• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ವೆಬ್ ಸೈಟಿಗೆ 16 ಬೇವು, 16 ಬೆಲ್ಲ

By Shami
|

ದುರ್ಮುಖ ನಾಮ ಸಂವತ್ಸರದ ಯುಗಾದಿಯಂದು ನಿಮ್ಮ ಪ್ರೀತಿಯ ಒನ್ಇಂಡಿಯಾ ಕನ್ನಡ (ದಟ್ಸ್ ಕನ್ನಡ) ಪೋರ್ಟಲ್ ಹದಿನಾರು ವರ್ಷ ಪೂರೈಸಿ ಹದಿನೇಳಕ್ಕೆ ಕಾಲಿಡುತ್ತಿದೆ. ಅಂದರೆ, ಕನ್ನಡದ ಮೊಟ್ಟ ಮೊದಲ ಮತ್ತು ನಂಬರ್ 1 ಪೋರ್ಟಲ್ಲಿಗೆ ಯುಗಾದಿಯಂದು ಹದಿನಾರರ ಹರೆಯ. ಈ ದಿನದಂದು ನಾವೇನು ಮೊಂಬತ್ತಿ ಬೆಳಗಿಸಿ ಕೇಕ್ ಕಟ್ ಮಾಡುತ್ತಿಲ್ಲ, ಪಾರ್ಟಿ ಮಣ್ಣುಮಸಿ ಅಂತೂ ಇಲ್ಲವೇ ಇಲ್ಲ.

ಈ ಬೆಳವಣಿಗೆಗೆ ಕಾರಣಕರ್ತರಾದ ನಮ್ಮ ನಿಷ್ಠಾವಂತ ಓದುಗರಿಗೆ ಒಂದು ಥ್ಯಾಂಕ್ಸ್, ಮನಃಪೂರ್ವಕ ಧನ್ಯವಾದ. ನಾವು ನಡೆದುಬಂದ ಹಾದಿ, ಏಳುಬೀಳುಗಳನ್ನು ನಮ್ಮ ಓದುಗರು ಕೂಡ ನೋಡಿದ್ದಾರೆ. ಬಿದ್ದಾಗ ಎಬ್ಬಿಸಿ ತಬ್ಬಿಕೊಂಡು ಸಂತೈಸಿದ್ದಾರೆ, ಸಾಧಿಸಿದಾಗ ಬೆನ್ನುತಟ್ಟಿ ಹೃದಯತುಂಬಿ ಹಾರೈಸಿದ್ದಾರೆ, ದಾರಿತಪ್ಪಿದಾಗ ಎಚ್ಚರಿಸಲು ಕಿವಿಯನ್ನೂ ಹಿಂಡಿದ್ದಾರೆ. ನಮ್ಮೊಂದಿಗೆ ಬೇವುಬೆಲ್ಲವನ್ನು ಸವಿದಿದ್ದಾರೆ.

ಹದಿನಾರು ವರ್ಷಗಳ ಹಿಂದೆ ಮೊಬೈಲಲ್ಲಿ ಕನ್ನಡ ಓದುವುದನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಈಗ ಡೆಸ್ಕ್ ಟಾಪಿನಲ್ಲಿ ಏನೇನು ಮಾಡುತ್ತೇವೆಯೋ ಅದನ್ನೆಲ್ಲ ಮೊಬೈಲಿನಲ್ಲಿಯೇ ಮಾಡುವಂಥ ಕಾಲಘಟ್ಟಕ್ಕೆ ತಲುಪಿದ್ದೇವೆ. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಕನ್ನಡವೂ ಬೆಳೆದಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

ಕಾಲಕಾಲಕ್ಕೆ ನಮ್ಮ ಪೋರ್ಟಲ್ಲಿನ ಸ್ವರೂಪ, ವಿನ್ಯಾಸ ಬದಲಾಗಿದೆ, ಫಾಂಟುಗಳು ಬದಲಾಗಿವೆ, ಅಂಕಣಕಾರರು ಬದಲಾಗಿದ್ದಾರೆ, ಉದ್ಯೋಗಿಗಳು ಬದಲಾಗಿದ್ದಾರೆ, ತಂತ್ರಜ್ಞಾನ ಬದಲಾಗಿದೆ, ಆದರೆ ಓದುಗರ ಕನ್ನಡ ಪ್ರೀತಿ ಮಾತ್ರ ಎಳ್ಳಷ್ಟೂ ಬದಲಾಗಿಲ್ಲ. ಹೊಸಹೊಸ ಸೇವೆಗಳು ಸೇರಿಕೊಂಡಿವೆ, ನಾನಾ ಬಗೆಯ ಹೊಸ ಆಪ್‌ಗಳನ್ನು ನೀಡಿದ್ದೇವೆ, ಮೊಬೈಲ್ ಮೂಲಕ ಹಾಜರಾಗುವುದರೊಂದಿಗೆ ಓದುಗರಿಗೆ ಮತ್ತಷ್ಟು ಹತ್ತಿರವಾಗಿದ್ದೇವೆ.

ಇಂದು ಪ್ರತಿ ಮೊಬೈಲಲ್ಲಿ ಕನ್ನಡ ರಾರಾಜಿಸುತ್ತಿದೆ, ಹಳ್ಳಿಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ತಲುಪಿದೆ, ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಬಳಕೆಯೂ ಜಾಸ್ತಿಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ 2014ರಲ್ಲಿ 60 ಮಿಲಿಯನ್ ಇದ್ದ ಓದುಗರ ಸಂಖ್ಯೆ 2018ರಲ್ಲಿ 280 ಮಿಲಿಯನ್ ತಲುಪುತ್ತಿದೆ. ಆದರೆ, ಇತರ ಭಾಷಿಕರು ತಮ್ಮ ಮಾತೃಭಾಷೆಗೆ ತೋರುತ್ತಿರುವಷ್ಟು ಪ್ರೀತಿಯನ್ನು ಕನ್ನಡಿಗರು ಅಷ್ಟಾಗಿ ತೋರುತ್ತಿಲ್ಲ ಎಂಬುದು ಕಳವಳಕಾರಿ ಸಂಗತಿ.

ಈ ಬೆಳವಣಿಗೆಗಳೇನೇ ಇರಲಿ, ಒನ್ಇಂಡಿಯಾ ಕನ್ನಡದ ಜೊತೆಗಿನ ನಿಮ್ಮ ಬಾಂಧವ್ಯ ಹೀಗೆಯೇ ಇರಲಿ. ಹ್ಯಾಪಿ ಬರ್ತಡೇ ಹೇಳಿ ವರ್ಚುವಲ್ಲಾಗಿ ನಮ್ಮ ಜೊತೆಗಿದ್ದರೆ ನಮಗದೇ ಸಂತೋಷ ಮತ್ತು ಈ ಯುಗಾದಿಯ ಬೇವು ಬೆಲ್ಲ. ನಿಮ್ಮ ಸಹಕಾರವೇ ನಮಗೆ ಇನ್ನಷ್ಟು ಕೆಲಸ ಮಾಡಲು ಕ್ಯಾಟಲಿಸ್ಟು. ಈ ಹದಿನಾರರ ಹರೆಯದ ಹುಮ್ಮಸ್ಸಿನೊಂದಿಗೆ ಕನ್ನಡದ ಅಳಿಲುಸೇವೆ ಮಾಡಲು ನಿಮ್ಮ ಹಾರೈಕೆ ನಮ್ಮೊಂದಿಗಿರಲಿ. ಮತ್ತೊಮ್ಮೆ ಧನ್ಯವಾದ. ಒನ್ಇಂಡಿಯಾ ಕನ್ನಡಕ್ಕೆ 16, ಯುಗಾದಿ ಕವನ ವಾಚನ ವಿಡಿಯೋ:

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On the monumental occasion of Oneindia Kannada Portal turns 16, wd like to take a moment today to say THANK YOU! Thank you to all of our faithful subscribers and loyal readers. And a special thanks to those of you who have chosen to use our Kannada online news services. Our portal has been greatly blessed by your generosity and encouragement. Happy New Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more