ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದ್ದಿ ಕನ್ನಡಮಯವಾಗಲಿ, ತಪ್ಪಿಲ್ಲದಿರಲಿ - ಮಹೇಶ್ ಗಜಬರ

By ಮಹೇಶ ಗಜಬರ, ನಿಪ್ಪಾಣಿ, ಬೆಳಗಾವಿ
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಮಹೇಶ ಗಜಬರ, ನಿಪ್ಪಾಣಿ, ಬೆಳಗಾವಿ. ಸಮೀಕ್ಷೆಯ ವಿಷಯ : ಕನ್ನಡ ಅಂತರ್ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಹಲವು ವರ್ಷಗಳಿಂದ ಕನ್ನಡದ ವಿವಿಧ ಬ್ಲಾಗ್ ಮತ್ತು ವೆಬ್ ತಾಣಗಳ ಓದುಗನಾಗಿ ನಾನು ಕನ್ನಡದಲ್ಲಿ ಯಾವ ಮಾಹಿತಿ ಲಭ್ಯ ಮತ್ತು ಯಾವ ಮಾಹಿತಿ ಲಭ್ಯವಿಲ್ಲವೆನ್ನುದನ್ನು ತಕ್ಕಮಟ್ಟಿಗೆ ಬಲ್ಲೆ.

ಸುದ್ದಿ ನೀಡೋದಕ್ಕೆ ಕನ್ನಡದಲ್ಲಿ ಅಂತರ್ಜಾಲ ತಾಣಗಳ ಕೊರತೆ ಇಲ್ಲ. ಬಹುತೇಕ ಎಲ್ಲ ಕನ್ನಡ ದಿನಪತ್ರಿಕೆಗಳು ಮತ್ತು ಪೋರ್ಟಲ್ಲುಗಳು ವೆಬ್ ಲೋಕದಲ್ಲಿ ನಮಗೆ ಸುದ್ದಿಯನ್ನು ಊಣಬಡಿಸುತ್ತಿವೆ.

ಒಬ್ಬ ಓದುಗನಾಗಿ ಮತ್ತು ಅಂತರ್ಜಾಲದಲ್ಲಿ ಇನ್ನು ಹೆಚ್ಚಿನ ಕನ್ನಡ ಬಳಕೆ ಮತ್ತು ಕನ್ನಡದಲ್ಲೇ ಎಲ್ಲ ಮಾಹಿತಿ ಸಿಗಲೆಂದು ಬಯಸುವವನಾಗಿ ಕನ್ನಡ ಅಂತರ್ಜಾಲದಿಂದ ನಾನು ಬಯಸುವುದು ಏನು ಎಂಬ ಸಂಗತಿಗಳು ಹೀಗಿವೆ:

Kannada online survey 2014 : My expectations Mahesh Gajabar, Belagavi

​1. ಮಕ್ಕಳಿಗೆ ಜಾಗವೇ ಇಲ್ಲ : ಮಕ್ಕಳ ಸಾಹಿತ್ಯ ಮತ್ತು ಮಕ್ಕಳ ಓದಿಗೆ ಪೂರಕವಾದ ಮಾಹಿತಿ ಕನ್ನಡದಲ್ಲಿ ಲಭ್ಯವಿದೆಯೆ ಎಂದು ನೋಡಿದಾಗ ನಿರಾಸೆಯೇ ಆಗುತ್ತೆ. ಪತ್ರಿಕೆಗಳ ಸಾಪ್ತಾಹಿಕ ಪುರವಣಿಯಲ್ಲಿ ಮತ್ತು ಬ್ಲಾಗ್-ಗಳಲ್ಲಿ ಈ ಕುರಿತು ಸ್ವಲ್ಪವಾದರೂ ಕವರೇಜ್ ಇದೆ. ಆದರೂ ವೆಬ್ ತಾಣಗಳಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕವರೇಜ್ ಇದೆ! ಇಂದಿನ ಮಕ್ಕಳಿಗೆ ಕನ್ನಡದಲ್ಲಿ ಅವರಿಗೆ ಪೂರಕವಾದ ​ಸಾ​ಹಿತ್ಯ ಮತ್ತು ​ಮಾಹಿತಿ ​ಲಭ್ಯವಾದರೆ ಅವರು ಹೆಚ್ಚೆಚ್ಚು ಕನ್ನಡ ಬಳಸುವುದರಿಂದ ಮುಂದಿನ ದಿನಗಳಲ್ಲಿ ಈ ಮಕ್ಕಳಿಂದಲೇ ಕನ್ನಡದ ಬಳಕೆ ವೆಬ್ ತಾಣಗಳಲ್ಲಿ ಹೆಚ್ಚಾಗುತ್ತೆ. ಕನ್ನಡದಲ್ಲಿ ಕಾರ್ಟೂನ್ ಮತ್ತು ವ್ಯಂಗಚಿತ್ರಗಳು ಲಭ್ಯವಾದರೆ ಇದಕ್ಕೆ ಪೂರಕ.

​2​. ಸುದ್ದಿಯಲ್ಲಿ ನಿಖರತೆ ಇರಲಿ : ಸುದ್ದಿಯಲ್ಲಿ ಆದ​ಷ್ಟೂ ನಿಖರತೆ ಇರಲಿ. ಬ್ರೇಕಿಂಗ್ ನ್ಯೂಸ್ ಕೊಡೊ ಭರದಲ್ಲಿ ಕೆಲವು ತಪ್ಪುಗಳು ಆಗುತ್ತವೆ ಎನ್ನುವುದನ್ನು ಒಪ್ಪಿಕೊಳ್ಳಬಹುದಾದರೂ, ವಿವರಣಾತ್ಮಕ ಸುದ್ದಿಗಳಲ್ಲಿ ಯಾವುದೇ ತಪ್ಪುಗಳು ನುಸುಳದಂತೆ ಎಚ್ಚರವಿರಲಿ.

​3. ಹಗಲು ರಾತ್ರಿ ಸುದ್ದಿ ಸಿಗುತ್ತಿರಲಿ :​ ಮುಖ್ಯವಾಹಿನಿಯ ವೆಬ್ ತಾಣಗಳಲ್ಲಿ 24*7 ಸುದ್ದಿ ಸಿಗೋ ಹಾಗೆ ಆಗಲಿ. ಈಗ ಕೇವಲ 8 AM-8 PM ಮಾತ್ರ ಸುದ್ದಿ ಲಭ್ಯವಾಗುವುದರಿಂದ ಬಹಳ ಜನ ಕನ್ನಡದ ತಾಣಗಳತ್ತ ಸುಳಿಯೋದಿಲ್ಲ.

4. ವೆಬ್ ಲೋಕದಲ್ಲಿ ಕಥೆ, ಕವನ ಸ್ಪರ್ಧೆ ಏಕಿಲ್ಲ? : ಸಾಹಿತ್ಯಕ್ಕೆ ಮೀಸಲಾದ ಕೆಲವು ತಾಣಗಳು ಮತ್ತು ಬ್ಲಾಗ್-ಗಳು ಕನ್ನಡದಲ್ಲಿ ಲಭ್ಯ ಇವೆ. ಅದರಲ್ಲಿ ಪ್ರಮುಖ ತಾಣವೊಂದು ಸ್ಥಗಿತಗೊಂಡಿದೆ. ಆದ್ರೆ ವಾರಾಂತ್ಯದ ಕಥೆ ಪ್ರಯೋಗ ಮತ್ತು ದೀಪಾವಳಿ, ಯುಗಾದಿ ವಿಶೇಷ ಕಥೆ ಕವನ ಸ್ಪರ್ಧೆಗಳು ವೆಬ್ ಲೋಕದಲ್ಲಿ ಇಲ್ಲ.

5. ವಿಜ್ಞಾನ ಮತ್ತು ತಂತ್ರಜ್ಞಾನ : ಆಟೋಮೊಬೈಲ್, ಗ್ಯಾಡ್ಜೆಟ್ ಮತ್ತು ಮೊಬೈಲುಗಳ ಹೊರತಾದ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಮಾಹಿತಿ ಆಗಲಿ ಮತ್ತು ಬರಹಗಳಾಗಲಿ ಕನ್ನಡದಲ್ಲಿ ಲಭ್ಯವಿಲ್ಲ. ಕೆಲವು ಉತ್ಸಾಹಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕನ್ನಡದಲ್ಲಿ ಊಣಬಡಿಸುದಕ್ಕಾಗಿಯೇ ಒಂದು ತಾಣವನ್ನು ನಡೆಸುತ್ತಿದ್ದಾರೆ ಮತ್ತು ಸಾಕಷ್ಟು ವೈಜ್ಞಾನಿಕ ಕನ್ನಡ ಪದಗಳನ್ನು ಕನ್ನಡಕ್ಕೆ ಪರಿಚಯಿಸುತಿದ್ದಾರೆ. ಆದ್ರೆ ವಿಜ್ಞಾನ ಮತ್ತು ತಂತ್ರಜ್ಞಾನ ಕನ್ನಡ ಮಾಹಿತಿ ಹೆಚ್ಚೆಚ್ಚು ಜನರಿಗೆ ತಲುಪಲು ಅದು ಜನಪ್ರಿಯ ತಾಣಗಳಲ್ಲಿ ಲಭ್ಯವಾಗಬೇಕು ಮತ್ತು ಆ ಮಾಹಿತಿಯಲ್ಲಿ ವಿಕ್ಷನರಿ ಪದಗಳ ಬಳಕೆ ಹೆಚ್ಚಾಗಿ ಅವು ಸಾಮಾನ್ಯ ಜನರನ್ನು ತಲಪುವಂತಾಗಬೇಕು.

6. ಸಾಮಾನ್ಯ ಜನರಿಗೆ ಬೇಕಾದ ಮಾಹಿತಿ : 3G ಮತ್ತು Broad Band ರೂಪದಲ್ಲಿ ಇಂಟರ್ನೆಟ್ ಈಗಾಗಲೇ ಬಹುತೇಕ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶವನ್ನು ತಲುಪಿದೆ. ಆದರೆ ಸಾಮಾನ್ಯ ಜನರಿಗೆ ಬೇಕಾಗುವ ಮಾಹಿತಿ ಅವರ ಭಾಷೆಯಲ್ಲಿ ಲಭ್ಯವಿಲ್ಲದಿರುವುದರಿಂದ ಅವರು ಅಂತರ್ಜಾಲವನ್ನು ಹೆಚ್ಚಾಗಿ ಬಳಸುತ್ತಿಲ್ಲ. ಕನ್ನಡದಲ್ಲಿ ಕೃಷಿ ಮತ್ತು ಮಳೆ ಕೊಯ್ಲು ಅಂತಹ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುವ ವೆಬ್ ತಾಣದ ಒಂದು ಪ್ರಯತ್ನ ನಡೆದಿತ್ತಾದರೂ ಕೂಡ ನಂತರ ಅದು ಸ್ಥಗಿತಗೊಂಡಿತು. ಒಂದೆರಡು ಬ್ಲಾಗ್-ಗಳು ಈಗಲೂ ಕಾರ್ಯನಿರ್ವಹಿಸುತ್ತವೆಯಾದರೂ ಅವುಗಳು ಅಷ್ಟು ಜನಪ್ರಿಯವಾಗಿಲ್ಲ.

7. ಸರಕಾರಿ ವೆಬ್ಬಲ್ಲಿ ಕನ್ನಡವೇ ಇಲ್ಲ : ಕೇಂದ್ರ ಸರ್ಕಾರದ ಬಹುತೇಕ ಎಲ್ಲ ಸರ್ಕಾರಿ ವೆಬ್ ತಾಣಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿವೆ. ಅಲ್ಲಿ ಕನ್ನಡ ಸಿಗೋದು ಕನಸಿನ ಮಾತಾದರೂ, ನಮ್ಮದೇ ರಾಜ್ಯದ ಸರ್ಕಾರದ ಬಹುತೇಕ ತಾಣಗಳು ಬರೀ ಇಂಗ್ಲಿಷ್ನನಲ್ಲಿ ಮಾತ್ರ ಲಭ್ಯ. ಇಲ್ಲಿ ಎಲ್ಲ ತಾಣಗಳು ಕನ್ನಡದಲ್ಲಿ ಅದರಲ್ಲೂ by-default ಆಗಿ ಕನ್ನಡದಲ್ಲಿ ತೆರೆಯುವ ವೆಬ್ ತಾಣಗಳಾಗಬೇಕು. [ಇಂಗ್ಲಿಷ್ ಹಾವಳಿ ನಡುವೆ ಇಂಥ ಪದಗಳು ಉಳಿಯಲಿ]

8. ವೆಬ್ ನಲ್ಲಿ ಕನ್ನಡದ ಬಳಕೆ ಹೆಚ್ಚಾಗಲಿ : ಕನ್ನಡದಲ್ಲಿ ವೆಬ್ ಬಳಕೆ ಹೆಚ್ಚಾದಷ್ಟೂ ಗೂಗಲ್, ಯಾಹೂ, ಮೈಕ್ರೋಸಾಫ್ಟ್ ಅಂತಹ ಕಂಪನಿಗಳು ತಮ್ಮ ಸೇವೆಯನ್ನು ಕನ್ನಡದಲ್ಲಿ ಇನ್ನಷ್ಟು ವಿಸ್ತರಿಸುತ್ತವೆ. ಯುಟ್ಯೂಬ್‌ನಲ್ಲಿ ಹೆಚ್ಚಾಗಿ ಕನ್ನಡದ ಜಾಹೀರಾತುಗಳು ಕಾಣಿಸುವಂತಾದರೆ ಅತ್ತ ಡಬ್ಬಿಂಗ್ ಧ್ವನಿಗೂ ಬಲ ಬರುತ್ತದೆ ಮತ್ತು ನಮ್ಮ ಭಾಷೆಯಲ್ಲಿಯೇ ಎಲ್ಲವೂ ನಮಗೆ ದೊರೆಯುವಂತಾಗಿ ನಮ್ಮ ಭಾಷೆ ಬೆಳವಣಿಗೆಗೆ ಸಹಕಾರಿಯಾಗುತ್ತದೆ. [ಟ್ವಿಟ್ಟರ್, ಫೇಸ್ ಬುಕ್]

English summary
My expectations from Kannada online : Karnataka State Government websites must be in Kannada language, by default. Private portals should provide Karnataka-India news 24x7. Opinions Mahesh Gajabar, Nippani, Belagavi - Kannada.Oneindia.com survey 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X