ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗೆಬಾಂಬ್ ಸಿಡಿಸುವ ಲೇಖನಗಳಿಗೆ ಆಹ್ವಾನ

By Prasad
|
Google Oneindia Kannada News

Invite for humor articles
ಎಲ್ಲೆಲ್ಲೂ ಅಂಥಕಾರ ಆವರಿಸಿಕೊಂಡಿದೆ. ಲೋಡ್ ಶೆಡ್ಡಿಂಗ್ ನಿಂದಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ಕಂದೀಲು ಉರಿಯುವಂತಾಗಿದೆ. ಪೆಟ್ರೋಲ್, ತರಕಾರಿ, ಆಹಾರಧಾನ್ಯಗಳ ಬೆಲೆ ಏರಿಕೆಯಿಂದಾಗಿ ಶ್ರೀಸಾಮಾನ್ಯ ಜೇಬಿಗೆ ತೂತು ಬಿದ್ದಿದೆ. ಸೈಟುಗಳ ಗೈಡ್ ಲೈನ್ ದರಗಳನ್ನು ಸರಕಾರವೇ ಏರಿಸಿ ನಿವೇಶನ ಕೊಳ್ಳುವುದನ್ನು ಸರಕಾರವೇ ಮರೀಚಿಕೆ ಮಾಡಿದೆ.

ಹೊಸದಾಗಿ ಮದುವೆಯಾದ ಮಗಳು-ಅಳಿಯನನ್ನು ಮೊದಲ ದೀಪಾವಳಿಗೆ ಆಹ್ವಾನಿಸುವ ತಂದೆ-ತಾಯಂದಿರು ತಲೆಮೇಲೆ ಕೈಹೊತ್ತು ಕೂಡುವಂತಾಗಿದೆ. ಗಗನಕ್ಕೇರಿರುವ ಚಿನ್ನದ ದರದಿಂದಾಗಿ ಮಗಳು-ಅಳಿಯನಿಗೆ ಈ ಬಾರಿ ಏನು ಉಡುಗೊರೆ ಕೊಡುವುದೆಂಬ ಚಿಂತೆಯ ಸಂತೆ. ಏನು ಮಾಡುವುದು, ಈ ಬೆಲೆಏರಿಕೆಯ ಕಾರ್ಗತ್ತಲಲ್ಲಿ ಫಳಫಳಿಸುತ್ತಿರುವುದು ಚಿನ್ನವೊಂದೆ.

ಆದರೆ, ಕತ್ತಲನ್ನು ಕಳೆದು ದೀವಳಿಗೆಯನ್ನು ಹೊತ್ತಿಸುವುದೇ ದೀಪಾವಳಿಯಲ್ಲವೆ? ಕತ್ತತಲ್ಲೂ ಬೆಳಕೆಲ್ಲೊ ಅಡಗಿಕೊಂಡಿರುತ್ತದೆಂಬ ಆಶಾಭಾವನೆ ಮೂಡಿಸುವ ಸಂಭ್ರಮದ ಹಬ್ಬ. ದುಃಖ-ದುಮ್ಮಾನಗಳನ್ನು ಒದ್ದೋಡಿಸಿ ಬಾಳಲ್ಲಿ ನಗೆಯ ಬೆಳಕನ್ನು ಚಿಮ್ಮಿಸುತ್ತದೆಂಬುದರ ಸಂಕೇತವೇ ಈ ಸಡಗರದ ಹಬ್ಬ ಈ ವರ್ಷ ಅ.25ರಿಂದ 27ರವರೆಗೆ ಆಚರಿಸಲಾಗುತ್ತಿದೆ.

ಹೊಗೆಯೆಬ್ಬಿಸುವ ಪಟಾಕಿಯ ಬದಲು ನಗೆಬಾಂಬುಗಳ ಸಿಡಿಸಿ ದುಗುಡದಿಂದ ಕೂಡಿದ ಮುಖದ ಮೇಲೆ ಅರಳು ನಗೆಯನ್ನು ಚಿಮ್ಮಿಸುವ ಲೇಖನ ಕಳಿಸಲು ಪ್ರಿಯ ಓದುಗರಿಗೆ ಆತ್ಮೀಯ ಆಹ್ವಾನ. ದೀಪಾವಳಿ ಜೊತೆ ಬೆಸೆದುಕೊಂಡಿರುವ, ಅನುಭವದ ಮೂಸೆಯಿಂದ ಹುಟ್ಟಿಬರುವ ಹಾಸ್ಯರಸ ಉಕ್ಕಿಸುವ ಲೇಖನಗಳಿಗೆ ಮೊದಲ ಆದ್ಯತೆ. ಕತೆ, ಕವನಗಳು ಬೇಡ.

ಬರಹಗಾರರಿಗೆ ಕೆಲ ಸೂಚನೆಗಳು

* ಲೇಖನ ಯುನಿಕೋಡ್, ಬರಹ, ನುಡಿ ಲಿಪಿಯಲ್ಲಿರಲಿ.
* ಈಮೇಲ್ ಮುಖಾಂತರ ಕಡತವನ್ನು ಅಟ್ಯಾಚ್ ಮಾಡಿ ಕಳಿಸಿ.
* ಸೂಕ್ತ ಛಾಯಾಚಿತ್ರಗಳಿದ್ದರೆ ಅಗತ್ಯವಾಗಿ ಲೇಖನದೊಡನೆ ಕಳಿಸಿ.
* ಪ್ರಕಟಿತವಾಗಿದ್ದ ಲೇಖನಗಳನ್ನು ಕಳಿಸುವುದು ಬೇಡ.
* ಹಾಸ್ಯಮಿಳಿತವಾದ ವಿಡಂಬನಾತ್ಮಕ ಲೇಖನಗಳಿಗೂ ಪ್ರಾಶಸ್ತ್ಯವಿದೆ.
* ಲೇಖಕರು ತಮ್ಮ ಪೂರ್ಣ ಹೆಸರು, ಊರನ್ನು ನಮೂದಿಸಬೇಕು.
* ಕೊನೆಯ ದಿನಾಂಕ : 16ನೇ ಅಕ್ಟೋಬರ್, 2011
* ಕಳಿಸಬೇಕಾದ ವಿಳಾಸ : [email protected]
* ಲೇಖಕರ ಆಯ್ಕೆಯಲ್ಲಿ ಸಂಪಾದಕರ ನಿರ್ಧಾರವೇ ಅಂತಿಮ.

English summary
Let's burst laughter bombs instead of bursting firecrackers during this Deepavali (Diwali). Here is invite for the creative writers to send humorous articles for a special edition on Deepavali. Send the articles before 16th October 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X