ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಕಚೇರಿಯಲ್ಲಿ ಚುಕ್ಕಿಬಣ್ಣಗಳ ಚಿತ್ತಾರ

By * ಶಾಮ್
|
Google Oneindia Kannada News

ವರ್ಷ ಕೊನೆಗೊಳ್ಳುವ ವೇಳೆ ಸಾಮಾನ್ಯವಾಗಿ ಇಂಟರ್ನೆಟ್ಟಿನಲ್ಲಿ ಟ್ರಾಫಿಕ್ ಕಡಿಮೆ. ಕ್ರಿಸ್ಮಸ್ ರಜಾ ಪ್ರವಾಸಗಳು ಮತ್ತು ಹೊಸ ವರ್ಷದ ಸಂಭ್ರಮಾಚರಣೆಗಳಲ್ಲಿ ತಲ್ಲೀನರಾದವರು ಇಂಟರ್ನೆಟ್ಟಿನಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುವುದು ವಾಡಿಕೆ.

ಈ ವಾಡಿಕೆಯನ್ನೇ ನೆಪವಾಗಿಟ್ಟುಕೊಂಡು ಪ್ರತಿವರ್ಷದ ಕೊನೆಯವಾರ ನಮ್ಮ ಕಚೇರಿಯಲ್ಲಿ ಹಬ್ಬ ಆಚರಿಸಲಾಗುತ್ತದೆ. ಡಿಸೆಂಬರ್ ಕಡೆಯವಾರದ ಏಳೂ ದಿನಗಳು ಸ್ಪರ್ಧೆಗಳು, ಆಟೋಟಗಳು, ಬೇ ಡೆಕೋರೇಷನ್ ಗಳು ಮತ್ತಿತರ ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸಂಪ್ರದಾಯ.

2011ರ ಹೊಸ ವರ್ಷಾಚರಣೆ ನಮ್ಮ ಕಚೇರಿಯಲ್ಲಿ ಹಿಂದೆಂದಿಗಿಂತ ಅದ್ಧೂರಿಯಾಗಿತ್ತು. ನಾನು ಪಾಲ್ಗೊಂಡಿದ್ದ ಕ್ರಿಕೆಟ್ ನಾಕೌಟ್ ಟೂರ್ನಮೆಂಟಲ್ಲಿ ನಮ್ಮ ತಂಡ ಸೋತ ಬೇಜಾರು ಬಿಟ್ಟರೆ ಉಳಿದ ಸಂಭ್ರಮಗಳು ಚೆನ್ನಾಗಿದ್ದವು. 2 ಡೌನ್ ಬ್ಯಾಟ್ಸ್‌ಮನ್ ಆಗಿ ಬಂದ ನಾನು ರನ್ ಪೇರಿಸಲು ಹೋಗಿ 3 ರನ್ನುಗಳಿಗೆ ಔಟಾಗಿದ್ದು ಬ್ಯಾಡ್.

ಈ ಮಧ್ಯೆ, ರಂಗೋಲಿ ಹಾಕುವ ಸ್ಪರ್ಧೆ ನಮ್ಮ ಕ್ಯಾಫಿಟೇರಿಯಾದಲ್ಲಿ ಏರ್ಪಡಿಸಲಾಗಿತ್ತು. 44 ಹೆಂಗಳೆಯರು 100 ಪುರುಷೋತ್ತಮರಿರುವ ನಮ್ಮ ಸಹೋದ್ಯೋಗಿಗಳ ಪೈಕಿ 8 ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡಸು ಸ್ಪರ್ಧೆಗೆ ಇಳಿದಿದ್ದರು. ಈ ಸ್ಪರ್ಧೆಗೆ ನಾನು ತೀರ್ಪುಗಾರನಾಗಿದ್ದೆ.

ಮೊದಲ ಬಹುಮಾನ ತೆಲುಗು ಉಪಸಂಪಾದಕಿ ಸರಸ್ವತಿಗೆ ಬಂದಿತು. ಎರಡನೇ ಬಹುಮಾನ ರಮ್ಯಾ ಮತ್ತು ಮೂರನೆ ಬಹುಮಾನ ರೂಪಾಗೆ ಸಿಕ್ಕಿತು. ಭಾಗವಹಿಸಿದ ಏಕೈಕ ಪುರುಷ ಅಶ್ವಿನಿ ತಿವಾರಿಗೆ ಸಮಾಧಾನಕರ ಬಹುಮಾನ ಸಂದಿತು.

ಸ್ಪರ್ಧೆಯಲ್ಲಿದ್ದ 9 ರಂಗೋಲಿ ಕಲೆಗಳನ್ನು ನಮ್ಮ ಗ್ಯಾಲರಿಯಲ್ಲಿ ಪ್ರಕಟಿಸಿದ್ದೇನೆ. ಈ ರಂಗೋಲಿ ಗೆರೆಗಳನ್ನು ಮತ್ತು ಬಣ್ಣಗಳನ್ನು ನೋಡಿ ನೀವು ಆನಂದಿಸುತ್ತೀರೆಂಬ ವಿಶ್ವಾಸ ನಮ್ಮದು. ಅಂತೆಯೆ, ನನ್ನೊಳಗಿರುವ ಕಲಾಪ್ರಜ್ಞೆಯನ್ನು ಮತ್ತು ತೀರ್ಪನ್ನೂ.

English summary
Rangoli art designs by Oneindia employees. The Rangoli contest was organized as a part of New Year Celebrations 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X