ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರೂರು ತಿರುಗುವವರಿಗೆ ಟ್ರಾವೆಲ್ ಗೈಡ್

By ಶಾಮ್
|
Google Oneindia Kannada News

"ಲಾಸ್ಟ್ ವೀಕೆಂಡು ಮಡಿಕೇರಿಯ ತಡಿಯಂಡಮೋಲ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದೆ. ಏನ್ ಸಖತ್ತಾಗಿತ್ತು ಗೊತ್ತಾ?" ಎಂದು ನಿಮ್ಮ ಸ್ನೇಹಿತನೋ, ಸಹೋದ್ಯೋಗಿಯೋ ಮಾತಾಡುತ್ತಿದ್ದುದು ನಿಮ್ಮ ಕಿವಿಗೆ ಬೀಳುತ್ತಿದ್ದಂತೆ ನಿಮ್ಮಲ್ಲಿ ಒಂದು ಬಗೆಯ ಚಡಪಡಿಕೆ ಶುರುವಾಗಿಬಿಡುತ್ತದೆ. ಅಲ್ಲಿಗೆ ಹೋಗಿ ಬಂದವನಿಂದ ಅಥವಾ ಇಂಟರ್ನೆಟ್ಟಿನಿಂದ ಆ ನೋಡಬೇಕಾದ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವವರೆಗೆ ನಿಮಗೆ ನೆಮ್ಮದಿ ಇರುವುದಿಲ್ಲ. ನೀವು ನಿಜಕ್ಕೂ ಬೇರೆ ಬೇರೆ ಸ್ಥಳಗಳನ್ನು ನೋಡುವ ಹಂಬಲವುಳ್ಳವರಾಗಿದ್ದರೆ, ಎಲ್ಲ ಪ್ಲಾನ್ ಮಾಡಿ ಅಲ್ಲಿಗೆ ಹೋಗಿಬರುವವರೆಗೆ ಮನಸ್ಸಿಗೆ ಶಾಂತಿ ಸಿಗುವುದಿಲ್ಲ.

Native Planet : Explore your world

ನೋಡಿಬಂದವರ ಇಂಚಿಂಚು ವರ್ಣನೆ ನಿಮ್ಮ ಮನಃಪಟಲದಲ್ಲಿ ಹಾಗೆಯೇ ಸ್ಥಾಪಿತವಾಗುತ್ತ ಹೋಗುತ್ತದೆ. ನೀವು ಅಲ್ಲಿಗೆ ಹೋದಾಗಲೂ ಅಂತಹ ವಿವರಗಳನ್ನು ನಿಮಗೇ ಅರಿವಿಲ್ಲದಂತೆ ಹುಡುಕುತ್ತಾ ಹೋಗುತ್ತೀರಿ. ಮಡಿಕೇರಿ ಒಂದೇ ಅಲ್ಲ ಯಾವುದೇ ಸ್ಥಳವಾದರೂ ಅಲ್ಲಿ ಸಿಗುವ ನೋಡತಕ್ಕ ಸ್ಥಳಗಳು, ಅಲ್ಲಿನ ವಾತಾವರಣ, ಅಲ್ಲಿನ ವಸತಿ, ಊಟ ತಿಂಡಿಯ ವ್ಯವಸ್ಥೆ, ಅಲ್ಲಿಗೆ ಹೋಗುವ ರೀತಿ ಮುಂತಾದ ವಿವರಗಳು ಮೊದಲೇ ಲಭ್ಯವಾದರಂತೂ ನಿಮ್ಮ ಪ್ರಯಾಣ ಅರ್ಧಕ್ಕರ್ಧ ಸಕ್ಸಸ್ ಆದಂತೆಯೆ. ಈಗ ಟೂರಿಸಂ ಗೈಡ್ ಹಿಡಿದು ನಾವೇ ನಿಮ್ಮ ಮುಂದೆ ಬಂದಿದ್ದೇವೆ. ಅಂದರೆ...

ನಿಮಗೆ ಭಾರತದ ಮತ್ತು ಕರ್ನಾಟಕದ ಎಲ್ಲ ಪ್ರವಾಸಿ ತಾಣಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿ, ನಿಮ್ಮ ಪ್ರಯಾಣ ಸುಖಕರವಾಗಿರಲೆಂಬ ಆಶಯದೊಂದಿಗೆ, ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜಿಯ ಮಾತೃವೆಬ್‌ತಾಣ ಒನ್ಇಂಡಿಯಾದ 'ನೇಟಿವ್ ಪ್ಲಾನೆಟ್ ಅಂತರ್ಜಾಲ ತಾಣ ನಿಮ್ಮ ಮುಂದೆ ಬಂದುನಿಂತಿದೆ. ನೀವು ಯಾವುದೇ ಪ್ರಮುಖ ಪ್ರದೇಶವನ್ನು ಹೆಸರಿಸಿ, ಅದೆಲ್ಲ ಈ ತಾಣದಲ್ಲಿ ಸಿಗಲಿದೆ. ಪ್ರವಾಸಿ ಸ್ಥಾನಗಳ ಗಮ್ಮತ್ತೇ ಅಂತಹುದು. ಒಂದು ನೋಡುತ್ತಿದ್ದಂತೆ ಇನ್ನೊಂದು ನೋಡುವ ಬಯಕೆ ಹುಟ್ಟುತ್ತದೆ. ಸ್ನೇಹಿತರೊಂದಿಗೆ ಮೊದಲ ಬಾರಿ ಹೋದವರು, ಮುಂದಿನ ಬಾರಿ ಕುಟುಂಬ ಸಮೇತ ಹೋಗಬೇಕೆಂದು ಪ್ಲಾನ್ ಹಾಕಿಕೊಳ್ಳುತ್ತಾರೆ.

ಅರೆ, ಥತ್ತೇರೇಕಿ ಕರ್ನಾಟಕದಲ್ಲಿ ಇಂಥದೊಂದು ಸ್ಥಳ ನಮ್ಮ ಸುತ್ತಲೇ ಇದೆ ಎಂದು ಗೊತ್ತೇ ಇರಲಿಲ್ಲ ಎಂದು ನಿಬ್ಬೆರಗಾಗಬೇಕು, ಹಾಗೆ ಒಂದೊಂದು ಪ್ರದೇಶದ ವಿವರಗಳನ್ನು ನೇಟಿವ್ ಪ್ಲಾನೆಟ್ ನೀಡುತ್ತ ಹೋಗುತ್ತದೆ. ಪ್ರವಾಸಿ ಸ್ಥಳಗಳ ನೋಡುವ ಅದ್ಭುತ ಅನುಭವ ಪಡೆಯಲು ನೀವು ಸಿದ್ಧರಾಗಿದ್ದೀರಿ ತಾನೆ? ಮತ್ತೇಕೆ ತಡ, ಮಳೆಗಾಲವೇ ಇರಲಿ, ಚಳಿಗಾಲವೇ ಇರಲಿ, ಬೇಸಿಗೆ ಕಾಲವೇ ಇರಲಿ, ಸಾಮಾನು ಸರಂಜಾಮುಗಳನ್ನು ಸಿದ್ಧಪಡಿಸಿಕೊಳ್ಳುವ ಮುನ್ನ ಒಂದು ಬಾರಿ ಇಡೀ ಜಾಲತಾಣವನ್ನು ಅಥವಾ ನಿಮಗೆ ಬೇಕಾದ ಜಾಗವನ್ನು ವಿಹರಿಸಿಬಿಡಿ. ಜೊತೆಗೆ ಯಾವುದೇ ರೀತಿಯ ವಿವರ ಒದಗಿಸಲು ನೇಟಿವ್ ಪ್ಲಾನೆಟ್ ಸಿದ್ಧ.

ನೇಟಿವ್ ಪ್ಲಾನೆಟ್‌ನಲ್ಲಿ ನಿಮಗೆ ಏನೇನು ಸಿಗಲಿದೆ?

* ಪ್ರವಾಸಿ ತಾಣದ ಐತಿಹಾಸಿಕ, ಸಾಂಸ್ಕೃತಿಕ ಮಹತ್ವ.
* ಆ ಸ್ಥಳದ ಆಕರ್ಷಣೆ ಏನು? ಫೋಟೋ ಗ್ಯಾಲರಿ ಸಮೇತ ವಿವರಣೆ.
* ಸುತ್ತಲು ನೋಡಲೇಬೇಕಾದ ಪ್ರಮುಖ ಉಪತಾಣಗಳು.
* ಅಲ್ಲಿ ವಸತಿಗೆ, ಊಟಕ್ಕೆ ಏನು ವ್ಯವಸ್ಥೆ ಮಾಡಲಾಗಿದೆ?
* ಆ ಸ್ಥಳಕ್ಕೆ ತಲುಪುವುದು ಹೇಗೆ?
* ಯಾವ ಸಮಯದಲ್ಲಿ ಯಾವ ಸ್ಥಳ ನೋಡಬೇಕು?
* ಹವಾಮಾನದ ಸಂಪೂರ್ಣ ವಿವರ.

ಪ್ರಯಾಣಕ್ಕೆ ಹೋಗುವ ಮೊದಲೇ ಆ ಸಮಯ ಸೂಕ್ತವಾದ ಸಮಯ ಹೌದೋ ಅಲ್ಲವೋ ಮೊದಲೇ ತಿಳಿಯಿರಿ. ನಂತರ ಸಿದ್ಧತೆಗಳನ್ನು ಮಾಡಿಕೊಳ್ಳಿ. ಯಾವುದೇ ರೀತಿಯ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮನ್ನು ಕೂಡಲೆ ಸಂಪರ್ಕಿಸಿ. ನೇಟಿವ್ ಪ್ಲಾನೆಟ್ ಪ್ರವಾಸಿಗರ ಸಹಾಯಕ್ಕೆ ಸದಾ ಸಿದ್ಧ. [ನೇಟಿವ್ ಪ್ಲಾನೆಟ್ ಫೇಸ್‌ಬುಕ್ ಪುಟ]

ಏಕೆ ನೇಟಿವ್ ಪ್ಲಾನೆಟ್?

ನೇಟಿವ್ ಪ್ಲಾನೆಟ್ ಏಕೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಇಂಗ್ಲಿಷಿನಲ್ಲಿ ಹೇಳುವ ಹಾಗೆ 'ನೊ ಪೇನ್, ನೊ ಗೇನ್' ಎಂಬ ನಾಣ್ಣುಡಿಯು, ಖಂಡಿತವಾಗಿಯು ನಮ್ಮೊಂದಿಗಿದ್ದಾಗ ಸುಳ್ಳೆಂದು ಭಾಸವಾಗುವುದು. ಏಕೆಂದರೆ ನೀವು ಪ್ರಯಾಣಕ್ಕೆ ಬೇಕಾಗಿರುವ ಎಲ್ಲ ಮಾಹಿತಿಯನ್ನು ಅತ್ಯಂತ ಸರಳವಾಗಿ ಪಡೆಯಬಹುದಾದುದರಿಂದ, ನೀವು ನಮ್ಮೊಂದಿಗಿರಿ ಮತ್ತು ಉತ್ಕೃಷ್ಟ ಮಟ್ಟದ ಪ್ರಯಾಣದ ಅನುಭವವನ್ನು ನಮ್ಮಿಂದ ಪಡೆಯಿರಿ. ಅಂದ ಹಾಗೆ, ಈ ನೇಟೀವ್ ಪ್ಲಾನೆಟ್ ಇಂಗ್ಲಿಷ್ ತಾಣವಾಗಿರುತ್ತದೆ. ನೇಟಿವ್ ಪ್ಲಾನೆಟ್ ಅಂತರ್ಜಾಲ ಕನ್ನಡದಲ್ಲಿ ಮೂಡಿ ಬರುವವರೆಗೂ ನೀವು ಕಾಯಲೇಬೇಕು.

English summary
Native Planet the 'locations for destinations' portal opens up to detailed information on all aspects of travel, a discerning traveler would stretch to know. Coming under the umbrella of the www.oneindia.com family of Greynium Information Technologies Pvt Ltd, it is an attempt to cater to the quest of a traveler, a footloose!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X