ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡವನ್ನು ಹಂಚಿ ಸವಿಯಲು ಹೊಸ ಫೇಸ್‌ಬುಕ್ ಆಪ್

By Prasad
|
Google Oneindia Kannada News

ಅಂತರ್ಜಾಲದಲ್ಲಿ ಎಂದೋ ಕಳೆದುಹೋಗಿದ್ದ ಸ್ನೇಹಿತನನ್ನು, ಬಂಧುಗಳನ್ನು ಹುಡುಕುವುದು, ಸ್ಮೃತಿಪಟಲದಿಂದ ಮರೆತೇಹೋಗಿದ್ದ ಅವರ ಇತ್ತೀಚಿನ ಫೋಟೋವನ್ನು, ಅವರು ನಡೆಸುತ್ತಿರುವ ಚಟುವಟಿಕೆಗಳನ್ನು, ಬೇಕು ಬೇಡಗಳನ್ನು ಕಂಡುಕೊಳ್ಳುವುದು ಇಂದು ಕಷ್ಟದ ಕೆಲಸವಾಗಿ ಉಳಿದಿಲ್ಲ. ಫೇಸ್‌ಬುಕ್‌ಗೆ ಹೋಗಿ ಹುಡುಕಿದರೆ ಜಗತ್ತಿನ ಯಾವುದೋ ಮೂಲೆಯಲ್ಲಿರುವ ಚಡ್ಡಿ ದೋಸ್ತ್ ಪಕ್ಕದಲ್ಲಿ ಬಂದು ಕುಳಿತುಬಿಡುತ್ತಾನೆ.

ಹೀಗಿದೆ ಇಂದಿನ ಜಗತ್ತು. ಹಲೋ ಹಾಯ್ ಬಾಯ್ ನಿಂದ ಹಿಡಿದು ಗುಡ್ ಮಾರ್ನಿಂಗ್, ಗುಡ್ ನೈಟ್‌ವರೆಗೆ ಎಲ್ಲ ಚಟುವಟಿಕೆಗಳು ಇಂದು ಸಾಮಾಜಿಕ ತಾಣದಲ್ಲಿ ನಡೆಯುತ್ತಿವೆ. ಯಾವುದೇ ಪೇಪರಿನಲ್ಲಿ, ಟಿವಿಯಲ್ಲಿ ಕಾಣದಿರುವ ಘಟನೆಗಳು, ವರದಿಗಳು ಫೇಸ್‌ಬುಕ್‌ನಲ್ಲಿ ಪ್ರತ್ಯಕ್ಷವಾಗಿರುತ್ತವೆ. ಒಂದು ರೀತಿ ಈಮೇಲ್‌ಗಿಂತ ವೇಗವಾಗಿ ಮಾಹಿತಿಗಳು ಇಂದು ಫೇಸ್‌ಬುಕ್ಕಿನಲ್ಲಿ ಹರಿದಾಡುತ್ತಿವೆ.

ಇದು ಯಾವ ಮಟ್ಟಕ್ಕೆ ಬಂದು ತಲುಪಿದೆಯೆಂದರೆ, "ಮಗಾ ಎಲ್ಲಾರೂ ಕಾಯ್ತಿದ್ದಾರೆ ಬೇಗನೆ ಊಟಕ್ಕೆ ಬಾರೋ" ಎಂದು ತಂದೆ ಒಂದು ಕೋಣೆಯಲ್ಲಿರುವ ಡೆಸ್ಟ್‌ಟಾಪ್‌ನಿಂದ ಇನ್ನೊಂದು ಕೋಣೆಯಲ್ಲಿ ಕದಹಾಕಿ ಕುಳಿತು ಫೇಸ್‌ಬುಕ್ ಲೋಕದಲ್ಲಿ ಕಳೆದುಹೋಗಿರುವ ಮಗನನ್ನು ಎಚ್ಚರಿಸಲು ಸಂದೇಶ ರವಾನಿಸಿರುತ್ತಾನೆ. ಇದು ಉತ್ಪ್ರೇಕ್ಷೆಯ ಸಂಗತಿಯಲ್ಲ.

ಹೀಗಿರುವ ವರ್ಚುವಲ್ ಲೋಕದಲ್ಲಿ, ಅನೇಕರು ಅನೇಕ ವೆಬ್‌ಸೈಟುಗಳಲ್ಲಿ ಬರೆದಿರುವ ಲೇಖನಗಳು ಹರಿದಾಡುತ್ತಿರುತ್ತವೆ. ಅವನ್ನು ನಮ್ಮಷ್ಟಕ್ಕೆ ನಾವು ಓದಿ ಮುಗಿಸದೆ ಸ್ನೇಹಿತರಿಗೂ ಹಂಚಬೇಕು. ಆದರೆ, ಇನ್ನು ಮುಂದೆ ಒನ್ಇಂಡಿಯಾ ಕನ್ನಡ ಪೋರ್ಟಲ್ಲಿನಲ್ಲಿ ಪ್ರಕಟವಾದ ಲೇಖನಗಳನ್ನು ಫೇಸ್ ಬುಕ್ ಮೆಸೇಜ್ ಬಾಕ್ಸ್ ಮುಖಾಂತರ ಕಳಿಸುವ ಗೋಜಿಗೆ ಹೋಗದೆ ಹೊಸದಾಗಿ ಬಿಡುಗಡೆಯಾಗಿರುವ ಫೇಸ್‌ಬುಕ್ ಆಪ್ ನಿಮ್ಮ ಬ್ರೌಸರ್‌ನಲ್ಲಿ ಅಳವಡಿಸಿಕೊಂಡರೆ ಆಯಿತು.

ನಿಮ್ಮ ಫೇಸ್‌ಬುಕ್ ತಾಣಕ್ಕೆ ಬರುವ ಸಾವಿರಾರು ಕನ್ನಡಿಗರಿಗೆ ಅವರಿದ್ದಲ್ಲಿಯೇ ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಿರುವ, ನಿಮಗಿಷ್ಟವಾದ ಲೇಖನಗಳನ್ನು, ಫೋಟೋಗಳನ್ನು ಹಂಚಬಹುದು. ಈ ಒನ್ಇಂಡಿಯಾ ಫೇಸ್‌ಬುಕ್ ಆಪ್ ಅನ್ನು ಇನ್‌ಸ್ಟಾಲ್ ಮಾಡುವುದು ಕೂಡ ತೀರ ಸುಲಭ. ಕೆಳಗೆ ತಿಳಿಸಿರುವ ಹಂತಗಳನ್ನು ಪಾಲಿಸಿದರೆ ಸುಲಭವಾಗಿ ಫೇಸ್‌ಬುಕ್ ಆಪ್ ಇನ್‌ಸ್ಟಾಲ್ ಮಾಡಬಹುದು.

1) ಲೇಖನದ ಶೀರ್ಷಿಕೆಯ ಮೇಲ್ಭಾಗದಲ್ಲಿ ಕಾಣುವ Enable Social Reader ಬಟನ್ ಕ್ಲಿಕ್ ಮಾಡಿರಿ.

2) ಆಗ ತೆರೆದುಕೊಳ್ಳುವ ವಿಂಡೋದಲ್ಲಿ ಫೇಸ್‌ಬುಕ್ ಲಾಗಿನ್, ಪಾಸ್‌ವರ್ಡ್ ಹಾಕಿ ಫೇಸ್‌ಬುಕ್ ಸೇರಿಕೊಳ್ಳಿರಿ.

3) ನಿಮ್ಮ ಫೇಸ್‌ಬುಕ್ ಪುಟದಲ್ಲಿ ಒನ್ಇಂಡಿಯಾ ಫೇಸ್‌ಬುಕ್ ಆಪ್ ಇನ್‌ಸ್ಟಾಲ್ ಆಗಲು Allow ಬಟನ್ ಒತ್ತಿರಿ.

ಇಷ್ಟು ಮಾಡಿದರೆ ಸಾಕು, ನೀವು ನಮ್ಮ ಪೋರ್ಟಲ್‌ನಲ್ಲಿ ವೀಕ್ಷಿಸುವ ಲೇಖನಗಳು ಯಾವುದೇ ಶ್ರಮವಿಲ್ಲದೆ ನಿಮ್ಮ ಸ್ನೇಹಿತರಿಗೂ ಓದಲು ಲಭ್ಯವಾಗುತ್ತವೆ. ಕನ್ನಡವನ್ನು ಅಂತರ್ಜಾಲದಲ್ಲಿ ಸ್ನೇಹಿತರು, ಬಂಧುಗಳೊಂದಿಗೆ ಹಂಚಿಕೊಳ್ಳಲು ಇದಕ್ಕಿಂತ ಉತ್ತಮವಾದ ಸಲಕರಣೆ ಬೇಕೆ? ಇನ್ನೇಕೆ ತಡ, ಒನ್ಇಂಡಿಯಾ ಫೇಸ್‌ಬುಕ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿರಿ. ಹಾಗೆಯೆ, ನಿಮ್ಮ ಸ್ನೇಹಿತರನ್ನೂ ಈ ಆಪ್ ಬಳಸಲು ಆಹ್ವಾನಿಸಿ.

English summary
Oneindia has released another service to the readers by introducing Oneindia Facebook App. By using this all new feature the browser or Facebook user can share the Kannada articles with his friends circle on Facebook. It is easy to install the Oneindia Facebook App.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X