ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಕಿದ್ದಾಗ ಜಾಗ ಬಿಡಿ, ಬೇಡದಿದ್ದಾಗ ಜಾಗ ಬಿಡಲೇಬೇಡಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮೊನ್ನೆ ವಾಟ್ಸಪ್ಪ್'ನಲ್ಲಿ ಒಬ್ಬರು ಒಂದು ವಿಡಿಯೋ ಹಂಚಿಕೊಂಡಿದ್ದರು. ಯಾವುದೋ ದೇಶದಲ್ಲಿ ಸಾವಿರಾರು ಜನ ಒಂದು ಕಡೆ ಸೇರಿಕೊಂಡು ಅದೇನೋ ಧರಣಿ ನಡೆಸುತ್ತಿದ್ದಾರೆ. ಅದೇ ಸಮಯಕ್ಕೆ ಆ ಬೀದಿಯಲ್ಲಿ ಒಂದು ಆಂಬುಲೆನ್ಸ್ ಬರುತ್ತೆ. ಆಂದೋಳನಕಾರರು ತಕ್ಷಣವೇ ಸರಿದು ಜಾಗ ಮಾಡಿ ಕೊಟ್ಟು ಆಂಬುಲೆನ್ಸ್'ಗೆ ಹೋಗುವಂತೆ ಜಾಗ ಮಾಡಿಕೊಟ್ಟು, ಅದು ತೆರಳಿದ ಮೇಲೆ ಮತ್ತೆ 'ಬೇಕೇ ಬೇಕು' ಎಂಬ ಸ್ಟ್ರೈಕ್ ಮುಂದುವರೆಯುತ್ತದೆ. ಇಂಥಾ ದೃಶ್ಯ ನೋಡಿದಾಗ ಅಥವಾ ಕೇಳಿದಾಗ ನಮ್ಮ ದೇಶದ ಜನತೆಯ (ಅ)ವ್ಯವಸ್ಥೆಯ ಬಗ್ಗೆ ಒಮ್ಮೆ ಆಲೋಚಿಸುವಂತೆ ಮಾಡುತ್ತದೆ.

ದುಷ್ಟ ಶಕ್ತಿಗಳನ್ನು ದೂರವಿಡುವ ಒಂದು ಗಂಟೆಯ ಸುತ್ತ! ದುಷ್ಟ ಶಕ್ತಿಗಳನ್ನು ದೂರವಿಡುವ ಒಂದು ಗಂಟೆಯ ಸುತ್ತ!

ಒಮ್ಮೆ ಬನಶಂಕರಿಯ ರಾಜಬೀದಿಯಲ್ಲಿ ಆಟೋದಲ್ಲಿ ಸಾಗುವ ಸಮಯದಲ್ಲಿ ಹಿಂದಿನಿಂದ ಆಂಬುಲೆನ್ಸ್ ಸದ್ದು ಮಾಡಿಕೊಂಡು ಬರುತ್ತಿತ್ತು. ಯಾರೋ ಒಬ್ಬ ಕೊಂಚ ಜಾಗ ಮಾಡಿಕೊಡುತ್ತಿದ್ದಂತೆ ಆ ಜಾಗದಲ್ಲಿ ಮತ್ತೊಂದು ಗಾಡಿ ಬಂದು ಸೇರುತ್ತಿತ್ತು. ಅರ್ಥಾತ್ ನಾಲ್ಕು ಜನ ನಿಯಮ ಪಾಲಿಸಲು ಸಿದ್ಧರಿದ್ದರೂ, ನಲವತ್ತು ಜನ ಅದನ್ನು ಮುರಿಯಲು ಸಿದ್ಧವಿರುವಂತೆ ಕಂಡಿತು. ಜನರೇಕೆ ಸ್ಪಂದಿಸುತ್ತಿಲ್ಲ ಎಂಬುದೇ ಖೇದ. ಮತ್ತೊಂದು ದೇಶದಲ್ಲಿ ಟೊಮ್ಯಾಟೋ ಬೆಳೆಯನ್ನು ತುಳಿಯುತ್ತಾ ಮೋಜು ಮಾಡುವುದನ್ನು ಕಂಡು ಅದನ್ನು ಪಾಲಿಸಲು ಮುಂದಾಗುವ ಹಲವು ಜನ ಬೇರೊಂದು ದೇಶದಲ್ಲಿ ನಿಯಮಾವಳಿ ಪಾಲಿಸುವುದನ್ನೇಕೆ ಕಲಿಯುವುದಿಲ್ಲ ಎಂಬುದೇ ಪ್ರಶ್ನೆ. ಬೇಕಿದ್ದಾಗ ಜಾಗ ಬಿಡಿ ಎಂಬುದೇ ಕಳಕಳಿಯ ಪ್ರಾರ್ಥನೆ.

Give space whenever necessary

ಬಹಳ ಹಿಂದೆ ಸರಕಾರದ 'ಕುಟುಂಬ ಯೋಜನೆಯ' ಅಡಿಯಲ್ಲಿ ಒಂದು ಕರೆ ಇತ್ತು "ಎರಡು ಮಕ್ಕಳ ನಡುವೆ ಅಂತರವಿರಲಿ" ಅಂತ. ಮಕ್ಕಳ ಪಾಲನೆ ಮತ್ತು ಪೋಷಣೆಗೆ ಅನುಕೂಲವಿರಲಿ ಎಂಬದೇ ಈ ಸದುದ್ದೇಶದ ಕರೆ.

ಎರಡು ಮಕ್ಕಳ ನಡುವೆ ಅಂತವಿರಲಿ ಎಂಬ ಸ್ಲೋಗನ್ ಹಳತು ಎಂದಾದರೆ 2009'ರ ಜನವರಿ ತಿಂಗಳಲ್ಲಿ ಅಮೇರಿಕಾದಲ್ಲಿ ನಾಡ್ಯ ಸುಲೇಮಾನ್ ಎಂಬ ಮಹಾತಾಯಿ ಒಮ್ಮೆಗೆ ಎಂಟು ಮಕ್ಕಳಿಗೆ ಜನ್ಮ ನೀಡಿದಳು. ಆಕೆ ಅಷ್ಟೊಂದು ಹೆತ್ತಳು ಅನ್ನೋದು ನನ್ನ ಮಾತಲ್ಲಾ, ಆದರೆ ಪಾಪ ಅಷ್ಟೂ ಮಕ್ಕಳು ಒಳಗೆ ಜಾಗವೇ ಇಲ್ಲದೇ ಎಷ್ಟು ಒದ್ದಾಡಿದ್ವೋ ಅಂತ...

ಅಸಂಖ್ಯಾತ ಓದುಗರ ಆಗ್ರಹದ ಮೇರೆಗೆ, ಬೆಂಗಳೂರು ಭಾಗ 2 ಅಸಂಖ್ಯಾತ ಓದುಗರ ಆಗ್ರಹದ ಮೇರೆಗೆ, ಬೆಂಗಳೂರು ಭಾಗ 2

ಮಹಾಭಾರತದ ಕಥೆಯಲ್ಲಿ ದುರ್ಯೋಧನನ್ನು ಪಾಂಡವರು ಕೇವಲ ಐದು ಗ್ರಾಮಗಳ ಜಾಗ ಕೇಳಿದ್ದು, ಕೊಟ್ಟಿದ್ದರೆ ಅಷ್ಟೆಲ್ಲಾ ಗಲಾಟೆಯೇ ಆಗುತ್ತಿರಲಿಲ್ಲ. ಜಾಗ ಕೇಳಿದಾಗ ಕೊಡುವುದು ಒಳ್ಳೆಯದು . . . ಆದರೆ ಗುರು ಶುಕ್ರಾಚಾರ್ಯರ ಪ್ರಕಾರ ಜಾಗ ಕೇಳಿದ ಕೂಡಲೇ ಕೊಟ್ಟಿದ್ದಕ್ಕೇ ಇಂದೂ ಬಲಿ ಚಕ್ರವರ್ತಿ ಪಾತಾಳದಲ್ಲೇ ಇರೋದು ಇಲ್ಲದೇ ಇದ್ದಿದ್ರೆ ಸ್ವರ್ಗಲೋಕದಲ್ಲಿ ಇಂದ್ರ ಪದವಿ ದೊರಕಿ ಆರಾಮವಾಗಿ ಇರಬಹುದಿತ್ತು. ಈಗ ಜಾಗ ಕೊಡಬೇಕೋ ಬೇಡವೋ ಅನ್ನೋದು ದೊಡ್ಡ ಗೊಂದಲ ಅಲ್ವೇ?

Give space whenever necessary

ಕೆಲವು ಸನ್ನಿವೇಶದಲ್ಲಿ ಜಾಗ ಬಿಡಿ ಅಂತ ಕೇಳೋದ್ಯಾಕೆ? ಒಂದು lift ಸನ್ನಿವೇಶ ತೆಗೆದುಕೊಳ್ಳಿ. ಪುಟ್ಟ liftನಲ್ಲಿ ನಾಲ್ಕಾರು ಧಡೂತಿ ದೇಹಗಳ ಮಧ್ಯೆ ಸಿಕ್ಕಿಹಾಕಿಕೊಂಡು ನಾವಿಳಿಯುವ floor ಬಂದಾಗ 'ಅಯ್ಯೋ ಜಾಗ ಬಿಡ್ರಪ್ಪಾ ಬಿಡ್ರಮ್ಮಾ' ಅನ್ನೋ ಹಾಗೆ ಆಗುತ್ತೆ ಎನಿಸಿದರೆ ದುಬೈ airportನಲ್ಲಿ elevator ನೋಡಬೇಕು. ಆರಾಮವಾಗಿ ನಾಲ್ಕು ಹಸುಗಳನ್ನು ನಿಲ್ಲಿಸಬಹುದು. ಸುಮ್ಮನೆ ಒಳಗೆ ಹೋಗಿ ನಿಂತರೆ ತಂತಾನೇ ಬಾಗಿಲು ಬಡಿದುಕೊಳ್ಳುತ್ತೆ, ಕುಡಿದ ನೀರು ಅಲ್ಲಾಡದಂತೆ smooth ಆಗಿ ಹೋಗಬೇಕಾದ floorಗೆ ಕರೆದುಕೊಂಡು ಸಾಗುತ್ತೆ. ಜಾಗ ಅಂದ್ರೆ ಅದು. ಮನೆ ಕಟ್ಟಿ, ಮೇಲಿನ floorಗೆ ಹಸುವನ್ನು ಕರೆದುಕೊಂಡು ಹೋಗಬೇಕು ಅಂತಾದರೆ ಇಂಥಾ elevator ಇರಬೇಕು ನೋಡಿ.

ಬಹುಶ: ಸಾರಿಗೆ ವಾಹನಗಳಲ್ಲಿ ಇಂದಿಗೂ ಇಷ್ಟೇ ರಷ್ ಇರುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಕೆಲವೊಮ್ಮೆ ನಮ್ಮ stopನಲ್ಲಿ ಇಳಿಯಲೂ ಜಾಗ ಕೊಡದೇ ಅಡ್ಡ ನಿಂತಿರ್ತಾರೆ ಮಂದಿ, ಮುಖ್ಯವಾಗಿ footboard ಪಯಣಿಗರು. ಹಾಳಾಗಿ ಹೋಗಲಿ ಅಂತ ಮುಂದಿನ ಸ್ಟಾಪ್'ನಲ್ಲಿ ಇಳಿದಾಗ, ಆಗಲೇ ticket check ಮಾಡುವ ಮಂದಿ ಬರಬೇಕೇ? ಇಂಥಾ ಸಂಕಷ್ಟಗಳನ್ನು ನೋಡಿದ್ದೇನೆ. ಒಮ್ಮೆ ಹೀಗೆ ಆಯ್ತು... ಬಸ್ ತುಂಬಾ ಜನ. ಹೊರಡುವ ವೇಳೆಯಾದಾಗ ಮುಂಬಾಗಿಲಿನಿಂದ ಒಬ್ಬಾತ ಬಂದ. ಅಲ್ಲಿದ್ದ ಜನ ಒಂದಿಂಚೂ ಕದಲಲಿಲ್ಲ. ಹಿಂದುಗಡೆ ಬಾಗಿಲಿಂದ ಬಾರಯ್ಯಾ ಇಲ್ಯಾಕೆ ಬರ್ತಿದ್ದೀ ಅಂದರು ಮಹಿಳಾಮಣಿಗಳು. ಅವನು "ತಾಯೇ, ನಾನೇ ಡ್ರೈವರ್! ಜಾಗ ಬಿಡು ಇಲ್ಲಾ ಅಂದ್ರೆ ಇಲ್ಲೀ ನಿಂತಿರ್ತೀಯಾ" ಅಂದ. ಖಾಕಿ ಪ್ಯಾಂಟ್ ಹಾಕಿದ್ದ ಸರಿ ಆದರೆ ಷರಟು ಬೇರೆ ಯಾವುದೋ ಧರಿಸಿದ್ದ. ಜಾಗ ಬಿಡುವಾಗ ಬಿಡಿ ಅಂತ ಇದಕ್ಕೇ ಹೇಳಿದ್ದು.

Give space whenever necessary

ಎಲ್ಲೆಂದರಲ್ಲಿ buildingಗಳು ತಲೆ ಎತ್ತಿವೆ ಹಾಗಾಗಿ ಮಕ್ಕಳಿಗೆ ಆಡಲೂ ಜಾಗವಿಲ್ಲ ಎಂಬ ಗೋಳು, ಮುಖ್ಯ ರಸ್ತೆಯ footpath ಮೇಲೂ ವ್ಯಾಪಾರಿಗಳು ಕೂರುವುದರಿಂದ ಓಡಾಡಲೂ ಜಾಗವಿಲ್ಲ ಎಂಬ ಅಳಲು, ಮನೆಯ ಮುಂದೆ ಮತ್ಯಾವನೋ ಕಾರು ನಿಲ್ಲಿಸಿದ್ದಾನೆ ನಮ್ಮ ಕಾರು ನಿಲ್ಲಿಸಲೇ ಜಾಗವಿಲ್ಲ ಎಂಬ ಗೊಣಗಾಟ, ಮಾಲ್'ಗಳಲ್ಲಿ ಕಾರು ನಿಲ್ಲಿಸಲು ಜಾಗವಿಲ್ಲ, ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಯನ್ನೇ ಅಗೆದು ಏನೋ ಕಾಮಗಾರಿ ಕೆಲಸ ಮಾಡುತ್ತಿರೋದ್ರಿಂದ ಗಾಡಿ ಬಿಟ್ಹಾಕಿ ನಡೆಯೋದಕ್ಕೂ ಜಾಗವಿಲ್ಲ ಎಂಬ ಆಕ್ರೋಶ, ಮನೆ ಚಿಕ್ಕದಾಯ್ತು ಸಾಮಾನು ಇಡಲೇ ಜಾಗವಿಲ್ಲ ಇತ್ಯಾದಿ 'ಜಾಗವಿಲ್ಲ' ಎಂಬ ಸನ್ನಿವೇಶಗಳನ್ನು ನಾವು ದಿನನಿತ್ಯದಲ್ಲಿ ನೋಡುತ್ತೇವೆ. ಇನ್ನೂ ಇಂಥಾ 'ಜಾಗವಿಲ್ಲ' ಅನ್ನೋ ಸನ್ನಿವೇಶಗಳು ಬೇಕಾದಷ್ಟಿವೆ.

ನಾನೂ ಮತ್ತು ಬೆಂಗಳೂರಿನಲ್ಲಿ ನನ್ನ ಪರವಾಸ! ನಾನೂ ಮತ್ತು ಬೆಂಗಳೂರಿನಲ್ಲಿ ನನ್ನ ಪರವಾಸ!

ಎಂಥಾ ಬ್ಯುಸಿ ರಸ್ತೆ ಇದ್ದರೂ ಯಾರೋ ಮಹನೀಯರು ಬರುತ್ತಾರೆ ಎಂದಾಗ ಜಾಗ ತಂತಾನೇ ಏರ್ಪಾಡು ಆಗುತ್ತೆ. ಹೊಟ್ಟೆಯು ಸಿಕ್ಕಾಪಟ್ಟೆ ತುಂಬಿದ್ದರೂ ನಿಮಗೆ ಇಷ್ಟವಾದ ಸಿಹಿ ತಿನ್ನುವಾಗ ಆ ಹೊಟ್ಟೆ ತಂತಾನೇ ಹಿಗ್ಗಲಿಸಿಕೊಳ್ಳುವಂತೆ, ನದಿ ಹರಿಯುತ್ತಿದ್ದರೂ ವಾಸುದೇವನನ್ನು ಹೊತ್ತು ವಸುದೇವ ಬಂದಾಗ ತಂತಾನೇ ಆ ನದಿಯು ಜಾಗ ಬಿಡುವಂತೆ, ನಾವೂ ರಸ್ತೆಯಲ್ಲಿ ಸಾಗುವಾಗ ರಸ್ತೆಯಲ್ಲಿರುವ ಜನ, ವಾಹನಗಳು ತಂತಾನೇ ಸರಿದು ನಮಗೆ ಹೋಗಲು ಅವಕಾಶ ನೀಡಬಾರದೇ ಅಂತ ನಿಮಗೂ ಅನ್ನಿಸಿದ್ರೆ ನನಗಂತೂ ಆಶ್ಚರ್ಯವಾಗೋದಿಲ್ಲ.

ಒಮ್ಮೆ flightನಲ್ಲಿ ಯಾವುದೋ ಒಂದು ಏರ್ಪೋರ್ಟ್'ಗೆ ಬಂದೆವು. ದೂರದಲ್ಲೇ flight ನಿಂತಿತು ಹಾಗಾಗಿ ಕೆಳಗೆ ಇಳಿಯಲು ಅನುಮತಿ ಸಿಗಲೇ ಇಲ್ಲ. ಒಂದು ಘಂಟೆಯ ಕಾಲ ನಿಂತಲ್ಲೇ ನಿಂತು ಆಮೇಲೆ ಮುಂದೆ ಸಾಗಿ ಪಾರ್ಕ್ ಮಾಡಿದ ಮೇಲೆ ಎಲ್ಲರೂ ಇಳಿದೆವು. ಆಮೇಲೆ ಅರ್ಥವಾಗಿದ್ದು ಪಾರ್ಕ್ ಮಾಡಲು 'ಜಾಗವಿಲ್ಲ' ಎಂದೇ ನಾವು ಕಾಯಬೇಕಿತ್ತು ಅಂತ. ಒಂದು ಕಾರು ನಿಲ್ಲಿಸಲು ಜಾಗವಿಲ್ಲದೇ ಒದ್ದಾಡುವುದನ್ನು ಕೇಳಿದ್ದೇವೆ ಆದರೆ ವಿಮಾನಕ್ಕೂ ಈ ತೊಂದರೆ ತಪ್ಪಿದ್ದಲ್ಲಾ!

ಜಾಗ ಎಂದರೆ space ಅಂತಾನೂ ಅರ್ಥವಿದೆ. computer ಕೀಬೋರ್ಡ್ ಮೇಲೆ ಉದ್ದನೆಯ spacebar ಇರುತ್ತದೆ ಆದರೂ ಎರಡು ಪದಗಳ ನಡುವೆ space ಕೊಡಿ ಎಂದಾಗ ಜಾಗವೀಯದೆ, space ಬೇಡ್ರಪ್ಪಾ ಎಂದಾಗ ಕೊಡುವ ಮಂದಿ ಹೆಚ್ಚಾಗಿದ್ದಾರೆ. ಮೂಲ ಲೇಖಕರು ಒಂದು ರೀತಿ ಬರೆದಿದ್ದನ್ನು ಮತ್ತೊಬ್ಬರು ಅದನ್ನೇ ಬರೆದು ಹಾಕಿದಾಗ ಎಚ್ಚರಿಕೆ ವಹಿಸಬೇಕು. "ಅಕ್ಷಿನಿಮೀಲನ" ಎಂಬ ಪದ ನಾನೆಂದುಕೊಂಡಂತೆ "ಅಕ್ಷಿ ನಿಮೀಲನ" ಇರಬೇಕು. ಕಣ್ಣಿನ ರೆಪ್ಪೆಯನ್ನು ಬಡಿಯದವರು ಅಂತ. ಏನಂತೀರಿ? ಹದ್ದುಬಸ್ತು ಎಂದರೆ control ಅಂತ ಅಲ್ಲವೇ? ಅದನ್ನು 'ಹದ್ದು ಬಸ್ತು' ಅಂತ ಬರೆಯಲಾಗದು. ಇದರಂತೆಯೇ 'ಹದ್ದುಮೀರು' ಎಂಬ ಪದ ಕೂಡ. ಇದನ್ನೂ 'ಹದ್ದು ಮೀರು' ಅಂತ ಬರೆಯಲಾಗದು.

'ಅಮ್ಮನಿಲ್ಲದೇ ಇರುವುದು ಹೇಗೆ?' ಎಂಬುವ ಪ್ರಶ್ನೆಯನ್ನು 'ಅಮ್ಮ ನಿಲ್ಲದೇ ಇರುವುದು ಹೇಗೆ?' ಅಂತ ಬರೆದರೆ ಆ ವಾಕ್ಯದ ಗಂಭೀರತೆ ನಾಶವಾಗುತ್ತದೆ. ಹಾಗೆಯೇ ಒಂದೆರಡು ಪದಗಳನ್ನು ಒಟ್ಟಾಗಿ ಸೇರಿಸಿ ಬರೆದಾಗ ವ್ಯಾಕರಣ ತಪ್ಪಾಗಬಹುದು ಅದರ ಬದಲಿಗೆ ಜಾಗ ಕೊಟ್ಟರೆ ಓದಲಿಕ್ಕೂ ಸಲೀಸು. 'ಶಕ್ತ್ಯಾನುಸಾರ' ಅಂತ ಹೇಳಬಹುದು ಅಥವಾ 'ಶಕ್ತಿಯ ಅನುಸಾರ' ಅನ್ನಿ ಆದರೆ ಶಕ್ತೋನುಸಾರ ಅಂದಾಗ ಅದು ತಪ್ಪು.

ಬೇಕೆಂದಾಗ ಜಾಗ ಬಿಡಿ. ಪದಗಳಿಗೆ ಜೀವ ಇದೆ. ಪದಗಳಿಗೆ ಉಸಿರೂ ಇದೆ. ಅವು ಉಸಿರಾಡಲಿ. ಉಸಿರುಗಟ್ಟಿಸಬೇಡಿ. ಎರಡು ಮನೆಗಳ ಮಧ್ಯೆ ಜಾಗವಿರಲಿ, ಆದರೆ ಎರಡು ಮನಗಳ ನಡುವೆ ಜಾಗ (ಕಂದಕ) ಬೇಡ. ಬೇಡದೇ ಇರುವ ಕಡೆ ಜಾಗ ಬಿಡಬೇಡಿ.

English summary
Give space whenever necessary and don't give whenever it is not necessary at all. In many occasions we face several situations like this. Srinath Bhalle from Richmond puts this theory in a humorous way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X