ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಚಿಗುರು ಹಳೆಬೇರಿನಲ್ಲಿ ನವಚೈತನ್ಯ ಮೂಡಿಸಲಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಯುಗಾದಿ ಹಬ್ಬ ಬಂತೆಂದರೆ ಎಲ್ಲೆಡೆ ಹೊಸತನ... ಎಲ್ಲೆಡೆ ನವನವೀನ ಭಾವನ... ಬೇಂದ್ರೆ ಅಜ್ಜರ "ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ . . . " ಹಾಡು ಕಿವಿಗೆ ಬೀಳುತ್ತಲೇ ಹೊಸ ಹುರುಪು ಮೂಡುವುದು ಸಹಜ. ಈ ಹಾಡಿನಲ್ಲಿ ಒಂದು ಸಾಲಿನ ವಿಶೇಷತೆ ಕಾಡುತ್ತದೆ "ವರುಷಕೊಂದು ಹೊಸತು ಜನ್ಮ . . . " .. ಚಿಗುರು ಮೂಡಿ, ಎಲೆ ಚಿಗುರಿ ತಾ ನಳನಳಿಸಿ, ನಂತರ ವಯಸ್ಸಾಗಿ ಬಣ್ಣ ಬದಲಿಸಿಕೊಂಡು ಉದುರಿ ಹೋದರೂ, ಮರವು ತಾನು ಮಾತ್ರ ಪ್ರಕೃತಿ ನಿಯಮಕ್ಕೆ ತಲೆಬಾಗಿಸಿ ಬೇರುಬಿಡುವುದರಲ್ಲೇ ತಲ್ಲೀನವಾಗಿರುತ್ತದೆ. ಅರ್ಥಾತ್ ತನ್ನವರು ದೂರಾದರೆಂದು ತಾ ಅಲುಗಿ ಶಕ್ತಿ ಉಡುಗಿಸಿಕೊಳ್ಳದೆ ನಿಂತಲ್ಲೇ ಮುಂದುವರೆಯುತ್ತದೆ ಎಂಬ ತತ್ವ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಯುಗ ಯುಗಾದಿಗೆ ಹೊಸತು ಹೊಸತು ಕಾಣ್ವ ಮರವೆಲ್ಲಿ? ವರ್ಷಾನು ವರ್ಷ ಹಿಂದಿನ ಸಂಕಟಗಳನ್ನು ಹೊಸೆತು ಹೊಸೆತುಕೊಂಡೇ ಉರುಳುವ ಮನುಜನೆಲ್ಲಿ? ಬಿಡಿಬಿಡಿಯಾಗಿರುವ ಹತ್ತಿಯನ್ನು ಹೊಸೆತಾಗ ಬತ್ತಿಯಾಗಿ ನಿಲ್ಲುತ್ತೆ. ಬಿಡಿ ಬಿಡಿ ಸಂಕಟಗಳನ್ನು ಹೊಸೆತುಕೊಂಡು ಸಾಗುವ ಮನುಷ್ಯ ಬತ್ತಿಕೊಂಡು ಬಾಳುತ್ತಾ ಬಳಲುತ್ತಾನೆ.

ಬೇವು-ಬೆಲ್ಲದ ಯುಗಾದಿ: ಆಚರಣೆ ಭಿನ್ನ... ಸಂಭ್ರಮ ಎಲ್ಲೆಲ್ಲೂ ಒಂದೇ! ಬೇವು-ಬೆಲ್ಲದ ಯುಗಾದಿ: ಆಚರಣೆ ಭಿನ್ನ... ಸಂಭ್ರಮ ಎಲ್ಲೆಲ್ಲೂ ಒಂದೇ!

ಬೆಂಗಳೂರಿನಿಂದ ಅಮೇರಿಕಕ್ಕೆ ಬಂದಾಗಿನ ದಿನಗಳ ಮಾತು. ಹಲವಾರು ವರುಷಗಳ ಕಾಲ ಅತೀ ಸಮೀಪದಲ್ಲೇ ವಿಮಾನಗಳನ್ನು ಕಾಣುತ್ತಾ ಬೆಳೆದಿದ್ದರೂ, ವಿಮಾನ ಹತ್ತಿದ ಅನುಭವ ಇರಲಿಲ್ಲ. ಏರ್ಪೋರ್ಟ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಮೊದಲ ಬಾರಿ ವಿಮಾನ ಹತ್ತಲು ಹೋದವಗೆ ಅವೆಲ್ಲವೂ ಹೊಸತು. ಮನೆಮಂದಿಯೊಡನೆಯೇ ಇದ್ದು ಅನುಭವವಾಗಿದ್ದ ನನಗೆ ಮನೆಯಿಂದ ಹೊರಗೆ ಕಾಲಿಟ್ಟಿದ್ದೇ ವಿದೇಶಕ್ಕೆ ಚಿಮ್ಮಲು. ಎಲ್ಲವೂ ಹೊಸತು.

Every new thing is thrilling

ಜೀವನದಲ್ಲಿ ಯಾವುದೇ ಅನುಭವವು ಹೊಸತು ಅಂತಂದಾಗ ಅಲ್ಲಿ ಹಲವು ವಿಚಾರಗಳು ಒಟ್ಟಾಗಿ ಸಾಗುತ್ತದೆ. ಮೊದಲಿಗೆ, ಒಂದು ಪುಳಕ ಮತ್ತೊಂದು ಪುಕಪುಕ. ಹೊಸತು ಎಂಬ ಥ್ರಿಲ್ ಒಂದು ಕಡೆಯಾದರೆ, ಏನೋ ಹೇಗೋ ಎಂಬ ಭಯವೂ ಇನ್ನೊಂದು ಕಡೆ ಇದ್ದೇ ಇರುತ್ತದೆ.

ನಮ್ಮದೇ ದೇಶ ಅಂತ ತೆಗೆದುಕೊಂಡರೂ ಮತ್ತೊಂದು ಊರು ಅಥವಾ ರಾಜ್ಯದಿಂದ ವರ್ಗಾವಣೆಯಾಗಿ ಬಂದವರಿಗೂ ಈ ಅನುಭವ ಆಗಿರುತ್ತದೆ. ಹೊಸ ಜಾಗ, ಹೊಸ ನೋಟ, ಹೊಸ ಜನ ಎಂಬ ಹೊಸತುಗಳ ನಡುವೆ ಅಲ್ಲಿನ ಜನರ ನಡುವೆ ದೈನಂದಿನ ಬದುಕು ಹೇಗೋ ಏನೋ ಎಂಬ ಆತಂಕ ಕೂಡ ಇರುತ್ತದೆ. ಮಕ್ಕಳ ವಿಷಯದಲ್ಲಿ ತೆಗೆದುಕೊಂಡರೂ ಇದೇನೂ ಭಿನ್ನವಲ್ಲ. ಒಂದು ಹೊಸ ಶಾಲೆಯಾಗಬಹುದು, ಒಂದು ಹೊಸ ತರಗತಿಯ ಲೆವೆಲ್, ಮೊದಲ ಹೈಸ್ಕೂಲು ದಿನ, ಮೊದಲ ದಿನದ ಕಾಲೇಜು ವಾತಾವರಣವೇ ಆದಲ್ಲಿ ಆ 'ಹೊಸತನದ' ಪುಳಕ ಮತ್ತು ಭಯ ನಾವೆಲ್ಲರೂ ಅನುಭವಿಸಿಯೇ ಇದ್ದೇವೆ. ನಮ್ಮದೇ ಶಾಲೆ ಆಗಿದ್ದು ನಮ್ಮದೇ ತರಗತಿ ಆಗಿದ್ದೂ ಕೂಡ ಒಬ್ಬ ಹೊಸ ಟೀಚರ್ ಬಂದಾಗಲೂ ಈ ಅನುಭವ ಆಗಿರೋದು ಉಂಟು.

ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ? ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ?

ಹೊಸತಾಗಿ ಒಂದು ಕಂಪನಿಗೆ ಕೆಲಸಕ್ಕೆ ಸೇರಿದಾಗಿನ ಮೊದಲ ದಿನವೂ ಇದಕ್ಕೆ ಹೊರತಲ್ಲ. ಯಾರು ಯಾರಿಗೆ ಯಾವ ರೀತಿ ego ಇದೆಯೋ ಯಾರಿಗೆ ಗೊತ್ತು? ಕೆಲವರು ಮುಖಕ್ಕೆ ಹೊಡೆದಂತೆ ಹೇಳಬಹುದು "ನೀನು ನಿನ್ನ ಹಳೆಯ ಕಂಪನಿ'ಯಲ್ಲಿ ಏನು ಸಾಧಿಸಿದ್ದೆಯೋ ಅದು ಬೇರೆ ವಿಷಯ. ಅಲ್ಲಿದ್ದಿರಬಹುದು ನಿನ್ನದೇ ಹವಾ ಆದರೆ ಇಲ್ಲಿ ನನ್ನದೇ ಹವಾ" ಅಂತ. ಎಷ್ಟೇ ಅನುಭವಿಗಳಾದರೂ ಕೊಂಚ ಭೀತಿ ಅಂಬೋದು ಇರುತ್ತದೆ. ಇನ್ನು ಪುಳಕದ ವಿಷಯಕ್ಕೆ ಬಂದರಂತೂ ಅದು ಬೇರೆಯೇ ಮಾತು. ತಾವು ಹಿಂದೆ ಇದ್ದ ಕಂಪನಿ'ಯಲ್ಲಿ ಅತೀ ಶಿಸ್ತಾದ ವಾತಾವರಣ ಇದ್ದು ಹೊಸ ಕಂಪನಿ'ಯಲ್ಲಿ ಕೊಂಚ ವಾತಾವರಣ ಭಿನ್ನವಾಗಿದೆ ಎಂದು ಅರಿತ ಕೂಡಲೇ leash ಕಳಚಿಕೊಂಡ ಶ್ವಾನದಂತೆ ಹುಚ್ಚೆದ್ದು ಕುಣಿದು ಕೆಲಸ ಕಳೆದುಕೊಂಡವರೂ ಇದ್ದಾರೆ. ಹೊಸತರ ಬಗ್ಗೆ ಆಸಕ್ತಿ ಇರಲಿ, ಆದರೆ ಎಚ್ಚರಿಕೆಯೂ ಇರಲಿ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಕಣ್ಣಿನ ದೋಷ ಅಂತಾಗಿ ವೈದ್ಯರ ಬಳಿಗೆ ಹೋಗಿ ಬಂದು ಒಂದೆರಡು ದಿನಗಳಲ್ಲಿ ಮುಖಕ್ಕೆ ಕನ್ನಡಕ ಬಂದ ದಿನಗಳು ನೆನಪಿದೆಯೇ? ಅದೇನೋ ಪುಳಕ. ಅದೇನೋ ಸಂಕೋಚ ಜೊತೆಗೆ ಭೀತಿ ಕೂಡ. ತಾನು ಬಿದ್ದು ಕನ್ನಡಕ ಒಡೆದು ಕಣ್ಣಿನೊಳಗೆ ಗಾಜು ಸೇರಿಕೊಂಡು ಬಿಟ್ಟರೆ? ಹಾಗಾದಾಗ ರಭಸವಾಗಿ ನಡೆಯಲೂ ಭಯ. ಮುಖದ ಮೇಲೆ ಏನೋ ಅಡ್ಡಡ್ಡ ಬಂದ ಹಾಗೆ ಅನುಭವ. ಹೊರಗಿನವರು ಯಾರೋ ಬಂದ ಕೂಡಲೇ ಕನ್ನಡಕ ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳೋದು ಅಂತೆಲ್ಲಾ ಅನುಭವಗಳು. ನನಗೋ ಕಾಲೇಜು ದಿನದಲ್ಲಿ ಕನ್ನಡಕ ಬಂದಿದ್ದು. ಕಾಲೇಜಿನ ಸಹಪಾಠಿಗಳಾದ ಹೆಂಗಳನ್ನು ಕಂಡರೆ ಭಯ ಮತ್ತು ಸಂಕೋಚ ಎರಡೂ ಒಟ್ಟಿಗೆ. ಇಷ್ಟೇ ಸಾಲದು ಅಂತ, ಮೊದಲ ವರ್ಷ ಮುಗಿದು ಎರಡನೆಯ ವರ್ಷಕ್ಕೆ ಕಾಲಿಟ್ಟಾಗ ಹೊಸ ಕನ್ನಡ ಬೇರೆ. ಕಿಸಕ್ ಅಂತ ನಕ್ಕ ಹೆಣ್ಣುಗಳು ನನ್ನನ್ನೇ ನೋಡಿ ನಗುತ್ತಿದ್ದಾರೆ ಅನ್ನೋ ಭಾವನೆ. ಹಾಗಂತ ಕನ್ನಡಕ ಪಕ್ಕಕ್ಕೆ ಇಟ್ಟರೆ, ಬೋರ್ಡ್ ಮೇಲೆ ಬರೆದಿರುವುದೇ ಕಾಣೋಲ್ಲ. ಹೊಸತನದೊಂದಿಗೆ ಬರುವ ಬಳುವಳಿಗಳು ಅನೇಕ.

Every new thing is thrilling

ಹೊಸತಾಗಿ ಮುಖ ಸೇರಿದ ಒಂದು ಕನ್ನಡಕದ ವಿಷಯ ಹೀಗಾದರೆ, ಮನೆ ಸೇರುವ ಹೊಸ ಜೀವದ ಬಗ್ಗೆ ಒಮ್ಮೆ ಯೋಚಿಸಿ. ಅತ್ತಿಗೆ, ನಾದಿನಿ ಅಥವಾ ನಿಮ್ಮ ಪತ್ನಿಯೇ ಆಗಿರಲಿ, ನಿಮ್ಮದೇ ಮನೆಗಳಲ್ಲಿ ಮದುವೆಯಾಗಿ ಹೊಸತಾಗಿ ಬಂದವರು ಮನೆ ಸೇರಿದಾಗ ಹೇಗಿತ್ತು ಎಂದು ನೆನಪು ಮಾಡಿಕೊಳ್ಳಿ.

ಯಾರದ್ದೋ ಮನೆಗೆಯಲ್ಲಿ ಒಂದು ರಾತ್ರಿ ತಂಗುವಾಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಾಗ ನಮಗಾಗುವ ಕಿರಿಕಿರಿ ಇತ್ಯಾದಿಗಳನ್ನು ಕಂಡಾಗ ನನಗೆ ಎಷ್ಟೋ ಸಾರಿ ಈ ಹೆಂಗಳ ಬಗ್ಗೆ ಭಾರಿ ಗೌರವ ಮೂಡುತ್ತದೆ. ಅವರವರ ಮನೆಗಳಲ್ಲಿ ತಕ್ಕ ಮಟ್ಟಿಗೆ ಸ್ವೇಚ್ಛೆಯಿಂದ ಬೆಳೆದು ಒಂದು ದಿನ ಧಿಡೀರೆಂದು ಇನ್ನೊಬ್ಬರ ಮನೆಗೆ ಎಂಟ್ರಿ ಕೊಟ್ಟು ಅದನ್ನೇ ತಮ್ಮ ಮನೆಯನ್ನಾಗಿಸಿಕೊಂಡು ಯಶಸ್ವಿಯಾಗುವರಲ್ಲಾ, ಹೇಗೆ ಸಾಧಿಸುತ್ತಾರೋ ಅಂತ ಹೆಮ್ಮೆಯಾಗುತ್ತದೆ!

ಹೊಸ ವರುಷದ ಸಂಭ್ರಮ ಹೊತ್ತು ತಂದ ಯುಗಾದಿ ಹೊಸ ವರುಷದ ಸಂಭ್ರಮ ಹೊತ್ತು ತಂದ ಯುಗಾದಿ

ಮುಖಕ್ಕೆ ಕನ್ನಡಕ ಹೊಸತಾಗಿರುವಂತೆ, ಕಣ್ಣೊಳಗಿನ ಲೆನ್ಸ್ ಇದ್ದಂತೆ ಮನೆಗೆ ಬಂದವರೂ ಮೊದ ಮೊದಲು ಹೊಸಬರಾಗಿಯೇ ಇರುತ್ತಾರೆ. ಆಮೇಲೆ ಅಭ್ಯಾಸವಾದಂತೆ ಅವರೂ ನಮ್ಮ ಅವಿಭಾಜ್ಯ ಅಂಗವಾಗುತ್ತಾರೆ. ಎಷ್ಟರ ಮಟ್ಟಿಗೆ ಒಬ್ಬರನ್ನು ನಾವು ಗೌರವಿಸುತ್ತೇವೆಯೋ ಅಷ್ಟು ಬೇಗ ಅವರು ನಮ್ಮೊಂದಿಗೆ ಬೆರೆಯುತ್ತಾರೆ. ಒಂದು ಮಾತು ನೆನಪಿರಬೇಕು, ನಮಗೆ ಅವರು ಹೊಸಬರು ನಿಜ, ಆದರೆ ಅವರಿಗೆ ನಾವು ಕೂಡ ಹೊಸಬರೇ ಅಲ್ಲವೇ?

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಹೊಸ ಜೀವನ, ಹೊಸ ವಾತಾವರಣ, ಹೊಸ ಜನರ ನಡುವೆ ಹೊಸಬರಲ್ಲದಂತೆ ಒಂದಾಗಿ ಹೊಸೆತು ಬದುಕು ನಡೆಸುವ ಪರಿಯೇ ಸೋಜಿಗ ಮೂಡಿಸುತ್ತದೆ. ಈ ಸೋಜಿಗ ಯಾವಾಗ ನನಗೆ ಮೂಡುತ್ತದೆ ಎಂದರೆ, ಒಂದು highway ನಲ್ಲಿ ಕಾರು ಓಡಿಸುತ್ತಾ ಸಾಗುವಾಗ exit ತೆಗೆದುಕೊಂಡು ಮತ್ತೊಂದು ರಾಜಬೀದಿಗೆ ಸೇರಿಕೊಂಡು ಅವರಲ್ಲಿ ಒಂದಾಗಿ ಬೆರೆತು ಸಾಗುವಾಗ ಇಂಥಾ ಆಲೋಚನೆ ಬರುತ್ತದೆ. ಮೊದಲ ರಾಜಬೀದಿ ಹುಟ್ಟಿದ ಮನೆಯಾದರೆ ಎಕ್ಸಿಟ್ ತೆಗೆದುಕೊಂಡು ಸೇರಿದ ಬೀದಿಯು ಕಾಲಿಟ್ಟ ಅತ್ತೆಯ ಮನೆಯಂತೆ ಇರಬಹುದು. ಅದರೊಂದಿಗೆ ಕೂಡಿಕೊಂಡು ಸಾಗುವ ಪರಿಗೂ ಜೀವನಕ್ಕೂ ಏನೇನೋ ವ್ಯತ್ಯಾಸವಿಲ್ಲ ಅನ್ನಿಸುತ್ತದೆಯೇ ನಿಮಗೂ?

ಮುಕುಟಪ್ರಾಯವಾದ ಹೊಸತು ಎಂದರೆ ಯಾವುದು ಗೊತ್ತೇ? ಜಗತ್ತಿಗೆ ಹೊಸತಾಗಿ ಕಾಲಿಡುವ ಹೊಸ ಜೀವ. ತಾಯಿಯಿಂದ ಹಿಡಿದು ಎಲ್ಲರಲ್ಲೂ ಕುತೂಹಲ ಮೂಡಿಸುವ ಏನೂ ಅರಿಯದ ಹೊಸ ಜೀವ ಒಂದು ಸಂಸಾರದ ರೀತಿಗಳನ್ನು, timetable ಅನ್ನೇ ಬದಲಿಸುವಷ್ಟು ಶಕ್ತಿಯುತವಾದದ್ದು.

Every new thing is thrilling

ಹೊಸತು ಎಂದಾಗ ಪುಳಕ, ಭಯ ಇರುವಂತೆಯೇ ಕುತೂಹಲ, ನಿರೀಕ್ಷೆಗಳೂ ಇರುತ್ತದೆ. ಮಾರುಕಟ್ಟೆಗೆ ಒಂದು ಹೊಸ ವಸ್ತು ಬಂದಾಗ ಅದು ಏನು, ಹೇಗೆ ಎಂಬ ಕುತೂಹಲ ಹುಟ್ಟಿಸುತ್ತದೆ. ಈ ದಿನಗಳಲ್ಲಿ ಇದೊಂದು fashion ಆಗಿದೆ ಎನ್ನಬಹುದು. ಉದಾಹರಣೆಗೆ smartphone ಜಗತ್ತು. ಒಂದು ಹೊಸ ಮಾಡೆಲ್ ಬಿಡುಗಡೆ ಆಗುತ್ತಿದೆ ಎಂದರೆ ಅದಕ್ಕೆ ಒಂದು ಮಹಾಸಭೆ. ವಿಡಿಯೋ ಲೈವ್ ಕೊಟ್ಟು ಎಲ್ಲರೂ ಕುತೂಹಲದಿಂದ ಅದರ ಬಗ್ಗೆ ನಿರೀಕ್ಷೆ ಹುಟ್ಟಿಸಿಕೊಂಡು ಆ ದಿನಕ್ಕೆ ಕಾದು, ಪಾಲ್ಗೊಂಡು, ಆ ಹೊಸ ಮಾಡೆಲ್ ಮುಗಿಬಿದ್ದುಕೊಂಡುಕೊಳ್ಳುವಂತೆ ಮಾಡುವುದು.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ಹೊಸತು ಎಂಬುದನ್ನು ಜಗಜ್ಜಾಹೀರುಗೊಳಿಸುವ ವಿಚಾರ ಹೊಸತೇನೂ ಅಲ್ಲ ಆದರೆ ತಂತ್ರಗಳು ಹೊಸತು. ಮದುವೆ ಹೊಸತಲ್ಲ ಆದರೆ ವೈಭವೀಕರಣದಲ್ಲಿ ನವೀನತೆ ಇದೆ. ಸಿನಿಮಾ ಕಥೆಯಲ್ಲಿ ಹೊಸತೇನೂ ಇರೋದಿಲ್ಲ ಆದರೆ ಹೊಸಬರಿಂದ ಕೂಡಿದಾಗ ಅದರಲ್ಲಿ ಹೊಸತನ ಕಾಣುತ್ತದೆ. ಗಿಡಮರಗಳು ಹೊಸತಲ್ಲ ಆದರೆ ಹಳೆಬೇರಿನಲ್ಲಿ ಹೊಸ ಚಿಗುರು ನವಚೈತನ್ಯ ಮೂಡಿಸುತ್ತದೆ.

ಯುಗಾದಿಯೂ ಹೊಸತೇನಲ್ಲ. ನಮ್ಮ ನಮ್ಮ ವಯಸ್ಸಿಗೆ ತಕ್ಕಷ್ಟು ಯುಗಾದಿಗಳನ್ನು ನೋಡಿದ್ದೇವೆ. ಆದರೆ ನಿರೀಕ್ಷೆಗಳು ಪ್ರತೀ ಹಬ್ಬಕ್ಕೂ ಹೊಸತನ ಕೊಟ್ಟು ನಮಗೆ ನವಚೈತನ್ಯ ಮೂಡಿಸಿ ಪುಳಕ ಹುಟ್ಟಿಸುತ್ತದೆ. ಆಯ-ವ್ಯಯ ಎಂಬುದನ್ನು ಪಂಚಾಂಗ ಶ್ರವಣದಲ್ಲಿ ಅರಿತಾಗ ಭೀತಿಯೂ ಮೂಡುತ್ತದೆ.

ಎಲ್ಲ ಹೊಸತುಗಳಂತೆ ಮೂಡಲಿರುವ ಹೊಸ ವರುಷವು ನಿಮ್ಮ ಜೀವನದಲ್ಲಿ ಹೊಸಬೆಳಕು ಮೂಡಿಸಲಿ, ಹೊಸತಾಗಿ ಪುಳಕಿತರಾಗಿ. ಉದುರುವ ಎಲೆಗಳಂತೆ ಚಿಂತೆಗಳನ್ನು ಉದುರಿಸಿ ನವಚೈತನ್ಯವೆಂಬ ಚಿಗುರು ಮೂಡಿಸಿಕೊಳ್ಳಿ. ನಿರೀಕ್ಷೆಗಳು ಇರಲಿ, ಹುಸಿಗೊಳ್ಳದಂತೆ ನೋಡಿಕೊಳ್ಳುವುದಕ್ಕೆ ಪರಿಶ್ರಮಬೇಕು ಎಂಬುದನ್ನು ಮರೆಯದಿರಿ.

English summary
Every new thing is thrilling. First love, first job, first day in the school college, when baby comes to the world... Each one is new experience and teaches lot of lesson to face the world. Kannada column by Srinath Bhalle, Richmond.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X