• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರಣಾಂತಿಕ ಕ್ಯಾನ್ಸರ್ ಮೆಟ್ಟಿನಿಂತ ಹಿರಿಯಜ್ಜನ ಯಶೋಗಾಥೆ

By ಡಾ| ರಾಮಚಂದ್ರ ಭಟ್, ಮುಂಬಯಿ
|

ಇಂಗ್ಲೆಂಡಿನ ಮಿಡ್ಲ್‌ಸ್‍ಬ್ರೊದಲ್ಲಿ ವಾಸವಾಗಿರುವ 78 ವರ್ಷದ ಅಲನ್ ಟೇಯ್ಲರ್ ಎಣ್ಣೆ ಮತ್ತು ಅನಿಲದ ರಿಗ್ಗುಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ 13 ವರ್ಷದ ಹಿಂದೆ ನಿವೃತ್ತಿ ಹೊಂದಿದ ಇಂಜಿನೀಯರ್. ಹೃದಯದ ತೊಂದರೆಯಿದ್ದರೂ ವಾರ್ಫಾರಿನ್ (ರಕ್ತ ತೆಳುವಾಗಿಸುವ ಔಷಧಿ) ಸಹಾಯದಿಂದ ಆರೋಗ್ಯವಾಗಿಯೇ ಕಾಲಕಳೆದವರು. ಹಿರಿಯ ಮಗಳು ತನ್ನ 49ನೇ ವಯಸ್ಸಿನಲ್ಲಿ ಕ್ಯಾನ್ಸರಿಗೆ ತುತ್ತಾಗಿ ಸಾಂಪ್ರದಾಯಿಕ ಚಿಕಿತ್ಸೆ ಫಲಕಾರಿಯಾಗದೆ ತೀರಿಕೊಂಡಿದ್ದಳು. ಒಂದು ದಿನ ತಮಗೂ ಕ್ಯಾನ್ಸರ್ ಇದೆ ಎಂದು ಟೇಯ್ಲರ್ ಗೆ ಗೊತ್ತಾಯಿತು. ಅದರ ವಿರುದ್ಧ ಹೋರಾಡಿ, ಗೆದ್ದ ಚೇತರಿಕೆಯ ಅದ್ಭುತ ಕಥೆಯನ್ನು ಅವರ ಬಾಯಿಯಿಂದಲೇ ಕೇಳಬೇಕು.

ಟೇಯ್ಲರ್ ಅವರ ಈ ಅನುಭವ ಕಥನವನ್ನು ಕನ್ನಡಕ್ಕೆ ತಂದವರು ಮುಂಬಯಿಯ ಡಾ| ರಾಮಚಂದ್ರ ಭಟ್. ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ 37 ವರ್ಷ ಸಂಶೋಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಭಟ್ ಅವರು ಆರೋಗ್ಯ ಸಂಬಂಧಿ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. ವಿಶೇಷವಾಗಿ ಕ್ಯಾನ್ಸರ್ ಕುರಿತು "ಕಸ್ತೂರಿ" (ಮಾಸಪತ್ರಿಕೆ), "ತರಂಗ" ವಾರಪತ್ರಿಕೆಯಲ್ಲಿ ಅವರು ಬರೆದ ಲೇಖನಗಳು ಅನೇಕರ ಕಣ್ತೆರೆಸಿವೆ. ಈಗ ಓವರ್ ಟು ಟೇಯ್ಲರ್ - ಸಂಪಾದಕ.

2010ರ ಅಂತ್ಯ ಭಾಗ. ಹೊಟ್ಟೆಯ ಅಗ್ರ ಭಾಗದಲ್ಲಿ ಸ್ವಲ್ಪ ನೋವಿನಿಂದ ಕೂಡಿದ ಗಟ್ಟಿಯಾದ ಭಾಗವನ್ನು ವೈದ್ಯರಿಗೆ ತೋರಿಸಲು ಹೋಗಿದ್ದೆ. ಪರೀಕ್ಷಿಸಿದ ವೈದ್ಯರು ಏನೂ ತೊಂದರೆಯಿಲ್ಲವೆಂದು ಆಶ್ವಾಸನೆಯಿತ್ತರು. ಕೆಲವು ದಿನಗಳ ನಂತರ ಗಡ್ಡೆ ದೊಡ್ಡದಾಗಲು ಇನ್ನೊಂದು ವೈದ್ಯರಲ್ಲಿ ತೋರಿಸಿದೆ. ಕೂಲಂಕಷವಾಗಿ ಪರೀಕ್ಷಿಸಿ ಅವರೂ ಮೊದಲಿನ ವೈದ್ಯರಂತೆಯೇ ಅಭಿಪ್ರಾಯವಿತ್ತರು. ನಾನು ನೆಮ್ಮದಿಯಲ್ಲಿ ಇರಬಹುದೆಂದುಕೊಂಡೆ.

ಆದರೆ ಆರು ವಾರಗಳ ನಂತರವೂ ಏನೋ ಮನಸ್ಸಿನಲ್ಲಿ ಕಿರಿಕಿರಿ. ಇನ್ನೊಬ್ಬ ವೈದ್ಯರು ನೋಡಿ ಪೂರ್ತಿ ತೃಪ್ತಿಯಾಗದೆ ಸೌತ್ ಕ್ಲೀವ್‌ಲ್ಯಾಂಡ್‌ ಆಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆಗೆ ಏರ್ಪಾಡು ಮಾಡಿದರು. ಅಲ್ಲಿ ಕೊಲೋನೊಸ್ಕೊಪಿ, ಎಂಡೋಸ್ಕೊಪಿ ಹಾಗು ಎರಡು ಬಯೋಪ್ಸಿಗಳ ನಂತರ ತಜ್ಞರು ನನಗೆ ದೊಡ್ಡಕರುಳಿನ ಅದೂ ಯಕೃತ್ತಿಗೆ ತುಂಬಾ ಹತ್ತಿರದ ಭಾಗದಲ್ಲಿ ಕ್ಯಾನ್ಸರ್ ಇದೆ ಎಂದು ತೀರ್ಪಿತ್ತರು. ಕಂಪ್ಯೂಟರ್ ಪರದೆಯಲ್ಲಿ ನನಗೇ ಕಾಣುತ್ತಿತ್ತು ಆ ಭಯಂಕರ ಗಡ್ಡೆ.

2011ರ ಸೆಪ್ಟೆಂಬರ್ 28ಕ್ಕೆ ನನ್ನ ಗಡ್ಡೆಯ ಆಪರೇಶನ್ ಎಂದು ಏರ್ಪಾಡಾಗಿತ್ತು. ಆಪರೇಶನ್ನಿನ ಫಲಿತಾಂಶದಲ್ಲಿ ನನಗೆ ಸಂಪೂರ್ಣ ನಂಬಿಕೆ ಬಾರದಿದ್ದರೂ ನನ್ನ ಸರ್ಜನ್ ಭರವಸೆ ಮೂಡಿಸಿದ್ದರು. ಆದರೆ ನಿಗದಿಪಡಿಸಿದ ದಿನಕ್ಕೆ ನಾಲ್ಕು ದಿನ ಮೊದಲು ಮುಂಜಾನೆಯ ಸಮಯ ವಿಪರೀತ ಹೊಟ್ಟೆನೋವಿನಿಂದ ಕುಸಿದಾಗ ನನ್ನ ಮಗಳು ದಾದಿಯಾಗಿದ್ದವಳು, ಆಂಬ್ಯುಲೆನ್ಸ್ ಮೂಲಕ ಕ್ಲೀವ್‌ಲ್ಯಾಂಡ್‌, ಮಿಡ್ಲ್‌ಸ್‍ಬ್ರೊನಲ್ಲಿನ ಜೇಮ್ ಕುಕ್ ಯುನಿವರ್ಸಿಟಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಸಾಗಿಸಿದಳು. ಅಲ್ಲಿ ನಾನು ಭೆಟ್ಟಿಯಾದ ಸರ್ಜನ್ ಅನಿಲ್ ರೆಡ್ಡಿ, ಕೂಡಲೆ ಆಪರೇಶನ್ ಮಾಡಲು ನಿರ್ಧರಿಸಿದರು. [ಬೆಂಗಳೂರು, ಭಾರತದ ನೂತನ ಸ್ತನ ಕ್ಯಾನ್ಸರ್ ರಾಜಧಾನಿ!]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cancer affects all of us, whether you’re a daughter, mother, sister, friend, co-worker, doctor, or patient. Colon Cancer Healed with Alkaline Diet, Turmeric, Apricot and Supplements. An inspirational story by Allan Taylor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more