ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಡಿಸನ್‌ನಲ್ಲಿ ಉಷಾ ಪ್ರಸನ್ನಕುಮಾರ್ - ಅನುಭವ ಕಥನ

By Shami
|
Google Oneindia Kannada News

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 5 ದಿವಸಗಳ ಅಮೆರಿಕಾ ಯಾತ್ರೆ ಸಂಪನ್ನವಾಗಿ ಇವತ್ತಿಗೆ ಎರಡು ದಿನ ಆಗಿದೆ. ಅವರೀಗ ನವದೆಹಲಿಯಲ್ಲಿದ್ದಾರೆ. ಪಶ್ಚಿಮ ದಿಕ್ಕಿನಿಂದ ಪೂರ್ವಕ್ಕೆ ಹದಿನಾರು ಸಾವಿರ ಕಿಲೋಮೀಟರ್ ವಿಮಾನ ಪ್ರಯಾಣದ ನಂತರ ಹುಲುಮಾನವರಿಗೆ ಆಗುವಂತೆ ಮೋದಿ ಅವರಿಗೂ ಜೆಟ್ ಲ್ಯಾಗ್ ತಗಲಿಕೊಂಡಿದೆ. ಅದು ಯಾರನ್ನೂ ಬಿಡಲ್ಲ. ಇದು ಬರೆಯುತ್ತಿರುವ ಸಮಯಕ್ಕೆ (ಶುಕ್ರವಾರ ಅಕ್ಟೋಬರ್ 3 ಬೆಳಗ್ಗೆ 11 ಗಂಟೆ) ಮೋದಿ ಸಾಹೇಬರು ಅದು ಹೇಗೋ ಸಾವರಿಸಿಕೊಂಡು ನಿದ್ದೆ ಅರನಿದ್ದೆಯಿಂದ ಎದ್ದು ಬಂದು ಆಕಾಶವಾಣಿಯಲ್ಲಿ ಭಾಷಣ ಮಾಡುತ್ತಿದ್ದರು. ಭಾಷಣದ ಸಾರಾಂಶ - ಖಾದಿ ಬಳಸುವಂತೆ ಭಾರತೀಯರಿಗೆ ಕರೆ.

ವೀಸಾ ವೀರ ಮೋದಿ ಅವರು ಅಮೆರಿಕಾಗೆ ಹೋದಾಗಿನಿಂದ ಅವರ ಅಲ್ಲಿನ ಅವರ ಚಲನವಲನಗಳನ್ನು ಕಾರ್ಯಕ್ರಮಗಳನ್ನು ಹೆಜ್ಜೆಹೆಜ್ಜೆಗೂ ಗಮನಿಸುತ್ತಿದ್ದವರ ಪೈಕಿ ನಾನೂ ಒಬ್ಬನಾಗಿದ್ದೆ. ದ್ವಿಪಕ್ಷೀಯ ಮಾತುಕತೆಗಳು, ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು, ಬಂಡವಾಳ ಹೂಡಿಕೆ ಸಂಬಂಧದ ಚರ್ಚೆಗಳ ನಡುವೆ ನಮಗೆ ಮುಖ್ಯವಾಗಿ ಕಂಡದ್ದು ನ್ಯೂಯಾರ್ಕಿನ ಮ್ಯಾಡಿಸನ್ ಸ್ಕ್ಯೇರ್ ಗಾರ್ಡನ್ ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಅವರು ಮಾಡಿದ ಭಾಷಣ. ಭಾಷಣ ಅನ್ನುವುದಕ್ಕಿಂತ 70 ನಿಮಿಷದ ಉಪನ್ಯಾಸ ಎಂದು ಬಣ್ಣಿಸುವುದು ಮೇಲು.

ಮೋದಿ ಅವರು ಸಾರ್ವಜನಿಕ ಸಭೆಯಲ್ಲಿ ಮಾಡುವ ಭಾಷಣವನ್ನು ಬಯಲು ಆಲಯದಲ್ಲೇ ಆಲಿಸಬೇಕೆಂಬ ಉತ್ಸುಕತೆ ಅನೇಕರದ್ದಾಗಿತ್ತು. ಅಮೆರಿಕಾದ ಮೂಲೆಮೂಲೆಗಳಿಂದ ಭಾರತೀಯ ಸಂಜಾತ ಅಮೆರಿಕನ್ನರು ಭಾನುವಾರ ರಾತ್ರಿ (ಭಾರತೀಯ ಕಾಲಮಾನ ಅಕ್ಟೋಬರ್ 28) ಮ್ಯಾಡಿಸನ್ ಪಾರ್ಕಿಗೆ ಲಗ್ಗೆ ಹಾಕಿದ್ದರು. 18,500 ಆಸನಗಳಿರುವ ಅಂಗಳದಲ್ಲಿ ನಾನೂ ತಾನೂ ಅಂತ 30, 000 ಟಿಕೆಟ್ಟುಗಳಿಗೆ ಬೇಡಿಕೆ ಇತ್ತು. ಟಿಕೆಟ್ಟುಗಳು ಕಾಳಸಂತೆಯಲ್ಲಿ ಮಾರಾಟವಾದ ಬಗ್ಗೆ ವರದಿಗಳು ಬಂದಿಲ್ಲ! [ಮೋದಿ ಮಾಂತ್ರಿಕ ಭಾಷಣ]

Recollects of trip to Maidson Square NY reception to Modi, India PM

ನ್ಯೂಯಾರ್ಕ್ ತನಕ ಹೋಗಲಾರದವರು ಮ್ಯಾಡಿಸನ್ ಭಾಷಣವನ್ನು Live Streaming ನಲ್ಲಿ ಕೇಳಿದರು. ದೂರದರ್ಶನ ಮತ್ತು ವೆಬ್ ತಾಣದಲ್ಲಿ ಭಾಷಣ ಪ್ರಸಾರವಾಯಿತು. ತಂತ್ರಜ್ಞಾನದ ನೆರವಿನಿಂದ ನಾವು ನಾವಿರುವಲ್ಲಿಂದಲೇ ಪ್ರಂಪಂಚದ ವಿದ್ಯಮಾನಗಳನ್ನು ನೋಡಬಹುದಾದರೂ ಮುದ್ದಾಂ ನೋಡುವ ಉತ್ಸಾಹ ಮತ್ತು ಅದರ ವೈಯಕ್ತಿಕ ಅನುಭವಗಳು ವಿಶಿಷ್ಠವಾಗಿರತ್ತೆ. ಹೀಗಿರುವಾಗ, ಮ್ಯಾಡಿಸನ್ ಗೆ ನಮ್ಮವರು ಯಾರಾದರೂ ಹೋಗ್ತಾ ಇದಾರಾ ಅಂತ ಚೆಕ್ ಮಾಡುತ್ತಿದ್ದಾಗ ಶ್ರೀವತ್ಸ ಜೋಶಿ ಅವರ ಫೇಸ್ ಬುಕ್ ಖಾತೆ ಹಸಿರು ಲೈಟ್ ತೋರಿಸುತ್ತಿತ್ತು.

"ನಾನು ಈಗ ನ್ಯೂಜರ್ಸಿಯಲ್ಲಿದ್ದೇನೆ. ಒಂದು ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಇಲ್ಲಿಗೆ ಬಂದಿದ್ದೇನೆ. ಬೃಂದಾವನ ಕನ್ನಡ ಸಂಘದ ಅಧ್ಯಕ್ಷೆ ಉಷಾ, ಪ್ರಸನ್ನಕುಮಾರ್ ಮತ್ತಿತರ 60 ಮಂದಿ ಭಾರತೀಯರ ತಂಡ ನ್ಯೂಯಾರ್ಕಿಗೆ ಮೆಟ್ರೋ ರೈಲಿನಲ್ಲಿ ಹೋಗುತ್ತಿದೆ. ಉಷಾ ಅವರಿಂದಲೇ ವರದಿ ತರಿಸಿಕೊಳ್ಳೋಣ" ಎಂದು ತೀರ್ಮಾನವಾಯಿತು. ಉಷಾ ಪ್ರಸನ್ನ ಕುಮಾರ್ ಅವರು ಮೋದಿ ಅಭಿಮಾನಿ ಸಹ. ಇನ್ನು ಕೇಳಬೇಕಾ! ಅದೇ ದಿನ ರಾತ್ರಿ ಜೋಶಿಯವರ ಸಹಕಾರದೊಂದಿದೆ ಉಷಾ ಅವರು ತಮ್ಮ ಅನುಭವ ಕಥನವನ್ನು ಬರೆದು ಈಮೇಲ್ ಮಾಡಿದರು.

ಆ ಲೇಖನವನ್ನು ಚಿತ್ರ ಸಮೇತ ಇಲ್ಲಿ ಕೊಟ್ಟಿದ್ದೇನೆ. ಪದಗಳು ಹೆಚ್ಚಾಗಿರುವುದರಿಂದ ಪುಟಗಳ ಸಂಖ್ಯೆ ಹೆಚ್ಚಾಗಿದೆ. ಓದುತ್ತಾ ಹೋಗಿ. ಥ್ಯಾಂಕ್ಯು - ಶಾಮ್.

English summary
There is a method in madness, The Madison Madness! Recollections of Usha Prasanna Kumars trip to Madison Square Garden, New york to take part in the gig - Public Reception to India Prime Minister Narendra Modi. Usha Prasannakumar is president of Brindavana Kannada Koota, NY.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X