ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ದಿನನಿತ್ಯದಲ್ಲಿ ಕೆಲವರು ನಮ್ಮ ಕಣ್ಣಿಗೆ ಕಾಣಿಸಿಕೊಳ್ಳುವ ಪರಿಯಲ್ಲಿ ಬದಲಾವಣೆಯೇ ಇರುವುದಿಲ್ಲ. ಅರ್ಥಾತ್ ಪ್ರತೀ ಬಾರಿ ಇವರನ್ನು ಕಂಡಾಗ ಅದೇ ಸ್ಟೈಲು. ಒಮ್ಮೊಮ್ಮೆ ಅನ್ನಿಸುತ್ತೆ, ಇವರ ಪ್ರತಿಮೆ ಮಾಡಿಸಿದರೆ ಯಾವ ಸ್ಟೈಲಿನಲ್ಲಿ ಇರಬೇಕು ಎಂಬುದರ ಬಗ್ಗೆ ಯಾವ ರೀತಿಯ ಚರ್ಚೆಗೂ ಆಸ್ಪದವೇ ಇರೋದಿಲ್ಲ. ಒಮ್ಮೆ ಓದಿ ನಂತರ ನಿಮಗೂ ನನಗಾಗಿರೋ ಅನುಭವವೇ ಆಗಿದೆಯಾ ಹೇಳಿ.

ನಾನು ಸ್ವಚ್ಛತೆ ಎಂದರೆ ದೇವರೆಂದು ನಂಬಿದ್ದೇನೆ, ನೀವು?ನಾನು ಸ್ವಚ್ಛತೆ ಎಂದರೆ ದೇವರೆಂದು ನಂಬಿದ್ದೇನೆ, ನೀವು?

ನಾನೊಂದು ಕಂಪನಿಗೆ ಸೇರಿದ ಮೊದಲ ದಿನ ಈತನ ಪರಿಚಯವಾಯ್ತು. ಯಾವುದೋ ಡಿಪಾರ್ಟ್ಮೆಂಟ್ ಉಸ್ತುವಾರಿ ನೋಡಿಕೊಳ್ಳುವ ಈತನನ್ನು ನನಗೆ ಪರಿಚಯ ಮಾಡಿಸಿದರು. ಎಡಗೈಯಲ್ಲಿ ಕಾಫಿ ಲೋಟ ಹಿಡಿದಿದ್ದವ ಬಲಗೈಲಿ ಶೇಕ್ ಹ್ಯಾಂಡ್ ಹೊಡೆದ. ಅಂದಿನಿಂದ ನಾನು ಆ ಕಂಪನಿಯಲ್ಲಿ ಇರುವಾ ತನಕ ಕಾಫಿ ಲೋಟ ಇಲ್ಲದ ಆತನ ಕೈಯನ್ನು ನೋಡೇ ಇಲ್ಲ. ಬೇರೇನೂ ಊಹಿಸದೇ ಮುಂದೆ ಹೋಗಿ ಮತ್ತೆ!

Each one has unique posture

ಮತ್ತೊಂದು ಕಂಪನಿಯ ನನ್ನ ಸಹೋದ್ಯೋಗಿಯದ್ದು ಡಬಲ್ ಧಮಾಕ. ಒಂದು ಕೈಲಿ ಕಾಫಿ ಮತ್ತೊಂದು ಕೈಲಿ ಸಿಗರೇಟ್. ಅದೇನು ಕೆಲಸ ಮಾಡುತ್ತಿದ್ದನೋ ಗೊತ್ತಿಲ್ಲ. ಆದರೆ ಹೊರಗೆಲ್ಲೆ ಕಂಡರೂ ಇದೇ ಅವತಾರ. ಹ್ಯಾಂಡ್ ಶೇಕ್ ಹೊಡೆಯಲು ಒಬ್ಬ ಅಸಿಸ್ಟಂಟ್'ನ ಇಟ್ಟುಕೊಳ್ಳಬೇಕೇನೋ!

ನೀವು ಯಾವ ರೀತಿ ಹೊಗಳಿಕೆ ಬಯಸುತ್ತೀರಿ?ನೀವು ಯಾವ ರೀತಿ ಹೊಗಳಿಕೆ ಬಯಸುತ್ತೀರಿ?

ಸಮಾರಂಭ, ಮಾಲ್'ಗಳು, ಚಿತ್ರಮಂದಿರ, ದೇವಸ್ಥಾನ ಹೀಗೆ ಈಕೆಯನ್ನು ಎಷ್ಟೋ ಬಾರಿ ನೋಡಿದ್ದೇನೆ. ಪರಿಚಯದ ನಗೆ ಬೀರುವ ಈಕೆಯ ಸ್ಟೈಲಿನಲ್ಲಿ ಒಂದು ವಿಶೇಷತೆ ಇದೆ. ದಿರಿಸು ಯಾವುದೇ ಇರಲಿ, ಉದ್ದನೆಯ ಹಿಡಿಯ ಸಣ್ಣ ವ್ಯಾನಿಟಿ ಬ್ಯಾಗ್ ಒಂದು ಈಕೆಯ ಮೈಮೇಲೆ ಇದ್ದೇ ಇರುತ್ತೆ. ಎಡ ಭುಜದಿಂದ ದೇಹಕ್ಕೆ ಅಡ್ಡಲಾಗಿ ಹೊರಟು ಬಲಗೈಗೆ ಕೊನೆಗೊಳ್ಳುತ್ತೆ. ಜನಿವಾರದಂತೆ ಅಂತ ಊಹಿಸಿಕೊಳ್ಳಿ.

Each one has unique posture

ಈ ಮಾನವ ನನ್ನ ಪರಿಚಯಸ್ಥ. ಕಂಡಲ್ಲಿ ಹಲ್ ಬಿಡ್ತಾನೆ, ಮಾತಾಡಿಸ್ತಾನೆ. ಒಂದು ಕಾಲಕ್ಕೆ ನನ್ನ ಮಗ ಮತ್ತು ಈತನ ಮಗ ಇಬ್ಬರೂ ಒಂದೇ ಶಾಲೆಯಲ್ಲಿದ್ದರು. ಯಾವುದೇ ವಿಷಯಕ್ಕೆ ಶಾಲೆಗೆ ಹೋದರೂ ಈ ಸಿಕ್ಕೇ ಸಿಗುತ್ತಾನೆ. ವಿಷಯ ಏನಪ್ಪಾ ಅಂದರೆ, ಪ್ರತಿ ಸಾರಿ ಸಿಕ್ಕಾಗಲೂ ತನ್ನ ಹೆಂಡತಿಯನ್ನು ಹುಡುಕುತ್ತಾ ಇರುತ್ತಾನೆ! ಅಷ್ಟೇ ಅಲ್ಲದೆ ನನ್ನನ್ನು ಕಂಡ ಕೂಡಲೇ "ನನ್ ಹೆಂಡ್ತೀನ್ನ ನೋಡಿದ್ಯಾ?" ಅಂತ ಕೇಳ್ತಾನೆ. ನಾನು ಇವನ ಕಣ್ಣಿಗೆ ಹೇಗೆ ಕಾಣ್ತೀನೋ ಗೊತ್ತಿಲ್ಲ!

ನನ್ನ ಬಂಧುಗಳೊಬ್ಬರ ಮನೆಯ ಎದುರಿಗೆ ಒಬ್ಬ ತಾತ ಇದ್ದರು. ಬೆಳಗಿನಿಂದ ಹಿಡಿದು ಸಂಜೆಯವರೆಗೂ ಮನೆಯ ಹೊರಗೆ ಒಂದು ಚೇರಿನ ಮೇಲೆ ಕೂತು ಯಾವುದೋ ಪುಸ್ತಕ ಓದುತ್ತಾ ಕುಳಿತಿರುತ್ತಿದ್ದರು. ಮಳೆ ಬಂದಾಗಲೂ ಅಲ್ಲೇ ಇರುತ್ತಿದ್ದರು ಅಂದುಕೊಳ್ಳದಿರಿ! ಬರೀ ಓದೇ ಅಲ್ಲದೇ ಬೀದಿಯಲ್ಲಿ ನಡೆವ ವಿದ್ಯಮಾನಗಳ ಬಗ್ಗೆಯೂ ಗಮನ ಇತ್ತು ಎನಿಸುತ್ತದೆ. ಆದರೆ ಆ ತಾತ ಹೋದ ಮೇಲೆ ಕೆಲವು ದಿನಗಳ ಕಾಲ ಆ ಜಾಗ ಖಾಲಿ ಖಾಲಿ ಅನಿಸಿದ್ದು ನಿಜ.

ನೀವು Multitaskerರೋ? Unitaskerರೋ?ನೀವು Multitaskerರೋ? Unitaskerರೋ?

ಚಾಮರಾಜಪೇಟೆಯ ಗವಿಪುರ ಗುಟ್ಟಹಳ್ಳಿಯಲ್ಲಿ ಒಂದೆಡೆ ಒಂದೆರಡು ವರ್ಷ ಬಾಡಿಗೆ ಮನೆಯಲ್ಲಿದ್ದೆವು. ಎದುರು ಮನೆಯ ಒಬ್ಬರೋ ಸದಾ ಕಾಲ ಕಟ್ಟಿದ ಪಂಚೆ ಮೇಲುಟ್ಟು, ಸ್ಲೀವ್ಲೆಸ್ ಬನಿಯನ್ ತೊಟ್ಟು, ಬಲಗಾಲನ್ನು ತೆರೆದ ಗೇಟಿನ ಮೇಲಿಟ್ಟುಕೊಂಡು ಬೀದಿಯ ಆ ಕಡೆ ಈ ಕಡೆ ನೋಡುತ್ತಾ ಯಾವುದೋ ಕಡ್ಡಿಯಿಂದ ಹಲ್ಲಿನ ಸಂದಿಯನ್ನು ಕ್ಲೀನ್ ಮಾಡಿಕೊಂಡು ಆ ದಿಕ್ಕಿನಲ್ಲಿ ಬರೋ ಎಲ್ಲರನ್ನೂ ಮಾತನಾಡಿಸುತ್ತಿದ್ದರು. ಪ್ರತಿಮೆಗೆ ಬೇಕಾದ ಡೀಟೈಲ್ಸ್ ಎಲ್ಲಾ ಕೊಟ್ಟಿದ್ದೀನಿ. ಆಸಕ್ತಿ ಇರುವವರು ಮಾಡಿಸಬಹುದು!

ಈವರೆಗೂ ಹೇಳಿದ್ದೆಲ್ಲಾ ದಿನ ನಿತ್ಯದಲ್ಲಿ ನಾ ಕಂಡಂತಹ ಕೆಲವು ವ್ಯಕ್ತಿಗಳು. ಸ್ನೇಹಿತರ ವಲಯದಲ್ಲಿ ಸೇರಿದಾಗ ನಿಮ್ಮ ಸುತ್ತಲಿನ ಜನರನ್ನು ಗಮನಿಸುತ್ತಾ ಹೋಗಿ. ಅವರು ನಿಲ್ವ ಭಂಗಿ, ಅವರ ಮಾತಿನ ಶೈಲಿ, ಅವರು ಕೈಕಟ್ಟುವ ರೀತಿ, ಜೇಬಿನಲ್ಲಿ ಕೈ ಇರಿಸಿಕೊಂಡು ಮಾತನಾಡುವ ಶೈಲಿ, ಕೂಡುವ ಶೈಲಿ, ಕೂತಾಗ ಕಾಲ ಮೇಲೆ ಕಾಲು ಹಾಕುವ ಶೈಲಿ. ಇವೆಲ್ಲವೂ ಒಬ್ಬೊಬ್ಬರ ವ್ಯಕ್ತಿತ್ವದ ಟ್ರೇಡ್ ಮಾರ್ಕ್'ಗಳು ಎನ್ನಬಹುದು. ಈಗಿನ ದಿನಗಳಲ್ಲಿ ಮತ್ತೊಂದೆರಡು ಅಂಶ ಸೇರಿಸಬಹುದು.

Each one has unique posture

ಎಡಗೈಲಿ ಮೊಬೈಲ್ ಹಿಡಿದು ಬಲಗೈ ಬೆರಳಲ್ಲಿ ಸ್ಕ್ರೀನ್ ಓಡಿಸುತ್ತಾರೋ, ಮೊಬೈಲ್ ಹಿಡಿದ ಅಂಗೈನ ಹೆಬ್ಬೆರಳಲ್ಲೇ ಸ್ಕ್ರೀನ್ ಓಡಿಸುತ್ತಾರೋ, ಪದೇ ಪದೇ ಮೊಬೈಲ್ ನೋಡುತ್ತಾರೋ, ಯಾವಾಗಲೋ ಒಮ್ಮೊಮ್ಮೆ ನೋಡುತ್ತಾರೋ, ಮೊಬೈಲ್ ನೋಡುವಾಗ ಕನ್ನಡಕ ಹಾಕುತ್ತಾರೋ ಅಥವಾ ಕನ್ನಡಕ ಇಳಿಸುತ್ತಾರೋ ಹೀಗೆ. ಎಲ್ಲವೂ ವ್ಯಕ್ತಿಯ ಟ್ರೇಡ್ ಮಾರ್ಕ್'ಗಳು ಎನ್ನಬಹುದು.

ಹೃದಯ ಮುಟ್ಟಿ ಮನವನು ತಟ್ಟುವ ಅಳಿಸಲಾರದ ನೆನಪುಹೃದಯ ಮುಟ್ಟಿ ಮನವನು ತಟ್ಟುವ ಅಳಿಸಲಾರದ ನೆನಪು

ಸದಾ ಕಾಲ ಕಾಫಿ ಕುಡಿಯೋ, ಅಥವಾ ಕಾಫಿ ಮತ್ತು ಸಿಗರೇಟ್ ಸೇದುವ ಮಾನವರಿಗೆ ಬಹುಶ: ಟೆನ್ಷನ್ ಹತ್ತಿಕ್ಕುವ ಹವ್ಯಾಸ ಇರಬಹುದು. ವ್ಯಾನಿಟಿ ಬ್ಯಾಗ್'ನ ಹಿಡಿ ಉದ್ದನೆಯದ್ದು ಹೊಂದಿದ್ದು ಬಹುಶ: ಆಕೆಗೆ ಅದು ರಕ್ಷಣೆಯ ಕವಚದಂತೆ ಇರಬಹುದು. ಪುಸ್ತಕವನ್ನು ಎದೆಗೆ ಅವುಚಿಕೊಳ್ಳುವ ಹಾಗೆ. ಈಗಿನವರು ಲ್ಯಾಪ್-ಟಾಪ್ ಅನ್ನು ಹೀಗೆ ಇಟ್ಟುಕೊಳ್ಳುವುದು. ಮನೆಯಲ್ಲಿ ಕಸ ಬಳಿಯುವಾಗ ಆ ಕಡೆ ಈ ಕಡೆ ಏಳಬೇಕಾಗಬಹುದು ಅಂತಲೋ ಅಥವಾ ಟಿವಿಯಲ್ಲಿ ಮೂಡಿಬರುವ ಸೀರಿಯಲ್ ಅನ್ನು ತಪ್ಪಿಸಿಕೊಳ್ಳಲು ತಾತ ಹೊರಗೆ ಕೂಡುತ್ತಿದ್ದರೋ ಏನೋ. ಕಾರಣ ಏನೇ ಇರಲಿ. ಆ ಶೈಲಿಯಲ್ಲಿ ಅವರದ್ದೇ ಒಂದು signature ಇರುತ್ತದೆ.

ಈ ಸಂದರ್ಭದಲ್ಲಿ ಫೇಸ್ಬುಕ್'ನಲ್ಲಿ ಹಾಕಿದ್ದ ಒಂದು ಫೋಟೋ ಬಗ್ಗೆ ಹೇಳಲೇಬೇಕು. ಯಾರೋ ಒಬ್ಬ ಮಹನೀಯರು ಒಬ್ಬ ಸೆಲೆಬ್ರಿಟಿಯ ಚಿತ್ರ ಹಾಕಿದ್ದರು. ಚಿತ್ರದಲ್ಲಿ ಆ ಸೆಲೆಬ್ರಿಟಿ ತಮ್ಮ ಹೆಂಡತಿಯೊಡನೆ ನಿಂತಿದ್ದ ಚಿತ್ರವನ್ನು ಹಾಕಿ "ಅಪರೂಪದ ಚಿತ್ರ" ಅಂದಿದ್ದರು. ನನಗೆ ಅರ್ಥವಾಗಲಿಲ್ಲ. ಒಂದೋ ಚಿತ್ರ ತಪ್ಪು ಅಥವಾ ಟೈಟಲ್ ತಪ್ಪು ಅಂತ ಅವರಿಗೆ ಕೇಳಿದೆ "ಹೆಂಡತಿಯೊಡನೆ ನಿಂತಿರುವ ಚಿತ್ರದಲ್ಲಿ ವಿಶೇಷ ಏನಿದೆ?" ಅಂತ. ಅದಕ್ಕವರು "ಅವರು ಮೇಡಂ ಜೊತೆ ನಿಂತಿರೋದೇ ಇಸೇಸ" ಅಂದರು. ನಾನು ಸುಮ್ಮನಿರಲಾರದೆ "ಇಷ್ಟು ದಿನ ಯಾರ ಜೊತೆ ನಿಲ್ತಿದ್ರು?" ಅಂದೆ! "ಏನ್ರೀ ನಮ್ ಬಾಸ್'ಗೆ ಹಂಗಂತೀರಾ? ಯಾವಾಗ್ಲೂ ಬೇರೆಯವರ ಜೊತೆ ನಿಲ್ತಾರೆ ಅಷ್ಟು ಬಿಜಿ ಅವರು" . . . ಈ 'ಬೇರೆಯವರು' ಯಾರು, 'ಯಾವುದರಲ್ಲಿ ಬಿಜಿ?' ಅಂತ ಸ್ವಲ್ಪ ಡೀಪ್ ಆಗಿ ಹೋದರೆ ಸುಮ್ನೆ ಮಾತು ಬೆಳೆಯುತ್ತೆ ಅಂತ ಸುಮ್ಮನಾದೆ.

Each one has unique posture

ಅದು ಸರಿ, ಈ ಸಂದರ್ಭಕ್ಕೂ ಈ ವಿಷಯಕ್ಕೂ ಏನು ಸಂಬಂಧ ಅಂದಿರಾ? ದಿನನಿತ್ಯದಲ್ಲಿ ನಾವು ಕಾಣುವ ವ್ಯಕ್ತಿಗಳಲ್ಲಿನ ವಿಶೇಷತೆ ನಮ್ಮ ಮನಸ್ಸಿನಲ್ಲಿ ನೆಟ್ಟು ಅವರನ್ನು ನಾವು ಹೀಗೆಯೇ ಕಾಣೋದು ಅನ್ನುವ ರೀತಿಯಲ್ಲಿ ಮನದಟ್ಟಾಗಿರುತ್ತೆ. ಉದಾಹರಣೆಗೆ 'ಗಣೇಶ' ಅಂದ ಕೂಡಲೇ ಮನಸ್ಸಿಗೆ ಬರೋದೇ ಆನೆಯ ಮುಖ, ಡೊಳ್ಳು ಹೊಟ್ಟೆ, ಪ್ರಸನ್ನವಾದ ಮುಖ, ಇಲಿ, ಕಡುಬು ಹೀಗೆ. ಅರ್ಥಾತ್ ಗಣೇಶನನ್ನು ಹೀಗಲ್ಲದೆ ಬೇರೆ ರೀತಿ ಕಂಡರೆ ನಮಗೆ ಸರಿ ಕಾಣುವುದಿಲ್ಲ.

ಜ್ವಲಂತ ಉದಾಹರಣೆ ಎಂದರೆ 1988'ರ ಮಹಾಭಾರತ ಸೀರಿಯಲ್'ನಲ್ಲಿ ಭೀಮಸೇನನ ಪಾತ್ರದ 'ಪ್ರವೀಣ್ ಕುಮಾರ'ನನ್ನ ತೋರಿಸಿದಾಗ ವೀಕ್ಷಕರು ಅವಕ್ಕಾದರು. ಭೀಮ ಎಂದರೆ ದೊಡ್ಡ ಬಲಶಾಲೀ ದೇಹ, ಗದೆ ಎಂಬೆಲ್ಲಾ ಕಲ್ಪನೆಯ ಪ್ರತಿ ಅಂಶ ಆತನಲ್ಲಿದ್ದರೂ 'ಮೀಸೆ' ಇರಲಿಲ್ಲ! ಮಿಸ್ಸಿಂಗು! ಈಗಿನಷ್ಟು ಸುದ್ದಿಮನೆ ಅಂದು ಇದ್ದಿದ್ದರೆ "ಹೀಗೂ ಉಂಟೇ?" ಅಂತ ಇಪ್ಪತ್ತನಾಲ್ಕು ಘಂಟೆ ಅವನ ಮುಖವನ್ನೇ ತೋರಿಸುತ್ತಿದ್ದರು!

ಸದಾ ಕಾಫಿ ಕಪ್ ಹಿಡಿಯುವಾತ ಬರಿಗೈಲಿ ಕಂಡರೆ ನಿಮಗೆ ಕಸಿವಿಸಿಯಾಗೋದಿಲ್ವೇ? ಸದಾ ಮನೆ ಮುಂದೆ ಚೇರಿನ ಮೇಲೆ ಕೂಡುವ ತಾತ ನಿಮಗೆ ಸಿನಿಮಾ ಮಂದಿರದಲ್ಲಿ ಸಿಕ್ಕರೂ ಅನ್ನಿ, ನಿಮ್ಮ ಪ್ರಶ್ನೆ "ಏನಿಲ್ಲಿ?" ಅಂತ ತಾನೇ? ಸದಾ ಅಡ್ಡಪಟ್ಟಿಯ ವ್ಯಾನಿಟಿ ಬ್ಯಾಗ್ ಏರಿಸುವ ಆ ಹೆಣ್ಣು ಕೈಯಲ್ಲಿ ಪುಟ್ಟ ಪರ್ಸ್ ಹಿಡಿದು ಬಂದಳು ಅನ್ನಿ "ಎಲ್ಲಿ ನಿಮ್ಮ ವ್ಯಾನಿಟಿ ಬ್ಯಾಗು?" ಅಂತ ಕೇಳುವಾ ಅನ್ನಿಸುತ್ತೆ!

ಇಷ್ಟೆಲ್ಲಾ ಹೇಳಿದ ನಂತರ, ಟ್ರೇಡ್-ಮಾರ್ಕ್ ವಿಷಯ ನೆನಪಿನಲ್ಲಿ ಇಟ್ಟುಕೊಂಡು, ನಿಮ್ಮ ಮುಂದೆ ನನ್ನ ಪ್ರಶ್ನೆ ಇಷ್ಟು... ಕಾವಿ ತೊಟ್ಟವರಿಂದ ಒಳಿತನ್ನೇ ನಿರೀಕ್ಷೆ ಮಾಡೋದು ತಪ್ಪಾ? ಕಾಕಿ ತೊಟ್ಟವರಿಂದ ರಕ್ಷಣೆ ಬಯಸೋದು ತಪ್ಪಾ? ಮಕ್ಕಳನ್ನು ನೋಡಿಕೊಂಡ ಅಪ್ಪ-ಅಮ್ಮ ಮಕ್ಕಳಿಂದ ಅದನ್ನೇ ಬಯಸೋದು ತಪ್ಪಾ? ಕೊಂಡು ತಂದ ಸೇಬಿನ ಹಣ್ಣುಗಳಲ್ಲಿ ಒಂದೆರಡು ಕೊಳೆತದ್ದು ಇರಬಹುದು ಆದರೆ ಕೊಂಡದ್ದೆಲ್ಲಾ ಕೊಳೆತದ್ದೇ ಆದರೆ ಹೇಗೆ? ಧರೆಯೇ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡೋದು?

ನಾನು ಕೇಳ್ತಿರೋದು ತಪ್ಪಾ?

English summary
We see, meet several people in the walk of life. Several people will have their own style, posture. That becomes their unique identity. Have you met any people like these? Share your experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X