• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಮೇಶ್ ಅರವಿಂದ್ ಬರೆದಿದ್ದಾರೆ 2 ಪುಸ್ತಕ

By Shami
|

ನಗುಮೊಗದ ನಟ, ನಿರ್ದೇಶಕ ರಮೇಶ್ ಅರವಿಂದ್ ಒಂದಲ್ಲ ಎರಡು ಪುಸ್ತಕ ಬರೆದಿದ್ದಾರೆ. ಒಂದು ಇಂಗ್ಲಿಷ್ನಲ್ಲಿ ಇನ್ನೊಂದು ಕನ್ನಡದಲ್ಲಿ. ಎರಡೂ ಪುಸ್ತಕಗಳು ಬಿಡುಗಡೆಗೊಳ್ಳುವುದಕ್ಕೆ ಚಡಪಡಿಸುತ್ತಿವೆ.

ಸಿಕ್ಕಸಿಕ್ಕ ಪುಸ್ತಕಗಳನ್ನು ಖರೀದಿಸಿ ಕಪಾಟಿನಲ್ಲಿ ಪೇರಿಸಿಡುವ ನಮ್ಮ ರಾಮಾ ಶಾಮಾ ಭಾಮಾ ಓದಿ ಓದಿ ಕೂಚುಭಟ್ಟ ಆದ ಅಂದುಕೊಂಡಿದ್ದವರಿಗೆ 'ನಾನೂ ಪುಸ್ತಕ ಬರೆದಿದೀನಿ, ಅದನ್ನ ನೀವು ಓದ್ರಿ' ಅಂತ ಹೇಳ್ತಾ ಇದಾರೆ ರಮೇಶ್.

ಕಾಲ್ ಶೀಟು, ಶೂಟಿಂಗು, ಈಟಿಂಗುಗಳಲ್ಲಿ ಬಿಜಿಯಾಗಿರುವ ನಮ್ಮ ಕನ್ನಡ ಚಿತ್ರ ಕರ್ಮಿಗಳು ಓದುವುದು ತುಂಬಾ ಕಡಿಮೆ. ಟೈಮೇ ಸಿಗಲ್ಲ. ಅಬ್ಬಬ್ಬಾ ಅಂದ್ರೆ ಶುಕ್ರವಾರದ ಸಚಿತ್ರಮಂಜರಿಗಳ ಪುರವಣಿಗಳನ್ನು ತಿರುವಿಹಾಕಬಹುದು. ಬರೆಯುವುದೇನಿಲ್ಲ. ಅಭಿಮಾನಿಗಳಿಗೆ ಹಸ್ತಾಕ್ಷರ ಕೊಡುವುದುದಕ್ಕೆ ಪೆನ್ನು ತೆರೆದರೆ ಅದೇ ಭಾಗ್ಯ.

ರಾಜೇಂದ್ರ ಸಿಂಗ್ ಬಾಬು, ಶರಪಂಜರ ಶಿವರಾಂ, ನಾಗಾಭರಣ, ಅನಂತ್ ನಾಗ್ ಮುಂತಾದ ಹಳೆಯ ಕಾಲದ ಕೆಲವು ನಟ ನಿರ್ದೇಶಕರು ಗ್ರಂಥಗಳನ್ನು ಓದುವುದರಲ್ಲಿ ಸುಖ ಕಂಡವರು. ಅಭಿನಯ, ಚಿತ್ರನಿರ್ಮಾಣದ ವ್ಯಾಕರಣ ಅರಿಯಲು ಅವರು ಓದುತ್ತಿದ್ದರು. ಹಾಗಂತ ಈಗಿನ ಕಾಲದ ನಟನಟಿಯರು ಓದುವುದರಲ್ಲಿ ಹಿಂದೆ ಬಿದ್ದಿಲ್ಲ. ಗಂಟೆಗೆ 18 SMSಗಳನ್ನು ಓದುವುದು ಅದಕ್ಕೆ ರಿಪ್ಲೈ ಹೊಡೆಯುವುದನ್ನು ಮಾಡ್ತಾರೆ.

ಶಿವರಾಂ ಮತ್ತು ಅರವಿಂದ್ ಮನೆಗೆ ನೀವೊಮ್ಮೆ ಹೋಗಬೇಕು. ಇದೇನು ಮನೆನೋ ಅಥವಾ ಲೈಬ್ರೆರಿನೋ ಎಂಬ ಅನುಮಾನ ತರಿಸುವಷ್ಟು ಪುಸ್ತಕ ಶೇಖರಣೆ ಮಾಡಿದ್ದಾರೆ. ಓದುತ್ತಾರೆ ಕೂಡ. ಓದುವುದರಿಂದ ಅಲ್ಪ ವಿರಾಮ ಪಡೆದುಕೊಂಡಿದ್ದ ರಮೇಶ್ ಪಟ್ಟಾಗಿ ಕುಳಿತು ಬರೆದ ಕೃತಿಗಳು ಇದೇ ಶನಿವಾರ ನಿಮಗೆ ಸಿಗತ್ತೆ.

ಇಂಗ್ಲೆಂಡು ಮತ್ತು ಭಾರತದಲ್ಲಿ ನೆಲೆಗೊಂಡಿರುವ ಪುಸ್ತಕ ಪ್ರಕಾಶನ ಸಂಸ್ಥೆ ಪೀಕ್ ಫ್ಲಾಟ್ ಫಾರಂ ಮತ್ತು ಕಡಲು ಒಟ್ಟಾಗಿ ಅರವಿಂದ್ ಕೃತಿಗಳನ್ನು ಅಚ್ಚುಹಾಕಿಸಿವೆ. ಇವೆರಡು ಕೃತಿಗಳು ಇದೇ ಶನಿವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ರಿಲೀಜ್ ಆಗುತ್ತವೆ.

ಇಂಗ್ಲಿಷ್ ಪುಸ್ತಕದ ಶೀರ್ಷಿಕೆ It's No F_N Without U ಕನ್ನಡದಲ್ಲಿ ಖುಷಿಯಿಂದ ರಮೇಶ್. ಹೆಚ್ಚಿನ ಮಾಹಿತಿಗೆ visit: http://www.peakplatform.com and http://www.kadalu.com. ಸಂಪರ್ಕ, ಶ್ರೀಧರ ಎ ಎಸ್ : 9741 225 441

Peak Platform and Kadalu, UK and Indian based publishers, are jointly organising book launch for Ramesh Aravind's first book, It's No F_N Without U (in English) and Kushiyinda Ramesh (in Kannada). Venue: Press Club, Cubbon Park, Bangalore, Saturday 8th September 2012 Time: 11 am.

About Kadalu : Kadalu is an Indian publisher whose titles include 'Gandhi From Monu to Mahatma', an English translation of Central Sahitya Academy award winning Kannada title 'Paapu Gandhi Gandhi Bapu Aada Kathe' by Bolwar Mahamad Kunhi, 'Monitor Lizard and other Stories', an English translation of Parisarada Kathe by K P Purnachandra Tejasvi and 'Noduva Bage' a Kannada translation of John Berger's 'Ways of Seeing'. Kadalu is representing some of the finest Indian writers and presenting their works to an international market and bringing some of the best world writing to Indian languages.

About It's No Fun Without U by K P Ramesh Aravind.

Ramesh Aravind, popular movie star, takes us on a journey of fun and inspirational verse with personal anecdotes and illustrations in his first book.

It's No F_N Without U

Author: Ramesh Aravind

Publisher: Kadalu

ISBN: 9781907219627, 160 pages

Format: Hardback Rs 350

English summary
Peak Platform and Kadalu, UK and Indian based publishers, are jointly organizing Bangalore book launch for Kannada actor Ramesh Aravind's first book, It's No F_N Without U (in English) and Kushiyinda Ramesh (in Kannada).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X