• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಫೋಟೋದಲ್ಲಿರುವ ಮಹಿಳೆಗೆ ನಮಸ್ಕಾರ ಮಾಡುವುದೊಂದು ಬಾಕಿ

By Shami
|

ಗಾಂಧಾರಿ, ದ್ರೌಪದಿ, ಊರ್ಮಿಳೆ, ಶಬರಿ, ಕ್ಲಿಯೋಪಾತ್ರ, ಲೇಡಿ ಓಟ್ಟೊಲೈನ್ ಮಾರೆಲ್, ಇಂದಿರಾಗಾಂಧೀ.. ಮುಂತಾದ ಮಹಿಳಾಮಣಿಯರ ನಿಕಟ ಪರಿಚಯ ನನಗುಂಟು.

ಇತ್ತಿತ್ತಲಾಗಿ ಸುಷ್ಮ ಸ್ವರಾಜ್, ಸ್ಮೃತಿ ಇರಾನಿ, ಹೇಮಮಾಲಿನಿ, ವಸುಂಧರಾ ರಾಜೆ, ತೀಸ್ತಾ ಸೆಟಲ್ ವಾಡ್ ಅವರುಗಳ ಒಡನಾಟ ಹೆಚ್ಚಾಗಿದೆ. ಆಗಾಗ ಪ್ರೇಮಲತಾ ದಿವಾಕರ್, ಮೈತ್ರೇಯಿ ಗೌಡ, ಜಯಮಾಲಾ, ಉಮಾಶ್ರೀ, ಲಕ್ಷ್ಮೀ ನಿಂಬಾಳ್ಕರ್, ತಾರಾ, ಮಂಡೋದರೀ ತಥ. ರಮ್ಯವಾಗಿದೆ.

ಇವರೆಲ್ಲ ಏನು ಮಹಾ. ನಮ್ಮ ಶೈಲಜ, ಪಂಕಜ, ಜಲಜ, ತನುಜ, ನೀರಜ ಪಂಚಕನ್ಯೆಯರ ನಿತ್ಯ ಸ್ಮರಣೆ ಸುಮಧುರ, ಮನೋಹರವಾಗಿದೆ. ಮೂಕಜ್ಜಿಯರು, ಪಂಚಮಿಗಳು, ಕಾಡುವವರು, ಕಾಯುವವರು, ಕಾಪಾಡುವವರು, ಅವಸರದವರು, ಬಲಿಷ್ಠರು, ತೃಪ್ತರು, ಅತೃಪ್ತರು, ನಿರ್ಲಿಪ್ತರು, ಎಲ್ಲರಿಗೂ ಶಾಮಸುಂದರ ಮಾಡುವ ನಮಸ್ಕಾರಗಳು.

ಈ ಫೋಟೋದಲ್ಲಿರುವ ಮಹಿಳೆಗೆ ನಮಸ್ಕಾರ ಮಾಡುವುದೊಂದು ನನಗೆ ಬಾಕಿ ಉಳಿದಿತ್ತು. ಅವಳ ತಂದೆ, ತಾಯಿಗೆ ಚಂದ್ರ. ನನಗೆ ಮತ್ತು ನನ್ನ ಬೀದಿ, ಓಣಿಗೆ ಚಂದ್ರಮ್ಮ. ಈಯಮ್ಮ ಪರಿಚಯವಾಗುವ ಮುನ್ನ, ನಾಲ್ಕು ವರ್ಷಗಳ ಹಿಂದೆ ಈ ಮನೆ ಬಾಡಿಗೆಗೆ ಹಿಡಿದಾಗ ಮನೆಗೆಲಸಕ್ಕೆ ಒಬ್ಬಾಕೆಯನ್ನು ನೇಮಿಸಿದ್ದೆ. ಆಕೆಗೆ ಫೇಸ್ ಬುಕ್ ಗೊತ್ತಿಲ್ಲ.

ಹಾಗಾಗಿ ಮಾತನಾಡುವ ಚಟಗಳನ್ನು ಆಯಮ್ಮ ನನ್ನ ಜತೆ ತೀರಿಸಿಕೊಳ್ಳುತ್ತಿದ್ದರು. ಕಸಪೊರಕೆ ಕೈಯಲ್ಲಿ, ಅವರ ಯಾವುದೋ ಕತೆಗಳು ಬಾಯಲ್ಲಿ, ಅದು ನನ್ನ ಕಿವಿಯಲ್ಲಿ. ಶಂಕರಾ!

ಹದಿನೈದು ದಿನದ ಅಟೆಂಡೆನ್ಸಿಗೆ ಮೂವತ್ತು ದಿನದ ಸಂಬಳಕೊಟ್ಟು ಗೌರವಾನ್ವಿತವಾಗಿ ಆಕೆಯನ್ನು ಬೀಳ್ಕೊಟ್ಟೆ. ಆವತ್ತು ಜೂನ್ ಇಪ್ಪತ್ತು, ಸನ್ ಸಾವಿರದ ಇಸವಿ 2011. ಆನಂತರದ ದಿನಗಳಲ್ಲಿ ನನ್ನ ಮನೆ ಮಹಾತ್ಮಾ ಗಾಂಧೀ ಪ್ರಣೀತ ಗ್ರಾಮ ಸ್ವರಾಜ್ಯವಾಯಿತು. ಸ್ವಾವಲಂಬನೆ ಅಂದರೆ ಏನೆಂದು ಇನ್ನೊಬ್ಬರಿಗೆ ಭಾಷಣ ಮಾಡುವಷ್ಟು ಕಿರು ಶಕ್ತಿ ಬಂತು. ಆದರೆ, ರಟ್ಟೆಯಲ್ಲಿ ಶಕ್ತಿ ಇರಲಿಲ್ಲ.

ಆ ದಿನಗಳಲ್ಲಿ ಆಕಸ್ಮಾತ್ ಪರಿಚಯವಾದವರು ಈ ಚಂದ್ರಮ್ಮ. ಸಂದರ್ಶನ ಮಾಡಿ ಮನೆಗೆಲಸಕ್ಕೆ ರೆಕ್ರೂಟ್ ಮಾಡಿಕೊಂಡೆ. ಅಪಾಯಿಂಟ್ ಮೆಂಟ್ ಆರ್ಡರ್ ಇಶ್ಯೂ ಆಯ್ತು. CTC, Service Rules, home-office decorum ನಿಗದಿಯಾದವು. ಹೇಗಿದ್ದರೂ ನನ್ನ ಸ್ವಂತ ಬಾಡಿಗೆ ಮನೆಯಲ್ಲಿ ನಾನೇ ಸಿಇಒ ಮತ್ತು ಎಚ್ ಆರ್ ಡಿ ತಾನೇ? ಚಂದ್ರಮ್ಮ ಡ್ಯೂಟಿ ರಿಪೋರ್ಟ್ ಮಾಡಿಕೊಂಡು ಜುಲೈ 22ಕ್ಕೆ ನಾಲಕ್ಕು ವರ್ಷವಾಯ್ತು. Happy 4th Anniv ಎನ್ನಲೇ.

ಚಂದ್ರಮ್ಮ ಅವರ ತವರು ಮಂಡ್ಯ ಅಂತೆ, ಆಕೆಯ ಗಂಡ ಇಲ್ಲೆ ಎಲ್ಲೋ ಇರುವ ಆಟೋಮೊಬೈಲ್ ಗರಾಜ್ ನಲ್ಲಿ ನೌಕರಿ ಮಾಡುತ್ತಾನಂತೆ. ಒಬ್ಬಳೇ ಮಗಳು ಹರ್ಶಿತಾ NSVK ಶಾಲೆಯಲ್ಲಿ 9ನೇ ಕ್ಲಾಸ್ ಪಾಸಾಗಿ ಹತ್ತನೇ ತರಗತಿಗೆ ಧುಮುಕಿದ್ದಾಳಂತೆ. ತಾಯಿಗೆ ಕನ್ನಡ ಭಾಷೆ ಬಿಟ್ಟು ಅನ್ಯ ಭಾಷೆ ಗೊತ್ತಿಲ್ಲವಂತೆ. [ಕಳ್ಳಿಯನ್ನು ಜೈಲಿಂದ ಬಿಡಿಸಿ ಮಾನವೀಯತೆ ಮೆರೆದ ಟೆಕ್ಕಿ]

ಚಂದ್ರಮ್ಮ ನಮ್ಮ ಬೀದಿಯಲ್ಲಿರುವ Travel, Finance, Mobile Phone shop ಮುಂತಾದ ಆಫೀಸು Establishment ಗಳಲ್ಲಿ ನೌಕರಿ ಮಾಡುತ್ತಾರೆ. ಕಸಗುಡಿಸಿ, ನೆಲ ವರೆಸಿ, ಬಟ್ಟೆ ಒಗೆದು ಒಣಹಾಕಿ, ಕಿಟಕಿ ಬಾಗಿಲ ಧೂಳು ವರೆಸುವ, ಪಾತ್ರೆ, ಕಸದಂತಹ ಮನೆಗೆಲಸಗಳನ್ನು ನಮ್ಮ ಮನೆಯಲ್ಲಿ ಮಾತ್ರ ಮಾಡುತ್ತಾರೆ. ಬೆಳಗ್ಗೆ, ಏಳೇಳೂವರೆ ಗಂಟೆಗೆ, ಒಪ್ಪತ್ತು ಕೆಲಸಕ್ಕೆ ಬರುತ್ತಾರೆ. ಸರ್ಫ್ ಸೋಪ್ ಪೌಡರ್, ನಿರ್ಮಾ, ಲಿಜಾಲ್ ಬಾಟಲ್ ಖಾಲಿಯಾಗಿದ್ದರೆ ಅದನ್ನು ನಂಗೆ ಹೇಳಕ್ಕೇ ಸಂಕೋಚ ಪಡುತ್ತಾರೆ.

ನಿನ್ನೆ ನಾನು ಇಲ್ಲಿ ಬರೆದುಕೊಂಡ ಹಾಗೆ, ನಂಗೆ ಸ್ವಲ್ಪ ಹುಷಾರಿಲ್ಲ. ಆಕೆಗೂ ಹುಷಾರಿಲ್ಲ ಅಂತ ಕಾಣತ್ತೆ. ಇವತ್ತೂ ಸ್ವೈಪ್ ಮಾಡಿಲ್ಲ. ತುಂಬಾ punctual, prompt, honest ಆಗಿರುವ ಆಕೆ ರಜೆ ಹಾಕಿರುವುದಕ್ಕೆ ಕಾರಣ ಅವರ ಪರಿಸ್ಥಿಯಲ್ಲಿ ಏರುಪೇರಾಗಿರಬಹುದು. ಅಜ್ಜಿ ಸತ್ತಿರಬಹುದು, ಸೋದರ ಮಾವನ ಮಗಳ ಮದುವೆ ಇರಬಹುದು, ಜ್ವರ, ಮೈಕೈ ನೋವು ಬಂದಿರಬಹುದು. ಯಾರಿಗೆ ಗೊತ್ತು. ನನ್ನ ಅಜ್ಜಿ ಚಿತ್ರದುರ್ಗದ ಚಿರೋಟಿ ಲಕ್ಷಮಮ್ಮ ಸತ್ತೇ 49 ವರ್ಷ ಆಯ್ತು.

ನನ್ನ ಕಚೇರಿಯಲ್ಲಿ ನನಗೆ 12 ಸಿಎಲ್, 20 ಪಿಎಲ್, ವರ್ಕ್ ಫ್ರಂ ಹೋಂ, ವರ್ಕ್ ಫ್ರಂ ರಿಮೋಟ್ ಸೌಲಭ್ಯ, ಸೌಕರ್ಯಗಳಿವೆ. ಚಂದ್ರಮ್ಮನಿಗೂ ಇದೆ, ಇರುತ್ತದೆ.

ಋಣಾನು ಬಂಧೇನಾ ಪಶು ಪತ್ನಿ ಸುತಾಲಯಗಳ ಸಾಲಿಗೆ ಮನೆಗೆಲಸದವರನ್ನು, ಕಾರ್ ಡ್ರೈವರ್ ಅನ್ನು ಸೇರಿಸಲು ಕಾಲ ಕೂಡಿ ಬಂದಿದೆ. Women empowerment volunteers ಗಳು ಈ ಟಿಪ್ಪಣಿಯಲ್ಲಿ ಓದದಂತೆ, ಶೇರ್ ಮಾಡದಂತೆ, ಕಾಮೆಂಟ್ ಮಾಡದಂತೆ, ಲೈಕ್ ಮಾಡದಂತೆ ನಿರ್ಬಂಧ ಹೇರಲಾಗಿದೆ! [ಈ ಮನೆಗೆಲಸದವರನ್ನು ನೇಮಿಸುವ ಮುನ್ನ ಯೋಚಿಸಿ!]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
We journalists write a lot about Indira Gandhi, Sonia, Smriti, Sushma, Mythreyi Gowda, Tara, Umashree, Vasundhara, Hema Malini... but why we won't write about homeworkers, who keep our home crystal clean? So, here is a story about punctual, prompt, honest homeworker Chandramma. Is your home worker like Chandramma only? Share your experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more