ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಜಗತ್ತಿನ ಅತ್ಯಂತ ದೊಡ್ಡ ಬಾವುಟ

By Shami
|
Google Oneindia Kannada News

ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬಾರದು ಮತ್ತು ಕನ್ನಡ ಬಾವುಟವನ್ನು ದುರ್ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ (ಅ. 31) ಹಿನ್ನೆಲೆಯಲ್ಲಿ ಈ ಕೆಳಗಿನ ಸ್ಟೋರಿಯನ್ನು ಪ್ರಸ್ತುತಪಡಿಸಲಾಗಿದೆ.

ಹೋದ ವರ್ಷ ಅಂದರೆ 2011ರ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನೆಲಮಂಗಲದ ವಿನೋದ್ ಕುಮಾರ್ ಎಂಬುವವರು ಕನ್ನಡ ಜಗತ್ತಿನ ಅತ್ಯಂತ ದೊಡ್ಡ ಕನ್ನಡ ಬಾವುಟವನ್ನು ತಯಾರಿಸಿ ಅನಾವರಣಗೊಳಿಸಿದ್ದರು. ಜನ ನೋಡಿ ಸಂಭ್ರಮ ಪಟ್ಟಿದ್ದರು. ಇಂಥ ಧ್ವಜವನ್ನು ನಾವು ಹಿಂದೆಂದೂ ನೋಡಿರಲಿಲ್ಲ ಎಂದು ಸಂತಸದಿಂದ ಬೀಗಿದ್ದರು.

ಬಟರ್ ಸಿಲ್ಕ್ ನಿಂದ ತಯಾರಿಸಿದ 100 ಅಡಿ ಎತ್ತರ, 150 ಅಡಿ ಉದ್ದದ ಕನ್ನಡ ಬಾವುಟ ವಿನೋದ್ ಕುಮಾರ್ ಕುಟುಂಬದ ಕನ್ನಡ ಪ್ರೀತಿಗೆ ದ್ಯೋತಕವಾಗಿತ್ತು. ಒಟ್ಟು 2000 ಮೀಟರ್ ಬಟ್ಟೆಯನ್ನು ಬಳಸಿ ತಯಾರಿಸಿದ ಕೆಂಪು ಹಳದಿಯ ಬಾವುಟ ಹೊಲಿಯುವುದಕ್ಕೆ ಕುಟುಂಬದ ಎಲ್ಲರೂ ಕೈಜೋಡಿಸಿದ್ದು ಗಮನಾರ್ಹ.

ಈ ಪಾಟಿ ದೊಡ್ಡ ಬಾವುಟವನ್ನು ಹಾರಿಸುವುದು ಕಷ್ಟ. ಅದಕ್ಕೆ ವಿನೋದ್ ಕುಮಾರ್ ಒಂದು ಪ್ಲಾನ್ ಮಾಡಿದ್ದರು. 750 ಶಾಲಾ ಬಾಲಕಿಯರ ತಂಡ ರಚಿಸಿ ಸಾಮೂಹಿಕ ಧ್ವಜಾರೋಹಣ ಮಾಡಿ ಕನ್ನಡ ಪ್ರಪಂಚದ ಗಮನ ಸೆಳೆದಿದ್ದರು. ಅಂದಹಾಗೆ, ಈ ಬಾವುಟ ತಯಾರಿಸಲು ಅವರಿಗೆ ತಗುಲಿದ ವೆಚ್ಚ 2 ಲಕ್ಷ ರೂಪಾಯಿ.

2012ರ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವೊಂದರಲ್ಲಿ ವಿನೋದ್ ಕುಮಾರ್ ಅವರನ್ನು ಒನ್ಇಂಡಿಯ ಕನ್ನಡ ಪ್ರತಿನಿಧಿ ಭೇಟಿಯಾಗಿದ್ದರು. ಗತವೈಭವವನ್ನು ಮೆಲಕು ಹಾಕಿದ ಅವರು ಈ ಬಾವುಟ ನಮ್ಮ ಕುಟುಂಬದ ಜೀವಮಾನದ ಶ್ರೇಷ್ಠ ಸಾಧನೆ ಎಂದು ಹೇಳಿದರು.

ಈ ವರ್ಷದ ರಾಜ್ಯೋತ್ಸವಕ್ಕೆ ವಿನೋದ್ ಕುಮಾರ್ ವಿಶೇಷ ಕಾರ್ಯಕ್ರಮವನ್ನೇನೂ ಹಾಕಿಕೊಂಡಿಲ್ಲ. ಏನಾದರೂ ಹೊಸದನ್ನು ಮಾಡುವ ಬಯಕೆ ಅವರಿಗಿದ್ದೇ ಇದೆ. ಆದರೆ, ಪ್ರತೀವರ್ಷ ಲಕ್ಷಾಂತರ ರು. ಬಂಡವಾಳ ತೊಡಗಿಸುವ ಸ್ಥಿತಿಯಲ್ಲಿ ಅವರಿಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರು ನೆಲಮಂಗಲದಲ್ಲಿ ನಾಟ್ಯಭೂಷಣ ಕಲಾಕೇಂದ್ರ ನಡೆಸುತ್ತಿದ್ದಾರೆ. ಆಸಕ್ತರಿಗೆ ಭರತನಾಟ್ಯ ಹೇಳಿಕೊಡುವ ಶಾಲೆ ಅದಾಗಿದೆ.

ಯಾರೇ ಆಗಲಿ, ಕನ್ನಡ ಪ್ರೀತಿಗಾಗಿ ಪ್ರತೀವರ್ಷ ಭರತನಾಟ್ಯ ಮಾಡುವುದಕ್ಕೆ ಆಗಲ್ಲ. ಏನೇ ಆಗಲಿ, ವಿನೋದ್ ಕುಮಾರ್ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ನಮ್ಮ ಕಡೆಯಿಂದ 2012ರ ಕನ್ನಡ ರಾಜ್ಯೋತ್ಸವ ಶುಭಾಶಯಗಳು. ವಿನೋದ್ ಅವರ ಈಮೇಲ್ ವಿಳಾಸ : [email protected]

ಬೃಹತ್ ಕನ್ನಡ ಬಾವುಟ ನೋಡಲು ಇಲ್ಲಿ ಕ್ಲಿಕ್ಕಿಸಿ. [ತುಮಕೂರಿನ ಮತ್ತೊಬ್ಬ ಸಾಧಕ]

English summary
Biggest Kannada Flag ever weaved. 100x150 feet flag made out of Butter silk is a proud presentation by Vinod Kumar and Family in Nelamangala near Bangalore. The flag was stitched at a cost of Rs 2 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X