• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಹಳೆ, ಹೊಸ ವಿಚಾರಗಳ ಬೆಸೆದು ನೋಡೋಣ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಹಲವೊಮ್ಮೆ ಕೆಲವರ ಬಾಯಲ್ಲಿ "ಇವೆಲ್ಲಾ ಕಂಪ್ಯೂಟರ್ ಭಾಷೆ... ನಮಗೆ ಅರ್ಥವಾಗೋಲ್ಲ" ಅಂತ ಹೇಳಿರೋದನ್ನು ಕೇಳಿದ್ದೇವೆ. ಈ ಮಾತು ಒಂದಿಪ್ಪತ್ತು ವರುಷಗಳ ಹಿಂದೆ ಹೇಳಿದ್ರೆ ಅದೊಂಥರಾ ಮಾತು. ಏಕೆಂದರೆ ಆಗಿನ್ನೂ ಈ 'ಮಾಹಿತಿ ಜಗತ್ತು' ಹೊಸತು. ಆ ಜಗತ್ತು, ಒಮ್ಮೆ ಮೊಬೈಲ್ ರೂಪದಲ್ಲಿ ಅಂಗೈಯಲ್ಲಿ ಬಂದ ಮೇಲೆ ಅರಿವು ಹೆಚ್ಚಾಯ್ತು. ಆದರೂ ಈ ಅರಿವು ಅನ್ನುವುದು ಬಳಕೆಯ ಬಗ್ಗೆ ಸೀಮಿತವಾಗಿರಬಹುದು ಅಥವಾ ಅದಕ್ಕಿಂತ ಒಂದಷ್ಟು ಹೆಚ್ಚು ಮಾಹಿತಿಯೂ ಗೊತ್ತಿರಬಹುದು. ಆದರೆ, ಈ ಮಾಹಿತಿ ಜಗತ್ತಿನ ವಿಚಾರಗಳು ಇದ್ದಕ್ಕಿದ್ದಂತೆ ಹುಟ್ಟಿದ್ದಲ್ಲ. ಬದಲಿಗೆ ಬಹಳ ಹಿಂದಿನಿಂದ ನಮ್ಮೊಂದಿಗೆ ಇದೆ ಎನ್ನುವುದು ಗೊತ್ತಿರಲಿ. ಬನ್ನಿ, ಒಂದಿಷ್ಟು ಹಳೆಯ ಮತ್ತು ಹೊಸ ವಿಚಾರಗಳನ್ನು ಬೆಸೆದು ನೋಡೋಣ.

   Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

   ದಿನವೂ ಮಲಗಿ ಏಳೋದ್ರಿಂದ fresh ಆಗುತ್ತೇವೆ ಎಂಬುದೇ RESET. ತುಂಬಾ ಸುಸ್ತಾದಾಗ ಒಂದು ಹತ್ತು ನಿಮಿಷ ಸುಮ್ಮನೆ ಕೂರೋದೋ ಅಥವಾ ಸಣ್ಣ ನಿದ್ದೆ ತೆಗೆಯೋದೋ ಮಾಡಿದಾಗಲೂ ಫ್ರೆಶ್ ಆಗುತ್ತೇವೆ. ಇದನ್ನು REBOOT ಅಂತ ಕರೆಯಬಹುದು. ನಾವೇನೂ ಅಜರಾಮರರಲ್ಲ ಎಂಬ ವಿಷಯ ಬಂದಾಗ SHUTDOWN ನೆನಪು ಮಾಡಿಕೊಳ್ಳಿ. ಹಾಗಾಗಿಯೂ ಮತ್ತೆ ಹುಟ್ಟಿಬರುತ್ತೇನೆ ಎಂಬ ಪುನರ್ಜನ್ಮದ ಬಗ್ಗೆ ನಿಮಗೆ ನಂಬಿಕೆ ಹುಟ್ಟಿಸುವುದೇ POWER ON. ನಮ್ಮ ಇಡೀ ಜೀವನ ಇರುವುದೇ ಈ power on ಮತ್ತು off ಮಧ್ಯೆ. ಆಗಾಗ ಏನಾದರೂ ತೊಂದರೆ ತಾಪತ್ರಯಗಳು (ERROR) ಎದುರಾಗೋದೇ ದೈಹಿಕ ಸಮಸ್ಯೆಗಳು.

   ಶ್ರೀನಾಥ್ ಭಲ್ಲೆ ಅಂಕಣ; ಮೂವತ್ತು ಸೆಕೆಂಡುಗಳ Elevator talk ಎಂದರೇನು?

   ಈಗ ಒಂದು ಕಪ್ ಕಾಫಿ ಕುಡಿಯುತ್ತಾ ಕುಳಿತು ಆಲೋಚಿಸಿ... JAVA ಅಂದ್ರೇನು ಅಂತ! ಯಾಕೆ? ಇದೇನ್ ಬೆಸುಗೆ ಅಂದ್ರಾ? ಬಹಳ ಹಿಂದಿನಿಂದಲೂ Java ಎಂದರೆ ಒಂದು ಕಪ್ ಕಾಫಿ ಅಂತ. ಜಾವಾ ಅನ್ನೋದು ಒಂದು Computer Language ಕೂಡ ಹೌದು ಅಷ್ಟೇ! ಹೇಗೆ ಒಂದು ಹಾವಿನ ಜಾತಿಯಾದ Python ಅನ್ನೋದು ಒಂದು Computer Language ಹೆಸರು ಆಗಿದೆಯೋ ಹಾಗೆ. ಈ Language ಅಂದ್ರೆ ಏನು?

   Language ಎಂದರೆ ಭಾಷೆ. ಯಾರ ಮುಂದಾದರೂ ನಿಂತುಬಿಟ್ಟರೆ ಅವರಿಗೆ ನಮ್ಮ ಮಾತೆಲ್ಲಾ ಅರ್ಥವಾಗಿ ಬಿಡುತ್ತದೆಯೇ? ಇಲ್ಲಾ ತಾನೇ? ಇಬ್ಬರ ನಡುವಿನ ಸಂವಾದಕ್ಕೆ ಹೇಗೆ ಒಂದು ಭಾಷೆಯು ಅಗತ್ಯವೋ ಹಾಗೆ computerನಿಂದ ಒಂದಷ್ಟು ಕೆಲಸ ತೆಗೀಬೇಕು ಅಂದ್ರೆ ಅದಕ್ಕೇನಾದರೂ ಹೇಳಬೇಕಲ್ಲವೇ? ಅದನ್ನೇ Computer Language ಅನ್ನೋದು. ಹೇಗೆ ವಿಶ್ವದಾದ್ಯಂತ ಭಾಷೆಗಳಿವೆಯೋ ಹಾಗೆಯೇ ಈ Computer ಜಗತ್ತಿನಲ್ಲೂ ಬೇಕಾದಷ್ಟು ಭಾಷೆಗಳಿವೆ. ಒಂದೊಂದರದ್ದೂ ಒಂದೊಂದು ಸೊಗಡು, ಒಂದೊಂದು ವೈಶಿಷ್ಟ್ಯ. ನಮ್ಮಲ್ಲಿ ಕೆಲವು ಭಾಷೆಗಳಿಗೆ Script (ಅಕ್ಷರ) ಭಾಗ್ಯ ಇಲ್ಲ. ಇದನ್ನು ನ್ಯೂನತೆ ಅಂತ ಎನ್ನುವುದಾದರೆ computer language ಗಳಲ್ಲೂ ಇಂಥ ನ್ಯೂನತೆಗಳು ಬಹಳಷ್ಟಿವೆ. ಇದನ್ನು ದೊಡ್ಡ ಭಾಷೆಯಲ್ಲಿ Limitation ಎಂದುಬಿಡುತ್ತೇವೆ ಅಷ್ಟೇ.

   Computer ಎಂಬ ಸಾಧನ ಬಳಸಿಕೊಂಡು, ಅದಕ್ಕೊಂದು ಭಾಷೆಯಲ್ಲಿ ಕೆಲಸವನ್ನು ಕೊಟ್ಟರೆ ಅದು ಕೆಲಸ ಮಾಡಬಲ್ಲದು ನಿಜ. ಆದರೆ ಎಲ್ಲವೂ ಅಚ್ಚುಕಟ್ಟಾಗಿ ಆಗಬೇಕು ಮತ್ತು ನಿರ್ಧರಿತ ಸಮಯದಲ್ಲೇ ಆಗಬೇಕು ಎಂಬುದಕ್ಕೆ ಬಹಳ ಪ್ರಾಮುಖ್ಯ ಹೆಚ್ಚು. ಒಂದು Task/ಕಾರ್ಯವನ್ನು ಸಾಧಿಸಬೇಕು ಎಂದರೆ ಅದಕ್ಕೊಂದು process/ ಪ್ರಕ್ರಿಯೆ ಇರಬೇಕು. ಇಂಥ methodologyಯಲ್ಲಿ Agile (ಅಜೈಲ್) ಕೂಡಾ ಒಂದು. ತುಂಬಾ ಆಳವಾಗಿ ಇಳಿಯುವುದು ಬೇಡ. ಕೇವಲ ಮೇಲ್ಮೈನಲ್ಲಿ ನೋಡೋಣ. Agile Methodologyಯಲ್ಲಿ ಕೆಲಸಗಳನ್ನು ಒಂದು ನಿರ್ದಿಷ್ಟ ಸಮಯದಲ್ಲಿ ಪದೇ ಪದೇ ಮಾಡುತ್ತಲೇ ಸಾಗುತ್ತೇವೆ. ಇಂಥ ದಿನದಿಂದ ಇಂಥ ದಿನದವರೆಗೆ, ಇಂಥ ಸಮಯದಿಂದ ಇಂಥ ಸಮಯದವರೆಗೆ ಇಂತಿ೦ಥ ಕೆಲಸಗಳು ಆಗಲೇಬೇಕು ಎಂಬ ಶಿಸ್ತು.

   ಶ್ರೀನಾಥ್ ಭಲ್ಲೆ ಅಂಕಣ; ಪೂರ್ಣಗಳೆಲ್ಲಾ ಕಿರಿದಾದ ಬಿಡಿಭಾಗಗಳೇ!

   ಯಾಕೋ ಸರಿ ಹೋಗಲಿಲ್ಲ ಅಥವಾ ಗೊತ್ತಾಗಲಿಲ್ಲ ಎಂದರೆ, ಈ Agile ಅನ್ನು ನೇರವಾಗಿ ಅಡುಗೆ ಮನೆಯ ಕೆಲಸಕ್ಕೆ ತಂದು ಕೂರಿಸೋಣ, ಆಗ ಎಲ್ಲವೂ ಸಲೀಸು. ಒಂದು ದಿನದ ಕೆಲಸದಲ್ಲಿ, ಬೆಳಗಿನ ತಿಂಡಿ, ಮಕ್ಕಳನ್ನು ಶಾಲೆಗೆ ಕಳಿಸೋದು, ಮಧ್ಯಾಹ್ನದ ಅಡುಗೆ-ಊಟ, ಮಕ್ಕಳು ಶಾಲೆಯಿಂದ ಬರೋದು ಮತ್ತು ಅವರುಗಳ ಸಂಜೆ ಕ್ಲಾಸುಗಳು. ಇಷ್ಟನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಿ. ಈಗ ಹೇಳಿದ ಕೆಲಸವನ್ನು ಒಮ್ಮೆ ಮಾಡಿಟ್ಟು ಪಕ್ಕಕ್ಕೆ ಇಟ್ಟರೆ ಮುಗಿಯಿತೇ? ಇಲ್ಲಾ ತಾನೇ? ಪ್ರತೀ ದಿನವೂ ನಡೆಯುತ್ತಲೇ ಸಾಗಬೇಕು.

   ಹೀಗೆಯೇ agile methodologyಯನ್ನು ಬಳಸಿಕೊಂಡು ಕಾರ್ಯಗಳನ್ನು ಪದೇ ಪದೇ ನಡೆಸಲಾಗುತ್ತದೆ. ಹೀಗೆ ಕೆಲಸ ಮಾಡುವುದರ ಜೊತೆಯಲ್ಲೇ ಮತ್ತೊಂದು ವಿಚಾರವೂ ಅಡಗಿದೆ. ಇದು ಸುಮ್ಮನೆ ಉಧೋ ಅಂತ ಕೆಲಸ ಮಾಡುತ್ತಾ ಸಾಗುವುದಲ್ಲ. ಬದಲಿಗೆ ಈ ಕೆಲಸ ಸರಿಯಾಗಿದೆಯೇ? ಸಮರ್ಪಕವಾಗಿದೆಯೇ? ಈ ಕೆಲಸವನ್ನು ಮಾಡುವಾಗ ನಮಗೆ ಯಾವ ಅಡೆತಡೆಗಳು ಎದುರಾಯ್ತು? ಇದನ್ನು ಮತ್ತೂ ಉತ್ತಮಗೊಳಿಸಲು ಏನು ಮಾಡಬೇಕು? ಎಂಬುದೆಲ್ಲವನ್ನು ಆಗಾಗ ಪರಿಶೀಲನೆ ಮಾಡಿಕೊಂಡು ಕೆಲಸ ಮಾಡುವುದೇ agile methodology.

   ಇವೆಲ್ಲವನ್ನೂ ನಮ್ಮ ಅಡುಗೆಯ ಮನೆಗಳಲ್ಲಿ ದಿನವೂ ಮಾಡುತ್ತೇವೆ ಅಲ್ಲವೇ? ಇಷ್ಟು ಅಕ್ಕಿಗೆ ಇಂತಿಷ್ಟು ನೀರು ಹಾಕಿದ್ದು ಸರಿಯಾಗಿಲ್ಲ ಎಂದರೆ ಮುಂದಿನ ಬಾರಿ ಆ ತಪ್ಪನ್ನು ತಿದ್ದಿಕೊಂಡು ಸರಿಪಡಿಸಿಕೊಳ್ಳುತ್ತೇವೆ. ಹಾಕಿದ ಉಪ್ಪು ಕಡಿಮೆ ಎನಿಸಿದರೆ ಅದನ್ನು ಅಲ್ಲಿಯೇ ತಿದ್ದಿಕೊಳ್ಳುತ್ತೇವೆ. ಐದು ವಿಷಲ್ ಆದ ನಂತರ ಗ್ಯಾಸ್ ಆಫ್ ಮಾಡಿದ್ದರಿಂದ ಬೇಳೆ ಸರಿಯಾಗಿ ಬೆಂದಿರಲಿಲ್ಲ ಎಂದರೆ ಇನ್ನೊಂದೆರಡು ವಿಷಲ್ ಕೂಗಿಸುತ್ತೇವೆ. ಹೀಗೆ... ಅಡುಗೆ ಮನೆಯಲ್ಲಿ Agile ಇದೆ.

   ದಿನನಿತ್ಯದ ಸಾಮಾಜಿಕ ತಾಣದಲ್ಲಿ ಈ agile ಹೇಗೆ? ಫೇಸ್ಬುಕ್ ನಲ್ಲಿ ಹಲವಾರು ಗುಂಪುಗಳಿವೆ. ಸಾಹಿತ್ಯ, ಅಡುಗೆ, ಗಾಯನ ಅಂತೆಲ್ಲಾ ಹತ್ತು ಹಲವು ಗುಂಪುಗಳಿವೆ. ಅಲ್ಲಿ ಸಾಮಾನ್ಯವಾಗಿ ಥೀಮ್ ಗಳು ಇರುತ್ತವೆ. ಪ್ರತೀ ದಿನವೂ ಬೇರೆ ಬೇರೆ ಥೀಮ್ ಇರಬಹುದು. ಹಾಗೆಯೇ ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಅಂತಲೂ ಇರಬಹುದು. ಒಟ್ಟಿನಲ್ಲಿ ಅಲ್ಲೊಂದು pattern ಇರುತ್ತದೆ. ಆಯಾ ಥೀಮುಗಳಿಗೆ ತಕ್ಕಂತೆ, ದಿನನಿತ್ಯದಲ್ಲಿ ಓದುವುದು, ಬರೆಯುವುದು, ಅಡುಗೆ ಮಾಡಿ, ಅದರ ರೆಸಿಪಿ ಮತ್ತು ಚಿತ್ರ ಹಾಕೋದು, ಸೀರೆ ಉಟ್ಟು ಚಿತ್ರ ತೆಗೆಸಿಕೊಳ್ಳೋದು, ಡಾನ್ಸ್ ವಿಡಿಯೋ ಹಾಕೋದು ಹೀಗೇ ಯಾವುದೇ ಆಗಿರಬಹುದು. ವಾರಾನುವಾರ ಅದದೇ ಥೀಮ್ ಗಳು ಮತ್ತೆ ಮತ್ತೆ ಬರುತ್ತವೆ. ಮಾಡಿದ್ದೇ ಕೆಲಸ ಅಂತಾದರೂ ವಿಷಯ ಬೇರೆ ಬೇರೆ. Computer ಜಗತ್ತಿನಲ್ಲೂ ಹೀಗೆಯೇ ನಡೆಯುತ್ತದೆ.

   ಶ್ರೀನಾಥ್ ಭಲ್ಲೆ ಅಂಕಣ; ಎಲ್ಲಾ ವಿಷಯಕ್ಕೂ ಅದರದ್ದೇ ಆಳ, ಅಳತೆ ಇದೆ

   ನಾವು ಫೇಸ್ಬುಕ್ ನಲ್ಲಿ ಇಲ್ಲ. ಹಾಗಾಗಿ ಈ ಥೀಮ್ ಎಲ್ಲಾ ನಮಗೆ ಗೊತ್ತಿಲ್ಲ ಎಂದರೆ ಆಯ್ತು ಬಿಡಿ, ನಮ್ಮ ನಿತ್ಯಕರ್ಮದಲ್ಲೂ Agile ಇದೆ.

   Computer ವಿಷಯವನ್ನೇ ತೆಗೆದುಕೊಂಡರೆ ಪ್ರತೀ ವಿಷಯವನ್ನು ನೆನಪಿನಲ್ಲಿ ಇರಿಸಿಕೊಳ್ಳುತ್ತಾ ಸಾಗಿ, Memory Full ಆಗದಂತೆ ತಡೆಯಲು garbage collection ಎನ್ನುವ program ಬೇಕಿಲ್ಲದ್ದನ್ನು ಮೆಮೋರಿಯಿಂದ ತೆಗೆದುಹಾಕುತ್ತಾ ಸಾಗುತ್ತದೆ. ಮನೆಯ ಮುಂದೆ garbage collection ಗೆ ಬರುವಂತೆ ಭಾಸವಾಗುವ ಈ ಪ್ರಕ್ರಿಯೆ ನಮ್ಮೊಳಗೂ ಇದೆ. ದಿನನಿತ್ಯದಲ್ಲಿ ನಡೆಯುವ ವಿಷಯಗಳು ಮನಸ್ಸಿನಲ್ಲಿ ಶೇಖರಣೆಯಾಗುತ್ತಾ ಸಾಗಿ, ಹಾಗೆಯೇ ಉಳಿದು Memory Full ಆಗಿಬಿಟ್ಟರೆ ನಮ್ಮ ಗತಿ ಏನಾಗುತ್ತಿತ್ತು ಅಂತ ಒಮ್ಮೆ ಆಲೋಚಿಸಿ? ಮರೆವು ಅನ್ನೋದು ಒಂದು ವರ ಎನ್ನೋಣ.

   ಇನ್ನು computer virus... 'ಅದೇನಾಯ್ತೋ ಗೊತ್ತಿಲ್ಲಪ್ಪಾ ನನ್ನ computer ಕೆಲಸವೇ ಮಾಡ್ತಿಲ್ಲ. ಅದರಲ್ಲೇನಿತ್ತೋ ಅವೆಲ್ಲ ಗುಡಿಸಿ ಗುಂಡಾಂತರವಾಯ್ತು. ಅದೇನ್ ಹಾಳು virus ಏನೋ? ಕಣ್ಣಿಗೆ ಕಾಣೋದಿಲ್ಲ. ಎಲ್ಲಾ ಡೇಟಾ ಹಾಳಾಯ್ತು" ಅಂತ. ಕಣ್ಣಿಗೇ ಕಾಣದ ಈ ವೈರಸ್ ಡೇಟಾ ಹಾಳು ಮಾಡಿತು ಎಂಬ ಮಾತಿನ ಜೊತೆಯಲ್ಲೇ ಆಲೋಚಿಸಿ, ಕಣ್ಣಿಗೆ ಕಾಣದ ಇಂಥ ವೈರಸ್ ಇಡೀ ಭೂಮಂಡಲವನ್ನೇ ಅಲ್ಲೋಲ ಕಲ್ಲೋಲ ಮಾಡಿಲ್ಲವೇ?

   ಸಾಧ್ಯವಾದಷ್ಟೂ ಹೊಸ ಕಲಿಕೆಗಳನ್ನು ರೂಢಿಸಿಕೊಂಡು version upgrade ಮಾಡಿಕೊಳ್ಳುತ್ತಾ ಮುನ್ನಡೆಯೋಣ.

   ಏನಂತೀರಾ?

   English summary
   This article is a comparision of computer and computer language to human life skills in daily life,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X