• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಕಾರ್ಯಾಲಯಕ್ಕೆ ಬಿಡುವು, ಥ್ಯಾಂಕ್ಸ್ ಟು ಗಣೇಶ

By Shami
|

ಶಾಲಿವಾಹನ ಶಕ 1936 ವಿಜಯನಾಮ ಸಂವತ್ಸರ ದಕ್ಷ್ಣಿಣಾಯನ ವರ್ಷಋತು ಭಾದ್ರಪದ ಶುಕ್ಲ ಚೌತಿ - ಸೋಮವಾರ ಸೆಪ್ಟೆಂಬರ್ 9 ಗಣೇಶನ ಹಬ್ಬ. ವಿದ್ಯೆ ಮತ್ತು ಸಿದ್ಧಿಯ ಜತೆಗೆ ಬುದ್ಧಿಯನ್ನೂ ದಯಪಾಲಿಸುವ ವಿನಾಯಕನ ವ್ರತ ಆಚರಣೆ ನಿಮಿತ್ತ ನಾಳೆ, ಅಂದರೆ ಸೋಮವಾರ, ಗಣೇಶನಿಗೆ ಕೈತುಂಬ ಕೆಲಸ, ನಮ್ಮ ನಿಮ್ಮೆಲ್ಲರ ಅಂತರ್ಜಾಲ ತಾಣಕ್ಕೆ ರಜೆ.

ಅನೂಚಾನವಾಗಿ kannada.oneindia.com ಲಿಂಕ್ ಬಳಸುತ್ತಿರುವವರಿಗೂ ಹಾಗೂ ಇತ್ತಿತ್ತಲಾಗಿ ಅಲ್ಲಿಂದ ರೀಡೈರೆಕ್ಟ್ ಆಗಿ ತೋರ್ಪಡಿಸುವ kannada.oneindia.com ವಿಳಾಸ ಬಳಸುತ್ತಿರುವರಿಗೂ ತಿಳಿಯಪಡಿಸುವುದೇನೆಂದರೆ ಸೋಮವಾರದಂದು ನಮ್ಮ ಕಾರ್ಯಾಲಯಕ್ಕೆ ಬಿಡುವು. ಆದಕಾರಣ, ಅಂದು ನಮ್ಮಲ್ಲಿ ಯಾವುದೇ ಸುದ್ದಿ ಸಮಾಚಾರಗಳು ಪ್ರಕಟವಾಗುವುದಿಲ್ಲ.

ಆದಾಗ್ಯೂ, ರಾಜ್ಯ-ದೇಶ-ವಿಶ್ವದಲ್ಲಿ ಅಂತಹಾ ತಲೆಹೋಗುವ ಸುದ್ದಿ ಸ್ಫೋಟಗಳೇನಾದರೂ ಕಂಡುಬಂದಲ್ಲಿ ತಾಣದ ಹಾಲಿಡೇ ವಾಚ್ ಮನ್ ಸುದ್ದಿಯನ್ನು ಅಪ್ಲೋಡುಮಾಡುವರು. ಇಷ್ಟಕ್ಕೂ, 140 ಕ್ಯಾರೆಕ್ಟರ್ ಮಾಧ್ಯಮ @Oneindiakannada ಸದಾ ಜಾಗೃತವಾಗಿರುವುದರಿಂದ ಸುದ್ದಿ ಶಬ್ದಗಳು, ಶುಭಕಾಮನೆಗಳು ನಿಮ್ಮಕಣ್ಣಿಗೆ ಬೀಳದೇ ಹೋಗಲಾರವು.

ನೀವು ಗಮನಿಸಿರುವಂತೆ ಆಪತ್ಕಾಲೀನ ಪರಿಸ್ಥಿತಿಗಳನ್ನು ಹೊರತುಪಡಿಸಿದರೆ ನಮ್ಮ ವೆಬ್ ಸೈಟಿನ ಕೋಳಿ ಕೂಗುವುದು ಬೆಂಗಳೂರಿನ ಬೆಳಗ್ಗೆ 8 ಕ್ಕೆ. ಅಲ್ಲಿಂದ ಸತತ12 ಗಂಟೆಗಳ ಕಾಲ ಸುದ್ದಿ-ಮನರಂಜನೆ-ಪ್ರವಾಸ-ಫೋನು ಫೇಸ್ ಬುಕ್-ಆಹಾರ ಆರೋಗ್ಯ-ಕಾರು ಬೈಕುಗಳ ಸುದ್ದಿ ರೈಲು ಓಡುತ್ತಲೇ ಇರುತ್ತದೆ. ಕನ್ನಡ ಅಂತರ್ಜಾಲದ "ರಾಜಧಾನಿ ಎಕ್ಸ್ ಪ್ರೆಸ್" ನ ಯಾವುದೋ ಒಂದು ಬೋಗಿಯಲ್ಲಿ ಕುಳಿತು ನಿತ್ಯ ಪ್ರಯಾಣಿಸುವ ನಿಮಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ.

ಬೆಂಗಳೂರಿನ ಕೋಳಿ ಕೂಗದಿದ್ದರೂ ಜಗತ್ತಿನಲ್ಲಿ ಬೆಳಕಾಗುತ್ತದೆ. ಭೂಗೋಳ ಹಾಗೂ ಜಾಗತಿಕ ಗಡಿಯಾರಗಳ ಗುಲಾಮರಾಗಿರುವವರಿಗೆ ಅವರವರ ಟೈಮುಗಳು ಅವರವರಿಗೆ ಚೆನ್ನಾಗಿ ಗೊತ್ತಿರ್ತದೆ. ಉದಾಹರಣೆಗೆ ಈ ಫಾಲ್ ಸೀಸನ್ನಿನಲ್ಲಿ ( ಸೆಪ್ಟೆಂಬರ್-ಡಿಸೆಂಬರ್) San Diego California ಅಥವಾ Seattle,Washinton USA ಗಡಿಯಾರಕ್ಕಿಂತ ಬೆಂಗಳೂರು ಕ್ಲಾಕುಗಳು 12.30 ತಾಸು ಮುಂದೆ ಇದೆ.

ಬೆಳಗಾಗೆದ್ದು ಯಾರ್ಯಾರ ನೆನೆಯಲಿ ಅಂದ್ಕೋತ ನೀವುಗಳು, ಧಾವಂತದಿಂದ thatskannada ಓಪನ್ ಮಾಡುತ್ತಿರುವಾಗ ಅಂದಿನ ಡೇ ವರ್ಕ್ ಮುಗಿಸಿದ ನನ್ನ ಕೈಗಳು ಲಿಕ್ವಿಡ್ ಸೋಪಿನ ಅಭ್ಯಂಜನಕ್ಕಾಗಿ ಹಾತೊರೆಯುತ್ತಿರುತ್ತವೆ. ಹೇಗೂ ಇರಲಿ, ಪ್ರತಿ ಕ್ಷಣ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ, 175 IP City ಗಳ ಪೈಕಿ ಎಲ್ಲೋ ಒಂದ್ಕಡೆ ಜೀವನ ಸಾಗಿಸುತ್ತಿರುವ ಕನ್ನಡಿಗರ ಮನೆಗಳಲ್ಲಿ ಸೂರ್ಯ ಆಗತಾನೆ ಡ್ಯೂಟಿಗೆ ಹಾಜರಾಗಿ ಸ್ವೈಪ್ ಮಾಡಿರ್ತಾನೆ.

ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ ಎಂದು ಜಿಪಿ ರಾಜರತ್ನಂ ಬರೆದ ಹಾಗೆ, ನೀವು ಹಾಡುವ ಹಾಗೆ, ಭೂಮಂಡಲ ಸೂರ್ಯನ ಎಳೆಕಿರಣಗಳಿಗೆ ಕನ್ನಡ ಅಕ್ಷರಗಳನ್ನು ಸೋಂಕಿಸುವ ಆಕಾಂಕ್ಷೆ ನಮ್ಮದು. ಅಂದ್ರೆ 24/7 ಕನ್ನಡ ಆನ್ ಲೈನ್. Your Good Morning Browsing ನಿಂದ After Dinner Browsing ವರೆಗೆ ಕರ್ನಾಟಕದ ಆಗುಹೋಗುಗಳನ್ನು ಸತತವಾಗಿ ಬಿಂಬಿಸುವ ಸಂತೋಷ ನಮ್ಮದಾಗುವುದು ಬಾಕಿ ಇದೆ.

ಆ ದಿನಗಳು ಬೇಗ ಬರಲಿ ಎಂದು ಹಾರೈಸುವ 'ಜವಾಬ್ದಾರಿ' ನಿಮ್ಮದು. ಈ ನಡುವೆ ಜಗತ್ತಿನ ನಾನಾ ಮೂಲೆಗಳಿಂದ ಗೌರಿ-ಗಣೇಶ ಹಬ್ಬದ ಶುಭಾಶಯಗಳು ನಿಮಗೆ ಹೇಗೂ ತಲುಪಿರುತ್ತದೆ. ಕಡಬು, ಚಕ್ಕುಲಿ, ಕೋಡುಬಳೆ ಶುಭಾಶಯಗಳು ನಮ್ಮ ಕಡೆಯಿಂದ - ಜೈ ಗಣೇಶ.

(ರೇಖಾ ಚಿತ್ರ ಕೃಪೆ : ಹೋಲಿ ಟ್ರಾಯ್)

ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ ನಿನಗೆ 21 ಯೂಟ್ಯೂಬ್ videoಗಳು! ನೋಡಿ, ಆನಂದಿಸಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada news portal at www.oneindia.com is closed on Monday 9th Sept due to Indian festival Ganesha Chaturthi. So, lets avail this much needed break from breaking news furore Karnataka-India. On this occasion, we take great pleasure in sending out seasons greetings, a tradition in which many families participate. There's no better time than the cheerful holiday. Happy festival and festivities. Btw, for any thing urgent message, please do follow us on Twitter
 @Oneindiakannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more