ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಡಾವಣೆ ಕ್ಲೀನಾಯ್ತು, ನಿಮ್ಮ ಏರಿಯಾ ಗತಿಯೇನು?

By Shami
|
Google Oneindia Kannada News

My Street Clean Street
ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಏರಿಯಾಗಳಿವೆ. ಜನದಟ್ಟಣೆ ಹಾಗೂ ಅಪಾರವಾದ ಸಾಮಾಜಿಕ ಪ್ರಜ್ಞೆಯ ಕೊರತೆಯಿಂದ ಜನತೆ ತಮ್ಮ ಮನೆಯ ಕಸವನ್ನು ಬೀದಿಯಲ್ಲೇ ಬಿಸಾಕಿ ಹಾಯಾಗಿರುತ್ತಾರೆ. ಅಲ್ಲಲ್ಲಿ ಕಸ ಚೆಲ್ಲಾಡಿ ನೈರ್ಮಲ್ಯ ಕಾಪಾಡಿಕೊಳ್ಳದೆ ಇರುವ ಹಲವಾರು ಜನ ನಮ್ಮೊಂದಿಗಿದ್ದಾರೆ. ನಿಮ್ಮ ಕಣ್ಣಿಗೂ ಅವರು ಬಿದ್ದೇ ಇರುತ್ತಾರೆ. ಒಟ್ಟಿನಲ್ಲಿ ನಮ್ಮ ಮನೆ ಒಳಗೆ ಕ್ಲೀನ್ ಆಗಿದ್ದರೆ ಸಾಕು, ಓಡಾಡುವ ರಸ್ತೆ ಎಷ್ಟು ಗಲೀಜಾದರೂ ಪರವಾಗಿಲ್ಲ ಎಂದುಕೊಂಡು ಕ್ಲೆಲ್ನಿ ನೆಸ್ ಬಗ್ಗೆ ಉಪನ್ಯಾಸ ಕೊಡುತ್ತಾರೆ.

ಆದರೆ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿ ಇರುವ ಮನಸ್ಸುಗಳಿಗೆ ಈ ರೀತಿ ಇರುವುದಕ್ಕೆ ಆಗುವುದೇ ಇಲ್ಲ. ಅಂತಹ ಸಮಾನ ಮನಸ್ಕರು ಒಟ್ಟುಗೂಡಿ ತಮ್ಮ ಮನೆಯಷ್ಟೇ ನಮ್ಮ ರಸ್ತೆಯನ್ನೂ ಸ್ವಚ್ಛವಾಗಿಡುತ್ತಾರೆ. ಇಂಥ ಮನೋಭಾವವಿರುವ ಹಲವಾರು ಗುಂಪುಗಳು ನಮ್ಮ ಬೆಂಗಳೂರಿನಲ್ಲಿ ಇವೆ. ಆದರೆ ಸಾಲದು. ಅವುಗಳಲ್ಲಿ ಒಂದಾದ "My Street Clean Street" ಎಂಬ ಪರಿಸರ ಪ್ರಜ್ಞೆ ಇರುವ ಗುಂಪೊಂದು ನಗರದ ಸುಂದರ ಪ್ರದೇಶಗಳಲ್ಲಿ ಒಂದಾದ ಡಿಫೆನ್ಸ್ ಕಾಲೋನಿಯಲ್ಲಿದೆ.

ನಿವಾಸಿಗಳಿಗಾಗಿ ತೋಟದಲ್ಲಿನ ತ್ಯಾಜ್ಯವಸ್ತುಗಳನ್ನು ಉಚಿತವಾಗಿ ವಿಲೇವಾರಿ ಮಾಡುವ ಕೆಲಸವನ್ನು ಈ ವರ್ಷದ ಜೂನ್ 5 ರಿಂದ ಪ್ರಾರಂಭ ಮಾಡಲಾಗಿದ್ದು, ಅಲ್ಲಿನ ನಿವಾಸಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ನೀವು ಒಮ್ಮೆ ಡಿಫೆನ್ಸ್ ಕಾಲೋನಿಗೆ ಹೋಗಿ ನೋಡಿಕೊಂಡು ಬರಬಹುದು.ಮೈ ಸ್ಟ್ರೀಟ್ ಕ್ಲೀನ್ ಸ್ಟ್ರೀಟ್ ನ ಈ ಒಂದು ಮುಂದಾಳತ್ವಕ್ಕೆ ಅಲ್ಲಿನ ನಾಗರೀಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗ ಅಲ್ಲಿನ ಪ್ರತಿಯೊಂದು ಮನೆಯ ಮುಂದಿನ ಕಾಲುದಾರಿ ಹಾಗು ರಸ್ತೆಗಳು ಶುಚಿಯಾಗಿವೆ. ನೋಡುವುದಕ್ಕೆ ಚೆಂದ.

ಇದಕ್ಕಾಗಿ ಸಂತಸ ವ್ಯಕ್ತಪಡಿಸಿರುವ ಮೈ ಸ್ಟ್ರೀಟ್ ಕ್ಲೀನ್ ಸ್ಟ್ರೀಟ್ ನಾಗರೀಕ ಸಂಸ್ಥೆ ತಮ್ಮ ರಸ್ತೆ ಹಾಗು ಏರಿಯಾವನ್ನು ಶುಚಿಯಾಗಿ ಇಟ್ಟುಕೊಳ್ಳಲು ಸಹಕರಿಸಿದ ಡಿಫೆನ್ಸ್ ಕಾಲೋನಿಯ ಸಮಸ್ತ ನಾಗರೀಕರನ್ನು ಶ್ಲಾಘಿಸಿದ್ದು, ಇದಕ್ಕಾಗಿ ಧನ್ಯವಾದ ತಿಳಿಸಿದೆ. ನೀವುಗಳು ಇಂಥ ಶಹಭಾಸ್ ಗಿರಿಯನ್ನು ನೀವು ಪಡೆಯುವುದು ಯಾವಾಗ?

ತೋಟದ ತ್ಯಾಜ್ಯ ವಿಲೇವಾರಿ ಡಿಫೆನ್ಸ್ ಕಾಲೋನಿಗೆ ಯಾಕೆ ಅಗತ್ಯವಿದೆ?

- ಇದು ನಗರದಲ್ಲಿರುವ ಸುಮಾರು ಹಸಿರು ಪ್ರದೇಶಗಳಲ್ಲಿ ಒಂದಾಗಿದ್ದು, ಸಾಕಷ್ಟು ತೋಟದ ತ್ಯಾಜ್ಯ ಉತ್ಪತ್ತಿಯಾಗುತ್ತದೆ.
- ಈಗಿರುವ ವ್ಯವಸ್ತೆ ಸಮರ್ಪಕವಾಗಿ ವಿಲೇವಾರಿ ಮಾಡಲು ಅಸಮರ್ಥವಾಗಿರುವ ಕಾರಣ.
- ಮನೆ ಮುಂದೆ ಕಸ ಇಡುವುದು ಆರೋಗ್ಯಕ್ಕೆ ಕೆಡಕು ತರುವುದರಿಂದ.
- ಮನೆ ಮುಂದಿನ ತ್ಯಾಜ್ಯದಿಂದ ರಸ್ತೆಯ ಅಂದ ಕೆಡುವುದರಿಂದ.

ಗಾರ್ಡನ್ ವೇಸ್ಟ್ ಪಿಕಪ್ ಸರ್ವೀಸ್ ಹೇಗೆ ಕೆಲಸ ಮಾಡುತ್ತದೆ ?

- ಇವರು ವಾರಕ್ಕೊಮ್ಮೆ ನಿಮ್ಮ ಮನೆಗೆ ಬಂದು ತೋಟದ ತ್ಯಾಜ್ಯವನ್ನು ವಿಲೇವಾರಿಗೆ ತೆಗೆದುಕೊಂಡು ಹೋಗುತ್ತಾರೆ.
- ಎಲೆಗಳು ಹಾಗು ಮುರಿದ ರಂಬೆಯ ವೇಸ್ಟ್ ಅನ್ನು ಮಾತ್ರ ವಿಲೇವಾರಿ ಮಾಡುತ್ತಾರೆ.
- ನಿಮ್ಮ ತೋಟದ ತ್ಯಾಜ್ಯವನ್ನು ಪ್ಯಾಕ್ ಮಾಡಿ ಗೇಟಿನ ಒಳಗೆ ಬ್ಯಾಗಿನಲ್ಲಿ ಪ್ಯಾಕ್ ಮಾಡಿಟ್ಟರೆ ತೆಗೆದುಕೊಂಡು ಹೋಗುತ್ತಾರೆ.
- ಬ್ಯಾಗನ್ನು ಗೇಟಿನ ಒಳಗಡೆಯೇ ಇಟ್ಟರೆ ತೆಗೆದುಕೊಂಡು ಹೋಗಲು ಸರಿಯಾಗುತ್ತದೆ.

ಮೈ ಸ್ಟ್ರೀಟ್ ಕ್ಲೀನ್ ಸ್ಟ್ರೀಟ್ (MSCS) ಉದ್ದೇಶ ಏನು ?

ಇದರ ಉದ್ದೇಶ ನಿಮ್ಮ ರಸ್ತೆಯನ್ನು ಸುಂದರ ಹಾಗು ತ್ಯಾಜ್ಯಮುಕ್ತ ಮಾಡುವುದು. ಪ್ರಸ್ತುತ MSCS ಎಂಜಿ ರಸ್ತೆ, ರೆಸಿಡೆನ್ಸಿ ರಸ್ತೆ, ಬ್ರಿಗೆಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕೋರಮಂಗಲ 3ನೇ ಬ್ಲಾಕ್ ಹಾಗು ತಾವರೆಕೆರೆ ಬಡಾವಣೆಗಳಲ್ಲಿ ಈ ಸೇವೆಯನ್ನು ಮಾಡುತ್ತಿದೆ., ನೀವೂ ಇವರ ಜೊತೆ ಕೈಜೋಡಿಸಿ ನಿಮ್ಮ ರಸ್ತೆ, ಕೈತೋಟ ಶುಚಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ವಿವರಗಳಿಗೆ [email protected] ಗೆ ಮಿಂಚಂಚೆ ಕಳುಹಿಸಿ.

English summary
My Street Clean Street ( MSCS) an initiative of the ugly Indian thanks residents of Defence Colony Bangalore for making Garden Waste Pick-up service (for FREE) a huge success. This dream became a reality only because ALL the DC residents responded to Clean Street service. MSCS is offering this service to other localities as well. Is your colony too on the list?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X