• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವೇಶ್ವರಭಟ್ಟರು ವಿಜಯಕರ್ನಾಟಕ ಬಿಟ್ಟಗುಟ್ಟುರಟ್ಟು

By Shami
|

ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಚಾನಲ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಖಾಸಗಿ ಅಂತರ್ ಜಾಲ ತಾಣ http://vbhat.in/ ಮತ್ತೆ ಶುರುವಾಗಿದೆ. ಕೆಲ ತಿಂಗಳಕಾಲ ಕಾಲ ಕಣ್ಮರೆಯಾಗಿದ್ದ ತಾಣ ಇಂದು ಮಂಗಳವಾರ ಪ್ರತ್ಯಕ್ಷವಾಗಿದ್ದು ಅದರಲ್ಲಿ ಭಟ್ಟರ ಹೊಸ ಲೇಖನ ಬೆಳಕಾಗಿದೆ.

ವಿಜಯ ಕರ್ನಾಟಕ ಸಂಪಾದಕ ಹುದ್ದೆಗೆ ಭಟ್ಟರು ರಾಜೀನಾಮೆ ನೀಡಿ ಒಂದು ವರ್ಷ ತುಂಬಿತು. ಈ ಸಂದರ್ಭದಲ್ಲಿ ಅವರು ಬರೆದ ಬರಹವನ್ನು ತನ್ನಿಮಿತ್ತ ಲೇಖನ ಎಂದು ಕರೆಯಲೂಬಹುದು. ವರ್ಷಾಬ್ಧಿಕ ಎನ್ನೋಣವೇ ಅಥವಾ ವಾರ್ಷಿಕೋತ್ಸವ ಎನ್ನೋಣವೇ? ಅಥವಾ ಇದಕ್ಕೆ ಬೇರೊಂದು ಹೆಸರುಂಟೊ?

ಇದನ್ನು ಹೇಗೆ ಕರೆದರೆ ಸರಿಹೋದಿತೆಂದು ಸ್ವತಃ ಭಟ್ಟರೇ ತಮ್ಮ ದೀರ್ಘವಾದ ಲೇಖನದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಸವಿವರವಾಗಿ ಬರೆದುಕೊಂಡಿದ್ದಾರೆ. ಸ್ಯಾಂಪಲ್ಲಿಗಾಗಿ ವಿಶ್ವೇರಭಟ್ಟರ ಲೇಖನದಿಂದ ಆಯ್ದ ಒಂದೆರಡು ಎರಡು ಪ್ಯಾರ ಹೀಗಿದೆ :

"ಚಿನ್ನನ್ ದಾಸ್ ನಂತರ ವಿಜಯ ಕರ್ನಾಟಕದ ಮ್ಯಾನೇಜ್ಮೆಂಟ್ ಮುಖ್ಯಸ್ಥನಾಗಿ ಬಂದ ತೀರ ಸಣ್ಣ ಮನಸ್ಸಿನ ವ್ಯಕ್ತಿಯೊಬ್ಬ ನನ್ನ ಜನಪ್ರಿಯತೆ ಸಹಿಸದಾದ. ಆತ ಮೊದಲ ದಿನದಿಂದಲೇ ಕ್ಯಾತೆ ತೆಗೆಯಲಾರಂಭಿಸಿದ. ಅಂಥವನ ಜತೆ ಎರಡು ವರ್ಷ ಕಾಲ ದೂಡಿದ್ದೊಂದು ಕತೆ. ಇರಲಿ. ಇದೊಂದೇ ಕಾರಣದಿಂದ ನಾನು ಹೊರಬಂದೆ ಹೊರತು, ಅದಕ್ಕೆ ಪತ್ರಿಕೆಯಾಗಲಿ, ಸಂಸ್ಥೆಯಾಗಲಿ, ಮತ್ತ್ಯಾವುದೇ ಸಂಗತಿಗಳೂ ಕಾರಣ ಅಲ್ಲ.

ಆತ ಅಪೇಕ್ಷಿಸಿದಂತೆ ಅವನ ಓಲೈಕೆ, ಬಕೆಟ್ ಹಿಡಿಯುವಿಕೆ, ಚಮಚಾಗಿರಿ ಮಾಡಿದ್ದರೆ, ನಿರಾತಂಕವಾಗಿ ಅಲ್ಲಿಯೇ ಮುಂದುವರಿಯಬಹುದಿತ್ತು! ಇಷ್ಟಾಗಿಯೂ ಆ ವ್ಯಕ್ತಿಯನ್ನು ನಾನು ಸದಾ ಸ್ಮರಿಸುತ್ತೇನೆ. ಒಂದು ರೀತಿಯಲ್ಲಿ ನನಗೆ ಆತ ಪ್ರಾತಃ ಸ್ಮರಣೀಯ. ಕಾರಣ ಆತ ನನ್ನನ್ನು ಕೆಟ್ಟದ್ದಾಗಿ ನಡೆಸಿಕೊಳ್ಳದಿದ್ದರೆ ನಾನು ‘ವಿಕ’ವನ್ನು ಬಿಡುತ್ತಿರಲಿಲ್ಲ. ವಿಕಕ್ಕಿಂತ ಮಿಗಿಲಾದ ಈಗಿನ ಜವಾಬ್ದಾರಿಯೂ ಸಿಗುತ್ತಿರಲಿಲ್ಲ. ಆತನ ಹೊಟ್ಟೆ ಸದಾ ತಣ್ಣಗಿರಲಿ! "

ಹೀಗೆ ಆ "ಸಣ್ಣ ಮನಸ್ಸಿನ" ವ್ಯಕ್ತಿಗೆ ಬರೆಯುವ ನೆಪದಲ್ಲಿ ಭಟ್ಟರು ಇನ್ನೂ ಅನೇಕ ಸಂಗತಿಗಳನ್ನು ತಮ್ಮ ದೊಡ್ಡ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಈ ಬರಹದಲ್ಲಿ 14 ವ್ಯಕ್ತಿಗಳ ಹೆಸರುಗಳು ಪ್ರಸ್ತಾಪವಾಗಿದೆ. 3 ವ್ಯಕ್ತಿಗಳ ಭಾವಚಿತ್ರ ಅಚ್ಚಾಗಿದೆ. ಬರಹವು ತಾಣದ ಬ್ರೇಕಿಂಗ್ ನ್ಯೂಸ್ ವಿಭಾಗದಲ್ಲಿ ಅಡಕವಾಗಿದೆ, ಓದಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Prabha and Suvarna news channel editor Vishweshwara Bhat on his personal blog reveals the circumstances which led to his departure (Ouster as some guess it) from Kannada daily Vijaya Karnataka, published by The Times of India group Bennett Coleman publications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more