• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಕೋಟ್ಯಾಧಿಪತಿಗೆ ನನ್ನ ಲಗೋರಿ

By * ಶಾಮ್
|

ನನಗೆ ಸ್ವಲ್ಪ ಹಣಕಾಸಿನ ತೊಂದರೆ ಇದೆ. ಯಾಕಂದ್ರೆ ದುಡ್ಡು ಎಷ್ಟಿದ್ದರೂ ಸಾಕಾಗಲ್ಲ. ಈ ಮಾತು ನಂಗೂ ನಿಜ, ನಿಂಮ್ಗೂ ನಿಜ. ಅವರಿಗೂ ನಿಜ, ಇವರಿಗೂ ನಿಜ್ಜ.

ಏನಾದರೂ ಮಾಡಿ ಕೋಟಿ ರೂಪಾಯಿ ಹೊಡಿಬೇಕು ಅಂತ ಕೌನ್‌ಬನೇಗಾ ಕರೋರ್‌ಪತಿಗೆ ತುಂಬಾ ಪ್ರಯತ್ನಪಟ್ಟಿದ್ದೆ. ನಿಮಿಷಕ್ಕೆ 6 ರೂಪಾಯಿ ಕರೆ ದರಗಳಲ್ಲಿ KBC ನಂಬರ್‌ಗೆ ಕರೆ ಮಾಡಿಮಾಡಿ ಸಾಕಾಯ್ತು. ಫೋನ್ ಚಾರ್ಜ್ ಹೋಯ್ತೇ ವಿನಾ ಕೆಬಿಸಿನವರು ಮುಂಬೈಗೆ ಬಾ ಅಂತ ನನ್ನನ್ನ ಕರೀಲೇ ಇಲ್ಲ. ತುಂಬಾ ಬೇಜಾರುಪಟ್ಟುಕೊಂಡಿದ್ದೆ.

ಇದೇ ದುಃಖದಲ್ಲಿ ಕಾಲ ತಳ್ಳುತ್ತಿರುವಾಗ ತಮಿಳು ವಾಹಿನಿಯೊಂದರಲ್ಲಿ ಕೆಬಿಸಿ ಮಾಡ್ತಾಯಿದಾರೆ, ಅದಕ್ಕೆ ಅಪ್ಲೈ ಮಾಡ್ಕೊ ಅಂತ ಯಾರೋ ಹೇಳಿದ್ರು. ಅಯ್ಯಯ್ಯಪ್ಪ, ನಂಗೆ ತಮಿಳೂ ಬರಲ್ಲ, ಬಂದ್ರೂ ಆ ತಮಿಳರ ದುಡ್ಡುಕಾಸು ಬೇಡ ಅಂತ ಸುಮ್ಮನಾದೆ.

ಹೀಗಿರುವಾಗ ನಮ್ಮ ಕನ್ನಡ ಟಿವಿ ಚಾನಲ್ಲಿನಲ್ಲೇ ಒಂದು ಕೆಬಿಸಿ ಬರ್ತಾಯಿದೆ ಅಂತ ನಮ್ಮ ವರದಿಗಾರರು ದಟ್ಸ್ ಕನ್ನಡದಲ್ಲಿ ಒಂದು ವರದಿ ಹಾಕಿದ್ರು. ಅಪ್ಲೈ ಮಾಡಕ್ಕೆ ಯಾಕೋ ಅಷ್ಟು ಆಸಕ್ತಿ ಬರಲಿಲ್ಲ. ಆದ್ರೆ, ಇವತ್ತು ಸುವರ್ಣ ಚಾನಲ್ಲಿನ ಒಬ್ಬರು ಸಿಕ್ಕು "ನೀವೂ ಹಾಕ್ರಿ ಸಾರ್, ಅದೃಷ್ಟ ಯಾರಪ್ಪನ ಮನೇದು. ಚಾನ್ಸ್ ಸಿಕ್ರೂ ಸಿಗಬಹುದು" ಅಂದ್ರು. ಸರಿ ಅಂತ ಫೋನ್ ತೊಗೊಂಡೆ.

ಸುವರ್ಣ ರಿಯಾಲಿಟಿ ಶೋನಲ್ಲಿ ಗೆದ್ದು ಕನ್ನಡ ಕೋಟ್ಯಾಧಿಪತಿ ಆಗಕ್ಕೆ ಎಸ್ಸೆಂಮೆಸ್‌ನಲ್ಲಿ ಒಂದು ಪರೀಕ್ಷೆ ಬರೀಬೇಕು. ಪ್ರಶ್ನೆ ತುಂಬಾ ಟಫ್ ಇತ್ತು. ಕಷ್ಟಪಟ್ಟು ಉತ್ತರ ಬರೆದು 57827 ಕ್ಕೆ ಕಳಿಸಿದೆ. ಪಾಸೂ ಆದೆ. ಪ್ರಶ್ನೆ: ಕನ್ನಡದ ನಟಸಾರ್ವಭೌಮ ಹೆಸರು ಪಡೆದ ನಟ ಯಾರು? [ವಿಡಿಯೋ]

ಸರಿ ಉತ್ತರ kk (space) C ಬರೆದು 57827 ಕ್ಕೆ ಕಳಿಸಿ ನೊಂದಾಯಿಸಿಕೊಂಡೆ. ತಕ್ಷಣ ಉತ್ತರ ಬಂತು. Thanks! Reply with first letter of your gender (space) age (space) pincode. Eg : M 25 560011. If you are a 25 year old male from Bangalore please respond in 20 minutes. ಇದಕ್ಕೂ ಉತ್ತರ ಬರೆದು ಕಳಿಸಿದೆ.

ಸುವರ್ಣ ಟಿವಿ ವತಿಯಿಂದ ಬಂದ ಇತ್ತೀಚಿನ ಕೊನೆಯ ಮೆಸೇಜ್ ಹೀಗಿದೆ. Thanks! We will inform you if your entry is eligible. For terms and conditions log on to www.facebook.com/kotyadhipathi.

ವಿ.ಸೂ: ಮೇಲೆ ನಮೂದಿಸಿದ್ದು ಕೇವಲ ಉದಾಹರಣೆಯಷ್ಟೆ. ಪ್ರಶ್ತ್ನೆಗಳು ದಿನದಿಂದ ದಿನಕ್ಕೆ ಬದಲಾಗುತ್ತದೆ. ಇಂದು ಕೇಳುವ ಪ್ರಶ್ತ್ನೆಗೆ 24 ಗಂಟೆ ವಾಯಿದೆ ಮಾತ್ರ. ಅಂದರೆ ಪ್ರತಿ ರಾತ್ರಿ 8ಗಂಟೆಗೆ ಪುನೀತ್ ಕೇಳುವ ಪ್ರಶ್ತ್ನೆಗೆ ಮರುದಿನ ರಾತ್ರಿ 7.30ರ ಒಳಗೆ ನಿಮ್ಮ ಉತ್ತರ ಮೆಸೇಜ್ ಮಾಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
I have registered my name to Kannada KBC on Suvarna Channel. Did you? Want to be a millionaire?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more