ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಗಣಿಯ ಮಲಮಕ್ಕಳಿಗೆ ನೆರವು ಬೇಕಾಗಿದೆ

By Shami
|
Google Oneindia Kannada News

Help manual scavengers
ನಮಸ್ತೆ ಶಾಮ್ ಸರ್, ಹೇಗಿದ್ದೀರಿ?
ಕೆಜಿಎಫ್ ಸಂತ್ರಸ್ಥರ ಕುರಿತು ಒಂದು ಮನವಿಯನ್ನು ಬ್ಲಾಗ್ ನಲ್ಲಿ ಹಾಕಿದ್ದೇವೆ.

ಇದನ್ನು ದಯಮಾಡಿ ದಟ್ಸ್ ಕನ್ನಡದಲ್ಲೂ ಪ್ರಕಟಿಸಲು ಕೋರುತ್ತೇವೆ. ವಿವರಗಳು ಹೀಗಿವೆ.

ಹಿಂದಿನಿಂದಲೂ ಮಲಹೊರುವ ಕಾರ್ಮಿಕರ ಕುರಿತಾಗಿ ಸಂಪಾದಕೀಯ ವರದಿಗಳನ್ನು ಪ್ರಕಟಿಸುತ್ತ ಬಂದಿದೆ. ಈಗ ವರ್ತಮಾನ ಬಳಗ ಮಾನವೀಯ ಕೆಲಸದಲ್ಲಿ ತೊಡಗಿಕೊಂಡಿದೆ. ನಿಮ್ಮ ಬೆಂಬಲದ ನಿರೀಕ್ಷೆ ಇದೆ. ಪ್ರೀತಿಯಿಂದ - ಸಂಪಾದಕೀಯ ಬಳಗ.

***

ನೆರೆ ಸಂತ್ರಸ್ತರು ನಿಮಗೆ ಗೊತ್ತು, ಬರ ಸಂತ್ರಸ್ತರು, ಮಲ ಸಂತ್ರಸ್ತರು ನಿಮಗೆ ಗೊತ್ತೆ? ಕೆಜಿಎಫ್‌ಗೆ ಹೋದರೆ ಈ ಮಲಸಂತ್ರಸ್ತರು ನಿಮಗೆ ಕಾಣಬಹುದು. ಬದುಕಿನುದ್ದಕ್ಕೂ ಊರಿನ ಮಲದ ಗುಂಡಿಯೊಳಗೆ ಇಳಿದು ಶುದ್ಧಗೊಳಿಸಿದವರು ಇವರು.

ಸಾಮಾಜಿಕ ಸಂಘಟನೆಗಳ ಸತತ ಹೋರಾಟದಿಂದ ಈಗ ಮಲಹೊರುವ ಕಾಯಕವನ್ನು ನಿಷೇಧಿಸಲಾಗಿದೆ. ಆದರೆ ಅದೇ ಸಮಯಕ್ಕೆ ಈ ಕುಟುಂಬಗಳ ಹೊಣೆ ಹೊರಬೇಕಾದವರು ಸುಮ್ಮನಿದ್ದಾರೆ.

ಈ ಕುಟುಂಬಗಳಿಗೆ ಅಗತ್ಯವಿರುವ ತಕ್ಷಣದ ನೆರವನ್ನು ನೀಡಲು ವರ್ತಮಾನ ಬಳಗ ಮುಂದೆ ಬಂದಿದೆ. ವರ್ತಮಾನದ ಈ ಕರೆಗೆ ನಾವೆಲ್ಲ ಸ್ಪಂದಿಸಬೇಕಿದೆ. ಹಿಂದೆ ಹಾನಗಲ್‌ನ ಪೌರಕಾರ್ಮಿಕಳೊಬ್ಬಳ ಮಗನ ಕಷ್ಟಕ್ಕೆ ಕರಗಿ ಸಂಪಾದಕೀಯದ ಮನವಿಗೆ ಸ್ಪಂದಿಸಿದವರು ನೀವು. ಈಗಲೂ ನಿಮ್ಮಿಂದ ಅದೇ ನಿರೀಕ್ಷೆ ನಮ್ಮದು.

***

ವರ್ತಮಾನ ಬಳಗದ ಮನವಿಯ ಪೂರ್ಣ ವಿವರಗಳು ಈ ಕೊಂಡಿಯಲ್ಲಿದೆ. ಓದಿ. ನಿಮ್ಮ ನೆರವು ತಲುಪುವುದಕ್ಕೆ ಕಡೆದಿನ 15 ಡಿಸೆಂಬರ್ 2011 - ಶಾಮ್, ಒನ್ ಇಂಡಿಯ ಕನ್ನಡ, ಅಂದರೆ ದಟ್ಸ್ ಕನ್ನಡ.

English summary
Karnataka government has banned manual scavenging. But none have addressed the plight of scavenger families, left in the lurch. Vartamana, an NGO has taken the lead to help, solicit your support.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X