ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲ್ಟ್ ಬಿಗಿದು ನಿಲ್ಲೋದು ಅಂದ್ರೆ ಟೊಂಕ ಕಟ್ಟಿ ನಿಲ್ಲೋದು ಅಂತ ಅರ್ಥ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮೊನ್ನೆ ಹೀಗೆ ಒಂದು ಕಡೆ ಹಲವರು ಸೇರಿದ್ದಾಗ ಚಾಣಕ್ಯನ ಬಗ್ಗೆ ಮಾತು ಬಂತು... ಆಗ ಒಬ್ಬರು, ಚಾಣಕ್ಯ ಬಹಳ ಗ್ರೇಟ್! ರಾಜಾ ಧನಾನಂದ ಅವನನ್ನು ಅವಮಾನ ಮಾಡಿದಾಗ, ಅವನು ತನ್ನ ಬೆಲ್ಟ್ ಅನ್ನು ಕತ್ತರಿಸಿ ಹಾಕಿ, ಶಿಖೆಯನ್ನು ಬಿಚ್ಚಿ, ಧನಾನಂದನನನ್ನು ಉಚ್ಛಾಟಿಸುವವರೆಗೂ ಶಿಖೆಯನ್ನು ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಎಂದೆಲ್ಲಾ ಹೇಳ್ತಾ ಹೋದರು. ಮಿಕ್ಕೆಲ್ಲಾ ವಿಚಾರಗಳ ಬಗ್ಗೆ ನಾನು ಗಮನ ಅಷ್ಟಾಗಿ ಕೊಡದೇ ಹೋದರೂ ಅವರಾಡಿದ ಒಂದು ಪದ "ಬೆಲ್ಟ್ " ಈ ವಾರದ ಬರಹಕ್ಕೆ ನಾಂದಿಯಾಯ್ತು ಎನ್ನಬಹುದು.

ಬೆಲ್ಟ್ ಅಂದ್ರೆ ಒಂದು ತುದಿಯಲ್ಲಿ ಆರಂಭಿಸಿ ಆ ಮತ್ತೊಂದು ತುದಿ ಮೊದಲಿನ ತುದಿಗೆ ಕೊನೆಯಾಗೋದು... ಅರ್ಥಾತ್ ಮೊದಲು ಕೊನೆಗಳ ಸಮಾಗಮವೇ ಬೆಲ್ಟ್. ಸಂದರ್ಭಾನುಸಾರ, ಎಲ್ಲಿಂದ ಬೇಕಾದರೂ ಆರಂಭಿಸಿ ಅಡ್ಡಿಯಿಲ್ಲ ಮತ್ತೆ ಅಲ್ಲಿಗೇ ಮುಟ್ಟುತ್ತೇವೆ. ಸುಮ್ಮನೆ ವೃತ್ತಾಕಾರ ಎನ್ನಬಹುದಿತ್ತು ಅಲ್ಲವೇ? ಅಲ್ಲ, ಇದು ವೃತ್ತ ಖಂಡಿತ ಅಲ್ಲ. ವೃತ್ತದಂತೆ ಆರಂಭ ಮತ್ತು ಅಂತ್ಯ ಸೇರಿದರೂ ವ್ಯಾಸ ಭಿನ್ನವಾಗಿರೋದ್ರಿಂದ ವೃತ್ತ ಆಗಲು ಸಾಧ್ಯವಿಲ್ಲ.

'ವಿಶ್ವ ತಲೆ ದಿನ' ಅಂತ ಯಾವುದೂ ಇಲ್ಲ, ದಿನವೂ ತಲೆ ದಿನವೇ! 'ವಿಶ್ವ ತಲೆ ದಿನ' ಅಂತ ಯಾವುದೂ ಇಲ್ಲ, ದಿನವೂ ತಲೆ ದಿನವೇ!

ಅಕ್ಕಿ, ಗೋಧಿ, ರಾಗಿ ಇತ್ಯಾದಿಗಳನ್ನು ಮಷೀನಿಗೆ ಹಾಕಿಸಿಕೊಂಡು ಬರುತ್ತಿದ್ದ ದಿನಗಳಲ್ಲಿ ಇಂಥಾ ಬೆಲ್ಟ್ ನೋಡಿರುತ್ತಿದ್ದೆವು. ಎರಡು ಬದಿಗಳಲ್ಲಿ ತಿರುಗಾಲಿಗಳಿದ್ದು ಅದರ ಮೇಲೆ ಬೆಲ್ಟ್ ಇರುತ್ತಿತ್ತು. ಮಾಲೀಕನೋ ದಿನದ ಕೊನೆಗೆ ಆ ಬೆಲ್ಟ್ ಅನ್ನು ಕಳಚಿ ಇಡುತ್ತಿದ್ದರು ಮತ್ತೆ ಹಗಲಿನಲ್ಲಿ ಅಂಗಡಿ ತೆರೆದ ಮೇಲೆ ಬೆಲ್ಟ್ ಹಾಕೋದನ್ನ ನೋಡುತ್ತಿದ್ದೆವು. ಕೆಲವೊಮ್ಮೆ ಮಷೀನ್ ಓಡುವಾಗ ಬೆಲ್ಟ್ ಕಳಚಿ ಬಿದ್ದದ್ದೂ ಇದೆ. ಅಂಗಡಿ ತೆರೆದಿದ್ದರೂ 'ಬೆಲ್ಟ್ cut ಆಗಿದೆ, ರಿಪೇರಿ ಆಗೋದು ಲೇಟ್ ಆಗುತ್ತೆ' ಅಂತ ಹೇಳುವ ಅಂಗಡಿಯವನನ್ನು ಬೈದುಕೊಂಡು ಇನ್ನೊಂದು ಮಷೀನ್ ಅಂಗಡಿಯನ್ನು ಹುಡುಕಿಕೊಂಡು ಹೋಗೋದು ಅಂದು ಸರ್ವೇ ಸಾಮಾನ್ಯ ದೃಶ್ಯ.

An essay about the belts we come across in our life

ಫ್ಯಾಕ್ಟರಿಗಳಲ್ಲಿ conveyor ಬೆಲ್ಟ್'ಗಳು ಇರುತ್ತವೆ. ಒಂದು ಬದಿಯಿಂದ ಮತ್ತೊಂದು ತುದಿಯವರೆಗೂ ಈ ಬೆಲ್ಟ್ ನಿಧಾನವಾಗಿ ಓಡುತ್ತಾ ಸಾಗಿರುತ್ತದೆ. ಆ beltನ ಉದ್ದಕ್ಕೂ ಅಲ್ಲಲ್ಲೇ stationಗಳು ಇದ್ದು, ಪ್ರತೀ stationನಲ್ಲಿ ಯಾವುದೋ ಒಂದು ಪಾರ್ಟ್ ಜೋಡಿಸಲಾಗುತ್ತದೆ. ಒಂದು ಉತ್ಪನ್ನ ಬಂದಾಗ ಅದಕ್ಕೆ ಏನನ್ನೋ ಜೋಡಿಸಿ ಮತ್ತೆ ಮುಂದಕ್ಕೆ ಕಳಿಸುತ್ತಾರೆ. ಆ ಮುಂದಿನವರು ಮತ್ತೇನನ್ನೋ ಜೋಡಿಸಿ ಮುಂದೆ ಕಳಿಸುತ್ತಾರೆ ಹೀಗೆ. ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವಷ್ಟರಲ್ಲಿ ಆ ಉತ್ಪನ್ನಕ್ಕೆ ಒಂದಷ್ಟು ಅಲಂಕಾರಗಳು ನಡೆದಿರುತ್ತದೆ. ಇಂದಿನ ದಿನಗಳಲ್ಲಿ ಅವೆಲ್ಲವೂ automated ಆಗಿದೆ ಅನ್ನಿ.

ದಿನನಿತ್ಯದಲ್ಲಿ ನಾವು ಕಾಣೋ ಬೆಲ್ಟ್'ಗಳಲ್ಲಿ ಪ್ಯಾಂಟ್'ಗೆ ಏರಿಸುವ ಬೆಲ್ಟ್ ಕೂಡಾ ಒಂದು. ಹಲವಾರು ಸೈಜ್'ಗಳಲ್ಲಿ ಮತ್ತು ಹಲವಾರು ಮೆಟೀರಿಯಲ್'ಗಳಲ್ಲಿ ಲಭ್ಯ. ಸಾಮಾನ್ಯವಾಗಿ ಕಪ್ಪು ಮತ್ತು ಕಂದು shadeಗಳೇ ಹೆಚ್ಚು ಕಂಡು ಬಂದರೂ ಬೇರೆ ಬೇರೆ ಬಣ್ಣಗಳಲ್ಲೂ beltಗಳು ಲಭ್ಯ. Reversible ಬೆಲ್ಟ್'ಗಳಲ್ಲಿ ಒಂದೆಡೆ ಕಪ್ಪು ಮತ್ತೊಂದೆಡೆ ಕಂದು ಇರುತ್ತದೆ. ಕೆಲವೊಮ್ಮೆ ಪ್ಯಾಂಟ್ ಜೊತೆಗೇ ಬೆಲ್ಟ್.

ಬೇಕಿದ್ದಾಗ ಜಾಗ ಬಿಡಿ, ಬೇಡದಿದ್ದಾಗ ಜಾಗ ಬಿಡಲೇಬೇಡಿ! ಬೇಕಿದ್ದಾಗ ಜಾಗ ಬಿಡಿ, ಬೇಡದಿದ್ದಾಗ ಜಾಗ ಬಿಡಲೇಬೇಡಿ!

ಊರು ಕೇರಿಗೆ ಅಂತ ಹೋದಾಗ ಪ್ಯಾಂಟ್ ತೆಗೆದುಕೊಂಡು ಹೋದವರು ಬೆಲ್ಟ್ ಮರೆತರೂ ಅಂದ್ರೆ ಅದೊಂದು ಫಜೀತಿಯೇ ಸರಿ. ಎಲ್ಲಿ ಪ್ಯಾಂಟ್ ಉದುರಿ ಹೋಗುತ್ತೋ ಎಂಬ ಭೀತಿ ಕಾಡುತ್ತಾ ಇರುತ್ತೆ. ಬೆಲ್ಟ್ ಮರೆತು ಬಂದವರು ದಿನಸಿ ಅಂಗಡಿಯಲ್ಲಿ ಗೋಣಿಯ ಹುರಿಯನ್ನು ಕೊಂಡು ಕಟ್ಟಿಕೊಂಡಿದ್ದನ್ನೂ ನೋಡಿದ್ದೇನೆ. ಗೋಣಿಹುರಿಯನ್ನು belt ಆಗಿ ಕಟ್ಟಿಕೊಂಡು ಪ್ಯಾಂಟ್ ಏರಿಸಿ in-shirt ಮಾಡಿದವರು ಹೇಗೆ ಕಾಣುತ್ತಾರೆ ಎಂದು ಊಹಿಸಿಕೊಳ್ಳಿ!

An essay about the belts we come across in our life

ದಿನನಿತ್ಯದಲ್ಲಿ ಪಂಚೆಯನ್ನು ಉಡದ ಮಂದಿಗೆ ಪೂಜೆ ಪುನಸ್ಕಾರದ ಸಮಯದಲ್ಲಿ ಪಂಚೆ ಉಟ್ಟುಕೊಳ್ಳಬೇಕು ಎಂದಾಗ ಚಳಿ ಜ್ವರವೇ ಬರಬಹುದು. ಈ ನಡುವೆ strap ಸಹಿತ ರೆಡಿಮೇಡ್ ಪಂಚೆಗಳು ಲಭ್ಯ. ಹಲವರು ಪಂಚೆಯ ಮೇಲೆ ಬೆಲ್ಟ್ ಕಟ್ಟಿಕೊಳ್ಳುತ್ತಾರೆ. ಕೆಲವರು ಶಲ್ಯವನ್ನೇ ಬೆಲ್ಟ್ ರೀತಿ ಬಿಗಿಯುತ್ತಾರೆ. ಒಟ್ಟಾರೆ ಈ ಬೆಲ್ಟ್ ಮಾನ ಸಂರಕ್ಷಣೆಯ ಸಾಧನ.

ಅಂದ ಹಾಗೆ ಬೆಲ್ಟ್ ಅಂದ ಮಾತ್ರಕ್ಕೆ ಗಂಡುಗಳಿಗೆ ಮಾತ್ರ ಅಂತೇನಲ್ಲ. ಹೆಂಗಳ ಬೆಲ್ಟ್'ಗಳೂ ಹೇರಳವಾಗಿ ಲಭ್ಯ. ಧರಿಸುವ ಪ್ಯಾಂಟ್'ಗೆ ಮ್ಯಾಚ್ ಆಗುವಂಥಾ ಬೆಲ್ಟ್'ಗಳು ಬಿಡಿ ಬಿಡಿಯಾಗಿಯೂ ಲಭ್ಯ. ಕೆಲವೊಮ್ಮೆ skirt/pantಗಳಿಗೆ ದಿರಿಸಿನ ಜೊತೆಯೇ ಬೆಲ್ಟ್ ಲಭ್ಯ. ಗಂಡು ಬೆಲ್ಟ್'ಗಳಿಗಿಂತಲೂ ಚಿತ್ತಾಕರ್ಷಕವಾದ ಬೆಲ್ಟ್'ಗಳು ಹೆಂಗಳ ಬೆಲ್ಟ್'ಗಳಲ್ಲಿ ಲಭ್ಯ ಎಂದರೆ ಅಚ್ಚರಿ ಆಗುವುದಿಲ್ಲ ಅಲ್ಲವೇ?

ಸರ್ವೇ ಸಾಮಾನ್ಯವಾಗಿ ಎಲ್ಲ ಪ್ಯಾಂಟ್ ಗಳಿಗೂ belt ಲೂಪ್'ಗಳು ಇದ್ದೇ ಇರುತ್ತದೆ. ಬಟ್ಟೆ ಕೊಟ್ಟು pant ಹೊಲೆಯಲು ಹಾಕುವಾಗ ಆ tailor ಕೇಳುತ್ತಿದ್ದ ಹಲವಾರು ಪ್ರಶ್ನೆಗಳಲ್ಲಿ ಇದೂ ಒಂದು 'belt ಲೂಪ್' ಇಡಬೇಕಾ? ಅಂತ . . . ಅವನು ಕೇಳದೇ ಹೋದಾಗ ಅಥವಾ ಹೊಲೆಯುವುದನ್ನು ಮರೆತಾಗ belt loop ಇಲ್ಲದ ಪ್ಯಾಂಟ್ ಕಂಡಾಗ ಸ್ನೇಹಿತರ ಪ್ರಶ್ನೆ 'ಯಾವ ನನ್ ಮಗ ಪ್ಯಾಂಟ್ ಹೊಲೆದನೋ?" ಅಂತ!

ದುಷ್ಟ ಶಕ್ತಿಗಳನ್ನು ದೂರವಿಡುವ ಒಂದು ಗಂಟೆಯ ಸುತ್ತ! ದುಷ್ಟ ಶಕ್ತಿಗಳನ್ನು ದೂರವಿಡುವ ಒಂದು ಗಂಟೆಯ ಸುತ್ತ!

ಹಳೆಯ ಸಿನಿಮಾಗಳಲ್ಲಿ 'ಸಂಪತ್' ಅವರು ಧರಿಸುವ ಪ್ಯಾಂಟ್'ಗಳಿಗೆ suspenders ಇರುತ್ತಿತ್ತು. ಲಾರೆಲ್-ಹಾರ್ಡಿ ಜೋಡಿ ಇಂಥಾ suspenders ಧರಿಸುವುದನ್ನು ನೋಡಿರಬಹುದು. ಸಾಮಾನ್ಯವಾಗಿ ಸೂಟು ಧರಿಸುವವರು suspenders ಬಳಸುತ್ತಾರೆ. ಹೆಗಲ ಮೇಲೆ ಹಾದು ಹೋಗುವ ಈ ರೀತಿಯ ಬೆಲ್ಟ್'ಗಳು ಪ್ಯಾಂಟ್'ನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕ್ಲಿಪ್ ಮಾಡಿಕೊಳ್ಳಬೇಕು. ಕ್ಲಿಪ್ ಕೆಟ್ಟದಾಗಿ ಕಾಣುತ್ತೆ ಗುಂಡಿ ಇದ್ದರೆ ಲೇಸು ಅಂತಾರೆ ಬಲ್ಲವರು. ನಾನು ಬಳಸಿ ನೋಡಿಲ್ಲ.

ಬೆಲ್ಟ್ ಬಳಕೆಗೆ ಬಂದದ್ದು ಯಾವಾಗ ಅಂತ ಕೇಳಿದರೆ, ನಮ್ಮಲ್ಲಿ ಬಳಕೆಗೆ ಬಂದು ಯುಗಗಳೇ ಕಳೆದಿವೆ ಅಂತ ಹೇಳಬಹುದು ಅಲ್ಲವೇ? ಸರಿದು ಹೋಗುತ್ತಿದ್ದ ಸರ್ಪವನ್ನೇ ಬೆಲ್ಟ್ ಆಗಿ ಬಿಗಿದುಕೊಂಡವ ನಮ್ಮ ಗಣಪತಿ.

ಪೊಲೀಸರ ಖಾಕೀ ದಿರಿಸಿಗೆ ಒಪ್ಪುವ ಕಂದು ಬಣ್ಣದ ಅಗಲವಾದ ಬೆಲ್ಟ್ ಒಂದು ರೀತಿ ಬಹಳ ಶೋಭಾಯಮಾನವಾಗಿ ಕಾಣಿಸುತ್ತದೆ.

An essay about the belts we come across in our life

"ಸೊಂಟಕ್ ಬೆಲ್ಟು ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitನಲ್ಲಿ ಜಾರಿಕೊಳ್ತಾರೋ" ಹಾಡು ಕೇಳಿದ್ದೀರಾ? ಕಾರಿನ ಚಾಲಕ ಬೆಲ್ಟ್ ಏರಿಸಿಕೊಂಡೇ ನಾಲ್ಕು ಚಕ್ರದ ವಾಹನವನ್ನು ಚಲಾಯಿಸಬೇಕು ಎಂಬುದು ಕಾನೂನು. ಚಾಲಕನ ಪಕ್ಕದ passenger ಸೀಟಿನಲ್ಲಿ ಇರುವವರೂ ಬೆಲ್ಟ್ ಏರಿಸಿಕೊಳ್ಳೋದು ಬಹಳ ಉತ್ತಮ. ನಾನು ಯಾವುದೇ ಕಾರಣಕ್ಕೆ ಹಿಂದಿನ ಸೀಟಿನಲ್ಲಿ ಕೂತಿದ್ದರೂ ಬೆಲ್ಟ್ ಏರಿಸಿಕೊಳ್ಳುತ್ತೇನೆ. ಸುಮ್ಕೆ ರಿಸ್ಕ್ ಯಾಕೆ ಅಂತ ಅಷ್ಟೇ!

ಮಕ್ಕಳನ್ನು ಕೂರಿಸುವ carseatಗಳಿಗೂ ಇಂಥಾ ಬೆಲ್ಟ್ ಇರುತ್ತೆ ಅಂತ ಗೊತ್ತಿರಬಹುದು. ನಮ್ಮಲ್ಲಿ ಈ ಚಿಕ್ಕ ಮಕ್ಕಳು (ಭಾರತೀಯ) carseatನಲ್ಲಿ ಕೂರಿಸಿ ಬೆಲ್ಟ್ ಹಾಕಿದ ಕೂಡಲೇ ಅದೇನು ಅಳ್ತಾರೆ ಅಂತೀರಾ! ಯಪ್ಪಾ! ಆಗೆಲ್ಲ ನಮ್ಮ ಗಮನ ವಿದೇಶೀ ಮಕ್ಕಳ ಕಡೆ ಹರಿದಾಗ ದಸರಾ ಗೊಂಬೆಗಳ ಹಾಗೆ ಕೂತು, ಆರಾಮವಾಗಿ ಬೆಲ್ಟ್ ಹಾಕಿಸಿಕೊಂಡು ಕೂಡ್ತಾರೆ. ನಿಯಮ ಪಾಲಿಸಬಾರದು ಅನ್ನೋದು ನಮ್ಮ ರಕ್ತದಲ್ಲೇ ಇದೆಯೋ ಏನೋ!

ಬೆಲ್ಟ್ ಅನ್ನು ನಮ್ಮ ದೇಹಕ್ಕೆ ಬಿಗಿದು ಕೂರಿಸಿದ್ದೇವೆ ಎಂದರೆ ಒಂದು ಬಂಧನಕ್ಕೆ ನಾವು ಅಂಟಿದ್ದೇವೆ ಎಂದಲ್ಲಾ. ಯಾವುದೋ ಒಂದು ಕಾರ್ಯಕ್ಕೆ ಕೈಹಚ್ಚಿದಾಗ ಮಿಕ್ಕ ಆಲೋಚನೆಗಳನ್ನು ಕಟ್ಟಿ ಹಾಕಿ ನಮ್ಮ ಧ್ಯೇಯದತ್ತ ಗಮನಹರಿಸಲು ಸಿದ್ಧವಾಗುತ್ತಿದ್ದೇವೆ ಎಂದರ್ಥ.

ದೈನಂದಿನ ಕೆಲಸಗಳಲ್ಲಿ ನಿಮ್ಮದೇ ನಡವಳಿಕೆಯನ್ನು ಒಮ್ಮೆ ಗಮನಿಸಿಕೊಳ್ಳಿ. ತೊಳೆಯಲು ರಾಶಿ ಪಾತ್ರೆ ಬಿದ್ದಿದೆ ಎಂದಾಗ ಸೆರಗನ್ನು ಸೊಂಟಕ್ಕೆ ಬಿಗಿಯಬಹುದು ಅಥವಾ ಬಳೆಗಳನ್ನು ಹಿಂದಕ್ಕೆ ಸರಿಸಬಹುದು ಅಥವಾ ಜುಟ್ಟು ಕಟ್ಟಿಕೊಂಡು ನಂತರ ಕೆಲಸ ಶುರು ಮಾಡಿಕೊಳ್ಳುತ್ತೀರಾ. Full shirt ಧರಿಸಿರುವ ಗಂಡು ಏನೋ ರಿಪೇರಿ ಕೆಲಸಕ್ಕೆ ಅಂಗಿಯ ತೋಳುಗಳನ್ನು ಮಡಚಿಕೊಂಡು ಕಾರ್ಯಕ್ಕೆ ಸಿದ್ಧನಾಗುತ್ತಾನೆ. ಟೊಂಕ ಕಟ್ಟಿ ನಿಲ್ಲೋದು ಎಂದರೂ ಒಂದೇ, ಬೆಲ್ಟ್ ಬಿಗಿದು ನಿಲ್ಲೋದು ಎಂದರೂ ಒಂದೇ.

ದೈನಂದಿನ ಕಾರ್ಯ ಯಾವುದೇ ಆಗಲಿ, ದೊಡ್ಡ ಕೆಲಸ ಚಿಕ್ಕ ಕೆಲಸ ಎಂಬ ತಾರತಮ್ಯ ತೋರದೆ ಅದನ್ನು ಪ್ರೀತಿಯಿಂದ ಬೆಲ್ಟ್ ಬಿಗಿದು ಮಾಡಿ. ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಜಯ ಇದ್ದೇ ಇರುತ್ತದೆ.

English summary
A Kannada essay by Srinath Bhalle from Richmond, USA, about several types of belts we come across in our life. Belts are integral part of our life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X