ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲೆಯ ಮೇಲೂ ಹೊರಲು ಯೋಗ್ಯತೆ ಪಡೆಯುವ 'ಪಾದರಕ್ಷೆ'!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮೊನ್ನೆ ಫೇಸ್ಬುಕ್'ನಲ್ಲಿ ಒಂದೆಡೆ ಓದಿದೆ. ಚಪ್ಪಲಿ ಎಂದಾಗ ಕಾಲಿಗೆ ಹಾಕಿಕೊಳ್ಳೋದು ಎಂದು ಮನಸ್ಸಿಗೆ ಬಂದರೆ, ಪಾದರಕ್ಷೆ ಎಂದ ಕೂಡಲೇ ತಲೆಯ ಮೇಲೆ ಹೊತ್ತುಕೊಂಡು ಹೋಗುವಷ್ಟು ಅದ್ಭುತವಾಗಿದೆ ಪದ ಅಂತ. ಭಾಷೆ ಮತ್ತು ಪದಪ್ರಯೋಗ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಹುದು ಎಂದು ಇಲ್ಲಿ ಕಾಣಬಹುದು. ಭಾಷೆ ಬಳಸಲು ಸಂಕೋಚ ಬೇಡ. ಈ ಪಾದರಕ್ಷೆ ಎಂಬುದನ್ನು ಕೇಳಿದ ಕೂಡಲೇ ಮನಸ್ಸಿಗೆ ಬರುವುದೇ ರಾಮಾಯಣದ ರಾಮನ ಪಾದುಕಾ ಪ್ರಸಂಗ.

ರಾಮನನ್ನು ಹುಡುಕಿಕೊಂಡು ಬರುವ ಭರತ. ಅದನ್ನು ಕಂಡು ಅನುಮಾನ ಪಟ್ಟು ಕ್ರೋಧಗೊಂಡು ಯುದ್ಧಕ್ಕೇ ಸಿದ್ಧನಾಗುವ ಲಕ್ಷ್ಮಣ. ಅವನನ್ನು ಸಮಾಧಾನಪಡಿಸಿ ಭರತನು ಬಂದಿರಬಹುದಾದ ಕಾರಣ ಅರಿಯುವ ಯತ್ನ ಮಾಡುವ ರಾಮ. ನಂತರ ತನ್ನ ಅಸಹಾಯಕತೆಯನ್ನು ಪ್ರದರ್ಶಿಸುವ ಭರತ, ಅಣ್ಣನ ಮೇಲಿನ ಭಕ್ತಿಯನ್ನು ತೋರುವ ಅನುಜ, ಅರಮನೆಗೆ ಹಿಂದಿರುಗುವಂತೆ ಬೇಡಿಕೊಳ್ಳುವ ಪ್ರಸಂಗ, ಕೊನೆಗೆ ಅವನ ಪಾದರಕ್ಷೆಯನ್ನು ತಲೆಯ ಮೇಲೆ ಹೊತ್ತು ಅರಮನಗೆ ತೆರಳುವ ಮುನ್ನ ರಾಮನಿಂದ ಪಡೆದುಕೊಳ್ಳುವ ವಚನ... ಹೀಗೆ ಇಷ್ಟು ವಿಷಯಗಳಲ್ಲಿ ಹೆಚ್ಚು ಕಮ್ಮಿ ನವರಸಗಳೆಲ್ಲವೂ ಕಂಡು ಬರುತ್ತದೆ. ಚಪ್ಪಲಿ ಕಾಲಿಗೆ ಮಾತ್ರ ಎಂದಾದಲ್ಲಿ ಪಾದರಕ್ಷೆ ಎಂದಾಗ ತಲೆ ಮೇಲೂ ಹೊರಲು ಯೋಗ್ಯತೆ ಸಿಗುತ್ತದೆ ಎಂಬುದಕ್ಕೆ ಇದಕ್ಕಿಂತಾ ಇನ್ಯಾವ ಉದಾಹರಣೆ ನೀಡಲು ಸಾಧ್ಯ?

Be comfortable in your shoes

'ಶೂ' ವಿಷಯಕ್ಕೆ ಬಂದಾಗ ಗಾಜಿನ shoes ಕಥೆ ಇರುವ Cindrella ಕಥೆ ನೆನಪಾಗದೇ ಇದ್ದೀತೇ? ಒಂದು ಪಾದರಕ್ಷೆ ಅವಳ ಜೀವನ ಗತಿಯನ್ನೇ ಬದಲಿಸಿತು ಎನ್ನುವ ಮುನ್ನ fairy ಮಾತೆಯನ್ನು ಮರೆಯದಿರಿ.

ಹೆಣ್ಣು ನಿಜಕ್ಕೂ ಸಂತಸದಿಂದ ಇದ್ದಿದ್ದರೆ ಇಂಥದೊಂದು ದಿನ ಬೇಕಿತ್ತೇ?ಹೆಣ್ಣು ನಿಜಕ್ಕೂ ಸಂತಸದಿಂದ ಇದ್ದಿದ್ದರೆ ಇಂಥದೊಂದು ದಿನ ಬೇಕಿತ್ತೇ?

ಇತಿಹಾಸದ ಪ್ರಕಾರ, ಮನುಷ್ಯ ಚಪ್ಪಲಿ ಅಥವಾ ಪಾದರಕ್ಷೆ ಧರಿಸಲು ಆರಂಭಿಸಿ 40 ಸಾವಿರ ವರುಷಗಳೇ ಕಳೆದಿವೆಯಂತೆ! ನಿಖರವಾಗಿ ಯಾರೂ ಹೇಳಿಲ್ಲದಿದ್ದರೂ ಪುರಾವೆಗಳು ಹೀಗೆ ಎಂದು ಹೇಳಿದೆ. ಚಪ್ಪಲಿಗಳನ್ನು ಧರಿಸಿದಾಗಲೂ ಮಾನವನ ಪಾದಗಳು ಅಗಲವಾಗಿದ್ದು, ಎರಡು ಬೆರಳುಗಳ ನಡುವಿನ ಅಂತರ ಹೆಚ್ಚಾಗಿತ್ತು. ಶೂ'ಗಳ ಅವಾಂತರ.

ಪಾದಗಳಿಗೆ ಶೂ ಹಾಕಿಕೊಳ್ಳುವುದು ಎಂದರೆ ಅಳತೆ ಸರಿಯಾಗಿರಬೇಕು. ಅರ್ಥಾತ್ ಪಾದಗಳಿಗೆ ಕಚ್ಚಿಕೊಂಡ ಹಾಗೆ ಕೂರಬಾರದು ಅಂತೆಯೇ ಅತೀ ಜಾಗವೂ ಇರಬಾರದು. ಒಮ್ಮೆ ಶೂಗಳು ಧರಿಸಲು ಆರಂಭಿಸಿದಂತೆ ಮನುಷ್ಯನ ಪಾದಗಳ structure ಕ್ರಮೇಣ ಬದಲಾಗಲು ಆರಂಭವಾಯಿತು. ಅಂದರೆ ಬಾಲಿವುಡ್ ತಾರೆಯರಂತೆ ಅಹೋರಾತ್ರಿ ಬದಲಾಯಿತು ಅಂತಲ್ಲ. ಪಾದಗಳ ಅಗಲ ಕಡಿಮೆಯಾಯಿತು. ಬೆರಳುಗಳ ನಡುವಿನ ಅಂತರ ಕಡಿಮೆಯಾಯಿತು. ಬೆರಳುಗಳ ಸೈಜ್ ಕಡಿಮೆಯಾಯಿತು. ಒಟ್ಟಾರೆ ಒಂದು ಪಾದದ ಸೈಜ್ ಕಡಿಮೆಯಾಯಿತು. ಒಂದು ರೂಮಿನಲ್ಲಿ ಕೂಡಿ ಹಾಕಿದರೆ ಬೆಳವಣಿಗೆ ಎಲ್ಲಿಂದ ಆಗುತ್ತೆ ಹೇಳಿ? ಪಾದಗಳಿಗೂ ಜೀವ ಇದೆ ಅಂತ ನಿಮಗೆ ಗೊತ್ತು. ಅವೂ ಕಲಿಯುತ್ತವೆ. ಚಪ್ಪಟೆ ಪಾದಗಳು, ಉಂಡೆ ಪಾದಗಳು ಇವೆಲ್ಲವೂ ಪಾದಗಳ ಕಲಿಕೆಯಿಂದಾಗಿಯೇ ಆಗಿರುವುದು.

Be comfortable in your shoes

ವಿಲಿಯಂ ಮಥಿಯಾಸ್ ಶೋಲ್ (Scholl) ಎಂಬ ವೈದ್ಯಕೀಯ ವಿದ್ಯಾರ್ಥಿ, ಸಂಜೆಯ ವೇಳೆ ಖರ್ಚಿಗಾಗಿ ಬೇಕಿದ್ದ ಹಣವನ್ನು ಸಂಪಾದಿಸಲು ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಹಾಗೆ ಕೆಲಸ ಮಾಡುವಾಗ ಅಲ್ಲಿಗೆ ಬರುವ ಗ್ರಾಹಕರ ಪಾದದ ಸಮಸ್ಯೆಗಳನ್ನು ಗಮನಿಸಿತೊಡಗಿದ. ಆಗ ಅವನಿಗೆ podiatry ಬಗ್ಗೆ ಆಸಕ್ತಿ ಶುರುವಾಯ್ತು. ಪಾದಗಳ ಬಗೆಗಿನ ವೈದ್ಯಕೀಯ ವೃತ್ತಿಯಲ್ಲಿ ಆಸಕ್ತಿ ಹೊಂದಿ, ಆತನದ್ದೇ ಒಂದು ಶೂ ಕಂಪನಿ ಕೂಡ ತೆರೆದು ಇಂದು Dr.Scholls ಎಂಬ ಕಂಪನಿ ಜಗತ್ತಿನ ಮನೆಮಾತಾಗಿದೆ.

ಇಂದಿನ ದಿನಗಳಲ್ಲಿ ಜಗತ್ತಿನ ಎಲ್ಲೆಡೆ ಕಂಡುಬಂದಿರುವ ಒಂದು ಉತ್ತಮ ಬೆಳವಣಿಗೆ ಎಂದರೆ ಓಟ, the run... ಮಕ್ಕಳ ಒಂದು ಮೈಲಿ / ಕಿಲೋಮೀಟರು ಓಟದಿಂದ ಹಿಡಿದು, ಐದು ಮೈಲಿ, ಹತ್ತು ಮೈಲಿ, half ಮ್ಯಾರಥಾನ್, ಮ್ಯಾರಥಾನ್ ಓಟಗಳಲ್ಲಿ ಎಲ್ಲ ವಯೋಮಿತಿಯವರೂ ಬಹಳ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಓಟಗಾರರು ತಮ್ಮ ಓಟಕ್ಕೆ ಸೂಕ್ತವಾದ ಶೂಗಳನ್ನು ಖರೀದಿಸುವುದೂ ಈ ಓಟದ ಒಂದು ಮುಖ್ಯವಾದ ಅಂಗ. ಹಾಕಿಕೊಳ್ಳುವ ಶೂ ಸರಿಯಾಗಿ ಇಲ್ಲದಿದ್ದರೆ ಓಟವೇ ಕುಂಠಿತವಾಗಬಹುದು. ಓಟದ ದಿನ ಓಟಗಾರರ ಶೂಗಳಿಗೆ ಒಂದು ಚಿಪ್ ಅಳವಡಿಸಿ ಅವರುಗಳು ಆ ಓಟಕ್ಕೆ ತೆಗೆದುಕೊಂಡು ಸಮಯವನ್ನು ಅಳೆಯುತ್ತಾರೆ.

ಕೇಳಿಸಿಕೊಳ್ಳುವುದಕ್ಕೂ, ಆಲಿಸುವುದಕ್ಕೂ ಏನು ವ್ಯತ್ಯಾಸ? ಅಲ್ಲೇ ಇದೆ ಸ್ವಾರಸ್ಯ ಕೇಳಿಸಿಕೊಳ್ಳುವುದಕ್ಕೂ, ಆಲಿಸುವುದಕ್ಕೂ ಏನು ವ್ಯತ್ಯಾಸ? ಅಲ್ಲೇ ಇದೆ ಸ್ವಾರಸ್ಯ

ಶಾಲೆಗೇ ಹೋಗುವ ದಿನಗಳಲ್ಲಿ ಯುನಿಫಾರ್ಮ್ ಎಂದು ವಾರದ ಐದು ದಿನಗಳು ಕಪ್ಪು ಶೂಸ್, ಬಿಳೀ ಸಾಕ್ಸ್ ಧರಿಸಬೇಕಿತ್ತು. ಅರ್ಧ ದಿನವಾದ ಶನಿವಾರ canvas ಶೂಸ್. ಹೈಸ್ಕೂಲ್'ನಲ್ಲಿ ವಾರದ ಐದೂ ದಿನಗಳು ಬಿಳೀ ಶೂಸ್ ಎಂದೇ ನೆನಪು. ಒಮ್ಮೆ ಕಾಲೇಜು ಮೆಟ್ಟಿಲು ಹತ್ತಿದ್ದೇ ತಡ, ಕೆಲಸಕ್ಕೆ ಸೇರೋ ತನಕ ಶೂಸ್ ಮುಟ್ಟಿದ್ದೇ ಇಲ್ಲ.

Be comfortable in your shoes

ಡ್ರೆಸ್ ಶೂಸ್ ಜೊತೆ ಶುರುವಾಗಿದ್ದು Sneakers. ಈ Sneakers ಎಂದರೆ ಏನು ಅಂತ ನಿಮಗೆ ಗೊತ್ತೇ ಇದೆ. ಬಾಸ್ಕೆಟ್ ಬಾಲ್, ಟೆನಿಸ್, ರನ್ನಿಂಗ್, ಅಥ್ಲೆಟಿಕ್ಸ್, ಜಿಮ್ ಹೀಗೇ ಅದರದರ ಕೆಲಸಗಳಿಗೆ ಬೇಕಿರೋ ಶೂಗಳನ್ನು Sneakers ಎನ್ನುತ್ತಾರೆ. ನನಗೆ ಈ ಯಾವ ರೀತಿ ಶೂಗಳನ್ನು ಖರೀದಿಸಿದರೂ ನಡೆಯುತ್ತದೆ. ಆದರೆ ನಮ್ಮ ಮನೆಯಲ್ಲಿ ಒಂದು ಜೊತೆ ಬೆಳೆಯೋ ಪಾದಗಳು ಇದೆಯೆಲ್ಲಾ ಅದು ಹಿತವಾದ ಪ್ರಾಬ್ಲಮ್. ಅರ್ಥಾತ್ ಸಕತ್ತಾಗಿರೋ ಶೂ ಕೊಂಡ ಆರು ತಿಂಗಳಿಗೆ ಮಗ ಉದ್ದ ಆಗಿರುತ್ತಾನೆ. ಪಾದ ಬೆಳೆದಿರುತ್ತೆ. ಆರು ತಿಂಗಳ ಹಿಂದಿನ ವಾಮನ ಈಗ ಹೇಗೆ ತ್ರಿವಿಕ್ರಮ ಅನ್ನೋದೇ ಅರ್ಥವಾಗದ ವಿಷಯ. ಒಂದೂ ದಾರ ಬಿಟ್ಟುಕೊಂಡಿರದ ಶೂಸ್ ಈಗ useless. ನನಗೂ ಆಗೋಲ್ಲ, ಅವನಿಗೂ ಆಗೋಲ್ಲ. ನಿಮ್ಮ ಅನುಭವ ಹೇಳಿ.

ಇಂಟರ್ವ್ಯೂ ದಿರಿಸಿನಲ್ಲಿ ಶೂಗಳ ಪಾತ್ರ ದೊಡ್ಡದು. ಕಪ್ಪು ಬಣ್ಣದ (ಅಥವಾ ಕಂದು) ಶೈನಿಂಗ್ ಇರುವ ಶೂಗಳು ಆ ವ್ಯಕ್ತಿಗೆ ಶೋಭೆ ತರುತ್ತದೆ. ಹಾಗಂತ ಕ್ರಿಕೆಟ್ ಆಡುವಾಗ ಶೈನಿಂಗ್ ಇರುವ ಕರೀ ಶೂ ಧರಿಸದಿರಿ. ಎಲ್ಲ ಶೂಗಳು ಕಾಲಿಗೆ ಧರಿಸಿದರೂ ಅದರದರ ಸ್ಥಾನ ಅದಕ್ಕಿದೆ.

ಒಬ್ಬೊಬ್ಬರೂ ಭಿನ್ನ, ಆಕಾರವೂ ಭಿನ್ನ, ವಿಕಾರವೂ ಭಿನ್ನ! ಒಬ್ಬೊಬ್ಬರೂ ಭಿನ್ನ, ಆಕಾರವೂ ಭಿನ್ನ, ವಿಕಾರವೂ ಭಿನ್ನ!

ಇನ್ನು ಮಿಕ್ಕ ಮಾತೆಲ್ಲಾ ಮಹಿಳಾಮಣಿಗಳ ಪಾದರಕ್ಷೆಯ ಬಗ್ಗೆ. ನಿನ್ನ ಮೋಹಕ ಪಾದಗಳನ್ನು ಸದಾ ಅಪ್ಪಿ ಹಿಡಿಯಲು ಚಪ್ಪಲಿಯಾಗಿಯಾದರೂ ಹುಟ್ಟಿ ಬರಬೇಕು ಎಂದು ಪ್ರಿಯತಮೆಯನ್ನು ಹೊಗಳುತ್ತಾನೆ ಕವಿ. Casual shoes ಎಂಬೋದು ದೈನಂದಿನ ಕೆಲಸಗಳಿಗೆ ಬಳಸಲು ಉಪಯೋಗಿಸುವ ಚಪ್ಪಲಿ. ಮನೆಯ ಬಾಗಿಲಿಂದ ಗೇಟಿನವರೆಗೆ, ಗಿಡಕ್ಕೆ ನೀರು ಹಾಕಲು, ಕಸದ ಡಬ್ಬ / ಚೀಲವನ್ನು ಮನೆಯ ಹೊರಗಿಡಲು ಇತ್ಯಾದಿ ಕೆಲಸಗಳಿಗೆ ಬಳಸುವಂಥದ್ದು. ಓ! ಹವಾಯಿ ಚಪ್ಪಲಿ ಎನ್ನದಿರಿ. ಅದು ಬಾತ್ ರೂಮ್ ಚಪ್ಪಲಿ. ಅದೇ ಬೇರೆ!

Be comfortable in your shoes

ಮನೆಯೊಳಗಿನ ಕಸ ಪಾದಕ್ಕೆ ಕಿಸ್ ಕೊಡದೆ ಇರಲಿ ಎಂದು ಬಳಸಲೇ ಬೇರೆ ಚಪ್ಪಲಿ ಇರುತ್ತದೆ. ಇದನ್ನು ಬಾಗಿಲಿನ ಆಚೆ ಧರಿಸುವಂತಿಲ್ಲ. ಇವಕ್ಕೆ ಸಾಧಾರಣ ಹೀಲ್ಸ್ ಅಥವಾ ಹೀಲ್ಸ್ ಇಲ್ಲದೆಯೇ ಇರಬಹುದು. ಕುಳ್ಳ ಹೆಂಗಸರು ಎತ್ತರವಾಗಿ ಕಾಣಲು, ಎತ್ತರ ಹೆಂಗಸರು ಇನ್ನೂ ಎತ್ತರವಾಗಿ ಕಾಣಲು ಹೀಲ್ಸ್ ಬಳಸುತ್ತಾರೆ. ಗಂಡಸರು ಎತ್ತರವಾಗಿ ಕಾಣಲು ಇನ್ನೂ ಹೀಲ್ಸ್ ಹಾಕಲು ಶುರುಮಾಡಿಲ್ಲ.

ದಿನಕ್ಕೆ ತಕ್ಕಂತೆ, ಮಳೆ / ಚಳಿ / ಬಿಸಿಲು ಇತ್ಯಾದಿಗಳಿಗೆ ತಕ್ಕಂತೆ, ಧರಿಸಿದ ಬಟ್ಟೆಗೆ ತಕ್ಕಂತೆ ಹೆಂಗಳ ಪಾದರಕ್ಷೆಯನ್ನು 25 (ಇಪ್ಪತ್ತೈದು) ವಿಧ ಇದೆ ಎನ್ನುತ್ತಾರೆ ದೊಡ್ಡವರು! ಹೌದೇ? ನಾನ್ಯಾಕೆ ಸುಳ್ಳು ಹೇಳಲಿ?

ವೆಡ್ಜ್ (wedge) ಎಂಬುದು ಹೀಲ್ಸ್ ಆದರೂ ಇಡೀ ಚಪ್ಪಲಿಯ soleಗೆ ಇದ್ದು ಗ್ಯಾಪ್ ಇರುವುದಿಲ್ಲ. ಬ್ಯಾಲೆ ನರ್ತಕಿಯರು ಧರಿಸುವಂಥಾ ಶೂಗಳಿಗೆ ballerinas ಎನ್ನುತ್ತಾರೆ. mules ಎಂಬುದು ಒಂದು ರೀತಿ ಹಿಮ್ಮಡಿ ಮುಚ್ಚದ slip-on, ಹಿಮ್ಮಡಿ ಮುಚ್ಚಿದರೆ ಅವು court ಶೂಸ್. ಪಾದಗಳನ್ನೇ ಮುಚ್ಚುವುದಲ್ಲದೆ ಇನ್ನು ಕೊಂಚ ಮೇಲೆ ಇದ್ದರೆ ಅವು ಬೂಟ್ಸ್. ಕೊಂಚವೇ ಮೇಲಿನ ತನಕ ಇದ್ದಲ್ಲಿ ಅವು chelsea ಬೂಟ್ಸ್. ಇನ್ನೊಂದು ಚೂರು ಮೇಲಿದ್ದರೆ ಮಿಲಿಟರಿ ಬೂಟ್ಸ್. ಅದಕ್ಕಿಂತ ಕೊಂಚ ಮೇಲಿದ್ದು ಮಂಡಿಯ ತನಕ ಇದ್ದಲ್ಲಿ ಅವು calf ಬೂಟ್ಸ್. ಕುದುರೆ ಸವಾರಿ, ಅಥವಾ snow ಬೀಳುವ ಪ್ರದೇಶಗಳಲ್ಲಿ ಇವುಗಳ ಬಳಕೆ ಹೆಚ್ಚು. ಇವುಗಳನ್ನು ಬಿಟ್ಟರೆ brogues, brogues, loafers ಇತ್ಯಾದಿ ಇತ್ಯಾದಿ...

ಇಷ್ಟೆಲ್ಲಾ ಇದ್ದಾಗಿಯೂ ಮನೆಯಾಕೆ ಪಾರ್ಟಿಗೆ ಹೋಗೋ ಮುನ್ನ 'ಈ ಸೀರೆಗೆ / ಡ್ರೆಸ್'ಗೆ ಮ್ಯಾಚಿಂಗ್ ಚಪ್ಪಲಿನೇ ಇಲ್ಲ!' ಅಂತ ಗೊಣಗೋದು ಸಾಮಾನ್ಯ.

ಮನುಷ್ಯನ ಪಾದ ಇಡೀ ದೇಹದ ಭಾರ ಹೊರುವ ಒಂದು ಅಪೂರ್ವ ಕಲಾಕೃತಿ ಎನ್ನಬಹುದು. ಇಪ್ಪತ್ತೆಂಟು ಮೂಳೆಗಳನ್ನು ಹೊಂದಿ ಮೂವತ್ತಮೂರು ಜಾಯಿಂಟ್ಸ್ ಹೊಂದಿರುವ ಈ ಪಾದವನ್ನು ಕಾಪಾಡಿಕೊಳ್ಳಿ. ಪಾದ ಸ್ಥಿರವಾಗಿದ್ದರೆ ದೇಹ ಸ್ಥಿರವಾಗಿ ನಿಲ್ಲುತ್ತೆ.

ಸಾಮಾನ್ಯವಾಗಿ ಎಲ್ಲರೂ ಅವರವರ ಶೂ'ಗಳಲ್ಲಿ comfortable ಆಗಿ ಇರುತ್ತಾರೆ. ಮತ್ತೊಬ್ಬರ ಶೂ ಧರಿಸಿ ಅವರಂತೆ ಆಡಲು ಹೋದಾಗ ಮುಗ್ಗರಿಸುವುದೇ ಹೆಚ್ಚು. Be comfortable in your shoes. Don't step into someone else's shoes.

English summary
Be comfortable in your shoes. Don't step into someone elses shoes. Beautiful write up on footwear by Srinath Bhalle from Richmond, USA. Why do we wear shoes, why has it taken so much importance in our life?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X