ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಗೆಟ್ ಬಳಸಿ ನಿಮ್ಮ ಬ್ಲಾಗಲ್ಲೇ ಒನ್ಇಂಡಿಯಾ ಕನ್ನಡ ಓದಿರಿ

By Prasad
|
Google Oneindia Kannada News

ಒನ್ ಇಂಡಿಯ ಕನ್ನಡ ವಿಗೆಟ್ಸ್ ಸೇವೆಗಳನ್ನು ಬಳಸುವುದಕ್ಕೆ ನಿಮಗೆ ಸ್ವಾಗತ. ವಿಗೆಟ್ ಕೊಂಡಿಗಳನ್ನು ನಿಮ್ಮ ವೆಬ್ ತಾಣ ಅಥವಾ ಬ್ಲಾಗಿಗೆ ಸೇರಿಸಿಕೊಳ್ಳುವುದರ ಮೂಲಕ ನೀವು ಹೆಚ್ಚು ಮಂದಿ ಓದುಗರನ್ನು ನಿಮ್ಮ ತಾಣಕ್ಕೆ ಆಹ್ವಾನಿಸಿಕೊಳ್ಳಬಹುದು. ಅದಲ್ಲದೆ, ವೆಬ್ ಉದ್ದಗಲಕ್ಕೂ ಕನ್ನಡ ಬೆಳೆಯಲಿ ಎಂಬ ಆಶಾಭಾವನೆಯೊಂದಿಗೆ ಕನ್ನಡ ವಿಗೆಟ್ ಇನ್‌ಸ್ಟಾಲ್ ಮಾಡಿಕೊಳ್ಳಿರಿ.

ಇದರ ಪ್ರಯೋಜನವೆಂದರೆ, ನಮ್ಮ ದಟ್ಸ್ ಕನ್ನಡ ತಾಣದಲ್ಲಿ ಪ್ರಕಟವಾಗುವ ತಾಜಾ ಸುದ್ದಿ ಸಮಾಚಾರಗಳು ನಿಮ್ಮ ಬ್ಲಾಗಿನಲ್ಲಿಯೇ ಮೂಡುತ್ತವೆ. ಗಮನಾರ್ಹ ಅಂಶವೆಂದರೆ, ನಿಮ್ಮ ಬ್ಲಾಗಿನಲ್ಲಿ ಇದ್ದುಕೊಂಡೇ ಓದುಗರು ನಮ್ಮ ತಾಣದ ಸುದ್ದಿಗಳನ್ನು ತಲುಪಬಹುದು. ಇಷ್ಟಪಟ್ಟರೆ ತಮ್ಮ ಬ್ಲಾಗಿನಲ್ಲಿಯೂ ಈ ಹೊಸ ಸೌಲಭ್ಯವನ್ನು ಅಳವಡಿಸಿಕೊಳ್ಳಬಹುದು.

ಬ್ಲಾಗಿಗರ ನಡುವೆ ಸ್ನೇಹಸಂಬಂಧವನ್ನು ಗಾಢವಾಗಿ ಬೆಸೆಯಲು ಈ ವಿಗೆಟ್ ಅನುಕೂಲಕರ. ನಿಮ್ಮ ಕನ್ನಡ ಬ್ಲಾಗ್ ಮನೆಯ ಒಂದು ಕೋಣೆಯನ್ನು ಕನ್ನಡ ವಿಗೆಟ್‌ಗಾಗಿ ಮೀಸಲಿಡಿ. ಹೊಸ ಲೇಖನ ಪ್ರಕಟವಾಗುತ್ತಿದ್ದ ಹಾಗೆ, ಟಪಟಪನೆ ಆ ಕೋಣೆಯಲ್ಲಿ ಆ ಲೇಖನ ಕಾಣಿಸಿಕೊಳ್ಳುತ್ತದೆ. ನಿಮಗಿಷ್ಟವಾದ ಲೇಖನವನ್ನು ಇದ್ದಲ್ಲಿಂದಲೇ ಆಯ್ದುಕೊಂಡು ಓದಿರಿ, ಅಭಿಪ್ರಾಯ ತಿಳಿಸಿ.

ಹೀಗೆ ಮಾಡಿರಿ : ಈ ಲಿಂಕ್ ಕ್ಲಿಕ್ಕಿಸಿ (https://www.oneindia.com/widgets/) ದಟ್ಸ್ ಕನ್ನಡ ಮತ್ತು ಅಲ್ಲಿನ ಉಪ ವಿಭಾಗಗಳನ್ನು ಮತ್ತು ನಿಮಗಿಷ್ಟವಾದ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ. ನಂತರ Get HTML Code ಬಟನ್ ಕ್ಲಿಕ್ ಮಾಡಿರಿ. ಅಲ್ಲಿ ಸಿಗುವ ಕೋಡ್ ಅನ್ನು ನಿಮ್ಮ ವೆಬ್‌ಸೈಟ್ ಅಥವಾ ಬ್ಲಾಗ್ ನಲ್ಲಿ ಬಳಸಿಕೊಳ್ಳಿ.

ಇನ್ನೊಂದು ಸುಲಭ ಮಾರ್ಗ :
ಕೋಡ್ ಇಂಟಿಗ್ರೇಟ್ ಮಾಡಲು ಕಷ್ಟವಾದರೆ, ಸ್ವಂತ ವೆಬ್‌ಸೈಟ್, ವರ್ಡ್‌ಪ್ರೆಸ್ ಬ್ಲಾಗ್ ಅಥವಾ ಬ್ಲಾಗ್‌ಸ್ಪಾಟ್ ಬ್ಲಾಗ್ ಲಿಂಕ್ ಕ್ಲಿಕ್ಕಿಸಿ, ಅಲ್ಲಿ 7 ಹಂತಗಳಲ್ಲಿ ನೀಡಿರುವ ನಿರ್ದೇಶನಗಳನ್ನು ಫಾಲೋ ಮಾಡಿ. ನಿಮ್ಮ ವೆಬ್ ಸೈಟ್ ಅಥವಾ ಬ್ಲಾಗ್‌ನ ಪುಟಗಳನ್ನು ಕಾನ್ಫಿಗರೇಷನ್ ಟೂಲ್ ಬಳಸಿ ನಿಮಗಿಷ್ಟವಾದಂತೆ ಬಣ್ಣಗಳನ್ನು ತುಂಬಿ ಸುಂದರವಾಗಿ ಅಲಂಕರಿಸಿಕೊಳ್ಳಿ.

ಸ್ವಂತ ವೆಬ್ ಸೈಟ್ ಅಥವಾ ಬ್ಲಾಗ್, ವರ್ಡ್‌ಪ್ರೆಸ್ ಬ್ಲಾಗ್, ಬ್ಲಾಗ್‌ಸ್ಪಾಟ್ ಬ್ಲಾಗ್

ಸ್ಯಾಂಪಲ್ ಪುಟ : ಒನ್ಇಂಡಿಯಾ ಕನ್ನಡ ವಿಗೆಟ್ ಬ್ಲಾಗ್‌ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ, ಬ್ಲಾಗ್‌ನಲ್ಲಿ ಇದ್ದುಕೊಂಡೇ ಹೇಗೆ ಕನ್ನಡ ಲೇಖನಗಳನ್ನು ಓದಲು ಅನುಕೂಲ ಮಾಡಿಕೊಡುತ್ತದೆ ಎಂಬುದಕ್ಕೆ ಒಂದು ಸ್ಯಾಂಪಲ್ ಪುಟ ಇಲ್ಲಿದೆ ನೋಡಿರಿ, ನೀವೂ ಅಳವಡಿಸಿಕೊಳ್ಳಿರಿ. ಹೇಗೆ ಮಾಡುವುದೆಂದು ತಿಳಿಯದಿದ್ದರೆ ಪತ್ರ ಬರೆಯಿರಿ : [email protected]

English summary
Download Oneindia-Kannada widgets and show our content right on your site or blog. Our widgets will allow your readers to read fresh content from Oneindia-Kannada without having to move away from your site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X