ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್ಮಸ್ ಹಬ್ಬದ ಬೆಳಕಲ್ಲಿ ದೀಪಾವಳಿಯ ಕಾಣ್ವರು ನಾವು

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಈ ಲೇಖನ ಓದುವ ಹೊತ್ತಿಗೆ ಈ ವರ್ಷದ ಕ್ರಿಸ್ಮಸ್ ಹಬ್ಬ ತೆರೆಮರೆಗೆ ಸರಿದಿರುತ್ತದೆ. ಡಿಸೆಂಬರ್ 25ರಂದು ಏಸುಕ್ರಿಸ್ತನ ಹುಟ್ಟುಹಬ್ಬವನ್ನು ಪ್ರಪಂಚಾದ್ಯಂತ ಆಚರಿಸಿದರು ಎಂದು ನಾನಾಗಲೀ ಅಥವಾ ಪತ್ರಿಕೆಗಳಾಗಲಿ ಹೇಳಿದರೆ ಅದು ತಪ್ಪು. ಕ್ರಿಸ್ಮಸ್ ಹಬ್ಬವನ್ನು 150ಕ್ಕೂ ಹೆಚ್ಚು ರಾಷ್ಟ್ರಗಳು ಆಚರಿಸುತ್ತದೆ, ಆದರೆ ಪ್ರತಿಯೊಂದೂ ರಾಷ್ಟ್ರವಲ್ಲ. ಸಂಪೂರ್ಣ ಮುಸಲ್ಮಾನ್ ರಾಷ್ಟ್ರಗಳಲ್ಲಿ ಕ್ರಿಸ್ಮಸ್ ಹಬ್ಬ ಒಂದು ಹಬ್ಬವೇ ಅಲ್ಲ. ಜಪಾನ್ ಮತ್ತು ಚೀನಾದಲ್ಲಿ (ಒಂದೆರಡು ಭಾಗ ಹೊರತುಪಡಿಸಿದರೆ) ಇದೊಂದು ಹಬ್ಬ ಅಲ್ಲ, ಕೆಲಸ ದಿನ. ಅಧಿಕೃತವಾಗಿ ಹಬ್ಬವೇ ಇಲ್ಲ ಎಂದ ಮೇಲೆ ರಜೆ ಇನ್ನೆಲ್ಲಿ?

ಬೌದ್ಧ ಧರ್ಮದ ರಾಷ್ಟ್ರಗಳಲ್ಲೂ ಕ್ರಿಸ್ಮಸ್ ಹಬ್ಬದ ಆಚರಣೆ ಇಲ್ಲ. ಮತ್ತೆ ಕೆಲವು ರಾಷ್ಟ್ರಗಳಲ್ಲಿ ಕ್ರಿಸ್ಮಸ್ ಒಂದು ಹಬ್ಬವೇ ಆದರೂ, ಆಚರಣೆಯ ದಿನ ಜನವರಿ ತಿಂಗಳ 6 ಅಥವಾ 7ರಂದು. ಡಿಸೆಂಬರ್ 25 ಪ್ರಪಂಚಾದ್ಯಂತ ಆಚರಿಸುವ ಹಬ್ಬ ಅಲ್ಲ ಎಂದು ಹೇಳುತ್ತಾ, ಹಬ್ಬದ ಆಚರಣೆ ಮತ್ತು ಕೆಲವು ವಿಶೇಷಗಳನ್ನು ತಿಳಿದುಕೊಳ್ಳೋಣ.

ಹೊಸವರ್ಷದಲ್ಲಿ ದುರ್ವಾಸನೆ ದೂರವಾಗಿ ಸುವಾಸನೆ ಹೆಚ್ಚಾಗಲಿ! ಹೊಸವರ್ಷದಲ್ಲಿ ದುರ್ವಾಸನೆ ದೂರವಾಗಿ ಸುವಾಸನೆ ಹೆಚ್ಚಾಗಲಿ!

ನಿಯಮಗಳನ್ನು ಹಾಕುವ ಮತ್ತು ಪರಿಪಾಲಿಸುವ ರಾಷ್ಟ್ರವಾದ ಅಮೇರಿಕಾದಲ್ಲಿ ನವೆಂಬರ್ ತಿಂಗಳ thanksgiving ಹಬ್ಬದ ನಂತರ ಮನೆ ಮತ್ತು ಮನೆಯ ಮುಂಭಾಗದ (ಲಾನ್) ಪ್ರದೇಶವನ್ನು ದೀಪಗಳಲ್ಲಿ ಅಲಂಕರಿಸಿ ಹಬ್ಬದ ವಾತಾವರಣ ಮೂಡಿಸಲು ಅನುಮತಿ ನೀಡುತ್ತದೆ. ಜನವರಿ ಮೊದಲ ವಾರದ ನಂತರ ಅವುಗಳನ್ನು ತೆಗೆಯಲೇಬೇಕು ಎಂಬುದೂ ನಿಯಮ.

Christmas festival celebration across the globe

ಉಡುಗೊರೆಗಳನ್ನು ಕೊಟ್ಟು ತೆಗೆದುಕೊಳ್ಳುವ ಪರಿಪಾಠ ಇರುವ ಈ ಹಬ್ಬಕ್ಕೆ ಅಣಿಯಾಗಲು ಹಬ್ಬದ ಹತ್ತು ದಿನಕ್ಕೆ ಅಥವಾ ವಾರಕ್ಕೆ ಮೊದಲು ಎಲ್ಲೆಡೆ shopping ಬಿರುಸು ಅತೀ ಜೋರಾಗಿರುತ್ತದೆ. ತಮ್ಮ ತಮ್ಮ ಆಫೀಸಿನ ಕೆಲಸಗಳನ್ನು ಮುಗಿಸಿಟ್ಟು vacation ತಯಾರಿ ನಡೆಸುವ ಮಂದಿ, ಆಯಾ ದಿನಗಳ ಕೆಲಸದ ನಂತರ ಅಂಗಡಿಮುಂಗಟ್ಟಿಗೆ ಹೋಗಿ gift ಖರೀದಿ ಮಾಡುವ ಮಂದಿ, ಹೀಗೆ ಒಂದಲ್ಲಾ ಒಂದು ಕಾರಣದಿಂದ ಬೀದಿಗಳು ಮತ್ತು ಅಂಗಡಿಗಳು ಗಿಜಿಗಿಜಿ.

ಉಳುವ ಭೂಮಿಯನ್ನು ಕಾಪಾಡುವ ದೈವಕ್ಕೆ ವಂದನೆ, ಧನ್ಯವಾದಗಳುಉಳುವ ಭೂಮಿಯನ್ನು ಕಾಪಾಡುವ ದೈವಕ್ಕೆ ವಂದನೆ, ಧನ್ಯವಾದಗಳು

ವಿಶೇಷ ಏನಪ್ಪಾ ಎಂದರೆ, ಮಕ್ಕಳಿಗೆಂದು ಖರೀದಿಸುವ ಉಡುಗೊರೆಯನ್ನು ಅವರ ಕಣ್ಣಿಗೆ ಬೀಳದಂತೆ ಎತ್ತಿಟ್ಟು, ಅದನ್ನು ಪ್ಯಾಕ್ ಮಾಡಿ, ಕ್ರಿಸ್ಮಸ್ ಹಬ್ಬದ ಹಿಂದಿನ ರಾತ್ರಿ ಅವನ್ನು ಕ್ರಿಸ್ಮಸ್ ಗಿಡದ ಕೆಳಗೆ ಇಟ್ಟು, ಹಬ್ಬದ ದಿನ ಹನ್ನೆರಡು ಘಂಟೆ (ರಾತ್ರಿ / ಹಗಲು) ಮಕ್ಕಳು ಅವನ್ನು ತೆರೆದು ನೋಡಿದಾಗ ಅವರ ಮುಖದಲ್ಲಿರಬಹುದಾದ ಸಂತಸ ಬೆಲೆ ಕಟ್ಟಲಾಗದ್ದು.

ಡಿಸೆಂಬರ್ 20ರಂದು official travel day ಆರಂಭ ಎನ್ನುತ್ತಾರೆ ಇಲ್ಲಿ. ಅಂದಿನಿಂದ ಬಾಡಿಗೆ ಕಾರುಗಳು, ವಿಮಾನದ ಟಿಕೆಟ್'ಗಳು, ಹೋಟೆಲ್ / ರೆಸಾರ್ಟ್ ರಿಸರ್ವೇಶನ್'ಗಳು ಹೀಗೆ ಎಲ್ಲಕ್ಕೂ ಬೆಲೆ ಹೆಚ್ಚು ಮತ್ತು ದುರ್ಲಭ. ಕೊನೇ ನಿಮಿಷದಲ್ಲಿ ಪ್ಲಾನ್ ಮಾಡಿ ಹೊರಗೆ ಹೋಗುತ್ತೇವೆ ಎಂದರೆ ಅದು ದುಸ್ತರವೇ ಸರಿ. ನಮ್ಮ ಗಾಡಿಯಲ್ಲಿ ನಾವು ಹೋಗುತ್ತೇವೆ ಎಂದರೆ ಸಂತೋಷ, ಆದರೆ ಬೀದಿಯಲ್ಲಿ traffic ಬಗ್ಗೆ ಯಾವ ಗ್ಯಾರಂಟಿ ಕೊಡಲಾಗದು. ನಮ್ಮಂತೆ ಎಷ್ಟೋ ಜನ ಕೊನೆ ನಿಮಿಷಿಗರು ಇರುತ್ತಾರೆ ಅಲ್ಲವೇ?

Christmas festival celebration across the globe

ಈ ಜಗತ್ತಿನಲ್ಲಿ ಯಾವುದೇ ಒಂದು ದೇಶದಲ್ಲಿ ಎಲ್ಲರೂ ಉಳ್ಳವರೇ ಆಗಿರುವವರು ಇರುವುದು ಶುದ್ಧ ಸುಳ್ಳು. ಇಂದ್ರನ ಅಮರಾವತಿ ಅಥವಾ ದೊಡ್ಡಣ್ಣನ ನಾಡು ಕೂಡ ಇದಕ್ಕೇನೂ ಹೊರತಲ್ಲ. ಇರುವವರು ಇಲ್ಲದವರಿಗಾಗಿ ದಾನ ಮಾಡುವ ಕ್ರಿಯೆಯನ್ನು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕೊಂಚ ಹೆಚ್ಚಾಗಿಯೇ ನಡೆಸುತ್ತಾರೆ ಎನ್ನಬಹುದು. Salvation armyಯವರಿಗೆ ದೇಣಿಗೆ ರೂಪದಲ್ಲಿ ಮಕ್ಕಳಿಗೆ bicycles, canned ಖಾದ್ಯ ಪದಾರ್ಥಗಳು, backpacks, ಚಳಿಗಾಲದ ಬಟ್ಟೆಬರೆ ಅಥವಾ ಹಣದ ಸಹಾಯ ಧಾರಾಳವಾಗಿ ನಡೆಯುತ್ತದೆ.

ಬಾಲ್ಯದ ವಿಶೇಷ ದೀಪಾವಳಿ, ಅಮೆರಿಕದಲ್ಲಿಲ್ಲ ಪಟಾಕಿಯ ಹಾವಳಿ! ಬಾಲ್ಯದ ವಿಶೇಷ ದೀಪಾವಳಿ, ಅಮೆರಿಕದಲ್ಲಿಲ್ಲ ಪಟಾಕಿಯ ಹಾವಳಿ!

ಅಂಗಡಿಗಳೊಳಗೂ ದೀಪದ ಅಲಂಕಾರಗಳು ಹಬ್ಬದ ವಾತಾವರಣ ಮೂಡಿಸಿ mood ಬರಿಸುತ್ತದೆ. ಅದರ ಜೊತೆಗೆ ಹಿತವಾದ ಹಾಡುಗಳೂ ಹಬ್ಬವನ್ನು ಹೆಜ್ಜೆಹೆಜ್ಜೆಗೂ ನೆನಪಿಸುತ್ತಿರುತ್ತದೆ. ಅಂಗಡಿಗಳ ಸಾಲುಸಾಲುಗಳನ್ನೇ ಹೊಂದಿರುವ ಮಾಲ್'ಗಳಲ್ಲಿ ವೈಭವ ಇನ್ನೂ ಹೆಚ್ಚು. ಮಾಲ್'ಗಳ ಉದ್ದಗಲಕ್ಕೂ ದೀಪಗಳು ಝಗಝಗಿಸುತ್ತಿರುತ್ತದೆ. ಮಾಲ್'ನ ಮಧ್ಯಭಾಗ ವಿಶೇಷವಾಗಿ ಅಲಂಕರಿಸಿದ್ದು, ಸಾಂತಾ ವೇಷಧಾರಿಯೊಬ್ಬರು ಅಲ್ಲಿಗೆ ಬಂದು ಮಕ್ಕಳೊಡನೆ ಚಿತ್ರ ತೆಗೆಸಿಕೊಳ್ಳುವ ಚಟುವಟಿಕೆ ಇಂದಿಗೂ ಇದೆ. ನನ್ನ ಮಗ ಈ ರೀತಿ ಸಾಂತನ ತೊಡೆಯೇರಿ ಕೂತ ಚಿತ್ರವನ್ನು ಹಿಂದೊಮ್ಮೆ ಇಲ್ಲಿ ಹಾಕಿ, ಸಾಂತನ ತೊಡೆಯೇರಿ ಕೂತವನಿಗೂ, ನಾರಸಿಂಹನ ತೊಡೆಯೇರಿ ಕೂತ ಪ್ರಹ್ಲಾದನಿಗೂ ಸಾಮ್ಯತೆ ನೀಡಿದ್ದೆ.

Christmas festival celebration across the globe

ಕ್ರಿಸ್ಮಸ್ ಹಬ್ಬದ ಮತ್ತೊಂದು ಸಂಪ್ರದಾಯ ಎಂದರೆ ಉಡುಗೊರೆಗಳನ್ನು ಕೊಟ್ಟು ತೆಗೆದುಕೊಳ್ಳುವುದು. ಆದರೆ ಬಂಧು ಜನಗಳು ಸದಾ ಸುತ್ತಮುತ್ತಲೇ ಇರುತ್ತಾರೆಯೇ? ಖಂಡಿತ ಇಲ್ಲ. ಪೋಸ್ಟ್ ಮುಖಾಂತರ ಕಳಿಸುವುದು ಸರ್ವೇಸಾಮಾನ್ಯವಾದ್ದರಿಂದ ಈ ಸಮಯದಲ್ಲಿ ಪೋಸ್ಟಲ್ ಡಿಪಾರ್ಟ್ಮೆಂಟ್ ಹೆಚ್ಚು ಸಮಯದವರೆಗೆ ಕೆಲಸ ಮಾಡುವುದು, ಅಷ್ಟೇ ಅಲ್ಲದೆ ಭಾನುವಾರವೂ ಕೆಲಸ ಮಾಡುತ್ತದೆ. ಹಾಗೆಯೇ, online'ನಲ್ಲಿ ಖರೀದಿಸುವ ಪದಾರ್ಥಗಳನ್ನು ಗ್ರಾಹಕನಿಗೆ ತಲುಪಿಸುವ courier serviceಗಳು ಕೂಡ ಅವೇಳೆಗಳಲ್ಲಿ delivery ಮಾಡುತ್ತವೆ. ನಮ್ಮ ಮನೆಗೆ ಕಳೆದ ವಾರ ಡೆಲಿವರಿ ಮಾಡಿದ್ದು ಬೆಳಗಿನ ಐದುಘಂಟೆಯ ಸಮಯದಲ್ಲಿ!

ಹಬ್ಬ ಎಂದರೆ ಹಬ್ಬ ಅಷ್ಟೇ. ಆಚರಿಸುವ ಎಲ್ಲರಿಗೂ ಅನ್ವಯಿಸುವಂತಹದ್ದು. ಈ ನಿಟ್ಟಿನಲ್ಲಿ ಕ್ರಿಸ್ಮಸ್ ಹಬ್ಬದಂದು essential services ಹೊರತಾಗಿ ಸಿನಿಮಾ ಮಂದಿರದಿಂದ ಹಿಡಿದು ಮಿಕ್ಕ ಎಲ್ಲವೂ ಬಂದ್. ಆದರೇನು ಟಿವಿ ಇದ್ದೇ ಇದೆಯೆಲ್ಲಾ. ಈ ದಿನಗಳಲ್ಲಿ, ಕೆಲವೊಂದು TV ಚಾನೆಲ್'ಗಳಲ್ಲಿ ಇಪ್ಪತ್ತು ನಾಲ್ಕೂ ಘಂಟೆಗಳ ಕಾಲ ಕ್ರಿಸ್ಮಸ್ ಸಿನೆಮಾಗಳು ಮೂಡಿಬರುತ್ತಿರುತ್ತದೆ. ಸಂಸಾರದವರೆಲ್ಲಾ ಕೂತು ನೋಡಬಹುದು ಎನ್ನಬಹುದಾದ ಸಾಂಸಾರಿಕ ಚಿತ್ರಗಳು ನಿಜಕ್ಕೂ ಸೊಗಸಾಗಿರುತ್ತದೆ. ಕಥೆ ಗಟ್ಟಿಯಿದ್ದಾಗ ಭಾಷೆ ಯಾವುದಾದರೂ ಸರಿ, ಸಿನಿಮಾ ನೋಡಬೇಕು ಎನಿಸೋದು ಸಹಜ.

ಹೆಣ್ಣು ನಿಜಕ್ಕೂ ಸಂತಸದಿಂದ ಇದ್ದಿದ್ದರೆ ಇಂಥದೊಂದು ದಿನ ಬೇಕಿತ್ತೇ? ಹೆಣ್ಣು ನಿಜಕ್ಕೂ ಸಂತಸದಿಂದ ಇದ್ದಿದ್ದರೆ ಇಂಥದೊಂದು ದಿನ ಬೇಕಿತ್ತೇ?

ಹಬ್ಬಕ್ಕೆ ಇನ್ನೊಂದು ವಾರ ಇರುವಂತೆ ಹಲವಾರು ಅಂಗಡಿಗಳು ದಿನದ ಇಪ್ಪತ್ತನಾಲ್ಕೂ ಘಂಟೆಗಳ ಕಾಲ ತೆರೆದಿರುತ್ತದೆ. ಹಬ್ಬದ ಮುನ್ನ ದಿನವಾದ ಡಿಸೆಂಬರ್ 24, ಕ್ರಿಸ್ಮಸ್ ಈವ್, ದಿನದಂದು ಸಂಜೆ ಆರಕ್ಕೆ ಹಲವಾರು ಅಂಗಡಿಗಳು ಬಂದ್ ಆಗುತ್ತದೆ.

Christmas festival celebration across the globe

ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ದೀಪಕ್ಕೆ ಮಹತ್ವ ಹೆಚ್ಚು. ಕನಿಷ್ಠ ಒಂದೆರಡು series lights ಹಚ್ಚಿಯಾದರೂ ಹಬ್ಬ ಆಚರಿಸುವುದು ವಾಡಿಕೆ. ಇಂತಹ ಸಂದರ್ಭದಲ್ಲಿ competition ಇಲ್ಲದೆ ಇದ್ದರೆ ಹೇಗೆ? ಯಾರ ಮನೆಯಲ್ಲಿನ ದೀಪಾಲಂಕಾರಗಳು ಅತಿ ಹೆಚ್ಚು ಶೋಭಾಯಮಾನವಾಗಿದೆ ಎಂಬ ಸ್ಪರ್ಧೆಯೂ ಇಲ್ಲಿ ನಡೆಯುತ್ತದೆ. ಈ ದಿನಗಳಲ್ಲಿ ಕ್ರಿಸ್ಮಸ್ Lighting ನೋಡಲೆಂದೇ ಬಾಡಿಗೆ ಬಸ್ ಅಥವಾ limousine ಕಾರುಗಳಲ್ಲಿ ನಗರ ಪ್ರದಕ್ಷಿಣೆ ಮಾಡುತ್ತಾರೆ.

ನಾವಿರುವ ದೇಶದಲ್ಲಿ ನವರಾತ್ರಿ ಆಚರಣೆ ಹೇಗೆ ಮಾಡ್ತಾರೆ ಗೊತ್ತಾ?! ನಾವಿರುವ ದೇಶದಲ್ಲಿ ನವರಾತ್ರಿ ಆಚರಣೆ ಹೇಗೆ ಮಾಡ್ತಾರೆ ಗೊತ್ತಾ?!

ನಮ್ಮೂರಿನಲ್ಲಿ ಒಂದು ಮನೆಯ ದೀಪಾಲಂಕಾರ ಕಳೆದ ಹಲವಾರು ವರ್ಷಗಳಿಂದ ಮೊದಲ ಸ್ಥಾನದಲ್ಲಿದೆ. ಇವರ ಮನೆಯಲ್ಲಿನ ಅಲಂಕಾರಕ್ಕೆ ಕಳೆದ ಕ್ರಿಸ್ಮಸ್ ದಿನ ಐವತ್ತು ವರ್ಷ ತುಂಬಿತು. ಒಂದೂವರೆ ಮಿಲಿಯನ್ ದೀಪಗಳನ್ನು ಬೆಳಗಿಸುವ ಇವರಿಗೆ ಆ ಒಂದು ಅಥವಾ ಎರಡು ತಿಂಗಳು electricity ಬಿಲ್ ಜೋರಾಗಿ ಬರುತ್ತದೆ. ಅವರ ಮನೆಯ ಬಾಗಿಲಿಗೆ ಇಟ್ಟಿರುವ ಹುಂಡಿಗೆ ಕಾಣಿಕೆ ಹಾಕಿ ಸಹಾಯ ಮಾಡಬಹುದು ಆದರೆ ಕಡ್ಡಾಯ ಇಲ್ಲ. ಆ ದಿನಗಳಲ್ಲಿ ಅತೀ ಚಳಿ ಇದ್ದರೆ ಆ ಮನೆಯವರು hot chocolate ಕೂಡ ಮಾರಾಟ ಮಾಡುತ್ತಾರೆ.

ಕ್ರಿಸ್ಮಸ್ ಹಬ್ಬದ ದಿನಗಳಲ್ಲಿ ಸ್ನೇಹಿತರೊಡನೆ, ಬಂಧುಬಳಗದವರೊಡನೆ ಒಡಗೂಡಿದ dinner ಪ್ರಾಮುಖ್ಯತೆ ವಹಿಸುತ್ತದೆ. ಇಡೀ ವರ್ಷ ದುಡಿದ ಪರಿಶ್ರಮವನ್ನು ಬದಿಗೊತ್ತಿ ಒಂದಷ್ಟು ದಿನ (ಸಾಧ್ಯವಾದರೆ) ಜಂಜಟ್ಟಿನಿಂದ ದೂರವಿದ್ದು ಸಂಭ್ರಮಿಸಿದ ಮೇಲೆ ಹೊಸವರ್ಷದ ಹೊಸ ಜಂಜಟ್ಟನ್ನು ಸ್ವಾಗತಿಸುವ ಪ್ರಕ್ರಿಯೆಗೆ ಧರ್ಮದ ಗೋಡೆಯ ಅವಶ್ಯಕತೆ ಇಲ್ಲ ಎನಿಸುತ್ತದೆ.

ಕ್ರಿಶ್ಚಿಯನ್ ಧರ್ಮಕ್ಕೆ ಸೇರದ ಮಕ್ಕಳೂ ಈ ಹಬ್ಬದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಶಾಲೆಯಲ್ಲಿ ಸ್ನೇಹಿತರು ಆಚರಣೆ ಮಾಡಿ ನಲಿಯುವಾಗ ನಾವೇಕೆ ಮಾಡಬಾರದು ಎನ್ನುವ ವಾದಕ್ಕಿಂತ ಅವರಂತೆಯೇ ನಾವೂ ಎಂದು ಸಂತೋಷಪಡುತ್ತಾರೆ. ಇಲ್ಲಿನ ಭಾರತೀಯ ಮಕ್ಕಳು ಸಂಕ್ರಾಂತಿಯಿಂದ ಹಿಡಿದು ಕ್ರಿಸ್ಮಸ್'ವರೆಗೂ ಎರಡೂ ಹಬ್ಬಗಳಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ ಎಂದರೆ ತಪ್ಪೇನಿಲ್ಲ ಎಂದುಕೊಳ್ಳುತ್ತೇನೆ.

ಕ್ರಿಸ್ಮಸ್ ಹಬ್ಬದ ದೀಪಾಲಂಕಾರದಲ್ಲಿ ದೀಪಾವಳಿಯನ್ನು ಕಾಣುವವರು ನಾವು. ಕ್ರಿಸ್ಮಸ್ ಹಬ್ಬದ ಗೊಂಬೆಗಳ ಮೆರವಣಿಗೆಯಲ್ಲಿ ದಸರಾ ಬೊಂಬೆಗಳನ್ನು ಕಾಣುವವರು ನಾವು. Santaನ ರಥದ ಜಿಂಕೆಯನ್ನು ಕಂಡು ಮಾರೀಚ ವಧೆಯ ಕಥೆಯನ್ನು ಕಾಣುವವರು ನಾವು. ಕೊಟ್ಟಿಗೆಯಲ್ಲಿ ಹುಟ್ಟಿದ shepherd ಕ್ರಿಸ್ತನಿಗೂ ಸೆರೆಮನೆಯಲ್ಲಿ ಹುಟ್ಟಿದ ಗೊಲ್ಲ ಕೃಷ್ಣನಿಗೂ ತಾಳೆ ಹಾಕುವವರು ನಾವು.

ಧರ್ಮಗಳೆಲ್ಲಾ ಒಂದೇ ಎಂದು ನಮ್ಮನಮ್ಮಲ್ಲಿ ಹೊಂದಾಣಿಕೆ ಇಟ್ಟುಕೊಂಡೂ ರಾಜಕೀಯದ ಬಲಿಪಶುಗಳಾಗಿ ಹೆಂಗೆಂಗೋ ಆಡುವವರೂ ನಾವೇ ನಾವು! ನೋಡಿ ಸ್ವಾಮಿ ನಾವಿರೋದು ಹೀಗೆ!

English summary
Though Christmas is celebrated across the globe, many countries do not consider it as a festival at all. In USA it is celebration of giving and taking, lights lit everywhere. It feels as if we are celebrating Deepavali in America. A write up by Srinath Bhalle, Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X