ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈರ್‌ಫಾಕ್ಸ್ ಆಡ್ ಆನ್ : ಒನ್ಇಂಡಿಯಾ ಕನ್ನಡ ಮೆನು

By Prasad
|
Google Oneindia Kannada News

ಇಂಟರ್ನೆಟ್ ಬ್ರೌಸಿಂಗ್‌ ಇಂದು ಅತ್ಯಂತ ಕ್ಲಿಷ್ಟಕರ ಸಂಗತಿಯಾಗಿ ಉಳಿದಿಲ್ಲ. ಇಂಟರ್ನೆಟ್ ಅನ್ನು ಅರೆದು ಕುಡಿದವರಿಂದ ಹಿಡಿದು ಮನೆಯಲ್ಲಿ ಕುಳಿತು ಮೊಮ್ಮಕ್ಕಳಿಂದ ಆಟವಾಡುವ ಅಜ್ಜಿಯರೂ ಇಂದು ಇಂಟರ್ನೆಟ್ ಬಲ್ಲರು. ಕನಿಷ್ಠ ಬ್ರೌಸಿಂಗ್ ಅಥವಾ ಸರ್ಫಿಂಗ್ ಮಾಡುವುದನ್ನು ಬಲ್ಲರು.

ಕನ್ನಡ ಓದಲು ಬರುವ ಬ್ರೌಸರ್‌ಗಳಿಗೆ ಲೇಖನಗಳನ್ನು ಓದುವ ರೀತಿಯಲ್ಲಿ, ಅತ್ಯಂತ ಸರಳವಾಗಿ ನೀಡುವ ಅಗತ್ಯ ಹೇಗೆ ಇದೆಯೋ, ಒಂದು ಅಂತರ್ಜಾಲದಲ್ಲಿರುವ ಎಲ್ಲ ವಿಭಾಗಗಳು, ಉಪ-ವಿಭಾಗಗಳು ಕೂಡ ಅತ್ಯಂತ ಸುಲಭವಾಗಿ ದೊರೆಯಬೇಕು. ಇದಕ್ಕೆ ಇಂಟರ್ನೆಟ್ ಸ್ನೇಹಿಯಾಗಿರುವುದು ಅಂತಾರೆ.

ವೆಬ್ ಪುಟಗಳು ನೋಡಲು ಎಷ್ಟು ಸುಂದರವಾಗಿರಬೇಕೆಂದು ನಾವು ಬಯಸುತ್ತೇವೋ, ನ್ಯಾವಿಗೇಷನ್ (ವೆಬ್ ಪುಟಗಳ ಯಾನ) ಕೂಡ ಅಷ್ಟೇ ಸರಳ ಮತ್ತು ಸುಲಲಿತವಾಗಿರಬೇಕು. ಒಂದು ಪುಟಕ್ಕೆ ಹೋದರೆ ಇನ್ನೊಂದು ಪುಟವನ್ನು ಮತ್ತು ಇನ್ನೊಂದು ವಿಭಾಗವನ್ನು ಅತ್ಯಂತ ಸರಳವಾಗಿ ಹುಡುಕುವಂತಿರಬೇಕು. ಯಾವುದೋ ಪುಟಕ್ಕೆ ಹೋದರೆ ಚಕ್ರವ್ಯೂಹದಲ್ಲಿ ಕಳೆದುಹೋದಂತೆ ಇರಬಾರದು.

ನಮ್ಮ ಒನ್ಇಂಡಿಯಾ ಕನ್ನಡ ಪೋರ್ಟಲ್‌ನ ಎಲ್ಲಾ ವಿಭಾಗಗಳು ಒಂದೇ ಜಾಗದಲ್ಲಿ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಫೈರ್‌ಫಾಕ್ಸ್ ಆಡ್ ಆನ್ 'ಒನ್ಇಂಡಿಯಾ ಕನ್ನಡ ಮೆನು' ರೂಪಿಸಲಾಗಿದೆ. ಫೈರ್ ಫಾಕ್ಸ್ ಬಳಸುವವರು ಯಾರಾದರೂ ಈ ಆಡ್ ಆನ್ ಅನ್ನು ಅತ್ಯಂತ ಸುಲಭವಾಗಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

ಇನ್‌ಸ್ಟಾಲ್ ಮಾಡುವುದು ಕೂಡ ಸುಲಭ

* ಫೈರ್‌ಫಾಕ್ಸ್ ಆಡ್ ಆನ್ ಇನ್‌ಸ್ಟಾಲ್ ಮಾಡಲು ಇಲ್ಲಿ ಕ್ಲಿಕ್ಕಿಸಿ
* 'Add to Firefox' ಕ್ಲಿಕ್ಕಿಸಿ.
* ಆಗ ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ Install ಬಟನ್ ಕ್ಲಿಕ್ಕಿಸಿ ಆಡ್ ಆನ್ ಇನ್‌ಸ್ಟಾಲ್ ಮಾಡಿಕೊಳ್ಳಿ.
* ಬ್ರೌಸರ್ ಮತ್ತೆ ಆರಂಭಿಸಲು ಕೋರಿಕೆ ಬರುತ್ತದೆ. ಮತ್ತೆ ಸ್ಟಾರ್ಟ್ ಮಾಡಿರಿ.

ಈಗ ನಿಮ್ಮ ಫೈರ್‌ಫಾಕ್ಸ್ ಬ್ರೌಸರ್‌ನ ಮೆನು ಬಾರ್‌ನಲ್ಲಿ Oneindia Kannada ಆಡ್ ಆನ್ ಬಂದು ಕುಳಿತಿರುತ್ತದೆ. ಅದನ್ನು ಬಳಸಿ ನಿಮಗಿಷ್ಟವಾದ ವಿಭಾಗಕ್ಕೆ ಭೇಟಿ ನೀಡಿ, ನಿಮಗಿಷ್ಟವಾದ ಲೇಖನಗಳನ್ನು ಓದುವ ಸವಲತ್ತು ನಿಮ್ಮದಾಗುತ್ತದೆ. ಒನ್ಇಂಡಿಯಾ ಕನ್ನಡ ಸುತ್ತಾಟ ಈಗ ಇನ್ನೂ ಸುಲಭ. ಈ ಒನ್ಇಂಡಿಯಾ ಕನ್ನಡ ಮೆನು ಫೈರ್‌ಫಾಕ್ಸ್ ಆಡ್ ಆನ್ ಇನ್‌ಸ್ಟಾಲ್ ಮಾಡಲು ಕಷ್ಟವಾದರೆ ಅಥವಾ ತಿಳಿಯದಿದ್ದರೆ ನಮಗೆ ಬರೆಯಿರಿ : [email protected]

English summary
A Firefox addon to facilitate easy navigation through kannada.oneindia.com. It is very easy to install the add on. Follow the steps given in the article and go through all sections from only one point.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X