮತ್ತೊಂದು.

ಸಂದರ್ಶನದಲ್ಲಿ ಜಯಗಳಿಸಿ ವೀರಯೋಧ ಅರ್ಜುನನಾಗಬಹುದು ಆದರೆ ಎಡವಿದರೆ ಅಭಿಮನ್ಯುವೇ ಸರಿ. ಆದರೆ ಸಂದರ್ಶನ ರಂಗ ಯುದ್ಧಭೂಮಿ ಅಲ್ಲ. ಸಂದರ್ಶನ ನೀಡುವವನಿಗೆ ಅದು ಯುದ್ಧಭೂಮಿ, ಕರ್ಮಭೂಮಿ. ಜಯಗಳಿಸಲೇಬೇಕು ಅನ್ನೋ ಛಲ ಇರಬೇಕು. ಆದರೆ ಸಂದರ್ಶನ ತೆಗೆದುಕೊಳ್ಳುವವರಿಗೆ ನೀವೇನೂ ಅಭಿಮನ್ಯು ಅಲ್ಲ. ಅರ್ಥಾತ್ ನಿಮ್ಮನ್ನು ಸದೆಬಡಿಯಬೇಕು ಅನ್ನೋ ಉದ್ದೇಶ ಇರೋದಿಲ್ಲ. ಒತ್ತಡದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅವರು ಪರೀಕ್ಷೆಗೆ ಒಡ್ಡುತ್ತಾರೆ.

ನಂಬಿಕೆಗಳ ಸುತ್ತ ಶಾಲಾ ದಿನಗಳ ಮಧುರ ನೆನಪುಗಳು

ಒಂದೊಂದನ್ನೂ ಸ್ವಲ್ಪ ವಿವರವಾಗಿ ತಿಳಿಯೋಣ.

ಒಂದು ಕೆಲಸಕ್ಕೆ ಅರ್ಜಿ ಹಾಕಿ, ಆ ಕಡೆಯಿಂದ ಉತ್ತರ ಬರುವವರೆಗೂ ಏನೋ ಒಂದು ಆಶಯ ಇರುತ್ತದೆ. ಎಷ್ಟೋ ಬಾರಿ ಆ ಕಡೆಯಿಂದ ಉತ್ತರವೇ ಬರೋದಿಲ್ಲ. ನಿರಾಸೆ ಕಟ್ಟಿಟ್ಟಬುತ್ತಿ. ಸಂಸ್ಥೆಯಿಂದ ಒಂದು ಉತ್ತರ ಬಂತು, ಸಂದರ್ಶನಕ್ಕೆ (ಫೋನ್ interview ಕೂಡ ಆಗಬಹುದು) ಆಯ್ಕೆ ಆಗಿದ್ದೀರಾ ಎಂದಾಗಲೇ ಸಂದರ್ಶನ ಆರಂಭವಾಯ್ತು ಎಂದು ಅರಿತುಕೊಳ್ಳಬೇಕು. ಆದರೆ ಹುದುಗಿರೋ ವಿಷಯ ಏನಪ್ಪಾ ಎಂದರೆ, ಒಂದು ಸಂಸ್ಥೆಯಯವರು ಬಂದ ಅರ್ಜಿಗಳ ಕಡತವನ್ನು ತೆರೆದಾಗಲೇ ಸಂದರ್ಶನ ಆರಂಭ. ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನಾವು ಹೇಗೆ ಎಂದು ಮೊದಲು ತಿಳಿದುಕೊಳ್ಳುತ್ತಾರೆ.

ನೀವು ಮತ್ತು ನಿಮ್ಮ ಸ್ನೇಹಿತರು ಅಂತ ಇಬ್ಬರು ಮೂವರು ಒಂದು ಕೆಲಸಕ್ಕೆ ಅರ್ಜಿ ಹಾಕಿರಬಹುದು. ಆದರೆ ಅಂಥಾ ಎಷ್ಟು ಮಂದಿ ಅರ್ಜಿ ಹಾಕಿರಬಹುದು ಎಂಬುದು ಊಹಿಸಲೂ ಅಸಾಧ್ಯ. ಕೆಲವರು freshers ಆಗಿರಬಹುದು. ಕೆಲವರು ಬದಲಾವಣೆ ಹುಡುಕುತ್ತಿರಬಹುದು. ಕೆಲವರು ಸದ್ಯ ಇರೋ ಬಾಸ್ ಕೈಯಿಂದ ಹೊರಬಿದ್ದರೆ ಸಾಕು ಎಂದು ಕೆಲಸಕ್ಕೆ ಅರ್ಜಿ ಹಾಕಿರಬಹುದು. ಇವೆಲ್ಲದರ ಆಚೆ ಒಂದು ಪುಟ್ಟ ವರ್ಗ ಇದೆ. ತಾನು ಮಾರುಕಟ್ಟೆಯಲ್ಲಿ ಎಷ್ಟು ತೂಗುತ್ತೇನೆ ಎಂದು ತಮ್ಮನ್ನೇ ತುಲನೆ ಮಾಡಿಕೊಳ್ಳಲೂ ಅರ್ಜಿ ಹಾಕುತ್ತಾರೆ.

ನಿಮ್ಮ ಹೋರಾಟ ಈ ಎಲ್ಲ ವರ್ಗದವರೊಂದಿಗೆ ಇರುವುದರಿಂದ, ಜಯಗಳಿಸುವವರೆಗೂ ಅಭಿಮನ್ಯು ಅಂತಲೇ ಅಂದುಕೊಳ್ಳಿ. ಒಂದೆರಡು ಪ್ರಸಂಗಗಳು ಹೀಗಿವೆ.

ನನ್ನ ಸ್ನೇಹಿತನ ಜೊತೆ ಒಂದು ಸಂಜೆ ಅವನ ಸ್ನೇಹಿತರೊಬ್ಬರನ್ನು ಭೇಟಿ ಮಾಡಲು ಹೋಗಿದ್ದೆ. ಆ ಸ್ನೇಹಿತರು ನಮಗಿಂತಾ ಹಿರಿಯರು. ವೃತ್ತಿಯಲ್ಲಿ ನುರಿತವರು. ಕೆಲಸ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಉನ್ನತ ಸ್ಥಾನಗಳಿಸಿದವರು.

ಉಭಯಕುಶಲೋಪರಿ ನಂತರ ಏನು ಮಾಡಿದ್ರಿ ಇವತ್ತು ಅನ್ನೋ ಪ್ರಶ್ನೆ ಅವರನ್ನು ಕೇಳಲಾಗಿ, ಅವರು ಹೇಳಿದ್ದು "ಬೆಳಿಗ್ಗೆ ಎದ್ದಾಗ ಸಿಕ್ಕಾಪಟ್ಟೆ ತಲೆನೋವು ಇತ್ತು ಅಂತ ಆಫೀಸಿಗೆ ಕಾಲ್ ಮಾಡಿ ಬರುವುದಿಲ್ಲ ಅಂದಿದ್ದೆ. ಮಧ್ಯಾಹ್ನದ ವೇಳೆ ಎಲ್ಲ ನಾರ್ಮಲ್ ಆಯ್ತು ಅಂತ ಪೇಪರ್ ನೋಡುವಾಗ ಒಂದು walk - in interview ಕಣ್ಣಿಗೆ ಬಿತ್ತು. ಸರಿ, ಹೇಗಿದ್ರೂ ಟೈಮ್ ಇದೆ ಅಂತ ಸಿದ್ದವಾಗಿ ಇಂಟರ್ವ್ಯೂ ತೊಗೊಂಡೆ. ಅವರಿಗೂ ನಾನು ಇಷ್ಟವಾದೆ ಅನ್ನಿಸುತ್ತೆ, ಈಗಿನ ಸಂಬಳಕ್ಕಿಂತ ಎರಡರಷ್ಟು ಕೊಡ್ತೀನಿ ಅಂತ appointment letter ಕೂಡ ಕೊಟ್ಟರು. but i am not interested" ಅಂದರು. ಆಗ "ಓ! ವಾವ್" ಅನ್ನಿಸಿತ್ತು ಆದರೆ ನಾನು ಕೆಲಸಕ್ಕಾಗಿ ಅರ್ಜಿ ಹಾಕಲು ಆರಂಭಿಸಿದಾಗ, ಈ ಪರಿ ತಪ್ಪು ಎನಿಸಿದ್ದು ನಿಜ. ಅಭಿಪ್ರಾಯ?

ನಾನು ಬಿಪಿಎಲ್'ನಲ್ಲಿ ಕೆಲಸಕ್ಕೆ ಇದ್ದ ಒಂದು ಸಂದರ್ಭ. ಹೊಸತೇನೂ ಕಲಿಕೆ ಇಲ್ಲದೇ, ದಿನನಿತ್ಯ ಅದೇ ಕೆಲಸ ಎಂಬಂತಾಗಿ (ಇನ್ನೂ bachelor) ಬೇರೆ ಕಡೆ ಹಾರೋಣ ಎಂದು ಅನ್ನಿಸಿತ್ತು. ಸರಿ, ಅಂತ ಒಂದು ಕಂಪನಿಗೆ ಅರ್ಜಿ ಹಾಕಿದೆ. ಎರಡು ಪೋಸ್ಟ್'ಗಳಿದ್ದು, ಆಯ್ಕೆಯಾದವರನ್ನು ಮರು ಸಂದರ್ಶನಕ್ಕೆ ಆಹ್ವಾನಿಸುತ್ತಾರೆ ಎಂದೆಲ್ಲಾ ಇತ್ತು. ಇರಲಿ, ಹಾಕಿದ ಅರ್ಜಿಗೆ ಉತ್ತರ ಕೂಡ ಬಂತು. ಎಂಜಿ ರೋಡಿನಲ್ಲಿನ ಒಂದು ಖ್ಯಾತ ಹೋಟಲ್'ನ ಒಂದು ಹಾಲ್'ನಲ್ಲಿ ಭೇಟಿ ಮಾಡಬೇಕು ಎಂದಿತ್ತು. ಸರಿ, ತಕ್ಕಮಟ್ಟಿಗೆ ಸಿದ್ಧತೆ ನಡೆಸಿ, ಕೆಲಸಕ್ಕೆ ಅರ್ಧ ದಿನ ರಜೆ ಹಾಕಿ ಅಲ್ಲಿಗೆ ಹೋದರೇ, ಕನಿಷ್ಠ ಅರವತ್ತು ಜನ ಇದ್ದರು. ಅರ್ಥಾತ್, ನಾನು ಹೋಗುವ ವೇಳೆಗೆ ಆಗಲೇ ಅಷ್ಟು ಜನ ಜಮಾಯಿಸಿದ್ದರು. ನಾನು ಹೋದ ಮೇಲೂ ಅಭ್ಯರ್ಥಿಗಳು ಬರುತ್ತಲೇ ಇದ್ದರು.

ಬಂದವರತ್ತ ಕಣ್ಣು ಹಾಯಿಸುವಾಗ ನನ್ನ senior ಬರಬೇಕೆ? ಇಬ್ಬರಿಗೂ ಮತ್ತೊಬ್ಬರನ್ನು ಅಲ್ಲಿ ಕಂಡಿದ್ದು ಇರುಸುಮುರುಸಾಗಿತ್ತು. ನನ್ನ ಮನಸ್ಸಿನಲ್ಲಿ ಭರವಸೆ ಇಳಿದಿತ್ತು. ಅನುಭವೀ ಸೀನಿಯರ್ ಇರುವಾಗ ಹಾಗೆ ಅನ್ನಿಸೋದು ಸಹಜ ಅಲ್ಲವೇ? ಮೊದಲು written test, ಆಮೇಲೆ ಗ್ರೂಪ್ discussion ಅಂತೆಲ್ಲಾ ಆಗಿ, ರಿಸಲ್ಟ್ ಅನೌನ್ಸ್ ಮಾಡುತ್ತೇವೆ ಸ್ವಲ್ಪ ಹೊತ್ತು ಎಲ್ಲರೂ ಇಲ್ಲೇ ಇರಿ ಅಂದರು. ಅರ್ಧಘಂಟೆ ದಾಟಿದ ಮೇಲೆ, ಅಲ್ಲಿಗೆ ಒಬ್ಬರು ಬಂದು "ಐವರನ್ನು ಸೆಲೆಕ್ಟ್ ಮಾಡಿದ್ದೇವೆ. ಮೊದಲ ಇಬ್ಬರೂ ಕೆಲಸಕ್ಕೆ ಒಪ್ಪಿಗೆ ಕೊಟ್ಟರೆ ಮಿಕ್ಕ ಮೂವರಿಗೆ ಅವಕಾಶ ಇಲ್ಲ" ಎಂದರು. ಮೊದಲ ಹೆಸರು ಯಾರದ್ದೋ ಆಗಿತ್ತು. ಅಲ್ಲಿಗೆ ನಾನು ಶಸ್ತ್ರಾಸ್ತ್ರ ಕೆಳಗೆ ಇರಿಸುವುದು ಗ್ಯಾರಂಟಿ ಆಯ್ತು. ಎರಡನೆಯ ಹೆಸರು ನನ್ನದೇ! ಓ ಮೈ ದೇವರೇ! ಆ ನಂತರದ ಮೂವರ ಹೆಸರಲ್ಲೂ ನನ್ನ ಸೀನಿಯರ್ ಹೆಸರು ಇರಲಿಲ್ಲ. ನೋಡಲೋ ಬೇಡವೋ ಅಂತ ಆತನ ಕಡೆ ನೋಡಿದೆ. ಸಿಟ್ಟೋ ಅವಮಾನವೋ ಗೊತ್ತಿಲ್ಲ, ಮುಖ ಕೆಂಪಾಗಿತ್ತು, ಧಡ ಧಡ ಹೊರಟೇಹೋದ.

ಯಾವುದೇ ಒಂದು ಸಂದರ್ಶನಕ್ಕೆ ಹೋಗುವ ಮುನ್ನ preparation ಅನ್ನೋದು ಅತೀ ಮುಖ್ಯ. ಸಂಸ್ಥೆಯ ಬಗ್ಗೆ ಗೊತ್ತಿರಬೇಕು. ಧರಿಸುವ ವಸ್ತ್ರ, ಗಡ್ಡ-ಮೀಸೆ, ಹಸ್ತಲಾಘವ, ಕೂಡುವ ಭಂಗಿ, ಕಣ್ಣೋಟ, body language, ರಿಸೆಪ್ಶನ್'ನಲ್ಲಿ ಕುಳಿತಿರುವ ವ್ಯಕ್ತಿಯ ಜೊತೆ ಹೇಗೆ ವ್ಯವಹರಿಸುತ್ತೀರಿ ಹೀಗೇ ಪ್ರತಿಯೊಂದೂ ನಿಮಗೇ ಅರಿವಿಲ್ಲದೆ ನಿಮ್ಮ ಬಗ್ಗೆ information ಕಳಿಸುತ್ತಾ ಇರುತ್ತದೆ. ಅವರು ಕೇಳುವ ಪ್ರಶ್ನೆ ಅರ್ಥೈಸಿಕೊಳ್ಳಬೇಕು. ಅರ್ಥವಾಗದೆ ಇದ್ದರೇ ಸೌಜನ್ಯತೆಯಿಂದ ಮತ್ತೊಮ್ಮೆ ಹೇಳಿ ಎಂದು ಕೇಳಬೇಕು. ತಡವಾಗಿ ಹೋಗೋದು ದೊಡ್ಡ ಮೈನಸ್.

ಪ್ಯಾನೆಲ್ ಸಂದರ್ಶನದಲ್ಲಿ ಹಲವಾರು ಬಾರಿ ಒಂದು ಮೂಲೆಯಲ್ಲಿ ಒಬ್ಬಾಕೆ ಕೂತಿರುತ್ತಾರೆ. ಅವರು ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ಮೊದಲಲ್ಲೇ ಹೇಳಿರುತ್ತಾರೆ "ನಾನು ಬರೀ ನೋಟ್ಸ್ taker, ನನ್ನಿಂದ ಯಾವ ಪ್ರಶ್ನೆಯೂ ಬರುವುದಿಲ್ಲ" ಅಂತ. ignore me ಅನ್ನೋ ಸಂದೇಶ ನಿಮಗೆ ತಲುಪಿಸುತ್ತಾರೆ. ಬೇರೆಯವರು ನಿಮ್ಮ ಉತ್ತರಗಳತ್ತ ಮಾತ್ರ ಗಮನಕೊಟ್ಟರೆ ಆಕೆ ನಿಮ್ಮ ಚಲನವಲನದ ಗಮನಿಸುತ್ತಾ ಇರುತ್ತಾರೆ. resume/biodataದಲ್ಲಿ ಸಿಕ್ಕಾಪಟ್ಟೆ ರೀಲು ಬಿಟ್ಟವರು, ಉತ್ತರ ಕೊಡಲಾಗದೆ ತಿಣುಕುವವರು, ವಿಷಯದ ಮೇಲೆ ಕಂಟ್ರೋಲ್ ಇರುವವರು ಎಲ್ಲರೂ ಈಕೆಯ ಗಮನಕ್ಕೆ ಬೀಳುತ್ತಾರೆ. ignore me ಅಂತ ಅವರು ನಿಮಗೆ ಸಂದೇಶ ಕಳಿಸಿದ್ದರೂ ಇವರೇ keyplayer ಅನ್ನೋದನ್ನ ಮರೆಯಬಾರದು.

ಸಂದರ್ಶನ ತೆಗೆದುಕೊಳ್ಳುವಾಗ ಉಡಾಫೆತನ ತೋರುವುದು ಸಲ್ಲದು. ಇಂದಿನ ದಿನಗಳಲ್ಲಿ ಬಹು ದೊಡ್ಡ blunder ಎಂದರೆ ತಮ್ಮ ಮೊಬೈಲ್ ಅನ್ನು ಸೈಲೆಂಟ್ ಮೋಡ್'ಗೆ ಇರಿಸದೇ ಪ್ರಶ್ನೆಗಳಿಗೆ ಉತ್ತರ ನೀಡುವಾಗ ಫೋನ್ ಘಂಟೆ ಬಾರಿಸಿದಾಗ ಆ ಕಡೆ ಥಟ್ಟನೆ ನೋಡೋದು ಇತ್ಯಾದಿ.

ಅಮೇರಿಕಾದಲ್ಲಿ ಹಿಂದೊಮ್ಮೆ ಫೋನ್ ಸಂದರ್ಶನದಲ್ಲೇ ಅಭ್ಯರ್ಥಿಯ ಬಗ್ಗೆ ತೃಪ್ತರಾಗಿ ಕೆಲಸ ಕೊಡುವುದು ನಡೆಯುತ್ತಿತ್ತು. ಆದರೆ ಅಷ್ಟು ಚೆನ್ನಾಗಿ ಫೋನಿನಲ್ಲಿ ಮಾತನಾಡಿದ ಅಭ್ಯರ್ಥಿ, ಕೆಲಸ ಕೊಟ್ಟರೆ ಯಾಕೆ ಸರಿಯಾಗಿ ಮಾಡುತ್ತಿಲ್ಲ ಎಂದು ಅರ್ಥವಾಗದೆ, ಆ ಜಾಡನ್ನು ಅನುಸರಿಸಿ ಹೋದಾಗ, ಫೋನ್'ನಲ್ಲಿ ಮಾತನಾಡಿದ್ದು ಈ ವ್ಯಕ್ತಿ ಅಲ್ಲದೆ ಬೇರೆ ಯಾರೋ ಎಂದು ಅರಿವಾಯಿತು. ವಿಡಿಯೋ ಕಾಲ್ ಮಾಡಿದರೂ ಅಲ್ಲೂ ಮೋಸ ನಡೆಯಲಾರಂಭಿಸಿತು. ಭಾರತೀಯರೇ ಹೀಗೆ ಎಂಬ ಸಂದೇಶ ಎಲ್ಲ ಕಂಪನಿಯವರ ತಲೆಯಲ್ಲಿ ಉಳಿದುಹೋಯಿತು. ಎಂಥಾ ಅವಮಾನ! ಇಂದಿಗೆ ಎಷ್ಟೋ ಕಂಪನಿಯವರು ಫೋನ್ ಇಂಟರ್ವ್ಯೂ ಇಲ್ಲ ಎಂದೇ ಸಾರುತ್ತಾರೆ. ಕೆಲವರು ಫೋನ್ ಇಂಟರ್ವ್ಯೂ ಇದ್ದರೂ, ಅಲ್ಲಿ ಪಾಸ್ ಆದವರು ಮುಖಾಮುಖಿ ಸಂದರ್ಶನಕ್ಕೆ ಬರಲೇಬೇಕು ಎಂಬ ನಿಬಂಧನೆ ಹಾಕಿರುತ್ತಾರೆ. ಯಾವುದೇ ಒಂದು ಒಳ್ಳೆಯ ಪದ್ದತಿಯನ್ನು ಹಾಳುಗೆಡವಲು ನಮ್ಮಲ್ಲಿ ಹಲವರು ಸದಾ ಕಂಕಣಬದ್ಧರಾಗೇ ಇರುತ್ತಾರೆ ಅಲ್ಲವೇ?

ತಮ್ಮ ಮರ್ಯಾದೆ ಕಳೆದುಕೊಳ್ಳುವುದೇ ಅಲ್ಲದೇ ದೇಶದ ಮರ್ಯಾದೆ ಕಳೆಯುತ್ತಿದ್ದೇವೆ ಎಂದು ಅರಿವೇ ಆಗದ ಡಬಲ್ ಗ್ರ್ಯಾಜುಯೆಟ್'ಗಳು.

ಇನ್ನೂ ಹೇಳೋದಕ್ಕೆ ಸಾಕಷ್ಟು ವಿಷಯ ಇದೆ. ಆದರೆ ಬಹುಶ: ಅವೆಲ್ಲ ನಿಮ್ಮ ಅನುಭವಗಳೂ ಆಗಿರುತ್ತದೆ ಎಂದು ನನಗೆ ಗೊತ್ತು. ನೀವೇ ಹೇಳಿ, ನಾವು ಕೇಳ್ತೀವಿ . . . ನಿಮ್ಮ ಅನುಭವದ ಸಂದರ್ಶನಗಳ ಕಥಾನಕವೇ ಆಗಬೇಕಿಲ್ಲ. ಚಲನಚಿತ್ರದಲ್ಲಿ ನೀವು ಕಂಡಿರುವ interview ಬಗ್ಗೆಯೂ ಹೇಳಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How to prepare, face and succeed in interviews? Important tips by Kannada columnist Srinath Bhalle, Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more